ಸದಸ್ಯ:Vinaykumar14/WEP 2018-19 dec

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಇಂಡಿಯನ್ ಇನಿಶಿಯೇಟಿವ್ ಇನ್ ಗ್ರ್ಯಾವಿಟೇಷನಲ್-ವೇವ್ ಅಬ್ಸರ್ವೇಶನ್ಸ್ (ಇಂಡಿಗೋ)
Acronymಇಂಡಿಗೋ (ಲಿಗೋ)
Established11 ಫೆಬ್ರವರಿ 2016 (2016-02-11)
Headquartersಮಹಾರಾಷ್ಟ್ರ, ಹಿಂಗೋಲಿ, ಔನ್ಧ ನಗ್ನಾಥ್
Websitewww.gw-indigo.org

ಇಂಡಿಯನ್ ಇನಿಶಿಯೇಟಿವ್ ಇನ್ ಗ್ರ್ಯಾವಿಟೇಷನಲ್-ವೇವ್ ಅಬ್ಸರ್ವೇಶನ್ಸ್ (ಇಂಡಿಗೋ):-[ಬದಲಾಯಿಸಿ]

ಲಿಗೋ ಪ್ರಯೋಗಾಲಯ

ಭಾರತದ ಹೆಮ್ಮೆಯ ಹಾಗು ಮಹತ್ತರವಾದ ಯೋಜನೆಯೇ ಈ ಇಂಡಿಗೋ. ಈ ಯೋಜನೆಯು ಭಾರತದ ಭೌತಶಾಸ್ತ್ರಜ್ಞರ ಒಂದು ಒಕ್ಕೂಟ. ಗುರುತ್ವದ ಅಲೆಯನ್ನು ಪರೀಕ್ಷಿಸಲು ಭಾರತದ ಹಲವಾರು ಸಂಸ್ಥೆಗಳ ಸಹಾಯದಿಂದ ಮಹಾರಾಷ್ಟ್ರದ ಹಿಂಗೋಲಿಯ ಬಳಿ ಇರುವ ಔನ್ಧ ನಗ್ನಾಥ್ ಪ್ರಾಂತ್ಯದಲ್ಲಿ ಒಂದು ಗುರುತ್ವದ ಅಲೆಯ ಪರಿವೀಕ್ಷಣಾ ಪ್ರಯೋಗಾಲಯವನ್ನು ನಿರ್ಮಿಸಲಾಗಿದೆ. ೨೦೦೯ ರಿಂದ ಇಂಡಿಗೋ ಒಕ್ಕೂಟವು ಗುರುತ್ವದ ಅಲೆಯ ಪರಿವೀಕ್ಷಣಾ ಪ್ರಯೋಗಾಲಯವನ್ನು ಸಮರ್ಪಕವಾಗಿ ಸ್ಥಾಪಿಸಲು ಒಂದು ನಿರ್ಧಿಷ್ಟವಾದ ಯೋಜನೆಯನ್ನು ರೂಪಿಸುತ್ತಿದೆ. ಅಮೆರಿಕಾದ ಲಿಗೋ ಪ್ರಯೋಗಾಲಯದೊಂದಿಗೆ ನಮ್ಮ ಭಾರತದ ಇಂಡಿಗೋ ಪ್ರಯೋಗಾಲಯವು ಪಾಲುದಾರಿಕೆಯನ್ನು ವಹಿಸಿಕೊಂಡು ಲಿಗೋ ಪ್ರಯೋಗವನ್ನು ಆರಂಭಿಸಿದೆ. ಗುರುತ್ವದ ಅಲೆಯನ್ನು ಪತ್ತೆ ಮಾಡುವ ಒಂದು ವಿಶಿಷ್ಟವಾದ ಯಂತ್ರವನ್ನು ಭಾರತದ ಪ್ರಯೋಗಾಲಯದಲ್ಲಿ ಸ್ಥಾಪಿಸಲು ಭಾರತದ ಹಾಗು ಅಮೆರಿಕಾದ ವಿಜ್ಞಾನ ಸಂಸ್ಥೆಗಳು ಸಾಹಯ ಮಾಡಲು ಮುಂದಾಗಿದ್ದಾವೆ. ಭಾರತದಲ್ಲಿ ಲಿಗೋ ಪ್ರಯೋಗಾಲಯವನ್ನು ಸ್ಥಾಪಿಸಲು ಹಾಗು ಅದರ ವಿನ್ಯಾಸಗಳಿಗೆ ಆಸ್ಟ್ರೀಲಿಯಾ, ಜರ್ಮನಿ, ಯುನೈಟೆಡ್ ಕಿಂಗ್ಡಮ್, ಹೀಗೆ ಮುಂತಾದ ದೇಶಗಳು ಸಹಾಯ ಮಾಡಲು ಅಪೇಕ್ಷಿಸಿದ್ದಾವೆ. ಮಹಾರಾಷ್ಟ್ರದ ಹಿಂಗೋಲಿಯ ಬಳಿ ಇರುವ ಔನ್ಧ ನಗ್ನಾಥ್ ಬಳಿ ಪ್ರಯೋಗಾಲಯವನ್ನು ಸ್ಥಾಪಿಸಲು ಜಾಗವು ದೊರೆತ್ತಿದ್ದು, ಪ್ರಯೋಗಾಲಯ ಸ್ಥಾಪಿತವಾದ ನಂತರ ನಮ್ಮ ದೇಶದ ವಿಜ್ಞಾನಿಗಳೇ ಅಲ್ಲಿ ಪ್ರಯೋಗವನ್ನು ಮುಂದುವರೆಸುತ್ತಾರೆ.

