ಸುಶೀಲತೆ
ಸುಶೀಲತೆ (ಲ್ಯಾಟಿನ್;virtus ಗ್ರೀಕ್ἀρετή)ಎಂದರೆ ನೈತಿಕ ಔನ್ನತ್ಯ. ಸುಶೀಲತೆ ಯೆಂಬುದು ಒಂದು ವಿಶೇಷ ಲಕ್ಷಣ ಅಥವಾ ಗುಣವಾಗಿದ್ದು ತಾನಾಗಿಯೂ ಹಾಗೂ ತನ್ನ ಮೂಲಕವೂ ಸರ್ವವಿಧದಲ್ಲೂ ಒಳ್ಳೆಯದಾದ ಒಂದು ಅಮೂಲ್ಯ ಗುಣವೆಂದು ಪರಿಗಣಿಸಲಾಗಿದೆ.
ವೈಯಕ್ತಿಕ ಸುಗುಣಗಳೆಂದರೆ/ಸುಶೀಲತೆಯೆಂದರೆ ವೈಯಕ್ತಿಕ ಮತ್ತು ಸಾಮೂಹಿಕ ಒಳಿತನ್ನು ಉಂಟುಮಾಡುವ ಮೌಲ್ಯವುಳ್ಳ ಅಂಶ/ಗುಣಗಳೆಂದರ್ಥ. ಸುಶೀಲತೆಯ ವಿರುದ್ಧಾರ್ಥವೇ ದೋಷ/ದುರ್ಗುಣ.
ಗುಣಗಳು ಮತ್ತು ಮೌಲ್ಯಗಳು
[ಬದಲಾಯಿಸಿ]ಗುಣಗಳನ್ನು ಸ್ಥೂಲವಾಗಿ ಮೌಲ್ಯಗಳ ಆಧಾರದ ಮೇಲೆ ವಿಂಗಡಿಸಬಹುದು. ಪ್ರತಿ ವ್ಯಕ್ತಿಯಲ್ಲೂ ಮೂಲತಃ ಅಂತಸ್ಥವಾದ ಮೌಲ್ಯಗಳನ್ನು ಹೊಂದಿದ್ದು ಅವು ಅವನ ನಂಬಿಕೆಗಳು, ಆಲೋಚನೆಗಳು ಮತ್ತು/ಅಥವಾ ಅಭಿಪ್ರಾಯದ ಕ್ರಮವನ್ನು ನಿರ್ಧರಿಸುತ್ತವೆ.(ಸೀಮಿಯಾಟಿಕ್ಸ್(ಸಂಜ್ಞಾಶಾಸ್ತ್ರ)ನಲ್ಲಿ ಮೌಲ್ಯ ವನ್ನು ನೋಡಿ) ಒಂದು ಮೌಲ್ಯವನ್ನು ಅನುಷ್ಠಾನಕ್ಕೆ ತರುವುದರಲ್ಲಿ ತೋರುವ ಪ್ರಾಮಾಣಿಕತೆಯು ಅ ಗುಣವು/ಮೌಲ್ಯವು ಬೆಳೆಯಲು ಸಹಕಾರಿಯಾಗಿ, ಈ ಬೆಳವಣಿಗೆಯು ಮೌಲ್ಯವನ್ನು ನಂಬಿಕೆ, ಅಭಿಪ್ರಾಯ ಮತ್ತು ಅಲೋಚನಾರೀತಿಗಳಿಂದ ಭಿನ್ನವಾಗಿಯೇ ಇರಿಸುತ್ತದೆ. ಈ ವಿಷಯದಲ್ಲಿ ಒಂದು ಮೌಲ್ಯ/ಗುಣವು (ಉದಾಹರಣೆಗೆ ಸತ್ಯ ಅಥವಾ ಸಮಾನತೆ ಅಥವಾ ತತ್ವ)ನಾವು ಪ್ರತಿಕ್ರಿಯೆ ನೀಡುವ ಅಥವಾ ಕಾರ್ಯಮಾಡುವ ರೀತಿಗೆ ಮೂಲಕಾರಣವಾಗಿರುತ್ತದೆ. ಒಂದು ಸಂಸ್ಕೃತಿಯನ್ನು ಅನುಸರಿಸುವುದರಲ್ಲಿ ನಿರತರಾದ ಹಲವಾರು ಜನರ ಮೌಲ್ಯಗಳು/ಗುಣಗಳು ಸಮಾಜದಲ್ಲಿಯೂ ಬಿಂಬಿತವಾಗುತ್ತದೆ. ಒಂದು ವ್ಯಕ್ತಿಯ ಮೌಲ್ಯಗಳೂ ಅಂತೆಯೇ ಬಹಪಾಲು, ಅದರೆ ಸಂಪೂರ್ಣವಾಗಿಯಲ್ಲದೆ, ಅವನ ಅಥವಾ ಅವಳ ಸಂಸ್ಕೃತಿಗೆ ಪೂರಕವಾಗಿಯೇ ಇರುತ್ತವೆ.
ವೈಯಕ್ತಿಕ ಮೌಲ್ಯ/ಗುಣಗಳನ್ನು ಈ ಕೆಳಕಂಡ ನಾಲ್ಕರಲ್ಲಿ ಒಂದು ಗುಂಪಿಗೆ ಸೇರಿಸಬಹುದಾಗಿದೆ:
- ನೀತಿನಿಯಮಗಳು (ಸುಶೀಲತೆ -ದುಶ್ಶೀಲತೆ, ಒಳಿತು-ಕೆಡಕು, ನೀತಿಯುಕ್ತ-ನೀತಿರಹಿತ-ಅನೀತಿಯುಕ್ತ, ಸರಿ-ತಪ್ಪು, ಅನಮತಿಸತಕ್ಕುದು-ಅನುಮತಿಸಬಾರದ್ದು)
- ಸೌಂದರ್ಯಪ್ರಜ್ಞೆ(ಚೆಲುವಾದ,ಕುರೂಪದ, ಪ್ರಮಾಣಬದ್ಧವಲ್ಲದ, ಹಿತಕರವಾದ)
- ತಾತ್ವಿಕ(ರಾಜಕೀಯ, ಆಧ್ಯಾತ್ಮಿಕ, ಧಾರ್ಮಿಕ,ಅಥವಾ [[ಸಾಮಾಜಿಕ ನಂಬಿಕೆಗಳು ಮತ್ತು ಮೌಲ್ಯಗಳು)|ಸಾಮಾಜಿಕ ನಂಬಿಕೆಗಳು ಮತ್ತು ಮೌಲ್ಯಗಳು) ]]
- ಅಂತಸ್ಥವಾದ/ಜನ್ಮಜಾತವಾದ(ಜನ್ನಜಾತ ಗುಣಗಳಾದ ಸಂತಾನೋತ್ಪತ್ತಿ ಮತ್ತು ಬದುಕುಳಿಯುವಿಕೆ)
ಮೌಲ್ಯ/ಗುಣಗಳ ಉದಾಹರಣೆಗಳೆಂದರೆ:
ನಾಲ್ಕು ಪಾಶ್ಚಿಮಾತ್ಯ ಶಾಸ್ತ್ರೀಯ ಗುಣಗಳು
[ಬದಲಾಯಿಸಿ]ನಾಲ್ಕು ಉತ್ಕೃಷ್ಟ ಪಾಶ್ಚಿಮಾತ್ಯ ಧಾರ್ಮಿಕ ಗುಣಗಳು ಯಾವುವೆಂದರೆ:
- ಆತ್ಮನಿಗ್ರಹ :σωφροσύνη(ಸೋಫ್ರೋಸೈನ್ )
- ವಿವೇಕ:φρόνησις(ಫ್ರೋನೆಸಿಸ್ )
- ಕಷ್ಟಸಹಿಷ್ಣುತೆ:ανδρεία(ಆಂಡ್ರೀಯಾ )
- ನ್ಯಾಯ:δικαιοσύνη(ಡೈಕಾಯಿಯೋಸೈನ್ )
ಈ ವಿಧದ ಗುಣವಿಂಗಡಣೆಗಳನ್ನು ಗ್ರೀಕ್ ತತ್ವಶಾಸ್ತ್ರದಲ್ಲಿ ಕಾಣಬಹುದಾಗಿದ್ದು, ಸಾಕ್ರೇಟಿಸ್ ಸಹ ಈ ವಿಧವಾಗಿ ಪಟ್ಟಿ ಮಾಡಿರಬಹುದಾದರೂ, ಪ್ಲೇಟೋವಂತೂ ಪಟ್ಟಿ ಮಾಡಿದುದನ್ನು ನಿರ್ದಿಷ್ಟವಾಗಿ ಅರಿಯಬಹುದು, ಸಾಕ್ರೇಟಿಸ್ ಹೀಗೆಂದರೆಂಬ ಉಲ್ಲೇಖವು ಎಲ್ಲೂ ಇಲ್ಲ. ಪ್ಲೇಟೋ "ಪವಿತ್ರತೆ"ಯನ್ನೂ ಉಲ್ಲೇಖಿಸುತ್ತಾರೆ.
ಪ್ಲೇಟೋ ಮೌಲ್ಯವೆಂದರೆ ಒಂದೇ ಎಂದು ನಂಬಿದ್ದ ಸಾಧ್ಯತೆಯಿದ್ದು, ಈ ಗಣನೆಗಳನ್ನು ಇತರರು ಮೌಲ್ಯವೆಂದರೇನೆಂಬುದನ್ನು ಸ್ಪಷ್ಟವಾಗಿ ತಿಳಿಸಲೋಸುಗ ಮಾಡಿರುವ ಸಾಧ್ಯತೆಯೂ ಇದೆ. ಪ್ರೋಟೋಗೋರಾಸ್ ಮತ್ತು ಮೆನೋ ಗಳಲ್ಲಿ ಅವರು ವಿವಿಧ ಮೌಲ್ಯಗಳು ಸ್ವತಂತ್ರವಾಗಿ ಇರುವುದು ಸಾಧ್ಯವಿಲ್ಲವೆಂದು ಸಾರುತ್ತಾ, ಜಾಣ್ಮೆ(ವಿವೇಕ)ಯಿಂದ ನಡೆದರೂ ಸಹ ಅನ್ಯಾಯದ ಹಾದಿ ತುಳಿಯುವ ವ್ಯತಿರಿಕ್ತಭಾವವನ್ನು ಹಾಗೂ ಧೈರ್ಯ(ಶೌರ್ಯ)ದಿಂದ ನಡೆದರೂ ಅರಿವಿಲ್ಲದೆ(ವಿವೇಕಹೀನವಾಗಿ) ನಡೆಯುವುದನ್ನು ಉದಾಹರಿಸುತ್ತಾ ತಮ್ಮ ವಾದವನ್ನು ಮಂಡಿಸಿದರು.
ಅರಿಸ್ಟಾಟಲ್ ರ ಮೌಲ್ಯಗಳು
[ಬದಲಾಯಿಸಿ]ನಿಕೋಮಾಷಿಯನ್ ನೀತಿಗಳುವಿನಲ್ಲಿ ಅರಿಸ್ಟಾಟಲ್ ಮೌಲ್ಯವೆಂದರೆ ಒಂದು ವೈಶಿಷ್ಠ್ಯದ ನ್ಯೂನತೆ ಮತ್ತು ಪರಾಕಾಷ್ಠೆಯ ಮಧ್ಯದ ಸಮತೋಲನದೋರುವ ಬಿಂದುವೆಂದು ವಿವರಿಸಿದರು. ಗರಿಷ್ಠಮೂಲ್ಯದ ಬಿಂದುವು ಸರಿಯಾಗಿ ಕೇಂದ್ರಭಾಗದಲ್ಲೇ ಇರದೆ, ಒಂದು ಸುವರ್ಣ ಮಧ್ಯ ಸ್ಥಳದಲ್ಲಿದ್ದು, ಈ ಸ್ಥಳವು ಕೆಲವೊಮ್ಮೆ ಯಾವುದಾದರೂ ಒಂದು ತುದಿಗೆ ಹತ್ತಿರವಾಗಿರುತ್ತದೆ. ಉದಾಹರಣೆಗೆ ಧೈರ್ಯವು ಹೇಡಿತನ ಮತ್ತು ದಡ್ಡತನದ ಮಧ್ಯಭಾಗದಲ್ಲಿರುತ್ತದೆ, ಆತ್ಮವಿಶ್ವಾಸವು ಆತ್ಮನಿಷೇಧ ಮತ್ತು ವೃಥಾಭಿಮಾನದ ಮಧ್ಯದಲ್ಲಿರುತ್ತದೆ ಮತ್ತು ಉದಾರತೆಯು ಜಿಪುಣತನ ಮತ್ತು ದುಂದುಗಾರಿಕೆಯ ಮಧ್ಯದಲ್ಲಿರುತ್ತದೆ.
ವಿವೇಕ ಮತ್ತು ಮೌಲ್ಯ
[ಬದಲಾಯಿಸಿ]ರೋಮನ್ ವಿರಕ್ತ ಸೆನೆಕಾರು ಪರಿಪೂರ್ಣ ವಿವೇಕ ಮತ್ತು ಪರಿಪೂರ್ಣ ಮೌಲ್ಯಗಳು ಒಂದೇ ವಿಧವಾಗಿರುತ್ತವೆ ಎಂದರು. ಹೀಗೆ, ಎಲ್ಲಾ ಆಗುಹೋಗುಗಳನ್ನೂ ಗಮನಿಸಿದಾಗ, ಒಬ್ಬ ವಿವೇಕಶಾಲಿಯು ಸುಗುಣಗಳನ್ನು ಹೊಂದಿದ ವ್ಯಕ್ತಿಯಂತೆಯೇ ವರ್ತಿಸುವನೆಂಬುದು ಸುಸ್ಪಷ್ಟ.
