ಸರ್. ಕೆ. ಶೇಷಾದ್ರಿ ಅಯ್ಯರ್

ವಿಕಿಪೀಡಿಯ ಇಂದ
Jump to navigation Jump to search

(ಜ. ಜೂನ್ ೧, ೧೧೮೪೫ - ಮ.ಸೆಪ್ಟೆಂಬರ್, ೧೩, ೧೯೦೧)

ಸರ್
ಕುಮಾರಪುರಂ ಶೇಷಾದ್ರಿ ಅಯ್ಯರ್
KCIE
200px-Seshadri Iyer.jpg

ಮೈಸೂರು ರಾಜಗೃಹದ ದಿವಾನರು
ಅಧಿಕಾರ ಅವಧಿ
೧೮೮೩ – ೧೯೦೧
Monarch ಚಾಮರಾಜ ಒಡೆಯರ್,
ನಾಲ್ಮಡಿ ಕೃಷ್ಣರಾಜ ವೊಡೆಯರು
ಪೂರ್ವಾಧಿಕಾರಿ ಸಿ. ವಿ. ರಂಗಾಚಾರ್ಲು
ಉತ್ತರಾಧಿಕಾರಿ ಪಿ. ಎನ್. ಕ್ರಿಷ್ಣಮೂರ್ತಿ
ವೈಯಕ್ತಿಕ ಮಾಹಿತಿ
ಜನನ ೧೮೪೫
ಪಾಲ್ಘಾಟ್, ಮೆಡ್ರಾಸ್ ಪ್ರೆಸಿಡೆನ್ಸಿ
ಮರಣ ಸೆಪ್ಟೆಂಬರ್ ೧೩,೧೯೦೧
ಮೈಸೂರ್ ಸಾಮ್ರಾಜ್ಯ
ರಾಷ್ಟ್ರೀಯತೆ ಭಾರತೀಯ
ಸಂಗಾತಿ(ಗಳು) ಮೊದಲನೆಯ ಹೆಂಡತಿ : ಅನಂತ ನಾರಾಯಣಿ, ಎರಡನೆಯ ಹೆಂಡತಿ : ವೆಂಕಟಲಕ್ಷ್ಮಿ
ಅಭ್ಯಸಿಸಿದ ವಿದ್ಯಾಪೀಠ ಪ್ರೆಸಿಡೆನ್ಸಿ ಕಾಲೇಜ್, ಚೆನ್ನೈ
ವೃತ್ತಿ ಮೈಸೂರರಸರ ಬಳಿ ದಿವಾನರಾಗಿ ಕೆಲಸಮಾಡಿದರು.
ಉದ್ಯೋಗ ಲಾಯರ್, ಸಿವಿಲ್ ನೌಕರ
ಧರ್ಮ ಹಿಂದು

ಸರ್,ಶೇಷಾದ್ರಿ ಅಯ್ಯರ್, KCIE (ತಮಿಳು: குமரபுரம் சேஷாத்திரி ஐயர்), ಮೈಸೂರರಸರ ಬಳಿ ದಿವಾನರಾಗಿ ೧೮೮೩-೧೯೦೧ ರ ವರೆಗೆ ಸೇವೆಸಲ್ಲಿಸಿದರು. ಅವರೊಬ್ಬ ಸಮರ್ಥ ವಕೀಲರು. 'ಬ್ರಿಟಿಷ್ ಈಸ್ಟ್ ಇಂಡಿಯ ಕಂಪೆನಿ ಸರಕಾರ' ಒಡೆಯರ್ ರಾಜಪರಿವಾರಕ್ಕೆ ತಾನು ಹಿಂದೆ ಕಸಿದುಕೊಂಡಿದ್ದ ರಾಜ್ಯದ ಎಲ್ಲಾ ಅಧಿಕಾರವನ್ನು ಮತ್ತೆ ಒಪ್ಪಿಸಿ ಆಗಿನ ರಾಜರನ್ನು ಸಿಂಹಾಸನವನ್ನೇರಲು ಆದೇಶ ನೀಡಿದ್ದು, ೧೮೮೧ ರಲ್ಲೇ. ಆಸಮಯದಲ್ಲಿ ನೇಮಿಸಲ್ಪಟ್ಟ (ಮುಖ್ಯ ಮಂತ್ರಿ)(ಅಮಾತ್ಯ) ಅಥವಾ ದಿವಾನರಲ್ಲಿ 'ಶೇಷಾದ್ರಿ ಅಯ್ಯರ್' ಎರಡನೆಯವರು. ಮೈಸೂರು ರಾಜ್ಯದಲ್ಲಿ ಅತಿಹೆಚ್ಚು ಸಮಯ ಅಧಿಕಾರದಲ್ಲಿದ್ದ ದಿವಾನರೆಂಬ ಹೆಸರಿಗೆ ಪಾತ್ರರಾಗಿದ್ದರು. ಬೆಂಗಳೂರನ್ನು ಆಧುನಿಕರಣಮಾಡಲು ಪ್ರಯತ್ನಿಸಿ ಸಫಲರಾದರು.

