ಸಸ್ಯಶಾಸ್ತ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಸಸ್ಯಶಾಸ್ತ್ರಜ್ಞ ಇಂದ ಪುನರ್ನಿರ್ದೇಶಿತ)
ಮಾನವನ ಮುಖ್ಯ ಆಹಾರವಾದ ಧಾನ್ಯಗಳ ಅಧ್ಯಯನ ಸಸ್ಯಶಾಸ್ತ್ರದಲ್ಲಿ ನಡೆಯುತ್ತದೆ.

ಸಸ್ಯಶಾಸ್ತ್ರವು ಸಸ್ಯಗಳ ಬಗ್ಗೆ ವೈಜ್ಞಾನಿಕ ಅಧ್ಯಯನ ನಡೆಸಲಾಗುವ ಜೀವಶಾಸ್ತ್ರದ ಭಾಗ. ಸಸ್ಯಶಾಸ್ತ್ರ ಪದವು ಗ್ರೀಕ್ ಭಾಷೆಯ ಮೂಲಪದಗಳಾದ "ಬೊಟಾನೆ(ಸಸ್ಯ)ಮತ್ತು ಲಜಿ(ಶಾಸ್ತ್ರ) " ಎಂಬ ಪದಗಳಿಂದಾಗಿದೆ. ಸಸ್ಯಶಾಸ್ತ್ರವು ಆಂಗ್ಲಭಾಷೆಯಲ್ಲಿ ಗ್ರೀಕ್ ಬಾಟನಿ/ಫೈಟಾಲಜಿ ಎಂದೂ ಕರೆಯಲ್ಪಡುತ್ತದೆ.

ಸಸ್ಯಶಾಸ್ತ್ರದ ವಿಭಾಗಗಳು[ಬದಲಾಯಿಸಿ]

ಸಸ್ಯಶಾಸ್ತ್ರದಲ್ಲಿ ಹಲವು ವಿಭಾಗಗಳಿವೆ:

  • ಸಸ್ಯ ಹಂಚಿಕೆಯರಿಮೆ (ಆಂಗ್ಲದಲ್ಲಿ Taxonomy): ಸಸ್ಯಗಳ ವಿವಿಧ ಗು‌‌‍‍‍‍‍‌‍‍‌ಂಪುಗಳ ವರ್ಗೀಕರಣ
  • ಸಸ್ಯ ಉಸಿರಿಯರಿಮೆ (ಆಂಗ್ಲದಲ್ಲಿ Physiology): ಸಸ್ಯಗಳ ಆಂತರಿಕ ಪ್ರಕ್ರಿಯೆಗಳ ವ್ಯಾಸಂಗ
  • ಸಸ್ಯ ಜೀವರಾಸಾಯನಿಕ ಶಾಸ್ತ್ರ (Plant Biochemistry): ಅಣುಸಂಭಂಧಿಕ (molecular) ಮಟ್ಟದಲ್ಲಿ ಸಸ್ಯಗಳ ಆಂತರಿಕ ಪ್ರಕ್ರಿಯೆಗಳ ವ್ಯಾಸಂಗ
  • ಸಸ್ಯ ತಳಿಶಾಸ್ತ್ರ (Plant Genetics): ಸಸ್ಯದ ಸ್ವಭಾವಗಳ ಪಿತ್ರಾರ್ಜಿತದ (inheritance) ವ್ಯಾಸಂಗ
  • ಸಸ್ಯ ರೋಗ ಶಾಸ್ತ್ರ (Plant Pathology): ಸಸ್ಯಗಳು ಅನುಭವಿಸುವ ಕಾಯಿಲೆಗಳ ವ್ಯಾಸಂಗ.

ಹಂಚಿಕೆಯರಿಮೆ/ Taxonomy[ಬದಲಾಯಿಸಿ]

ಹಂಚಿಕೆಯರಿಮೆಯು ವಿವಿಧ ಸಸ್ಯಗಳ ವಿವರಣೆಯನ್ನು ಸಂಭಂಡಿಸುವ ಶಾಸ್ತ್ರ[೧].

ಈ ಶಾಸ್ತ್ರದಲ್ಲಿ2 ಭಾಗಗಳಿವೆ:

  1. ಸಸ್ಯ ಗುರುತಿಸುವುದು: ಅಜ್ಞಾತ ಸಸ್ಯಗಳನ್ನು ಗುರುತಿಸಿ, ಅದರ ನಾಮಕರಣ ಮಾಡಿ, ಅದರ ಗುಣಗಳನ್ನು ತಿಳಿದುಕೊಳ್ಳುವುದು
  2. ವಾರ್ಗೀಕರಣ: ಸಮಾನ ಗುಣಗಳನ್ನು ಹೊಂದಿರುವ ಸಸ್ಯಗಳನ್ನು ವಿವಿಧ ಗುಂಪುಗಳಲ್ಲಿ ವರ್ಗಾಯಿಸುವ ಶಾಸ್ತ್ರವನ್ನು ಸಸ್ಯ ವರ್ಗೀಕರಣ ಎಂದು ಹೇಳಲಾಗುತ್ತದೆ.

ಸಸ್ಯಗಳನ್ನು ವಿವಿಧ ಮಟ್ಟದಲ್ಲಿ ವರ್ಗೀಕರಣ ಮಾಡಲಾಗುತ್ತದೆ. ಉದಾಹರಣೆಗೆ, ಮಾವಿನ ಗಿಡವನ್ನು ಹೀಗೆ ವರ್ಗಾಯಿಸಲಿದೆ:

Kingdom: Plantae

Subkingdom: Tracheobionta

Superdivision: Spermatophyta

Division: Magnoliophyta

Class: Magnoliopsida

Subclass: Rosidae

Order: Sapinales

Family: Anacardiaceae

Genus: Mangifera

Species: Mangifera indica [೨]

ಸಸ್ಯದ ವೈಜ್ಞಾನಿಕ ಹೆಸರನ್ನು ಲ್ಯಾಟಿನ್ ಭಾಷೆಯಲ್ಲಿಯೇ ಬರೆಯಲಾಗುತ್ತದೆ. ಸಸ್ಯಶಾಸ್ತ್ರಿಗಳು ತಮ್ಮಲ್ಲಿ ಮಾತನಾಡುವಾಗ ಸಸ್ಯಗಳ ದೇಸೀಯ ಭಾಷೆಯ ಹೆಸರಲ್ಲದೆ, ವೈಜ್ಞಾನಿಕ ಹೆಸರನ್ನೇ ಬಲಿಸುತ್ತಾರೆ.

ಉಲ್ಲೇಖಗಳು[ಬದಲಾಯಿಸಿ]

  1. Rouhan G, Gaudeul M (2014). Plant taxonomy: a historical perspective, current challenges, and perspectives. Methods Mol. Biol.1115:1-37. doi: 10.1007/978-1-62703-767-9_1.
  2. Classification for Kingdom Plantae Down to Species Mangifera indica L. https://plants.usda.gov/java/ClassificationServlet?source=display&classid=MAIN3