ಪ್ಲೇಟೋ ಸಹ ಇದೇ ತರ್ಕವನ್ನೇ ತಮ್ಮ ಮೆನೋದಲ್ಲಿ ಉಪಯೋಗಿಸಿದ್ದು, ಜನರು ತಾವು ಯಾವ ರೀತಿ ವರ್ತಿಸಿದರೆ ಒಳಿತು ಹೆಚ್ಚಾಗುವುದೆಂದು ಮನಗಾಣುವರೋ ಹಾಗೆಯೇ ವರ್ತಿಸುವರೆಂದು ಬರೆದರು. ಒಳಿತನ್ನು ಆರಿಸುವುದರ ಬದಲು ಕೆಡುಕನ್ನು ಆರಿಸುವುದಕ್ಕೆ ಕಾರಣ ಜಾಣ್ಮೆಯ ಕೊರತೆಯಷ್ಟೆ. ಈ ವಿಧವಾಗಿ, ಜಾಣ್ಮೆಯು ಸಕಲ ಮೌಲ್ಯಗಳ ಕೇಂದ್ರಭಾಗ. ಆದರೆ, ಮೌಲ್ಯಗಳು/ಗುಣಗಳು ಜಾಣ್ಮೆಗೆ ಪರ್ಯಾಯವಾದಲ್ಲಿ ಅವನ್ನು ಬೋಧಿದಬಹುದೆಂದು ಪ್ಲೇಟೋ ಮನಗಂಡರು; ಈ ಸಾಧ್ಯತೆಯನ್ನು ಅವರು ಮುಂಚೆ ಅವಗಣಿಸಿದ್ದರು. ನಂತರ ಅವರು "ಸೂಕ್ತ ನಂಬಿಕೆ"ಯನ್ನು ಅರಿವಿನ ಬದಲಾಗಿ ಸೇರಿಸುತ್ತಾ, ಅರಿವು ಸರಿಯಾಗಿ ತಿಳಿಸಲ್ಪಟ್ಟ ಮತ್ತು "ಕಟ್ಟಿಹಾಕಲ್ಪಟ್ಟ" ಸೂಕ್ತ ನಂಬಿಕೆಯೇ ಎಂಬ ವಾದವನ್ನು ಮುಂದಿಟ್ಟರು.
ರೋಮನ್ ಶ್ರೇಷ್ಠಗುಣಗಳು
[ಬದಲಾಯಿಸಿ]- ಆಕ್ಟೋರಿಟಾಸ್ - "ಆಧ್ಯಾತ್ಮಿಕ ಅಧಿಕಾರ" - ಅನುಭವ, ಧಾರ್ಮಿಕತೆ ಮತ್ತು ಉದ್ಯೋಗಗಳ ಆಧಾರದ ಮೇರೆಗೆ ವ್ಯಕ್ತಿಯ ಸಾಮಾಜಿಕ ನೆಲೆಗಟ್ಟಿನ ಭಾಸವಾಗುವಿಕೆ.
- ಕೋಮಿಟಾಸ್ - "ಹಾಸ್ಯ" - ಸರಳವಾದ ನಡತೆ, ಸಭ್ಯತೆ, ಸಹಜ ನಡತೆ ಹಾಗೂ ಸ್ನೇಹಪರತೆ.
- ಕಾಂಸ್ಟಾನ್ಷಿಯಾ - "ಪರಿಶ್ರಮ" - ಸೈನಿಕನಿಗಿರುವಂತಹ ತ್ರಾಣ, ದೈಹಿಕ ಮತ್ತು ಮಾನಸಿಕ ಸೈರಣೆ.
- ಕ್ಲೆಮೆನ್ಷಿಯಾ - "ದಯೆ" - ಹಿತ ಹಾಗೂ ಮೃದುವಾದ ನಡತೆ.
- ಡಿಗ್ನಿಟಾಸ್ - "ಘನತೆ" - ತನ್ನ ಅಳವಿನ ರಿವು, ಸ್ವಾಭಿಮಾನ.
- ಡಿಸಿಪ್ಲಿನಿಯಾ - "ಶಿಸ್ತು" - ರೋಮನ್ ಕಾಯಿದೆ ಹಾಗೂ ಪೌರತ್ವಕ್ಕೆ ಬದ್ಧನಾಗಿ ಸೈನಿಕನಂತೆ ಶಪಥ ಸ್ವೀಕಾರ.
- ಫರ್ಮಿಟಾಸ್ - "ದೃಢತೆ" - ಮಾನಸಿಕ ದೃಢತೆ, ತನ್ನ ಉದ್ದೇಶಕ್ಕೆ ಬದ್ಧನಾಗಿರುವಿಕೆ.
- ಫ್ರೂಗಲಿಟಾಸ್ - "ಮಿತವ್ಯಯ" ಜಿಪುಣತನವನ್ನಾಲಿಂಗಿಸದೆ ಸರಳ ಜೀವನಶೈಲಿ ಮತ್ತು ಮಿತವಾದ ವ್ಯಯವನ್ನು ಅಭ್ಯಸಿಸುವಿಕೆ.
- ಗ್ರಾವಿಟಾಸ್ - "ಗಂಭೀರತೆ" - ಕೈಗೆತ್ತಿಕೊಮಡಿರುವ ವಿಷಯದ ಬಗ್ಗೆ ಪ್ರಾಮುಖ್ಯತೆ ತೋರುವ ಭಾವ, ಹೊಣೆಗಾರಿಕೆ ಮತ್ತು ಶ್ರದ್ಧಾಭಾವ.
- ಹಾನೆಸ್ಟಾಸ್ - "ಮರ್ಯಾದೆ" - ಸಮಾಜದ ಗೌರವಾನ್ವಿತ ವ್ಯಕ್ತಿಯಂತೆ ತೋರ್ಪಡಿಸಿಕೊಳ್ಳುವ ಗುಣ.
- ಹ್ಯುಮಾನಿಟಾಸ್ - "ಮನುಷ್ಯತ್ವ" - ಸುಶಿಕ್ಷೆ, ನಾಗರಿಕತೆ, ಕಲಿಕೆ ಮತ್ತು ಸುಸಂಸ್ಕೃತನಾಗಿರುವಿಕೆ.
- ಇಂಡಸ್ಟ್ರಿಯಾ - "ಉದ್ಯೋಗಶೀಲತೆ" - ಶ್ರಮಭರಿತ ಕಾರ್ಯ
- ಇಯಸ್ಟಿಟಿಯಾ - "ನ್ಯಾಯ" - ಪ್ರತಿಕಾರ್ಯದ ಬಗ್ಗೆಯೂ ನೈತಿಕಮೌಲ್ಯವನ್ನು ಪರಿನಣಿಸುವಿಕೆ.
- ಪೈಯೆಟಾಸ್ - "ವಿಧೇಯತೆ" - ಧರ್ಮಬದ್ಧತೆಗಿಂತಲೂ ಹೆಚ್ಚಿನದು; ಸಾಮಾಜಿಕ, ರಾಜಕೀಯ ಮತ್ತು ಧಾರ್ಮಿಕ ಕ್ರಮಗಳಿಗೆ ಗೌರವ ತೋರುವಿಕೆ. ದೇಶಭಕ್ತಿ ಮತ್ತು ಇತರರ ಬಗ್ಗೆ ಭಕ್ತಿಭಾವ ಹೊಂದುವುದನ್ನೂ ಸೇರಿದಂತೆ.
- ಪ್ರುಡೆನ್ಷಿಯಾ - "ವಿವೇಕ" - ದೂರದೃಷ್ಟಿ, ಜಾಣ್ಮೆ ಮತ್ತು ವೈಯಕ್ತಿಕ ವಿಚಕ್ಷಣೆ.
- ಸ್ಯಾಲ್ಯುಬ್ರಿಟಾಸ್ - "ಆರೋಗ್ಯಪೂರ್ಣತೆ" - ಆಗೋಗ್ಯ ಮತ್ತು ಶುಚಿತ್ವ.
- ಸೆವೆರಿಟಾಸ್ - "ಸ್ಥಿರತೆ" - ಗಂಭೀರತೆ, ಆತ್ಮನಿಗ್ರಹ.
- ವೆರಿಟಾಸ್ - "ಸತ್ಯಸಂಧತೆ" - ಇತರರೊಡನೆ ವ್ಯವಹರಿಸುವಾಗ ಪ್ರಾಮಾಣಿಕವಾಗಿರುವಿಕೆ.
- ವರ್ಟಸ್ - "ಪೌರುಷ" - ಶೌರ್ಯ, ಶ್ರೇಷ್ಠತೆ, ಧೈರ್ಯ, ಸೌಶೀಲ್ಯ ಮತ್ತು ಅರ್ಹತೆ. ವರ್ ಎಂದರೆ "ಗಂಡು".
ಅಬ್ರಹಾಮ್ ಸಂಬಂಧಿತ ಧರ್ಮಗಳು
[ಬದಲಾಯಿಸಿ]ಯಹೂದಿ ಸಂಪ್ರದಾಯ
[ಬದಲಾಯಿಸಿ]ಯಹೂದಿ ಸಂಪ್ರದಾಯದಲ್ಲಿ ದೇವನು ದಯೆಯ ಸಾಕಾರವಾಗಿದ್ದು ದಯಾಮಯ ತಂದೆಯೆಂದೇ ಮೊರೆಯಿಡಲ್ಪಡುತ್ತಾನೆ; ರಹ್ಮಾನಾ ಅಥವಾ ದಯಾವಂತ ಎಂಬುದು ದೇವನನ್ನು ಪ್ರಾರ್ಥಿಸುವಾಗ ಉಪಯೋಗಿಸುವ ಸಾಮಾನ್ಯವಾದ ಕ್ರಮವಾಗಿದೆ. (ಕುರ್-ಆನ್ ನಲ್ಲೂ ರಹ್ಮಾನ್ ಅನ್ನು ಆಗಾಗ್ಗೆ ಉಪಯೋಗಿಸಿರುವುದಕ್ಕೆ ಹೋಲಿಸಿ.)[೧]
ಗ್ರಾಂಥಿಕ ಹೀಬ್ರೂ ವಿನಲ್ಲಿ, ಬಾಧಿತನಾದವನ ಬಗ್ಗೆ ದುಃಖ ಮತ್ತು ಅನುಕಂಪ, ಉಪಶಮನಗೊಳಿಸಲು ಬಯಕೆ ಹುಟ್ಟಿಸುವುದು ಇವೆರಡೂ ಭಾವಗಳನ್ನು ಮನುಜನಿಗೆ ಹೇಗೋ ದೇವತೆಗಳಿಗೂ ಹಾಗೆಯೇ ಅರ್ಪಿತವಾಗಿದೆ. ("ರಿಹಮ್" ಎಂಬುದು "ರೆಹೆಮ್" ಅರ್ಥಾತ್ ತಾಯಿ, ಗರ್ಭ ಎಂಬುದರ ರೂಪ). ರಬ್ಬಿಗಳು "ಅನುಕಂಪದ ಹದಿಮೂರು ಗುಣಧರ್ಮ"ಗಳ ಬಗ್ಗೆ ಹೇಳುತ್ತಾರೆ. ಅನುಕಂಪ ಎನ್ನುವುದಕ್ಕೆ ಗ್ರಾಂಥಿಕವಾದ ಅಭಿಪ್ರಾಯವೆಂದರೆ ಆ ಅನುಕಂಪವು ತಂದೆತಾಯಿಯರು ಮಕ್ಕಳಿಗೆ ತೋರಿಸಿದಂತಹುದರಂತಿರಬೇಕು. ಆದ್ದರಿಂದ ಪ್ರವಾದಿಯು ತಾನು ದೇವನಲ್ಲಿಟ್ಟಿರುವ ನಂಬಿಕೆಯ ದ್ಯೋತಕವಾಗಿ ಮಾಡುವ ವಿನಂತಿಯು ತಾಯಿಗೆ ತನ್ನ ಮಕ್ಕಳಲ್ಲಿ ಉಂಟಾಗುವ ರೀತಿಯ ಪ್ರೇಮವನ್ನು ಉಂಟುಮಾಡುತ್ತದೆ(Isa. xlix. 15. [೧]
ಇದಕ್ಕೆ ವಿರೋಧವಾಗಿ ದಯಾಹೀನತೆಯು ಮನುಜರನ್ನು ಕ್ರೂರಿಗಳನ್ನಾಗಿಸುತ್ತದೆ(Jer. vi. 23 . ಕಾನೂನು ಮತ್ತು ಪ್ರವಾದಿಗಳು ವಿಧವೆಯರು, ಅನಾಥರು ಮತ್ತು ಅಪರಿಚಿತರು ರಕ್ಷಣೆಗೆ ಒಳಗಾಗಬೇಕೆಂದು ಪದೇಪದೇ ಒತ್ತುಕೊಡುತ್ತಿದ್ದುದು ಪುರಾತನ ಇಸ್ರೇಲ್ ನ ಪಾಪಭೀರುಗಳಾದ ಜನರಲ್ಲಿ ದಯಾಭಾವವು ಎಷ್ಟು ಆಳವಾಗಿ ಬೇರೂರಿತ್ತು ಎಂಬುದಕ್ಕೆ ನಿದರ್ಶನವಾಗಿದೆ ಎಂಬ ವಾದವಿದೆ.[೧]
ಹಿರಿಯ ರಬ್ಬಿ ಹಿಲ್ಲೆಲ್ ರಿಂದ ಸುವರ್ಣನಿಯಮದ ಪ್ರಮಾಣಭೂತ ನುಡಿಗಳು (ಮೇಲೆ ನೋಡಿ)ಮೊದಲನೆಯ ಶತಮಾನದಲ್ಲಿ ಮೂಡಿಬಂತು. ಯಹೂದಿ ಸಂಪ್ರದಾಯದಲ್ಲಿ ಜ್ಞಾನಿ ಮತ್ತು ಪಂಡಿತನೆಂದು ಹೆರು ಮಾಡಿದ್ದ ಇವರು ಮಿಶ್ನಾಹ್ ಮತ್ತು ಟಾಲ್ಮಡ್ ಗಳ ಅಭಿವೃದ್ಧಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಲ್ಲದೆ, ತನ್ಮೂಲಕ ಯಹೂದಿ ಚರಿತ್ರೆಯ ಪ್ರಮುಖ ಪುರುಷರಲ್ಲಿ ಒಬ್ಬರಾದರು. ಯಹೂದಿ ಧರ್ಮದ ಬಗ್ಗೆ ಸಂಕ್ಷಿಪ್ತವಾಗಿ ಹೇಳಲು ಕೇಳಿದಾಗ ಹಿಲ್ಲೆಲ್ (ಒಂಟಿ ಕಾಲಿನ ಮೇಲೆ ನಿಂತೇ ಮಾತನಾಡಿದರೆಂಬ ಪ್ರತೀತಿ ಹೊಂದಿರುವರು) ಹೀಗೆಂದರು:ನೀವು ಯಾವುದನ್ನು ಮಾಡುವುದನ್ನು ದ್ವೇಷಿಸುವಿರೋ, ಅದನ್ನು ನಿಮ್ಮವರಿಗೂ ಮಾಡಬೇಡಿ. ಅದೇ ಸಂಪೂರ್ಣ ತೋರಾಹ್(ಮತಬೋಧನೆ). ಮಿಕ್ಕವೆಲ್ಲಾ ವಿವರಣೆಗಳಷ್ಟೆ; ಹೋಗಿ ಮತ್ತು ಕಲಿಯಿರಿ." [೨]
9/11ರ ನಂತರ ಕ್ಯಾರೆನ್ ಆರ್ಮ್ ಸ್ಟ್ರಾಂಗ್ ಎಂಬ ಸುಪ್ರಸಿದ್ಧ ವಿವಿಧಧರ್ಮ-ವಿಶ್ಲೇಷಣ ಲೇಖಕರು ತಮ್ಮ ಸಾರ್ವಜನಿಕ ಭಾಷಣಗಳಲ್ಲಿ ಮತ್ತು ಸಂದರ್ಶನಗಳಲ್ಲಿ ರಬ್ಬಿ ಹಿಲ್ಲಾಲ್ ರ ಮಾತುಗಳನ್ನು ಆಗಾಗ್ಗೆ ಉಲ್ಲೇಖಿಸುತ್ತಿರುತ್ತಾರೆ.