ಚಟುವಟಿಕೆಗಳು:-[ಬದಲಾಯಿಸಿ]

ಲಿಗೋ ನಿಯಂತ್ರಣ ಕೊಠಡಿ

ಇಂಡಿಗೋ ಒಕ್ಕೂಟವು ಅಮೆರಿಕಾದ ಲಿಗೋ ಪ್ರಯೋಗಾಲಯದ ಸಹಯೋಗದೊಂದಿಗೆ ಭಾರತದ ಲಿಗೋ ಪ್ರಯೋಗಾಲಯದ ಸ್ಥಾಪನೆಯ ಪ್ರಸ್ತಾಪವನ್ನು ಸಲ್ಲಿಸಿದೆ. ಇದರೊಂದಿಗೆ ಗುರುತ್ವದ ಅಲೆಯ ಕುರಿತಾಗಿ ನವ ವಿಜ್ಞಾನಿಗಳಿಗೆ ಮಾಹಿತಿಯನ್ನು ಹಾಗು ಅದರ ಕುರಿತು ಪ್ರಯೋಗಗಳನ್ನು ವಿವರಿಸುವ ಸೌಕರ್ಯವನ್ನು ಇಂಡಿಗೋ ಒಕ್ಕೂಟವು ಯಶಸ್ವಿಯಾಗಿ ಮಾಡುತ್ತಿದೆ. ಜೊತೆಗೆ ವಿದ್ಯಾರ್ಥಿಗಳಿಗೆ ಹಾಗು ನವ ವಿಜ್ಞಾನಿಗಳಿಗೆ ತರಬೇತಿ ನೀಡುವ ಯೋಜನೆಯನ್ನು ರೂಪಿಸಿದೆ. ಈ ಪ್ರಯೋಗಾಲಯವು ಅಮೇರಿಕಾ ಹಾಗು ಭಾರತದ ಸಹಯೋಗದಿಂದ ಹಾಗು ಇಟಲಿಯ ವಿರ್ಗೋದ ಸಹಯೋಗದಿಂದ ಒಂದೇ ನೆಟವರ್ಕನ್ನು ಸ್ಥಾಪಿಸಿ ಗುರುತ್ವದ ಅಲೆಯ ಕುರಿತು ಪ್ರಯೋಗವನ್ನು ಮಾಡಲಾಗುತ್ತದೆ. ಈ ಪ್ರಯೋಗಾಲಯದಲ್ಲಿ ಸ್ಥಾಪಿಸಲಾಗುವ ಯಂತ್ರಗಳು ಅಮೆರಿಕಾದ ಅತ್ಯಂತ ಮುಂದುವರೆದ ಯಂತ್ರಗಳ ಸಮಾನವಾಗಿರಲಿವೆ.

