ಸದಸ್ಯ:Vennela.L/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಹಾರಾಣಿ ಚಕ್ರವರ್ತಿ
ಜನನಜನವರಿ ೨ ,೧೯೩೭
ಭಾಗಲ್ಪುರ, ಬಿಹಾರ
ಮರಣಜನವರಿ,೨೦೧೫
ವೃತ್ತಿಆಣ್ವಿಕ ಜೀವಶಾಸ್ತ್ರಜ್ಞೆ
ರಾಷ್ಟ್ರೀಯತೆಭಾರತೀಯ
ಬಾಳ ಸಂಗಾತಿಡಾ. ಡೆಬಿ ಪ್ರಸಾದ್ ಬರ್ಮಾ

ಮಹಾರಾಣಿ ಚಕ್ರವರ್ತಿ

ಮಹಾರಾಣಿ ಚಕ್ರವರ್ತಿ ಭಾರತೀಯ ಆಣ್ವಿಕ ಜೀವಶಾಸ್ತ್ರಜ್ಞೆ ಎಂದೇ ಪ್ರಖ್ಯಾತಗೊಂಡವರು .೧೯೮೧ ರಲ್ಲಿ ಏಷ್ಯಾ ಮತ್ತು ಪೂರ್ವ ಏಷ್ಯಾದಲ್ಲಿ ರಿಕಾಂಬಿನೆಂಟ್ ಡಿ.ಎನ್.ಎ ತಂತ್ರಗಳ ಪ್ರಯೋಗಾಲಯಗಳನ್ನು ನಿರ್ದೇಶಿಸಿದರು .

ಆರಂಭಿಕ ಜೀವನ[ಬದಲಾಯಿಸಿ]

ಮಹಾರಾಣಿ ಚಕ್ರವರ್ತಿ ಕಲ್ಕತ್ತಾದಲ್ಲಿ ಜನವರಿ ೨ ರಂದು ಜನಿಸಿದರು.ಇವರಿಗೆ ಅಜ್ಜನ ಪ್ರಭಾವದಿಂದ ರಸಾಯನ ಶಾಸ್ತ್ರ ಮತ್ತು ವಿಜ್ಞಾನ ದಲ್ಲಿ ಆಸಕ್ತಿ ಹುಟ್ಟಿತು.೧೯೫೦ರಲ್ಲಿ ಮೆಟ್ರಿಕ್ಯುಲೇಷನ್ ಮುಗಿಸಿ,ಕಲ್ಕತ್ತಾದ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಬಿ. ಎಸ್.ಸಿ ಪದವಿಯನ್ನು ಪಡೆದರು .೧೯೫೬ ರಲ್ಲಿ ಕಲ್ಕತ್ತಾ ವಿಶ್ವವಿದ್ಯಾಲಯದ ಎಂ.ಎಸ್ ಸಿ (ಸಸ್ಯಶಾಸ್ತ್ರ) ಯನ್ನು ಪಡೆದರು ಮತ್ತು ಬೋಸ್ ಇನ್ಸ್ಟಿಟ್ಯೂಟ್ ನಿಂದ ಪಿ.ಹೆಚ್ ಡಿಯನ್ನು ಪಡೆದರು. ನಂತರ ಅವರು ಜೀವರಸಾಯನಶಾಸ್ತ್ರದಲ್ಲಿ ಪಿ.ಹೆಚ್ ಡಿ ಯನ್ನು ಪಡೆದರು.ನಂತರ ಅಮೇರಿಕ ದಲ್ಲಿ ತಮ್ಮ ಪ್ರಯೋಗಗಳನ್ನು ಮುಂದೆವರಿಸಿದರು .

ಪರಿಶೋಧನೆಗಳು[ಬದಲಾಯಿಸಿ]