ಮನೆತನ ಹಾಗೂ ಕುಮಾರಪುರಂನಲ್ಲಿ ವಾಸ್ತವ್ಯ[ಬದಲಾಯಿಸಿ]

ಗೌರಿ ಶೇಷಾದ್ರಿ ಅಯ್ಯರ್ ಎಂಬುವರು ೨೦೦ ವರ್ಷಗಳ ಹಿಂದೆ ೧೭೮೪ ರಲ್ಲಿ ಮದ್ರಾಸ್ ರಾಜ್ಯದ ತಂಜಾವೂರನ್ನು ಬಿಟ್ಟು ಕೇರಳ ರಾಜ್ಯಕ್ಕೆ ಸೇರಿದ 'ಪಾಲ್ಘಾಟ್' ನ ಬಳಿಯ ಕುಮಾರಪಟ್ಣಂ ಎಂಬ ಹಳ್ಳಿಯಲ್ಲಿ ಹೋಗಿನೆಲೆಸಿದರು. ಇವರು 'ಶೇಷಾದ್ರಿ ಅಯ್ಯರ್' ರವರ ಮೂರನೆ ತಲೆಮಾರಿನವರು. 'ಶೇಷಾದ್ರಿ ಅಯ್ಯರ್' ರವರ ತಂದೆ, ಅನಂತ ಕೃಷ್ಣ ಅಯ್ಯರ್ ಕಲ್ಲಿಕೋಟೆಯ ಕುಮಾರಪುರಂ ನಲ್ಲಿ ನ್ಯಾಯಾಸ್ಥಾನದಲ್ಲಿ ವಕೀಲರಾಗಿದ್ದರು. ಅವರು ೧೮೨೬ ರಲ್ಲಿ, ಅನಂತ ನಾರಾಯಣಿಯವರನ್ನು ಮದುವೆಯಾದರು. ಅವರ ಮಗ,ವೆಂಕಟ ಸುಬ್ರಹ್ಮಣ್ಯ ಅಯ್ಯರ್. ಸ್ವಲ್ಪಸಮಯದಲ್ಲಿ ಮೊದಲನೆಯ ಪತ್ನಿ ನಿಧನರಾದಾಗ, ವೆಂಕಟಲಕ್ಷ್ಮಿ ಎಂಬ ಕನ್ಯೆಯೊಡನೆ ಎರಡನೆ ವಿವಾಹ ಮಾಡಿಕೊಂಡರು. ಈ ದಂಪತಿಗಳಿಗೆ ೧, ಜೂನ್ ೧೮೪೫ ನಲ್ಲಿ ಜನಿಸಿದ ಮಗನೇ,'ಶೇಷಾದ್ರಿ ಅಯ್ಯರ್'. ಶೇಷಾದ್ರಿ ಅಯ್ಯರ್'ರವರ ಪ್ರಗತಿಗೆ ಅವರ ಅಣ್ಣ, 'ವೆಂಕಟ ಸುಬ್ರಹ್ಮಣ್ಯ ಅಯ್ಯರ್' ರವರೇ ಮೂಲ ಕಾರಣ. ಅಣ್ಣನ ಬಗ್ಗೆ ಅಯ್ಯರ್ ರವರಿಗೆ ಅತೀವ ಮಮತೆ, ಹಾಗೂ ಗೌರವವಿತ್ತು.