ಕ್ರಿಶ್ಚಿಯನ್ ಸಂಪ್ರದಾಯ
[ಬದಲಾಯಿಸಿ]ಕ್ರೈಸ್ತಧರ್ಮದಲ್ಲಿ ಧಾರ್ಮಿಕ ಮೌಲ್ಯಗಳೆಂದರೆ ನಂಬಿಕೆ, ಭರವಸೆ ಮತ್ತು ದಾನಧರ್ಮ ಅಥವಾ ಪ್ರೀತಿ/ಮಮತೆ; ಈ ಗುಣಗಳ ಪಟ್ಟಿಯು ಕಾರ್ನಿಥಿಯನ್ಸ್ 13:13 ರಿಂದ ದೊರೆಯುತ್ತದೆ(νυνι δε μενει πιστις ελπις αγαπη τα τρια ταυτα μειζων δε τουτων η αγαπη pistis, elpis, agape (ಮಮತೆ)). ಇವುಗಳು ವ್ಯಕ್ತಿಯ ದೈವಪ್ರೀತಿ ಮತ್ತು ಮಾನವಪ್ರೀತಿಯನ್ನು ಪರಿಪೂರ್ಣಗೊಳಿಸುವುವೆಂದೂ, ಮತ್ತು ತನ್ಮೂಲಕ ವಿವೇಕವನ್ನು ಹೊಂದುವುದಕ್ಕೂ, ಸೌಹಾರ್ದತೆ ಬೆಳೆಸಿಕೊಳ್ಳುವುದಕ್ಕೂ ಸೂಕ್ತವೆಂದೂ ಹೇಳಲಾಗಿದೆ.
ಕ್ರೈಸ್ತ ಸಂಪ್ರದಾಯದ ಮುಖ್ಯ ಮೌಲ್ಯ(ನಂಬಿಕೆ, ಭರವಸೆ ಮತ್ತು ಪ್ರೀತಿ)ಗಳಲ್ಲದೆ ಕ್ರೈಸ್ತರ ಬೈಬಲ್ ನಲ್ಲಿ ಇನ್ನೂ ಅನೇಕ ಗುಣಗಳ ಪಟ್ಟಿಗಳಿವೆ. ಅದರಲ್ಲಿ ಒಂದು ಗಲಾಷಿಯನ್ಸ್ 5:22-23ರಲ್ಲಿ ಉಲ್ಲೇಖಿಸಿರುವ "ಆತ್ಮದ ಫಲ": "ಅದಕ್ಕೆ ವಿರೋಧವಾಗೆ, ಆತ್ಮದ ಫಲವೇ ಪ್ರೀತಿ, ಸಂತೋಷ, ಶಾಂತಿ, ತಾಳ್ಮೆ, ದಯೆ, ಔದಾರ್ಯ, ವಿಧೇಯತೆ, ಸಮ್ರತೆ ಮತ್ತು ಆತ್ಮನಿಗ್ರಹ. ಈ ಗುಣಗಳ ವಿರುದ್ಧ ಯಾವುದೇ ವಿಧವಾದ ಕಾನೂನುಗಳಿಲ್ಲ."
ಪವಿತ್ರಗ್ರಂಥ ಬೈಬಲ್ : ನವೀನ ಪರಿಷ್ಕೃತ ಗುಣಮಟ್ಟದ ಕೃತಿ (ನ್ಯಾಷ್ ವಿಲ್ಲೆ: ಥಾಮಸ್ ನೆಲ್ಸನ್ ಪ್ರಕಾಶನ, 1989 ).
22 Ὁ δὲ καρπὸς τοῦ πνεύματός ἐστιν ἀγάπη χαρὰ εἰρήνη, μακροθυμία χρηστότης ἀγαθωσύνη, πίστις 23 πραΰτης ἐγκράτεια· κατὰ τῶν τοιούτων οὐκ ἔστιν νόμος. ಬಾರ್ಬರಾ ಅಲಾಂಡ್, ಕರ್ಟ್ ಅಲಾಂಡ್, ಮ್ಯಾಥ್ಯೂ ಬ್ಲ್ಯಾಕ್, ಕಾರ್ಲೋ ಎಂ. ಮಾರ್ಟಿನಿ, ಬ್ರೂಸ್ ಎಂ. ಮೆಟ್ಝ್ ಗರ್, ಮತ್ತು ಅಲನ್ ವಿಕ್ ಗ್ರೀನ್, ದ ಗ್ರೀಕ್ ನ್ಯೂ ಟೆಸ್ಟಮೆಂಟ್, 4ನೆಯ ಮುದ್ರಣ. ಫೆಡರಲ್ ರಿಪಬ್ಲಿಕ್ ಆಫ್ ಜರ್ಮನಿ: ಯುನೈಟೆಡ್ ಬೈಬಲ್ ಸೊಸೈಟೀಸ್, 1993 , c1979 )
ಮುಸ್ಲಿಮ್ ಸಂಪ್ರದಾಯ
[ಬದಲಾಯಿಸಿ]ಮುಸ್ಲಿಮ್ ಸಂಪ್ರದಾಯದಲ್ಲಿ, ಆ ದೇವನೇ ನುಡಿದಂತೆ,ಭೂಮಿಯಲ್ಲಿರುವ ಸಕಲ ರೂಪಗಳ ೆಲ್ಲಾ ಮೌಲ್ಯಗಳ ಶ್ರೇಷ್ಠ ಭಂಡಾರವು ಕುರ್-ಆನ್, ಮತ್ತು ಪ್ರವಾದಿಯು, ಪ್ರಮುಖವಾಗಿ ತನ್ನ ಹಾಡಿತ್ ಗಳು ಅಥವಾ ತಾನು ಹೇಳಿದನೆಂದು ಉಲ್ಲೇಖಿಲ್ಪಟ್ಟಿರುವ ಬೋಧನೆಗಳ ಮೂಲಕ ಮಾನವನ ಎಲ್ಲಾ ಮೌಲ್ಯಗಳ ಸಾಕಾರರೂಪವೆಂದು ಪರಿಗಣಿಸಲಾಗಿದೆ.
ಇಸ್ಲಾಮ್ ಎಂಬ ನಾಮದ ಅರ್ಥವೇ "ವಶವಾಗುವಿಕೆ" ಎಂದಿದ್ದು, ದೇವನ ನಿರ್ಣಯಕ್ಕೆ ಒಳಗಾಗುವಿಕೆಯನ್ನು ಒಂದು ಶ್ರೇಷ್ಠ ಗುಣವೆಂದು ಪರಿಗಣಿಸಿ, ಸಕಲವನ್ನೂ ಯಥಾವತ್ತಾಗಿ ಸ್ವೀಕರಿಸಲು ಬೋಧಿಸುತ್ತದೆ. ದೇವನ ಗುಣಧರ್ಮಗಳಲ್ಲಿ ಪ್ರಮುಖವಾದವುಗಳೆಂದರೆ ದಯೆ ಮತ್ತು ಸಹಾನುಭೂತಿ ಅಥವಾ ಅರಬ್ಬೀ ಕ್ಯಾನೋನಿಕಲ್ ಭಾಷೆಯಲ್ಲಿಯೇ ಹೇಳುವುದಾದರೆ ರಹ್ಮಾನ್ ಮತ್ತು ರಹೀಮ್ . ಒಂದು ಅಧ್ಯಾಯದ ಹೊರತಾಗಿ, ಕುರ್-ಆನ್ ನ ಎಲ್ಲಾ ಅಧ್ಯಾಯಗಳೂ "ದಯಾಮಯನಾದ, ಸಹಾನುಭೂತಿಯುಳ್ಳ ದೇವನ ಹೆಸರಿನಲ್ಲಿ" ಎಂಬ ಸಾಲಿನಿಂದಲೇ ಆರಂಭವಾಗುತ್ತವೆ.[೩]
ಸಹಾನುಭೂತಿ ಎಂಬುದಕ್ಕೆ ಅರಬ್ಬೀ ಪದ ರಹ್ಮಾನ್ . ಸಾಂಸ್ಕೃತಿಕ ಪ್ರಭಾವದಂತೆ ಅದರ ಬೇರುಗಳು ಕುರ್-ಆನ್ ನಲ್ಲಿ ಭದ್ರವಾಗಿವೆ. ಒಬ್ಬ ಒಳ್ಳೆಯ ಮುಸ್ಲಿಮನು ಪ್ರತಿದಿನ, ಪ್ರತಿ ಪ್ರಾರ್ಥನೆ ಮತ್ತು ಪ್ರತಿ ಗಮನಾರ್ಹ ಕ್ರಿಯೆಯನ್ನೂ ದಯಾಮಯನಾದ ಮತ್ತು ಸಹಾನುಭೂತಿಯುಳ್ಳ ದೇವನನ್ನು ಸ್ಮರಿಸಿಯೇ ಕೈಗೊಳ್ಳಬೇಕು/ಆರಂಭಿಸಬೇಕು, ಎಂದರೆ, ಬಿಸ್ಮಿ-ಅಲ್ಲಾ ಆಲ್-ರಹ್ಮಾನ್ ಆಲ್-ರಹೀಮ್ ಎಂಬ ಮಂತ್ರ ಹೇಳುವುದರ ಮೂಲಕವೇ ಆರಂಭಿಸಬೇಕು. ಮುಸ್ಲಿಮ್ ಗ್ರಂಥಗಳು ಬಂಧಿತರು, ವಿಧವೆಯರು, ಅನಾಥರು ಮತ್ತು ಬಡವರ ಬಗ್ಗೆ ಅನುಕಂಪ ಹೊಂದಿರಲು ಉಪದೇಶಿಸುತ್ತವೆ. ಸಾಂಪ್ರದಾಯಿಕವಾಗಿ ಎಲ್ಲಾ ಮುಸ್ಲಿಮರೂ ಝಕತ್ ಎಂಬ, ಬಡವರು ಮತ್ತು ದೀನರಿಗೆ ನೀಡಲೆಂದೇ ವಿಧಿಸಲ್ಪಡುವ, ತೆರಿಗೆಯನ್ನು ತೆರಲೇಬೇಕು(9:60). ರಂಝಾನ್ ಕಾಲದಲ್ಲಿ {0ಸವ್ಮ್{/0} ಅಥವಾ ಉಪವಾಸವನ್ನು ಆಚರಿಸುವ ಉದ್ದೇಶಗಳು, ತನಗಿಂತಲೂ ಕೀಳುಮಟ್ಟದಲ್ಲಿರುವವರು ಅನುಭವಿಸುವ ಹಸಿವಿನ ಬಾಧೆಯ ಅನುಭೂತಿ ಹೊಂದಲೆಂಬುದು,ಇತರರ ನೋವುಗಳ ಬಗ್ಗೆ ಸೂಕ್ಷ್ಮಸಂವೇದನೆ ಹೆಚ್ಚಿಸುವುದು, ಮತ್ತು ಅನಾಥರ ಮತ್ತು ಬಡವರ ಬಗ್ಗೆ ಸಹಾನುಭೂತಿ ಹೆಚ್ಚಿಸುವಂತಹುದೇ ಆಗಿವೆ.[೪]
ಮುಸಲ್ಮಾನರ ಶ್ರೇಷ್ಠಗುಣಗಳೆಂದರೆ: ಪ್ರಾರ್ಥನೆ, ಪಶ್ಚಾತ್ತಾಪ, ಪ್ರಾಮಾಣಿಕತೆ, ನಿಷ್ಠೆ, ನಿಷ್ಕಪಟತೆ, ಮಿತವ್ಯಯ, ವಿವೇಚನೆ, ಸಮಚಿತ್ತತೆ, ಆತ್ಮನಿಗ್ರಹ, ಶಿಸ್ತು, ಪರಿಶ್ರಮಭರಿತ ಸಾಧನೆ, ತಾಳ್ಮೆ, ಆಶಾಭಾವ, ಗೌರವಭಾವ, ಧೈರ್ಯ, ನ್ಯಾಯಪರತೆ, ಸೈರಣೆ, ಜಾಣ್ಮೆ, ಒಳ್ಳೆಯ ಮಾತುಗಾರಿಕೆ, ಮರ್ಯಾದೆ, ಪವಿತ್ರತೆ, ವಿನಮ್ರತೆ, ದಯೆ, ಕೃತಜ್ಞತೆ, ಉದಾರತೆ, ತೃಪ್ತಿ, ಇತ್ಯಾದಿಗಳು. [ಸೂಕ್ತ ಉಲ್ಲೇಖನ ಬೇಕು]
ಹಿಂದೂ ಮೌಲ್ಯಗಳು
[ಬದಲಾಯಿಸಿ]ಹಿಂದುತ್ವ ಅಥವಾ ಸನಾತನ ಧರ್ಮ(ಧರ್ಮ ಎಂದರೆ ನೈತಿಕ ಹೊಣೆ)ವು ಆ ಧರ್ಮವನ್ನು ಆಚರಿಸುವವರೆಲ್ಲರೂ ಜೀವನಚಕ್ರ ಸಾಗಲು ಅವಶ್ಯಕವಾದ ಮೌಲ್ಯಗಳನ್ನು ಅನುಷ್ಠಾನಕ್ಕೆ ತರಲು ಉಪದೇಶಿಸುತ್ತದೆ, ಏಕೆಂರೆ ಆ ಗುಣಗಳು ಬಹಳ ವಿಶಿಷ್ಟವಾದವಾಗಿದ್ದು ಮನುಷ್ಯ(ಮಾನವಕುಲ)ನು ಒಳ್ಳೆಯ ಪಥದಲ್ಲಿ ಸಾಗಲು ಅನುವು ಮಾಡಿಕೊಡುತ್ತವೆ. ವೇದಗಳು ಹಾಗೂ ಇತರ ಭಾರತೀಯ ಗ್ರಂಥಗಳಲ್ಲಿ ವಿವರಿಸಿರುವಂತೆ ವಾಸ್ತವಿಕ ರೀತಿ(ಗುಣ)ಯಲ್ಲಿ ಮೂರು ವಿಧಗಳಿವೆ: ಸತ್ವ(ಒಳ್ಳೆಯತನ, ಸಂರಕ್ಷಣೆ, ಸ್ಥಿರತೆ, ಬುದ್ಧಿವಂತಿಕೆ), ರಜಸ್ (ಅನುರಾಗ, ಸೃಷ್ಟಿಕ್ರಿಯೆ, ಸಾಮರ್ಥ್ಯ, ಚಟುವಟಿಕೆ), ಮತ್ತು ತಮಸ್(ಅಜ್ಞಾನ, ನಿರ್ಬಂಧ, ಆಲಸ್ಯ, ವಿನಾಶ). ಪ್ರತಿ ವ್ಯಕ್ತಿಯಲ್ಲೂ ಈ ಮೂರೂ ಗುಣಗಳು ವಿವಿಧ ಪ್ರಮಾಣಗಳಲ್ಲಿ ಮಿಳಿತವಾಗಿರುತ್ತವೆ. ಸಾತ್ವಿಕನಾದ ಮನುಷ್ಯನಲ್ಲಿ ಸತ್ವಗುಣಗಳು ಪ್ರಮುಖವಾಗಿದ್ದು, ಆ ಗುಣಗಳನ್ನು ಅವನು ಧರ್ಮದ ಮೌಲ್ಯಗಳನ್ನು ಅನುಸರಿಸುವುದರಿಂದ ಪಡೆಯುತ್ತಾನೆ.