ಮಹಾರಾಣಿ ಚಕ್ರವರ್ತಿ[೧] ನ್ಯೂಯಾರ್ಕ್ ಯೂನಿವರ್ಸಿಟಿ ಸ್ಕೂಲ್ ಆಫ್ ಮೆಡಿಕಲ್ ನಲ್ಲಿ ಉನ್ನತ ಶಿಕ್ಷಣವನ್ನು ಹೊಂದಿದರು.ಕೋಲ್ಡ್ ಸ್ಪ್ರಿಂಗ್ ಹಾರ್ಬರ್ ಪ್ರಯೋಗಾಲಯ ಮತ್ತು ಇಂಟರ್ನ್ಯಾಷನಲ್ ಲ್ಯಾಬೋರೇಟರಿ ಆಫ್ ಜನರಲ್ ಅಂಡ್ ಬಯೋಫಿಸಿಕಲ್ (ಇಟಲಿ) ನಲ್ಲಿ ಪರಿಶೋಧನೆಗಳನ್ನು ಮುಂದುವರಿಸಿದರು.ಯೂನಿವರ್ಸಿಟಿ ಆಫ್ ಯೇಲಿ,ನ್ಯೂಹೆವನ್ ,ಅಮೆರಿಕಾ,ಡಿಪಾರ್ಟ್ಮೆಂಟ್ ಆಫ್ ಬಯೋಕೆಮಿಸ್ಟ್ರಿ ಅಂಡ್ ಮಾಲಿಕ್ಯೂಲರ್ ಬಯಾಲಜಿ ,ಯೂನಿವರ್ಸಿಟಿ ಆಫ್ ಟ್‌ಕ್ಸಾಸ್ ಮಸ್ತಾನ್ ಇನ್ಸ್ಟಿಟ್ಯೂಟ್ ಆಫ್ ಜೆನೆಟಿಕ್ಸಂಡ್ ಮೈಕ್ರೋಬಯಾಲಜಿ,ಯೂನಿವರ್ಸಿಟಿ ಆಫ್ ಪ್ಯಾರಿಸ್ - ಸೂದ್- ಓರ್ನೆ (ಫ್ರಾನ್ಸ್) ಇಂತ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಅವರು ಪರಿಶೋಧನೆಯನ್ನು ಮಾಡಿದರು.

ಮಹಾರಾಣಿ ಚಕ್ರವರ್ತಿ ಬನಾರಸ್ ಯೂನಿವರ್ಸಿಟಿಯಲ್ಲಿ ಮಾಲಿಕ್ಯೂಲ(ಅಣು)ರ್ ಬಯಾಲಜಿ ಯೂನಿಟ್ ಅಲ್ಲಿ ಅನಿರೀಕ್ಷಿತ ಅಭಿವೃಧಿಯನ್ನು ಮಾಡಿದರು. "ಸೆಂಟರ್ ಫರ್ ಮಾಲಿಕ್ಯೂಲರ್ ಬಯಾಲಜಿ ಅಂಡ್ ಜೆನೆಟಿಕ್ಸ್ ಎಂಜಿನಿಯರಿಂಗ್" ವಿಭಾಗಗಳನ್ನು ಅಭಿವೃದ್ದಿ ಪಡಿಸಿದರು. ಜೆನೆಟಿಕಲ್ ಇಂಜಿನಿಯರಿಂಗ್ ನಲ್ಲಿ ಇವರು ಅಪೂರ್ವವಾದ ಪರಿಶೋಧನೆಗಳನ್ನು ಮಾಡಿದ್ದಾರೆ.ಅವರ ಈ ಪರಿಶೋಧನೆಗಳು ಅಂತಾರಾಷ್ಟ್ರೀಯ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.ಅವರು ದೇಶ-ವಿದೇಶಗಳಲ್ಲಿಯೂ ಉಪನ್ಯಾಸಗಳನ್ನು ಕೊಟ್ಟಿದಾರೆ.

ಅಂತಾರಾಷ್ಟ್ರೀಯ ಖ್ಯಾತಿ[ಬದಲಾಯಿಸಿ]

  1. ಯೂನಿವರ್ಸಿಟಿ ಆಫ್ ಮಿಚಿಗನ್ (ಅಮೆರಿಕೆ)ನಲ್ಲಿ ಹ್ಯೂಮನ್ ಜೆನೆಟಿಕ್ಸ್ ವಿಭಾಗದಲ್ಲಿ ಸಂದರ್ಶಕ ಪ್ರೊಫೆಸರ್ (೧೯೬೮-೬೯),
  2. ಬನಾರಸ್ ಹಿಂದೂ ಯೂನಿವರ್ಸಿಟಿಯಲ್ಲಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೆನ್ಸ್ ರಿಸರ್ಚ್ ಬಯೋಕೆಮಿಸ್ಟ್ರಿ ವಿಭಾಗದಲ್ಲಿ ಉನ್ನತ ಸಂಶೋಧನೆ ಅಧಿಕಾರಿ (೧೯೬೯-೭೨)
  3. ಅಂತಾರಾಷ್ಟ್ರೀಯ ಪಠ್ಯಕ್ರಮದ "ಜೆನೆಟಿಕ್ಸ್ ಅಂಡ್ ಫಿಜಿಯಾಲಜಿ ಬ್ಯಾಕ್ಟೀರಿಯಾವೈರಸ್ "(ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್, ಬೆಂಗಳೂರು),
  4. ೧೫ ನೇ ಇಂಟರ್ನ್ಯಾಷನಲ್ ಕಾಂಗ್ರೆಸ್ ಆಫ್ ಜೆನೆಟಿಕ್ಸ್ ನಲ್ಲಿ ನೇತೃತ್ವ

ರಾಷ್ತ್ರಿಯ ಖ್ಯಾತಿ[ಬದಲಾಯಿಸಿ]

  1. ರಿಸರ್ಚ್ ಅಡ್‌ವೈಜರಿ ಕಮಿಟಿ (ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ,ಪೂಣೆ)
  2. ದೆಹಲಿ ಯೂನಿವರ್ಸಿಟಿ ,ಜವಾಹರ ಲಾಲ್ ನೆಹರೂ ಯೂನಿವರ್ಸಿಟಿಗಳಲ್ಲಿ ಪಠ್ಯ ಯೋಜನೆಗಳನ್ನು ಒದಗಿಸಿದರು.
  3. ಯೂ.ಜಿ.ಸಿ ಬಯೊಸೈನ್ಸ್ ಪ್ಯಾನೆಲ್ ಅಧಿಕಾರಿಯಾಗಿ ವಿಶೇಷ ಸಮಿತಿಯನ್ನು ಏರ್ಪಡಿಸಿದ್ದಾರೆ .

