ಸದಸ್ಯ:V.M.BHOOMIKA/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಯೊಟೆಕ್ನಾಲಜಿ ಸಂಬಂಧಿಸಿದ ಕೃಷಿ ಮತ್ತು ಪರಿಸರ (ಜೈವಿಕ ತಂತ್ರಜ್ಞಾನ)

ಚಿತ್ರಗಳು [[೧]]

ಉತ್ಪಾದನೆಗಾಗಿ ಜೀವಿಯ ಬಳಕೆ, ಕೋಶ ಮತ್ತು ಊತಕಗಳ ಅಭಿವೃದ್ಧಿ, ಭ್ರೂಣದ ವರ್ಗಾವಣೆ, ಜೀನ್ ತಂತ್ರಜ್ಞಾನ, ಕ್ಲೋನಿಂಗ್ ಇತ್ಯದಿ ತಂತ್ರಜ್ಞಾನಗಳನ್ನು ಉಪಯೋಗಿಸಿಕೊಳ್ಳುವುದೇ ಜೈವಿಕ ತಂತ್ರಜ್ಞಾನ. ಯೀಸ್ಟನ್ನು ಬಳಸಿ ಹುದುಗುವಿಕೆಯಿಂದ ಆಲ್ಕೋಹಾಲನ್ನು ತಯಾರಿಸುವುದು ಪ್ರಾಚೀನ ಕಾಲದಿಂದ ತಿಳಿದ ತಂತ್ರಜ್ಞಾನ. ಇಳುವರಿಯನ್ನು ಹೆಚ್ಚಿಸುವುದು, ಕೀಟರೋಗ ಬಾಧೆಗಳಿಗೆ ನಿರೋಧ ಶಕ್ತಿಯನ್ನುಂಟು ಮಾದುವುದು, ಶೀತ, ಚೌಳು ಪರಿಸ್ಥಿತಿಗಳನ್ನು ಎದುರಿಸಿ ಉತ್ತಮ ಗುಣಗಳನ್ನು ಸಸ್ಯಗಳಲ್ಲಿ ಕೇಂದ್ರೀಕರಿಸುವುದೇ ಜೈವಿಕ ತಂತ್ರಜ್ಞಾನದ ಗುರಿ.

ಜೈವಿಕ ತಂತ್ರಜ್ಞಾನದಿಂದ ಸಸ್ಯಗಳು ಕ್ರೋಮೋಸೋಮ್ ಗಳಲ್ಲಿ ಇರುವ ವಂಶವಾಹಿಗಳನ್ನು ಬದಲಯಿಸಿ ಆನುವಂಶಿಕ ನಿರೋಧ ಶಕ್ತಿಯನ್ನು ಪಡೆಯಬಹುದು.ಬ್ಯಾಸಿಲ್ಲಸ್ ತುರಿಂಜಿಯೆನ್ಸಿಸ್ ಎಂಬ ಬ್ಯಾಕ್ಟೀರಿಯಾ ಉತ್ಪಾದಿಸುವ ವಿಷಾಣುಗಳನ್ನೂ ಕೀಟಗಳ ಹತೋಟಿಗೆ ಉಪಯೋಗಿಸಲಾಗುತ್ತಿದೆ.

ಪ್ರಕೃತಿಯಲ್ಲಿರುವ ಎಜೊ ಸ್ಪಿರಿಲ್ಲಂಮ್, ಎಜಟೊಬ್ಯಾಕ್ಟರ್ ಮತ್ತು ರೈಜೋಬಿಯಂ ಸೂಕ್ಷ್ಮಾಣುಗಳು ಕಾರ್ಯಕ್ಷಮತೆಯನ್ನು ವೃದ್ಧಿಸಿ ಸಾರಜನಕ ಒದಗಿಸುವ ಜೈವಿಕ ಗೊಬ್ಬರವಾಗಿ ಉಪಯೋಗಿಸಲಾಗುತ್ತಿದೆ.ಆಜೋಲ ಜರಿಗಿಡ ಮತ್ತು ನೀಲಿ-ಹಸಿರು ಪಾಚಿಗಳನ್ನು ಭತ್ತದ ಗದ್ದೆಗಳಲ್ಲಿ ಬೆಳೆಸುವುದರಿಂದ ನೈಟ್ರೊಜನ್ ಪೂರೈಕೆಯಾಗುತ್ತದೆ.ರಂಜಕವನೇ ಎಲೀನಿಸುವ ಸಾಮರ್ಥ್ಯವುಳ್ಳ ಬ್ಯಾಕ್ಟೀರಿಯಾಗಳನ್ನು ಬಳಸಿಕೊಳ್ಳಲಾಗಿದೆ.

