ವಿಷಯಕ್ಕೆ ಹೋಗು

ಸುರಂಗಾ ಉದರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸುರಂಗಾ ಉದರಿ
ವಿದ್ಯಾಭ್ಯಾಸಶ್ರೀ ಶಾರಿಪುತ್ರ ಮಹಾ ವಿದ್ಯಾಲಯ, ಅಹಂಗಾಮ
ಉದ್ಯೋಗಗಳುಗ್ರಾಫ಼ಿಕ್ ಡಿಸೈನರ್, ಪತ್ರಕರ್ತೆ, ವಾರ್ತಾ ನಿರೂಪಕಿ ಹಾಗೂ ಪರಿಸರವಾದಿ
ಹೆಸರುವಾಸಿಶ್ರಿಲಂಕಾದ ಮೊದಲ ಸಾಂಕೇತಿಕ ಭಾಷಾ ನಿರೂಪಕಿ

ಸುರಂಗಾ ಉದರಿ ಅವರು ಶ್ರೀಲಂಕಾದ ಗ್ರಾಫಿಕ್ ಡಿಸೈನರ್, ಪತ್ರಕರ್ತೆ, ವರದಿಗಾರ್ತಿ ಮತ್ತು ಪರಿಸರ ಕಾರ್ಯಕರ್ತೆ. ಅವರನ್ನು ಶ್ರೀಲಂಕಾದ ಮೊದಲ ಶ್ರವಣಹೀನ ಮಹಿಳಾ ಪತ್ರಕರ್ತೆ ಎಂದು ವ್ಯಾಪಕವಾಗಿ ಪರಿಗಣಿಸಲಾಗಿದೆ. [] []

ಜೀವನ ಚರಿತ್ರೆ

[ಬದಲಾಯಿಸಿ]

ಅವರು ಐದು ಮಕ್ಕಳಲ್ಲಿ ಒಬ್ಬರಾಗಿ ಜನಿಸಿದರು ಮತ್ತು ಅವರ ಇಬ್ಬರು ಒಡಹುಟ್ಟಿದವರು ಶ್ರವಣಹೀನರಾಗಿ ಹುಟ್ಟಿದ್ದಾರೆಂದು ವರದಿಯಾಗಿದೆ. ಅವರು ದಕ್ಷಿಣ ಪ್ರಾಂತ್ಯದ ಗಾಲೆ ಜಿಲ್ಲೆಯ ಅಹಂಗಾಮಾದಲ್ಲಿರುವ ಶ್ರೀ ಶಾರಿಪುತ್ರ ಮಹಾ ವಿದ್ಯಾಲಯದಲ್ಲಿ ತಮ್ಮ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಪೂರ್ಣಗೊಳಿಸಿದರು. ಅವರು ಅಹಂಗಾಮ ಪಟ್ಟಣದಲ್ಲಿ ವಾಸಿಸುತ್ತಿದ್ದಾರೆ. []

ವೃತ್ತಿಜೀವನ

[ಬದಲಾಯಿಸಿ]

ಸುರಂಗಾ ಅವರು ಗ್ರಾಫಿಕ್ ಡಿಸೈನರ್ ಆಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು ಮತ್ತು ಲೇಕ್ ಹೌಸ್‌ನಲ್ಲಿ ಕಂಪ್ಯೂಟರ್ ಸಾಫ್ಟ್‌ವೇರ್‌ನಲ್ಲಿ ಡಿಪ್ಲೊಮಾ ಪಡೆದರು. ಅವರು ಸುಮಾರು ಎಂಟು ವರ್ಷಗಳ ಕಾಲ ಖಾಸಗಿ ಸಂಸ್ಥೆಯಲ್ಲಿ ಗ್ರಾಫಿಕ್ ಡಿಸೈನರ್ ಆಗಿ ಕೆಲಸ ಮಾಡಿದರು. COVID-೧೯ ರ ಸಮಯದಲ್ಲಿ ಅವರನ್ನು ಕೆಲಸದಿಂದ ವಜಾಗೊಳಿಸಲಾಯಿತು. [] ಪತ್ರಿಕೋದ್ಯಮ ಕ್ಷೇತ್ರದಲ್ಲಿ ಶ್ರೀಲಂಕಾದ ಎಲ್ಲಾ ಪ್ರಮುಖ ಮಾಧ್ಯಮ ಸಂಸ್ಥೆಗಳು ಅವರ ಶ್ರವಣ ದೋಷದಿಂದಾಗಿ ಅವರಿಗೆ ಉದ್ಯೋಗಾವಕಾಶವನ್ನು ನೀಡಲು ನಿರಾಕರಿಸಿದ್ದರಿಂದ, ಮಾಧ್ಯಮ ಕ್ಷೇತ್ರದಲ್ಲಿ ಅವರು ಹಲವು ನಿರ್ಬಂಧಗಳು ಮತ್ತು ಅಡೆತಡೆಗಳನ್ನು ಎದುರಿಸಬೇಕಾಯಿತು. []

ಅವರು ಶ್ರೀಲಂಕಾ ಸೆಂಟ್ರಲ್ ಫೆಡರೇಶನ್ ಆಫ್ ಡೆಫ್‌ನಲ್ಲಿ ಉದ್ಯೋಗಿಯಾಗಿಯೂ, ಶ್ರೀಲಂಕಾದ ಶ್ರವಣಹೀನ ಮಹಿಳಾ ಸಂಘದ ಸಹಾಯಕ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸುತ್ತಾರೆ. []