ಸತ್ವದ ವಿಧಗಳು ಈ ಕೆಳಕಂಡಂತಿವೆ:[ಸೂಕ್ತ ಉಲ್ಲೇಖನ ಬೇಕು]
- ಪರೋಪಕಾರಬುದ್ಧಿ: ಸಕಲ ಜನರಿಗೂ ನಿಃಸ್ವಾರ್ಥ ಸೇವೆ.
- ನಿಗ್ರಹ ಮತ್ತು ಮಿತ:ಎಲ್ಲಾ ವಿಷಯಗಳಲ್ಲೂ ಹತೋಟಿ ಮತ್ತು ಮಿತಿ ಹೊಂದಿರುವಿಕೆ. ಲೈಂಗಿಕ ಸಂಬಂಧಗಲೂ, ಆಹಾರ ಸೇವನೆ, ಮತ್ತು ಇತರ ಮುದನೀಡುವ ಚಟುವಟಿಕೆಗಳು ಮಿತವಾಗಿರಬೆಕು. ಕೆಲವು ಸಂಪ್ರದಾಯಸ್ಥರು ಲೈಂಗಿಕತೆ ಮದುವೆಯಾದರೆ ಮಾತ್ರ ಎಂಬ ನಿಯಮವನ್ನೂ, ಅಲ್ಲಿಯವರೆಗೂ ಪರಿಶುದ್ಧರಾಗಿರಬೇಕಾದುದು ಸೂಕ್ತವೆಂದು ಅಭಿಪ್ರಾಯಪಡುತ್ತಾರೆ. ಹತೋಟಿ ಅಥವಾ ನಿಗ್ರಹ ಮತ್ತು ಮಿತಿಯ ಪ್ರಮಾಣವು ಆಯಾ ವರ್ಗಗಳ ಮತ್ತು ಅವರವರ ನಂಬುಗೆಗಳ ಮೇಲೆ ನಿರ್ಧರಿತವಾಗುತ್ತವೆ. ಕೆಲವರು ಹೀಗೆಂದರೆ ಬ್ರಹ್ಮಚರ್ಯವ್ರತಪಾಲನೆಯೆಂದು ತಿಳಿದುಕೊಂಡರೆ, ಇತರರು ಮಿತಿಯ ಹೊನ್ನಿನ ಹಾದಿಯೇ ಸೂಕ್ತವೆಂದು, ಎಂದರೆ, ಹತೋಟಿಯ ಕ್ರಮದತ್ತ ಬಹಳವೇ ವಾಲಿ ಜೀವನದ ಎಲ್ಲಾ ಸುಖಗಳನ್ನೂ ಬಿಟ್ಟುಬಿಡುವ ಕ್ರಮವನ್ನು ಅನುಸರಿಸದೆ, ಅಂತೆಯೇ ಜೀವನದ ಎಲ್ಲಾ ಸುಖಗಳಿಗೂ ಮುಗಿಬೀಳದೆ ಮಧ್ಯದ ಪಥವನ್ನು ಅನುಸರಿಸುವಂತಹ ಮಿತಪಥವೇ ಹಿತವೆಂದು ಆ ಪಥವನ್ನೇ ಆಲಿಂಗಿಸುತ್ತಾರೆ.
- ಪ್ರಾಮಾಣಿಕತೆ:ಪ್ರತಿ ವ್ಯಕ್ತಿಯೂ, ಸ್ವಯಂ ತನ್ನೊಂದಿಗೂ, ತನ್ನ ಕುಟುಂಬದೊಂದಿಗೂ, ತನ್ನ ಸ್ನೇಹಿತರೊಂದಿಗೂ ಮತ್ತು ಇಡೀ ಮನುಜಕುಲದೊಂದಿಗೂ ಪ್ರಾಮಾಣಿಕವಾಗಿ ವರ್ತಿಸುವುದು ಅವಶ್ಯಕ.
- ಶುಚಿತ್ವ - ಬಾಹ್ಯ ಶುಚಿತ್ವವನ್ನು ಆರೋಗ್ಯ ಮತ್ತು ಸುಕ್ಷೇಮವನ್ನು ಹೊಂದುವ ಕಾರಣಕ್ಕಾಗಿ ಅನುಸರಿಸಬೇಕು. ಆಂತರಿಕ ಶುಚಿತ್ವವನ್ನು ದೈವಭಕ್ತಿ, ನಿಃಸ್ವಾರ್ಥತೆ, ಅಹಿಂಸೆ ಮತ್ತು ಇತರ ಸುಗುಣಗಳ ಮೂಲಕ ವೃದ್ಧಿಗೊಳಿಸಿಕೊಳ್ಳಬೇಕು. ಅಮಲೇರಿಸುವ ಪದಾರ್ಥಗಳಿಂದ ದೂರವಿರುವುದರ ಮೂಲಕ ಆಂತರಿಕ ಶುಚಿತ್ವವನ್ನು ಸಾಧಿಸಬಹುದು.
- ಭೂಮಿಯ ಬಗ್ಗೆ ಪೂಜ್ಯಭಾವ ಮತ್ತು ಅದರ ರಕ್ಷಣೆ.
- ಸಾರ್ವತ್ರಿಕತೆ: ಸರ್ವರ ಬಗ್ಗೆಯೂ, ಸರ್ವ ವಿಷಯಗಳ ಬಗ್ಗೆಯೂ ತಾಳಿಕೆಯ ಭಾವವನ್ನೂ, ಗೌರವವನ್ನೂ ತೋರುವುದು ಮತ್ತು ಜಗದ ರೀತಿಯನ್ನು ಗೌರವಿಸುವುದು.
- ಶಾಂತಿ: ಪ್ರತಿಯೊಬ್ಬನೂ ಶಾಂತಭಾವವನ್ನು ಬೆಳೆಸಿಕೊಳ್ಳುವುದರ ಮೂಲಕ ತನಗೂ, ತನ್ನ ಸುತ್ತಲಿನವರಿಗೂ ಹಿತಕಾರಿಯಾಗಬಹುದು.
- ಹಿಂಸಾ-ರಹಿತತೆ/ಅಹಿಂಸೆ:ಎಂದರೆ ಯಾವುದೇ ಜೀವಿಯನ್ನು ಕೊಲ್ಲದಿರುವುದು ಮತ್ತು ಜೀವಕ್ಕೇ ಆಗಲೀ, ಭಾವನೆಗಳಿಗೇ ಆಗಲೀ, ಯಾವುದೇ ವಿಧವಾದ ನೋವನ್ನು ಉಂಟುಮಾಡದಿರುವುದು. ಆದ್ದರಿಂದಲೇ ಈ ಧರ್ಮವನ್ನು ಆಚರಿಸುವವರು ಸಸ್ಯಾಹಾರಿಗಳಾಗಿರುತ್ತಾರೆ, ಏಕೆಂದರೆ ಅವರು ಆಹಾರಕ್ಕಾಗಿ ಪ್ರಾಣಿಹತ್ಯೆ ಮಾಡುವುದನ್ನು ಹಿಂಸೆಯೆಂದು ಭಾವಿಸುತ್ತಾರೆ; ಹೀಗೆ ಅವರು ಭಾವಿಸಲು ಕಾರಣವೆಂದರೆ ಆರೋಗ್ಯಕರ ಆಹಾರ ಸೇವಿಸಲು ಇದಕ್ಕಿಂತಲೂ ಬಹಳವೇ ಕಡಿಮೆ ಹಿಂಸೆಯ ಮೂಲಕ ಆಹಾರವನ್ನು ಪಡೆಯಬಹುದೆಂಬುದು.
- ಹಿರಿಯರನ್ನು ಮತ್ತು ಗುರುಗಳನ್ನು ಪೂಜ್ಯಭಾವದಿಂದ ಕಾಣುವುದು: ಜ್ಞಾನಿಗಳ ಬಗ್ಗೆ ಪೂಜ್ಯಭಾವ ಹೊಂದುವಂತಹ ಗುಣ ಮತ್ತು ನಿಃಸ್ವಾರ್ಥವಾಗಿ ಪ್ರೀತಿಯಿಂದ ಶಿಕ್ಷಣ ನೀಡುವವರಿಗೆ ಗೌರವ ನೀಡಲು ಕಲಿಯುವುದು ಬಹಳ ಮುಖ್ಯ. ಗುರು ಅಥವಾ ಆಧ್ಯಾತ್ಮವನ್ನು ಹೇಳಿಕೊಡುವವರು ವೇದಗಳ ಆಧಾರಿತವಾದ ಉತ್ಕೃಷ್ಟವಾದ ಆಧ್ಯಾತ್ಮಿಕ ಜ್ಞಾನವುಳ್ಳವರಾಗಿದ್ದು ದೇವನಿಗೆ ಸಮನಾಗಿ ಪರಿಗಣಿಸಲ್ಪಡುತ್ತಾರೆ.
ಬೌದ್ಧ ಸಂಪ್ರದಾಯ
[ಬದಲಾಯಿಸಿ]ಉದಾತ್ತವಾದ ಅಷ್ಟಪದರ ಪಥ (ನೋಬಲ್ ಯೈಟ್ ಫೋಲ್ಡ್ ಪಾಥ್)ನಲ್ಲಿ ಸೂಚಿತವಾದಂತೆ ಬೌದ್ಧ ಆಚರಣೆಯನ್ನು ಪ್ರಗತಿಶೀಲ ಮೌಲ್ಯ/ಗುಣಗಳ ಪಟ್ಟಿಯಾಗಿ ಕಾಣಬಹುದು.
- ಸೂಕ್ತ ದೃಷ್ಟಿ - ನಾಲ್ಕು ಶ್ರೇಷ್ಠವಾದ ಸತ್ಯಗಳನ್ನು ಕಂಡುಕೊಳ್ಳುವುದು(samyag-dṛṣṭi, sammā-diṭṭhi) .
- ಸದುದ್ದೇಶ - ಮಾನಸಿಕ ಮತ್ತು ಸಮಚಿತ್ತದಿಂದೊಡಗೂಡಿದ ನೈತಿಕ ಬೆಳವಣಿಗೆಗೆ ಬದ್ಧವಾಗಿರುವಿಕೆ(samyak-saṃkalpa, sammā-saṅkappa) .
- ಸೂಕ್ತವಾದ ನುಡಿ - ನೋವಾಗದಂತೆ, ಉತ್ಪ್ರೇಕ್ಷೆಯಿಲ್ಲದಂತೆ, ಸತ್ಯದ ಪಥ ಬಿಡದೆ ಮಾತನಾಡುವಿಕೆ(samyag-vāc, sammā-vācā) .
- ಸರಿಯಾದ ಕಾರ್ಯ - ಆರೋಗ್ಯಕರ ಚಟುವಟಿಕೆ, ಕೆಡುಕನ್ನುಂಟುಮಾಡುವ ಕ್ರಿಯೆಗಳನ್ನು ತಟಾಯಿಸುವಿಕೆ.(samyak-karmānta, sammā-kammanta)
- ಋಜುಜೀವನ - ತನ್ನ ಕೆಲಸವು ತನಗೇ ಆಗಲಿ, ಇತರರಿಗೇ ಆಗಲೆ ಕೇಡು ಮಾಡದಿರುವಿಕೆ; ನೇರವಾಗಿ ಅಥವಾ ಪರೋಕ್ಷವಾಗಿ(samyag-ājīva, sammā-ājīva) .
- ಸೂಕ್ತ ಶ್ರಮ - ಉತ್ತಮಗೊಳ್ಳಲು ಯತ್ನಿಸುವಿಕೆ(samyag-vyāyāma, sammā-vāyāma) .
- ಸೂಕ್ತ ಲಕ್ಷ್ಯ - ಸ್ಪಷ್ಟವಾದ ತಿಳಿವಳಿಕೆಯಿದ್ದು ವಸ್ತುಗಳನ್ನು ಅವುಗಳ ಯಥಾವತ್ತು ರೂಪದಲ್ಲಿ ಗ್ರಹಿಸಿಕೊಳ್ಳುವ ಮಾನಸಿಕ ಸಾಮರ್ಥ್ಯ(samyak-smṛti, sammā-sati) .
