ವಿಷಯಕ್ಕೆ ಹೋಗು

ಸದಸ್ಯ:Vinay 859/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜೆಎಸ್ಎಸ್ ಬಿ.ಇಡಿ ಶಿಕ್ಷಣ ಸಂಸ್ಥೆ, ಸಕಲೇಶಪುರ.

[ಬದಲಾಯಿಸಿ]

ಯೋಗ ಶಿಕ್ಷಣ

[ಬದಲಾಯಿಸಿ]

===== ಯೋಗವು ಸಾವಿರಾರು ವರ್ಷಗಳ ಪುರಾತನವಾದುದು. ಪತಂಜಲಿ ಮಹರ್ಷಿಗಳು ಯೋಗದ ಪಿತಾಮಹ. ಇವರು ಯೋಗಕ್ಕೆ ಸಂಬಂಧಿಸಿದ ವಿಚಾರಗಳನ್ನು ಗ್ರಂಥರೂಪದಲ್ಲಿ ಬರೆದಿದ್ದಾರೆ. ಪತಂಜಲಿಯವರು ಯೋಗಶಾಸ್ತ್ರಕ್ಕಲ್ಲದೆ ವೈದ್ಯಕೀಯ, ಮನಶಾಸ್ತ್ರ ಮತ್ತು ಭಾಷಾಕ್ಷೇತ್ರಕ್ಕೂ ವಿಶೇಷವಾದ ಕೊಡುಗೆಯನ್ನು ನೀಡಿದ್ದಾರೆ. ಯೋಗ ಎಂಬ ಪದವು ಸಂಸ್ಕ್ರತದ “ ಯುಜ್ “ ಎಂಬ ಧಾತುವಿನಿಂದ ಬಂದಿದೆ. ಯುಜ್ ಎಂದರೆ ಜೋಡಿಸು, ಕೂಡಿಸು, ಸೇರಿಸು, ಬಂಧಿಸು ಎಂದರ್ಥ. ಅಂದರೆ ಯೋಗದ ಮೂಲಕ ನಮ್ಮ ಮನಸ್ಸು ಮತ್ತು ದೇಹವನ್ನು ಒಂದುಗೂಡಿಸುವುದು ಎಂದರ್ಥ. ದೇಹ ಮತ್ತು ಮನಸ್ಸಿನ ಮೇಲೆ ಹಿಡಿತವನ್ನು ಸಾಧಿಸುವುದೇ ಯೋಗ.

ಯೋಗದ ವ್ಯಾಖ್ಯಾನಗಳು

[ಬದಲಾಯಿಸಿ]

ಯೋಗವನ್ನು ಕುರಿತು ಬಹಳ ಹಿಂದಿನಿಂದಲೂ ಹಲವಾರು ವ್ಯಾಖ್ಯಾನಗಳು ಲಭ್ಯವಿದೆ ಅವುಗಳಲ್ಲಿ ಪ್ರಮುಖವಾದುವುಗಳೆಂದರೆ,

1. ಯೋಗ : ಕರ್ಮಸು ಕೌಶಲಂ

[ಬದಲಾಯಿಸಿ]

ಇದು ಕೃಷ್ಣ ಅರ್ಜುನನಿಗೆ ಭಗವದ್ಗೀತೆಯಲ್ಲಿ ಹೇಳುವ ಮಾತು. ಕೌಶಲದಿಂದ ಮಾಡುವ ಕೆಲಸವೇ ಯೋಗ. ನಮ್ಮ ಪಾಲಿನ ಕೆಲಸ ಅಂದರೆ ನಾವು ಮಾಡುವ ಕೆಲಸವನ್ನು ಅತ್ರಂತ ಕೌಶಲ ಪೂರ್ಣವಾಗಿ ಯಶಸ್ವಿಯಾಗಿ ಮಾಡುವುದೇ ಯೋಗ.

2. ಸಮತ್ವಂ ಯೋಗ ಮುಚ್ಚತೇ

[ಬದಲಾಯಿಸಿ]

ಇದು ಸಹ ಭಗವದ್ಗೀತೆಯಲ್ಲಿ ಬರುವಂತಹ ಒಂದು ಸಾಲು. ಜೀವನದಲ್ಲಿ ನೋವು- ನಲಿವು, ಸಿಹಿ-ಕಹಿ, ಉಷ್ಣಶೀತ, ಕತ್ತಲೆ, ಬೆಳಕು ಈ ಎಲ್ಲಾ ದ್ವಂದ್ವಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಧರ್ಮವನ್ನು ರೂಪಿಸಿಕೊಳ್ಳುವುದೇ ಯೋಗ. ದುಃಖ ಬಂದಾಗ ಕುಗ್ಗದೆ, ಸುಖ ಬಂದಾಗ ಮೈ ಮರೆಯದೆ ಅವೆರಡನ್ನು ಸಮಾನವಾಗಿ ಸ್ವೀಕರಿಸುವ ಮನೋಧರ್ಮವನ್ನು ರೂಪಿಸಿಕೊಳ್ಳುವುದೇ ಯೋಗ.