ವ್ಯವಸಾಯದಲ್ಲಿ ಉತ್ತಮ ಗುಣಮಟ್ಟದ ಸಸಿಗಳ ಉತ್ಪಾದನೆ ಇಂದು ತುರ್ತಿನ ಆವಶ್ಯಕತೆ. ಸಂಕರದಿಂದ ಹೋಸ ತಳಿಗಳನ್ನು ಉತ್ಪಾದಿಸಬಹುದಾಗಿದೆ.ಸ್ವಾಭಾವಿಕವಾಗಿ ಹಲವಾರು ವರ್ಶಗಳ ನಂತರವಷ್ಟೆ ಹೂ ಬಿಡುವ ಬಿದಿರು ಪ್ರಯೋಗಾಲಯದಲ್ಲಿ ಹೂ ಬಿಡುವಂತೆ ಜೈವಿಕ ತಂತ್ರಜ್ಞಾನದಿಂದ ಮಾಡಲಾಗಿದೆ. ಬಸುಮತಿ - ೩೭೦ , ಭತ್ತದ ಕೋಶಗಳಿಂದ ಬಿಟೆಸಿ-೬೮೫ ಗಿಡ್ಡ ಜಾತಿಯ ಬಸುಮತಿ ತಳಿಯನ್ನು ಉತ್ಪಾದಿಸಲಾಹಿದೆ.

ಊತಕ ಕೃಷಿ ಸೂಕ್ಷ್ಮ ಸಸ್ಯೋತ್ಪಾದನ ವಿಧಾನಗಳಲ್ಲೋಂದು. ಈ ವಿಧಾನದಿಂದ ಕಡಿಮೆ ಆವಧಿ , ಸ್ಥಳ ಮತ್ತು ಶ್ರಮದಲ್ಲಿ ಮಿಲಿಯಗಟ್ಟಲೆ ಉತ್ತಮ ಗುಣಮಟ್ಟದ ಸಸಿಗಳನ್ನು ಉತ್ಪಾದಿಸಬಹುದು.

ಒಂದು ಗ್ರಾಂ ನಷ್ಟು ಆಂಗಾಂಶದಿಂದ ೧೦೦೦ ದಷ್ಟು ಸಸಿಗಳನ್ನು ಪದೆಯಬಹುದು. ಊತಕ ಕೃಷಿಯಲ್ಲಿ ಜೀವ ವೈವಿಧ್ಯತೆ ಸಾಮಾನ್ಯ. ಈ ವೈವಿಧ್ಯತೆಯನ್ನು ತಳಿ ಆಭಿವೃದ್ಧಿಗೆ ಉಪಯೋಗಿಸಿಕೊಳ್ಳಬಹುದು.ಜೀವ ವೈವಿಧ್ಯತೆಯಿಂದ ಗಿಡ್ಡ ಜಾಇಯ , ಆಧಿಕ ಇಳುವರಿ ಕೊಡುವ ಆಲ್ಪಾವಧಿಯ ವರುಣ ಸಾಸಿವೆ ತಳಿಯನ್ನು ಪಡೆಯಲಾಗಿದೆ. ಜೈವಿಕ ತಂತ್ರಜ್ಞಾನದಿಂದ ಉತ್ಪಾದಿಸಿದ ತಳಿಗಳನ್ನು ವರ್ಷಕ್ಕೆ ಒಂದು ಸಲಕ್ಕಿಂತ ಹೆಚ್ಚಿಗೆ ಅಥವಾ ಮಿಶ್ರ ಬೆಳೆಯಾಗಿ ಬೆಳಸಬಹುದು.

