ವಿಷಯಕ್ಕೆ ಹೋಗು

ಸನ್ ಚುನ್‌ಲಾನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸನ್ ಚುನ್‌ಲಾನ್
孙春兰
2021ರಲ್ಲಿ ಸನ್ ಚುನ್‌ಲಾನ್

ಚೀನಾದ ಉಪಪ್ರಧಾನಿ
ಅಧಿಕಾರ ಅವಧಿ
19 ಮಾರ್ಚ್ 2018 – 11 ಮಾರ್ಚ್ 2023
Serving with ಹಾನ್ ಝೆಂಗ್, ಹು ಚುನ್‌ಹುವಾ, ಲಿಯು ಹೀ
Premier ಲಿ ಕಿಯಾಂಗ್

ಯುನೈಟೆಡ್ ಫ್ರಂಟ್ ವರ್ಕ್ ಡಿಪಾರ್ಟ್‌ಮೆಂಟ್ ಮುಖ್ಯಸ್ಥೆ
ಅಧಿಕಾರ ಅವಧಿ
31 ಡಿಸೆಂಬರ್ 2014 – 7 ನವೆಂಬರ್ 2017
ಪ್ರತಿನಿಧಿ ವಾಂಗ್ ಝೆಂಗ್ವೇ
ಝಾಂಗ್ ಯಿಜಿಯೊಂಗ್ (ಕಾರ್ಯನಿರ್ವಾಹಕ)
ಪೂರ್ವಾಧಿಕಾರಿ ಲಿಂಗ್ ಜಿಹುವಾ
ಉತ್ತರಾಧಿಕಾರಿ ಯು ಕ್ವಾನ್

ಟಿಯಾಂಜಿನ್ ಪಕ್ಷ ಕಾರ್ಯದರ್ಶಿ
ಅಧಿಕಾರ ಅವಧಿ
21 ನವೆಂಬರ್ 2012 – 30 ಡಿಸೆಂಬರ್ 2014
ಪೂರ್ವಾಧಿಕಾರಿ ಝಾಂಗ್ ಗಾವೋಲಿ
ಉತ್ತರಾಧಿಕಾರಿ ಹುವಾಂಗ್ ಶಿಂಗ್‌ಗುಓ (ಕಾರ್ಯನಿರ್ವಹಣೆ)

ಫುಜಿಯನ್ ಪಕ್ಷ ಕಾರ್ಯದರ್ಶಿ
ಅಧಿಕಾರ ಅವಧಿ
30 ನವೆಂಬರ್ 2009 – 21 ನವೆಂಬರ್ 2012
ಪೂರ್ವಾಧಿಕಾರಿ ಲು ಝಾಂಗೋಂಗ್
ಉತ್ತರಾಧಿಕಾರಿ ಯು ಕ್ವಾನ್

ಡಾಲಿಯನ್ ಪಕ್ಷ ಕಾರ್ಯದರ್ಶಿ
ಅಧಿಕಾರ ಅವಧಿ
2001 – 2005
ಪೂರ್ವಾಧಿಕಾರಿ ಬೋ ಶಿಲೈ
ಉತ್ತರಾಧಿಕಾರಿ ಝಾಂಗ್ ಚೆಂಗ್‌ಯಿನ್
ವೈಯಕ್ತಿಕ ಮಾಹಿತಿ
ಜನನ (1950-05-24) 24 May 1950 (age 76)
ಶೆನ್ಯಾಂಗ್, ಡೋಂಗ್ಬೇ ಪ್ರದೇಶ, ಚೀನಾ ಜನ ಗಣರಾಜ್ಯ
ರಾಜಕೀಯ ಪಕ್ಷ ಚೀನೀ ಕಮ್ಯೂನಿಸ್ಟ್ ಪಕ್ಷ (1973–ಪ್ರಸ್ತುತ)
ಅಭ್ಯಸಿಸಿದ ವಿದ್ಯಾಪೀಠ ಅನ್ಶಾನ್ ಇಂಡಸ್ಟ್ರಿಯಲ್ ಟೆಕ್ನಾಲಜಿ ಕಾಲೇಜು
ವೃತ್ತಿ ರಾಜಕಾರಣಿ

ಸನ್ ಚುನ್‌ಲಾನ್ (Chinese: 孙春兰; ಜನನ 24 ಮೇ 1950) ನಿವೃತ್ತ ಚೀನೀ ರಾಜಕಾರಣಿ. ಅವರು ಮಾರ್ಚ್ 2023ರವರೆಗೆ ಚೀನಾದ ಎರಡನೇ ಸ್ಥಾನದಲ್ಲಿದ್ದ ಚೀನಾದ ಉಪಪ್ರಧಾನಿಯಾಗಿ ಮತ್ತು ಚೀನಾದ ಅತ್ಯುನ್ನತ ಹುದ್ದೆಯ ಮಹಿಳಾ ಸರ್ಕಾರದ ಅಧಿಕಾರಿಯಾಗಿಯೂ ಸೇವೆ ಸಲ್ಲಿಸಿದರು. ಇದಕ್ಕೂ ಮೊದಲು ಅವರು ಚೀನೀ ಕಮ್ಯೂನಿಸ್ಟ್ ಪಕ್ಷದ ಪೊಲಿಟ್‌ಬ್ಯೂರೋ ಸದಸ್ಯೆಯಾಗಿದ್ದರು.