3. ಯೋಗ ಚಿತ್ತ-ವೃತ್ತಿ ನಿರೋಧ

[ಬದಲಾಯಿಸಿ]

ಯೋಗದ ಮಹಾಮುನಿಗಳಾದ ಮಹರ್ಷಿ ಪತಂಜಲಿಯವರು ಈ ವ್ಯಾಖ್ಯಾನವನ್ನು ಸೂತ್ರೀಕರಿಸಿದ್ದಾರೆ. ಯೋಗ ಎಂದರೆ ಚಿತ್ತ-ವೃತ್ತಿಗಳ ನಿರೋಧ, ಪ್ರಮಾಣ, ವಿಪರ್ಯಾಸ ವಿಕಲ್ಪ, ನಿದ್ರಾ, ಸ್ಮ್ರತಿ ಈ ಚಿತ್ತ-ವೃತ್ತಿಗಳನ್ನು ಹಾಗೂ ದುಃಖಕ್ಕೆ ಕಾರಣವಾದ ದ್ವೇಷ, ಅಭಿನಿವೇಶ ಕ್ಲೇಶಗಳನ್ನು ವ್ಯಾದಿ, ಸ್ತ್ಯಾನ, ಸಂಶಯ, ಪ್ರಮಾದ ಆಲಸ್ಯ, ಅನವಸ್ತಿ ತತ್ವ ಮುಂತಾದ ಚಿತ್ತ ವಿಕ್ಷೇಪಗಳನ್ನು ನಿಯಂತ್ರಿಸಿಕೊಳ್ಳುವುದೇ ಯೋಗ.

4. ಮನಪ್ರಶಮನೋಪಾಯ: ಯೋಗ ಇತ್ತಭಿದೀಯತೆ

[ಬದಲಾಯಿಸಿ]

ಚಂಚಲ ಮನಸ್ಸನ್ನು ಪ್ರಶಮನಗೊಳಿಸುವ, ಶಾಂತಗೊಳಿಸುವ ಉಪಾಯವೇ ಯೋಗ.

ಯೋಗದ ಪಥಗಳು( ಮಾರ್ಗಗಳು )

[ಬದಲಾಯಿಸಿ]

ನಾವು ನಮ್ಮ ಬದುಕಿನಲ್ಲಿ ನಿರ್ದಿಷ್ಟವಾದ ಗುರಿಯನ್ನು ತಲುಪಬೇಕಾದರೆ ಹಲವಾರು ಮಾರ್ಗಗಳಿರುತ್ತವೆ. ಅಂತೆಯೇ ಯೋಗದಲ್ಲಿಯೂ ಜೀವಾತ್ಮ ಮತ್ತು ಪರಮಾತ್ಮನಲ್ಲಿ ಸಂಯೋಗ ಹೊಂದಲು ಹಲವಾರು  ಮಾರ್ಗಗಳಿವೆ. ಅವುಗಳೆಂದರೆ ಜ್ಞಾನ , ಭಕ್ತಿ ,ಕರ್ಮ ಮತ್ತು ರಾಜಯೋಗ.

1.    ಜ್ಞಾನ ಮಾರ್ಗ

[ಬದಲಾಯಿಸಿ]

ವೇದ , ಉಪನಿಷತ್ , ಪುರಾಣ  ಇತಿಹಾಸಗಳ ಅಧ್ಯಯನದ ಮೂಲಕ ಸಜ್ಜನರ ಸಹವಾಸ , ಸತ್ಸಂಗ , ತರ್ಕಮಿಮಾಂಸೆ ಮುಂತಾದ ಮಾಧ್ಯಮಗಳ ಮೂಲಕ ನಾನು ಯಾರು ? ಅಹಂ , ನನ್ನಕೈ , ಕಾಲು , ನನ್ನ ಕಣ್ಣುಗಳಿವೆ ಎಂದಾದಲ್ಲಿ ಇವುಗಳ ಹಿಂದಿರುವ ನಾನು ಯಾರು ? ಈ ಜಗತ್ತಿನಲ್ಲಿರುವ ಎಲ್ಲಾ ಸಕಲ ಜೀವರಾಶಿಗಳ ಚಟುವಟಿಕೆಗಳನ್ನು ನಿಯಂತ್ರಿಸುತ್ತಿರುವ ಶಕ್ತಿ ಯಾವುದು ? ಆ ಶಕ್ತಿಗೂ ಜೀವಾತ್ಮನಿಗೂ ಇರುವ ಸಂಬಂಧವೇನು? ಮುಂತಾದ ವಿಷಯಗಳ ಬಗ್ಗೆ ಅಧ್ಯಯನ , ತರ್ಕ , ತಪ , ಜಪ , ಧ್ಯಾನಮಾರ್ಗದಲ್ಲಿ ಮುಂದುವರಿದು ನಮ್ಮ ಗುರಿ ತಲುಪಲು ಇರುವ ಮಾರ್ಗವೇ ಜ್ಞಾನಯೋಗ.

