ವಿಷಯಕ್ಕೆ ಹೋಗು

ಸಮರ್ಜಿತ್ ಲಂಕೇಶ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಮರ್ಜಿತ್ ಲಂಕೇಶ್
ಸಮರ್ಜಿತ್ (೨೦೨೫ರಲ್ಲಿ)
ಜನನ
ವೃತ್ತಿನಟ
ಸಕ್ರಿಯ ವರ್ಷಗಳು೨೦೧೨ರಿಂದ ಪ್ರಸ್ತುತ
ತಂದೆಇಂದ್ರಜಿತ್‌ ಲಂಕೇಶ್

ಸಮರ್ಜಿತ್ ಲಂಕೇಶ್ ಒಬ್ಬ ಭಾರತೀಯ ನಟ, ಇವರು ಪ್ರಮುಖವಾಗಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಇವರು ೨೦೨೪ರಲ್ಲಿ ತೆರೆಕಂಡ 'ಗೌರಿ' ಚಿತ್ರದ ಮೂಲಕ ನಾಯಕ ನಟನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು.[೧]

ಆರಂಭಿಕ ಜೀವನ ಮತ್ತು ಕುಟುಂಬ

[ಬದಲಾಯಿಸಿ]

ಸಮರ್ಜಿತ್ ಅವರು ಕರ್ನಾಟಕದ ಬೆಂಗಳೂರಿನಲ್ಲಿ ಜನಿಸಿದರು. ಇವರು ಕಲಾತ್ಮಕ ಮತ್ತು ಸಾಹಿತ್ಯಿಕ ಹಿನ್ನೆಲೆಯುಳ್ಳ ಕುಟುಂಬದಿಂದ ಬಂದವರು. ಇವರು ನಿರ್ದೇಶಕ ಮತ್ತು ನಿರ್ಮಾಪಕ ಇಂದ್ರಜಿತ್ ಲಂಕೇಶ್ ಅವರ ಪುತ್ರ ಹಾಗೂ ಸಾಹಿತಿ ಮತ್ತು ಪತ್ರಕರ್ತ ಪಿ. ಲಂಕೇಶ್ ಅವರ ಮೊಮ್ಮಗ.[೨] ಇವರು ಪತ್ರಕರ್ತೆ ಗೌರಿ ಲಂಕೇಶ್ ಮತ್ತು ನಿರ್ದೇಶಕಿ ಕವಿತಾ ಲಂಕೇಶ್ ಅವರ ಸೋದರ ಸಂಬಂಧಿ.

ಸಮರ್ಜಿತ್ ಅವರು ನ್ಯೂಯಾರ್ಕ್‌ನ ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ನಟನೆ ಮತ್ತು ಚಲನಚಿತ್ರ ನಿರ್ಮಾಣದ ತರಬೇತಿಯನ್ನು ಪಡೆದಿದ್ದಾರೆ.[೩]

ವೃತ್ತಿಜೀವನ

[ಬದಲಾಯಿಸಿ]

ಸಮರ್ಜಿತ್ ಅವರು ಬಾಲ್ಯದಲ್ಲೇ ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿದರು. ಇವರು 'ದೇವ್ ಸನ್ ಆಫ್ ಮುದ್ದೇಗೌಡ' (೨೦೧೨) ಮತ್ತು 'ಲವ್ ಯು ಆಲಿಯಾ' (೨೦೧೫) ಚಿತ್ರಗಳಲ್ಲಿ ಸಣ್ಣ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ೨೦೧೮ರಲ್ಲಿ ಕವಿತಾ ಲಂಕೇಶ್ ನಿರ್ದೇಶನದ 'ಸಮ್ಮರ್ ಹಾಲಿಡೇಸ್' ಚಿತ್ರದಲ್ಲಿ ಮುಖ್ಯ ಭೂಮಿಕೆಯ ಬಾಲನಟನಾಗಿ ನಟಿಸಿದರು.[೪]