ಡಾಲಿಯನ್ ಕರಾವಳಿ ನಗರದ ಪಕ್ಷ ಕಾರ್ಯದರ್ಶಿಯಾಗಿ ಮತ್ತು ಆಲ್-ಚೈನಾ ಫೆಡರೇಷನ್ ಆಫ್ ಟ್ರೇಡ್ ಯೂನಿಯನ್ಸ್ನ ಮೊದಲ ಕಾರ್ಯದರ್ಶಿಯಾಗಿ ಅವರು ಸೇವೆ ಸಲ್ಲಿಸಿದರು. 2009ರಿಂದ 2014ರವರೆಗೆ ಅವರು ಪ್ರಾದೇಶಿಕ ಮಟ್ಟದ ಎರಡು ಪ್ರಮುಖ ಹುದ್ದೆಗಳನ್ನು ವಹಿಸಿಕೊಂಡರು — ಮೊದಲು ಫುಜಿಯನ್ ಪ್ರಾಂತ್ಯದ ಪಕ್ಷ ಕಾರ್ಯದರ್ಶಿಯಾಗಿ, ನಂತರ ಚೀನಾದ ನಾಲ್ಕು ನೇರ ನಿಯಂತ್ರಿತ ಮಹಾನಗರಗಳಲ್ಲಿ ಒಂದಾದ ಟಿಯಾಂಜಿನ್ನ ಪಕ್ಷ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದರು. 1949ರಲ್ಲಿ ಚೀನಾದ ಜನ ಗಣರಾಜ್ಯ ಸ್ಥಾಪನೆಯಾದ ನಂತರ ಪ್ರಾಂತ್ಯ ಮಟ್ಟದ ಪಕ್ಷ ಕಾರ್ಯದರ್ಶಿಯಾಗಿದ ಎರಡನೇ ಮಹಿಳೆ ಅವರು (ಮೊದಲನೆಯವರು ವಾನ್ ಶಾಫೆನ್).

2014ರಿಂದ 2017ರವರೆಗೆ ಅವರು ಚೀನೀ ಕಮ್ಯೂನಿಸ್ಟ್ ಪಕ್ಷದ ಕೇಂದ್ರ ಸಮಿತಿಯ ಯುನೈಟೆಡ್ ಫ್ರಂಟ್ ವರ್ಕ್ ಡಿಪಾರ್ಟ್‌ಮೆಂಟ್ ಮುಖ್ಯಸ್ಥೆಯಾಗಿದ್ದರು.

ಆರಂಭಿಕ ಜೀವನ ಮತ್ತು ಶಿಕ್ಷಣ

[ಬದಲಾಯಿಸಿ]

ಸನ್ ಚುನ್‌ಲಾನ್ ಅವರು 24 ಮೇ 1950ರಂದು ಹೆಬೈ ಪ್ರಾಂತ್ಯದ ರಾವಯಾಂಗ್ ಕೌಂಟಿಯಲ್ಲಿ ಜನಿಸಿದರು. 1965ರಲ್ಲಿ ಅವರು ಲಿಯಾನಿಂಗ್ನ ಅನ್ಶಾನ್ ಇಂಡಸ್ಟ್ರಿಯಲ್ ಟೆಕ್ನಾಲಜಿ ಅಕಾಡೆಮಿಯಲ್ಲಿ ದಾಖಲಾದರು. 1969ರಲ್ಲಿ ಯಾಂತ್ರಿಕಶಾಸ್ತ್ರದಲ್ಲಿ ಪದವಿ ಪಡೆದ ನಂತರ ಅನ್ಶಾನ್ ಘಡಿಯಾರ ಕಾರ್ಖಾನೆಯಲ್ಲಿ ಕೆಲಸ ಆರಂಭಿಸಿದರು.[೧]

