ವಿಷಯಕ್ಕೆ ಹೋಗು

ಸರ್ ಆಸ್ಟಲಿ ಪ್ಯಾಸ್ಟನ್ ಕೂಪರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Sir
ಸರ್ ಆಸ್ಟಲಿ ಪ್ಯಾಸ್ಟನ್ ಕೂಪರ್
Bt,, FRS
Astley Cooper by Thomas Lawrence
ಜನನDid not recognize date. Try slightly modifying the date in the first parameter.
Brooke, Norfolk, England
ಮರಣDid not recognize date. Try slightly modifying the date in the first parameter. (aged Error: Need valid year, month, day)
ಲಂಡನ್, ಇಂಗ್ಲೆಂಡ್
ರಾಷ್ಟ್ರೀಯತೆಬ್ರಿಟಿಷ್
ಕಾರ್ಯಕ್ಷೇತ್ರanatomy
ಅಭ್ಯಸಿಸಿದ ವಿದ್ಯಾಪೀಠSt. Thomas' Hospital
ಪ್ರಸಿದ್ಧಿಗೆ ಕಾರಣotology
vascular surgery
human anatomy
ಗಮನಾರ್ಹ ಪ್ರಶಸ್ತಿಗಳುCopley Medal (1801)

ಸರ್ ಆಸ್ಟಲಿ ಪ್ಯಾಸ್ಟನ್ ಕೂಪರ್ 1768-1841. ಒಬ್ಬ ಪ್ರಸಿದ್ಧ ಇಂಗ್ಲಿಷ್ ಶಸ್ತ್ರವೈದ್ಯ.

ಬಾಲ್ಯ ಮತ್ತು ವಿದ್ಯಾಭ್ಯಾಸ

[ಬದಲಾಯಿಸಿ]

1768ನೆಯ ಇಸವಿ ಆಗಸ್ಟ್ 23 ರಂದು ನಾರ್ಫೋಕಿನಲ್ಲಿ ಅಲ್ಲಿಯ ಪಾದ್ರಿಯ ನಾಲ್ಕನೆಯ ಮಗನಾಗಿ ಜನಿಸಿದ. ಚಿಕ್ಕಂದಿನಲ್ಲಿ ಸ್ವೇಚ್ಛಾಪ್ರವೃತ್ತಿಯವನಾಗಿದ್ದ. ಆದರೆ ಬುದ್ಧಿ ಬಂದಾಗ ಶ್ರದ್ಧಾವಂತನಾದ ಮತ್ತು ಲಂಡನ್ನಿನ ಸೇಂಟ್ ಥಾಮಸ್ ಆಸ್ಪತ್ರೆಯಲ್ಲಿ ವೈದ್ಯನಾಗಿದ್ದ ಹೆನ್ರಿಕ್ಲೈನ್ ಎಂಬವನ ಕೈಕೆಳಗೂ ಎಡಿನ್‍ಬರೋ ನಗರದ ಜಾನ್ ಹಂಟರನ ನೇತೃತ್ವದಲ್ಲಿಯೂ ವ್ಯಾಸಂಗ ಮಾಡಿದ (1787-88), ಮುಂದೆ ಸೇಂಟ್ ಥಾಮಸ್ ಆಸ್ಪತ್ರೆಯಲ್ಲಿ ಉಪಾಧ್ಯಾಯನಾಗಿ ನೇಮಕಗೊಂಡ (1789).

ವೃತ್ತಿ ಜೀವನ

[ಬದಲಾಯಿಸಿ]

1791 ರಿಂದ 1800ರ ವರೆಗೆ ಲಂಡನ್ನಿನ ಪ್ರಸಿದ್ಧವಾದ ಗೈ ಆಸ್ಪತ್ರೆಯಲ್ಲಿ ಅಂಗರಚನಾಶಾಸ್ತ್ರ ಮತ್ತು ಶಸ್ತ್ರವೈದ್ಯದ ಸಹಾಧ್ಯಾಪಕನಾಗಿ ಕ್ಲೈನ್ ಜೊತೆಗೆ ಕೆಲಸ ಮಾಡಿದ. ಈ ಮಧ್ಯೆ 1793 ರಿಂದ 1796ರ ವರೆಗೆ ಇಂಗ್ಲೆಂಡಿನ ರಾಯಲ್ ಕಾಲೇಜ್ ಆಫ್ ಸರ್ಜನ್ಸ್‍ನಲ್ಲಿ ಅಂಗರಚನಾಶಾಸ್ತ್ರದ ಅಧ್ಯಾಪಕನಾಗಿ ಕೂಡ ಸೇವೆ ಸಲ್ಲಿಸುತ್ತಿದ್ದ. 1813ರಲ್ಲಿ ರಾಯಲ್ ಕಾಲೇಜಿನಲ್ಲಿ ತುಲನಾತ್ಮಕ ಅಂಗರಚನಾಶಾಸ್ತ್ರದ ಪ್ರಾಧ್ಯಾಪಕನಾಗಿ ನೇಮಕಗೊಂಡ. ಪ್ರಾಮಾಣಿಕವಾಗಿ ಮೇಲ್ತರಗತಿಯ ಕೆಲಸ ಮಾಡುತ್ತಿದ್ದುದರ ಜೊತೆಗೆ ಕೂಪರ್ ಅದೃಷ್ಟಶಾಲಿಯೂ ಆಗಿದ್ದುದರಿಂದ ಶಸ್ತ್ರವೈದ್ಯನಾಗಿ ಬಹು ಪ್ರಸಿದ್ಧಿ ಪಡೆದ. ದೇಹದ ಮುಖ್ಯ ಶುದ್ಧ ರಕ್ತನಾಳವಾದ ಅಪಧಮನಿಯನ್ನು ಕಟ್ಟಿ ಅಯೋರ್ಟಿಕ್ ಅನ್ಯೂರಿಸಂ ಎಂಬ ರೋಗಕ್ಕೆ ಚಿಕಿತ್ಸೆ ಮಾಡಲು ಮೊತ್ತಮೊದಲು ಪ್ರಯತ್ನಮಾಡಿದ್ದು (1817) ಇವನಿಗೆ ಲೋಕಪ್ರಸಿದ್ಧಿಯನ್ನು ತಂದಿತು. ಈ ಕಾರ್ಯ ವಿಷಾಣುನಿರೋಧ ಮತ್ತು ಸಂವೇದನಾನಾಶಗಳ ಸಿದ್ಧಿ ಸಾಧಿಸುವುದಕ್ಕೆ ಬಹು ಮುಂಚೆಯೇ ಮಾಡಿದ್ದು ಎನ್ನುವುದನ್ನು ನೆನೆದರೆ ಕೂಪರನ ಚಿಕಿತ್ಸಾಕ್ರಮದ ವೈಶಿಷ್ಟ್ಯವನ್ನು ಅರಿಯಬಹುದು. ಇಂಗ್ಲೆಂಡಿನ ರಾಜ ನಾಲ್ಕನೆಯ ಜಾರ್ಜನ ತಲೆಯ ಮೇಲಿದ್ದ ದುರ್ಮಾಂಸವನ್ನು ಕೂಪರ್ ಶಸ್ತ್ರಚಿಕಿತ್ಸೆಯಿಂದ ಕೊಯ್ದು ತೆಗೆದಾಗ (1820-21) ಯಾವ ಪ್ರಮಾದವಾದ ಅನ್ಯರೋಗವೂ ಉಂಟಾಗದೆ ಚಿಕಿತ್ಸೆ ತೃಪ್ತಿಕರವಾಗಿ ಪರಿಣಮಿಸಿತು. </ref>[]<ref>

