ಹಣಕಾಸು ಯೋಜಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

Expression error: Unexpected < operator.

 1. REDIRECT [[
ಶಿರೋಲೇಖ ಶಿರೋಲೇಖ ಶಿರೋಲೇಖ
ಉದಾಹರಣೆ ಉದಾಹರಣೆ ಉದಾಹರಣೆ
ಉದಾಹರಣೆ ಉದಾಹರಣೆ ಉದಾಹರಣೆ
ಉದಾಹರಣೆ ಉದಾಹರಣೆ ಉದಾಹರಣೆ

]]

ಹಣಕಾಸು ಯೋಜಕ ಅಥವಾ ವೈಯಕ್ತಿಕ ಹಣಕಾಸು ಯೋಜಕ ಒಬ್ಬ ಹವ್ಯಾಸಿ ವೃತ್ತಿಪರ ವ್ಯಕ್ತಿಯಾಗಿದ್ದು ತನ್ನ ಸೂಕ್ತ ಯೊಜನೆಗಳ ಮುಖಾಂತರ ಜನರ ಹಲವಾರು ಹಣಕಾಸು ಸಂಬಂಧಿ ಸಮಸ್ಯೆಗಳನ್ನು ಬಗೆಹರಿಸಲು ಸಹಕರಿಸುತ್ತಾನೆ. ಆದರೆ ಇದು: ಹಣಕಾಸು ಹರಿವು ನಿರ್ವಹಣೆ, ಶೈಕ್ಷಣಿಕ ಯೋಜನೆ, ನಿವೃತ್ತಿ ಯೋಜನೆ, ತೊಂದರೆ ನಿರ್ವಹಣೆ ಮತ್ತು ವಿಮಾಯೋಜನೆ, ತೆರಿಗೆ ಯೋಜನೆ, ಆಸ್ತಿ ಯೋಜನೆ ಮತ್ತು ವ್ಯಾಪಾರ ಯಶಸ್ವಿ ಯೋಜನೆ (ವ್ಯಾಪಾರಿಗಳಿಗೆ) ಮುಂತಾದ ಪ್ರಮುಖ ಕ್ಷೇತ್ರಗಳಿಗೆ ಮಾತ್ರ ಸೀಮಿತವಲ್ಲ.

ಸಾಮಾನ್ಯವಾಗಿ ಈ ವೃತ್ತಿಯಲ್ಲಿ ತೊಡಗಿರುವುದನ್ನು ವೈಯಕ್ತಿಕ ಹಣಕಾಸು ಯೋಜನೆ ಎಂದು ಕರೆಯಲಾಗುವುದು. ಈ ಯೋಜನಾಕಾರ್ಯವನ್ನು ನಿರ್ವಹಿಸಲು, ವ್ಯಕ್ತಿಯು ಗ್ರಾಹಕನ ನಿರ್ಧಿಷ್ಟ ಸನ್ನಿವೇಶಕ್ಕೆ ತಕ್ಕಂತಹ ಮತ್ತು ಗ್ರಾಹಕನ ನಿಖರವಾದ ಗುರಿಗಳನ್ನು ಪೂರೈಸುವಂತಹ ಸಮಗ್ರ ಸೂಕ್ತ ಹಣಕಾಸು ಯೋಜನೆ ರಚಿಸಲು ಹಣಕಾಸು ಯೋಜನಾ ಪ್ರಕ್ರಿಯೆ ಯಿಂದ ಮಾರ್ಗದರ್ಶನ ಪಡೆಯಬೇಕಾಗುತ್ತದೆ. ಹಣಕಾಸು ಯೋಜಕನು ತಾನು ಏನು ಮಾಡುತ್ತಾನೆ ಎಂಬ ಪ್ರಮುಖ ಅಂಶ ಗ್ರಾಹಕನ ಬಗ್ಗೆ ತಾನು ಗಣನೆಗೆ ತೆಗೆದುಕೊಳ್ಳುವ ಪ್ರಶ್ನೆಗಳು ಮತು ಗ್ರಾಹಕನ ಜೀವನದ ಸನ್ನಿವೇಶಗಳು ಮತ್ತು ಆತನ ಸಂಪೂರ್ಣ ಹಣಕಾಸಿನ ಮೇಲೆ ಪ್ರಭಾವ ಬೀರುವ ಮಾಹಿತಿ ಮತ್ತು ಸಲಹೆಗಳನ್ನು ಒಳಗೊಂಡಿದೆ.

ಧ್ಯೇಯಗಳು[ಬದಲಾಯಿಸಿ]

ಜನರು ಸಾಮಾನ್ಯವಾಗಿ ಹಣಕಾಸು ಯೋಜಕರ ಸಹಾಯ ಪಡೆಯಲು ಬಯಸುತ್ತಾರೆ ಏಕೆಂದರೆ , ಈ ಕೆಳಕಂಡ ಅಂಶಗಳು ಅವರಿಗೆ ಕ್ಲಿಷ್ಟಕರವಾಗಿ ಗೋಚರಿಸುತ್ತವೆ:

 • ಹಣಕಾಸಿಗೆ ಸಂಬಂಧಿಸಿದ ತೀರ್ಮಾನಗಳಿಗೆ ಸೂಕ್ತ ನಿರ್ದೇಶನ ಮತ್ತು ಅರ್ಥವನ್ನು ಕಲ್ಪಿಸಿ ಕೊಡುವುದು;
 • ಪ್ರತಿಯೊಂದು ಹಣಕಸಿನ ತೀರ್ಮಾನವೂ ಹೇಗೆ ಮತ್ತೊಂದು ಹಣಕಾಸಿನ ಕ್ಷೇತ್ರದ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ವ್ಯಕ್ತಿಗೆ ಮನವರಿಕೆ ಮಾಡಿಕೊಡುವುದು; ಮತ್ತು
 • ಒಬ್ಬ ವ್ಯಕ್ತಿ ಜೀವನದ ಬದಲಾವಣೆಗಳಿಗೆ ಸುಲಭವಾಗಿ ಹೊಂದಿಕೊಂಡು ಹೋಗುವುದಕ್ಕೆ ಅವಕಾಶವನ್ನು ಕಲ್ಪಿಸುವುದು.

ಒಬ್ಬ ಅತ್ತ್ಯುತ್ತಮ ಹಣಕಾಸು ಯೋಜಕನೊಂದಿಗೆ ಕೆಲಸ ಮಾಡುವುದರಿಂದ, ಒಬ್ಬ ಗ್ರಾಹಕ ಅಥವಾ ಕೌಟುಂಬಿಕ ದೃಷ್ಟಿಕೋನದಲ್ಲಿ ದೊರೆಯುವ ಅತ್ತ್ಯುತ್ತಮ ಫಲಿತಾಂಶಗಳೆಂದರೆ:

 • ಒಂದು ನಿಗದಿತ ದಿನಾಂಕದೊಳಗೆ ತಲುಪಬಹುದಾದ ಎಲ್ಲಾ ಹಣಕಾಸು ಗುರಿಗಳನ್ನು (ಸಾಧಿಸಬೇಕಾದ ಯೋಜನೆ ಮತ್ತು ಹಣ ಇವೆರಡನ್ನೂ) ಪೂರ್ತಿಗೊಳಿಸುವುದು ಮತ್ತು
 • ಯಾವುದೇ ಪ್ರಮುಖ ಅನಿರೀಕ್ಷಿತ ಹಣಕಾಸು ಸನ್ನಿವೇಶ ಯೋಜನೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರದಂತೆ ಆಗಾಗ್ಗೆ ಇಂತಹ ಸೂಕ್ಷ್ಮ ಯೋಜನೆಯನ್ನು ಆಧುನೀಕರಣಗೊಳಿಸುವುದು ಮತ್ತು
 • ಈ ನಿಟ್ಟಿನಲ್ಲಿ ವಿವೇಚನಾಯುಕ್ತ ಹಣಕಾಸು ಆಯ್ಕೆಯನ್ನು ಮಾಡಿಕೊಳ್ಳುವುದು (ಖರೀದಿಸುವ ಅಥವಾ ಬೋಗ್ಯ ಹಾಕಿಕೊಳ್ಳುವ, ಮರುಹೂಡಿಕೆ ಅಥವಾ ಪಾವತಿಸುವ ಇತ್ಯಾದಿ.)

ಒಬ್ಬ ನುರಿತ ಹಣಕಾಸು ಯೋಜಕನೊಂದಿಗೆ ತೊಡಗಿಸಿಕೊಳ್ಳುವುದಕ್ಕಿಂತ ಮುಂಚೆ, ಗ್ರಾಹಕನು ತನ್ನ ಈ ಯೋಜಕನು ದಕ್ಷನೇ ಮತ್ತು ನಂಬಿಕೆಗೆ ಅರ್ಹನೆ ಎಂದು ತಿಳಿಯುವುದು ಅತ್ಯವಶ್ಯಕ. ಇದರ ಜೊತೆಗೆ ಯೋಜಕನು ತನ್ನ ಸ್ವಂತ ಲಾಭಕ್ಕಾಗಿ ಗ್ರಾಹಕನ ಸರಕುಗಳನ್ನು ಮಾರುವುದರಲ್ಲಿ ಆಸಕ್ತಿಯನ್ನು ತೋರಿಸುವುದಕ್ಕಿಂತ, ಗ್ರಾಹಕನ ಹಿತಾಸಕ್ತಿಯನ್ನು ಮೊದಲು ಗಣನೆಗೆ ತೆಗೆದುಕೊಂಡಿದ್ದಾನೆಯೇ ಎಂಬುದನ್ನೂ ಸಹ ತಿಳಿದುಕೊಳ್ಳಬೇಕು. ಈ ಸಂಬಂಧಗಳು ಮುರಿದುಹೋಗುವ ಸಾಧ್ಯತೆಗಳಿರುವುದರಿಂದ, ಒಬ್ಬ ನುರಿತ ಹಣಕಾಸು ಯೋಜಕನು ತನ್ನ ಗ್ರಾಹಕನಿಗಾಗಿ ರಚಿತವಾದ ಹಣಕಾಸು ಯೋಜನೆಯ ಅನುಷ್ಟಾನದ ಬಗ್ಗೆ ಸರಿಯಾಗಿ ತಿಳಿದುಕೊಂಡು ಗ್ರಾಹಕನ ಉದ್ದೇಶ ಸಫಲವಾಗುವಂತೆ ಮಾಡುವುದು ಅನಿವಾರ್ಯ. ಆದ್ದರಿಂದ ಒಬ್ಬಹಣಕಾಸು ಯೋಜಕ ತನ್ನ ಯೋಜನೆ ಪೂರ್ಣಗೊಂಡನಂತರ, ಅದನ್ನು ಅನುಷ್ಟಾನಕ್ಕೆ ತರಲು ಹಂತ-ಹಂತವಾಗಿ ತಯಾರಿಸಿದ ಲಿಖಿತ ದಾಖಲೆಗಳು, ಆ ಯೋಜನೆಗಿಂತ ಹೆಚ್ಚಿನ ಉಪಯೋಗವನ್ನು ಹಲವಾರು ಗ್ರಾಹಕರಿಗೆ ಒದಗಿಸುತ್ತದೆ.

ಜೀವನಾವಧಿಯ ಸಮಗ್ರ ಲಿಖಿತ ಹಣಕಾಸು ಯೋಜನೆಯು ಒಬ್ಬ ಹಣಕಾಸು ಯೋಜಕನು ಬಳಸುವ ತಾಂತ್ರಿಕ ದಾಖಲೆಯಾಗಿದೆ. ಕೆಲವೇ ಪುಟಗಳುಳ್ಳ ಕಾರ್ಯಗತಗೊಳಿಸಬೇಕಾದ ಅನುಷ್ಟಾನ ಅಂಶಗಳು ಒಬ್ಬ ಗ್ರಾಹಕನಿಗೆ ಅತ್ಯುತ್ತಮ ಉಪಯುಕ್ತ ದಾಖಲೆಯಾಗುತ್ತದೆ.