1971ರಲ್ಲಿ ಕಾರ್ಖಾನೆಯ ಚೀನೀ ಕಮ್ಯೂನಿಸ್ಟ್ ಪಕ್ಷದ ಶಾಖೆಯ ಸದಸ್ಯರಾದರು.[೨] 1973ರ ಮೇನಲ್ಲಿ ಸಾಂಸ್ಕೃತಿಕ ಕ್ರಾಂತಿಯ ಅಂತಿಮ ಹಂತದಲ್ಲಿ ಅವರು ಚೀನೀ ಕಮ್ಯೂನಿಸ್ಟ್ ಪಕ್ಷಕ್ಕೆ ಸೇರ್ಪಡೆಯಾದರು. ನಂತರ ಅನ್ಶಾನ್ ನಗರದಲ್ಲಿ ಯುವ ಕಮ್ಯೂನಿಸ್ಟ್ ಲೀಗ್ ಕಾರ್ಯದರ್ಶಿಯಾಗಿ ಮತ್ತು ವಸ್ತ್ರ ಕಾರ್ಖಾನೆಯ ನಿರ್ವಹಕಿಯಾಗಿ ಕೆಲಸ ಮಾಡಿದರು. 1988ರಿಂದ 1991ರವರೆಗೆ ಅನ್ಶಾನ್ ಮಹಿಳಾ ಫೆಡರೇಷನ್ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದರು.[೩]

ರಾಜಕೀಯ ವೃತ್ತಿಜೀವನ

[ಬದಲಾಯಿಸಿ]

1990ರಲ್ಲಿ ಅವರು ಲಿಯಾನಿಂಗ್ ಪ್ರಾಂತ್ಯದ ಪಕ್ಷ ಆಡಳಿತಕ್ಕೆ ನೇರವಾಗಿ ವರದಿ ಮಾಡುವ ಸಂಸ್ಥೆಗಳಿಗೆ ವರ್ಗಾಯಿಸಲ್ಪಟ್ಟರು. 1991ರಲ್ಲಿ ಲಿಯಾನಿಂಗ್ ಕಾರ್ಮಿಕ ಸಂಘದ ಉಪಾಧ್ಯಕ್ಷೆಯಾಗಿದ್ದು, 1993ರಲ್ಲಿ ಮಹಿಳಾ ಸಂಘದ ಮುಖ್ಯಸ್ಥೆಯಾಗಿದರು. 1994ರಲ್ಲಿ ಲಿಯಾನಿಂಗ್ ಕಾರ್ಮಿಕ ಸಂಘದ ಅಧ್ಯಕ್ಷೆಯಾಗಿದ್ದು, 1995ರಲ್ಲಿ ಪ್ರಾಂತ್ಯದ ಪಕ್ಷ ಸ್ಥಾಯಿ ಸಮಿತಿಗೆ ಸೇರ್ಪಡೆಯಾದರು.[೪]2001ರಲ್ಲಿ ಅವರು ಡಾಲಿಯನ್ ನಗರದ ಪಕ್ಷ ಕಾರ್ಯದರ್ಶಿಯಾಗಿ ನೇಮಕಗೊಂಡು 2005ರವರೆಗೆ ಸೇವೆ ಸಲ್ಲಿಸಿದರು.

ಫುಜಿಯನ್

[ಬದಲಾಯಿಸಿ]

ಡಿಸೆಂಬರ್ 2009ರಲ್ಲಿ ನಡೆದ ಪುನರ್‌ವ್ಯವಸ್ಥೆಯಲ್ಲಿ ಸನ್ ಚುನ್‌ಲಾನ್ ಅವರು ಫುಜಿಯನ್ ಪ್ರಾಂತ್ಯದ ಪಕ್ಷ ಕಾರ್ಯದರ್ಶಿಯಾಗಿ ನೇಮಕಗೊಂಡರು.[೫]ಇದು ಮಹಿಳೆಯೊಬ್ಬರು ಇಂತಹ ಉನ್ನತ ಹುದ್ದೆ ಪಡೆದ ಅಪರೂಪದ ಉದಾಹರಣೆಯಾಗಿತ್ತು.[೬]

ಟಿಯಾಂಜಿನ್

[ಬದಲಾಯಿಸಿ]

2012ರ 18ನೇ ಪಕ್ಷ ಕಾಂಗ್ರೆಸ್ ನಂತರ ಅವರು ಟಿಯಾಂಜಿನ್ ಮಹಾನಗರದ ಪಕ್ಷ ಕಾರ್ಯದರ್ಶಿಯಾದರು. ಈ ಮೂಲಕ ಅವರು ನೇರ ನಿಯಂತ್ರಿತ ಮಹಾನಗರದ ಮೊದಲ ಮಹಿಳಾ ಪಕ್ಷ ಕಾರ್ಯದರ್ಶಿಯಾಗಿ ಇತಿಹಾಸ ನಿರ್ಮಿಸಿದರು.[೭]

ಯುನೈಟೆಡ್ ಫ್ರಂಟ್ ವರ್ಕ್ ಡಿಪಾರ್ಟ್‌ಮೆಂಟ್

[ಬದಲಾಯಿಸಿ]