ಸೇವೆಗಳು[ಬದಲಾಯಿಸಿ]

ಡಾ|| ಮಹಾರಾಣಿಯವರು ಬನಾರಸ್ ಹಿಂದೂ ವಿಶ್ವವಿದ್ಯಾಲಯ,ಬಯೋಕೆಮಿಸ್ಟ್ರಿ ಇಲಾಖೆಯಲ್ಲಿ ಫ್ರೊಫೆಸರ್ ಹಾಗು ಮಾಲಿಕ್ಯೂಲರ್ ಬಯಾಲಜಿ ಉಸ್ತುವಾರಿಯಾಗಿ ಸೇವೆ ಸಲ್ಲಿಸಿದ್ದಾರೆ.ಜೀವರಸಾಯನ ಶಾಸ್ತ್ರ ರಂಗದಲ್ಲಿ ,ಅಣು ಜೀವ ಶಾಸ್ತ್ರ ಕ್ಷೇತ್ರದಲ್ಲಿ ,ಪ್ರತಿಭೆಯನ್ನು ಹೊಂದಿದ್ದರು.

ಅವರು ಲೈಸೊಗೆಣಿ ಒಳಗಾಗುತ್ತಿರುವ ಜೀವಕೋಶಗಳನ್ನು ಮತ್ತು ಆ ಒಳಪಡುವ ಲೈಸಿಸ್ ನಡುವೆ ಜೀವರಾಸಾಯನಿಕ ವ್ಯತ್ಯಾಸವನ್ನು ಅರಿತುಕೊಳ್ಳುವ ಸಂಶೋಧನೆ ಕೈಗೊಂಡರು.ಅವರು ವೈರಸ್ ಸೋಂಕು ಪ್ರೋಟೀನ್ ಸಿನ್‌‌ಥಸಿಸ್ ಕೆಳಗಿನ ಅನುವಾದ ಮಟ್ಟದಲ್ಲಿ ನಿಯಂತ್ರಿಸಲ್ಪಡುತ್ತದೆ ಎಂದು ಹೇಳಿದ್ಧಾರೆ

.

ಪ್ರಶಸ್ತಿಗಳು ಮತ್ತು ಗೌರವಗಳು[ಬದಲಾಯಿಸಿ]

  1. ಸರ್ಟಿಫಿಕೆಟ್ ಆಫ್ ಮೆರಿಟ್ ಆಫ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ , ಬಿ.ಹೆಚ್.ಯು (೧೯೭೫-೭೬)
  2. ಅತ್ಯುತ್ತಮ ಸಂಶೋಧನಾ ಪ್ರಶಸ್ತಿ, ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ , ಬಿ.ಹೆಚ್.ಯು (೧೯೭೯)
  3. ಕ್ಷನೀಕ ಉಪನ್ಯಾಸ ಪ್ರಶಸ್ತಿ (೧೯೭೯), ಐಸಿಎಂಆರ್ [೨]
  4. ವೈ.ಎಸ್, ನಾರಾಯಣ್ ರಾವ್ ಪ್ರಶಸ್ತಿ (೧೯೮೧),ಐಸಿಎಂಆರ್
  5. ಹರಿ ಓಂ ಆಶ್ರಮ ಅಲೆಂಬಿಕ್ ಸಂಶೋಧನಾ ಪ್ರಶಸ್ತಿ (೧೯೮೧),ಭಾರತೀಯ ವೈದ್ಯ ಮಂಡಳಿ
  6. ಜೆ.ಸಿ. ಸೇನ್ ಮೆಮೋರಿಯಲ್ ಪ್ರಶಸ್ತಿ
  7. ಪ್ರೊಫೆಸರ್ ದರ್ಶನ್ ರಂಗನಾಥನ್ ಮೆಮೋರಿಯಲ್ ಪ್ರಶಸ್ತಿ (೨೦೦೭),ಐಎನ್ ಎಸ್ ಸಿ

ಉಲ್ಲೇಖಗಳು[ಬದಲಾಯಿಸಿ]

  1. "ಮಹಾರಾಣಿ ಚಕ್ರವರ್ತಿ".
  2. "ಐಸಿಎಂಆರ್".