ವೈಯಕ್ತಿಕ ಹಣಕಾಸು ಯೋಜನೆಯ ವ್ಯಾಖ್ಯಾನ[ಬದಲಾಯಿಸಿ]

ವೈಯಕ್ತಿಕ ಹಣಕಾಸು ಯೋಜನೆಯನ್ನು ವಿಶಾಲ ಅರ್ಥದಲ್ಲಿ ವ್ಯಾಖ್ಯಾನಿಸುವುದಾದರೆ, ಒಬ್ಬ ವ್ಯಕ್ತಿಯ ಹಣಕಾಸಿನ ಗುರಿಗಳು,ಜೀವನದ ಉದ್ದೇಶಗಳುಮತ್ತು ಪ್ರಾಶಸ್ತ್ಯಗಳು ಹಾಗೂ ಆತನ ಸಂಪನ್ಮೂಲಗಳನ್ನು ಪರಿಗಣಿಸಿದ ನಂತರ, ಬರಬಹುದಾದ ವೈಯಕ್ತಿಕ ತೊಂದರೆಗಳು ಮತ್ತು ಜೀವನಶೈಲಿ, ಈ ಎಲ್ಲಾ ಗುರಿಗಳನ್ನು ತಲುಪಲು ಬೇಕಾದ ವಸ್ತುನಿಷ್ಟ ಮತ್ತು ಸಮತೋಲನ ಯೋಜನೆಯ ಒಂದು ವಿಧಾನ ಎಂದು ಕರೆಯಬಹುದು.

ದತ್ತಾಂಶಗಳನ್ನು ಸಂಗ್ರಹಿಸುವುದರೊಂದಿಗೆ, ಪ್ರತಿಯೊಂದು ಗುರಿಯ ಉದ್ದೇಶವೂ, ಒಬ್ಬ ವ್ಯಕ್ತಿಯ ಸನ್ನಿವೇಶಕ್ಕೆ ಹೊಂದಿಕೊಳ್ಳುವುದೇ ಎಂಬುದನ್ನು ಖಾತ್ರಿಪಡಿಸಿಕೊಳ್ಳುವುದು. ಈ ಗುರಿಗಳನ್ನು ತಲುಪಲು ವ್ಯಕ್ತಿಯ ಇಂದಿನ ಮತ್ತು ಭವಿಷ್ಯತ್ತಿನ ಸಂಪನ್ಮೂಲಗಳ ವಾಸ್ತವ ಪರಿಗಣನೆಯನ್ನು ಸೂಕ್ತ ವಿಶ್ಲೇಷಣೆಯ ಮೂಲಕ ತಿಳಿದುಕೊಳ್ಳುವುದು. ಈ ಪ್ರಕ್ರಿಯೆಯಲ್ಲಿ, ಗುರಿಗಳನ್ನು ತಲುಪಲು ಬರಬಹುದಾದ ಎಲ್ಲಾ ನಿರ್ಬಂಧಗಳನ್ನೂ ಮತ್ತು ಅಡಚಣೆಗಳನ್ನು ಗುರುತಿಸಲಾಗುತ್ತದೆ. ಈ ಮಾಹಿತಿಯನ್ನು ಮುಂದೆ ಅಂದುಕೊಂಡ ಗುರಿಗಳನ್ನು ತಲುಪಲು ಸಾಕಷ್ಟು ಸಂಪನ್ಮೂಲಗಳಿವೆಯೇ ಮತ್ತು ಇದಕ್ಕಾಗಿ ಮುಂದೆ ಬೇಕಾಗುವ ಇತರ ಅಗತ್ಯತೆಗಳೇನು ಎಂದು ತಿಳಿದು ಕೊಳ್ಳಲು ಬಳಸಲಾಗುತ್ತದೆ. ಒಂದು ವೇಳೆ ಯಾವುದೇ ಗುರಿಯನ್ನು ತಲುಪಲು ಸಂಪನ್ಮೂಲಗಳು ಸಾಕಷ್ಟು ಇಲ್ಲದೇ ಹೋದಲ್ಲಿ ಅಥವಾ ಸಂಪನ್ಮೂಲಗಳು ಇಲ್ಲದೇ ಇದ್ದಲ್ಲಿ, ಆ ನಿರ್ಧಿಷ್ಟ ಗುರಿಯನ್ನು ವಸ್ತುನಿಷ್ಟ ಹಂತಕ್ಕೆ ಹೊಂದಿಸಲಾಗುತ್ತದೆ ಇಲ್ಲವೆ ಅದರ ಬದಲಾಗಿ ಬೇರೊಂದು ಹೊಸ ಗುರಿಯನ್ನು ನಿಗಧಿಪಡಿಸಲಾಗುತ್ತದೆ.

ಈ ಯೋಜನೆಗೆ ಮುಂದಿನ ಭವಿಷ್ಯತ್ತಿಗಾಗಿ ತನ್ನ ಇಂದಿನ ಕೆಲವು ಇತರ ಸುಖಗಳನ್ನು ಮುಂದೂಡಲು ಸ್ವ-ನಿರ್ಬಂಧಗಳನ್ನು ರೂಢಿಸಿಕೊಳ್ಳುವ ಅವಶ್ಯಕತೆ ಇರುತ್ತದೆ. ಇದು ಪರಿಣಾಮಕಾರಿಯಾಗಿ ಇರಬೇಕೆಂದರೆ, ಯೋಜನೆಯು ಗ್ರಾಹಕನ ಪ್ರಸಕ್ತ ಜೀವನಶೈಲಿಗೆ ಹೊಂದಿಕೊಳ್ಳುವಂತಿದ್ದು, ಪ್ರಸಕ್ತ ಸುಖಸಂತೋಷಗಳ ಮುಂದೂಡುವಿಕೆ ಯೋಜನೆಗೆ ಪೂರಕವಾಗಿರಬೇಕಾಗುತ್ತದೆ.

ಪ್ರಸಕ್ತ ಅನುಕೂಲಗಳನ್ನು ಬಿಟ್ಟು ಬಿಡುವ ಸಂದರ್ಭಗಳಲ್ಲಿ ಗುರಿಯು ಯಾವ ಅಡಚಣೆ ಇಲ್ಲದೆ ಮುಂದುವರೆಯುವಂತೆ ನೋಡಿಕೊಳ್ಳ ಬೇಕಾಗುತ್ತದೆ ಒಂದು ಯೋಜನೆಯು ಪ್ರತಿಯೊಂದು ಗುರಿಗೂ ಪ್ರಾಮುಖ್ಯತೆಯನ್ನು ಕೊಡುವುದರೊಂದಿಗೆ, ಪ್ರಾಶಸ್ತ್ಯವನ್ನು ನೀಡುವುದು ಅತ್ಯವಶ್ಯಕ. ಹಲವಾರು ಹಣಕಾಸು ಯೋಜನೆಗಳು ವಿಫಲವಗುತ್ತವೆ, ಏಕೆಂದರೆ ಈ ಪ್ರಾಯೋಗೆಕ ಅಂಶಗಳನ್ನು ಎಷ್ಟೋ ಸಾರಿ ಕಡೆಗಣಿಸಲಾಗಿರುತ್ತದೆ.

ವಿಶಾಲ ಅವಕಾಶ[ಬದಲಾಯಿಸಿ]

ಹಣಕಾಸು ಯೋಜನೆಯು ಒಬ್ಬ ಗ್ರಾಹಕನ ಹಣಕಾಸಿನ ಎಲ್ಲಾ ಅವಶ್ಯಕತೆಗಳನ್ನೂ ಪೂರೈಸುವಂತದ್ದಾಗಿರಲೇಬೇಕು. ಈ ನಿಟ್ಟಿನಲ್ಲಿ ಗ್ರಾಹಕನ ಪ್ರತಿಯೊಂದು ಗುರಿ ಸಾಧನೆಗೆ ಪೂರಕವಾಗಿರಬೇಕಾಗಿರುವುದು ಅತ್ಯವಶ್ಯಕ.

ಸಾಮಾನ್ಯವಾಗಿ ಯೊಜನೆಯ ಉದ್ದೇಶ ಈ ಕೆಳಕಂಡ ಅಂಶಗಳನ್ನು ಒಳಗೊಂಡಿದೆ:

ಅಪಾಯ ನಿರ್ವಹಣೆ ಮತ್ತು ವಿಮಾ ಯೋಜನೆಗಳು


ಸೂಕ್ತ ಅಪಾಯನಿರ್ವಹಣೆ ಮತ್ತು ವಿಮಾ ತಂತ್ರಗಳ ಮೂಲಕ ನಗದು ಹರಿವಿನ ಅಪಾಯಗಲನ್ನು ನಿರ್ವಹಿಸುವುದು
ಬಂಡವಾಳ ಮತ್ತು ಯೋಜನಾ ಸಮಸ್ಯೆಗಳು
ಭವಿಷ್ಯದಲ್ಲಿ ಬಂಡವಾಳವನ್ನು ನಿರ್ಮಿಸಿಕೊಳ್ಳಲು, ಬಂಡವಾಳ ಸಂಗ್ರಹಣೆ ಮತ್ತು ಮರುಹೂಡಿಕೆ ಹಾಗೂ ಖರ್ಚಿಗಾಗಿ ಹಣದ ಹರಿವನ್ನು ನಿರ್ವಹಿಸಲು ಸರಿಯಾದ ಯೋಜನೆ ಹಾಕಿಕೊಳ್ಳುವುದು.


ನಿವೃತ್ತಿ ಯೋಜನೆ
401Kಗಳು, ಐಆರ್‌ಎಗಳು ಇತ್ಯಾದಿಗಳನ್ನು ಒಳಗೊಂಡಂತೆ ನಿವೃತ್ತಿಯ ವೇಳೆಯಲ್ಲಿ ಹಣಕಾಸು ಸ್ವಾತಂತ್ರ್ಯಕ್ಕೆ ಯೋಜನೆಯನ್ನು ರೂಪಿಸಿಕೊಳ್ಳುವುದು.
ತೆರಿಗೆ ಯೋಜನೆ
ಕಂದಾಯ ಹೊಣೆಗಾರಿಕೆಗಳ ಕಡಿತ ಮತ್ತು ಇತರೆ ಉದ್ದೇಶಗಳಿಗಾಗಿ ಹಣದ ಹರಿವಿನ ಉದಾರತೆಗಳಿಗಾಗಿ ಯೋಜನೆ ಹಮ್ಮಿಕೊಳ್ಳುವುದು
ಆಸ್ತಿ ಯೋಜನೆ
ಆಸ್ತಿಗಳ ಹಂಚಿಕೆ, ಸಂರಕ್ಷಣೆ, ಸಂಗ್ರಹ ಮತ್ತು ನಿರ್ಮಾಣಕ್ಕಾಗಿ ಮಾಡಿಕೊಳ್ಳಬೇಕಾದ ಯೋಜನೆಗಳು
ನಗದು ಹರಿವು ಹಾಗೂ ಆಸ್ತಿಗಳ ನಿರ್ವಹಣೆ
ಸಾಲಗಳು ಮತ್ತು ಜೀವನಶೈಲಿಯ ನಿರ್ವಹಣೆಯ ಮೂಲಕ ವೈಯಕ್ತಿಕ ನಗದು ಹರಿವುಗಳನ್ನು ಹೆಚ್ಚಿಸುವುದು ಹಾಗೂ ನಿರ್ವಹಿಸುವುದು.
ಸಂಬಂಧಗಳ ನಿರ್ವಹಣೆ
ಗ್ರಾಹಕನ ಮೂಲಭೂತ ಅವಶ್ಯಕತೆಗಳ ಸೇವೆ ಮತ್ತು ಶುದ್ಧ ಸರಕಿನ ಮಾರಾಟವನ್ನು ಮೀರಿ ಅರ್ಥೈಸಿಕೊಳ್ಳುವುದು ಅಗತ್ಯ.
ಚಿಕ್ಕ ಮಕ್ಕಳಿಗೆ ಹಾಗೂ ಕುಟುಂಬ ಸದಸ್ಯರಿಗಾಗಿ ಇರುವ ಶೈಕ್ಷಣಿಕ ಯೋಜನೆ

ವಿಧಾನ[ಬದಲಾಯಿಸಿ]

ಐಎಸ್‌ಒ 2222ರ ಪ್ರಕಾರ ವೈಯಕ್ತಿಕ ಹಣಕಾಸುಯೋಜನಾ ಪ್ರಕ್ರಿಯೆ ಯು ಈ ಆರು ಹಂತಗಳನ್ನೊಳಗೊಂಡ ಒಂದು ಪ್ರಕ್ರಿಯೆಯಾಗಿದೆ:

ವಿಧಾನ 1: ಗಾಹಕನೊಂದಿಗೆ ಉತ್ತಮ ಗುರಿಗಳನ್ನು ಇಟ್ಟುಕೊಳ್ಳುವುದು ಈ ಹಂತದಲ್ಲಿ ಒಬ್ಬ ಗ್ರಾಹಕನು ತನ್ನ ಹಣಕಾಸು ಮತ್ತು ಜೀವನಕ್ಕೆ ಸಂಬಂಧಿಸಿದಂತೆ ಯಾವ ಉದ್ದೇಶಗಳನ್ನು ಹೊಂದಿದ್ದಾನೆ ಎಂಬುದನ್ನು ಗುರುತಿಸುವುದು.

