ಸದಸ್ಯ:Viveka.M.1610466/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇವರು ಒಬ್ಬ ಬ್ರಿಟೀಷ್ ನಿಸರ್ಗ ವಿಜ್ಞಾನಿ. ಇವರು ಎಲ್ಲಾ ಪ್ರಭೇದಗಳ ವಿಕಸನ ಒಂದೇ ಮೂಲದಿಂದ ವಂಶಾನುಗತವಾಗಿ ಹಾಗೂ ಕಾಲಾನುಕ್ರಮವಾಗಿ ನಡೆದಿದೆ ಎಂದು ಪ್ರತಿಪಾದಿಸಿದರು.ಇವರ ವೈಜ್ಞಾನಿಕ ಸಿದ್ದಾಂತವು ವಿಕಸನ ಪ್ರಕ್ರಿಯೆಯಲ್ಲಿ ಜೀವ ಪ್ರಭೇದಗಳ ವಿಭಜನೆಯು ನೈಸರ್ಗಿಕ ಆಯ್ಕೆಯ ಪರಿಣಾಮವಾಗಿದೆ ಎಂದು ಪ್ರತಿಪಾದಿಸುತ್ತದೆ. ಜೀವ ಬದುಕಿ ಉಳಿಯಲು ಸಂಘಷ೯ ಮಾಡುತ್ತವೆ ಹಾಗೂ ಆ ನಿಟ್ಟಿನಲ್ಲಿ ಸಂಗಾತಿಯನ್ನು ಆಯ್ಕೆ ಮಾಡುತ್ತವೆ. ೧೮೫೯ ರಲ್ಲಿ ಪ್ರಕಟಿಸಿದ 'ಆನ್ ದಿ ಒರಿಜಿನ್ ಆಫ್ ಸ್ಪೀಷೀಸ್' ಕೃತಿಯಲ್ಲಿ ಪುರಾವೆಗಳೊಂದಿಗೆ ವಿಕಸನ ಸಿದ್ಧಾಂತವನ್ನು ಮಂಡಿಸಿ ಅಂದು ಪ್ರಚಲಿತದಲ್ಲಿದ್ದ ಪ್ರಭೇದಗಳ 'ರೂಪ ಬದಲಾವಣೆ ಸಿದ್ಧಾಂತವು ತಿರಸ್ಕೃತಗೊಳ್ಳಲು ಕಾರಣರಾದರು.

ಚಾರ್ಲ್ಸ್ ಡಾರ್ವಿನ್ ರವರ ಛಾಯಾಚಿತ್ರ

೧೮೭೦ರ ದಶಕದಲ್ಲಿ ವೈಜ್ಞಾನಿಕ ಸಮುದಾಯ ಮತ್ತು ಬಹುತೇಕ ಜನತೆಯೆಲ್ಲರೂ ವಿಕಾಸ ವಾದವನ್ನು ಸತ್ಯವೆಂದು ಒಪ್ಪಿದ್ದರು. ಬದಲಾದ ರೂಪದಲ್ಲಿ ಡಾರ್ವಿನ್ ನ ವಿಕಾಸ ವಾದವು ಜೀವ ವಿಜ್ಞಾನದ ಪ್ರಮುಖ ಸಿದ್ಧಾಂತವಾಗಿದ್ದು, ಜೀವಿಗಳಲ್ಲಿನ ವೈವಿಧ್ಯತೆಯನ್ನು ವಿವರಿಸುತ್ತದೆ.

