ಸದಸ್ಯ:Vidyashree.v./WEP 2018-19 dec

ವಿಕಿಪೀಡಿಯ ಇಂದ
Jump to navigation Jump to search

ಅರಬ್ ರಾಷ್ಟ್ರೀಯತೆಯ ಕುರಿತು ಪ್ರಬಂಧ :[ಬದಲಾಯಿಸಿ]

ಅರಬ್ಬ್ ರಾಷ್ಟ್ರೀಯತೆಯ ಉಗಮದ ಹಂತ :[ಬದಲಾಯಿಸಿ]

ಮಧ್ಯ ಏಷ್ಯಾದಲ್ಲಿ ರಾಷ್ಟ್ರೀಯತೆಗಳು ಬೆಳೆದು ಬರುವಲ್ಲಿ ಧರ್ಮವು ಬಹುಮುಖ್ಯ ಪಾತ್ರವಹಿಸಿತು . ಒಂದು ರಾಜಕೀಯ ವ್ಯವಸ್ಥೆಯಾಗಿ ಬೆಳೆಯುವುದರ ಬದಲು ಒಂದು ಧಾರ್ಮಿಕ ಸಹೋದರತೆಯ ಅಭಿವ್ಯಕ್ತಿಯಂತೆ ಪ್ರದರ್ಶಿತವಾಯಿತು .ಒಂದೇ ಧರ್ಮಕ್ಕೆ ಸೇರಿದ ಸಹೋದರರು ಒಂದೇ ರಾಷ್ಟ್ರೀಯತೆಯ ಪಾಲುದಾರರು ಎಂಬ ಕಲ್ಪನೆ ಹೆಮ್ಮರವಾಗಿ ಬೆಳೆಯಿತು .ಆದಾಗ್ಯೂ ಒಂದು ಕಡೆಯಲ್ಲಿ ಬಲವಾದ ಜನಾಂಗೀಯ ಭಾವನೆಗಳು ಅದರ ಫಲವಾಗಿ ಬಲವಾದ ಅಂತರ್ ಜನಾಂಗೀಯ ತಿಕ್ಕಾಟಗಳಲ್ಲಿ ಮುಳುಗಿಹೋಗಿದ್ದ ಅರಬ್ಬರಲ್ಲಿ ಐಕ್ಯ , ಸಹಕಾರ ಎನ್ನುವುದು ಹಲವುಕಾಲ ಕನಸಿನ ಗಂಟಾಗಿಯೇ ಉಳಿದವು .ಇನ್ನು ರಾಜ್ಯತ್ವ ಅಸಾಧ್ಯವೆಯಾಗಿತ್ತು .ಇಂತಹ ಸಂದರ್ಭದಲ್ಲಿಯೇ ಸರ್ವವ್ಯಾಪಿ ಅರಬ್ ಅಂತರಾಷ್ರ್ಟ್ರೀಯತೆ ಮಾತ್ರ ಅರ್ಥಪೂರ್ಣವಾಗುವುದು ಸಾಧ್ಯವಾಗಿತ್ತು .ಇಸ್ಲಾಂ ಅರಬ್ಬರನ್ನು ಅಂತರಾಷ್ಟ್ರೀಯಮಟ್ಟದಲ್ಲಿ ಉನ್ನತ ಸ್ಥರಕ್ಕೆ ತಲುಪಿಸಿತ್ತು .ಒಂದೇ ಸಾಂಸ್ಕೃತಿಕ ಘಟಕದ ಐಕ್ಯತೆಯನ್ನು ಅರಬ್ಬರಿಗೆ ನೀಡಿತು .ಸಾಂಸ್ಕೃತಿಕವಾಗಿ - ಧಾರ್ಮಿಕವಾಗಿ ಇಸ್ಲಾಮಿನ ಧ್ವಜದಡಿಯಲ್ಲಿ ಒಗ್ಗಟ್ಟಾದರು .


ರಾಷ್ಟ್ರೀಯತೆ ಮೊಳಕೆಯೊಡೆಯಲು ಕಾರಣ :[ಬದಲಾಯಿಸಿ]