- ಸೂಕ್ತ ಏಕಾಗ್ರತೆ - ಪರಿಪೂರ್ಣವಾದ ಮನವನ್ನು ಏಕಬಿಂದುವಿನಲ್ಲಿ ಕೇಂದ್ರೀಕರಿಸುವ ಕ್ರಮ(samyak-samādhi, sammā-samādhi) .
ಬೌದ್ಧಧರ್ಮದ ನಾಲ್ಕು ಬ್ರಹ್ಮವಿಹಾರ ("ದೈವೀಕ ಸ್ಥಿತಿಗಳು")ಗಳನ್ನು ಮತ್ತೂ ಸ್ಪಷ್ಟವಾಗಿ ಯೂರೋಪಿಯನ್ ದೃಷ್ಟಿಯಿಂದ ಹೀಗೆ ಕಾಣಬಹುದು. ಅವುಗಳು:
- ಮೆತ್ತಾ/ಮೈತ್ರಿ: ಸಕಲರ ಬಗ್ಗೆಯೂ ಪ್ರೀತಿಭರಿತ ದಯೆ; ಪ್ರತಿ ವ್ಯಕ್ತಿಯೂ ಚೆನ್ನಾಗಿರುತ್ತಾನೆಂಬ ಆಶಾಭಾವ; ಪ್ರೀತಿಭರಿತ ದಯೆಯು "ಪ್ರತಿ ಅರಿವುಳ್ಳ ಜೀವಿಯೂ, ಯಾವುದೇ ಜೀವಿಯೂ ಹೊರತಲ್ಲದಂತೆ, ಸಂತೋಷದಿಂದ ಇಎಬೇಕೆಂದು ಬಯಸುವುದು." [೫]
- ಕರುಣ: ಅನುಕಂಪ; ವ್ಯಕ್ತಿಯ ನೋವುಗಳು ಶಮನವಾಗುವುವೆಂಬ ಅಶಾಭಾವ; ಅನುಕಂಪವೆಂದರೆ "ಎಲ್ಲಾ ಅರಿವುಳ್ಳ ಜೀವಿಗಳೂ ನೋವಿನಿಂದ ಹೊರತಾಗಿರಲಿ ಎಂಬ ಆಶಾಭಾವ." [೫]
- ಮುದಿತ: ತನ್ನ ಅಥವಾ ಇತರರ ಸಾಧನೆಗಳ ಬಗ್ಗೆ ನಿಃಸ್ವಾರ್ಥವಾದ, ಪರಹಿತದ ಕೋನದಿಂದ, ಸಂತೋಷ ಪಡುವುದು; ಅನುಭೂತಿಕ ಸಂತೋಷ - "ಸಕಲ ಜೀವಿಗಳ ಸಂತೋಷ ಮತ್ತು ಗುಣಗಳನ್ನು ಕಂಡು ತಾನು ಸಂತೋಷ ಪಡುವಂತಹ ಆರೋಗ್ಯಕರ ಧೋರಣೆ." [೫]
- ಉಪೇಖ್ಖ/ಉಪೇಕ್ಷಾ: ಸಮಚಿತ್ತತೆ, ಅಥವಾ ಲಾಭಾಲಾಭಗಳನ್ನು, ಹೊಗಳಿಕೆ ಮತ್ತು ತೆಗಳಿಕೆಗಳನ್ನು, ಜಯಾಜಯಗಳನ್ನು ನಿರ್ಲಿಪ್ತತೆಯಿಂದ ಸ್ವೀಕರಿಸಲು ಕಲಿಯುವಿಕೆ, ತನಗೂ ಮತ್ತು ಇತರರಿಗೂ ಸಮಾನಭಾವವನ್ನೇ ತೋರ್ಪಡಿಸುವ ಗುಣ. ಸಮಚಿತ್ತತೆ ಎಂದರೆ "ಮಿತ್ರ, ಶತೃ, ಅಪರಿಚಿತನೆಂದ ಬೇಧ ಬಗೆಯದೆ ಸಕಲ ಜೀವಿಗಳನ್ನೂ ಸಮಾನವಾಗಿ ಕಾಣುವುದು." ಅದು ಶುದ್ಧಮನಸ್ಸಿನ ಶಾಂತಭಾವದ ಸ್ಥಿತಿ - ಯಾವುದೇ ಭ್ರಮೆ, ಮಂಕುತನ ಅಥವಾ ಕಿರಿಕಿರಿಗಳಿಂದ ಹೊರತಾದ ಸ್ಥಿತಿ." [೬]
ಇವಲ್ಲದೆ ಪರಮಿತಗಳು("ಪರಿಪೂರ್ಣತೆಗಳು")ಇವೆ.
ತೇರಾವಾದ ಬೌದ್ಧಧರ್ಮದ ಕ್ಯಾನೋನಿಕಲ್ ಬುದ್ಧವಂಶ[೭] ದದಲ್ಲಿ ಹತ್ತು ಪರಿಪೂರ್ಣತೆಗಳು(ದಶ ಪರಮಿಯೋ ) ಯಾವುವೆಂದರೆ(ಮೂಲ ಪದಗಳು ಪಾಳಿಭಾಷೆಯವು):
- ದಾನ ಪರಮಿ : ಉದಾರತೆ, ತ್ಯಾಗಬುದ್ಧಿ.
- ಶಿಲಾ ಪರಮಿ : ಸುಗುಣ, ನೈತಿಕತೆ, ಸನ್ನಡತೆ.
- ನೆಖ್ಖಮ್ಮ ಪರಮಿ : ಸುಖಗಳನ್ನು ತೊರೆಯುವಿಕೆ.
- ಪನ್ನ ಪರಮಿ : ಉತ್ಕೃಷ್ಟವಾದ ಜಾಣತನ, ಸೂಕ್ಷ್ಮ ಪರಿಜ್ಞಾನ.
- ವಿರಿಯ (ವೀರಿಯ ಎಂದೂ ಉಚ್ಚರಿಸಲಾಗುತ್ತದೆ) ಪರಮಿ : ಶಕ್ತಿ, ಉದ್ಯೋಗಶೀಲತೆ,ತೇಜಸ್ಸು,ಪ್ರಯತ್ನ.
- ಖಾಂತಿ ಪರಮಿ : ತಾಳ್ಮೆ, ಸೈರಣೆ, ಸಹನಶೀಲತೆ,ಸ್ವೀಕರಿಸುವಿಕೆ,ದೀರ್ಘಕಾಲ ಇರುವಿಕೆ.
- ಸಕ್ಕ ಪರಮಿ : ಸತ್ಯಸಂಧತೆ, ಪ್ರಾಮಾಣಿಕತೆ.
- [[Adhiṭṭhāna]](ಆದಿತ್ಥಾನ) ಪರಮಿ : ದೃಢಸಂಕಲ್ಪ, ನಿಶ್ಚಯ.
- ಮೆತ್ತ ಪರಮಿ : ಪ್ರೀತಿಭರಿತ ದಯೆ.
- ಉಪೇಖ್ಖ (ಉಪೇಕ್ಷಾ ಎಂದು ಉಚ್ಚರಿಸಲಾಗುತ್ತದೆ) ಪರಮಿ : ಸಮಚಿತ್ತತೆ, ಪ್ರಶಾಂತತೆ.
ಮಹಾಯಾನ ಬೌದ್ಧಧರ್ಮದಲ್ಲಿ ಕಮಲ ಸೂತ್ರವಾದ ಸದ್ಧರ್ಮಪುಂಡರೀಕ ವು ತಿಳಿಸುವಂತಹ ಆರು ಪರಿಪೂರ್ಣತೆಗಳೆಂದರೆ (ಮೂಲ ಪದಗಳು ಸಂಸ್ಕೃತದವು):
- ದಾನ ಪರಮಿತ: ಉದಾರಗುಣ, ತನ್ನಲ್ಲಿರುವುದನ್ನು ತ್ಯಾಗ ಮಾಡುವುದು (ಚೀನೀ ಭಾಷೆಯಲ್ಲಿ,布施波羅蜜).
- ಶೀಲ ಪರಮಿತ :ಸೌಶೀಲ್ಯ, ನೈತಿಕತೆ, ಶಿಸ್ತು, ಸನ್ನಡತೆ (持戒波羅蜜).
- [[Kṣānti]](ಕ್ಷಾಂತಿ) ಪರಮಿತ : ತಾಳ್ಮೆ, ಸಹನೆ, ಸೈರಣೆ(忍辱波羅蜜).
- ವೀರ್ಯ ಪರಮಿತ : ಶಕ್ತಿ, ಪರಿಶ್ರಮ, ಸತ್ವ, ಯತ್ನ, ಅಚಲಸಾಧನೆ(精進波羅蜜).
- ಧ್ಯಾನ ಪರಮಿತ : ಏಕ-ಬಿಂದುವಿನಲ್ಲಿ ಕೇಂದ್ರೀಕರಣ, ಧ್ಯಾನಾಸಕ್ತಿ(禪定波羅蜜).
- ಪ್ರಜ್ಞಾ ಪರಮಿತ : ಜಾಣ್ಮೆ, ಅಂತರ್ಜ್ಞಾನ(智慧波羅蜜).
ಹತ್ತು ಹಂತಗಳ ಸೂತ್ರ(ದಶಭೂಮಿಕಾ )ದಲ್ಲಿ ಮತ್ತೂ ನಾಲ್ಕು ಪರಮಿತಗಳನ್ನು ಸೇರಿಸಲಾಗಿದೆ:
- 7. ಉಪಾಯ ಪರಮಿತ : ಕೌಶಲಯುಕ್ತ ವಿಧಗಳು.
ಚೀನೀ ಆಧ್ಯಾತ್ಮದಲ್ಲಿ ಮೌಲ್ಯಗಳು
[ಬದಲಾಯಿಸಿ]"ಮೌಲ್ಯಗಳು" ಚೀನೀ ಭಾಷೆಯ ಡಿ 德 ಯಿಂದ ಅನುವಾದಿತವಾದಿತವಾಗಿದ್ದು, ಚೀನೀ ತತ್ವಶಾಸ್ತ್ರದ ಮುಖ್ಯ ವಿಚಾರಗಳಲ್ಲಿ, ಅದರಲ್ಲೂ ಡಾವೋಯಿಸಮ್ ನಲ್ಲಿ, ಒಂದಾಗಿದೆ. ಡಿ Chinese: 德; pinyin: dé; Wade–Giles: te ಯ ಮೂಲ ಅರ್ಥ ಮಾದರಿ "ಗುಣ" ಎಂಬ "ವೈಯಕ್ತಿಕ ವೈಶಿಷ್ಟ್ಯ; ಅಂತಃಸತ್ವ;ಪ್ರಾಮಾಣಿಕತೆ", ಎನ್ನುವ ಅರ್ಥದಲ್ಲಿ ತೆಗೆದುಕೊಳ್ಳುವಂತಿದ್ದು, ನಂತರ ಭಾಷಾರ್ಥದಲ್ಲಿ ಬದಲಾವಣೆ ಹೊಂದಿ ನೈತಿಕ "ಮೌಲ್ಯ;ದಯೆ, ನೀತಿ" ಎಂದಾಯಿತು. ವರ್ಚ್ಯೂ ಎಂಬ ಪದಕ್ಕೆ ಇಂಗ್ಲಿಷ್ ಭಾಷಾರ್ಥವನ್ನು ಗಮನಿಸಿದಾಗ, ಪುರಾತನ ಅರ್ಥವಾದ "ಅಂತಃಸತ್ವ; ದೈವಿಕ ಶಕ್ತಿ"("ಬೈ ವರ್ಚ್ಯೂ ಆಫ್" ಎನ್ನುವುದರಲ್ಲಿ ಇರುವ ಹಾಗೆ)ಯೂ, ಆಧುನಿಕ ಅರ್ಥವಾದ "ನೈತಿಕ ಶ್ರೇಷ್ಠತೆ;ಒಳ್ಳೆಯತನ" ಎಂಬ ಅರ್ಥಗಳು ದೊರೆಯುತ್ತವೆ.
ಕನ್ ಫ್ಯೂಷಿಯಸ್ ನ ಪ್ರಕಾರ "ವರ್ಚ್ಯೂ"ವಿನ ಸಾಕ್ಷಾತ್ಕಾರಗಳು ರೆನ್ ("ಮಾನವೀಯತೆ"), ಕ್ಸಿಯಾವೊ ("ಮಕ್ಕಳ ಧರ್ಮನಿಷ್ಠೆ"), ಮತ್ತು ಝಾಂಗ್ ("ನಿಷ್ಠೆ")ಗಳನ್ನು ಒಳಗೊಂಡಿದೆ. ಕಂಫ್ಯೂಷಿಯಾನಿಸಮ್ ನಲ್ಲಿ ರೆನ್ ನ ಅಭಿಪ್ರಾಯವು - ಸೈಮನ್ ಲೀಸ್ ಹೇಳಿದಂತೆ - "ಮಾನವೀಯತೆ" ಮತ್ತು "ಒಳ್ಳೆಯತನ" ಎಂದಾಗಿವೆ. ರೆನ್ ಮೊದಲಿಗೆ ಕಂಫ್ಯೂಷಿಯನ್ ಕಾವ್ಯ ಪುಸ್ತಕವಾದ "ವಿರಿಲಿಟಿ"ಯಲ್ಲಿ ಪುರಾತನ ಅರ್ಥವನ್ನೇ ಹೊಂದಿದ್ದು, ನಂತರದ ದಿನಗಳಲ್ಲಿ ನೈತಿಕ ಛಾಯೆಯ ಅರ್ಥಗಳನ್ನು ಹೊಂದಿತು. (ಈ ಅಭಿಪ್ರಾಯದ ಮೂಲ ಮತ್ತು ಬದಲಾವಣೆಯ ಕ್ರಮಗಳನ್ನು ಅರಿಯಲು ನೋಡಿ ಲಿನ್ ಯು-ಷೆಂಗ್ ಬರೆದಿರುವ:"ದ ಎವಲ್ಯೂಶನ್ ಆಫ್ ದ ಪ್ರಿ-ಕಂಫ್ಯೂಷಿಯನ್ ಮೀನಿಂಗ್ ಆಫ್ ಜೆನ್ ಎಂಡ್ ದ ಕಂಫ್ಯೂಷಿಯನ್ ಕಾನ್ಸೆಪ್ಟ್ ಆಫ್ ಮಾರಲ್ ಅಟಾನಮಿ," ಮಾನ್ಯುಮೆಂಟಾ ಸೆರಿಕಾ, ಸಂಪುಟ 31 , 1974 -75 .)
