ಸ್ವಾಮಿನಾಥನ್ ಅಯ್ಯರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿತ್ರ:Ank Iyer.jpg
'ಸ್ವಾಮಿನಾಥನ್.ಎಸ್.ಅಂಕಲೇಸರಿಯ ಅಯ್ಯರ್'

ಸ್ವಾಮಿನಾಥನ್ ಎಸ್. ಅಂಕಲೇಸರಿಯ ಅಯ್ಯರ್ (ಜನನ ಜುಲೈ ೮, ೧೯೪೮) ಹೆಸರಾಂತ ಭಾರತೀಯ ಪತ್ರಿಕಾಕರ್ತರು. ಟೈಮ್ಸ್ ಆಫ್ ಇಂಡಿಯ ದಲ್ಲಿ ಅವರು ಪ್ರತಿ ರವಿವಾರ ಬರೆಯುವ ಸ್ವಾಮಿನಾಮಿಕ್ಸ್, ರಾಷ್ಟ್ರದ ಮತ್ತು ವಿಶ್ವದ ಸಮಸ್ತ ಪ್ರಮುಖ ಆಗುಹೋಗುಗಳ ವಿಶ್ಲೇಷಣೆಯ ಚಿತ್ರಣವನ್ನು ಸಹಸ್ರಾರು ಮಂದಿ ಓದುತ್ತಾರೆ. ಅವರ ಅಂಕಣದ ಪುಟದಲ್ಲಿ ಸ್ವಲ್ಪ ಸ್ಥಾನಪಲ್ಲಟವಾದರೂ ಅದು ಸುದ್ದಿಯಾಗುವಷ್ಟು ಪ್ರಸಿದ್ಧರಾಗಿದ್ದಾರೆ ಅವರು.

ಅತ್ಯಂತ ಸಂಪ್ರದಾಯಿಕ ಪರಿವಾರ[ಬದಲಾಯಿಸಿ]

'ಸ್ವಾಮಿನಾಥನ್ ಎಸ್. ಅಂಕಲೇಸರಿಯ ಅಯ್ಯರ್' ರವರು ಒಂದು ಸುಶಿಕ್ಷಿತ ಸಂಪ್ರದಾಯಬದ್ಧವಾದ ಅಯ್ಯರ ಮನೆತನದಲ್ಲಿ ಜನಿಸಿದರು. ತಂದೆ, 'ವಿ. ಸಂಕರ್ ಅಯ್ಯರ್,' ಮತ್ತು ತಾಯಿಯವರು, 'ಭಾಗ್ಯಲಕ್ಷ್ಮಿ ಸಂಕರ್,' ರವರು. ಮನೆಯಲ್ಲಿ ಅತ್ಯಂತ ದೇವರು-ದಿಂಡರೆಂದು ಅವರ ತಾಯಿತಂದೆಗಳು ಪೂಜಾಪಾಠಗಳಿಗೆ ಪ್ರಾಶಸ್ಥ್ಯ ಕೊಟ್ಟರೂ, ಅಯ್ಯರ್ ಅದಕ್ಕೆ ಅಷ್ಟೇನು ಹೆಚ್ಚು ಮಹತ್ವಕೊಡುತ್ತಿರಲಿಲ್ಲ. 'ಸ್ವಾಮಿನಾಥನ್ ಎಸ್. ಅಂಕಲೇಸರಿಯ ಅಯ್ಯರ್' ರವರ ಅಣ್ಣನವರು, 'ಮಣಿಶಂಕರ್ ಅಯ್ಯರ್,' ಕೆಂದ್ರದ ರಾಜಕಾರಣದಲ್ಲಿ ತಮ್ಮನ್ನು ತೊಡಗಿಸಿಕೊಂಡವರು, ಮತ್ತು ಕೇಂದ್ರಸರ್ಕಾರದಲ್ಲಿ ರಾಜೀವ್ ಗಾಂಧಿಯವರ ಆಪ್ತರಾಗಿದ್ದವರು, ಹಾಗೂ ಕಾಂಗ್ರೆಸ್ ಪಕ್ಷದಲ್ಲಿ ಕೆಲವು ಮಂತ್ರಿಪದವಿಯನ್ನು ಅಲಂಕರಿಸಿದ್ದರು. ಹಿಂದಿನ ಸರ್ಕಾರದಲ್ಲಿ, 'ಪಂಚಾಯತಿರಾಜ್ ಮಂತ್ರಿ' 'ಪೆಟ್ರೋಲಿಯಮ್ ಮಂತ್ರಿ' ಮುಂತಾದವು.

ಶಿಕ್ಷಣ[ಬದಲಾಯಿಸಿ]

'ಸ್ವಾಮಿನಾಥನ್ ಎಸ್. ಅಂಕಲೇಸರಿಯ ಅಯ್ಯರ್' 'ಡೂನ್ ಸ್ಕೂಲ್', ಹಾಗೂ 'ಸೇಂಟ್ ಸ್ಟೀಫನ್ ಕಾಲೇಜ್,' ನಲ್ಲಿ ಓದಿದವರು. ತಮ್ಮ 'ಎಕೊನೋಮಿಕ್ಸ್ ಮಾಸ್ಟರ್ ಡಿಗ್ರಿ' ಯನ್ನು 'ಆಕ್ಲ್ಸ್ ಫರ್ಡ್,' ನ 'ಮ್ಯಾಂಡ್ದಲೆನ್ ಕಾಲೇಜ್,' ನಲ್ಲಿ ಪಡೆದರು.