ಆರಂಭಿಕ ಅಧ್ಯಯನ[ಬದಲಾಯಿಸಿ]

ಡಾರ್ವಿನ್ ರವರಿಗೆ ತಮ್ಮ ಜೀವನದ ಆರಂಭಿಕ ಹಂತಗಳಲ್ಲೇ ಪ್ರಕೃತಿಯ ಮೇಲೆ ಆಸಕ್ತಿ ಬೆಳೆದು, ಅವರು ಯೂನಿವರ್ಸಿಟಿ ಆಫ್ ಎಡಿನ್ ಬರ್ಗ್ ನಲ್ಲಿನ ತಮ್ಮ ವೈದ್ಯಕೀಯ ಶಾಸ್ತ್ರದ ಅಧ್ಯಯನವನ್ನು ನಿರ್ಲಕ್ಷಿಸಿದರು. ಬದಲಿಗೆ ಅವರು ಜಲಚರ ಅಕಶೇರುಕಗಳನ್ನು ಅಧ್ಯಯನ ಮಾಡುವಲ್ಲಿ ಸಹಾಯ ಮಾಡಿದರು. ಯೂನಿವರ್ಸಿಟಿ ಆಫ್ ಕೇಂಬ್ರಿಡ್ಜ್ ನಲ್ಲಿನ ವ್ಯಾಸಂಗವು ಅವರಲ್ಲಿ ನೈಸರ್ಗಿಕ ವಿಜ್ಞಾನದ ಬಗೆಗೆ ಅನುರಾಗ ಹುಟ್ಟುಹಾಕಿತು.

ಎಚ್.ಎಮ್.ಎಸ್. ಬೀಗಲ್ ಪ್ರಯಾಣ[ಬದಲಾಯಿಸಿ]

ಎಚ್. ಎಮ್. ಎಸ್. ಬೀಗಲ್ ಹಡಗು

ಎಚ್.ಎಮ್.ಎಸ್ ಬೀಗಲ್ ಎಂಬ ಹಡಗಿನಲ್ಲಿ ಇವರು ಕೈಗೊಂಡ ಐದು ವರ್ಷದ ಪ್ರಯಾಣವೊಂದರಲ್ಲಿ ಸಾಕಷ್ಟು ಪಳೆಯುಳಿಕೆಗಳನ್ನು ಕಲೆಹಾಕಿದ್ದರು. ಈ ಪಳೆಯುಳಿಕೆಗಳು ಹಾಗೂ ವನ್ಯಜೀವಿಗಳ ಭೌಗೋಳಿಕ ವಿಭಜನೆಯ ಬಗೆಗೆ ಆಸಕ್ತಿ ತಾಳಿ ಸುದೀರ್ಘ ಅಧ್ಯಯನದ ಬಳಿಕ ೧೮೩೮ರಲ್ಲಿ ಮೊದಲ ಬಾರಿಗೆ ತಮ್ಮ ನೈಸರ್ಗಿಕ ಆಯ್ಕೆಯ ಸಿದ್ಧಾಂತವನ್ನು ರೂಪಿಸತೊಡಗಿದರು. ತಮ್ಮ ಸಿದ್ಧಾಂತವನ್ನು ಹಲವು ನಿಸರ್ಗ ವಿಜ್ಙಾನಿಗಳೊಂದಿಗೆ ಚರ್ಚಿಸಿದರಾದರೂ, ಅವರಿಗೆ ಸುದೀರ್ಘ ಸಂಶೋಧನೆಗೆ ಕಾಲಾವಕಾಶದ ಅವಶ್ಯಕತೆಯಿದ್ದಿತು. ೧೮೫೮ರಲ್ಲಿ ಆಲ್ಫ್ರೆಡ್ ರಸೆಲ್ ವಾಲೇಸ್ ರವರು ತಮ್ಮ ಪ್ರಬಂಧವೊಂದನ್ನು ಡಾರ್ವಿನ್ ರಿಗೆ ಕಳಿಸಿಕೊಟ್ಟರು. ಈ ಪ್ರಬಂಧವೂ ಡಾರ್ವಿನ್ ರ ವಿಚಾರಸರಣಿಯನ್ನೇ ಒಳಗೊಂಡಿತ್ತಾದ್ದರಿಂದ ಇಬ್ಬರೂ ವಿಜ್ಞಾನಿಗಳ ಜಂಟಿ ಸಿದ್ಧಾಂತಗಳ ಪ್ರಕಟಣೆಗೆ ದಾರಿಯಾಯಿತು.

