ವಿಷಯಕ್ಕೆ ಹೋಗು

ಹನುಮಂತ ಲಮಾಣಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹನುಮಂತ ಲಮಾಣಿ
ಹೆಸರುಹನುಮಂತ ಲಮಾಣಿ
ಜನನ (1993-10-07) 7 October 1993 (age 32)
ಶಿಕ್ಷಣಪದವಿ
ವೃತ್ತಿಗಳು
  • ಗಾಯಕ
  • ಜಾನಪದ ಗಾಯಕ
  • ದೂರಡರ್ಶನ ವ್ಯಕ್ತಿತ್ವ
ಖ್ಯಾತಿಗೆ ಕಾರಣಬಿಗ್ ಬಾಸ್ ಕನ್ನಡ (ಸೀಸನ್ 11)
ಸರಿ ಗ ಮ ಪ ಕನ್ನಡ
ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್

ಹನುಮಂತ ಲಮಾಣಿ (ಜನನ 7 ಅಕ್ಟೋಬರ್ 1993) [] ಒಬ್ಬ ಕುರುಬ ಹುಡುಗ ಮತ್ತು ಜಾನಪದ ಗಾಯಕನಾಗಿದ್ದಾರೆ. ಅವರು ನಟ ಕಿಚ್ಚ ಸುದೀಪ್ ನಡೆಸಿಕೊಡುವ ಕನ್ನಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 11 ರನ್ನು ಗೆದ್ದಿದ್ದಾರೆ. ಹಲವಾರು ಕಿರುತೆರೆ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಆರಂಭಿಕ ಜೀವನ ಮತ್ತು ಶಿಕ್ಷಣ

[ಬದಲಾಯಿಸಿ]

ಹನುಮಂತ ಉತ್ತರ ಕರ್ನಾಟಕಹಾವೇರಿ ಜಿಲ್ಲೆಯವರು. ಅವರು ಲಂಬಾಣಿ ಸಮುದಾಯಕ್ಕೆ ಸೇರಿದವರು. ಅವರು ಹಾವೇರಿಯ ಹುಕ್ಕೇರಿಮಠ ಪ್ರೌಢಶಾಲೆಯಲ್ಲಿ ಶಾಲಾ ಶಿಕ್ಷಣವನ್ನು ಮತ್ತು ಹಾವೇರಿಯ ಗುದ್ಲೆಪ್ಪ ಹಳ್ಳಿಕೇರಿ ಕಾಲೇಜಿನಲ್ಲಿ ಪದವಿಯನ್ನು ಪಡೆದಿದ್ದಾರೆ. []

ರಿಯಾಲಿಟಿ ಶೋಗಳು

[ಬದಲಾಯಿಸಿ]

ಹನುಮಂತ ತರಬೇತಿ ಪಡೆದ ಗಾಯಕನಾಗಿರಲಿಲ್ಲ. ಆದರೆ ಸಂಗೀತ ರಿಯಾಲಿಟಿ ಶೋ ಸರಿ ಗ ಮ ಪ ಕನ್ನಡ ಸೀಸನ್ 15 ಅಲ್ಲಿ ಭಾಗವಹಿಸಿ ರನ್ನರ್ ಅಪ್ ಆಗಿ ಹೊರಬಂದರು. ನಂತರ 2024 ರಲ್ಲಿ ಅನುಶ್ರೀ ನಿರೂಪಣೆ ಮಾಡುತ್ತಿದ್ದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಫ್ಯಾಮಿಲಿ ವಾರ್ ಸೀಸನ್ 2 ರಲ್ಲಿಯೂ ಭಾಗವಹಿಸಿದ್ದಾರೆ.

ಜನವರಿ 26, 2025 ರಂದು, ಅವರು ಬಿಗ್ ಬಾಸ್ ಕನ್ನಡ ಸೀಸನ್ 11 ಟ್ರೋಫಿ ಮತ್ತು ರೂ.5,000,000 ನಗದು ಬಹುಮಾನವನ್ನು ಗೆದ್ದರು. ಕನ್ನಡ ರಿಯಾಲಿಟಿ ಶೋನ 11 ವರ್ಷಗಳ ಇತಿಹಾಸದಲ್ಲಿ ವೈಲ್ಡ್ ಕಾರ್ಡ್ ಆಗಿ ಪ್ರವೇಶಿಸಿ ಟ್ರೋಫಿಯನ್ನು ಗೆದ್ದ ಮೊದಲ ಸ್ಪರ್ಧಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅವರು 21 ನೇ ದಿನದಂದು ಬಿಗ್ ಬಾಸ್ ಮನೆಗೆ ಪ್ರವೇಶಿಸಿದರು [] . ಅವರು ಕಾರ್ಯಕ್ರಮದ ವೀಕ್ಷಕರಿಂದ 52,389,318 ಮತಗಳನ್ನು ಪಡೆದರು ಮತ್ತು 20,000,000 ಕ್ಕೂ ಹೆಚ್ಚು ಮತಗಳನ್ನು ಪಡೆದ ತ್ರಿವಿಕ್ರಮ್ ಅವರನ್ನು ಸೋಲಿಸಿದರು [] .

ಉಲ್ಲೇಖಗಳು

[ಬದಲಾಯಿಸಿ]
  1. "Hanumantha Lamani (BiggBoss Kannada) Wiki, Age, Wife, Family, Biography & More - StudyBizz Bigg Boss" (in ಬ್ರಿಟಿಷ್ ಇಂಗ್ಲಿಷ್). 2025-01-24. Retrieved 2025-01-26.
  2. "Hanumantha Lamani (BiggBoss Kannada) Wiki, Age, Wife, Family, Biography & More - StudyBizz Bigg Boss" (in ಬ್ರಿಟಿಷ್ ಇಂಗ್ಲಿಷ್). 2025-01-24. Retrieved 2025-01-26."Hanumantha Lamani (BiggBoss Kannada) Wiki, Age, Wife, Family, Biography & More - StudyBizz Bigg Boss". 24 January 2025. Retrieved 26 January 2025.
  3. "ಹನುಮಂತ ಬಿಗ್ ಬಾಸ್ ವಿನ್ನರ್; ಜವಾರಿ ಹುಡುಗನಿಗೆ ಒಲಿದ ಕಪ್". TV9 Kannada. 2025-01-26. Retrieved 2025-01-26.
  4. "Bigg Boss Kannada 11 Winner: ಬಿಗ್‌ ಬಾಸ್‌ ವಿನ್ನರ್‌ ಹನುಮಂತ ಬಹುಮಾನವಾಗಿ ಪಡೆದ ಒಟ್ಟು ಹಣ ಎಷ್ಟು..?". Zee News Kannada. Retrieved 2025-01-26.


ಬಿಗ್ ಬಾಸ್ ಕನ್ನಡ

Preceded by ಬಿಗ್ ಬಾಸ್ ಕನ್ನಡ ವೀಜೇತ
ಬಿಗ್ ಬಾಸ್ ಕನ್ನಡ (ಸೀಸನ್ 11) 2024
Succeeded by
ಗಿಲ್ಲಿ ನಟ (2025)