'ಸ್ವಾಮಿನಾಮಿಕ್ಸ್'[ಬದಲಾಯಿಸಿ]

ವಾರದ ವಿಶೇಷ ಕಾಲಂ 'ಸ್ವಾಮಿನಾಮಿಕ್ಸ್' ಪ್ರತಿ ರವಿವಾರ ಸತತವಾಗಿ 'ಟೈಮ್ಸ್ ಆಫ್ ಇಂಡಿಯ ಪತ್ರಿಕೆ,' ಯಲ್ಲಿ ಪ್ರಕಟಿಸಲ್ಪಡುತ್ತಿದೆ. ಅದರಲ್ಲಿ ಭಾರತದ ಹಾಗೂ ವಿಶ್ವದ ವಿತ್ತೀಯ ಸಮಸ್ಯೆಗಳು ಹಾಗೂ ಇನ್ನೂ ಅನೇಕ ವಿಷಯಗಳನ್ನು ಕುಲಂಕುಷವಾಗಿ ಚರ್ಚಿಸುತ್ತಾರೆ. ಇದು ಅತ್ಯಂತ ಜನಪ್ರಿಯವಾಗಿದೆ. ಅಯ್ಯರ್ ರವರು, ಅನೇಕ ವರದಿಗಳನ್ನು ಸಾಮಗ್ರಿಗಳನ್ನೂ 'ವಿಶ್ವ ಬ್ಯಾಂಕ್' ಗೆ ಪ್ರಸ್ತುತಿಮಾಡಿದ್ದಾರೆ. ೧೯೭೬-೮೫ ಮತ್ತು ೧೯೯೦-೯೮, ಸಾಲಿನ ಎಕೋನೊಮಿಸ್ಟ್' ಪತ್ರಿಕೆಗೆ, ಭಾರತೀಯ ವರದಿಗಾರರಾಗಿದ್ದರು.

ವೈಯಕ್ತಿಕ ಜೀವನ[ಬದಲಾಯಿಸಿ]

'ಸ್ವಾಮಿನಾಥನ್ , ನಂತರ, ಎಸ್. ಅಂಕಲೇಸರಿಯ ಅಯ್ಯರ್' ಎನ್ನುವುದು ಅವರ ಇನ್ನೊಂದು ಹೆಸರು, ತಮ್ಮ ಪತ್ನಿಯವರ ಮದುವೆಗೆ ಮೊದಲಿನ ಹೆಸರನ್ನು ತೆಗೆದುಕೊಂಡಿದ್ದಾರೆ. ಇದು ಅವರು ತಾವೇ ಬೇಕಾಗಿ ಬರಮಾಡಿಕೊಂಡ ಬದಲಾವಣೆ. ಮಹಿಳೆಯರು ಪುರುಷರಂತೆ ಸರಿಸಮಾನರು ಎನ್ನುವುದನ್ನು ಮನದಟ್ಟುಮಾಡಲು ತೆಗೆದುಕೊಂಡ ನಿರ್ಣಯಗಳಲ್ಲೊಂದು . ಪತಿಯ ಹೆಸರನ್ನು ಪತ್ನಿಯ ಹೆಸರಿನೊಂದಿಗೆ ಸೇರಿಸುವುದು ಸರ್ವೇ-ಸಾಮಾನ್ಯವಾಗಿದೆ. ಆದರೆ ತಮ್ಮ ಪ್ರೀತಿಯ ಹೆಂಡತಿಯ ಹೆಸರನ್ನೇಕೆ ಜೊತೆಯಲ್ಲಿ ಸೇರಿಸಬಾರದು, ಎನ್ನುವುದು ಅವರ ವಾದ. ಅವರ ಪ್ರೀತಿಯ ಹೆಂಡತಿ, 'ಶಹ್ನಾಝ್ ಅಯ್ಯರ್' ಪಾರ್ಸಿ ಮತಸ್ಥರು. ಅಯ್ಯರ್ ಮತ್ತು ಶಹ್ನಾಝ್ ದಂಪತಿಗಳಿಗೆ, ೩ ಜನ ಮಕ್ಕಳು.

  • ಪಲ್ಲವಿ
  • ಶೇಖರ್
  • ರುಸ್ತಮ್

ಪುಸ್ತಕಗಳು[ಬದಲಾಯಿಸಿ]

1. 'Towards Globalisation' (1992) 2. 'Swaminomics' : 'Escape from the Benevolent Zookepers' 3. 'Aiyar, Swaminathan (2006-2-12). "A liberal atheist demands respect". Times of India. Retrieved on (2008-10-31). 4. "Swaminathan S. Anklesaria Aiyar". Cato Institute. (Retrieved on 2008-01-23).

ಉಲ್ಲೇಖಗಳು[ಬದಲಾಯಿಸಿ]

ಬಾಹ್ಯಸಂಪರ್ಕಗಳು[ಬದಲಾಯಿಸಿ]