ಆದರೆ, ದಾವೋಯಿಸ್ಟ್ ಡಿ ಚಿಂತನೆಯು "ವರ್ಚ್ಯೂ" ಅಥವಾ ದಾವೋ("ಪಥ")ವನ್ನು ಅನುಸರಿಸುವುದರ ಮೂಲಕ ವ್ಯಕ್ತಿಯು ಪಡೆಯುವ ಸಾಮರ್ಥ್ಯದ ಬಗ್ಗೆ ಹೆಚ್ಚು ಸೂಕ್ಷ್ಮವಾಗಿದೆ. ಚೀನೀ ಚಿಂತನೆಯಲ್ಲಿ ಒಂದು ಮುಖ್ಯ ಸ್ವಾಭಾವಿಕ ಮೌಲ್ಯವೆಂದರೆ ವ್ಯಕ್ತಿಯ ಸಾಮಾಜಿಕ ನೆಲೆಯು ಅವನು ಪ್ರದರ್ಶಿಸುವ ಗುಣಗಳ ಮೇಲೆ ಆಧಾರಿತವಾಗಿರಬೇಕೇ ವಿನಹ ಅವನ ಹುಟ್ಟಿನ ಆಧಾರದ ಮೇಲಲ್ಲ ಎಂಬುದು. ಅನಲೆಕ್ಟ್ಸ್ ನಲ್ಲಿ ಕಂಫ್ಯೂಷಿಯಸ್ ಡಿ ಯನ್ನು ಹೀಗೆ ವಿವರಿಸುತ್ತಾರೆ: "ಯಾರು ತನ್ನ ಗುಣಗಳ ಮೂಲಕ ಅಧಿಕಾರ ಚಲಾಯಿಸುವನೋ, ಅವನನ್ನು ಉತ್ತರಧೃವಕ್ಕೆ ಹೋಲಿಸಬಹುದು, ಆ ಧೃವವು ತನ್ನ ಸ್ಥಾನದಲ್ಲೇ ಭದ್ರವಾಗಿರುತ್ತದೆ, ಎಲ್ಲಾ ತಾರೆಗಳೂ ಅದರತ್ತ ಮುಖ ಮಾಡಿ ನಿಲ್ಲುತ್ತವೆ."[೮]
ಚೀನೀಯರ ರಣತಂತ್ರದ ಮೌಲ್ಯಗಳು
[ಬದಲಾಯಿಸಿ]- ಕಾರ್ಯಸಂಬಂಧಿತ ನೈತಿಕತೆ
- ವಿನಯತೆ (Qian Xu; 謙虛)
- ನಿಷ್ಠೆ (Zhong Cheng; 忠誠)
- ಮರ್ಯಾದೆ (Zun Jing; 尊敬)
- ಪುಣ್ಯಶೀಲತೆ(Zheng Yi; 正義)
- ನಂಬಿಕೆ (Xin Yong; 信用)
- ಮಾನಸಿಕೆ ನೈತಿಕತೆ
ಸಮುರಾಯೀ ಮೌಲ್ಯಗಳು
[ಬದಲಾಯಿಸಿ]ಹಾಗಾಕ್ರೂಯೇ ಎಂಭ ತತ್ವಭರಿತ ಸಮುರಾಯೀ ಪುಸ್ತಕದಲ್ಲಿ ಯಾಮಾಮೋಟೋ ತ್ಸುನೇಟೋಮೋ ಮೌಲ್ಯ/ಗುಣಗಳ ಬಗ್ಗೆ ತಮ್ಮ ಅನಿಸಿಕೆಗಳನ್ನು ಸಂಕ್ಷಿಪ್ತವಾಗಿ ದಿನನಿತ್ಯ ತೆಗೆದುಕೊಳ್ಳುವ ನಾಲ್ಕು ಪ್ರಮಾಣವಚನಗಳಾಗಿ ವಿಂಗಡಿಸುತ್ತಾರೆ:
- ಸಮುರಾಯೀ ಅಥವಾ ಬುಷಿಡೋ ವಿಧದಲ್ಲಿ ಯಾವುದೇ ಕಾರಣಕ್ಕೂ ಸೋಲದಿರುವಿಕೆ.
- ಪ್ರಭುವಿಗೆ ಸದುಪಯೋಗವಾಗುವ ರೀತಿಯಲ್ಲಿ ಇರುವಿಕೆ.
- ತಂದೆತಾಯಿಗಳಿಗೆ ುತ್ತಮ ಮಕ್ಕಳಾಗಿರುವುದು.
- ಮಾನವಕುಲಕ್ಕಾಗಿ ತೀವ್ರ ಸಹಾನುಭೂತಿ ಮತ್ತು ತತ್ಸಂಬಂಧಿತ ಕಾರ್ಯಗಳನ್ನು ಆಚರಿಸುವುದು
ತ್ಸುನೋಟೋಮೋ ಮುಂದುವರಿಯುತ್ತಾ ಹೀಗೆ ಹೇಳುತ್ತಾರೆ:
ಯಾರು ಪ್ರತಿದಿನ ಬೆಳಗ್ಗೆ ಈ ನಾಲ್ಕೂ ಶಪಥಗಳನ್ನು ದೇವತೆಗಳಿಗೆ ಮತ್ತು ಬುದ್ಧರಿಗೆ ಅರ್ಪಣೆ ಮಾಡುತ್ತಾರೋ, ಅವರಿಗೆ ಎರಡು ಪುರುಷರ ಶಕ್ತಿಯು ಉಂಟಾಗುವುದು ಮತ್ತು ಎಂದಿಗೂ ಅವರು ಹಿಮ್ಮೆಟ್ಟುವುದಿಲ್ಲ. ಅಂಗುಲಹುಳದಂತೆ ನಾವು ಅಂಗುಲ ಅಂಗುಲವಾಗಿ ಮುಂದಕ್ಕೆ ಸಾಗಬೇಕು, ಕೊಂಚ ಕೊಂಚವಾಗಿ. ದೇವತೆಗಳು ಮತ್ತು ಬುದ್ಧರೂ ಸಹ ಪ್ರಥಮವಾಗಿ ಶಪಥದಿಂದಲೇ ಆರಂಭ ಮಾಡಿದರು.
ಬುಷಿಡೋ ಧರ್ಮಶಾಸ್ತ್ರದಲ್ಲಿ ಏಳು ವಿಶಿಷ್ಟವಾದ ಮೌಲ್ಯಗಳಿವೆ^ :
- ಸರಳತೆ (義 ,gi)
- ಧೈರ್ಯ (勇 ,yuu)
- ಔದಾರ್ಯ (仁 ,jin)
- ಮರ್ಯಾದೆ (礼 ,rei)
- ಪ್ರಾಮಾಣಿಕತೆ (誠 ,sei)
- ಗೌರವ (誉 ,yo)
- ನಿಷ್ಠೆ (忠 ,chuu)
ಇವುಗಳೊಂದಿಗೆ ಕೆಲವೊಮ್ಮೆ ಸೇರಿಸಲ್ಪಡುವ ಇತರ ಮೌಲ್ಯಗಳೆಂದರೆ:
- ಮಕ್ಕಳ ಬಗ್ಗೆ ಧರ್ಮನಿಷ್ಠೆ (孝 ,kō)
- ಜಾಣ್ಮೆ (智 ,chi)
- ಹಿರಿಯರ ಸೇವೆ (悌 ,tei)
ಮೌಲ್ಯಗಳ ಬಗ್ಗೆ ನೀಟ್ಝ್ ಷೆ
[ಬದಲಾಯಿಸಿ]ತತ್ವಜ್ಞಾನಿ ಫ್ರೀಡ್ರಿಕ್ ನೀಟ್ಝ್ ಷೆ ಸಾಮಾನ್ಯವಾಗಿ ಮೌಲ್ಯಗಳ ಬಗ್ಗೆ ತಿರಸ್ಕಾರದ ದೃಷ್ಟಿಯನ್ನೇ ಹೊಂದಿದ್ದರು. ಅವರ ಕೆಲವು ಚಿಂತನೆಗಳು ಈ ಕೆಳಕಂಡಂತಿವೆ:
- "ಒಂದು ಗುಣವು ಎರಡು ಗುಣಗಳಿಗಿಂತಲೂ ಮೇಲು, ಏಕೆಂದರೆ ಅದು ಮನುಷ್ಯನು ಗಮ್ಯವನ್ನು ತಲುಪಲು ಗ್ರಹಿಸಬೇಕಾದ ಗಂಟು."
- "ಮೌಲ್ಯ ಎಂಬುವುದೇ ಜಿಗುಪ್ಸೆಹುಟ್ಟಿಸುತ್ತದೆ."
- "ಮೌಲ್ಯಗಳು ನಿದ್ರಿಸಿದಾಗ, ಇನ್ನೂ ಹೆಚ್ಚಿನ ಚೈತನ್ಯ ತುಂಬಿ ಏಳುತ್ತವೆ."
- ನಾವು ಸ್ವತಂತ್ರ ಆತ್ಮಗಳು ಅಪ್ಪಟ ಪ್ರಾಮಾಣಿಕತೆಯೇ ನಮ್ಮ ನಿಜ ಗುಣ ಎಂದುಕೊಂಡರೆ ಮತ್ತು ಅದರಿಂದ ಹೊರಬರಲಾಗದಿದ್ದರೆ, ಆಗ ನಾವು ನಮ್ಮಲ್ಲಿರುವ ಸಮಗ್ರ ರಾಗ ಮತ್ತು ದ್ವೇಷಗಳನ್ನು ಉಪಯೋಗಿಸುತ್ತಾ ಆ ಗುಣವನ್ನೇ ಪೋಷಿಸಿ ಪರಿಪೂರ್ಣಗೊಳಿಸುವ ಯತ್ನದಲ್ಲಿ ಎಂದೂ ನಿತ್ರಾಣರಾಗುವುದಿಲ್ಲ, ಏಕೆಂದರೆ ಆ ಗುಣವೊಂದೇ ನಮ್ಮಲ್ಲಿ ಉಳಿದಿರುವುದು;ಈ ಮುಪ್ಪಾಗುತ್ತಿರುವ ಸಂಸ್ಕೃತಿ ಮತ್ತು ಇದರ ಮಂಕಾದ ಮತ್ತು ಘೋರವಾದ ಗಂಭೀರತೆಯ ಮೇಲೆ ಸಂಜೆಯ ನೀಲಿಯ ರಂಗಿಗೆ ಚಿನ್ನದ ಮೆರಗನ್ನು ಹೊದಿಸಿದ ರೀತಿಯಲ್ಲಿ ಆ ಗುಣದ ಶೋಭೆಯ ಅಣಕದಂತೆ ವಿರಮಿಸಲಿ.
!" (ಬಿಯಾಂಡ್ ಗುಡ್ ಎಂಡ್ ಈವಿಲ್, $227 )
ಬೆಂಜಮಿನ್ ಫ್ರಾಂಕ್ಲಿನ್ ರ ಪ್ರಕಾರ ಮೌಲ್ಯಗಳು
[ಬದಲಾಯಿಸಿ]ಇವು ಬೆಂಜಮಿನ್ ಫ್ರಾಂಕ್ಲಿನ್ "ನೈತಿಕ ಪರಿಪೂರ್ಣತೆ" ಯನ್ನು ವೃದ್ಧಿಸಲು ಉಪಯೋಗಿಸಿದ ಗುಣಗಳು[೯]. ಪ್ರತಿದಿನವೂ ಈ ಗುಣಮೌಲ್ಯಗಳಿಗೆ ಅನುಗುಣವಾಗಿ ಎಷ್ಟರಮಟ್ಟಿಗೆ ಸಾಗಿದರೆಂದು ಅಳೆಯುವ ಸಲುವಾಗಿ ಒಂದು ಪುಸ್ತಕದಲ್ಲಿ ದೈನಿಕ ಪಟ್ಟಿಯನ್ನೇ ಬರೆದಿಟ್ಟುಕೊಂಡಿದ್ದರು.
ಅವುಗಳು ಬೆಂಜಮಿನ್ ಫ್ರಾಂಕ್ಲಿನ್'ಸ್ ಆಟೋಬಯಾಗ್ರಫಿ ಪುಸ್ತಕದ ಮೂಲಕ ಜನರಿಗೆ ತಿಳಿದುಬಂದು, ವಿಶ್ವದಾದ್ಯಂತ ಹಲವಾರು ಜನರಿಗೆ ಪ್ರೋತ್ಸಾಹದಾಯಕವಾಗಿದೆ.
- ಆತ್ಮನಿಗ್ರಹ: ಆಲಸ್ಯವಾಗುವ ಮಟ್ಟಕ್ಕೆ ತಿನ್ನಬೇಡ. ಉನ್ಮತ್ತನಾಗುವ ಮಟ್ಟಕ್ಕೆ ಕುಡಿಯಬೇಡ.
- ಮೌನ: ನಿನಗೆ ಅಥವಾ ಇತರರಿಗೆ ಉಪಯೋಗವಾಗದಿರುವ ಮಾತುಗಳನ್ನು ಆಡಬೇಡ. ವೃಥಾ ಹರಟುವುದನ್ನು ಬಿಡು.
- ಕ್ರಮ: ನಿನ್ನ ಎಲ್ಲಾ ವಸ್ತುಗಳಿಗೂ ತಮ್ಮದೇ ಆದ ಜಾಗಗಳಿರಲಿ. ನಿನ್ನ ವ್ಯವಹಾರದ ಪ್ರತಿ ಅಂಗಕ್ಕೂ ತನ್ನದೇ ಆದ ಸಮಯವಿರಲಿ.
- ನಿರ್ಧಾರ: ನೀನು ಮಾಡಬೇಕಾದುದನ್ನು ಮಾಡಿಯೇ ತೀರುವುದಾಗಿ ನಿರ್ಧರಿಸು. ನಿರ್ಧರಿಸುದುದನ್ನು ತಪ್ಪದೆ ನೆರವೇರಿಸು.
- ಮಿತವ್ಯಯ: ನಿನಗಾಗಿ ಅಥವಾ ಇತರರಿಗಾಗಿ ಒಳಿತನ್ನು ಉಂಟುಮಾಡುವುದಕ್ಕಲ್ಲದೆ ಯಾವುದೇ ಕಾರಣಕ್ಕೂ ಖರ್ಚು ಮಾಡಬೇಡ; ಎಂದರೆ, ಯಾವುದನ್ನೂ ವ್ಯರ್ಥಮಾಡಬೇಡ.
