ಸ್ಯಾಮ್ ಪಿತ್ರೋಡಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸ್ಯಾಮ್ ಪಿತ್ರೋಡಾ
ಚಿತ್ರ:Sam pitroda.jpg
ಜನನ(೧೯೪೨-೦೫-೦೪)೪ ಮೇ ೧೯೪೨
ರಾಷ್ಟ್ರೀಯತೆಭಾರತೀಯ
ಹಳೆ ವಿದ್ಯಾರ್ಥಿMaharaja Sayajirao University
Illinois Institute of Technology
ಉದ್ಯೋಗTelecom engineer, inventor, entrepreneur
ಉದ್ಯೋಗದಾತರುAdvisor to the Prime Minister
ಇದಕ್ಕೆ ಖ್ಯಾತರುCommunication revolution
ಮಕ್ಕಳು2
ಜಾಲತಾಣsampitroda.com

(ಜನನ:ನವೆಂಬರ್ ೧೬,೧೯೪೨)

'ಸ್ಯಾಮ್ ಪಿತ್ರೋಡಾ'ರವರನ್ನು ಭಾರತದ ದೂರಸಂಪರ್ಕ ಕ್ರಾಂತಿಯ ಹರಿಕಾರ ಎಂದು ಗುರುತಿಸಲಾಗುತ್ತಿದೆ. ಇವರ ನಿಜನಾಮಧೇಯ 'ಸತ್ಯನಾರಾಯಣ ಗಂಗಾರಾಮ್ ಪಿತ್ರೋಡಾ'. ಪ್ರಸ್ತುತ 'ಭಾರತೀಯ ಜ್ಞಾನ ಆಯೋಗ' ದ ಚೇರಮನ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.[೧][೨]

'ರಾಜೀವ್ ಗಾಂಧಿಯ'ವರು 'ಸ್ಯಾಮ್ ಪಿತ್ರೋಡ'ರವರ ಕೌಶಲವನ್ನು ಗುರುತಿಸಿದರು[ಬದಲಾಯಿಸಿ]

'ಟೆಲಿಕಾಂ ದಿಗ್ಗಜ', 'ಸ್ಯಾಮ್ ಪಿತ್ರೊಡ’ ರವರು, ರಾಜೀವ್ ಗಾಂಧಿಯವರು ಪ್ರಧಾನಿಯಾಗಿದ್ದಾಗ, ಅವರ ಜೊತೆಗೆ ನಿಕಟವಾಗಿ ಕೆಲಸಮಾಡಿದರು. ಅವರು, ಪ್ರಧಾನಮಂತ್ರಿಗಳ ಮೂಲಭೂತ ಸೌಕರ್ಯ ಮತ್ತು ಸಂಶೋಧನೆಗಳ ಸಲಹೆಗಾರರಾಗಿದ್ದಾರೆ. ’ಸ್ಯಾಮ್ ’ ರವರ ಬುದ್ಧಿಮತ್ತೆ ಹಾಗೂ ಕಾರ್ಯಕುಶಲತೆಯನ್ನು ಶ್ಲಾಶಿಸಿ, ಅಮೆರಿಕದ ಇಲಿನಾಯ್ ವಿಶ್ವವಿದ್ಯಾಲಯ, ಸ್ಯಾಮ್ ಪಿತ್ರೋಡರವರಿಗೆ, ಗೌರವ ಡಾಕ್ಟರೇಟ್ ಪದವಿಯನ್ನು ನೀಡುವುದಾಗಿ ಘೋಶಿಸಿದೆ. ಮೇ, ೭, ೨೦೧೦ ರಂದು, ಇಲಿನಾಯ್ ವಿಶ್ವವಿದ್ಯಾಲಯದ ವೈದ್ಯಕೀಯ ಕಾಲೇಜಿನಲ್ಲಿ ಪ್ರಶಸ್ತಿಪ್ರದಾನ ಕಾರ್ಯಕ್ರಮ ನಡೆಯಿತು.

