ಸೆಪ್ಟೇಜ್

ವಿಕಿಪೀಡಿಯ ಇಂದ
Jump to navigation Jump to search

ಸೆಪ್ಟೇಜ್ ಅಥವಾ ಸೆಪ್ಟಿಕ್ ಗುಂಡಿ ಹೂಳು ಕೆಲ ದೇಶಗಳಲ್ಲಿ ಸೆಪ್ಟಿಕ್ಗುಂಡಿಗಳಲ್ಲಿ ಅಲ್ಪಮಟ್ಟದಲ್ಲಿ ಸಂಸ್ಕರಿಸಲ್ಪಟ್ಟ ಹೂಳಿಗೆ ಉಪಯೋಗಿಸಲ್ಪಡುವ ಪದ.  ಸೆಪ್ಟೇಜ್ ಎಂಬುವುದು ಮನೆಮಂದಿರಗಳ ಸೆಪ್ಟಿಕ್ಗುಂಡಿಗಳಲ್ಲಿ ಬಹುಸಮಯ  ಸಂಸ್ಕರಿಸಲ್ಪಟ್ಟ ಕೊಳಚೆನೀರಿನಿಂದ ಉತ್ಪಾದಿಸಲ್ಪಟ್ಟ ಪದಾರ್ಥ. ಇದನ್ನು  ವ್ಯಾಕುಮ್ ಟ್ರಕ್ಕುಗಳ ಸಹಾಯದಿಂದ ಸೆಪ್ಟಿಕ್ಗುಂಡಿಗಳಿಂದ ಹೊರತೆಗೆಯಲಾಗುತ್ತದೆ. ಇದು ಮಲಹೂಳಿಗಿಂತ ಭಿನ್ನವಾಗಿದ್ದು, ಬಹುಸಮಯಗಳ ಶೇಖರಣೆ ನಂತರ ಅಲ್ಪಮಟ್ಟಿನ ‍ಸಂಸ್ಕರಣೆಗೆ ಒಳಪಟ್ಟಿರುತ್ತದೆ.

ಸೆಪ್ಟೇಜ್ ಅನ್ನು ಆಧುನಿಕ ತಂತ್ರಜ್ಞಾನಗಳ ಸಹಾಯದಿಂದ ಸಂಸ್ಕರಿಸಿ ವ್ಯವಸಾಯಕ್ಕೆ ಬಳಸಬಹುದಾದ ಗೊಬ್ಬರ ತಯಾರಿಸಬಹುದಾಗಿದೆ.ಉಲ್ಲೇಖಗಳು[ಬದಲಾಯಿಸಿ]