ಸೀಮನ್ ದ ಬೊವ
![]() 1967 ರಲ್ಲಿ ಬುವಾ | |
ಜನನ | ಸಿಮೋನ್ ಲೂಸಿ ಅರ್ನೆಸ್ಟಿನ್ ಮೇರಿ ಬರ್ಟ್ರಾಂಡ್ ಡಿ ಬ್ಯೂವೊಯಿರ್ ೯ ಜನವರಿ ೧೯೦೮ ಪ್ಯಾರಿಸ್, ಫ್ರಾನ್ಸ್ |
---|---|
ಮರಣ | 14 April 1986 ಪ್ಯಾರಿಸ್, ಫ್ರಾನ್ಸ್ | (aged 78)
ಸಹಿ | ![]() |
ಸೀಮನ್ ದ ಬೊವ - 1908-86. ಫ್ರೆಂಚ್ ಲೇಖಕಿ. 1908ರಲ್ಲಿ ಪ್ಯಾರಿಸ್‍ನಲ್ಲಿ ಜನಿಸಿದಳು. ಇವಳನ್ನು ಸ್ತ್ರೀವಾದದ ಆದಿಚಿಂತಕಿ ಎಂದು ಗುರುತಿಸಲಾಗಿದೆ. ಚಾರಿತ್ರಿಕ ಭೌತವಾದ, ಮನೋವಿಶ್ಲೇಷಣೆ ಮತ್ತು ಅಸ್ತಿತ್ವವಾದಗಳ ಆಧಾರದ ಮೇಲೆ ಮಹಿಳೆಯ ಶೋಷಣೆಯ ಸಿದ್ಧಾಂತವನ್ನು ನಿರ್ಮಿಸಲು ಪ್ರಯತ್ನಿಸಿದ್ದಾಳೆ.[೧] ಈಕೆ ತತ್ತ್ವಶಾಸ್ತ್ರದ ಅಧ್ಯಯನ ಮಾಡುತ್ತಿದ್ದ ಅವಧಿಯಲ್ಲಿ ಪ್ರಸಿದ್ಧ ಫ್ರೆಂಚ್ ನಾಟಕಕಾರ ಹಾಗೂ ತತ್ತ್ವಶಾಸ್ತ್ರಜ್ಞನಾದ ಜೀನ್ ಪಾಲ್ ಸಾತ್ರ್ರ್‍ನನ್ನು ಭೇಟಿಯಾಗಿ ಹಲವಾರು ವಿಚಾರಗಳ ಬಗೆಗೆ ಚರ್ಚಿಸುತ್ತಿದ್ದಳು.[೨],[೩] ಹೀಗೆ ಇವರಿಬ್ಬರೂ ಕುಳಿತು ಆಲೋಚಿಸಿದ ವಿಚಾರಗಳು ಮುಂದೆ ಅಸ್ತಿತ್ವವಾದ ಎಂದು ಹೆಸರು ಪಡೆಯಿತು.[೪][೫]
ಮಹಿಳಾ ಚಿಂತನೆ
[ಬದಲಾಯಿಸಿ]ಮಹಿಳೆ ಎಂಬುದನ್ನು ಇವಳು ಜೀವಶಾಸ್ತ್ರೀಯ ಘಟಕ ಎಂದು ವಿಶ್ಲೇಷಿಸುತ್ತಾಳೆ. ಮಹಿಳೆಯ ಅಧಃಪತನ ಮತ್ತು ಖಾಸಗಿ ಆಸ್ತಿಯ ಉಗಮ ಇವುಗಳ ನಡುವಿನ ಅತ್ಯಂತ ನಿಕಟ ಸಂಬಂಧವನ್ನು ಗುರುತಿಸುತ್ತಾಳೆ. ಸ್ತ್ರೀ ವಿಮೋಚನೆ ಪ್ರಪಂಚಾದ್ಯಂತ ಶ್ರಮಶಕ್ತಿಯನ್ನು ಅವಲಂಬಿಸಿದೆ. ಉತ್ಪಾದನಾ ಪ್ರಕ್ರಿಯೆಯಲ್ಲಿ ಒಂದು ಮಹತ್ತರ ಕ್ರಾಂತಿಯಾದಾಗ ಮಾತ್ರ ಸ್ತ್ರೀಯ ಸ್ಥಿತಿ-ಗತಿ ಬದಲಾಗಲು ಸಾಧ್ಯ ಇತ್ಯಾದಿ ಹಲವಾರು ಹೊಸ ಬಗೆಯ ವಾಸ್ತವ ಆಲೋಚನೆ ಇವಳದು.