ಹೆಚ್ಚುತ್ತಿರುವ ಜಾಗತಿಕ ಆಹಾರ ಬೇದಿಕೆಯನ್ನು ಪೂರೈಸಲು ಜೈವಿಕ ತಂತ್ರಜ್ಞಾನ ಒಂದು ಆಕರ್ಷಕ ಹಾಗೂ ಸೂಕ್ತ ಪರಿಹಾರವಾಗಿದೆ.

ಉಲ್ಲೇಖನ


  • ಜೈವಿಕ ಅನಿಲಾ

ಗ್ರಾಮೀಣ ಜನರು ಸಾಮಾನ್ಯವಾಗಿ ಕಟ್ಟಿಯನ್ನು ಉರುವಲಾಗಿ ಉಪಯೋಗಿಸುತ್ತಾರೆ. ಆದರೆ ಆರಣ್ಯ ನಾಶದಿಂದ ಈಗ ಕಟ್ಟಿಗೆಯೂ ದುರ್ಲಭವಾಗಿದೆ.ಸೀಮೆಎಣ್ಣೆಯೂ ಸಾಕಷ್ಟುಪ್ರಮಾಣದಲ್ಲಿ ದೊರೆಯುತ್ತೆಲ್ಲ. ಆಡಿಗೆ ಆನಿಲ ಗ್ರಾಮೀಣ ದೇಶಗಳಲ್ಲಿ ಲಭ್ಯವಿಲ್ಲ.ವಿದ್ಯುಚ್ಛಕ್ತಿಯ ಬೆಲೆ ದುಬಾರಿ.ಆದರೆ , ಹಳ್ಳಿಯ ಪ್ರತಿಯೊಂದು ಮನೆಯಲಲ್ಲೂ ದನಕರುಗಳನ್ನು ಸಾಕುತ್ತಾರೆ.ಜಾನುವಾರುಗಳ ಸೆಗಣಿಯನ್ನು ಉಪಯೋಗಿಸಿ ಆನಿಲ ಉತ್ಪಾದಿಸುವ ಯಂತ್ರವೊಂದನ್ನು ಸ್ಥಾಪಿಸಿದರೆ ಆಡಿಗೆಗೆ ಬೇಕಾದ ಇಂಧನದ ಅವಶ್ಯಕತೆಯನ್ನು ಪೂರೈಸಿಕೊಳ್ಳಬಹುದು.ಆದನ್ನೇ ಗೊಬ್ಬರದ ಅನಿಲ ಸ್ಥಾವರ ಎನ್ನುವುದು

ಸೆಗಣಿ ಹುದುಗಿದಾಗ ಮೀಥೇನ್ ಎಂಬ (ದಹ್ಯಾನಿಲ) ಉತ್ಪತ್ತಿಯಾಗುತ್ತದೆ . ಈ ಆನಿಲ ವಾತಾವರಣದ ಗಾಳಿಗಿಂತ ಹಗರು . ಉರಿಯುವಾಗ ಜ್ವಾಲೆ ಬಣ್ಣ ನೀಲಿ.ಗೋಬರ ಆನಿಲ ಯಂತ್ರದಲ್ಲಿ ಸೆಗಣಿಯನ್ನು ಹುದುಗಿಸಿ ಮೀಥೇನ್ ಇರುವ ಅನಿಲವನ್ನು ತಯಾರಿಸುತ್ತಾರೆ.

ಗೋಬರ್ ಅನಿಲ ಯಂತ್ರದ ಗಾತ್ರ ಜಾನುವಾರುಗಳ ಸಂಖ್ಯೆ ಮತ್ತು ದೊರೆಯುವ ಸೆಗಣಿಯ ಪ್ರಮಾಣವನ್ನು ಅವಲಂಬಿಸಿರುತ್ತದೆ.ಅನಿಲ ಸ್ಥಾವರನ್ನು ಅಡಿಗೆಮನೆ ಮತ್ತು ದನಗಳ ಕೊಟ್ಟಿಗೆಗಳ ಸಮೀಪ ಕಟ್ಟಬೇಕು.ಬಿಸಿಲಿನ ತಾಪವಿದ್ದಲ್ಲಿ ಅನಿಲದ ಉತ್ಪತ್ತಿ ಮತ್ತು ಒತ್ತಡ ಅಧಿಕವಾಗಿರುತ್ತದೆ.