ರಂಗಾಚಾರ್ಲುರವರ ಆಪ್ತ ಸಹಾಯಕರಾಗಿ[ಬದಲಾಯಿಸಿ]

೧೮೬೮ ರಲ್ಲಿ ಮೈಸೂರು ಅರಸೊತ್ತಿಗೆಯ ಡಿಸ್ಟ್ರಿಕ್ಟ್ ಮ್ಯಾಜಿಸ್ಟ್ರೇಟ್ ಆಗಿ ನಿಯುಕ್ತರಾದರು. ಆಗಿನ ದಿವಾನ 'ರಂಗಾಚಾರ್ಲು'ರವರ ಆಪ್ತರಾಗಿ ಕೆಲಸಮಾಡಿದ ನಂತರ ಅವರು ನಿವೃತ್ತರಾದನಂತರ ಅಯ್ಯರ್ ರವರಿಗೇ ದಿವಾನಗಿರಿಯನ್ನು ಕೊಡಲಾಯಿತು. ೧೮ ವರ್ಷ (೧೮೮೩-೧೯೦೧ ರವರೆಗೆ) ಅತಿ ಹೆಚ್ಚುಕಾಲ ರಾಜಸೇವೆಯನ್ನು ಮಾಡಿದ ಹೆಗ್ಗಳಿಕೆಯನ್ನು ಗಳಿಸಿದರು. ಶೇಷಾದ್ರಿ ಅಯ್ಯರ್ ರವರ ಜನಹಿತ ಕಾರ್ಯಕ್ರಮಗಳು.

 • 'ಕೋಲಾರ್ ಗೋಲ್ಡ್ ಫೀಲ್ಡ್ಸ್', ಕೋಲಾರದಲ್ಲಿ,
 • 'ವಿಕ್ಟೋರಿಯ ಆಸ್ಪತ್ರೆ' ಬೆಂಗಳೂರಿನಲ್ಲಿ,
 • 'ಶಿವನಸಮುದ್ರದ ಜಲ ವಿದ್ಯುತ್ ಪ್ರಾಜೆಟ್'
 • 'ಲಾಲ್ಬಾಗ್' ಬೆಂಗಳುರಿನಲ್ಲಿ,
 • 'ಬೆಂಗಳೂರಿನ ಇಂಡಿಯನ್ ಇನ್ಸ್ಟಿ ಟ್ಯೂಟ್ ಆಫ್ ಸೈನ್ಸ್', ಮುಂತಾದ ಸಂಸ್ಥೆಗಳನ್ನು ಸ್ಥಾಪಿಸಿದರು.
 • ಅವರ ಕಾಲದಲ್ಲೇ ರಾಜ್ಯದಲ್ಲಿ ' ಕ್ಷಾಮದವಾತಾವರಣವನ್ನು ಎದುರಿಸಬೇಕಾಯಿತು.ಸರಕಾರದ ವತಿಯಿಂದ ಸಾರ್ವಜನಿಕರಿಗೆ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಿ ಸಹಾಯಮಾಡಿದರು.
 • 'ಪ್ಲೇಗ್ ಮಹಾಮಾರಿ ಕಾಯಿಲೆ' ಯಿಂದ ಮೈಸೂರು ರಾಜ್ಯ ತಲ್ಲಣಿಸಿತು. ಇದಕ್ಕೆ ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕಾಯಿತು. ಮುಂದೆ, ನಗರದ ಹಲವಾರು ರಸ್ತೆಗಳನ್ನು ಅಗಲಗೊಳಿಸಿ ಸಂಚಾರವ್ಯವಸ್ಥೆಯನ್ನು ಉತ್ತಮಗೊಳಿಸಿದರು.