ಸೆಪ್ಟೆಂಬರ್ ೨೦೨೦ ರಲ್ಲಿ, ಶ್ರೀಲಂಕಾ ಸೆಂಟ್ರಲ್ ಫೆಡರೇಶನ್ ಆಫ್ ಡೆಫ್ (SLCFD) ನ ಸಹೋದ್ಯೊಗಿಗಳು ಉದರಿ ಅವರನ್ನು "ವೈಬ್ರಂಟ್ ವಾಯ್ಸಸ್" ಕಾರ್ಯಕ್ರಮಕ್ಕೆ ನಾಮನಿರ್ದೇಶನ ಮಾಡಿದರು ಹಾಗೂ ಈ ಕಾರ್ಯಕ್ರಮದ ಅಡಿಯಲ್ಲಿ ಶ್ರೀಲಂಕಾ ಡೆವಲಪ್‌ಮೆಂಟ್ ಜರ್ನಲಿಸ್ಟ್ ಫೋರಮ್ (SDJF) ಕಡೆಯಿಂದ ಐದು ದಿನಗಳ ತರಬೇತಿ ಪಡೆದರು. []

"ವೈಬ್ರಂಟ್ ವಾಯ್ಸಸ್" ಕಾರ್ಯಕ್ರಮದಡಿಯಲ್ಲಿ, ಗ್ಯಾಲೆ ಜಿಲ್ಲೆಯ ಹಿಕ್ಕಡುವಾದಲ್ಲಿ ಮುಖಗವಸುಗಳ ಅಸಮರ್ಪಕ ವಿಲೇವಾರಿಯಿಂದ ಉಂಟಾದ ಸಮಸ್ಯೆಗಳ ಕುರಿತು ಅವರು ತಮ್ಮ ಮೊದಲ ಕಾರ್ಯಕ್ರಮವನ್ನು ವರದಿ ಮಾಡಿದರು. [] ಈ ವರದಿಯನ್ನು ಜನವರಿ ೨೦೨೧ ರಲ್ಲಿ ಡೆವಲಪ್‌ಮೆಂಟ್ ಜರ್ನಲಿಸ್ಟ್ ಫೋರಮ್ ಆಯೋಜಿತ ಮೀಡಿಯಾಕಾರ್ಪ್ಸ್ ವಾಚ್ ಎಂಬ ಸಾಪ್ತಾಹಿಕ ವರದಿಯಲ್ಲಿ ಪ್ರಕಟಿಸಲಾಯಿತು.[]

ಜನವರಿ ೧, ೨೦೨೧ ರಂದು ಅವರು ಶ್ರೀಲಂಕಾದ ಮೊದಲ ಶ್ರವಣಹೀನ ಮಹಿಳಾ ವರದಿಗಾರರಾಗಿ ಅಧಿಕೃತವಾಗಿ ಗುರುತಿಸಲ್ಪಟ್ಟರು. []

ಮುಖಗವಸುಗಳಿಂದ ಉಂಟಾಗುವ ಪರಿಸರ ಸಮಸ್ಯೆಗಳನ್ನು ಸಾಂಕೇತಿಕ ಭಾಷೆ ಮತ್ತು ಮೊಬೈಲ್ ಪತ್ರಿಕೋದ್ಯಮ ತಂತ್ರಗಳನ್ನು ಬಳಸಿಕೊಂಡು ವರದಿ ಮಾಡುವ ಮೂಲಕ ಅವರು ಜನಪ್ರಿಯರಾದರು. ಮೀಡಿಯಾಕಾರ್ಪ್ಸ್ ವಾಚ್‌ನಲ್ಲಿ ಅವರ ಸುದ್ದಿ ವರದಿಯು ಪ್ರಕಟವಾದ ನಂತರ, ಉದರಿಯವರಿಗೆ ಸಿರಸಾ ಟಿವಿಯಿಂದ ಉದ್ಯೋಗಾವಕಾಶ ದೊರೆಯಿತು. []

ಉಲ್ಲೇಖಗಳು

[ಬದಲಾಯಿಸಿ]
  1. 1 2 USAID (2021-04-05). "A Sri Lankan Woman Turns Her Disability into a Silver Bullet". Medium (in ಇಂಗ್ಲಿಷ್). Archived from the original on 2021-05-19. Retrieved 2021-05-19.
  2. 1 2 3 4 "Suranga Udari Recorded as the First Female Sign Language Reporter in Sri Lanka - Sri Lanka Development Journalists Forum". ldjf.org. Retrieved 2021-05-19.
  3. Nadeera, Dilshan (28 January 2021). "Lanka's first sign language journo makes her debut with report on pollution in Galle" (in ಅಮೆರಿಕನ್ ಇಂಗ್ಲಿಷ್). Retrieved 2021-05-19.
  4. 1 2 "The inspiring story of Suranga Udari". The Morning - Sri Lanka News (in ಅಮೆರಿಕನ್ ಇಂಗ್ಲಿಷ್). 2021-01-12. Retrieved 2021-05-19.
  5. Nadeera, Dilshan (28 January 2021). "Lanka's first sign language journo makes her debut with report on pollution in Galle" (in ಅಮೆರಿಕನ್ ಇಂಗ್ಲಿಷ್). Retrieved 2021-05-19.
  6. "Sri Lanka's first-ever sign language journalist makes her debut | Daily FT". www.ft.lk (in English). Retrieved 2021-05-19.{{cite web}}: CS1 maint: unrecognized language (link)