ಕೃತಿಗಳು
[ಬದಲಾಯಿಸಿ]ಇವಳ ಮೊದಲ ಕಾದಂಬರಿ ಷಿ ಕೇಮ್ ಟು ಸ್ಟೇ (1943) ಮತ್ತು ದ ಎಥಿಕ್ಸ್ ಆಂಡ್ ಆ್ಯಂಬಿಗ್ಯುಟಿ (1947) ಎಂಬ ಪ್ರಬಂಧದಲ್ಲಿ ಇವಳ ಅಸ್ತಿತ್ವವಾದದ ಚಿಂತನೆಗಳನ್ನು ಕಾಣಬಹುದು. ರಾಜಕೀಯ ಹಾಗೂ ಸಾಮಾಜಿಕ ಸ್ವಾತಂತ್ರ್ಯಗಳನ್ನು ಕುರಿತಂತೆ ನಾಟಕಗಳನ್ನು ಬರೆದಿದ್ದಾಳೆ. ಇವಳ ಹೆಸರನ್ನು ಅತ್ಯಂತ ಉತ್ತುಂಗಕ್ಕೇರಿಸಿದ ಕೃತಿ ದ ಸಕೆಂಡ್ ಸೆಕ್ಸ್ (1949). ಇದು ಆಧುನಿಕ ಪ್ರಪಂಚದಲ್ಲಿ ಮಹಿಳೆಯನ್ನು ಕುರಿತ ವಿಚಾರ ವಿಮರ್ಶೆಗಳ ಅತ್ಯಂತ ವಿಸ್ತಾರವಾದ ಪ್ರಬಂಧವಾಗಿದೆ.
ಆತ್ಮಚರಿತ್ರೆ
[ಬದಲಾಯಿಸಿ]4 ಸಂಪುಟಗಳ ಆತ್ಮಚರಿತ್ರೆಯನ್ನೂ ಬರೆದಿದ್ದಾಳೆ: ಮೆಮೋರಿಸ್ ಆಫ್ ಎ ಡ್ಯೂಟಿಫುಲ್ ಡಾಟರ್ (1958) ಎಂಬ ಮೊದಲ ಸಂಪುಟದಲ್ಲಿ ಈಕೆಯ ಯೌವನಾವಸ್ಥೆಯ ಬದುಕು ಹಾಗೂ ಅಧ್ಯಯನಗಳಿಗೆ ಸಂಬಂಧಿಸಿದ ವಿಚಾರಗಳಿವೆ. ಇನ್ ದ ಪ್ರೈಮ್ ಆಫ್ ಲೈಫ್ (1960) ಎಂಬ ಎರಡನೆಯ ಸಂಪುಟ ಎರಡನೆಯ ಮಹಾಯುದ್ಧದ ಸಂದರ್ಭದಲ್ಲಿ ಫ್ರಾನ್ಸನ್ನು ನಾಝಿಗಳು ಆಕ್ರಮಿಸಿಕೊಂಡಾಗ ಈಕೆಗಾದ ಅನುಭವಗಳನ್ನು ಒಳಗೊಂಡಿದೆ. ಲಾ ಫೋರ್ಸ್ ಡೆಸ್ ಆಯ್ಕೆ(1963) ಎಂಬ ಮೂರನೆಯ ಸಂಪುಟ ಫ್ರೆಂಚ್ ಕ್ರಾಂತಿಯ ಸಂದರ್ಭದ್ದು. ಆಲ್‍ಸೆಡ್ ಆ್ಯಂಡ್ ಡನ್ (1972) ಎಂಬ ನಾಲ್ಕನೆಯ ಸಂಪುಟ 1962-72ರ ಅವಧಿಯ ಈಕೆಯ ಬದುಕನ್ನು ವಿವರಿಸುತ್ತದೆ. ಆಧುನಿಕ ಸಾಮಾಜಿಕ ಚಿಂತನೆಯ ಮೇಲೆ ಗಾಢ ಪರಿಣಾಮ ಬೀರಿದ ಇವಳು 1986ರಲ್ಲಿ ನಿಧನಳಾದಳು.
ಉಲ್ಲೇಖ
[ಬದಲಾಯಿಸಿ]- ↑ Wells, John C. (2008). Longman Pronunciation Dictionary (3rd ed.). Longman. ISBN 978-1-4058-8118-0.
- ↑ Ward, Julie K. (November 1999). "Reciprocity and Friendship in Beauvoir's Thought". Hypatia. 14 (4): 36–49. doi:10.1111/j.1527-2001.1999.tb01251.x. S2CID 146561354.
- ↑ Seymour-Jones 2008, back cover.
- ↑ Pardina, María Teresa López (1994). "Simone de Beauvoir as Philosopher". Simone de Beauvoir Studies. 11: 5–12. doi:10.1163/25897616-01101002. ISSN 1063-2042. JSTOR 45173538.
- ↑ Bergoffen, Debra (16 August 2010). Zalta, Edward (ed.). "Simone de Beauvoir". Stanford Encyclopedia of Philosophy (2010 ed.). Stanford University. ISSN 1095-5054. Retrieved 11 June 2021.