ಪ್ರಶಸ್ತಿ ಪುರಸ್ಕಾರಗಳು

[ಬದಲಾಯಿಸಿ]

1802 ರಲ್ಲಿ ರಾಯಲ್ ಸೊಸೈಟಿಯ ಕೋಪ್ಲಿ ಪಾರಿತೋಷಕ ಪ್ರಾಪ್ತಿ. 1827ರಲ್ಲಿ ಮತ್ತೆ 1836ರಲ್ಲಿ ರಾಯಲ್ ಕಾಲೇಜಿನ ಅಧ್ಯಕ್ಷತೆ. 1820-21ರಲ್ಲಿ ಬೇರೋನೆಟ್ ಬಿರುದು ಪ್ರಾಪ್ತಿ. 1828ರಲ್ಲಿ ಇಂಗ್ಲೆಂಡಿನ ದೊರೆಗೆ ಶಸ್ತ್ರಕ್ರಿಯಾತಜ್ಞನಾಗಿ ನೇಮಕ. 1830ರಲ್ಲಿ ಲಂಡನ್ನಿನ ರಾಯಲ್ ಸೊಸೈಟಿಯ ಉಪಾಧ್ಯಕ್ಷತೆ-ಇವು ಕೂಪರನ ಇತರ ಸಿದ್ಧಿಗಳು. ಈ ಸಣ್ಣ ಶಸ್ತ್ರಚಿಕಿತ್ಸೆಯಿಂದಲೇ ಕೂಪರನಿಗೆ ಬೇರೋನೆಟ್ ಪದವಿ ಲಭಿಸಿತು.

ಬರಹಗಳು

[ಬದಲಾಯಿಸಿ]

ಹರ್ನಿಯ ಮತ್ತು ಅದರ ಚಿಕಿತ್ಸೆಯ ವಿಷಯವಾಗಿ ಈತ ಬರೆದ ಪುಸ್ತಕ (1804-1807) ಬಹು ಪ್ರಸಿದ್ಧಿ ಪಡೆದಿದೆ. ಎಲುಬು ಮತ್ತು ಕೀಲುಗಳ ಘಾತುಗಳ ವಿಷಯವಾಗಿ ಸ್ತನ ರೋಗಗಳು, ವೃಷಣರೋಗಗಳು ಮುಂತಾದುವನ್ನು ಕುರಿತು ಕೂಪರ್ ಅನೇಕ ಪುಸ್ತಕಗಳನ್ನು ಬರೆದಿದ್ದಾನೆ. ಇವನು ಅಂಗರಚನೆಯಲ್ಲಿ ತೋರಿಸಿಕೊಟ್ಟ ಅಂಗಾಂಶಗಳಿಗೆ ಇವನ ಹೆಸರನ್ನೇ ಇಟ್ಟು ಗೌರವಿಸಿದ್ದಾರೆ. ಅಂಗರಚನಾಶಾಸ್ತ್ರದ ಪಾಠ ಹೇಳುವುದರಲ್ಲಿಯೂ ಈತ ಹೆಸರುವಾಸಿಯಾಗಿದ್ದ.

ಕೂಪರ್ ಮಡಿದದ್ದು 1841ರ ಫೆಬ್ರುವರಿ 12ರಂದು.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]

{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕೂಪರ್, ಸರ್ ಆಸ್ಟಲಿ ಪ್ಯಾಸ್ಟನ್}

  1. Forbes, John, ed. (July 1843). "The Life of Sir Astley Cooper Bart. [...] (book review)". The British and Foreign Medical Review or Quarterly Journal of Practical Medicine and Surgery. Vol. 16. London: John Churchill. p. 131. Retrieved 27 September 2024. In February 1805, Astley Cooper was elected a Fellow of the Royal Society.