ಇದೇ ರೀತಿ ಮಲಮೂತ್ರ, ತರಕಾರಿಯಸಿಪ್ಪೆ, ಅಡುಗೆಯ ತ್ಯಾಜ್ಯ ಪದಾರ್ಥಗಳು ಮುಂತಾದವುಗಳನ್ನು ಬಳಸಿ ಆನಿಲ ಉತ್ಪಾದನೆ ಮಾಡುವ ತಂತ್ರಗಳೂ ಬಳಕೆಯಲ್ಲಿವ.

ಈ ತಂತ್ರಜ್ಞಾನ ಜೈವಿಕ ತಂತ್ರಜ್ಞಾನ ಒಂದು ಪ್ರಮುಖ ಭಾಗ. ಜೀವಿಗಳು ಕೋಶ್ಗಳಿಂದ ರಚಿಸಲ್ಪಟ್ಟಿವೆ. ಇವು ಪ್ರಣಿ ಮತ್ತು ಸಸ್ಯಗಳ ರಚನಾತ್ಮಕ ಮೂಲ. ಕೋಶವನ್ನು ಒಂದು ಸುವ್ಯವಸ್ಥಿತ ಹಾಗೂ ನಿರ್ದೇಶಿತ ರಾಸಾಯನಿಕ ಕಾರ್ಖಾನೆ ಎಂದು ಕರೆಯಬಹುದು. ಪೊರೆಯಿಂದ ಆವೃತವಾದ ಕೋಶವು ತನ್ನೊಳಗೆ ಜೀವದ್ರವ್ಯವನ್ನೊಳಗೊಂಡಿದೆ. ಕೋಶದ ನ್ಯೊಕ್ಲಿಯಸ್ ನಲ್ಲಿ ವರ್ಣತಂತು (ಕ್ರೋಮೊಸೋಮು) ಮತ್ತು ವಂಶವಾಹಿ (ಜೀನ್) ಗಳಿವೆ. ಕೇಂದ್ರ ಬಿಂದು ಆನುವಂಶಿಕತೆಗೆ ಕಾರಣವಾದ ಜೀನ್ ಯುಕ್ತ ಡಿಎನ್ಎ ಅಣುಗಳು ನ್ಯೂಕ್ಲಿಯಸ್ಸಿಯಸ್ಸಿನಲ್ಲಿವೆ.

ಒಂದು ಜೀವಿಯ ನಿರ್ದಿಷ್ಟ ಗುಣವು ಒಂದು ಅಥವಾ ಹಲವುನಿರ್ದಿಷ್ಟ ವಂಶವಾಹಿಯಿಂದ ನಿರ್ಧಾರಿತವಾಗಿರುತ್ತದೆ. ಜೀನ್ ಗಳನ್ನು ಬದಲಾಯಿಸುವುದರಿಂದ ಜೀವಿಯ ಗುಣವನ್ನು ಬದಲಾಯಿಸಬಹುದಾಗಿದೆ. ಈ ತಂತ್ರಜ್ಞಾನವೇ ಜೆನೆಟಿಕ್ ಎಂಜಿನಿಯರಿಂಗ್. ಇತ್ತೀಚಿನ ದಿನಗಳಲ್ಲಿ ತಳಿ ಶಾಸ್ತ್ರಜ್ಞಾನರು ,ಸೂಕ್ಷ್ಮ ಜೀವಿ ಶಾಸ್ತ್ರಜ್ಞಾನರು ಜೀನ್ ಗಳನ್ನು ಪರಿವರ್ತಿಸುವ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಸಸ್ಯಗಳನ್ನು ತಮ್ಮ ಅವಶ್ಯಕತೆಗಳಿಗೆ ಬೇಕಾದಂತೆ ಉತ್ಪಾದಿಸಿಕೊಳ್ಳುತ್ತಿದ್ದಾರೆ.