ಅರಬ್ಬರಲ್ಲಿ ಸಾಮಾಜಿಕ ರಾಜಕೀಯ ಐಕ್ಯತೆಯಿಲ್ಲದ ಕಾರಣ ಸುಲಭವಾಗಿ ಅರಬ್ಬರು ಮಧ್ಯಯುಗದಲ್ಲಿ ಟರ್ಕಿಯ ಸೆಜ್ಲುರ್ ಹಾಗು ಆಟೋಮನ್ (ಅಟೋವುನ್ ) ತುರುಷ್ಕರ ದಬ್ಬಾಳಿಕೆಗೆ ಅಡಿಯಾಳಾದರು .ಈ ರೀತಿಯಲ್ಲಿ ಟರ್ಕಿಯು ಅರಬ್ಬರನ್ನು ಸಂಪೂರ್ಣವಾಗಿ ಆಕ್ರಮಿಸಿಕೊಂಡು ಅರಬ್ಬರ ಸಂಪನ್ಮೂಲಗಳನ್ನು ತನ್ನ ಅಭಿವೃದ್ಧಿಗೆ ಬಳಸಿಕೊಂಡಿತು .ಇದೆಲ್ಲದರ ಕಾರಣದಿಂದಾಗಿ ಅರಬ್ಬರು ತೀರಾ ನಿಕೃಷ್ಟ ಬದುಕನ್ನು ಅನುಭವಿಸುತ್ತಾ , ಅಪಾರ ಸುಂಕಗಳನ್ನು ಟರ್ಕಿಗೆ ಪಾವತಿಸಿ ಟರ್ಕಿಷ್ ಸಾಮ್ರಾಜ್ಯದ ಗುಲಾಮರಾಗಿಯೇ ಉಳಿದರು .

ಬಾಲ್ಕನ್ ರಾಜ್ಯಗಳು

ಹದಿನೇಳನೇ ಮತ್ತು ಹದಿನೆಂಟನೇ ಶತಮಾನದಿಂದಲೇ ಟರ್ಕಿಯ ಇಸ್ಲಾಮಿಕ್ ಸಾಮ್ರಾಜ್ಯದ ಬಾಲ್ಕನ್ ಕ್ರೈಸ್ತ ಪ್ರಜೆಗಳು ಕ್ರಮೇಣ ರಾಷ್ಟ್ರೀಯವಾಗಿ ಚಳುವಳಿಗಳನ್ನು ಹೂಡತೊಡಗಿದರು .ಸರ್ಬಿಯಾ ಗ್ರೀಸ್ ಬೋಸ್ನಿಯಾ ರುಮಾನಿಯಾಗಳಲ್ಲಿ ಟರ್ಕಿ ವಿರೋಧಿ ಭಾವನೆಗಳು ಹಾಗು ಸ್ಲಾವಿಕ್ ಕ್ರೈಸ್ತರ ಒಗ್ಗಟ್ಟಿನ ಪ್ರಯತ್ನ ಫಲಿಸಿ ಆ ಕ್ರೈಸ್ತ ರಾಷ್ಟ್ರೀಯತೆಗಳು ಸ್ವತಂತ್ರವಾಗತೊಡಗಿದವು .ಆದರೆ , ಅರಬ್ಬ್ ಜನಾಂಗಗಳಲ್ಲಿ ಯಾವುದೇರೀತಿಯ ಸಂಘರ್ಷ ತಿಕ್ಕಾಟಗಳು ಉಂಟಾಗಲಿಲ್ಲ .

ಪ್ರಮುಖ ಕಾರಣಗಳು:[ಬದಲಾಯಿಸಿ]

.ಶಿಕ್ಷಣದ ತೀವ್ರ ಕೊರತೆ .

ಇಸ್ಲಾಮಿಕ್ ಧರ್ಮದ ಚಿಹ್ನೆ

೨ .ಟರ್ಕಿ ಮತ್ತು ಅರಬ್ಬರಲ್ಲಿನ ಇಸ್ಲಾಮಿಕ್ ಧಾರ್ಮಿಕ ಐಕ್ಯತೆ .

೩ .ಅರಬ್ಬರಲ್ಲಿ ಜನಾಂಗೀಯ ಐಕ್ಯದ ಕೊರತೆ ಇವುಗಳ ಕಾರಣದಿಂದ ಅರಬ್ಬರು ಯಾವುದೇ ರೀತಿಯಲ್ಲಿ ಟರ್ಕಿಯ ವಿರುದ್ಧ ಹೋರಾಡಿ ತಮ್ಮ ರಾಷ್ಟ್ರೀಯ ಸ್ವಾತಂತ್ರಗಳಿಸುವ ಭಾವನೆಗಳನ್ನು ಬೆಳೆಯಲೇ ಇಲ್ಲ.


ಅರಬ್ಬರು ಮುಖ್ಯವಾಗಿ ಪಶ್ಚಿಮ ಏಷ್ಯಾ ,ಉತ್ತರ ಆಫ್ರಿಕಾ ,ಮತ್ತು ಹಿಂದೂ ಮಹಾಸಾಗರದ ದ್ವೀಪಗಳಲ್ಲಿರುವ ಅರಬ್ ರಾಜ್ಯಗಳ್ಲಲಿ ವಾಸಮಾಡುವ ವಿಶ್ವದ ಎರಡನೆಯ ಅತಿದೊಡ್ಡ ಜನಾಂಗೀಯ ಗುಂಪು .
ಅರಬ್ಬರು