ಜನನ ಮತ್ತು ಕೌಟುಂಬಿಕ ಹಿನ್ನೆಲೆ[ಬದಲಾಯಿಸಿ]

ಡಾರ್ವಿನ್ ಇಂಗ್ಲೆಂಡಿನ ಶ್ರೂಸ್‍ಬೆರಿಯಲ್ಲಿ ‍ಫೆಬ್ರವರಿ ೧೨, ೧೮೦೯ ರಲ್ಲಿ ಜನಿಸಿದರು. ತಂದೆ ರಾಬರ್ಟ್ ಡಾರ್ವಿನ್ ಹಾಗೂ ತಾಯಿ ಸುಸಾನಾ ಡಾರ್ವಿನ್ ರ ಐದನೇ ಮಗುವಾಗಿ (ಆರರಲ್ಲಿ) ಜನಿಸಿದರು. ಚಾರ್ಲ್ಸ್ ಇಬ್ಬರು ನಿರ್ಮೂಲನವಾದಿಗಳ ಮೊಮ್ಮಗನಾಗಿದ್ದರು- ತಂದೆಯ ಕಡೆಯಿಂದ ಎರಾಸ್ಮಸ್ ಡಾರ್ವಿನ್ ಹಾಗೂ ತಾಯಿಯ ಕಡೆಯಿಂದ ಜೋಸಿಯ ವೆಜ್‍ವುಡ್. ಎರಡೂ ಕುಟುಂಬಗಳು ಏಕಮೂರ್ತಿವಾದದ ಪ್ರತಿಪಾದಕರಾಗಿದ್ದವು.

ಶಿಕ್ಷಣ[ಬದಲಾಯಿಸಿ]

ಚಾರ್ಲ್ಸ್ ೧೮೨೫ರ ಬೇಸಿಗೆಯನ್ನು ಕಲಿಕೆಯ ವೈದ್ಯರಾಗಿ, ತಮ್ಮ ತಂದೆಗೆ ಬಡವರಿಗೆ ಚಿಕಿತ್ಸೆ ಕೊಡುವಲ್ಲಿ ಸಹಾಯ ಮಾಡುತ್ತಾ ಕಳೆದರು. ನಂತರ ಯೂನಿವರ್ಸಿಟಿ ಆಫ್ ಎಡಿನ್‍ಬರ್ಗ್ ಮೆಡಿಕಲ್ ಸ್ಕೂಲಿಗೆ ತಮ್ಮ ಸಹೋದರ ಎರಾಸ್ಮಸ್ ರೊಂದಿಗೆ ೧೮೨೫ರ ಅಕ್ಟೋಬರ್ ನಲ್ಲಿ ಹೋದರು. ಅವರಿಗೆ ಉಪನ್ಯಾಸಗಳು ನೀರಸವಾಗಿಯೂ, ಶಸ್ತ್ರಚಿಕಿತ್ಸೆಗಳು ಸಂಕಷ್ಟಕರವಾಗಿಯೂ ಕಂಡ ಕಾರಣ ಅವರು ತಮ್ಮ ಓದನ್ನು ನಿರ್ಲಕ್ಷಿಸಿದರು. ಜಾನ್ ಎಡ್ಮನ್‍ಸ್ಟೋನ್ ರಿಂದ ೪೦ ದಿನಗಳ ಕಾಲ ದಿನಕ್ಕೆ ಒಂದು ಘಂಟೆಯಂತೆ ಚರ್ಮಪ್ರಸಾಧನವನ್ನು ಅಭ್ಯಸಿಸಿದರು.

ತಮ್ಮ ಪದವಿ ಶಿಕ್ಷಣದ ಎರಡನೆಯ ವರ್ಷದಲ್ಲಿ ಡಾರ್ವಿನ್ 'ಪ್ಲೀನಿಯನ್ ಸೊಸೈಟಿ'ಯನ್ನು ಸೇರಿದರು.