ವಿಧಾನ 2: ಗ್ರಾಹಕರಿಗೆ ಸಂಬಂಧಿಸಿದ ಮಾಹಿತಿಯನ್ನು ಕಲೆಹಾಕುವುದು. ಇದು ಗ್ರಾಹಕನ ಹಣಕಾಸು ಮತ್ತು ಹಣಕಾಸೇತರ ಸನ್ನಿವೇಶದ ಗುಣಮಟ್ಟ ಹಾಗೂ ಪರಿಮಾಣಾತ್ಮಕ ಅಂಶಗಳನ್ನು ಒಳಗೊಂಡಿದೆ.

ವಿಧಾನ 3: ಮಾಹಿತಿಯ ವಿಶ್ಲೇಷಣೆ ಸಂಗ್ರಹಿಸಿದ ಮಾಹಿತಿಯನ್ನು ಗ್ರಾಹಕನ ಸ್ಥಿತಿಗತಿ ಗತಿಗಳನ್ನು ಸರಿಯಾಗಿ ಅರ್ಥೈಸಿಕೊಳ್ಳುವಂತೆ ವಿಶ್ಲೇಷಿಸಲಾಗುತ್ತದೆ. ಇದು ಗ್ರಾಹಕನ ಗುರಿಗಳನ್ನು ತಲುಪಲು ಸಾಕಷ್ಟು ಸಂಪನ್ಮೂಲಗಳಿವೆಯೇ, ಹಾಗಾದರೆ ಅವು ಯಾವುವು ಎಂದು ಗುರುತಿಸುವುದನ್ನು ಒಳಗೊಂಡಿದೆ.

ವಿಧಾನ 4: ಒಂದು ಹಣಕಾಸು ಯೋಜನೆಯ ರಚನೆ ಭವಿಷ್ಯದಲ್ಲಿ ಗ್ರಾಹಕನ ಬೇಡಿಕೆ ಮತ್ತು ಪ್ರಸ್ತುತ ಆತನ ಹಣಕಾಸು ಸ್ಥಿತಿಯ ಆಧಾರದ ಮೇಲೆ, ಗ್ರಾಹಕನ ಗುರಿಗಳನ್ನು ಮುಟ್ಟುವುದಕ್ಕೆ ಅನುಕೂಲವಾಗುವಂತೆ ಆತನ ಗುರಿಗಳ ಒಂದು ಮಾರ್ಗ ನಕಾಶೆಯನ್ನು ತಯಾರಿಸಲಾಗುತ್ತದೆ.

ವಿಧಾನ 5: ಯೋಜನೆಯಲ್ಲಿ ಈ ತಂತ್ರವನ್ನು ಯಶಸ್ವಿಯಾಗಿ ಅಳವಡಿಸಿಕೊಳ್ಳುವುದು. ಈ ಯೊಜನೆಯಲ್ಲಿನ ಪ್ರಮುಖ ತಂತ್ರಗಳನ್ನು ಈ ಉದ್ದೇಶಕ್ಕಾಗಿ ಇರುವ ಸಂಪನ್ಮೂಲಗಳನ್ನು ಹಣಕಾಸು ಯೋಜನೆಯಡಿಯ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಬಳಸಿಕೊಳ್ಳುವುದು.

ವಿಧಾನ 6: ಅನುಷ್ಟಾನವನ್ನು ಮೇಲ್ವಿಚಾರಣೆ ಮಾಡುವುದು ಮತ್ತು ಯೊಜನೆಯನ್ನು ಪುನರ್ಪರಿಶೀಲಿಸುವುದು. ಅನುಷ್ಟಾನ ವಿಧಾನವು ಗ್ರಾಹಕನ ಧ್ಯೇಯಗಳಿಗೆ ನಿಕಟವಾಗಿ ಹೊಂದಿಕೊಳ್ಳುವಂತೆ ಖಾತ್ರಿ ಪಡಿಸಿಕೊಳ್ಳಬೇಕು.

ಗ್ರಾಹಕನ ಸನ್ನಿವೇಶದ ಬದಲಾವಣೆಗಳು ಮತ್ತು ಅಸಮರ್ಪಕತೆಗಳನ್ನು ಪರಿಶೀಲಿಸಲು ನಿಯತಕಾಲಿಕ ಪುನರವಲೋಕನಗಳನ್ನು ನಡೆಸಲಾಗುವುದು. ಗ್ರಾಹಕನ ಸ್ಥಿತಿಯಲ್ಲಿ ಗಣನೀಯವಾದ ಬದಲಾವಣೆ ಕಂಡುಬಂದಲ್ಲಿ , ಹಣಕಾಸು ಯೋಜನೆಯಲ್ಲಿನ ರೂಪುರೇಷೆ ಮತ್ತು ಗುರಿಗಳನ್ನು ಅದಕ್ಕೆ ತಕ್ಕಂತೆ ಪರಿಷ್ಕರಿಸುವುದು.

ಹಣಕಾಸು ಯೋಜಕನ ಕಾರ್ಯವೇನು?[ಬದಲಾಯಿಸಿ]

ಒಬ್ಬ ಹಣಕಾಸು ಯೋಜಕನು, ಹಣಕಾಸಿನ ಯೋಜನೆಗಳಿಗೆ ಸಂಬಂಧಿಸಿದ ವಿಶೇಷವಾಗಿ ವೈಯಕ್ತಿಕ ಹಣಕಾಸು ಯೊಜನೆಯಲ್ಲಿ ನುರಿತ ವ್ಯಕ್ತಿಯಾಗಿರುತ್ತಾನೆ. ಇದಕ್ಕೆ ಬದಲಾಗಿ ಒಬ್ಬ ಸ್ಟಾಕ್‌ಬ್ರೋಕರ್‌ನ ಸಾಮಾನ್ಯವಾಗಿ ಬಂಡವಾಳಗಳು ಅಥವಾ ವಿಮಾ ಮಧ್ಯವರ್ತಿಯಾಗಿ ತೊಂದರೆ ಸರಕುಗಳ ಸಲಹೆಗಾರನಾಗಿ ಕೆಲಸ ಮಾಡುತ್ತಾನೆ.

ಹಣಕಾಸು ಯೋಜನೆಯು ಸಾಧಾರಣವಾಗಿ ಒಂದು ಬಹು-ಹಂತ ಪ್ರಕ್ರಿಯೆಯಾಗಿದ್ದು, ಗ್ರಾಹಕನ ಸಮಸ್ಯೆಗೆ ಸಮಗ್ರ ಪರಿಹಾರವನ್ನು ನೀಡಲು ಆತನ ಸನ್ನಿವೇಶವನ್ನು ಎಲ್ಲಾ ದೃಷ್ಟಿ ಕೋನಗಳಿಂದ ಪರಿಗಣಿಸಲಾಗುತ್ತದೆ. ಗುಣಮಟ್ಟಗಳಿಗಾಗಿ ಇರುವ ಅಂತರಾಷ್ಟ್ರೀಯ ಸಂಸ್ಥೆ (ಐಎಸ್‌ಒ)ಯು, ಈ ಆರು ಹಂತಗಳ ಹಣಕಾಸು ಯೋಜನಾ ಪ್ರಕ್ರಿಯೆಯನ್ನು ಅಂಗೀಕರಿಸಿದೆ.[೧] ಕೆಲವು ರಾಷ್ಟ್ರಗಳಲ್ಲಿ ಹಣಕಾಸು ಯೋಜಕರನ್ನು, ಹಣಕಾಸು ಸಲಹೆಗಾರ ಎಂಬ ಶಿರೋನಾಮೆಯಡಿಯಲ್ಲಿ ಗುರುತಿಸಲಾಗುತ್ತದೆ.ಆದರೆ ಇವೆರಡೂ ಪದಗಳು ಒಂದೇ ಅರ್ಥವನ್ನು ಕೊಡದೆ, ಅವುಗಳ ಕಾರ್ಯವಿಧಾನದಲ್ಲಿಯೂ ಕೆಲವು ಭಿನ್ನತೆಗಳಿವೆ.

ಹಣಕಾಸು ಯೋಜಕರಲ್ಲಿ ಹಲವಾರು ವಿಧಗಳಿದ್ದರೂ ಸಹ, ಈ ಪದವನ್ನು ಒಬ್ಬ ಗ್ರಾಹಕನ ಸಂಪೂರ್ಣ ಹಣಕಾಸಿನ ಚಿತ್ರವನ್ನು ಅರಿತು,ಅದಕ್ಕೆ ಸುಕ್ತ ಪರಿಹಾರವನ್ನು ಕಂಡುಹಿಡಿಯುವ ವ್ಯಕ್ತಿಗೆ ಹೆಚ್ಚು ಅನ್ವಯಿಸುತ್ತದೆ. ಇತರೆ ಹಣಕಾಸು ಯೋಜನೆಗಳಿಂದ ಭಿನ್ನವಾಗಿರಿಸಲು, ಕೆಲವು ಯೋಜಕರು ಇದನ್ನು "ವ್ಯಾಪಕ" ಅಥವಾ "ಶುದ್ಧ" ಹಣಕಾಸು ಯೋಜಕರು ಎಂದು ಕರೆದಿದ್ದಾರೆ.

ಇತರ ಹಣಕಸು ಯೋಜಕರು ವಿಮಯೋಜನೆ (ತೊಂದರೆ ನಿರ್ವಹಣೆ) ಮತ್ತು ನಿವೃತ್ತಿ ಯೋಜನೆಯಂತಹ ಒಂದು ಅಥವಾ ಎರಡು ಕ್ಷೇತ್ರಗಳಲ್ಲಿ ಮಾತ್ರ ನೈಪುಣ್ಯತೆ ಪಡೆದಿರುತ್ತಾರೆ.

2014 ನಂತರ ಇತರೆ ಸರಾಸರಿ ಉದ್ಯೋಗ ಬೆಳವಣಿಗೆಗಳಿಗಿಂತ ಅತಿ ಹೆಚ್ಚು ವೇಗವಾಗಿ ಬೆಳೆಯುವ ಒಂದು ಉದ್ಯಮವೆಂದರೆ ಅದು ಹಣಕಾಸು ಯೋಜನೆಯಾಗಿದೆ.[೨]

ಪರವಾನಗಿ ಪಡೆಯುವಿಕೆ, ಕಾಯಿದೆ ಮತ್ತು ಸ್ವ-ನಿಯಂತ್ರಣ[ಬದಲಾಯಿಸಿ]

ಬಹುತೇಕ ರಾಷ್ಟ್ರಗಳಲ್ಲಿ "ಹಣಕಾಸು ಯೋಜಕ" ಎಂಬ ಪದವು ದುರ್ಬಳಕೆಯಾಗುತ್ತಿದೆ. ಸರಿಯಾದ ಕಾಯಿದೆಯ ಕೊರತೆಯಿಂದ ಹಣಕಾಸು ಸೇವೆಗಳು ಈ ರಾಷ್ಟ್ರಗಳಲ್ಲಿ ಅವ್ಯವಸ್ಥಿತವಾಗಿ ಬಳಕೆಯಾಗುತ್ತಿವೆ. ಕೆಲವೊಮ್ಮೆ, ಜೀವ ವಿಮಾ ಕಂಪನಿಗಳು ಮತ್ತು ಯುನಿಟ್ ಟ್ರಸ್ಟ್ ನಂತಹ ಮಧ್ಯವರ್ತಿಗಳು, ಗ್ರಾಹಕರ ಬಳಿಯಲ್ಲಿ ತಮ್ಮ ವೃತ್ತಿಪರತೆಯನ್ನು ಹೆಚ್ಚಿಸಿಕೊಳ್ಳಲು, ತಾವು ಹಣಕಾಸು ಯೋಜನೆಗಳ ಬಗ್ಗೆ ಸರಿಯಾದ ತರಬೇತಿ ಹೊಂದಿಲ್ಲದೆ ಇದ್ದರೂ ಈ ಹೆಸರನ್ನು ಬಳಸಿಕೊಳ್ಳುತ್ತವೆ. ಇದು ಕೆಲವು ಸಮಯಗಳಲ್ಲಿ ದುರುಪಯೋಗ ಮತ್ತು ನಿಂದನೆಗಳಿಗೆ ಕಾರಣವಾಗುತ್ತದೆ. ನಿಯಮಬಾಹಿರ ಮತ್ತು ವೃತ್ತಿಪರರಲ್ಲದ ವ್ಯಕ್ತಿಗಳಿಂದ ಹಣಕಾಸು ಸೇವೆಗಳನ್ನು ಪಡೆಯುವುದರ ಮೂಲಕ ಗ್ರಾಹಕರುಮೋಸ ಹೋಗಬಹುದು.