ಉದ್ದೇಶ:-[ಬದಲಾಯಿಸಿ]

ಲಿಗೋ ಕಾರ್ಯವಿಧಾನ

ಇಂಡಿಗೋ ಒಕ್ಕೂಟದ ಮುಖ್ಯ ಉದ್ದೇಶವೇನೆಂದರೆ ಭಾರತದಲ್ಲಿಯೇ ಗುರುತ್ವದಲೆಯ ಪತ್ತೆಕಾರಕವನ್ನು ಲಿಗೋ ಪ್ರಯೋಗಾಲಯದಲ್ಲಿ ಸ್ಥಾಪಿಸುವುದು. ಇದರಿಂದ ಜಗತ್ತಿನ ಬೇರೆ ಬೇರೆಯ ಗುರುತ್ವದಲೆಯ ಪತ್ತೆಕಾರಕಗಳೊಂದಿಗೆ ಸಂಪರ್ಕವನ್ನು ಸ್ಥಾಪಿಸುವುದು. ಅಮೆರಿಕಾದ ಹ್ಯಾನ್ಫೋರ್ಡ್ ಮತ್ತು ಲಿವಿಂಗ್ಸ್ಟೋನಿನ ಎರೆಡು ಗುರುತ್ವದಲೆಯ ಪತ್ತೆಕಾರಕ, ಇಟಲಿಯ ವಿರ್ಗೋ ಗುರುತ್ವದಲೆಯ ಪತ್ತೆಕಾರಕ, ಯೂರೋಪಿನ ಜಿ.ಈ.ಓ.೬೦೦ ಗುರುತ್ವದಲೆಯ ಪತ್ತೆಕಾರಕ, ಜಪಾನಿನ ಕೆ.ಎ.ಆರ್.ಎ.ಜಿ. ಗುರುತ್ವದಲೆಯ ಪತ್ತೆಕಾರಕಗಳೊಂದಿಗೆ ಸಂಪರ್ಕವನ್ನು ಸಾಧಿಸುವುದು ಈ ಯೋಜನೆಯ ಮುಖ್ಯ ಉದ್ದೇಶ. ಇದರ ಉದ್ದೇಶವೇನೆಂದರೆ ಒಮ್ಮೆಲೇ ಎಲ್ಲಾ ಗುರುತ್ವದಲೆಯ ಪತ್ತೆಕಾರಕಗಳು ಜಗತ್ತಿನಾದ್ಯಂತ ಕಾರ್ಯ ನಿರ್ವಹಿಸಿದರೆ ಒಂದು ರೀತಿಯ ಸ್ಪಷ್ಟವಾದ ಹಾಗು ನಿಖರವಾದ ಮಾಹಿತಿಯು ದೊರಕುತ್ತದೆ. ಇಂಡಿಗೋ ಒಕ್ಕೂಟದ ಮತ್ತೊಂದು ಮುಖ್ಯ ಉದ್ದೇಶವೇನೆಂದರೆ ಭಾರತದ ನವ ವಿಜ್ಞಾನಿಗಳಿಗೆ ಮುಂಬರುವ ಅನೇಕ ಮುಖ್ಯ ಯೋಜನೆಗಳನ್ನು ನಿರ್ವಹಿಸುವ ಕೌಶಲ್ಯವನ್ನು ಕರಗತ ಮಾಡಿಸುವುದು. ಪತ್ತೆಕಾರಕದ ಮೂಲ ಸ್ಥಳೀಕರಣವನ್ನು ಹಂತ ಹಂತವಾಗಿ ಅಭಿವೃದ್ಧಿಗೊಳಿಸುವ ಉದ್ದೇಶವನ್ನು ಇಂಡಿಗೋ ಒಕ್ಕೂಟವು ಹೊಂದಿದೆ.