ವಿದ್ಯಾಭ್ಯಾಸ ಮತ್ತು ವೃತ್ತಿಜೀವನ[ಬದಲಾಯಿಸಿ]

'ಶೇಷಾದ್ರಿ ಅಯ್ಯರ್' ರವರು ಮದ್ರಾಸ್ ಪ್ರೆಸಿಡೆನ್ಸಿಯ 'ಪಾಲ್ಘಾಟ್' ನ ಒಂದು'ತಮಿಳು ಐಯ್ಯರ್ ಬ್ರಾಹ್ಮಣ'ಪರಿವಾರದಲ್ಲಿ(ಬ್ರಹಚರನಮ್)೧೮೪೫ ರಲ್ಲಿ ಜನಿಸಿದರು. 'ಕ್ಯಾಲಿಕಟ್' ನಲ್ಲಿ ಪ್ರಾರಂಭಿಕ ವಿದ್ಯಾಭ್ಯಾಸ ಮಾಡಿದನಂತರ, ೧೮೬೬ ರಲ್ಲಿ 'ಮದರಾಸ್ ನ ಪ್ರೆಸಿಡೆನ್ಸಿ ಕಾಲೇಜ್' ನಿಂದ ಪದವಿಗಳಿಸಿದರು. ರಾಜ್ಯಕ್ಕೆ ಮೊದಲನೆಯವನಾಗಿ ಉತ್ತೀರ್ಣರಾದರು. ಮದರಾಸ್ ನಲ್ಲಿ ಕೆಲಸಮಾಡುತ್ತಿರುವಾಗಲೇ 'ರಂಗಾಚಾರ್ಲು'ರವರಿಗೆ ಪರಿಚಿತರಾದರು. ೧೮೬೮ ರಲ್ಲಿ ಮೈಸೂರ್ ಸಾಮ್ರಾಜ್ಯದ ಕಾರ್ಯಕಲಾಪಗಳನ್ನು ನೋಡಿಕೊಳ್ಳಲು 'ರಂಗಾಚಾರ್ಲು' ಶೇಷಾದ್ರಿ ಅಯ್ಯರ್ ರವರನ್ನು ಮೆಚ್ಚಿ ಅವರಿಗೆ ತರಪೇತಿ ಕೊಟ್ಟು ಮೈಸೂರಿಗೆ ಕರೆಸಿಕೊಂಡರು.

 • 'ಕಾನೂನು ಕಾರ್ಯದರ್ಶಿ'ಯಾಗಿ
 • 'ಮೈಸೂರ್ ಸಾಮ್ರಾಜ್ಯ'ದ 'ಅಷ್ಟಗ್ರಾಮ್ ಡಿವಿಶನ್',
 • 'ಪ್ರಧಾನ ಶಿರಸ್ತೆದಾರರಾಗಿ',
 • 'ಕೋರ್ಟ್ ಆಫ್ ದ ಜುಡಿಶಿಯಲ್ ಕಮೀಶನರ್'.
 • 'ಮೈಸೂರಿನ ಜಿಲ್ಲಾಧಿಕಾರಿ' 'ಉಪ ಜಿಲ್ಲಾಧಿಕಾರಿಯಗಿ',
 • 'ಜಿಲ್ಲಾ ನ್ಯಾಯಾಧೀಶರಾಗಿ'
 • 'ತುಮಕೂರು ನ ಸೆಶನ್ ಜಡ್ಜ್ ಆಫ್ ಅಷ್ಟಗ್ರಾಮ್ ಡಿವಿಶನ್'.

ಬಿ.ಎಲ್. ಪದವಿಗಳಿಸಿದರು[ಬದಲಾಯಿಸಿ]

೧೮೭೪ ರಲ್ಲಿ ಮದರಾಸ್ ವಿವಿ ಯಿಂದ 'ಬಿ.ಎಲ್ ಪದವಿ' ೧೮೮೧-೮೩ 'ಆಫೀಸರ್ ಇನ್ ಸ್ಪೆಶಲ್ ಡ್ಯೂಟಿ'ಯಾಗಿ ಮೈಸೂರಿನಲ್ಲಿ. ೧೮೮೩ 'ರಂಗಾಚಾರ್ಲು' ರವರ ಅಧಿಕಾರಾವಧಿ ಕೊನೆಗೊಳ್ಳಲು ಬಂದಾಗ 'ಶೇಷಾದ್ರಿ ಅಯ್ಯರ್' ರನ್ನೇ ನೇಮಿಸಲಾಯಿತು.

