ವಿಷಯಕ್ಕೆ ಹೋಗು

ಸುಂಡೊಕು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಂಗ್ರಹಿಸಿದ ಆದರೆ ಓದದ ಪುಸ್ತಕಗಳು ಮತ್ತು ಪತ್ರಿಕೆಗಳ ರಾಶಿ.

ಸುಂಡೋಕು (ಜಪಾನಿ ಭಾಷೆː 積ん読 ಉಚ್ಛಾರಣೆː ತ್ಸುನ್–ಡೋ–ಕು) ಎಂದರೆ ಓದಲು ಉದ್ದೇಶಿಸಿ ಪುಸ್ತಕಗಳು ಅಥವಾ ಇತರೆ ಓದು ಸಾಮಗ್ರಿಗಳನ್ನು ಖರೀದಿಸಿ, ಅವುಗಳನ್ನು ಓದದೆ ಮನೆಯಲ್ಲೇ ರಾಶಿಯಾಗಿ ಸಂಗ್ರಹಿಸುವ ಪ್ರವೃತ್ತಿಯನ್ನು ಸೂಚಿಸುವ ಜಪಾನೀಸ್ ಪದವಾಗಿದೆ.[][][][] ಮುಂದೆ ಓದಬೇಕೆಂಬ ಉದ್ದೇಶದಿಂದ ಪುಸ್ತಕದ ಕಪಾಟಿನಲ್ಲಿ ಇಟ್ಟುಕೊಂಡಿರುವ ಆದರೆ ಇನ್ನೂ ಓದದ ಪುಸ್ತಕಗಳನ್ನೂ ಈ ಪದದಿಂದ ಸೂಚಿಸಲಾಗುತ್ತದೆ.

ಈ ಪದವು ಜಪಾನ್‌ನ ಮೇಜಿ ಯುಗದಲ್ಲಿ (1868–1912) ಜಪಾನೀಸ್ ಗ್ರಾಮ್ಯ ರೂಪದಲ್ಲಿ ಉದ್ಭವಿಸಿತು.[] ಇದು ತ್ಸುಂಡೆ-ಒಕು (積んでおく; ನಂತರಕ್ಕಾಗಿ ವಸ್ತುಗಳನ್ನು ರಾಶಿಯಾಗಿ ಇಟ್ಟು ಬಿಡುವುದು) ಮತ್ತು ಡೋಕುಶೋ (読書; ಪುಸ್ತಕ ಓದು) ಎಂಬ ಎರಡು ಪದಗಳ ಸಂಯೋಜನೆಯಾಗಿದೆ. ಈ ಪದವನ್ನು ಇಂಗ್ಲಿಷ್ ಭಾಷೆಯಲ್ಲಿ ಬಳಸಲು ಮತ್ತು ಕಾಲಿನ್ಸ್ ನಿಘಂಟಿನಂತಹ ನಿಘಂಟುಗಳಲ್ಲಿ ಸೇರಿಸಲು ಸಲಹೆಗಳು ಕೂಡ ಬಂದಿವೆ.[]

1921ರಲ್ಲಿ ಅಮೆರಿಕನ್ ಲೇಖಕ ಹಾಗೂ ಪುಸ್ತಕಪ್ರೇಮಿ ಎ. ಎಡ್ವರ್ಡ್ ನ್ಯೂಟನ್ ಅವರು ಇದೇ ರೀತಿಯ ಪ್ರವೃತ್ತಿಯನ್ನು ತಮ್ಮ ಬರಹಗಳಲ್ಲಿ ಉಲ್ಲೇಖಿಸಿದ್ದರು.[] ಕೆನಡಾದ ಕವಿ ರಾಬರ್ಟ್ ಡಬ್ಲ್ಯೂ. ಸರ್ವೀಸ್ ಅವರು “ಬುಕ್ ಲವರ್” ಎಂಬ ಕವಿತೆಯಲ್ಲಿ ಈ ಅಭ್ಯಾಸವನ್ನು ವರ್ಣಿಸಿದ್ದಾರೆ.[]