ಬಂಡವಾಳ ಹೂಡಿಕೆ:-[ಬದಲಾಯಿಸಿ]

ಗುರುತ್ವದ ತರಂಗಗಳು

ಭಾರತದ ಲಿಗೋ ಪ್ರಯೋಗಾಲಯದ ಪತ್ತೆಕಾರಕಕ್ಕಾಗಿ ಹೆಚ್ಚುವರಿ ಬಂಡವಾಳದ ಅಗತ್ಯದ ಕುರಿತು ಇಂಡಿಗೋ ಒಕ್ಕೂಟವು ಭಾರತ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿದೆ. ಈ ಮನವಿಯನ್ನು ಭಾರತ ಸರ್ಕಾರದ ಜೊತೆಗೆ ವಿಜ್ಞಾನ ಹಾಗು ತಂತ್ರಜ್ಞಾನದ ಇಲಾಖೆಯು ಪುರಸ್ಕರಿಸಬೇಕಾಗಿದೆ. ಅಮೆರಿಕಾದ ರಾಷ್ತ್ರೀಯ ವಿಜ್ಞಾನ ಮೂಲಗಳು ಹ್ಯಾನ್ಫೋರ್ಡಿನ ಒಂದು ಪತ್ತೆಕಾರಕವನ್ನು ಭಾರತದ ಲಿಗೋ ಪ್ರಯೋಗಾಲಯಕ್ಕೆ ನೀಡುವ ಭರವಸೆಯನ್ನು ನೀಡಿದೆ. ಆದರೆ ಇನ್ನಷ್ಟು ಹೆಚ್ಚುವರಿ ಧನ ಸಹಾಯವನ್ನು ಭಾರತ ಸರ್ಕಾರವು ನೀಡಬೇಕಾಗಿದೆ. ಮುಖ್ಯವಾದ ವಿಷಯವೆಂದರೆ ನಮ್ಮ ಭಾರತದ ಪ್ರಧಾನ ಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿಯವರು ೧೭ ಫೆಬ್ರವರಿ ೨೦೧೬ರಂದು ಪ್ರಯೋಗಾಲಯವನ್ನು ಸ್ಥಾಪಿಸಲು ಜಾಗದ ಅನುಮೋಧನೆಯಾಗುತ್ತಿದಂತೆ ಈ ಯೋಜನೆಗೆ ಸಂಪೂರ್ಣ ಸಾಹಾಯ ಮಾಡುವ ಭರವಸೆಯನ್ನು ನೀಡಿದರು. ಮಾತ್ರವಲ್ಲದೆ ಈ ಯೋಜನೆಗೆ ಸಂಪೂರ್ಣ ಅನುಮೋಧನೆಯನ್ನು ನೀಡಿದ್ದಾರೆ.

ಸಂಸ್ಥೆಗಳು ಹಾಗು ಸದಸ್ಯತ್ವ:-[ಬದಲಾಯಿಸಿ]

ಲಿಗೋ ಪ್ರಯೋಗಾಲಯದ ಅಂತರ್ ನೋಟ

ಪ್ಲಾಸ್ಮಾ ಸಂಶೋಧನಾ ಸಂಸ್ಥೆ (ಐ.ಪಿ.ಆರ್.), ಖಗೋಳಶಾಸ್ತ್ರ ಹಾಗು ಖಭೌತಶಾಸ್ತ್ರಕ್ಕೆ ಸಂಬಂಧಿಸಿದ ಅಂತರ್-ವಿಶ್ವವಿದ್ಯಾನಿಲಯ ಕೇಂದ್ರ (ಐ.ಯು.ಸಿ.ಎ.ಎ.) ಹಾಗು ರಾಜ ರಾಮಣ್ಣ ಆಧುನಿಕ ತಂತ್ರಜ್ಞಾನ ಕೇಂದ್ರ (ಆರ್.ಆರ್.ಸಿ.ಎ.ಟಿ.) ಈ ಮೂರು ಸಂಸ್ಥೆಗಳು ಇಂಡಿಗೋ ಒಕ್ಕೂಟದ ಪ್ರಮುಖ ಸಂಸ್ಥೆಗಳಾಗಿವೆ.