ಆದ್ದರಿಂದ ಈ ಉದ್ಯಮವನ್ನು, ಹಣಕಾಸು ಯೋಜನಾ ವೃತ್ತಿಪರರನ್ನು ಮತ್ತು ಹವ್ಯಾಸಿ ವೃತ್ತಿಪರರನ್ನು ಪ್ರಂಪಂಚಾದ್ಯಂತ( ಅಮೇರಿಕಾ ಸಂಯುಕ್ತ ಸಂಸ್ಥಾನದಿಂದ ಆರಂಭಿಸಿ) ಸಂರಕ್ಷಿಸಲು ಸ್ವಯಂ-ನಿಯಂತ್ರಣವನ್ನು ಪಡೆಯಲು ಮತ್ತು ಉದ್ಯಮದಲ್ಲಿ ಕ್ರಮಬದ್ಧತೆಯನ್ನು ತರಲು ವ್ಯಾಪಾರ ಸಂಸ್ಥೆಗಳನ್ನು ಆರಂಭಿಸಲಾಗಿದೆ. FPA, ನಂತಹ ಕೆಲವು ಸಂಸ್ಥೆಗಳು ಉನ್ನತ ಮಟ್ಟದಲ್ಲಿ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ, ಈ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಸದಸ್ಯರುಗಳಿಗೆ ದೃಢೀಕರಣ ಪತ್ರಗಳನ್ನು ಕೊಡುತ್ತದೆ.

"ಹಣಕಾಸು ಯೋಜಕ" ಎಂಬ ಶಿರೋನಾಮೆಯನ್ನು ಬಳಸಲು ಯಾವುದೇ ರೀತಿಯ ಕಾನೂನು ತೊಡಕುಗಳು ಇಲ್ಲದೇ ಇರುವುದರಿಂದ, ಬಹುತೇಕ ರಾಷ್ಟ್ರಗಳಲ್ಲಿ ಇದನ್ನು ಹಣಕಾಸು ಉದ್ಯಮಗಳಲ್ಲಿ ಬಳಸಲಾಗುತ್ತಿದೆ. ಹಣಕಾಸು ಯೋಜನಾ ವೃತ್ತಿಯು ಆಳವಾಗಿ ಬೇರೂರುತ್ತಿರುವ ಹಲವಾರು ರಾಷ್ಟ್ರಗಳಲ್ಲಿ, ಅವುಗಳ ಸರ್ಕಾರಗಳು ಮಾರುಕಟ್ಟೆಯನ್ನು ವ್ಯವಸ್ಥಿತವಾಗಿ ಕಾಪಾಡಲು ತಮ್ಮ ಕ್ರಿಯಾಶಿಲತೆಯನ್ನು ಹೆಚ್ಚಿಸಿಕೊಳ್ಳುತ್ತಿವೆ. ಈ ವೃತ್ತಿಯನ್ನು ಪರೀಕ್ಷಿಸಲು ಅತ್ಯಂತ ಕಠಿಣವಾದ ನಿಯಮ ಮತ್ತು ಮಾರ್ಗದರ್ಶನಗಳನ್ನು ಜಾರಿಗೊಳಿಸಲಾಗಿದೆ.

ಹಣಕಾಸು ಯೋಜನೆಯ ಹುದ್ದೆಗಳು ಹೆಚ್ಚುವಂತೆ ಇತ್ತೀಚೆಗೆ ಹೆಚ್ಚುವರಿ ವಿದ್ಯಾರ್ಹತೆಗಳು ಹುಟ್ಟಿಕೊಂಡಿವೆ. ಇದು ಆರೋಗ್ಯ ನಿರ್ವಹಣೆ ಅಥವಾ ಖಾಸಗಿ ಬ್ಯಾಂಕ್ ನಂತಹ ನುರಿತ ಕೌಶಲ್ಯಗಳನ್ನು ಒಳಗೊಂಡಿವೆ.

ಆಸ್ಟ್ರೇಲಿಯಾ[ಬದಲಾಯಿಸಿ]

ಆಸ್ಟ್ರೇಲಿಯಾದಲ್ಲಿ ಮೊದಲು, ಹಣಕಾಸು ಸೇವೆಗಳನ್ನು ರಕ್ಷಣಾತ್ಮಕವಾಗಿ ವ್ಯಾಪರ ನಡೆಸಲು ಅಥವಾ ಬಂಡವಾಳ ಹೂಡಿಕೆಗೆ ಸಲಹೆ ನೀಡಲು ಕಾನೂನು ಬದ್ದವಾಗಿ ಪರವಾನಗೆ ಕೊಡುವುದರ ಮೂಲಕ ಪ್ರಾರಂಭವಾಯಿತು. ಹಲವಾರು ವರ್ಷಗಳಿಂದ ಈ ಕಾಯಿದೆಗಳನ್ನು ಶಕ್ತಿಯುತವಾಗಿ ಅನುಷ್ಟಾನಗೊಳಿಸಿಕೊಂಡು ಬರುತ್ತಿರುವ ಆಸ್ಟ್ರೇಲಿಯಾದ ಭದ್ರತಾ ಮತ್ತು ಬಂಡವಾಳ ಸಮಿತಿಯು(ಎ‌ಎಸ್‌ಐಸಿ), ಕೆಲವು ಕಠಿಣವಾದ ಅಳತೆಗೋಲಿನ ಅಡಿಯಲ್ಲಿ ಪರವಾನಗಿಯನ್ನು ನೀಡುತ್ತದೆ.[೩] ಹಣಕಾಸು ಯೋಜನೆಯು ಈಗ ಆಸ್ಟ್ರೇಲಿಯಾದಲ್ಲಿ ಅತ್ಯಂತ ನಿಯಂತ್ರಿತ ಉದ್ಯಮವಾಗಿದೆ ವಿಶೇಷವಾಗಿ ಹಣಕಾಸು ಸಲಹೆಯು ಸಾರ್ವಜನಿಕ ಹಿತಾಸಕ್ತಿಯನ್ನು ಒಳಗೊಂಡಲ್ಲಿ ಇದು ಪ್ರಮುಖವಾಗಿ ಪರಿಣಮಿಸಿದೆ. ಈ ವೃತ್ತಿಯಲ್ಲಿ ತೊಡಗಿರುವವರು ಕೆಲವೊಮ್ಮೆ, ಒಂದು ಸರಕನ್ನು ಗ್ರಾಹಕನು ಕೊಳ್ಳಲು ತೆಗೆದುಕೊಳ್ಳುವ ನಿರ್ಧಾರಕ್ಕೆ ಕನಿಷ್ಟ ತರಬೇತಿಯ ಅವಶ್ಯಕತೆ ಇರುತ್ತದೆಮತ್ತು ಎ‌ಎಸ್‌ಐಸಿ. ನಿಂದ ಪರವಾನಗೆ ಪಡೆಯಬೇಕಾಗುತ್ತದೆ. ಇಲ್ಲಿ "ಪರವನಿಗೆ" ಎಂದರೆ ಆಸ್ಟ್ರೇಲಿಯನ್ ಫೈನಾನ್ಷಿಯಲ್ ಸರ್ವಿಸಸ್ ಲೈಸನ್ಸ್(AFSL) ಪರವಾನಗೆಯುಳ್ಳವರು ಅಥವಾ ಅಧಿಕೃತ ಪರವಾನಗೆದಾರರು ಎಂದರ್ಥ. ವಿಶಾಲ ದೃಷ್ಟಿಕೋನದಿಂದ ಹೇಳುವುದಾದರೆ, ಹಣಕಾಸು ಯೋಜನೆಯಲ್ಲಿ ತೊಡಗುವ ಬಹುತೇಕ ಜನರು ಒಬ್ಬ ಪರವಾನಗಿದಾರನ ಅಧಿಕೃತ ಪ್ರತಿನಿಧಿಯಾಗಿ ತಮ್ಮ ಕಾರ್ಯ ಪ್ರಾರಂಭಿಸುತ್ತಾರೆ.

ಆಸ್ಟ್ರೇಲಿಯಾದಲ್ಲಿ ಒಬ್ಬ ಹಣಕಾಸು ಯೋಜಕನಾಗಲು ಎರಡು ಪ್ರಮುಖ ಹಂತಗಳಿವೆ:

 1. ನಿಯಮ ಗೊತ್ತುವಳಿ 146ರ ತರಬೇತಿ ಬೇಡಿಕೆಗಳನ್ನು ಪೂರೈಸುವುದು;
 2. ಯಾರೊಂದಿಗೆ ಸಹಭಾಗಿತ್ವವವನ್ನು ಇಚ್ಚೆ ಪಡುತ್ತಾರೋ ಪರವಾನಗಿಯುಳ್ಳ ಅಂತಹ ವ್ಯಕ್ತಿಯನ್ನು ಆಯ್ಕೆ ಮಾಡಿಕೊಳ್ಳುವುದು.

ಪರವಾನಗಿ ಹೊಂದಿರುವ ವ್ಯಕ್ತಿಯು ಅಧಿಕೃತ ಪ್ರತಿನಿಧಿಯಾಗಿದ್ದು, ಅಂತಿಮವಾಗಿ ಯೋಜಕನು ಕೊಡುವ ಸಲಹೆಗೆ ಸಂಪೂರ್ಣ ಜವಾಬ್ದಾರನಾಗಿರುತ್ತಾನೆ. ಆದ್ದರಿಂದ ಪರವಾನಗೆದಾರನು ತನ್ನ ಪ್ರತಿನಿಧಿಗಳು ಎಲ್ಲಾ ಅನುಪಾಲನೆಗಳು ಮತ್ತು ತರಬೇತಿಯ ಪೂರ್ವಾಪೇಕ್ಷೆಗಗಳನ್ನು ಪೂರೈಸುವುದರ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕಗುತ್ತದೆ. ನವೆಂಬರ್ 2005 ರಲ್ಲಿ ಸುಮಾರು 4,300 ಪರವಾನಗಿದಾರರು ಎ‌ಎಸ್‌ಐಸಿನೊಂದಿಗೆ ತಮ್ಮ ಹೆಸರನ್ನು ನೊಂದಾಯಿಸಿಕೊಂಡರುಮತ್ತು ಆಸ್ಟ್ರೇಲಿಯಾದಲ್ಲಿ ಈ ಹೊತ್ತಿಗೆ 42,500 ಕ್ಕಿಂತಲೂ ಹೆಚ್ಚು ಅಧಿಕೃತ ಪ್ರತಿನಿಧಿಗಳಿದ್ದರು

ಮಲೇಷಿಯಾ[ಬದಲಾಯಿಸಿ]

