ಸೋಮೇಶ್ವರ ದೇವಸ್ಥಾನ

ವಿಕಿಪೀಡಿಯ ಇಂದ
Jump to navigation Jump to search

ಸೋಮೇಶ್ವರ ದೇವಾಲಯವು ಕೋಲಾರ ಜಿಲ್ಲೆಯ ನೋಡಲೆ ಬೇಕಾದ ಸ್ಥಳಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ. ಇದು ಶಿವನ ಅವತಾರವಾದ ಸೋಮೇಶ್ವರನ ದೇವಾಲಯವಾಗಿದೆ. ಈ ದೇವಾಲಯವು ಕೋಲಾರ ನಗರದ ಮಧ್ಯ ಭಾಗದಲ್ಲಿ ನೆಲೆಸಿದೆ. ಈ ದೇವಾಲಯವು 14 ನೇ ಶತಮಾನದಲ್ಲಿ ನಿರ್ಮಾಣಗೊಂಡಿದ್ದು ವಿಜಯನಗರ ಶೈಲಿಯನ್ನು ಹೊಂದಿದೆ. ಇಲ್ಲಿ ಒಂದು ಕಲ್ಯಾಣ ಮಂಟಪವಿದ್ದು, ತನ್ನಲ್ಲಿರುವ ಕೆತ್ತನೆಗಳಿಂದ ಕೂಡಿದ ಕಂಬಗಳಿಂದಾಗಿ ಗಮನ ಸೆಳೆಯುತ್ತಿದೆ. ಇಲ್ಲಿನ ಕಂಬಗಳಲ್ಲಿನ ಕೆತ್ತನೆಗಳು ಚೈನಾ, ಯೂರೋಪ್ ಮತ್ತು ಥಾಯ್ ವಾಸ್ತುಶೈಲಿಗಳೊಂದಿಗೆ ಸಾಮ್ಯತೆಯನ್ನು ಹೊಂದಿದೆ. ಕಲ್ಯಾಣ ಮಂಟಪದ ಮೇಲ್ಭಾಗವನ್ನು ಚೀನಿ ಶೈಲಿಯಲ್ಲಿ ನಿರ್ಮಿಸಲಾಗಿದೆ. ಸೋಮೇಶ್ವರ ದೇವಾಲಯದಲ್ಲಿನ ವಿದೇಶಗಳ ವಾಸ್ತುಶೈಲಿಯ ಸಂಯೋಜನೆಯು ವಿಜಯನಗರ ಕಾಲದ ವ್ಯಾಪಾರ ಸಂಬಂಧಗಳ ಮಹತ್ವವನ್ನು ಎತ್ತಿ ತೋರಿಸುತ್ತಿದೆ.[೧]

ಗ್ಯಾಲರಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. "Alphabetical List of Monuments - Karnataka -Bangalore, Bangalore Circle, Karnataka". Archaeological Survey of India, Government of India. Indira Gandhi National Center for the Arts. Retrieved 19 Jan 2013.