'ಇಲಿನಾಯ್ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿ,' 'ಪಿತ್ರೋಡಾ'ರವರಿಗೆ[ಬದಲಾಯಿಸಿ]

ವಿಶ್ವವಿದ್ಯಾಲಯ ಪ್ರತಿವರ್ಷವೂ ಆಯ್ದ ಕೆಲವು ಕ್ಷೇತ್ರಗ್ಳಲ್ಲಿ ಮುಖ್ಯವಾದ ಸಂಶೋಧನೆ, ಸಾಮಾಜಿಕ ಸೇವೆ ಮತ್ತು ಉಪನ್ಯಾಸ ವೃತ್ತಿಯಲ್ಲಿ ಗಮನಾರ್ಹರೀತಿಯಲ್ಲಿ ಸಾಧನೆ ಮಡಿದ ಮಹನೀಯರನ್ನು ಗುರುತಿಸಿ, ಪ್ರಶಸ್ತಿಯನ್ನು ಕೊಡುತ್ತಾ ಬಂದಿದೆ. ಈ ವರ್ಷದ ಪ್ರಶಸ್ತಿಗೆ ಭಾರತದ ಟೆಲಿಕಾಂ ಮಹಾ-ತಜ್ಞರೆಂದು ಗುರುತಿಸಲಾಗಿರುವ, ಪ್ರಧಾನಮಂತ್ರಿಗಳ ಮೂಲಭೂತ ಸೌಕರ್ಯಗಳು ಮತ್ತು ಸಂಶೋಧನೆಯ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿರುವ ಸ್ಯಾಮ್ ಪಿತ್ರೋಡರವರಿಗೆ ನೀಡಲು ವಿಶ್ವವಿದ್ಯಾಲಯ ನಿರ್ಧಾರಮಾಡಿದೆ. ಭಾರತಸರಕಾರದ ಅನೇಕ ಜವಾಬ್ದಾರಿಯುತ ಹುದ್ದೆಗಳಲ್ಲಿ ಕೆಲಸಮಾಡಿ ತಮ್ಮ ಅನುಭವಗಳಿಂದ ಅನೇಕ ಮಹತ್ವದ ಕೊಡುಗೆಗಳನ್ನು ಕೊಟ್ಟಿದ್ದಾರೆ [೩].

ಭಾರತದ ಹಳ್ಳಿಗಳಿಂದ ವಿಶ್ವದ ಯಾವಮೂಲೆಗಾದರೂ ಮಾತಾಡಬಹುದಾಗಿದೆ[ಬದಲಾಯಿಸಿ]

ಭಾರತದ ಹಳ್ಳಿಗಾಡಿನಲ್ಲಿ ಪ್ರತಿಹಳ್ಳಿಗಳಿಗೂ ದೂರವಾಣಿ ಸೇವೆಯನ್ನು ದೊರಕಿಸುವಲ್ಲಿ ಪಿತ್ರೋಡರವರ ಸೇವೆ ಅಮೂಲ್ಯವಾಗಿದೆ. ಪ್ರತಿ ಪ್ರಜೆಯೂ ಈ ಸೇವೆಗೆ ಬದ್ಧರು. ಯಾರಿಗೂ ವಂಚನೆಯಾಗಬಾರದು. ಇಂತಹ ಮಹತ್ವದ ಸೇವಾಮನೋಭಾವದಿಂದ ಮುಂದುವರೆದ ಪಿತ್ರೋಡಾರವರು ಸಂಶೋಧನೆ ಪ್ರತಿಫಲಗಳನ್ನು ಕೊಟ್ಟಿದೆ. ಇಂದು ಪ್ರತಿಹಳ್ಳಿಯ ಮೂಲೆಗಳಿಂದ ಜಗತ್ತಿನ ಯಾವ ಭಾಗಕ್ಕಾದರೂ ಸಂಪರ್ಕಕಲ್ಪಿಸಿ ಮಾತನಾಡಬಹುದಾಗಿದೆ.

ಉಲ್ಲೇಖಗಳು[ಬದಲಾಯಿಸಿ]

  1. "HONORARY DEGREES 1966 - 2017". commencement.uic.edu,Access date 12 May 2017. Archived from the original on 12 ಮೇ 2017. Retrieved 12 ಮೇ 2017.
  2. "MINISTRY OF HOME AFFAIRS (Public Section) Padma Awards Directory (1954-2013)" (PDF). mha.nic.in,Access date 12 May 2017. Archived from the original (PDF) on 15 ಅಕ್ಟೋಬರ್ 2015. Retrieved 12 ಮೇ 2017.
  3. "HONORARY DEGREES 1966 - 2017". commencement.uic.edu,Access date 12 May 2017. Archived from the original on 12 ಮೇ 2017. Retrieved 12 ಮೇ 2017.