ಅನಾರೋಗ್ಯ[ಬದಲಾಯಿಸಿ]

ದ್ರವ್ಯಾಂತರಣದ ಬಗೆಗಿನ ತಮ್ಮ ಅಧ್ಯಯನ ಸಿದ್ಧಪಡಿಸುವಾಗ ಅತಿಯಾದ ಕೆಲಸದಲ್ಲಿ ಡಾರ್ವಿನ್ ಮುಳುಗಿದರು. ಈ ಅತಿಯಾದ ಕೆಲಸದ ಪರಿಣಾಮವಾಗಿ ಡಾರ್ವಿನ್ ರವರ ಆರೋಗ್ಯ ಕೆಟ್ಟಿತು. ಸೆಪ್ಟೆಂಬರ್ ೨೦ರಂದು ಉದ್ವೇಗದ ಎದೆಬಡಿತವನ್ನು ಅನುಭವಿಸಿದರು. ಡಾರ್ವಿನ್ ರ ವೈದ್ಯರು ಅವರಿಗೆ ಎಲ್ಲ ಕೆಲಸವನ್ನೂ ನಿಲ್ಲಿಸಿ ನಿಸರ್ಗದ ಸಮೀಪ ಸಮಯ ಕಳೆಯಲು ತಿಳಿಹೇಳಿದರು. ಶ್ರೂಸ್‍ಬೆರಿ ಯನ್ನು ಸಂದರ್ಷಿಸಿದ ಬಳಿಕ ಸ್ಟಾಫರ್ಡ್‍ಶೈರ್‍ ನಲ್ಲಿ ವೆಜ್‍ವುಡ್‍ ಕುಟುಂಬವನ್ನು ಕೂಡಿಕೊಂಡರಾದರೂ,ಅವರ ಸಂಬಂಧಿಕರು ಪ್ರಯಾಣದ ಕಥೆಗಳನ್ನು ಕೇಳುವ ಉತ್ಸುಕತೆಯಲ್ಲಿ ಹೆಚ್ಚು ವಿಶ್ರಾಂತಿ ನೀಡಲಿಲ್ಲ.

ಮರಣ[ಬದಲಾಯಿಸಿ]

೧೮೮೨ರಲ್ಲಿ ಆಂಜೈನಾ ಪೆಕ್ಟೋರಿಸ್ ಎಂಬ ಖಾಯಿಲೆ ಹಾಗೂ ಹೃದಯರೋಗಕ್ಕೆ ಡಾರ್ವಿನ್ ತುತ್ತಾದರು. ಹೃದಯಸ್ತಂಭನವು ಅವರ ಸಾವಿಗೆ ಕಾರಣವಾಯಿತು.

೧೯ ಏಪ್ರಿಲ್ ೧೮೮೨ರಂದು ಡಾರ್ವಿನ್ ವಿಧಿವಶರಾದರು.ತಮ್ಮ ಪತ್ನಿ ಎಮ್ಮಾಗೆ "ನನಗೆ ಸಾವೆಂದರೆ ಕಿಂಚಿತ್ತೂ ಭಯವಿಲ್ಲ- ನನಗೆ ನೀನು ಒಳ್ಳೆಯ ಪತ್ನಿಯಾಗಿದ್ದೆ ಎಂದು ನೆನಪಿರಲಿ - ನನ್ನ ಮಕ್ಕಳೆಲ್ಲರೂ ನನಗೆ ಒಳ್ಳೆಯ ಮಕ್ಕಳಾಗಿದ್ದರೆಂದು ಅವರಿಗೆ ತಿಳಿಸು" ಎಂಬ ಮಾತುಗಳೊಂದಿಗೆ ಕೊನೆಯುಸಿರೆಳೆದರು.


ಉಲ್ಲೇಖಗಳು[ಬದಲಾಯಿಸಿ]

[೧] [೨] [೩]

  1. https://en.wikipedia.org/wiki/Charles_Darwin
  2. https://en.wikipedia.org/wiki/The_Voyage_of_the_Beagle
  3. http://www.biography.com/people/charles-darwin-9266433