ಕೃಷಿಗೆ ಮತ್ತು ಕೃಷಿ ಕುಟುಂಬಗಳ ಆವಶ್ಯಕತೆಗಳಿಗೆ ಪೂರಕವಾಗಿ, ಉದ್ದೇಶಪೂರ್ವಕವಾಗಿ, ಜಮೀನಿನಲ್ಲಿ ಆಯ್ದ ಗಿಡಮರಗಳನ್ನು ನೆಟ್ಟು ಬೆಳೆಸುವುದೇ 'ಕೃಷಿ ಅರಣ್ಯ' . ಒಂದು ಪ್ರದೇಶದ ಉತ್ಪಾದನೆಯನ್ನು ಹೆಚ್ಚಿಸುವುದೇ ಕೃಷಿ ಅರಣ್ಯದ ಉದ್ದೇಶ.

ಜಮೀನಿನಲ್ಲಿ ಕೃಷಿ ಅರಣ್ಯ ಬೆಳೆಸುವುದರಿಂದ ಗ್ರಾಮೀಣ ಜನರು ತಮ್ಮ ಆವಶ್ಯಕತೆಗಳಿಗೆ ನೈಸರ್ಗಿಕ ಅರಣ್ಯಗಳನ್ನೇ ಅವಲಂಬಿಸಿಕೊಂಡಿರುವುದು ಕಡಿಮೆಯಾಗುತ್ತದೆ. ಉರುವಲಿಗೆ ಕಟ್ಟಿಗೆ, ಜಮೀನಿಗೆ ಬೇಲಿ, ನೊಗ-ನೇಗಿಲುಗಳಿಗೆ ಮರ , ಮನೆ ಕಟ್ಟಲು ಸಣ್ಣ ಗಾತ್ರದ ಮರಮುಟ್ಟುಗಳನ್ನು ಕೃಷಿ ಅರಣ್ಯ ಒದಗಿಸುತ್ತದೆ. ಜಾನುವಾರುಗಳಿಗೆ ಮೇವು, ಬೆಳೆಗಳಿಗೆ ಹಸುರೆಲೆ ಗೊಬ್ಬರಗಳು ದೊರೆಯುತ್ತವೆ. ಕೃಷಿ ಅರಣ್ಯದಲ್ಲಿ ಬಿದಿರನ್ನು ಸುಲಭವಾಗಿ ಬೆಳೆಸಬಹುದು. ಬಿದಿರು ಕಾಗದ ಮತ್ತು ಪೀಟೋಪಕರಣ ತಯಾರಿಕೆ ಮತ್ತು ಗುಡಿಸಲುಗಳನ್ನು ಕಟ್ಟಲು ಉಪಯುಕ್ತ.

ಕೃಷಿ ಅರಣ್ಯದಿಂದ ರೈತನಿಗೆ ಪರೋಕ್ಷ ಆದಾಯಕ ಬರುತ್ತದೆ. ಸ್ವ-ಉದ್ಯೋಗವನ್ನು ಕೈಗೊಂಡಾಂತಾಗುತ್ತದೆ ಅಷ್ಟು ಮಾತ್ರವಲ್ಲದೇ ಬೆಳೆಸುವ ಕೃಷಿ ಅರಣ್ಯಗಳು ಕೆಲವು ವರ್ಷಗಳ ನಂತರ ನೈಸರ್ಗಿಕ ಅರಣ್ಯಗಳ ಒತ್ತಡವನ್ನು ಕಡಿಮೆ ಮಾಡಲು ಸಹಕಾರಿಯಾಗುತ್ತವೆ.

ಉಲ್ಲೇಖನ

  1. ಸೆಲ್ ಬೈಯೊಲಜಿ, ಜೆನೆಟ್ಟಿಕಸ್, ಮೊಲಿಕ್ಯುಲರ್ ಬೈಯೊಲಜಿ, ಎವೊಲ್ಯುಶಂನ್ ಮತ್ತು ಇಕೊಲೊಜಿ - Dr.P.S.verma
  2. a textbook of microbiology - R.C. Dubey