ಮೈಸೂರು ಸಾಮ್ರಾಜ್ಯದ ದಿವಾನರಾಗಿ[ಬದಲಾಯಿಸಿ]

೧೮ ವರ್ಷ ಚೆನ್ನಾಗಿ ರಾಜ್ಯಾಡಳಿತ ನಡೆಸಿದರೆಂದು ಬ್ರಿಟಿಷ್ ಲೇಖಕರು ದಾಖಲಿಸಿದ್ದಾರೆ. ರಾಜ್ಯದ ಸಾಗಾಣಿಕೆ, ನೀರಾವರಿ ವ್ಯವಸ್ಥೆ, ಮತ್ತು ಗಣಿ ಕೆಲಸಕ್ಕೆ ೨೭೦ ಕಿ.ಮೀ (೧೭೦ ಮೈಲ್ಸ್) ದೂರದ ರೈಲ್ವೆ ದಾರಿಯನ್ನು ಹೆಚ್ಚಿಸಿದರು. ಕೋಲಾರದಲ್ಲಿ ಬಂಗಾರದ ಗಣಿಯನ್ನು ಸ್ಥಾಪಿಸಲಾಯಿತು. ೧೮೮೯ ರಲ್ಲಿ 'ಲಾಲ್ ಬಾಗ್ ನ ಗ್ಲಾಸ್ ಹೌಸ್ ಕಟ್ಟಡ'ವನ್ನು ಕಟ್ಟಿಸಿದರು. ೧೯೦೦ ರಲ್ಲಿ 'ವಿಕ್ಟೋರಿಯ ಆಸ್ಪತ್ರೆ', 'ಬೆಂಗಳೂರಿನಲ್ಲಿ ಇಂಡಿಯನ್ ಇನ್ಸ್ಟಿ ಟ್ಯೂಟ್ ಆಫ್ ಸೈನ್ಸ್' ನ ಕಟ್ಟುವ ಕೆಲಸ ೧೯೦೧ ರಲ್ಲಿ ಅವರ ಮರಣದ ಬಳಿಕ ಆರಂಭವಾಗಿ ೧೯೧೧ ರಲ್ಲಿ ಪೂರ್ಣಗೊಂಡಿತು.

'ಸರ್ ಹೈಡೆಲ್ ಶೇಷಾದ್ರಿ ಹೈಡೆಲ್ ಸ್ಟೇಶನ್'[ಬದಲಾಯಿಸಿ]

ಎಷ್ಯಾ ಖಂಡದಲ್ಲೇ ಮೊಟ್ಟಮೊದಲ 'ಜಲವಿದ್ಯುತ್ ಗಾರ'ವನ್ನು 'ಶಿವನಸಮುದ್ರ'ದಲ್ಲಿ ಸ್ಥಾಪಿಸಲು ಕಾರಣರಾದರು. ೧೯೦೨ ರಲ್ಲೇ ವಿದ್ಯುತ್ ನಿರ್ಮಾಣ ಆರಂಭವಾಯಿತು. ಈ ವಿದ್ಯುತ್ ಚ್ಛಕ್ತಿ 'ಕೋಲಾರ್ ಗೋಲ್ಡ್ ಫೀಲ್ಡ್ಸ್' ಗೆ 'ತಂತಿ-ಕಂಭ'ಗಳ ಮೂಲಕ ಸರಬರಾಜಾಗುತ್ತಿತ್ತು. ೧೪೭ ಕಿ.ಮೀ ದೂರದಲ್ಲಿದ್ದ ವಿದ್ಯುತ್ ಕಾರಾಗಾರದಿಂದ ಕೋಲಾರದ ಕಾರ್ಖಾನೆಗೆ ವಿದ್ಯುತ್ ಸಾಗಾಣಿಕೆಯ ಕಾರ್ಯ ಶ್ಲಾಘನೀಯವಾಗಿತ್ತು. ಆಗಿನ ಕಾಲದಲ್ಲಿ ಇಷ್ಟು ದೂರ ತಂತಿ ಕಂಬಗಳ ಮೇಲೆ ವಿದ್ಯುತ್ ಸಾಗಿಸುವ ಮಹತ್ತರ ಕಾರ್ಯವೆಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಬೆಂಗಳೂರು ನಗರಕ್ಕೆ ವಿದ್ಯುತ್ ಸರಬರಾಜು ಆಗಿದ್ದು ೧೯೦೫ ರಲ್ಲಿ. ನಂತರ ೧೯೩೦ ರಲ್ಲಿ ಮದ್ರಾಸ್ ನಲ್ಲಿ 'ಮೆಟ್ಟೂರ್ ಅಣೆಕಟ್ಟು' ನಿರ್ಮಾಣವಾದಾಗ 'ಶಿವನಸಮುದ್ರ'ದಿಂದ ವಿದ್ಯುತ್ ಸರಬರಾಜು ಮಾಡಲಾಗಿತ್ತು. ೨೦೦೬ ರ ಮೇ ತಿಂಗಳಲ್ಲಿ 'ಸರ್ ಶೇಶಾದ್ರಿ ಹೈಡೆಲ್ ಸ್ಟೇಶನ್' ಗೆ 'ನ್ಯಾಷನಲ್ ಹೆರಿಟೇಜ್ ಸೆಂಟರ್ ಸ್ಥಾನಮಾನ' ವನ್ನು ಪ್ರದಾನಮಾಡಲಾಯಿತು.