ಶಂಕರ, ರಾಮಾನುಜ, ಮಧ್ವ ಮುಂತಾದ ತತ್ವಜ್ಞಾನಗಳು , ದಾರ್ಶನಿಕರು ಈ ಮಾರ್ಗದಲ್ಲಿಯೇ ಮುನ್ನಡೆದು ತಮ್ಮ ಜೀವನವನ್ನು ಸಾರ್ಥಕಗೊಳಿಸಿಕೊಂಡಿದ್ದಾರೆ.

2.    ಭಕ್ತಿ ಮಾರ್ಗ

[ಬದಲಾಯಿಸಿ]

ಜ್ಞಾನ ಮಾರ್ಗದ ಮೂಲಕ ನಮ್ಮ ಜೀವನದ ಗುರಿ ತಲುಪಲು ಸಾಧ್ಯವಿಲ್ಲ ಎಂದಾದರೆ ನಾವು ಭಕ್ತಿಯೆಂಬ ಮತ್ತೊಂದು ಮಾರ್ಗವನ್ನು ಅನುಸರಿಸಿಕೊಂಡು ದೇವರು , ಧರ್ಮ ಇತ್ಯಾದಿಗಳ ಬಗ್ಗೆ ಗಮನಹರಿಸಲು ಭಕ್ತಿಯೋಗದ ಮಾರ್ಗದಲ್ಲಿ ಮುನ್ನಡೆದು ಗುರಿ ತಲುಪಬಹುದು. ಇಲ್ಲಿ ಆಸ್ತಿ, ಅಂತಸ್ತು ಅಧಿಕಾರ  ಪ್ರಧಾನವಲ್ಲ , ಭಕ್ತಿ ಭಾವನೆಗಳೇ ಪ್ರಧಾನ.

ಭಜನೆ , ಪ್ರಾರ್ಥನೆ , ಪೂಜೆ , ಹೋಮ , ಹವನ ,ಜಪ , ತಪ , ಧ್ಯಾನ , ಮೌನ ಮಾರ್ಗಗಳ ಮೂಲಕ ಗುರಿ ತಲುಪುವುದೇ ಭಕ್ತಿಯೋಗ.

ಶ್ರೀನಿವಾಸ ನಾಯ್ಕರಿಗೆ ಜೀವನದಲ್ಲಿ ಯಾವ ಕೊರತೆ ಇತ್ತು ಹೇಳಿ. 10-12 ತಲೆಮಾರು ಕೂತು ತಿಂದರು ಕಡಿಮೆಯಾಗದಂತಹ ಸಂಪತ್ತು. ಇವರು ಒಂದರ್ಥದಲ್ಲಿ ನವಕೋಟಿ ನಾರಾಯಣ, ಇವೆಲ್ಲಾವನ್ನು ಬಿಟ್ಟು ಪುರಂದರದಾಸರು ಪರಿವರ್ತನೆಯಾಗಿದ್ದೇಕೆ?

-  ಅಕ್ಕಮಹಾದೇವಿ ಕೌಶಿಕನ ಪತ್ನಿಯಾಗಿ ಮೆರೆಯಬಹುದಾದವಳು.

-   ಸಂತ ಮೀರಾಬಾಯಿ ರಾಜಸ್ತಾನದ ರಾಜಕುಮಾರಿಯಾಗಿ ಸುಖ ಅನುಭವಿಸಬೇಕಾದವಳು.

ಇವರೆಲ್ಲರೂ ತಮ್ಮ ಸಂಪತ್ತು ಅಂತಸ್ತುಗಳೆಲ್ಲವನ್ನು ತೊರೆದು ಭಕ್ತಿ ಮಾರ್ಗದಲ್ಲಿ ಮುನ್ನಡೆದವರು. ಭಕ್ತಿಯ ಮೂಲಕ ತಮ್ಮ ಜೀವನದ ಗುರಿ ತಲುಪಿದರು.