ಐತಿಹಾಸಿಕ ಹಿನ್ನೆಲೆ:

೧೭೮೪ ರಲ್ಲಿ ನೆಪೋಲಿಯನ್ ಈಜಿಪ್ತಿನ ಮೇಲೆ ದಾಳಿ ನಡೆಸಿದಾಗ ಅರಬ್ಬ್ ವಿಶ್ವದಲ್ಲೇ ಪ್ರಥಮಸಂಚಲನವನ್ನುಂಟು ಮಾಡಿತ್ತು .ಹೊಸ ಆಲೋಚನೆಗಳ ಬೆಳೆವಣಿಗೆಗೆ ಅವಕಾಶ ಒದಗಿಸಿತು .ಟರ್ಕಿಯ ಸರ್ವಾಧಿಕಾರದ ಬಗ್ಗೆ ಮತ್ತು ಅದನ್ನು ವಿರೋಧಿಸಿ ತಮ್ಮದೇ ರಾಷ್ಟ್ರೀಯತೆಯನ್ನು ಕಟ್ಟಿಕೊಳ್ಳಬೇಕಾದ ಬಗ್ಗೆ ಅರಿವು ಮೂಡಿಸಿತು . ಕೈರೋದಲ್ಲಿ ಹೊಸ ಮುದ್ರಣಾಲಯವನ್ನು ನಿರ್ಮಿಸಲಾಯಿತು .ಅರಬ್ಬ್ ಸಾಹಿತ್ಯದ ಮುದ್ರಣ ಉಂಟಾಯಿತು .ತಮ್ಮ ಪುರಾತನ ಸಂಸ್ಕೃತಿಯನ್ನು ಮರುಪರಿಚಯ ಮಾಡಿಕೊಂಡ ಅರಬ್ಬರು ಪಾಶ್ಚಿಮಾತ್ಯ ಪ್ರಭಾವದಿಂದಾಗಿ ರಾಷ್ಟೀಯ ಐಕ್ಯ , ಉದಾತ್ತವಾದ , ಪ್ರಜಾತಾಂತ್ರಿಕತೆ ಗಣತಂತ್ರ ಮುಂತಾದ ಹೊಸ ಪಾಠಗಳನ್ನು ಕಲಿಯತೊಡಗಿದರು .ಅರಬ್ಬ್ ರಾಷ್ಟೀಯತೆ ಬೆಳೆಯುವಲ್ಲಿ ಮತ್ತು ಟರ್ಕಿಗೆ ಎದುರಾಗಿ ಸಂಘಟಿತರಾಗುವಲ್ಲಿ ಅರಬ್ಬರಿಗೆ ಮಹ್ಮತ್ ಆಲಿ ಪ್ರಮುಖ ಪ್ರೇರಕಶಕ್ತಿಯಾಗಿದ್ದನು .ತನ್ನ ಸ್ವಂತ ನಾಯಕತ್ವದಲ್ಲಿ ಒಂದು ಸ್ವತಂತ್ರ ಅರಬ್ ರಾಷ್ಟ್ರ ನಿರ್ಮಿಸುವ ಯೋಜನೆ ಅವನದಾಗಿತ್ತು .ಮಹ್ಮತ್ ಆಲಿ ಹಾಗು ಅವನ ಪುತ್ರ ಇಬ್ರಾಹಿಂ ಪಾಷಾ ಸಿರಿಯಾದಲ್ಲಿ ನಡೆಸಿದ ಆಡಳಿತ ಅರಬ್ಬರಿಗೆ ತಮ್ಮ ಸ್ವಂತ ರಾಜ್ಯ ಗೆದ್ದು ಆಳಲು ಇರುವ ಶಕ್ತಿಯ ಬಗ್ಗೆ ಭರವಸೆ ಹುಟ್ಟಿಸಿತು .ಭೈರೂತ್ , ದಮಾಸ್ಕಸ್ ಗಳು ಅರಬ್ಬ್ ರಾಷ್ಟ್ರೀಯತೆಯ ಕೇಂದ್ರಗಳಾದವು ಟರ್ಕಿಯ ವಿರುದ್ಧ ಸಂಘಟಿತ ಶ್ರಮಕ್ಕೆ ಅರಬ್ಬರನ್ನು ಪ್ರೇರೇಪಿಸುವ ಠಾಣೆಗಳಾದವು.