- ಉದ್ಯೋಗ: ಸಮಯ ಕಳೆಯಬೇಡ. ಯಾವಾಗಲೂ ಏನಾದರೂ ಉಪಯುಕ್ತವಾದ ಕೆಲಸದಲ್ಲಿ ನಿರತನಾಗಿರು. ಬೇಡವಾದ ಎಲ್ಲಾ ಚಟುವಟಿಕೆಗಳನ್ನೂ ತೊರೆದುಬಿಡು.
- ಪ್ರಾಮಾಣಿಕತೆ: ಯಾವುದೇ ನೋವಾಗುವಂತಹ ಮೋಸವನ್ನು ಎಸಗಬೇಡ. ಮುಗ್ಧತಾಭಾವದಿಂದ ಮತ್ತು ನ್ಯಾಯಪರವಾಗಿ ಆಲೋಚಿಸು; ಮತ್ತೆ ಮಾತನಾಡಿದರೆ, ಅಂತೆಯೇ ಮಾತನಾಡು.
- ನ್ಯಾಯ: ಯಾರನ್ನೂ ಘಾಸಿಗೊಳಿಸುವುದರ ಮೂಲಕ, ಅವರಿಗೆ ದ್ರೋಹ ಮಾಡಬೇಡ ಮತ್ತು ಅವರಿಗೆ ಸಲ್ಲಬೇಕಾದ ಸವಲತ್ತುಗಳು ಅವರಿಗೆ ಸೇರುವಂತೆ ಮಾಡುವುದು ನಿನ್ನ ಕರ್ತವ್ಯ.
- ಸಮಚಿತ್ತತೆ: ಅತಿಯಾದುದನ್ನು ವರ್ಜಿಸು. ಅವು ಯಾವ ಮಟ್ಟದವರೆಗೂ ಅರ್ಹವೋ ಅಲ್ಲಿಯವರೆಗೂ ನೋವುಗಳನ್ನು ದ್ವೇಷಿಸುವುದನ್ನು ಸೈರಿಸು.
- ಶುಚಿತ್ವ: ದೈಹಿಕ, ಬಟ್ಟೆಗಳ ಅಥವಾ ವಾಸಸ್ಥಳದ ಯಾವುದೇ ಕೊಳಕನ್ನು ಸಹಿಸದಿರು.
- ಶಾಂತಿ: ಸಣ್ಣಸಣ್ಣ ವಿಚಾರಗಳಿಗೆ ಅಥವಾ ಸರ್ವೇಸಾಮಾನ್ಯವಾದ ಆಕಸ್ಮಿಕಗಳಿಗೆ ಅಥವಾ ತಪ್ಪಿಲಾಗದಂತಹ ಅವಘಡಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡ.
- ಪವಿತ್ರತೆ: ಆರೋಗ್ಯದ ಅಥವಾ ಸಂತಾನದ ಕಾರಣಗಳ ಹೊರತಾಗಿ ಸುರತದಲ್ಲಿ ಅಪರೂಪವಾಗಿ ತೊಡಗಿಕೊಳ್ಳು; ನಿನ್ನ ಅಥವಾ ಇನ್ನೊಬ್ಬರ ಶಾಂತಿ ಅಥವಾ ಕೀರ್ತಿಯನ್ನು ಮಂಕಾಗಿಸುವ, ನಿತ್ರಾಣಗೊಳಿಸುವ ಅಥವಾ ನೋಯಿಸುವ ಕ್ರಿಯೆಗಳು ವರ್ಜ್ಯ.
- ವಿನಯತೆ: ಜೀಸಸ್ ಮತ್ತು ಸಾಕ್ರೇಟಿಸ್ ರನ್ನು ಅನುಕರಿಸು.
ಐನ್ ರಾಂಡ್ ರ ತತ್ವಶಾಸ್ತ್ರದಲ್ಲಿನ ಮೌಲ್ಯಗಳು:ಉದ್ದಿಶ್ಯತೆ
[ಬದಲಾಯಿಸಿ]ಐನ್ ರಾಂಡ್ ತನ್ನ ನೀತಿಶಾಸ್ತ್ರವಾದ "ಉದ್ದೇಶದ ನೀತಿಶಾಸ್ತ್ರ"ವು ಒಂದೇ ಗಾದೆಮಾತಿನಲ್ಲಿ ಅಡಗಿದೆ ಎಂದು ಹೇಳುತ್ತಿದ್ದರು; ಜೀವನ ಅಸ್ತಿತ್ವದಲ್ಲಿದೆ - ಮತ್ತು ಇರುವುದು ಒಂದೇ ಆಯ್ಕೆ: ಜೀವಿಸುವುದು. ಮತ್ತು ಮಿಕ್ಕದ್ದೆಲ್ಲವೂ ಇದರಿಂದಲೇ ಮುಂದುವರಿಯುತ್ತದೆಂದು. ಮತ್ತು ಜೀವಿಸಲು ಮನುಜನು ಜೀವನದಲ್ಲಿ ವೃದ್ಧಿಗೊಳಿಸಿ, ಸಾಧಿಸುವಂತಹ ಮೂರು ಮೂಲಭೂತ ಗುಣಗಳನ್ನು ಹೊಂದಿರಬೇಕು: ಕಾರಣ,[೧೦] ಗುರಿ ಮತ್ತು ಆತ್ಮಗೌರವ. ಮೌಲ್ಯವೆಂದರೆ "ಯಾವುದನ್ನು ವ್ಯಕ್ತಿಯು ಪಡೆಯಲು ಮತ್ತು/ಅಥವಾ ಇಟ್ಟುಕೊಳ್ಳಲು ಕ್ರಿಯಾಶೀಲನಾಗುತ್ತನೋ.... ಮತ್ತು ಆ ಮೌಲ್ಯ(ಗಳು) ಯಾವ ಕ್ರಿಯೆ(ಗಳ)ಯ ಮೂಲಕ ವ್ಯಕ್ತಿಯು ಹೊಂದುವನೋ ಮತ್ತು/ಅಥವಾ ಇರಿಸಿಕೊಳ್ಳುವನೋ." ವಸ್ತುನಿಷ್ಠವಾದ ನೀತಿಶಾಸ್ತ್ರದಲ್ಲಿನ ಪ್ರಮುಖ ಗುಣವೇ ವಿವೇಚನೆ, ರಾಂಡ್ ಅದನ್ನು "ವಿವೇಚನಾಗುಣ ವು ವ್ಯಕ್ತಿಯು ಅರಿವನ್ನು ಬೆಳೆಸಿಕೊಳ್ಳಲು ಇರುವ ಏಕೈಕ ಮಾರ್ಗ, ವ್ಯಕ್ತಿಯ ಮೌಲ್ಯಗಳ ಏಕೈಕ ನಿರ್ಣಾಯಕ ಮತ್ತು ವ್ಯಕ್ತಿಯನ್ನು ಕ್ರಿಯಾಶೀಲನಾಗಿಸುವ ಏಕೈಕ ಮಾರ್ಗದರ್ಶಿ ಎಂದು ಗುರುತಿಸುವುದು ಮತ್ತು ಒಪ್ಪಿಕೊಳ್ಳುವುದು ಸೂಕ್ತವೆಂದು ಅಭಿಪ್ರಾಯಪಟ್ಟರು.[೧೧] ಪ್ರೀತಿಯಿಂದ ಒಂದೇ ಸಮನೆ ಕ್ರಿಯಾಶೀಲರಾದಾಗ ಮಾತ್ರ ಈ ಮೌಲ್ಯಗಳನ್ನು ಪಡೆಯುವುದು ಸಾಧ್ಯ ಮತ್ತು ಈ ಮೌಲ್ಯಗಳು ಆ ಮೂಲಭೂತ ಗುಣಗಳನ್ನು ಪಡೆಯಲು ಬೇಕಾದ ನಿಯಮಗಳು.[೧೨] ಐನ್ ರಾಂಡ್ ಏಳು ಗುಣಗಳನ್ನು ವಿವರಿಸುತ್ತಾರೆ: ವಿವೇಕಶೀಲತೆ, ಉತ್ಪಾದಕತೆ, ಹೆಮ್ಮೆ, ಸ್ವಾತಂತ್ರ್ಯ,ಸರಳತೆ, ಪ್ರಾಮಾಣಿಕತೆ ಮತ್ತು ನ್ಯಾಯಪರತೆ. ಮೊದಲ ಮೂರು ಮೂರು ಪ್ರಮುಖ ಮೌಲ್ಯಗಳನ್ನು ಪ್ರತಿನಿಧಿಸುವುವಾಗಿದ್ದು ಅವು ಮೂರು ಮೂಲಭೂತ ಗುಣಗಳಿಗೆ ಹೊಂದುತ್ತವೆ, ಮತ್ತು ಕಡೆಯ ನಾಲ್ಕನ್ನು ವಿವೇಚನಾಶೀಲತೆಯ ಮೌಲ್ಯಗಳಿಂದ ಪಡೆದಂತಹವು. ಮೌಲ್ಯಗಳೇ ಅಂತಿಮವಲ್ಲ ಎನ್ನುವ ಈಕೆ ಗುಣವು ತನಗೆ ತಾನೇ ಬಹುಮಾನವೂ ಆಗದು, ಅಂತೆಯೇ ದುಷ್ಟಶಕ್ತಿಗಳಿಗೆ ಬಲಿಗಾಗಿ ಇಟ್ಟಂತಹ ಮೇವೂ ಆಗದು, ಬದುಕು ಗುಣಗಳಿಗೆ ದೊರೆತ ಬಹಮಾನವೆಂದೂ-ಮತ್ತು ಸಂತೋಷವು ಜೀವನದ ಬಹುಮಾನ ಮತ್ತು ಗುರಿ ಎಂದು ಅಭಿಪ್ರಾಯಪಟ್ಟಿದ್ದಾರೆ. ಮನುಜನಿಗೆ ಒಂದೇ ಮೂಲ ಅವಕಾಶವಿದೆ: ಯೋಚಿಸುವುದು ಅಥವಾ ಬಿಡುವುದು ಮತ್ತು ಇದೇ ಅವನ ಗುಣದ ಅಳತೆಗೋಲು. ನೈತಿಕ ಪರಿಪೂರ್ಣತೆಯು ಒಂದು ಭಿನ್ನರಹಿತ ವಿವೇಚನೆ-ಬುದ್ಧಿಶಕ್ತಿಯ ಅಳತೆಗೋಲಲ್ಲ, ಅದರೆ ಸಂಪೂರ್ಣ ಮತ್ತು ಆಬಾಧಿತವಾಗಿ ನಿಮ್ಮ ಬುದ್ಧಿಯನ್ನು ಉಪಯೋಗಿಸುವಂತಹುದು; ನಿಮ್ಮ ಅರಿವಿನ ಅಳತೆಗೋಲಲ್ಲ, ಆದರೆ ವಿವೇಚನಾಶಕ್ತಿಯನ್ನು ಸರ್ವಶ್ರೇಷ್ಠವೆಂದು ಒಪ್ಪಿಕೊಳ್ಳುವಿಕೆಯದು.[೧೩]
ಗುಣ ಮತ್ತು ದೋಷ
[ಬದಲಾಯಿಸಿ]ಗುಣದ ವಿರುದ್ಧಪದವೇ ದುರ್ಗುಣ. ದುರ್ಗುಣಗಳನ್ನು ಆಯೋಜಿಸುವ ರೀತಿಗಳಲ್ಲಿ ಒಂದು ವಿಧವೆಂದರೆ ಮೌಲ್ಯಗಳನ್ನು ಭ್ರಷ್ಟವಾಗಿಸುವುದು.
ಆದರೆ, ಅರಿಸ್ಟಾಟಲ್ ಗಮನಿಸಿದಂತೆ, ಗುಣಗಳು ಹಲವಾರು ವೈರುಧ್ಯಗಳನ್ನು ಹೊಂದಿರಬಹುದು. ಮೌಲ್ಯಗಳನ್ನು ಎರಡು ಪರಾಕಾಷ್ಠೆಗಳ ಮಧ್ಯದ ಸ್ಥಿತಿಯೆಂದು ಪರಿಗಣಿಸಬಹುದು, ಲ್ಯಾಟಿನ್ ಗಾದೆಯೇ ಹೇಳುವಂತೆ ಇನ್ ಮೀಡಿಯೋ ಸ್ಟಾಟ್ ವರ್ಟಸ್ - ಕೇಂದ್ರದಲ್ಲಿಹುದು ಗುಣಮೌಲ್ಯವು. ಉದಾಹರಣೆಗೆ, ಹೇಡಿತನ ಮತ್ತು ಒಡ್ಡತನ ಎರಡೂ ಧೈರ್ಯದ ವಿರುದ್ಧಗಳೇ; ವಿವೇಕಕ್ಕೆ ಅತಿ-ಜಾಗರೂಕತೆ ಮತ್ತು ಸರಿಯಾಗಿ ಎಚ್ಚರದಿಂದಿಲ್ಲದಿರುವಿಕೆ ಎರಡೂ ವೈರುಧ್ಯಗಳೇ. ಅದಕ್ಕಿಂತಲೂ "ಆಧುನಿಕ" ಮೌಲ್ಯವಾದ ತಾಳ್ಮೆಯು, ಸಂಕುಚಿತ ಮನಸ್ಸು ಮತ್ತು ಕೋಮಲಹೃದಯಗಳೆಂದ ಎರಡು ವಿಪರೀತಗಳ ಮಧ್ಯದ ಸ್ಥಿತಿಯೆನ್ನಬಹುದು. ಆದ್ದರಿಂದ ದುರ್ಗುಣಗಳನ್ನು ಮೌಲ್ಯಗಳ ಅಥವಾ ಗುಣಗಳ ವಿರುದ್ಧದವೆಂದು ಗುರುತಿಸಬಹುದು - ಆದರೆ ಒಂದಕ್ಕೊಂದು ಹೋಲಿಕೆಯಿಲ್ಲದ ರೀತಿಯಲ್ಲಿ ಮೌಲ್ಯಗಳಿಗೆ ವಿವಿಧ ರೀತಿಯ ವೈರುಧ್ಯಗಳಿರಬಹುದೆಂಬ ಎಚ್ಚರದ ಮಾತಿನೊಂದಿಗೆ. ತಾಳ್ಮೆ ಒಂದು ಗುಣವಲ್ಲ. ಮೇಲ್ಕಾಣಿಸಿದಂತೆ, ಮೌಲ್ಯ ಅಥವಾ ಗುಣವೆಂದರೆ ಯಾವಾಗಲೂ ಒಳ್ಳೆಯದೆಂದೇ ಅರ್ಥ. ತಾಳ್ಮೆ ಒಳಿತೂ ಅಗಬಹುದು, ಕೆಡಕೂ ಸಹ. ಉದಾಹರಣೆಗೆ, ಅನ್ಯಾಯವನ್ನು ತಾಳ್ಮೆಯಿಂದ ಸಹಿಸುವುದನ್ನು ಯಾರೂ ಒಳ್ಳೆಯ ಗುಣವೆಂದು ಪರಿಗಣಿಸುವುದಿಲ್ಲ.