ಒಬ್ಬ ವ್ಯಕ್ತಿ ಹಣಕಾಸು ಯೋಜಕನಾಗುವ ಮುನ್ನ ತಾನು ಅದಕ್ಕೆ ಸಂಬಂಧಿಸಿದ ಪರವಾನಗೆಯನ್ನು ಹೊಂದಿರಬೇಕು ಎಂಬ ಶಾಸನವನ್ನು ಮೊಟ್ಟ ಮೊದಲಿಗೆ ಜಾರಿಗೆ ತಂದ ದೇಶವೆಂದರೆ "ಮಲೇಷಿಯಾ". ಪಾಶ್ಚಿಮಾತ್ಯ ದೇಶಗಳಿಗೆ ಹೋಲಿಸಿದಲ್ಲಿ,ಏಷ್ಯಿಯಾ ಪ್ರಾಂತಗಳಲ್ಲಿ ಹಣಕಾಸು ಯೋಜನೆಯನ್ನು ಒಂದು ಹೊಸ ವೃತ್ತಿಯನ್ನಾಗಿ ಪರಿಗಣಿಸಲಾಗಿದೆ.ಆದರೆ ಅಮೇರಿಕಾ ಸಂಯುಕ್ತ ಸಂಸ್ಥಾನ ಮತ್ತು ಆಸ್ಟ್ರೇಲಿಯಾದಂತಹ ದೇಶಗಳಲ್ಲಿ ಇದು ಅತ್ಯಂತ ಹೆಚ್ಚು ಬೆಳೆದಿರುವ ಒಂದು ವೃತ್ತಿಯಾಗಿದೆ. ಮಲೇಷಿಯಾದ ಭದ್ರತಾ ಸಮಿತಿಯು 2003 ರ ಭದ್ರತಾ ಉದ್ಯಮ ಕಾಯಿದೆಯ ತಿದ್ದುಪಡಿಯ ಮೂಲಕ ಹಣಕಾಸು ಯೋಜನೆಯನ್ನು ನಿಯಂತ್ರಿಸಲು ಮತ್ತು "ಹಣಕಾಸು ಯೋಜನೆ" ಎಂಬ ಶಿರೋನಾಮೆ ಅಥವಾ ಅದಕ್ಕೆ ಸಂಬಂಧಿಸಿದ ಶೀರ್ಷಿಕೆ ಅಥವಾ ಹಣಕಾಸು ಯೋಜನೆಗೆ ಸಂಬಂಧಿಸಿದ ಚಟುವಟಿಕೆಗಳನ್ನು ನಡೆಸಲು ಒಂದು ಹೊಸ ಶಾಸನವನ್ನು ಜಾರಿಗೊಳಿಸಿದೆ .[೪]

2005ರಲ್ಲಿ ಹಣಕಾಸು ಸಲಹಾ ವ್ಯಾಪಾರವನ್ನು ನಡೆಸುವ (ವಿಮಾ ಚಟುವಟಿಕೆಗಳಿಗೆ ಸಂಬಂಧಿಸಿದ ಹಣಕಾಸು ಯೋಜನೆಗಳನ್ನು ಒಳಗೊಂಡಂತೆ) ಮತ್ತು ಅವರ ಮಂಡಳಿಯಡಿಯಲ್ಲಿ ಹಣಕಾಸು ಸಲಹೆಗಾರ ಶೀರ್ಷಿಕೆಯನ್ನು ಪಡೆಯಲು ಬ್ಯಾಂಕ್ ನೆಗರಾ ಮಲೇಷಿಯಾ (ಬಿಎನ್‌ಎಮ್) ದಿಂದ ಪರವಾನಗೆಯನ್ನು ಪಡೆಯುವ ವ್ಯಕ್ತಿಗಳಿಗಾಗಿ ಮಲೇಷಿಯಾ ವಿಮಾ ಕಾಯಿದೆಯಲ್ಲಿ ತಿದ್ದುಪಡಿಯನ್ನು ತರಲಾಯಿತು.[೫] ಹಣಕಾಸು ಸಲಹಾ ಸೇವೆಗಳನ್ನು ಕೊಡುವ ಕೆಲವು ವ್ಯಕ್ತಿಗಳು, ಉದಾ:ಪರವಾನಗಿಯುಳ್ಳ ವಿಮಾ ಏಜೆಂಟರುಗಳಿಗೆ ಈ ಅಗತ್ಯತೆಯಿಂದ ರಿಯಾಯಿತಿ ನೀಡಲಾಗಿದೆ.

ಮತ್ತೆ 2007ರಲ್ಲಿ ಸರ್ಕಾರವು ಈ ಉದ್ಯಮವನ್ನು ಒಂದೇ ಕಾಯಿದೆಯಡಿಯಲ್ಲಿ ತರಲು ಬಯಸಿದ್ದರಿಂದ ಬಂಡವಾಳ ಸೇವಾ ಮಾರುಕಟ್ಟೆ ಕಾಯಿದೆಯನ್ನು (ಸಿಎಮ್‌ಎಸ್‌ಎ) ಜಾರಿಗೆ ತರಲಾಯಿತು.

ಪ್ರಸ್ತುತ, ಮಲೇಷಿಯಾದಲ್ಲಿ ಒಬ್ಬ ಹಣಕಾಸು ಯೋಜಕ ಅಥವಾ ಹಣಕಾಸು ಸಲಹೆಗಾರ ಪರವಾನಗೆಯನ್ನು ಪಡೆಯಲು ಅರ್ಜಿ ಹಾಕಬೇಕೆಂದಲ್ಲಿ ಪ್ರಮುಖ ಕಂಪನಿಯ ಅಧಿಕಾರಿಯಾಗಿರಬೇಕು, ಉದಾ: ನಿರ್ದೇಶಕನು ಆರ್‌ಎಫ್‌ಪಿ‌ ಪದನಾಮ ಹೊಂದಿರಬೇಕು (ಮಲೇಷಿಯಾದ ಬಹುತೇಕ ಎಫ್‌ಸಿಎಚ್‌ಎಫ್‌ಪಿ ಪದನಾಮವುಳ್ಳವರು ಆರ್‌ಎಫ್‌ಪಿ‌ ಪದನಾಮವನ್ನೂ ಹೊಂದಿದ್ದಾರೆ). ನಂತರ, ಸೆಪ್ಟಂಬರ್ 2006ರಲ್ಲಿ ಹಣಕಾಸು ಸಲಹೆಗಾರನು ಪರವಾನಗೆಯನ್ನು ಪಡೆಯಲು ಸಿಎಫ್‌ಪಿ ಎಂಬ ವಿದ್ಯಾರ್ಹತೆಯನ್ನು ಪರ್ಯಾಯವಾಗಿ ಅಳವಡಿಸಲಾಗಿದೆ. ಈ ಬೆಳವಣಿಗೆಯೊಂದಿಗೆ , ಹಣಕಾಸು ಯೊಜನಾ ಕೋರ್ಸ್‌ಗಳಿಗಿರುವ ಬೇಡಿಕೆ ಮಲೇಷಿಯಾದಲ್ಲಿ ಆಳವಾಗಿ ಬೇರೂರಿ ಹೆಚ್ಚು ಮೂರ್ತ ರೂಪುರೇಷೆಗಳನ್ನು ಪಡೆದುಕೊಂಡಿತು. ಪರವಾನಗಿ ಅಭ್ಯರ್ಥಿಯು ಅಧಿಕೃತ ಅಧಿಕಾರಿಗಳಿಂದ ದೃಢೀಕರಿಸಲ್ಪಟ್ಟ ಹಣಕಾಸು ಯೋಜನೆಯಲ್ಲಿ ತೊಡಗಿಸಿಕೊಳ್ಳಬೇಕಾದಲ್ಲಿ ಆತನು ಒಂದು ಸ್ವಯಂ-ನಿಯಂತ್ರಕ ಸಂಸ್ಥೆಯ(ಎಸ್‌ಆರ್‌ಒ) ಸಂಸ್ಥೆಯ ಸದಸ್ಯನಾಗಿರಲೇಬೇಕಾಗುತ್ತದೆ. ಈ ಉದ್ದೇಶಕ್ಕಾಗಿ ಸಂರಕ್ಷಣಾ ಸಮಿತಿ ಮತ್ತು ಬ್ಯಾಂಕ್ ನೆಗರಾ ಎರಡರಿಂದಲೂ ಮಾನ್ಯತೆ ಹೊಂದಿದ ಎಸ್‌ಆರ್‌ಒಗಳೆಂದರೆ ಮಲೇಷಿಯಾ ಹಣಕಾಸು ಯೋಜನಾ ಪರಿಷತ್ತು (ಎಮ್‌ಎಫ್‌ಪಿಸಿ) ಮತ್ತು ಮಲೇಷಿಯಾದ ಹಣಕಾಸು ಯೋಜನಾ ಸಂಘ (ಎಫ್‌ಪಿಎ‌ಎಮ್). ಹಣಕಾಸು ಯೋಜನೆಯಲ್ಲಿ ತೊಡಗಿರುವ ವ್ಯಕ್ತಿಗಳು ಕೆಲವು ಬಗೆಯ ಸ್ವ-ಮೇಲ್ವಿಚಾರಣೆಯನ್ನು ರೂಢಿಸಿಕೊಳ್ಳುವುದು ಈ ಬೇಡಿಕೆಯ ಪ್ರಮುಖ ಉದ್ದೇಶವಾಗಿದೆ.

ಇತರ ದೇಶಗಳು[ಬದಲಾಯಿಸಿ]

ಕೆಲವು ದೇಶಗಳಲ್ಲಿ ಉದಾಹರಣೆಗೆ ಅಮೇರಿಕಾ ಸಂಯುಕ್ತ ಸಂಸ್ಥಾನದಂತಹ ದೇಶದಲ್ಲಿ ಹಣಕಾಸು ಯೋಜಕರು ಮೊದಲು ತಾವು ಒಬ್ಬ ಬಂಡವಾಳ ಸಲಹೆಗಾರನಾಗಿ ನೊಂದಾಯಿಸಲ್ಪಡುವುದು ಕಡ್ಡಾಯವಾಗಿದೆ. ಇದಕ್ಕೆ ಒಂದು ಮಂಡಳಿಯ ನೌಕರನು ನೊಂದಾಯಿತ ಬಂಡವಾಳ ಸಲಹಾ ಪರೀಕ್ಷೆಯ 65 ಅಥವಾ 66 ಸರಣಿಯನ್ನು ಉತ್ತೀರ್ಣನಾಗಬೇಕಾಗುತ್ತದೆ. ಒಬ್ಬ ಖಾಸಗಿ ಸಲಹೆಗಾರ ಅಥವಾ ಕಂಪನಿಯು ಒಂದು ಆರ್‌ಐ‌ಎ ನೊಂದಾಯಿತ ಬಂಡವಾಳ ಸಲಹಾ ಪರವಾನಗಿಗೆ ಅರ್ಜಿ ಸಲ್ಲಿಸಬಹುದು.

ಹಣಕಾಸು ಯೋಜನೆಗೆ ಪರವಾನಗೆ ಪಡೆದ ಮಾತ್ರಕ್ಕೆ ಇದು ಹಣಕಾಸು ಯೋಜನೆಯ ವೃತ್ತಿಗೆ ಪಡೆದ ವಿದ್ಯಾರ್ಹತೆಗೆ ಸಮ ಎಂದು ಅರ್ಥವಲ್ಲ. ಒಬ್ಬ ವ್ಯಕ್ತಿಯು ಹಣಕಾಸು ಯೋಜನೆಯಲ್ಲಿ ತೊಡಗಲು ವಿದ್ಯಾರ್ಹತೆಯನ್ನು ಹೊಂದಿದ್ದರೂ, ಆತನು ನಿಯಮಾನುಸಾರ ಪರವಾನಗೆಯನ್ನು ಹೊಂದಿಲ್ಲದಿದ್ದರೆ ಆ ದೇಶದಲ್ಲಿ ವ್ಯಾಪಾರ ವಹಿವಾಟುಗಳನ್ನು ನಡೆಸಲು ಅಥವಾ ಹಣಕಾಸು ಯೋಜಕ ಎಂದು ಕರೆಯಿಸಿಕೊಳ್ಳಲು ಅನರ್ಹನಾಗಿರುತ್ತಾನೆ. ಇಲ್ಲಿಯವೆರೆಗೂ, ಪ್ರಂಪಂಚಾದ್ಯಂತ ಹಣಕಾಸು ಯೋಜನೆಗೆ ಸಂಬಂಧಿಸಿದಂತೇ ಕೆಲವೇ ಶೈಕ್ಷಣಿಕ ಅರ್ಹತೆಗಳನ್ನು ಕಾಣಬಹುದು. ಅತ್ಯಂತ ಪ್ರತಿಷ್ಟಿತ ಹಣಕಾಸು ಯೋಜನಾ ಪದನಾಮಗಳೆಂದರೆ ಇನ್ನೂ ಜನಪ್ರಿಯತೆ ಹೊಂದದ, ಆದರೆ ಪರವಾನಗೆ ಉದ್ದೇಶಕ್ಕಾಗಿ ಸಂಬಂಧಿಸಿದ ಅಧಿಕಾರಿಗಳಿಂದ ಮಾನ್ಯತೆ ಪಡೆದವುಗಳು ಮಾತ್ರ.