ಇಂಡಿಗೋ ಒಕ್ಕೊಟವು ಒಟ್ಟು ಎಪ್ಪತ್ತು ಜನ ವಿಜ್ಞಾನಿಗಳ ಒಕ್ಕೂಟ. ರಾಮನ್ ಸಂಶೋಧನಾ ಸಂಸ್ಥೆಯ ಬಾಲ ಐಯ್ಯರ್ ರವರು ಈ ಒಕ್ಕೂಟದ ಅಧ್ಯಕ್ಷರು. ಖಗೋಳಶಾಸ್ತ್ರ ಹಾಗು ಖಭೌತಶಾಸ್ತ್ರಕ್ಕೆ ಸಂಬಂಧಿಸಿದ ಅಂತರ್-ವಿಶ್ವವಿದ್ಯಾನಿಲಯ ಕೇಂದ್ರದ ತರುಣ್ ಸೌರದೀಪ್ ರವರು ಇಂಡಿಗೋ ಒಕ್ಕೂಟದ ವಕ್ತಾರರು. ಅಂತರಾಷ್ತ್ರೀಯ ಸಲಹಾ ಸಮಿತಿಯಲ್ಲಿ ಪ್ರಪಂಚದ ಹಾಗು ಭಾರತದ ಅನೇಕ ಸಂಸ್ಥೆಗಳಿಂದ ಒಟ್ಟು ಏಳು ಜನರು ಸದಸ್ಯರಾಗಿದ್ದಾರೆ. ಸೈದ್ಧಾಂತಿಕ ಭೌತಶಾಸ್ತ್ರದ ವಿಜ್ಞಾನಿ ಅಭಯ್ ಅಷ್ಟೇಕರ್ ಇದರ ಅಧ್ಯಕ್ಷರು. ನಮ್ಮ ದೇಶದ ಈ ಹೆಮ್ಮೆಯ ಇಂಡಿಗೋ ಒಕ್ಕೂಟವು ವೈಜ್ಞಾನಿಕ ಲಿಗೋ ಸಹಯೋಗದ ಸದಸ್ಯತ್ವ ಪಡೆದಿದೆ.

ಸಂಜೀವ್ ಧುರಂಧರ್:-[ಬದಲಾಯಿಸಿ]

ಸಂಜೀವ್ ಧುರಂಧರ್ ರವರು ಪುಣೆಯಲ್ಲಿರುವ ಐ.ಯು.ಸಿ.ಎ.ಎ. ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಅವರು ಗುರುತ್ವ ತರಂಗದ ವಿಶ್ಲೇಷಣೆ ಜೊತೆಗೆ ಆ ಗುರುತ್ವ ತರಂಗವನ್ನು ಪತ್ತೆ ಹಚ್ಚುವ ಹಾಗು ಸಂಶೋಧನೆ ನಡೆಸುವ ಆಸಕ್ತಿಯನ್ನು ಹೊಂದಿದ್ದಾರೆ. ಗುರುತ್ವ ತರಂಗವನ್ನು ಪತ್ತೆ ಹಚ್ಚುವಲ್ಲಿ ತನ್ನದೆ ಆದ ಕೊಡುಗೆಯನ್ನು ನೀಡಿರುವ ಒಂದು ಭಾರತೀಯ ಸಂಶೋಧನಾ ತಂಡದಲ್ಲಿ ಇವರು ಮುಖ್ಯ ಪಾತ್ರ ವಹಿಸಿದ್ದಾರೆ. ಸಂಜೀವ್ ಧುರಂಧರ್ ರವರು ಇಂಡಿಗೋ ಓಕ್ಕೂಟದ ಮಂಡಳಿಯ ವೈಗ್ನಾನಿಕ ಸಲಹೆಗಾರರಾಗಿ ಸಲಹೆಯನ್ನು ನೀಡುತ್ತಿದ್ದಾರೆ.

ಉಲ್ಲೇಖಗಳು:-[ಬದಲಾಯಿಸಿ]

[೧] [೨] [೩] [೪] [೫] [೬]

  1. http://gw-indigo.org/ligo-india
  2. http://www.ndtv.com/india-news/first-ligo-lab-outside-us-to-come-up-in-maharashtras-hingoli-1456355
  3. http://indianexpress.com/article/technology/science/ligo-india-likely-to-be-commissioned-in-2024-4478699/
  4. http://www.natureasia.com/en/nindia/article/10.1038/nindia.2016.20
  5. https://dcc.ligo.org/cgi-bin/DocDB/ShowDocument?docid=90988
  6. https://twitter.com/PMOIndia/status/699931256008511492