ಸಾಣೆಕಲ್ಲು
Jump to navigation
Jump to search
ಸಾಣೆಕಲ್ಲು (ಮಸೆಗಲ್ಲು) ಮಸೆಯುವ ಮೂಲಕ ಉಕ್ಕಿನ ಉಪಕರಣಗಳು ಮತ್ತು ಸಲಕರಣೆಗಳ ಅಂಚುಗಳನ್ನು ಹರಿತಮಾಡಲು ಬಳಸಲ್ಪಡುವ ಕಲ್ಲು.
ಸಾಣೆಕಲ್ಲಿನಿಂದ ಹರಿತಗೊಳಿಸಬಹುದಾದ ವಸ್ತುಗಳ ಉದಾಹರಣೆಗಳೆಂದರೆ ಕತ್ತರಿಗಳು, ಕೊಯ್ಲುಗತ್ತಿಗಳು, ಚಾಕೂಗಳು, ಕ್ಷೌರದ ಕತ್ತಿಗಳು ಮತ್ತು ಉಗುರುಳಿಗಳು, ಕೈ ಉಜ್ಜುಗಗಳು ಹಾಗೂ ಸಮತಲ ಅಲಗುಗಳಂತಹ ಉಪಕರಣಗಳು.
ಸಾಣೆಕಲ್ಲುಗಳು ನಾನಾಬಗೆಯ ಆಕಾರಗಳು, ಗಾತ್ರಗಳು ಮತ್ತು ವಸ್ತು ಸಂಯೋಜನೆಗಳಲ್ಲಿ ಬರುತ್ತವೆ. ಚಪ್ಪಟೆ ಅಂಚುಗಳನ್ನು ಉಜ್ಜಲು ಸಾಣೆಕಲ್ಲುಗಳು ಚಪ್ಪಟೆಯಾಗಿರಬಹುದು, ಅಥವಾ ಹೆಚ್ಚು ಸಂಕೀರ್ಣ ಅಂಚುಗಳಿಗಾಗಿ ಆಕಾರವುಳ್ಳದ್ದಾಗಿರಬಹುದು, ಉದಾಹರಣೆಗೆ ಕೆಲವು ಮರದ ಕೆತ್ತನೆ ಅಥವಾ ಮರಹರಿತಗೊಳಿಸುವ ಉಪಕರಣಗಳೊಂದಿಗೆ ಸಂಬಂಧಿಸಿದ ಕಲ್ಲುಗಳು. ಇವು ನೈಸರ್ಗಿಕವಾಗಿ ತೆಗೆದ ಕಲ್ಲುಗಳಿಂದ ರಚಿತವಾಗಿರಬಹುದು, ಅಥವಾ ಮಾನವ ನಿರ್ಮಿತ ವಸ್ತುವಿನಿಂದ ರಚಿತವಾಗಿರಬಹುದು.