ಕೆಲವು ಸ್ಥಳಗಳಲ್ಲಿ, ಬ್ರೋಕರೇಜ್, ಬ್ಯಾಂಕ್ ಅಥವಾ ವಿಮಾ ಕಂಪನಿಗಳಂತಹ ಪರವಾನಗೆಯನ್ನು ಹೊಂದಿರುವ ಮತ್ತು ನೊಂದಾಯಿತ ಬಂಡವಾಳ ಸಲಹಾ ಮಂಡಳಿಗಳ ನೌಕರರು ತಮ್ಮ ಸರಕು ಮತ್ತು ಸೇವೆಗಳಿಗೆ ಸಂಬಂಧಿಸಿದ ಪೂರಕವಾದ ಹಣಕಾಸು ಯೋಜನಾ ಸೇವೆಗಳನ್ನು ನೀಡುವಲ್ಲಿ ಇದರಿಂದ ರಿಯಾಯಿತಿ ಪಡೆಯುತ್ತಾರೆ. ಮತ್ತೂ, ಈ ಎಲ್ಲಾ ಕ್ಷೇತ್ರಗಳೂ ಸರ್ಕಾರಿ ಏಜೆಂಟರುಗಳ ನಿಯಂತ್ರಣದಲ್ಲಿದ್ದು ವಕೀಲರು ಮತ್ತು ದೃಢೀಕೃತ ಸಾರ್ವಜನಿಕ ಲೆಕ್ಕಪರಿಶೋಧಕಸಿಪಿಎs)ರ ಹತೋಟಿಯಲ್ಲಿರುವುದರಿಂದ ಹಣಕಾಸು ಯೋಜಕರು ಎಸ್ಟೇಟ್ ಯೋಜನೆ ಅಥವಾ ತೆರಿಗೆ ಸಲಹೆಗಳನ್ನು ಶುಲ್ಕದ ಮೂಲಕ ಕೊಡುವಾಗ ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಬಂಡವಾಳ ಹೂಡಿಕಾ ಸಲಹೆಗಾರ ಎಂಬ ಪದವು "ಹಣಕಾಸು ಯೊಜಕ" ಎಂಬ ಶೀರ್ಷಿಕೆಯನ್ನುಳ್ಳ ಪ್ರತಿಯೊಬ್ಬ ವ್ಯಕ್ತಿಗೂ ಅನ್ವಯಿಸುತ್ತದೆಮತ್ತು ಯಾರು, ಪರಿಹಾರಾತ್ಮಕವಾಗಿ ವ್ಯಾಪಾರದಲ್ಲಿ ಭಾಗಶಃ ಅಥವಾ ಮತ್ತೊಂದು ವ್ಯಾಪಾರದಲ್ಲಿ ತೊಡಗಿರುತ್ತಾರೋ, ಮತ್ತೊಬ್ಬರಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಅಥವಾ ಬರವಣಿಗೆಗಳ ಮೂಲಕ ಸಲಹೆ ನೀಡುತ್ತಾರೊ, ಬಂಡವಾಳ ಹೂಡುವಿಕೆಯಲ್ಲಿ ಸಲಹೆ, ಖರೀದಿ ಅಥವಾ ಭದ್ರತೆಗಳ ಮಾರಾಟದಲ್ಲಿ ತೊಡಗಿರುತ್ತಾರೋ ಅಥವಾ ಯಾರು ಪರಿಹಾರ ಮತ್ತು ನಿರಂತರ ವ್ಯಾಪಾರದ ಭಾಗವಾಗಿದ್ದು ವಿಶ್ಲೇಷಣೆಗಳನ್ನು ಅಥವಾ ವರದಿಗಳನ್ನು ಪ್ರಕಟಿಸುವರೋ ಅಂತಹ ವ್ಯತ್ಕಿಗಳಿಗೆ ಈ ಪದವು ಅನ್ವಯಿಸುತ್ತದೆ.

ಜಗತ್ತಿನಾದ್ಯಂತ ಹಣಕಾಸುಯೋಜನಾ ದೃಡೀಕರಣಗಳ ಚರಿತ್ರೆಯನ್ನು ತಿಳಿಸುವುದು.[ಬದಲಾಯಿಸಿ]

ಈಗ ತಾನೆ ಬೆಳೆಯುತ್ತಿರುವ ಹಣಕಾಸು ಯೋಜನೆಯಂತಹ ವೃತ್ತಿಯು ಸರಿಯಾದ ಕಾಯಿದೆಗಳಿಲ್ಲದೆ ಆರಂಭದಲ್ಲಿ ಎಡವುತ್ತಿವೆ. ಕೆಲವು ವಿಧಗಳ ಸ್ವಯಂ-ನಿಯಂತ್ರಣದ ಅವಶ್ಯಕತೆ ಮತ್ತು ನಂಬಲರ್ಹ ಹಣಕಾಸು ಯೊಜಕನ ಬೇಡಿಕೆಯು ಹಲವಾರು ಸ್ವತಂತ್ರ ಹಣಕಾಸು ಸೇವಾ ಸಂಸ್ಥೆಗಳು ದೃಢಿಕರಣಗಳನ್ನು ಮತ್ತು ನೀತಿನಿಯಮಗಳನ್ನು ಪ್ರತಿಯೊಂದು ರಾಷ್ಟ್ರದ ಅವಶ್ಯಕತೆಯ ಸವಾಲುಗಳಿಗೆ ತಕ್ಕಂತೆ ಜಾರಿಗೆ ತಂದಿವೆ. ಯಾರು ದೃಢೀಕೃತ ವಿಧಾನದ ಅವಶ್ಯಕತೆಗಳನ್ನು ಮತ್ತು ನೈತಿಕ ಗುಣಮಟ್ಟಗಳನ್ನು ಪೂರೈಸುತ್ತಾರೋ ಅವರಿಗೆ ವೃತ್ತಿಪರ ಹಣಕಾಸು ಯೋಜನೆ ಪದನಾಮವನ್ನು ನೀಡಿ ಗೌರವಿಸಲಾಗುತ್ತದೆ.

ಅಂತಹ ಅತ್ಯಂತ ಹಳೆಯ ಮತ್ತು ಜನಪ್ರಿಯ ಹಣಕಾಸು ಯೋಜನಾ ದೃಢೀಕೃತ ವ್ಯಾಪಾರ ಸಂಸ್ಥೆಯೆಂದರೆ, ತನ್ನ ಗುಣಮಟ್ಟದ ಚಟುವಟಿಕೆ ಮತ್ತು ವಿಶ್ವವ್ಯಾಪ್ತತೆಯಿಂದ ಜಾಗತಿಕ ಮಟ್ಟದಲ್ಲಿ ಗುರುತಿಸಲ್ಫಟ್ಟ ದೃಢೀಕೃತ ಹಣಕಾಸು ಯೋಜಕ ದ ದೃಢೀಕರಣಗಳು. ಸಿಎಫ್‌ಪಿ ದೃಢಿಕರಣವು ಮೊಟ್ಟ ಮೊದಲು ಗ್ರಾಹಕನ ಬೇಡಿಕೆಗಳನ್ನು ಪೂರೈಸಲು ಅಮೇರಿಕಾ ಸಂಯುಕ್ತ ಸಂಸ್ಥಾನದಲ್ಲಿ 1970ರ ಪ್ರಾರಂಭದಲ್ಲಿ ಜಾರಿಗೆ ತರಲಾಯಿತು. ವಾಷಿಂಗ್ಟನ್ ಡಿ.ಸಿ. ಯಲ್ಲಿ ಸಿಎಫ್‌ಪಿ ಮಂಡಳಿಯು ಅಮೇರಿಕಾ ಸಂಯುಕ್ತ ಸಂಸ್ಥಾನದೊಳಗೆ ಸಿಎಫ್‌ಪಿ ಗುರುತುಗಳ ಒಡೆತನವನ್ನು ಹೊಂದಿದೆ. ಅಮೇರಿಕಾ ಸಂಯುಕ್ತ ಸಂಸ್ಥಾನದ ಹೊರಗೆ ಹಣಕಾಸು ಯೋಜನಾ ಗುಣಮಟ್ಟಗಳ ಮಂಡಳಿಯು (ಎಫ್‌ಪಿಎಸ್‌ಬಿ), ಸಿಎಫ್‌ಪಿ ಗುರುತುಗಳ ಒಡೆತನವನ್ನು ಹೊಂದಿದೆ.ಇದು ಡೆನಿವರ್,ಕೊಲೊರಾಡೋ ದಲ್ಲಿನ ಒಂದು ಲಾಭರಹಿತ ಗುಣಮಟ್ಟದ ಅಂಗ ಸಂಸ್ಥೆಯಾಗಿದೆ.

ಜುಲೈ1985 ಸಿಎಫ್‌ಪಿ ಮಂಡಳಿಯನ್ನು ಅಂತರಾಷ್ಟ್ರೀಯ ಗುಣಮಟ್ಟಗಳ ಮತ್ತು ದೃಢೀಕೃತ ಹಣಕಾಸು ಯೋಜಕವಾಗಿ ಸ್ಥಾಪಿಸಲಾಯಿತು. ಇದರೊಂದಿಗೆ (ಐಬಿಸಿಎಫ್‌ಪಿ) ಯನ್ನು ಹಣಕಾಸು ಯೋಜನೆಗಾಗಿ ಇರುವ ಕಾಲೆಜ್ ಮತ್ತು ದೃಢೀಕೃತ ಹಣಕಾಸು ಯೋಜಕಗಗಳ ಸಂಸ್ಥೆ(ಐಸಿಎಫ್‌ಪಿ)ಗಳಿಂದ ಸ್ಥಾಪಿಸಲಾಯಿತು. ಫೆಬ್ರವರಿ 1, 1994 ರಂದು IBಸಿಎಫ್‌ಪಿ ಗುಣಮಟ್ಟಗಳ ದೃಡೀಕೃತ ಹಣಕಾಸುಯೋಜನಾಮಂಡಳಿಯಾಗಿ (ಸಿಎಫ್‌ಪಿ ಮಂಡಳಿ ಒಳಗೊಂಡಂತೆ) ಸ್ಥಾಪನೆಗೊಂಡಿತು. ಒಂದು ವೃತ್ತಿಪರ ನಿಯಂತ್ರಿತ ಸಂಸ್ಥೆಯು ತನ್ನ ವೈಯಕ್ತಿಕ ಹಣಕಾಸು ಯೋಜನೆಯಲ್ಲಿ ಗುಣಮಟ್ಟಗಳನ್ನು ಹೆಚ್ಚಿಸಿವುದರ ಮೂಲಕ ಸಾರ್ವಜನಿಕ ಹಿತಾಸಕ್ತಿಯಲ್ಲಿ ತೊಡಗುವ ಸಾಧ್ಯತೆಗಳಿರುವುದರಿಂದ, ಸಿಎಫ್‌ಪಿ ಮಂಡಳಿಯು ತನ್ನ ದೃಢೀಕರಣಗಳಿಗಾಗಿ ಕೆಲವು ಶಿಕ್ಷಣ, ಪರೀಕ್ಷೆ, ಅನುಭವ ಮತ್ತು ನಿಯಮಗಳ ಬೇಡಿಕೆಯನ್ನು ಮುಂದಿಡುತ್ತದೆ. ಸಿಎಫ್‌ಪಿಗುರುತು ಹಣಕಾಸು ಯೋಜನಾ ಸಂಘಗಳಂತಹ ಅಂಗ ಸಂಸ್ಥೆಗಳ ಮುಖಾಂತರ ಇಂದು ಪ್ರಪಂಚಾದ್ಯಂತ ವ್ಯಾಪಿಸಿದೆ.

