ಸದಸ್ಯ:Vijay Veigas Arva/ನನ್ನ ಪ್ರಯೋಗಪುಟ
ನನ್ನ ಹೆಸರು ವಿಜಯ್ ವಿನ್ಸೆಂಟ್ ವೇಗಸ್, ನಾನು ಮೂಲತಹ ಬೆಳ್ತಂಗಡಿ ತಾಲೂಕಿನ ಅರ್ವ ದವನು. ನನ್ನ ತಂದೆಯ ಹೆಸರು ಪ್ರಶಾಂತ್ ವೇಗಸ್ ಹಾಗೂ ತಾಯಿಯ ಹೆಸರು ಲೀನಾ ಮೋರಸ್. ನಾನು ನಮ್ಮ ತಂದೆ-ತಾಯಿಗೆ ಮೊದಲನೆಯ ಮಗ ಹಾಗೂ ನನಗೆ ಒಬ್ಬ ತಮ್ಮ ಹಾಗೂ ಒಬ್ಬಳು ತಂಗಿ ಇದ್ದಾಳೆ.
ನಾನು ೧ ನೇ ತರಗತಿಯಿಂದ ೧೦ನೇ ತರಗತಿಯನ್ನು ಅನುಗ್ರಹ ಆಂಗ್ಲಮಾಧ್ಯಮ ಶಾಲೆಯಲ್ಲಿ ಮಾಡಿರುತ್ತೇನೆ ಹಾಗೂ ಪಿಯುಸಿ ಯನ್ನು ಸೆಕ್ರೆಟ್ ಹಾರ್ಟ್ ಪದವಿಪೂರ್ವ ಕಾಲೇಜು, ಮೊಡಂತ್ಯಾರುವಿನಲ್ಲಿ ಮುಗಿಸಿರುತ್ತೇನೆ. ನಾನು ೧೦ನೇ ತರಗತಿಯಲ್ಲಿ ೭೮% ಹಾಗೂ ಪಿಯುಸಿಯಲ್ಲಿ ೮೪% ಅಂಕಗಳನ್ನು ಪಡೆದಿರುತ್ತೇನೆ.
ಈಗ ನಾನು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಬಿಸಿಎ ವಿದ್ಯಾಭ್ಯಾಸವನ್ನು ಮಾಡುತ್ತಿದ್ದೇನೆ. ನಾನು ಫುಟ್ ಬಾಲ್ ಆಟಗಾರನಾಗಿರುತ್ತೇನೆ. ನನ್ನ ತಂಡಕ್ಕೆ ನಾನೇ ನಾಯಕನಾಗಿರುತ್ತೇನೆ. ನನ್ನ ಹವ್ಯಾಸಗಳು ಚಿತ್ರ ಬಿಡಿಸುವುದು, ಆಟವಾಡುವುದು, ಟಿ.ವಿ ನೋಡುವುದು, ಹಾಡುಕೇಳುವುದು ಇತ್ಯಾದಿ.
ನಾನು ಮುಂದೆ ಸಾಫ್ಟ್ ವೇರ್ ಇಂಜಿನಿಯರ್ ಆಗಬೇಕೆಂದಿದ್ದೇನೆ. ನನಗೆ ನಮ್ಮ ಊರು ತುಂಬಾ ಇಷ್ಟ ನನ್ನ ಊರು ಸದಾ ಹಚ್ಚ ಹಸುರಾಗಿದ್ದು ತುಂಬಾ ಸುಂದರವಾದ ಪ್ರದೇಶವಾಗಿದೆ. ನನ್ನ ಅಪ್ಪ ರಾಜಕಾರಣಿಯಾಗಿ ಸೇವೆಯನ್ನು ಮಾಡುತ್ತಿದ್ದಾರೆ. ನನ್ನ ತಾಯಿ ಶಿಕ್ಷಕಿಯಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ನನ್ನ ಮನೆಯೇ ನನಗೆ ಮೊದಲ ಪಾಠಶಾಲೆಯಾಗಿದೆ.