"ಆಧುನಿಕ ಬೆಂಗಳೂರಿನ ನಿರ್ಮಾಪಕ"[ಬದಲಾಯಿಸಿ]

೧೮೯೮, ಬೆಂಗಳೂರಿನಲ್ಲಿ ಪ್ಲೇಗ್ ಪಿಡುಗು ಬಂದಿತು. ಅಪಾರ ಜನ ಸತ್ತರು. ಈ ಘಟನೆಯ ಬಳಿಕ ಬೆಂಗಳೂರಿನ ಆಧುನೀಕರಣಕ್ಕೆ ಗಮನ ಕೊಡಲಾಯಿತು. ಶುಚಿತ್ವ ಮತ್ತು ಗಾಳಿಬೆಳಕನ್ನು ಹೊಂದಿದ ಅನೇಕ ಹೊಸ ಹೋಟೆಲ್ ಗಳು ಮತ್ತು ಹೊಸ ಪದಾರ್ಥಗಳ ತಯಾರಿಕ ಘಟಕಗಳು ಶುರುವಾದವು. ಇದರಿಂದ ಜನರಿಗೆ ಉದ್ಯೋಗಾವಕಾಶವಾಯಿತು. ೧೮೯೪ ರಲ್ಲಿ, ಬೆಂಗಳೂರಿಗೆ ೧೮ ಕಿ.ಮೀ ದೂರದಲ್ಲಿರುವ 'ಹೆಸರ್ ಘಟ್ಟ ಲೇಕ್' ನಿಂದ 'ಚಾಮರಾಜೇಂದ್ರ ವಾಟರ್ ವರ್ಕ್ಸ್ಸ' ಕುಡಿಯುವ ನೀರಿನ ಸರಬರಾಜು ಕೆಲಸ ಪ್ರಾರಂಭವಾಯಿತು. ೧೮೯೮ ರಲ್ಲಿ 'ಬಸವನಗುಡಿ' ಮತ್ತು 'ಮಲ್ಲೇಶ್ವರಂ' ಬಡಾವಣೆಗಳ ಆರಂಭ. ಬೆಂಗಳೂರಿನಲ್ಲಿ ಇಂಡಿಯನ್ ಇನ್ ಸ್ಟಿ ಟ್ಯೂಟ್ ಆಫ್ ಸೈನ್ಸ್ ವಿದ್ಯಾಸಂಸ್ಥೆ ಪ್ರಾರಂಭಿಸಲು ಬೊಂಬಾಯಿನ ಪ್ರಖ್ಯಾತ ಉದ್ಯೊಗ ಪತಿ ಶ್ರೀ.ಜೆ.ಎನ್.ಟಾಟರವರು ಮನವಿ ಸಲ್ಲಿಸಿದಾಗ, 'ಶೇಷಾದ್ರಿ ಅಯ್ಯರ್' ರವರು, ಆಗಿನ ಪ್ರಭುಗಳಾಗಿದ್ದ, ಶ್ರಿ.ನಾಲ್ಮಡಿ ಕೃಷ್ಣರಾಜೇಂದ್ರ ವಡೆಯರ್ ರವರಿಗೆ ಉಚಿತವಾಗಿ, ೩೭೨ ಎಕರೆ ಜಮೀನನ್ನು ದೊರಕಿಸಲು ಶಿಫಾರಿಸ್ ಮಾಡಿದ್ದರು. ಅದರಂತೆ, ೧೯೧೧ ರಲ್ಲಿ, 'ಇಂಡಿಯನ್ ಇನ್ ಸ್ಟಿ ಟ್ಯೂಟ್ ಆಫ್ ಸೈನ್ಸ್ ಭವನ' ನಿರ್ಮಾಣವಾಯಿತು. ಅವರು ತಮಗಾಗಿ ಬೆಂಗಳೂರಿನಲ್ಲಿ ಖಾಸಗಿ ಗೃಹ,ಕುಮಾರ ಕೃಪವನ್ನು ಕಟ್ಟಿಕೊಂಡಿದ್ದರು. ಅದು ಈಗ ರಾಜ್ಯದ ಅತಿಥಿ ಗೃಹವಾಗಿದೆ. ೧೮೯೨ ರಲ್ಲಿ ಹೆಸರಿನಲ್ಲಿ 'ಶೇಷಾದ್ರಿಪುರಮ್ ಬಡಾವಣೆ'ಯನ್ನು ನಿರ್ಮಿಸಲಾಯಿತು. 'ಶೇಷಾದ್ರಿ ಅಯ್ಯರ್ ರೋಡ್', ಕಬ್ಬನ್ ಪಾರ್ಕ್ ನಲ್ಲಿ 'ಶೇಷಾದ್ರಿ ಅಯ್ಯರ್ ಮೆಮೋರಿಯಲ್ ಹಾಲ್', ಮುಂಭಾಗದಲ್ಲಿ ಅವರ ವಿಗ್ರಹವನ್ನು ಸ್ಥಾಪನೆಮಾಡಲಾಯಿತು.