2024ರಲ್ಲಿ ತಮ್ಮ ತಂದೆ ಇಂದ್ರಜಿತ್ ಲಂಕೇಶ್ ನಿರ್ದೇಶನದ 'ಗೌರಿ' ಚಿತ್ರದ ಮೂಲಕ ಪೂರ್ಣಪ್ರಮಾಣದ ನಾಯಕ ನಟನಾಗಿ ಪಾದಾರ್ಪಣೆ ಮಾಡಿದರು. ಈ ಚಿತ್ರದ ನಟನೆಗಾಗಿ ಅವರಿಗೆ ಸೈಮಾ[೫] ಮತ್ತು ಫಿಲ್ಮ್‌ಫೇರ್‌ನಂತಹ ಪ್ರತಿಷ್ಠಿತ ವೇದಿಕೆಗಳಲ್ಲಿ 'ಅತ್ಯುತ್ತಮ ಪದಾರ್ಪಣೆ ನಟ' ಪ್ರಶಸ್ತಿಗಳು ಲಭಿಸಿವೆ[೬]. ಮಲಯಾಳಂ ಚಿತ್ರ ವೃಷಭ ದಲ್ಲಿ ನಟ ಮೋಹನ್ ಲಾಲ್ ಅವರೊಂದಿಗೆ ಸಮರ್ಜಿತ್ ತೆರೆ ಹಂಚಿಕೊಂಡಿದ್ದಾರೆ. [೭]

ಚಲನಚಿತ್ರಗಳ ಪಟ್ಟಿ

[ಬದಲಾಯಿಸಿ]
ವರ್ಷ ಚಿತ್ರ ಪಾತ್ರ ಟಿಪ್ಪಣಿಗಳು
೨೦೧೨ ಸನ್ ಆಫ್ ಮುದ್ದೇ ಗೌಡ ಬಾಲಕ ದೇವ್
೨೦೧೫ ಲವ್ ಯು ಆಲಿಯ ಲಿಫ್ಟ್ ನಲ್ಲಿ ಇರುವ ಹುಡುಗ
೨೦೧೮ ಸಮ್ಮರ್ ಹಾಲಿಡೇಸ್
೨೦೨೪ ಗೌರಿ ರಾಜ/ಗೌರಿ
೨೦೨೫ ವೃಷಭ ಹಯಗ್ರೀವ/ತೇಜವರ್ಮ ಮಲಯಾಳಂ ಚಿತ್ರ

ಪ್ರಶಸ್ತಿಗಳು

[ಬದಲಾಯಿಸಿ]
ವರ್ಷ ಪ್ರಶಸ್ತಿ ಮತ್ತು ವಿಭಾಗ ಚಲನಚಿತ್ರ ಉಲ್ಲೇಖ
೨೦೨೪ ಲ್ಯೂಮಿಯರ್‌ ರಾಷ್ಟ್ರ ಪ್ರಶಸ್ತಿ (ನವ ನಟ) ಗೌರಿ [೮]
೨೦೨೫ ಫಿಲ್ಮ್‌ ಫೇರ್‌ ಸೌತ್‌ ಪ್ರಶಸ್ತಿ (ನಾಯಕನಾಗಿ ಅತ್ಯುತ್ತಮ ಪಾದಾರ್ಪಣೆ) ಗೌರಿ [೯]
೨೦೨೫ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ (ನವ ನಟ) ಗೌರಿ [೧೦]
೨೦೨೫ ಸೈಮಾ ಪ್ರಶಸ್ತಿ (ನವ ನಟ) ಗೌರಿ [೧೧]
೨೦೨೫ ಪತ್ರಕರ್ತರ ವೀಶೇಷ ಪ್ರಶಸ್ತಿ (ನವ ನಟ) ಗೌರಿ [೧೨]
೨೦೨೫ ಚಿತ್ತಾರ ಚಲನಚಿತ್ರ ಪ್ರಶಸ್ತಿ ಗೌರಿ