ಲೆಕ್ಕಪರಿಶೋಧಕ ಹಣಕಾಸು ಸಲಹೆಗಾರ ಎಂಬುದು "ಮುಂದುವರೆದ ಹಣಕಾಸು ಯೊಜನೆ" ಯ ಪದನಾಮವಾಗಿದ್ದು ಇದನ್ನು ದಿ ಅಮೆರಿಕನ್ ಕಾಲೇಜ್ ನೀಡುತ್ತದೆ. ಸಿಎಚ್‌ಎಫ್‌ಸಿ ಯು ವ್ಯಕ್ತಿಗಳಿಗೆ, ವೃತ್ತಿಪರರಿಗೆ ಮತ್ತು ಸಣ್ಣ ವ್ಯಾಪಾರಸ್ಥರಿಗೆ, ವಿಮೆ, ಆದಾಯತೆರಿಗೆ, ನಿವೃತ್ತಿ ಯೋಜನೆ, ಬಂಡವಾಳ ಹೂಡಿಕೆಗಳು ಮತ್ತು ಸ್ಥಿರಾಸ್ತಿ ಯೋಜನೆಗಳನ್ನೊಳಗೊಂಡ ವ್ಯಾಪಕ ಹಣಕಾಸು ಯೋಜನೆಗಳ ಬಗ್ಗೆ ಸಲಹೆಗಳನ್ನು ನೀಡಲು ಅರ್ಹತೆಯನ್ನು ಹೊಂದಿದೆ.

ಸಿಎಚ್‌ಎಫ್‌ಸಿ ಪಠ್ಯಕ್ರಮವು ಮಾನ್ಯತೆ ಹೊಂದಿದ ಹಣಕಾಸು ಯೋಜನಾ ಪದನಾಮಗಳಿಗೆ ಅತ್ಯಂತ ವ್ಯಾಪಕವಾದ ಶಿಕ್ಷಣವನ್ನು ಒದಗಿಸುತ್ತದೆ. ಇದಕ್ಕೆ ಒಂಬತ್ತು ಕೋರ್ಸ್‌ಗಳಿದ್ದು ಪ್ರತಿಯೊಂದಕ್ಕೂ ಪರೀಕ್ಷೆಗಳಿರುತ್ತದೆ. ಈ ಒಂಬತ್ತು ಕೋರ್ಸ್ ಗಳಲ್ಲಿ ಆರು ಒಬ್ಬ ಸಿಎಫ್‌ಪಿ ಅಭ್ಯರ್ಥಿಗೆ ಅಗತ್ಯವಾಗಿರುವ ಕೊರ್ಸ್‌ಗಳೇ ಆಗಿವೆ. ಆದ್ದರಿಂದ ಸಿಎಫ್‌ಪಿ ದೃಡೀಕೃತ ಪರೀಕ್ಷೆಯನ್ನು ಉತ್ತೀರ್ಣನಾದ ಒಬ್ಬ ಅಭ್ಯರ್ಥಿ, ಮೂರು ಹೆಚ್ಚುವರಿ ಕೋರ್ಸ್ ಗಳು ಮತ್ತು ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಸಿಎಚ್‌ಎಫ್‌ಸಿ ಯಲ್ಲಿ ಸಂಪಾದನೆ ಮಾಡಲು ಅವಕಾಶಗಳಿವೆ. ಇಲ್ಲಿಯವರೆಗೂ 41,000 ಕ್ಕಿಂತಲೂ ಹೆಚ್ಚು ಜನ ಈ ಶ್ರೇಷ್ಠ ದರ್ಜೆಯನ್ನು ಪಡೆದಿದ್ದಾರೆ. ಈ ಪದನಾಮವು ಏಷಿಯಾಗೂ ಹಬ್ಬಿದ್ದು, ಇದರ ಪದಾಧಿಕಾರಿಗಳನ್ನು ಸಿಂಗಪೂರ್, ಮಲೇಷಿಯಾ, ಇಂಡೋನೇಷಿಯಾ, ಚೀನಾ ಮತ್ತು ಹಾಂಗ್-ಕಾಂಗ್ ನಂತಹ ದೇಶಗಳಲ್ಲಿ ಕಾಣಬಹುದು.[ಸೂಕ್ತ ಉಲ್ಲೇಖನ ಬೇಕು]

ಫೆಲೋ ಚಾರ್ಟರ್ಡ್ ಫೈನಾನ್ಷಿಯಲ್ ಪ್ರಾಕ್ಟಿಶನರ್ ಎಂಬ ಪದನಾಮವನ್ನು ಮಲೇಷಿಯಾದ ರಾಷ್ಟ್ರೀಯ ಜೀವವಿಮಾ ಮತ್ತು ಹಣಕಾಸು ಸಲಹೆಗಾರರ ಸಂಸ್ಥೆಯು (ಎನ್‌ಎ‌ಎಫ್‌ಎಲ್‌ಐ‌ಎಫ್‌ಎ) 1996ರಲ್ಲಿ ನೀಡಿತು. ಈ ಪದನಾಮವನ್ನು 2001 ರಲ್ಲಿ ಏಕೀಕರಣ ಪದನಾಮವಾಗಿ ತನ್ನ 11 ಸದಸ್ಯತ್ವ ರಾಷ್ಟ್ರಗಳಲ್ಲಿ ಏಷಿಯಾ ಪೆಸಿಫಿಕ್ ಫೈನಾನ್ಶಿಯಲ್ ಸರ್ವಿಸಲ್ ಅಸೋಸಿಯೇಶನ್ (APFinSA) ಸೇರಿಸಿಕೊಂಡಿತು.

1983ರಲ್ಲಿ ಅಮೇರಿಕಾದಲ್ಲಿ ಪ್ರಾರಂಭವಾದ ನೊಂದಾಯಿತ ಹಣಕಾಸು ಯೊಜಕರ ಸಂಸ್ಥೆಯು (ಆರ್‌ಎಫ್‌ಪಿ‌ಐ) ಯಾರು ಕ್ರಿಯಾಶೀಲರಾಗಿ ಹಣಕಾಸು ಯೊಜನೆಯಲ್ಲಿ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ತೊಡಗಿರುವರೋ ಅಂತಹವರ ವೃತ್ತಿಪರತೆಯನ್ನು ಹೆಚ್ಚಿಸಲು ಸಹಾಯ ಮಾಡಲು ಪ್ರಾರಂಭಿಸಿತು. ಆರ್‌ಎಫ್‌ಪಿ‌ಐಒಂದು ಅಂತರಾಷ್ಟ್ರೀಯ ಸಂಸ್ಥೆಯಾಗಿದ್ದು, ಪ್ರಂಪಚಾದ್ಯಂತ ತನ್ನ ಸದಸ್ಯರನ್ನು ಹೊಂದಿದೆ. ಆರ್‌ಎಫ್‌ಪಿ‌ಐ ಅಧ್ಯಯನ ಕಾರ್ಯಕ್ರಮಗಳನ್ನು ತರಗತಿಯ ಸೆಮಿನಾರ್‌ಗಳ ಮುಖಾಂತರ ಹಾಗೂ ದೂರಶಿಕ್ಷಣದ ಮುಖಾಂತರ ಒದಗಿಸುತ್ತದೆ. ಆರ್‌ಎಫ್‌ಪಿ‌ಐ ಒಂದು ಸಂಗ್ರಹಿತ ಹಣಕಾಸು ಯೋಜಕರ ಸದಸ್ಯತ್ವವಾಗಿದ್ದು, ತನ್ನ ಸದಸ್ಯರು ಮತ್ತು ಹಣಕಾಸಿಗೆ ಸಂಬಂಧಿಸಿದ ಸಾರ್ವಜನಿಕ ಸೇವೆಗಳಿಗೋಸ್ಕರ ರಚಿತವಾಗಿದೆ. ಆರ್‌ಎಫ್‌ಪಿ‌ಐ ಹಣಕಾಸು ಯೋಜನಾ ಕ್ಷೇತ್ರದಲ್ಲಿರುವ ಆರ್‌ಎಫ್‌ಪಿ‌, Sಆರ್‌ಎಫ್‌ಪಿ‌ ಪದನಾಮಗಳಿರುವ ಈ ಕೆಳಕಂಡ ವ್ಯಕ್ತಿಗಳನ್ನು ಗುರುತಿಸುತ್ತದೆ. ಅವರು ಯಾರೆಂದರೆ: ವಿಮೆ, ಆಟೋರ್ನಿಗಳು , ರಿಯಲ್ ಎಸ್ಟೇಟ್, ಬ್ಯಾಂಕರ್‌ಗಳು, ಸಿಪಿಎಗಳು, ಸ್ಟಾಕ್ ಬ್ರೋಕರ್ ಗಳು ಮತ್ತು ಇಂತಹ ಕ್ಷೇತ್ರದಲ್ಲಿರುವ ಸರಿಯಾದ ಹಣಕಾಸು ಯೋಜನೆ ಮಾಡುವ ಅಥವಾ ತಮ್ಮ ಕ್ಷೇತ್ರದಲ್ಲಿ ವ್ಯಾಪಾರ ನಡೆಸಲು ಸಾಮರ್ಥ್ಯ ಇರುವ ಇತರೆ ಪರವಾನಗೆದಾರರು ಒಂದು ಪ್ರತ್ಯೇಕ ಬೆಳವಣಿಗೆಯಲ್ಲಿ, ಮಲೇಷಿಯಾ ಹಣಕಾಸು ಯೋಜನಾ ಪರಿಷತ್ತು , 2004ರಲ್ಲಿ ಹಣಕಾಸು ಯೋಜಕರಿಗಾಗಿ ನೊಂದಾಯಿತ ಹಣಕಾಸು ಯೋಜಕ (ಆರ್‌ಎಫ್‌ಪಿ‌) ಎಂಬ ವೃತ್ತಿಪರ ಪದನಾಮವನ್ನು ಪರಿಚಯಿಸಿದೆ. ಇದು ಹಣಕಾಸು ಯೋಜಕರಿಗೆ ಪರವಾನಗೆ ಕೊಡುವ ಉದ್ದೇಶಕ್ಕಾಗಿ ನಿಯಂತ್ರಿತ ಅಂಗಸಂಸ್ಥೆಗಳು, ಬ್ಯಾಂಕ್ ನೆಗರಾ ಮತ್ತು ಭದ್ರತಾ ಸಮಿತಿಯಿಂದ ಮಾನ್ಯತೆ ಪಡೆದಿದೆ.

ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಸಿಪಿಎಗೋಸ್ಕರ ವೈಯಕ್ತಿಕ ಹಣಕಾಸು ಯೋಜನೆಯಲ್ಲಿ ನುರಿತ ವೈಯಕ್ತಿಕ ಹಣಕಾಲು ತಜ್ಞ (ಪಿಎಫ್‌ಎಸ್) ಅರ್ಹತಾ ಪತ್ರವನ್ನು ಸ್ಥಾಪಿಸಲಾಯಿತು. ಅರ್ಹತಾ ಪತ್ರಗಳನ್ನು ವಿಶೇಷವಾಗಿ ಆ ಕ್ಷೇತ್ರದಲ್ಲಿ ನುರಿತ ಹಾಗೂ ಗಣನೀಯವಾದ ಅನುಭವವಿರುವ ಅಮೇರಿಕಾದ ದೃಢೀಕೃತ ಸಾರ್ವಜನಿಕ ಲೆಕ್ಕ ಪತ್ರಗಳ ಸಂಸ್ಥೆ (ಎ‌ಐಸಿಪಿಎ) ಯ ಸದಸ್ಯರುಗಳಿಗೆ ನೀಡಲಾಗುತ್ತದೆ. ಇಲ್ಲಿಯವರೆಗೂ ಎ‌ಐಸಿಪಿಎ ಸುಮಾರು 3,300 ಸಿಪಿಎ/ಪಿಎಫ್‌ಎಸ್ ಅರ್ಹತಾ ಪತ್ರಗಳಿಗೆ ಅನುದಾನವನ್ನು ನೀಡಿದೆ.

ಆಸ್ಟ್ರೇಲಿಯಾದಲ್ಲಿ ಹಣಕಾಸು ಯೋಜನಾ ನೈಪುಣ್ಯತೆಗಳಾದ ಸಿಪಿಎ (ಎಫ್‌ಪಿಎಸ್)ಗಳು ಯಾವ ಆಸ್ಟ್ರೇಲಿಯಾದ ಸಿಪಿಎ ಸದಸ್ಯರು ತಮ್ಮ ಸಾಮರ್ಥ್ಯವನ್ನು ಹಣಕಾಸು ಸೇವಾ ಉದ್ಯಮಗಳಲ್ಲಿ ಅನುಭವ ಮತ್ತು ಶಿಕ್ಷಣದ ಮೂಲಕ ಪ್ರದರ್ಶಿಸುತ್ತಾರೋ, ಅವರಿಗೆ ಈ ಅರ್ಹತಾ ಪತ್ರಗಳು ದೊರೆಯುತ್ತವೆ.