2007ರಲ್ಲಿ ನಾಸಿಮ್ ನಿಕೊಲಸ್ ತಲೇಬ್ ಅವರು ತಮ್ಮ ದಿ ಬ್ಲ್ಯಾಕ್ ಸ್ವಾನ್ ಕೃತಿಯಲ್ಲಿ “ಆಂಟಿಲೈಬ್ರರಿ” ಎಂಬ ಪದವನ್ನು ಜನಪ್ರಿಯಗೊಳಿಸಿದರು. ಈ ಪದವನ್ನು ಉಂಬರ್ಟೋ ಏಕೊ ಅವರು ಗಲಿವರ್ಸ್ ಟ್ರಾವೆಲ್ಸ್‌ನಲ್ಲಿ ಜೊನಾಥನ್ ಸ್ವಿಫ್ಟ್ ಅವರ ಗ್ರಂಥಾಲಯದ ವಿವರಣೆಯನ್ನು ನಿರೂಪಿಸಲು ಸೃಷ್ಟಿಸಿದರು. ಈ ಪರಿಕಲ್ಪನೆಯನ್ನು ತ್ಸುಂಡೋಕು ಜೊತೆ ಹೋಲಿಸಲಾಗಿದೆ.[][]

ಉಲ್ಲೇಖಗಳು

[ಬದಲಾಯಿಸಿ]
  1. "There's A Japanese Word For People Who Buy Too Many Books". HuffPost (in ಇಂಗ್ಲಿಷ್). 2017-04-19. Retrieved 2026-01-16.
  2. "Are you a book hoarder? There's a word for that". Los Angeles Times (in ಅಮೆರಿಕನ್ ಇಂಗ್ಲಿಷ್). 2014-07-24. Retrieved 2026-01-16.
  3. "Tsundoku: The art of buying books and never reading them" (in ಬ್ರಿಟಿಷ್ ಇಂಗ್ಲಿಷ್). 2018-07-29. Retrieved 2026-01-16.
  4. 1 2 3 ""Tsundoku," the Japanese Word for the New Books That Pile Up on Our Shelves, Should Enter the English Language | Open Culture" (in ಅಮೆರಿಕನ್ ಇಂಗ್ಲಿಷ್). Retrieved 2026-01-16.
  5. "A QUOTE ON BIBLIOMANIA. : languagehat.com". languagehat.com. Retrieved 2026-01-16.
  6. "Book Lover by Robert Service - Your Daily Poem". www.yourdailypoem.com. Retrieved 2026-01-16.
  7. Eco, Umberto (2004). On literature (1st U.S. ed.). Orlando: Harcourt. p. 107. ISBN 978-0-15-100812-4.
  8. Popova, Maria (2015-03-24). "Umberto Eco's Antilibrary: Why Unread Books Are More Valuable to Our Lives than Read Ones". The Marginalian (in ಅಮೆರಿಕನ್ ಇಂಗ್ಲಿಷ್). Retrieved 2026-01-16.
  9. Brooks, Katherine (19 March 2017). "There's A Japanese Word For People Who Buy More Books Than They Can Actually Read". The Huffington Post. Retrieved 16 October 2017.
  10. Tobar, Hector (24 July 2014). "Are you a book hoarder? There's a word for that". Los Angeles Times. Retrieved 16 October 2017.
  11. Dodson, Steve (7 February 2008). "A Quote on Bibliomania". Language Hat. Retrieved 24 July 2016.
  12. Gerken, Tom (29 July 2018). "Tsundoku: The art of buying books and never reading them". BBC News. Retrieved 30 July 2018.
  13. Crow, Jonathan (24 July 2014). "'Tsundoku', the Japanese Word for the New Books That Pile Up on Our Shelves, Should Enter the English Language". Open Culture. Retrieved 28 March 2021.
  14. Popova, Maria (2015-03-24). "Umberto Eco's Antilibrary: Why Unread Books Are More Valuable to Our Lives than Read Ones". The Marginalian (in ಅಮೆರಿಕನ್ ಇಂಗ್ಲಿಷ್). Retrieved 2022-01-26.
    "https://kn.wikipedia.org/w/index.php?title=ಸುಂಡೊಕು&oldid=1327599" ಇಂದ ಪಡೆಯಲ್ಪಟ್ಟಿದೆ