ಉಲ್ಲೇಖಗಳು

[ಬದಲಾಯಿಸಿ]
  1. ↑ M.V, Vivek (2024-08-16). "'Gowri' movie review: Samarjit Lankesh's launchpad squanders its potential". The Hindu (in Indian English). ISSN 0971-751X. Retrieved 2026-04-29.
  2. ↑ "I am glad that Samarjit is carrying forward my father's legacy: Indrajit Lankesh". The Times of India. 2024-08-10. ISSN 0971-8257. Retrieved 2026-04-29.
  3. ↑ "Movies were always on my mind: Samarjit Lankesh". The Times of India. 2023-08-19. ISSN 0971-8257. Retrieved 2026-04-29.
  4. ↑ Sharadhaa, A. (2018-07-30). "I would rather work with children than any big star: Kavitha Lankesh". The New Indian Express (in ಇಂಗ್ಲಿಷ್). Retrieved 2026-04-29.
  5. ↑ Team, InsightRush (2025-09-07). "Samarjit Lankesh Shines at SAIMA Awards, Wins Best Debut Actor for 'Gauri'..!". InsightRush (in ಇಂಗ್ಲಿಷ್). Retrieved 2026-05-02.
  6. ↑ Kannada, TV9 (2026-02-25). "ಫಿಲ್ಮ್​ಫೇರ್: ಲಂಕೇಶ್, ಇಂದ್ರಜಿತ್ ಬಳಿಕ ಸಮರ್ಜಿತ್​ಗೂ ಒಲಿದ ಪ್ರತಿಷ್ಠಿತ ಪ್ರಶಸ್ತಿ". TV9 Kannada. Retrieved 2026-05-02. {{cite web}}: zero width space character in |title= at position 7 (help)CS1 maint: numeric names: authors list (link)
  7. ↑ "Vrusshabha box office collection day 3: Mohanlal's 'epic' disaster grosses just 1/56th of its budget; fares worse than Barroz, Monster". The Indian Express (in ಇಂಗ್ಲಿಷ್). 2025-12-28. Retrieved 2026-04-29.
  8. ↑ Service, Express News (2024-09-25). "Samarjit Lankesh sparks interest from Lyca Productions". The New Indian Express (in ಇಂಗ್ಲಿಷ್). Retrieved 2026-05-02.
  9. ↑ Kannada, TV9 (2026-02-25). "ಫಿಲ್ಮ್​ಫೇರ್: ಲಂಕೇಶ್, ಇಂದ್ರಜಿತ್ ಬಳಿಕ ಸಮರ್ಜಿತ್​ಗೂ ಒಲಿದ ಪ್ರತಿಷ್ಠಿತ ಪ್ರಶಸ್ತಿ". TV9 Kannada. Retrieved 2026-05-02. {{cite web}}: zero width space character in |title= at position 7 (help)CS1 maint: numeric names: authors list (link)
  10. ↑ Jan 28, ByY Maheswara ReddyY Maheswara Reddy / Updated:; 2025; Ist, 06:00. "'Subsidies, awards for movies to be sanctioned soon'". Bangalore Mirror (in ಇಂಗ್ಲಿಷ್). Retrieved 2026-05-02. {{cite web}}: |first= has generic name (help); |last2= has numeric name (help)CS1 maint: extra punctuation (link) CS1 maint: numeric names: authors list (link)
  11. ↑ Team, InsightRush (2025-09-07). "Samarjit Lankesh Shines at SAIMA Awards, Wins Best Debut Actor for 'Gauri'..!". InsightRush (in ಇಂಗ್ಲಿಷ್). Retrieved 2026-05-02.
  12. ↑ Fb; Tw; Linkdin; Whatsapp. "ಬೆಸ್ಟ್ ಆ್ಯಕ್ಟರ್ ಪ್ರಶಸ್ತಿ ಪಡೆದ ನಿರ್ದೇಶಕ ಇಂದ್ರಜಿತ್ ಪುತ್ರ ಸಮರ್ಜಿತ್ ಲಂಕೇಶ್". Asianet Suvarna News. Retrieved 2026-05-02.