ರಾಷ್ಟ್ರೀಯತೆಯ ಪ್ರಭಾವಗಳು:

ಒಂದುಕಡೆಯಿಂದ ಪಾಶ್ಚಿಮಾತ್ಯರ ಪ್ರಭಾವ ಮತ್ತೊಂದು ಕಡೆಯಿಂದ ಅರಬ್ ಇಸ್ಲಾಮಿಕ್ ಸುಧಾರಣಾ ವಾದಿಗಳ ಪ್ರಭಾವದಿಂದಾಗಿ ಅರಬ್ಬ್ ಮನಸ್ಸು ಐಕ್ಯದತ್ತ ಪ್ರೇರೇಪಿಸಿತು .ವಾಹಬ್ಬೀ ಚಳುವಳಿ ಪ್ರತಿಗಾಮಿ ಸ್ವರೂಪದ ಅರಬ್ ಐಕ್ಯಕ್ಕೆ ಮತ್ತು ತುರುಷ್ಕರಿಂದ ಸ್ವಾತಂತ್ರಕ್ಕೆ ಕರೆಕೊಡುವ ಚಳುವಳಿಯಾಗಿತ್ತು . ಜಮಾಲುದ್ದೀನ್ ಆಲ್ ಅಫ್ಘಾನಿಯ ಸಂಘಟನೆಯು ವಿಶ್ವದ ಸರ್ವ ಇಸ್ಲಾಮಿಕರ ಐಕ್ಯಕ್ಕೆ ಕರೆ ನೀಡುತ್ತದೆ . ವಿಶ್ವದ ಸಕಲ ಇಸ್ಲಾಮರು ಒಂದಾದಾಗ ಅಪಾರ ಬಲಶಾಲಿಯಾದ ಸಂಘಟನೆ ಸುಲಭವಾಗಿ ಯಶಸ್ಸು ಪಡೆಯುವುದು ಎಂಬುದು ಅವರ ನಂಬಿಕೆಯಾಗಿತ್ತು . ಯೂರೋಪಿಗೆ ಮುಖಮಾಡಿದ್ದ ಸಿರಿಯಾದಲ್ಲಿ ಮೊದಲಬಾರಿಗೆ ಪಾಶ್ಚಿಮಾತ್ಯರೀತಿಯ ಸ್ವತಂತ್ರ ಸಂಗ್ರಾಮ ಬೆಳೆದುಬಂತು .ಹಲವಾರು ರಾಷ್ಟ್ರೀಯವಾದಿ ಅರಬ್ಬರಿಗೆ ಇದು ಪ್ರೇರಿತವಾಯಿತು .ಸಿರಿಯಾದ ಅಬ್ದುರಹಮನ್ - ಅಲ್ - ಕವಕೀಬಿ ಯನ್ನು ಅರಬ್ಬ್ ರಾಷ್ಟ್ರೀಯತೆಯ ಪಿತಾಮಹ ಎಂದು ಗುರುತಿಸಲಾಗಿದೆ .ಹೀಗೆ ಅರಬ್ ರಾಷ್ಟ್ರೀಯತೆಯ ಉಗಮವು ವಿವಿಧ ರಾಷ್ಟ್ರೀಯತೆಗಳಲ್ಲಿ ಹಂಚಿಹೋಗಿದ್ದ ಅರಬ್ಬರು ತಮ್ಮ ರಾಷ್ಟೀಯ ಅಗತ್ಯತೆಗಳನ್ನು ನೀಗಿಸಿಕೊಳ್ಳುವಲ್ಲಿ ಮತ್ತು ಹೆಚ್ಚಿನ ಸಹಕಾರಕ್ಕಾಗಿ ಅರಬ್ ಲೀಗ್ ನ್ನು ಕಟ್ಟಿಕೊಳ್ಳುವಲ್ಲಿ ಸಹಾಯಮಾಡಿತು .ಸಿರಿಯಾ , ಲೆಬನಾನ್, ಇರಾಕ್, ಸೌದಿಅರೇಬಿಯಾ, ಯೆಮಾನ್ , ಈಜಿಪ್ತ್ ಹಾಗು ಟ್ರಾನ್ಸ್ ಜೋರ್ಡಾನ್ ಇದರ ಸದಸ್ಯರಾಗಿದ್ದರು .ಇಸ್ರೇಲಿನ ವಿರುದ್ಧ ಯುದ್ಧಗಳಲ್ಲಿ ಅನೇಕಬಾರಿ ಅರಬ್ಬರು ಸೋಲನ್ನುಂಡರೂ ತಮ್ಮ ಅಸ್ತಿತ್ವಕ್ಕೆ ಅರ್ಥ ಹುಡುಕಲು ಅರಬ್ಬರಿಗೆ ಸಹಕಾರಿಯಾಯಿತೆಂದರೆ ಅದು ಬಹುಷಃ ತಪ್ಪಾಗಲಾರದು .

ಉಲ್ಲೇಖಗಳು:

೧.https://en.wikipedia.org/wiki/Middle_Ages.

೨.https://en.wikipedia.org/wiki/Arab_nationalism.

೩.https://en.wikipedia.org/wiki/Islamism.

೪.https://en.wikipedia.org/wiki/Nationalism.

೫.https://kn.wikipedia.org/s/18kt.