ಆಧುನಿಕ ಮನಃಶಾಸ್ತ್ರದಲ್ಲಿ ಮೌಲ್ಯ
[ಬದಲಾಯಿಸಿ]ಸಕಾರಾತ್ಮಕ ಮನಃಶಾಸ್ತ್ರ ವಿಭಾಗದ ಇಬ್ಬರು ಪ್ರಮುಖ ಸಂಶೋಧಕರಾದ ಕ್ರಿಸ್ತೋಫರ್ ಪೀಟರ್ಸನ್ ಮತ್ತು ಮಾರ್ಟಿನ್ ಸೆಲಿಗ್ಮನ್ ಮನಶ್ಶಾಸ್ತ್ರವು ಆರೋಗ್ಯಕರ ಮತ್ತು ದೃಢವಾದ ವ್ಯಕ್ತಿತ್ವವನ್ನು ಬೆಳೆಸುವತ್ತ ಗಮನ ಹರಿಸುವ ಬದಲು ಮನಸ್ಸು ದೋಷಯುಕ್ತವಾಗಿ ಕೆಲಸ ಮಾಡುವುದರ ಬಗ್ಗೆ ಹೆಚ್ಚು ಗಮನ ಕೊಡುವಂತಹದನ್ನು ಗಮನಿಸಿ, ಮನೋವಿಜ್ಞಾನದಲ್ಲಿನ ಅವಿಭಾಜ್ಯ ಅಂಗವಾದ ಈ ನ್ಯೂನತೆಯನ್ನು ಹೋಗಲಾಡಿಸುವ ಸಲುವಾಗಿ "ವಿಶಿಷ್ಟ ಸಾಮರ್ಥ್ಯಗಳು ಮತ್ತು ಮೌಲ್ಯಗಳು"[೧೪] ಎಂಬ ಪಟ್ಟಿಯನ್ನು ತಯಾರಿಸತೊಡಗಿದರು. ಮೂರು ವರ್ಷಗಳ ಅಧ್ಯಯನದ ನಂತರ "ವಿವಿಧ ಸಂಸ್ಕೃತಿಗಳಲ್ಲಿ ಬಹಳ ಆಶ್ಚರ್ಯಕರವಾಗಿ ಒಂದೇ ರೀತಿಯಲ್ಲಿ ಕಂಡುಬರುವ ಮತ್ತು ಐತಿಹಾಸಿಕ ಹಾಗೂ ಸಾಂಸ್ಕೃತಿಕವಾಗಿ ವಿವಿಧ ಸಂಸ್ಕೃತಿಗಳು ಏಕಕೇಂದ್ರಿತವಾಗುವುದನ್ನು ಬಲವಾಗಿ ಸೂಚಿಸುವ" ಮೌಲ್ಯಗಳ ಆರು ಸ್ಥೂಲ ಕ್ಷೇತ್ರಗಳನ್ನು ಕಂಡುಹಿಡಿದರು.[೧೫] ಗುಣಗಳ ಈ ಆರು ವಿಧಗಳು ಕ್ರಮಗಳೆಂದರೆ ಧೈರ್ಯ, ನ್ಯಾಯ, ಮಾನವೀಯತೆ,ಆತ್ಮನಿಗ್ರಹ, ಉತ್ಕೃಷ್ಟತೆ ಮತ್ತು ಜಾಣತನ.[೧೬]
ಇವನ್ನೂ ಗಮನಿಸಿ
[ಬದಲಾಯಿಸಿ]ಟಿಪ್ಪಣಿಗಳು
[ಬದಲಾಯಿಸಿ]- ↑ ೧.೦ ೧.೧ ೧.೨ http://www.jewishencyclopedia.com/view.jsp?artid=699&ಪತ್ರ=C&ಶೋಧನೆ=ಸಹಾನುಭೂತಿ[ಶಾಶ್ವತವಾಗಿ ಮಡಿದ ಕೊಂಡಿ] | ದ ಜ್ಯೂಯಿಷ್ ಎನ್ ಸೈಕ್ಲೋಪೀಡಿಯಾ
- ↑ ಬ್ಯಾಬಿಲೋನಿಯನ್ ಟ್ಯಾಲ್ಮಡ್, ಟ್ರಾಕ್ಟೇಟ್ ಶಬ್ಬತ್ 31 ಅ. ಇದನ್ನೂ ನೋಡಿರಿ ದ ಎಥಿಕ್ ಆಫ್ ರೆಸಿಪ್ರೋಸಿಟಿ ಅಥವಾ "ದ ಗೋಲ್ಡನ್ ರೂಲ್."
- ↑ http://www.usc.edu/dept/MSA/fundamentals/tawheed/conceptofgod.html Archived 2009-02-21 ವೇಬ್ಯಾಕ್ ಮೆಷಿನ್ ನಲ್ಲಿ. | ದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ
- ↑ http://www.milligazette.com/Archives/15122001/1512200144.html[ಶಾಶ್ವತವಾಗಿ ಮಡಿದ ಕೊಂಡಿ]
- ↑ ೫.೦ ೫.೧ ೫.೨ http://www.buddhanet.net/e-learning/buddhism/bs-s15.htm Buddhist Studies for Secondary Students, Unit 6: The Four Immeasurables
- ↑ http://buddhism.kalachakranet.org/immeasurables_love_compassion_equanimity_rejoicing.html Archived 2006-08-19 ವೇಬ್ಯಾಕ್ ಮೆಷಿನ್ ನಲ್ಲಿ. ಬೌದ್ಧಧರ್ಮದ ಬಗ್ಗೆ ಒಂದು ನೋಟ, ನಾಲ್ಕು ಅಗಣಿತಗಳು: ಪ್ರೀತಿ, ಸಹಾನುಭೂತಿ, ಆನಂದ ಮತ್ತು ಸಮಚಿತ್ತತೆ
- ↑ ಬುದ್ಧವಂಶ, ಅಧ್ಯಾಯ 2.
ಪರಮಿ ಯ ತೇರಾವಾದ ಚಿಂತನೆಯಂತೆ ಬುದ್ಧವಂಶದ ಅಂತಃಸತ್ವವನ್ನು ತಿಳಿಸುವ ಆನ್-ಲೈನ್ ಆಕರಗಳಿಗಾಗಿ , ನೋಡಿ ಬೋಧಿ (2005).
ಪಾಳಿ ಸಾಹಿತ್ಯದಲ್ಲಿ ಇತರ ುದಾಹರಣೆಗಳ ಪ್ರಕಾರ, ರೈಸ್ ಡೇವಿಡ್ಸ್ ಮತ್ತು ಸ್ಟೀಡ್,(1921-25), ಪುಟ. 454, ಎಂಟ್ರಿ ಫಾರ್ "ಪರಮಿ," Archived 2012-06-29 at Archive.is (ಪುಸ್ಥಾಪನೆ 2007-06-24)ಉದಾಹರಿಸುವುದು ಜಾತಕ 1.73 ಮತ್ತು ಧರ್ಮಪಾದ ಅತ್ತಕಥಾ 1.84 . ಬೋಧಿಯಲ್ಲಿ ಆಚಾರ್ಯ ಧರ್ಮಪಾದರ ಪ್ರಬಂಧಗಳಾದ ಕಾರ್ಯಪೀಠಿಕಾ-ಅತ್ತಕಥಾ ಮತ್ತು ಬ್ರಹ್ಮಜಾಲ ಸುತ್ತ ಅಡಿಟಿಪ್ಪಣಿ(ಟೀಕೆ )ಗಳ ಉಲ್ಲೇಖವೂ ಇದೆ. - ↑ ಲುನ್ಯು 2/1, Archived 2007-09-27 ವೇಬ್ಯಾಕ್ ಮೆಷಿನ್ ನಲ್ಲಿ. tr. ಜೇಮ್ಸ್ ಲೆಗ್ಗೆ
- ↑ ಫ್ರಾಂಕ್ಲಿನ್ಸ್ 13 ವರ್ಚ್ಯೂಸ್ ಫ್ರಾಂಕ್ಲಿನ್ಸ್ ಆಟೋಬಯಾಗ್ರಫಿಯಿಂದ ಪಡೆದ ಅಂಶಗಳು, ಸಂಗ್ರಹ ಪಾಲ್ ಫೋರ್ಡ್.
- ↑ ಎಪಿಸ್ಟೆಮಾಲಜಿ: ರೀಸನ್, ಆಬ್ಜೆಕ್ಟಿವಿಸಮ್ (ಐನ್ ರಾಂಡ್)
- ↑ ರಾಂಡ್. ಐನ್ ದ ವರ್ಚ್ಯೂ ಆಫ್ ಸೆಲ್ಫಿಷ್ ನೆಸ್: ಎ ನ್ಯೂ ಕಾನ್ಸೆಪ್ಟ್ ಆಫ್ ಇಗೋಯಿಸಮ್ , ಪುಟ 27
- ↑ ಗಾಟ್ ಹೆಲ್ಫ್, ಅಲನ್, ಆನ್ ಐನ್ ರಾಂಡ್ ; ಪುಟ 86
- ↑ ರಾಂಡ್, ಐನ್ (1961) ಫಾರ್ ದ ನ್ಯೂ ಇಂಟೆಲೆಕ್ಚುಯಲ್ ಗಾಲ್ಟ್'ಸ್ ಸ್ಪೀಚ್, "ಫಾರ್ ದ ನ್ಯೂ ಇಂಟೆಲೆಕ್ಚುಯಲ್: ದ ಫಿಲಾಸಫಿ ಆಫ್ ಐನ್ ರಾಂಡ್," ಪುಟ 131, 178.
- ↑ ಪೀಟರ್ ಸನ್, ಸಿ., ಮತ್ತು ಸೆಲಿಗ್ಮನ್, ಎಂ.ಇ.ಪಿ. (2004) ಕ್ಯಾರೆಕ್ಟರ್ ಸ್ಟ್ರೆಂತ್ಸ್ ಎಂಡ್ ವರ್ಚ್ಯೂಸ್: ಎ ಹ್ಯಾಂಡ್ ಬುಕ್ ಎಂಡ್ ಕ್ಲ್ಯಾಸಿಫಿಕೇಷನ್ . ಆಕ್ಸ್‌ಫರ್ಡ್ ಯೂನಿವರ್ಸಿಟ್ ಪ್ರೆಸ್ (ISBN 0-19-516701-5)
- ↑ (ಪೀಟರ್ ಸನ್, ಸಿ., ಮತ್ತು ಸೆಲಿಗ್ಮನ್, ಎಂ.ಇ.ಪಿ. (2004) ಕ್ಯಾರೆಕ್ಟರ್ ಸ್ಟ್ರೆಂತ್ಸ್ ಎಂಡ್ ವರ್ಚ್ಯೂಸ್: ಎ ಹ್ಯಾಂಡ್ ಬುಕ್ ಎಂಡ್ ಕ್ಲ್ಯಾಸಿಫಿಕೇಷನ್ . ಆಕ್ಸ್‌ಫರ್ಡ್ ಯೂನಿವರ್ಸಿಟ್ ಪ್ರೆಸ್. ಪುಟ 36. (ISBN 0-19-516701-5)
- ↑ (ಪೀಟರ್ ಸನ್, ಸಿ., ಮತ್ತು ಸೆಲಿಗ್ಮನ್, ಎಂ.ಇ.ಪಿ. (2004) ಕ್ಯಾರೆಕ್ಟರ್ ಸ್ಟ್ರೆಂತ್ಸ್ ಎಂಡ್ ವರ್ಚ್ಯೂಸ್: ಎ ಹ್ಯಾಂಡ್ ಬುಕ್ ಎಂಡ್ ಕ್ಲ್ಯಾಸಿಫಿಕೇಷನ್ . ಆಕ್ಸ್‌ಫರ್ಡ್ ಯೂನಿವರ್ಸಿಟ್ ಪ್ರೆಸ್. ಪುಟ. 36-39. (ISBN 0-19-516701-5)
ಹೊರಗಿನ ಕೊಂಡಿಗಳು
[ಬದಲಾಯಿಸಿ]- An overview of Aristotle's ethics, including an explanation and chart of ವಿರ್ತುಎಸ್ Archived 2009-05-08 ವೇಬ್ಯಾಕ್ ಮೆಷಿನ್ ನಲ್ಲಿ.
- Virtue Epistemology
- Virtue, a Catholic perspective
- Virtue, a Buddhist perspective
- Greek Virtue (quotations)
- Peterson & Seligman findings on virtues and strengths (landmark psychological study)
- Illustrated account of the images of the Virtues in the Thomas Jefferson Building, Library of Congress, Washington DC Archived 2016-10-11 ವೇಬ್ಯಾಕ್ ಮೆಷಿನ್ ನಲ್ಲಿ.
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಆಗಸ್ಟ್ 2021
- ಶಾಶ್ವತವಾಗಿ ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Webarchive template archiveis links
- Pages using ISBN magic links
- Articles with hatnote templates targeting a nonexistent page
- Articles containing Ancient Greek (to 1453)-language text
- Articles with unsourced statements from November 2009
- Articles with invalid date parameter in template
- Articles containing Chinese-language text
- ನೀತಿಶಾಸ್ತ್ರದ ಮೂಲಭೂತ ವಿಷಯಗಳು
- ವೈಯಕ್ತಿಕ ಲಕ್ಷಣಗಳು
- ಸುಶೀಲತೆ/ಮೌಲ್ಯ
- ನೀತಿಶಾಸ್ತ್ರದ ಚಿಂತನೆಗಳು