ಸದಸ್ಯ:Vaidehi.bk/sandbox

ವಿಕಿಪೀಡಿಯ ಇಂದ
Jump to navigation Jump to search
                              ಕೆಂದು ಹೂವುಗಳ ಬತ್ತಳಿಕೆ

ರುಬಿಯೆಸಿಯೆ ಕುಟುಂಬದ ಹೂಬಿಡುವ ಇಕ್ಸೋರಾ ಸಂಕುಲದ ಸುಮಾರು ೫೦೦ ಕ್ಕೂ ಅಧಿಕ ಜಾತಿಯನ್ನು ಹೊಂದಿರುವ ಸಸ್ಯಗಳಲ್ಲಿ ಕೆಂಪು ಹೂಗಳನ್ನು ಗುಂಪಾಗಿ ಬಿಡುವ ಪೊದೆಯಂತಿರುವ ಸಸ್ಯವೇ ಇಕ್ಸೋರಾ.

ಇದನ್ನು 'ಜಂಗಲ್ ಜೆರೆನಿಯಂ'ಎಂದು ಕರೆಯುವುದುಂಟು. ದಕ್ಷಿಣ ಭಾರತ ಮತ್ತು ಶ್ರೀಲಾಂಕ ಪ್ರದೇಶದಲ್ಲಿ ಹೆಚ್ಚಾಗಿ ಮನೆಯ ಮುಂದೆ ಅಥವಾ ತೋಟಗಳಲ್ಲಿ ಈ ಗಿಡಗಳನ್ನು ಅಲಂಕಾರಕ್ಕೆ ಬೆಳೆಸುತ್ತಾರೆ. ಉಷ್ಣ ಪ್ರದೇಶಗಳಲ್ಲೂ ಇದು ಬೆಳೆಯುತ್ತದೆ. ದಕ್ಷಿಣ ಫ್ಲೋರಿಡಾ ತೋಟಗಳಲ್ಲಿ ಈ ಹೂವಿನ ಪೊದೆಗಳು ಸರ್ವೇ ಸಾಮಾನ್ಯವಾಗಿ ನೋಡಲು ಸಿಗುತ್ತದೆ. ದಟ್ಟವಾದ ಈ ಹಚ್ಚ ಹಸುರಿನ ಪೊದೆ ವರ್ಷಪೂರ್ತಿ ಹೂಗಳನ್ನು ಬಿಡುತ್ತದೆ.

ಈ ಸಸ್ಯ ನಾಲ್ಕರಿಂದ ೧೨ ಅಡಿ ಎತ್ತರದವರೆಗೂ ಬೆಳೆಯುತ್ತದೆ. ಸುಮಾರು ೧೦ ಸೆಂ.ಮೀ.ನಷ್ಟು ಉದ್ದದ ಎಲೆಗಳನ್ನು ಹೊಂದಿರುತ್ತದೆ. ಇದೇ ಪ್ರಭೇಧದ ಹಳದಿ, ಗುಲಾಬಿ, ಕೇಸರಿ ಬಣ್ಣದ ಹೂಬಿಡುವ ಸಸ್ಯಗಳು ಕಂಡುಬರುತ್ತದೆ. ಅವುಗಳಿಗೆ ಬೇರೆ ಹೆಸರುಗಳಿರುತ್ತವೆ. ಕಳೆದ ಕೆಲವು ದಶಕಗಳಿಂದೀಚೆಗೆ ಇದರ ಹೈಬ್ರೀಡ್ ತಳಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.

ಈ ಗಿಡದ ಹೂವು, ಎಲೆ, ಬೇರು, ತೊಗಟೆಯನ್ನು ಆಯುರ್ವೇದ ವೈದ್ಯ ಪದ್ದತಿಯಲ್ಲಿ ಬಳಸಲಾಗುತ್ತಿದೆ. ಇದೊಂದು ಅತ್ಯುತ್ತಮ ಆಂಟಿ ಆಕ್ಸಿಡೆಂಟ್. ಕ್ರಿಮಿಕೀಟಾಣುಗಳ ವಿರುದ್ದ ಹೋರಾಡಬಲ್ಲದು. ಜೀರ್ಣ ಕ್ರಿಯೆಯನ್ನು ಸುಸ್ಥಿತಿಯಲ್ಲಿ ಇಡಲು ಸಹಾಯ ಮಾಡುತ್ತದೆ. ಈ ಸಸ್ಯದಲ್ಲಿ ಲುಪಿಯೋಲ್, ಒಲಿಯೋನಿಲಿಕ್, ಆಮ್ಲ, ಸೈಟೋಸಿರಾಲ್. ರುಟಿನ್ ಮುಂತಾದ ರಸಾಯನಿಕಗಳಿರುವುದು ಪತ್ತೆಯಾಗಿದೆ.