ಎಫ್‌ಪಿಎಸ್ ಹುದ್ದೆಗಳ ಉದ್ದೇಶಗಳು ಈ ಕೆಳಕಂಡಂತಿವೆ:

 • ಸಾರ್ವಜನಿಕರು ಗುರುತಿಸುವಂತೆ ಮಾಡುವುದು
 • ತನ್ನ ಸದಸ್ಯರುಗಳಿಗೆ ಹಣಕಾಸು ಸೇವೆಗಳ ಗುಣಮಟ್ಟವನ್ನು ಹೆಚ್ಚಿಸುವುದು, ಮತ್ತು
 • ಪ್ರಾಯೋಗಿಕ ಬೆಳವಣಿಗೆ ಮತ್ತು ಸಿಪಿಎs ಗಾಗಿ ವೃತ್ತಿಪರ ಅವಕಾಶಗಳನ್ನು ಹೆಚ್ಚಿಸುವುದು.

ಎಫ್‌ಪಿಎಸ್ ಪದನಾಮವು ಅಂಕ ಆಧಾರಿತವಾಗಿದ್ದು, ಇದಕ್ಕೆ ಕನಿಷ್ಟ 100 ಅಂಕಗಳನ್ನು ಪಡೆಯಬೇಕಾಗುತ್ತದೆ. ಎಲ್ಲಾ ಆಸ್ಟ್ರೇಲಿಯಾದ ಸಿಪಿಎ ಸದಸ್ಯರುಗಳು ಹಣಕಾಸು ಸಲಹೆಯಲ್ಲಿ ತೊಡಗಲು ಎ‌ಎಸ್‌ಐಸಿಯಿಂದ ಪರವಾನಗೆ ಪಡೆಯಬೇಕಾಗಿದ್ದರೂ , ಸಿಪಿಎ ಪದನಾಮವನ್ನು ಪಡೆಯಲು ಪರವಾನಗೆಯ ಅಗತ್ಯವಿಲ್ಲ.

ಯೂರೊಪ್‌ನಲ್ಲಿ , ದಿ ಯೂರೋಪಿಯನ್ ಫೈನಾನ್ಷಿಯಲ್ ಪ್ಲಾನರ್ ಪದನಾಮವನ್ನು ಯುರೋಪಿನ ಹಣಕಾಸು ಯೋಜನಾ ಸಂಸ್ಥೆಯು ಕೊಡುತ್ತದೆ. ಇದನ್ನು ಹಣಕಾಸು ಯೊಜನಾ ದೃಢೀಕರಣ ಗುರುತಾಗಿ ನೀಡಲಾಗುತ್ತದೆ. €ಎಫ್‌ಪಿಎಯು ಹಣಕಾಸು ಯೋಜಕರ ಸಂಸ್ಥೆಯ ಅತಿ ದೊಡ್ಡ ವೃತ್ತಿಪರ ಮತ್ತು ಶೈಕ್ಷಣಿಕ ಅಂಗವಾಗಿದ್ದು ಯುರೋಪ್ ನಲ್ಲಿ ಹಣಕಾಸು ಸಲಹೆಗಾರನಾಗಿರುವ ಈ ಸಂಸ್ಥೆಯು ಯೂರೋಪಿನ ಗ್ರಾಹಕರ ಮತ್ತು ವೃತ್ತಿಪರ ವ್ಯಕ್ತಿಗಳ ಹಣಕಾಸು ಯೋಜನಾ ಆಸಕ್ತಿಯನ್ನು ನೋಡಿಕೊಳ್ಳುವ ಏಕೈಕ ಸಂಸ್ಥೆಯಾಗಿದೆ.

ಜಾಗತಿಕವಾಗಿ ಚಾರ್ಟರ್ಡ್ ವೆಲ್ತ್ ಮ್ಯಾನೇಜರ್ ತೀವ್ರ ಗತಿಯಲ್ಲಿ ಬೆಳೆಯುತ್ತಿರುವ ಹಣಕಾಸು ಯೋಜಕವಾಗಿದ್ದು, ಇದು ಹಣಕಾಸು ಯೋಜಕರಲ್ಲಿ ಮತ್ತು ಸಲಹೆಗಾರರಲ್ಲಿ ನಿರ್ವಹಣಾ ಕೌಶಲ್ಯ ಸಂಬಂಧಗಳನ್ನು ಬೆಳೆಸುವುದರಲ್ಲಿ ಆಸಕ್ತಿ ಹೊಂದಿದೆ. ಈ ಪದನಾಮವನ್ನು ಸುಮಾರು 145 ರಾಷ್ಟ್ರಗಳಲ್ಲಿ ಅಮೇರಿಕಾದ ಹಣಕಾಸು ನಿರ್ವಹಣಾ ಅಕಾಡೆಮಿಯ ಗುಣಮಟ್ಟಗಳ ಮಂಡಳಿಯು ನೀಡುತ್ತದೆ.

ಹಣಕಾಸು ಯೋಜನೆಗೆ ಸಂಬಂಧಿಸಿದ ಇತರೆ ದೃಢೀಕೃತ ಶೈಕ್ಷಣೆಕ ವಿದ್ಯಾರ್ಹತೆಗಳು ಈ ಕೆಳಕಂಡವುಗಳನ್ನು ಒಳಗೊಂಡಿವೆ ಹಣಕಾಸು ಸೇವಾ ಸಂಸ್ಥೆ (ಎಲ್‌ಒ‌ಎಮ್‌ಎ, ಯುಎಸ್‌ಎಯಿಂದ ಅಂಗೀಕೃತಗೊಂಡದ್ದು), ದೃಢೀಕೃತ ಖಾಸಗಿ ಬ್ಯಾಂಕರ್ ಪದನಾಮ (ಅಮೇರಿಕಾದ ಹಣಕಾಸು ನಿರ್ವಹಣಾ ಅಕಾಡೆಮಿಯಿಂದ ಅಂಗೀಕೃತಗೊಂಡದ್ದು); ಮಲೇಷಿಯಾದ ಮಾರುಕಟ್ಟೆ ಸಂಸ್ಥೆಯಿಂದ ಅಂಗೀಕೃತಗೊಂಡ ದೃಢೀಕೃತ ಮಾರುಕಟ್ಟೆ ಸಲಹಾ ಸಮಿತಿ(ಸಿಎಫ್‌ಎಮ್‌ಸಿ)

ಅಧಿಕೃತ ವ್ಯಾಪಾರಿ ಶಾಲೆಗಳು, ತರಬೇತಿ ಕೇಂದ್ರಗಳು ಮತ್ತು ಇತರೆ ಸರಬರಾಜುದಾರರು.[ಬದಲಾಯಿಸಿ]

ಜಾಗತಿಕವಾಗಿ ಅಡ್ದ-ಗುರುತಿಸುವಿಕೆಯ ಒಪ್ಪಂದಗಳು ಹಣಕಾಸು ಯೋಜನೆಯ ಕಲಿಕೆಗೆ ಅನುಕೂಲವಾಗುವಂತೆ ಬೆಳೆಯುತ್ತಿವೆ. ಎರಡು ಪ್ರಮುಖ ಅಧಿಕೃತ ಏಜೆಂಟ್‌ಗಳೆಂದರೆ, ಅಸೋಸಿಯೇಶನ್ ಟು ಅಡ್ವಾನ್ಸ್ ಕೊಲೆಜಿಯೇಟ್ ಸ್ಕೂಲ್ಸ್ ಆಫ್ ಬಿಸಿನೆಸ್ ಮತ್ತು ಅಸೋಸಿಯೇಷನ್ ಆಫ್ ಕೊಲೆಜಿಯೇಟ್ ಸ್ಕೂಲ್ಸ್ ಅಂಡ್ ಪ್ರೋಗ್ರಾಮ್ಸ್, ಇವು 560 ಕ್ಕಿಂತಲೂ ಅತ್ಯುತ್ತಮ ವ್ಯಾಪಾರಿ ಶಾಲಾ ಕಾರ್ಯಕ್ರಮಗಳಿಗೆ ಅಧಿಕೃತತೆಯನ್ನು ಹೊಂದಿವೆ. ಇವು ಅಮೇರಿಕನ್ ಅಕ್ಯಾಡೆಮಿ ಆಫ್ ಫೈನಾನ್ಷಿಯಲ್ ಮ್ಯಾನೇಜ್ ಮೆಂಟ್, ನೀಡುವ ಎಮ್‌ಇಪಿಯ ದೃಢೀಕರಣವನ್ನು ನೀಡುತ್ತವೆ, ಇದು ಎ‌ಎಸಿಎಸ್‌ಬಿಗೂ ಲಭ್ಯವಿರುತ್ತದೆ.ಹಾಗೆಯೇ ಇದು ಎಸಿಬಿಎಸ್‌ಪಿಯು ಹಣಕಾಸಿಗೆ ಸಂಬಂಧಿಸಿದ ಶಾಲಾ ಪದವಿಯನ್ನು ಅಥವಾ ಹಣಕಾಸು ಸಂಬಂಧಿಸಿದ ಸೇವೆಗಳಿಗೆ ಹೆಚ್ಚಿನ ಒತ್ತನ್ನು ನೀಡುತ್ತದೆ.

ಇವನ್ನೂ ಗಮನಿಸಿ[ಬದಲಾಯಿಸಿ]

 • ಪ್ರಮಾಣೀಕೃತ ಹಣಕಾಸು ಯೋಜಕ
 • ಕುಟುಂಬ ಯೋಜನೆ
 • ಫೀ-ಹಣಕಾಸು ಸಲಹೆಗಾರನಿಗೆ ಮಾತ್ರ
 • ಹಣಕಾಸು ಸಲಹೆ
 • ಹಣಕಾಸು ಸಲಹೆಗಾರ
 • ಹಣಕಾಸು ಯೋಜನೆ
 • ಹಣಕಾಸು ಯೋಜನೆ (ವ್ಯಾಪಾರ)
 • ಜೀವ ಯೋಜನೆ
 • ಸ್ಟಾಕ್‌ ದಳ್ಳಾಳಿ

ಉಲ್ಲೇಖಗಳು[ಬದಲಾಯಿಸಿ]

 1. ಇಂಟರ್ನ್ಯಾಷನಲ್ ಆರ್ಗನೈಸೇಷನ್ ಫಾರ್ ಸ್ಟ್ಯಾಂಡರ್ಡೈಸೇಶನ್ - ಐ‌ಎಸ್‌ಒ ಸ್ಟ್ಯಾಂಡರ್ಡ್ಸ್[permanent dead link]
 2. "ಯು.ಎಸ್. ಡಿಪಾರ್ಟ್‌ಮೆಂಟ್ ಆಫ್ ಲೇಬರ್ - ಹಣಕಾಸು ವಿಶ್ಲೇಷಕರು ಮತ್ತು ವೈಯಕ್ತಿಕ ಹಣಕಾಸು ಸಲಹೆಗಾರರು". Archived from the original on 2010-04-02. Retrieved 2010-10-05.
 3. "ಆಸ್ಟ್ರೇಲಿಯನ್ ಸೆಕ್ಯುರಿಟೀಸ್ & ಇನ್ವೆಸ್ಟ್‌ಮೆಂಟ್ಸ್ ಕಮಿಷನ್". Archived from the original on 2010-12-05. Retrieved 2010-10-05.
 4. ಫೈನಾನ್ಷಿಯಲ್ ಪ್ಲಾನಿಂಗ್ ಅಸೋಸಿಯೇಷನ್ - ಮಲೇಷಿಯಾದಲ್ಲಿ ನಡೆದ ಫೈನಾನ್ಷಿಯಲ್ ಪ್ಲಾನಿಂಗ್ ಇತಿಹಾಸ
 5. "ಬ್ಯಾಂಕ್ ನೇಗರ ಮಲೇಷಿಯಾ - ಇಂಟ್ರೊಡಕ್ಷನ್ ಟು ಫೈನಾನ್ಷಿಯಲ್ ಅಡ್ವೈಸರ್ಸ್". Archived from the original on 2006-04-26. Retrieved 2021-08-09.

ಬಾಹ್ಯ ಕೊಂಡಿಗಳು[ಬದಲಾಯಿಸಿ]