31 ಡಿಸೆಂಬರ್ 2014ರಂದು ಅವರು ಯುನೈಟೆಡ್ ಫ್ರಂಟ್ ವರ್ಕ್ ಡಿಪಾರ್ಟ್‌ಮೆಂಟ್ ಮುಖ್ಯಸ್ಥೆಯಾದರು. ಈ ಹುದ್ದೆಯಲ್ಲಿ ಪೊಲಿಟ್‌ಬ್ಯೂರೋ ಸ್ಥಾನ ಹೊಂದಿದ ಮೊದಲ ಮಹಿಳೆಯಾಗಿದ್ದರು.[೮]

ಉಪಪ್ರಧಾನಿ

[ಬದಲಾಯಿಸಿ]

ಮಾರ್ಚ್ 2018ರಲ್ಲಿ ಸನ್ ಚುನ್‌ಲಾನ್ ಅವರನ್ನು ಚೀನಾದ ಉಪಪ್ರಧಾನಿಯಾಗಿ ನೇಮಕ ಮಾಡಲಾಯಿತು.[೯] 2022ರ ಬೀಜಿಂಗ್ ಚಳಿಗಾಲದ ಒಲಿಂಪಿಕ್ಸ್ ಸಂದರ್ಭದಲ್ಲಿ COVID-19 ನಿರ್ವಹಣೆಗೆ ನೀಡಿದ ಕೊಡುಗೆಗಾಗಿ ಅವರಿಗೆ ಗೋಲ್ಡ್ ಒಲಿಂಪಿಕ್ ಆರ್ಡರ್ ಪ್ರದಾನಿಸಲಾಯಿತು.[೧೦][೧೧]

ನಿವೃತ್ತಿ ನಂತರ

[ಬದಲಾಯಿಸಿ]

9 ನವೆಂಬರ್ 2023ರಂದು ಸನ್ ಚುನ್‌ಲಾನ್ ಅವರು ಅಂತರರಾಷ್ಟ್ರೀಯ ಕನ್ಫ್ಯೂಷಿಯನ್ ಸಂಘದ ಅಧ್ಯಕ್ಷೆಯಾದರು.[೧೨]

ಉಲ್ಲೇಖಗಳು

[ಬದಲಾಯಿಸಿ]
  1. ↑ "Sun is widely considered a protégé of Hu Jintao, but it is unclear where and when Sun established her client relationship with Hu. Their political connection likely occurred or was consolidated during her study at the Central Party School in the early 1990s, when Hu served as president of the school." Cheng Li, Sun Chunlan 孙春兰: One of China's Top Future Leaders to Watch Archived 2013-06-02 at the Wayback Machine. The Brookings Institution John L. Thornton China Center, originally published in the China Leadership Monitor. Accessed on 1 January 2014.
  2. ↑ "From Worker to CPC Provincial Secretary". Women of China. 2009-04-12. Retrieved 2009-12-31. [dead link]
  3. ↑ "Sun Chunlan 孙春兰" (PDF). Brookings Institution. Retrieved 26 September 2024.
  4. ↑ "Sun Chunlan 孙春兰" (PDF). Brookings Institution. Retrieved 26 September 2024.
  5. ↑ "Sun Chunlan 孙春兰" (PDF). Brookings Institution. Retrieved 26 September 2024.
  6. ↑ 中国新闻社 (2009). 中国新闻周刊 (in Chinese). 中国新闻社. p. 20. Retrieved 2025-01-21.
  7. ↑ [ಸೂಕ್ತ ಉಲ್ಲೇಖನ ಬೇಕು]
  8. ↑ "孙春兰、王正伟先后加持,中央统战部领导班子规格再创新高". The Paper. April 15, 2015. Archived from the original on March 4, 2016. Retrieved May 31, 2020.
  9. ↑ "国务院副总理、国务委员、各部部长完整名单". Xinhua. 2018-03-19. Archived from the original on 2018-03-19. Retrieved 2018-03-19.
  10. ↑ "IOC thanks Beijing 2022 for memorable Olympic Winter Games". International Olympic Committee. 2022-02-21. Archived from the original on 2022-03-08. Retrieved 2022-02-21.
  11. ↑ ""清零沙皇"孙春兰:中共高层"孤独"的女性领导人". The New York Times (in Chinese). 20 October 2022. Archived from the original on 2023-01-06. Retrieved 2023-09-27.
  12. ↑ "第六届国际儒学联合会执行委员会会议在京召开" [The 6th Executive Committee Meeting of the International Confucian Association was held in Beijing]. www.chinakongzi.org. 10 November 2023. Retrieved 31 October 2024.

ಬಾಹ್ಯ ಕೊಂಡಿಗಳು

[ಬದಲಾಯಿಸಿ]
  • ವಿಕಿಕೋಟ್‍ನಲ್ಲಿ ಸನ್ ಚುನ್‌ಲಾನ್ ಗೆ ಸಂಬಂಧಿತ ಉಲ್ಲೇಖಗಳು