ಸದಸ್ಯ:VISHAL R NAIK/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

"ಮಹಾವೈಭವ ದ ಜೋಗ್ ಜಲಪಾತ" "ಸಾಯೋದ್ರೊಳಗೆ ಒಮ್ಮೆ ಜೋಗದ ಗುಂಡಿ ನೋಡಬೇಕು" ಎಂಬ ನಾಣ್ಣುಡಿಯು "ಜೋಗ ಜಲಪಾತ"ದ ರುದ್ರ ರಮಣೀಯ ಸೌಂದರ್ಯವನ್ನು ಕಣ್ಣಾರೆ ಕಂಡಾಗಲೇ ಅನಿಸುವುದು ಜೀವನ ಸಾರ್ಥಕವೆಂದು. ಪ್ರಕೃತಿಯ ಸುಂದರ ಬೆಟ್ಟಗಳ ಸಾಲಿನಲ್ಲಿ ಶರಾವತಿ ನದಿ ನೀರಿನಿಂದ ನೈಸರ್ಗಿಕವಾಗಿ ಕಣಿವೆಯಲ್ಲಿ ಕಾಣುವ ಜೋಗ ಜಲಪಾತದ ಮಹಾವೈಭವವು ಮಳೆಗಾಲದಲ್ಲಿ ನೋಡುವುದೇ ಚಂದ. ರಾಜ, ರಾಣಿ, ರೋವರ್ ಮತ್ತು ರಾಕೆಟ್ ಎಂಬ ಅಕ್ಕಪಕ್ಕದ ಜಲಪಾತಗಳು ಸೇರಿ ಜೋಗ ಜಲಪಾತವೆಂದು ಹೆಸರಾಗಿದೆ. ಅಪ್ಪಟ ಸ್ಫಟಿಕದಂತೆ ಕಾಣುವ ಜಲಪಾತದ ನೋಟ ಮನದುಂಬಿಸುತ್ತದೆ.ಅದ್ಭುತವಾದ ನೀರಿನ ಪದರದಂತೆ ಕಾಣುವ ಜಲಪಾತವು, ನೇರವಾಗಿ ನೆಲಕ್ಕೆ ಜೋಡಿಸುತ್ತಿರುವ ಸ್ಫಟಿಕದ ಮಾಲೆಯಂತೆ ಕಾಣುತ್ತದೆ. 830 ಅಡಿಗಳಷ್ಟು ಎತ್ತರದಿಂದ ಬೀಳುವ ಶರಾವತಿ ನೀರು ಬಂಡೆಗಳ ಸಾಲಿನಲ್ಲಿ ಬರುವ ಆಳವಾದ ಕಲ್ಲು ಮತ್ತು ಇತರೆ ತೊಡಕುಗಳಿಗೆ ಧೃತಿಗೆಡದೆ ಮುನ್ನುಗ್ಗುವುದನ್ನು ನೋಡುವುದೇ ಒಂದು ಹಬ್ಬ. ಈ ಸುಂದರ ದೃಶ್ಯವನ್ನು ನೋಡಲೆಂದೇ ವಿಶ್ವದೆಲ್ಲೆಡೆಯಿಂದ ಸಾವಿರಾರು ಪ್ರವಾಸಿಗರು ಆಕರ್ಷಿತರಾಗಿ ಬರುತ್ತಲೇ ಇದ್ದಾರೆ. ಜಲಪಾತದ ರಮ್ಯ ಸೌಂದರ್ಯಕ್ಕೆ ಸುತ್ತಲಿರುವ ಹಸಿರಿನಿಂದ ಕಂಗೊಳಿಸುತ್ತಿರುವ ಗುಡ್ಡಗಳು ಮತ್ತಷ್ಟು ಮೆರಗು ನೀಡುತ್ತವೆ. ಜೋಗ ಜಲಪಾತದ ರಮ್ಯದೃಶ್ಯವನ್ನು ನೋಡಲು ಅನೇಕ ಅನುಕೂಲಕರ ವೀಕ್ಷಣಾ ಸ್ಥಳಗಳಿವೆ. ಅವುಗಳಲ್ಲಿ ಬಹಳ ಪ್ರಸಿದ್ಧವಾದುದು ವಾಟ್ಕಿನ್ಸ್ ಪ್ಲ್ಯಾಟ್ ಫಾಮ್. ಜಲಪಾತದ ಕೆಳೆಗಿನವರೆಗೂ ಹೋಗಿ ಅಲ್ಲಿಂದ ಬೆಟ್ಟ ಹತ್ತಿ ಮೇಲೇರಿ ಬರುವುದು ಬಹಳ ಕ್ಲಿಷ್ಟಕರ ಹಾಗೂ ಶ್ರಮದ ಕೆಲಸವಾಗಬಹುದು ಮತ್ತು ಈ ಕೆಲಸ ತಮ್ಮ ಸ್ನಾಯುಗಳನ್ನು ಬಲಿಷ್ಠಪಡಿಸಲು ಇಚ್ಛಿಸುವವ ಯುವಸಮೂಹಕ್ಕೆ ಉತ್ತಮ ಚಾರಣವಾಗುತ್ತದೆ. ಜಗತ್ಪಸಿದ್ಧ ತಾಣವಾಗಿರುವ ಜೋಗ್ ಜಲಪಾತಕ್ಕೆ ಸಾರಿಗೆ ಸಂಪರ್ಕ ವ್ಯವಸ್ಥೆ ಕೂಡ ಅನುಕೂಲಕರವಾಗಿದೆ. ಕರ್ನಾಟಕದಲ್ಲಿನ ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣವು ಜೋಗ ಜಲಪಾತದಿಂದ ಅತ್ಯಂತ ಸಮೀಪದ ನಗರ. ಜೋಗ್ ಜಲಪಾತ ಮತ್ತು ಸಾಗರದ ಮಧ್ಯೆ ಹಲವಾರು ಬಸ್ ಸಂಚರಿಸುತ್ತಿದ್ದು, ಕಾರವಾರ ಅಥವಾ ಹೊನ್ನಾವರದಿಂದಲೂ ಬಸ್ ವ್ಯವಸ್ಥೆ ಇದೆ. ಮಳೆಗಾಲದ ಸಮಯದಲ್ಲಿ ನೀರಿನ ಮಟ್ಟ ಹೆಚ್ಚಿ ಜಲಪಾತದಲ್ಲಿ ನೀರು ಧುಮ್ಮಿಕ್ಕಿ ಹಾಲಿನಂತೆ ಹರಿಯುವುದನ್ನು ನೋಡುವ ಆನಂದ ಅವರ್ಣನೀಯ. ಆದ್ದರಿಂದ ಈ ಸಮಯದಲ್ಲೆ ಜೋಗ ಜಲಪಾತ ನೋಡಲು ಹೋಗುವುದು ಸೂಕ್ತ. ಇಲ್ಲಿನ ಇತರೆ ಆಕರ್ಷಣೆಗಳೆಂದರೆ ಜೋಗ್ ನ ಸುತ್ತಮುತ್ತಲ್ಲಿನಲ್ಲಿರುವ ಕಾಡುಮೇಡು, ಸ್ವರ್ಣನದಿ ಹಾಗೂ ಶರಾವತಿ ಕಣಿವೆ.