ಸ್ವೇದಗ್ರಂಥಿಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬೆವರು ಗ್ರಂಥಿಗಳು[ಬದಲಾಯಿಸಿ]

ಇವು ಎಪೊಕ್ರೈನ್ ಅಥವಾ ಮೆರೊಕ್ರೈನ್ ಆಗಿರಬಹುದು.ಇದರಲ್ಲಿ ಮೆರೊಕ್ರೈನ್ ಬೆವರು ಗ್ರನ್ಥಿಗಳು ಜಾಸ್ತಿ. ನಮ್ಮ ಅಂಗೈಯಲ್ಲಿ ಹಾಗೂ ಪಾದಗಳ ತುದಿಗಳಲ್ಲಿ ಹೆಚ್ಛು ಕಂಡೂಬರುತ್ತದೆ. ಕೆಳ ವರ್ಗದ ಸ್ಥನಿಗಳಲ್ಲಿ ಕಡೀಮೆಯಾಗಿ ಕಂಡುಬರುತ್ತದೆ.ಮಾನವನಲ್ಲಿ ಸ್ವೇದಗ್ರಂಥಿಗಳು 200–400/cm² ನಂತೆ ಕಂಡುಬರುತ್ತದೆ.ಪಾರದರ್ಶಕ,ನಿರ್ಗಂಧ ದ್ರವ್ಯವನ್ನು ಸ್ರವಿಸುತ್ತವೆ.ಸೋಡಿಯಂ ಕ್ಲೋರೈಡ್,ನೀರು,ಬೆವರಿನ ಪ್ರಮುಖ ಅಂಶಗಳು.ದೆಹದ ಉಷ್ಣ ನಿಯಂತ್ರಣದಲ್ಲಿ ಭಾಗವಹಿಸತ್ತದೆ.ಬಾಷ್ಪೀಕರಣದ ಮೂಲಕ ದೇಹವನ್ನು ತಂಪಾಗೆ ಇಡಲು ಸಹಾಯ ಮಾದುತ್ತದೆ.ಗ್ರಂಥಿಗಳ ಎಪಿತೀಲಿಯಲ್ ಕೋಶಗಲಲ್ಲಿ ತಯಾರಾಗಿ ಚರ್ಮದ ನಾಳಕ್ಕೆ ತಲುಪಿ ಅಲ್ಲಿಂದ ಸ್ವೇದ ರಂಧ್ರದ ಮೂಲಕ ಹೊರಬರುತ್ತವೆ.ಬೆವರಿನ ಗಂಧಕ್ಕೆ ಕಾರಣ ಅಣು ಜೀವಿಗಳು.ಭಯ,ಸಿಟ್ಟು,ಆತಂಕ,ಮಾನಸಿಕ ಒತ್ತಡ,ನೋವು, ಅತಿಯಾದ ವ್ಯಾಯಾಮದ ಸಮಯದಲ್ಲಿ ಈ ಗ್ರಂಥಿಗಳು ಸ್ರವಿಕೆಯನ್ನು ಹೆಚ್ಛು ಮಾಡುತ್ತವೆ.ಸ್ವೇದಗ್ರಂಥಿಗಳ ಛಟುವಟಿಕೆಯು ಅನುವೇದನಾ ನರವ್ಯೂಹದ ನಿಯಂತ್ರಣದಲ್ಲಿದೆ.ದೇಹದ ತಾಪಮಾನದಲ್ಲಿ ಬದಲಾವಣೆಯಾಗುತ್ತಿದ್ದಂತಿಯೆ ಈ ಗ್ರಂಥಿಗಳು ಸ್ರವಿಕೆಯನ್ನು ಆರಮ್ಭ ಮಾದಡುತ್ತವೆ.