ಶೇಷಾದ್ರಿ ಅಯ್ಯರ್ ರವರ ಆಶೋತ್ತರಗಳನ್ನು ನಡೆಸಲು ಪ್ರಯತ್ನ[ಬದಲಾಯಿಸಿ]

ಶೇಷಾದ್ರಿಅಯ್ಯರ್ ಅತ್ಯಂತ ದಕ್ಷ ಆಡಳಿತಗಾರರಾಗಿದ್ದರು. ರಾಬರ್ಟ್ ಎಚ್.ಇಲ್ಲಿಯೆಟ್ ಎಂಬ ಆಂಗ್ಲ ಅಧಿಕಾರಿ ತಮ್ಮ ಪುಸ್ತಕ 'Gold,Sport and Coffee Planting in Mysore' ದಲ್ಲಿ ಅವರ ಕಾರ್ಯಾಚರಣೆಗಳ ಬಗ್ಗೆ ಮೆಚ್ಚುಗೆ ಸೂಚಿಸಿ ಬರೆದಿದ್ದಾರೆ.

ಅಪವಾದಗಳು[ಬದಲಾಯಿಸಿ]

'ಶೇಷಾದ್ರಿ ಅಯ್ಯರ್' ರವರ, ದಿವಾನರಾಗಿದ್ದ ಕಾರ್ಯ-ಕಾಲಾವಧಿಯಲ್ಲಿ ಮದ್ರಾಸ್ ನಿಂದ ಸುಮಾರು ನೂರಕ್ಕೂ ಹೆಚ್ಚುಮಂದಿಯನ್ನು ಕರೆತಂದು ಮೈಸೂರು ಸರಕಾರದ ಹಲವಾರು ಹುದ್ದೆಗಳಿಗೆ ನೇಮಿಸಿದ್ದರು. ಮಗ ಕೆ.ಎಸ್.ದೊರೈಸಾಮಿ ಐಯರ್, 'ಮೈಸೂರ್ ಸಿವಿಲ್ ಸರ್ವಿಸ್' ನಲ್ಲಿ ಶೇಷಾದ್ರಿ ಅಯ್ಯರ್ ರವರಿಗೆ 'ಖಾಸಗಿ ಕಾರ್ಯದರ್ಶಿ'ಯಾಗಿದ್ದು, ೧೮೮೧-೯೧ ನಂತರ 'Mysore Legislative CounciAdditional member' ಅದರು.