ವಿಷಯಕ್ಕೆ ಹೋಗು

ಸದಸ್ಯ:Umesh T P

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹೊಸ ಶಿಕ್ಷಣ ನೀತಿ ಅರಿಯೋಣ

2015-16 ನೇ ಸಾಲಿನಿಂದಲು ರಾಷ್ಟ್ರದಾದ್ಯಂತ ಗ್ರಾಮ ಪಂಚಾಯಿತಿ ಗ್ರಾಮ ಸಂಭೆಗಳಿಂದ ಸಂಸತ್ ಅಧಿವೇಶನದವರೆಗೆ ಹಲವು ಹಂತದಲ್ಲಿ ಚರ್ಚೆಯಾಗಿ ಕರಡು ನೀತಿ ರಚನೆಯಾಗಿ 2020 ನೇ ಶೈಕ್ಷಣಿಕ ವರ್ಷದಿಂದ ರಾಷ್ಟ್ರದಾದ್ಯಂತ ಜಾರಿಯಾಗುವ ನಿಟ್ಟಿನಲ್ಲಿ ಸಿದ್ಧಗೊಂಡ ರಾಷ್ಟ್ರೀಯ ಹೊಸ ಶಿಕ್ಷಣ ನೀತಿ ಕರ್ನಾಟಕದಲ್ಲಿ 2022 ರ ಶೈಕ್ಷಣಿಕ ವರ್ಷದಿಂದ ಕಾರ್ಯಗತವಾಗುತ್ತಿದೆ. ಯಾವುದೇ ಶೈಕ್ಷಣಿಕ ನೀತಿ ಬಂದರು ಅದು ಯಶಸ್ವಿಯಾಗುವುದು ಶಾಲಾ ಶಿಕ್ಷಕರಿಂದ. ಪ್ರಾಥಮಿಕದಿಂದ ಪದವಿ ಹಂತದವರೆಗು ಕರ್ತವ್ಯ ನಿರ್ವಹಿಸುವ ವಿವಿಧ ಹಂತದ ಬೋಧಕ ಸಿಬ್ಬಂದಿ ಶಿಕ್ಷಣ ವ್ಯವಸ್ಥೆಯ ಯಶಸ್ಸಿಗೆ ಆಧಾರಸ್ಥಂಭಗಳು. ಈಗ ಜಾರಿಯಾಗುತ್ತಿರುವ ಹೊಸ ಶಿಕ್ಷಣ ನೀತಿ 2020 ಪೂರ್ವ ಪ್ರಾಥಮಿಕವನ್ನು ತನ್ನಲ್ಲಿ ಅಡಕಗೊಳಿಸಿಕೊಂಡು 3 ವರ್ಷದಿಂದ 18 ವರ್ಷದ ಶಾಲಾ ಮಕ್ಕಳ ವಿದ್ಯಾಭ್ಯಾಸದ ಪ್ರಗತಿಯನ್ನು ಗುರಿಯಾಗಿರಿಸಿಕೊಂಡಿದೆ. ಹಿಂದೆ ಭಾರತದ ಶಿಕ್ಷಣ ಕ್ಷೇತ್ರವನ್ನು ಅಭಿವೃದ್ಧಿಯ ಮುನ್ನೆಲೆಗೆ ತರಲು ಪ್ರಮುಖವಾಗಿ ಶ್ರಮಿಸಿದ ವಿಶ್ವವಿದ್ಯಾಲಯ ಶಿಕ್ಷಣ ಸಮಿತಿ 1948, ಮೊದಲಿಯಾರ ಮಾಧ್ಯಮಿಕ ಶಿಕ್ಷಣ ಆಯೋಗ 1952, ಕೊಠಾರಿಯಾರ ರಾಷ್ಟ್ರೀಯ ಶಿಕ್ಷಣ ಆಯೋಗ 1964, ನೂತನ ಶಿಕ್ಷಣ ನೀತಿ 1986, ಸರ್ವ ಶಿಕ್ಷಾ ಅಭಿಯಾನ 2002 ಕ್ಕೆ ಹೋಲಿಸಿದರೆ ಈಗಿನ 2020 ರ ಹೊಸ ಶಿಕ್ಷಣ ನೀತಿ ಬಹು ವ್ಯಾಪ್ತಿಯನ್ನು ಒಳಗೊಂಡಿದೆ. ಪೂರ್ವ ಪ್ರಾಥಮಿಕ ಹಂತದಿಂದ ಕಾಲೇಜು ಶಿಕ್ಷಣ ಹಂತದವರೆಗೆ ತನ್ನ ಶೈಕ್ಷಣಿಕ ವಿಶಾಲತೆಯ ಹರವನ್ನು ಹೊಂದಿದೆ. ಈಗಾಗಲೇ ಭಾರತದಲ್ಲಿ ಜಾರಿಯಲ್ಲಿದ್ದ 10+2+3 ಅಂದರೆ ಒಂದನೇ ತರಗತಿಯಿಂದ ಹತ್ತನೇ ತರಗತಿ ಒಂದು ಹಂತ, ಪಿಯುಸಿ ಶಿಕ್ಷಣ ಹಂತ, ಪದವಿ ಶಿಕ್ಷಣ ಹಂತ ಎಂಬ ಪರಿಕಲ್ಪನೆ ಆಮೂಲಾಗ್ರ ಬದಲಾವಣೆ ಹೊಂದಲಿದೆ. 5+3+3+4 ಅಂದರೆ ಪೂರ್ವ ಪ್ರಾಥಮಿಕ ಪ್ರಿಸ್ಕೂಲ್ ನಿಂದ ಎರಡನೆ ತರಗತಿಯವರೆಗೆ ಬುನಾದಿ ಹಂತವಾಗಿ, ಮೂರನೇ ತರಗತಿಯಿಂದ ಐದನೆ ತರಗತಿವರೆಗೆ ಪೂರ್ವಸಿದ್ಧತಾ ಹಂತವಾಗಿ, ಆರನೇ ತರಗತಿಯಿಂದ ಎಂಟನೇ ತರಗತಿಯವರೆಗೆ ಮಧ್ಯಮ ಹಂತವಾಗಿ, ಒಂಬತ್ತರಿಂದ ಹನ್ನೆರಡನೆ ತರಗತಿವರೆಗೆ ದ್ವಿತೀಯ ಶಿಕ್ಷಣ ಹಂತವಾಗಿ ಅನುಷ್ಟಾನಕ್ಕೆ ತರಲಾಗುತ್ತಿದೆ. ಇಲ್ಲೀತನಕ ