ಸ್ಲೇಟು
ಗೋಚರ
ಸ್ಲೇಟು (ಪಾಟಿ) ಸ್ಲೇಟ್ ಎಂದೇ ಕರೆಯಲ್ಪಡುವ ಶಿಲೆಯಂತಹ ಗಟ್ಟಿಯಾದ ಚಪ್ಪಟೆ ವಸ್ತುವಿನ ತೆಳುವಾದ ಹಲಗೆ. ಇದನ್ನು ಬರೆಯುವ ಮಾಧ್ಯಮವಾಗಿ ಬಳಸಲಾಗುತ್ತದೆ. ಈ ಶಿಲೆಯು ಜೇಡಿಮಣ್ಣಿನಿಂದ ಹಿಡಿದು ಅಭ್ರಕದಂತಹ ಸಮಾಂತರವಾಗಿ ಜೋಡಣೆಯಾದ, ಚಪ್ಪಟೆ, ಹಲ್ಲೆಗಳಂತಹ ಖನಿಜಗಳವರೆಗೆ ಜೇಡಿ ಪದರಗಲ್ಲಿನಲ್ಲಿನ ಖನಿಜಗಳ ಮರುಸ್ಫಟಿಕೀರಣದಿಂದ ಸೃಷ್ಟಿಯಾಗುವ ರೂಪಾಂತರ ಶಿಲೆಯಾಗಿರುತ್ತದೆ.[೧]
ಬರೆಯುವ ಸ್ಲೇಟು ಸ್ಲೇಟ್ ಶಿಲೆಯ ತುಂಡನ್ನು, ಸಾಮಾನ್ಯವಾಗಿ 4x6 ಅಂಗುಲಗಳು ಅಥವಾ 7x10 ಅಂಗುಲ ಗಾತ್ರದ್ದು, ಹೊಂದಿರುತ್ತಿತ್ತು. ಇದನ್ನು ಕಟ್ಟಿಗೆಯ ಚೌಕಟ್ಟಿನಿಂದ ಆವರಿಸಲಾಗುತ್ತಿತ್ತು.[೨]
ತರಗತಿಗಳಲ್ಲಿ ಅಥವಾ ಮನೆಯಲ್ಲಿ ಮತ್ತು ಬಹು ಕೋಣೆಗಳ ಶಾಲೆಗಳಲ್ಲಿ ಬರವಣಿಗೆ ಮತ್ತು ಅಂಕಗಣಿತವನ್ನು ಅಭ್ಯಾಸ ಮಾಡಲು ಬರೆಯುವ ಸ್ಲೇಟನ್ನು ಮಕ್ಕಳು ಒಂಟಿ ಕೋಣೆ ಶಾಲೆಗಳಾಗಿ ಬಳಸುವ ಮನೆಗಳಲ್ಲಿ ಇಪ್ಪತ್ತನೇ ಶತಮಾನದವರೆಗೆ ಬಳಸುತ್ತಿದ್ದರು.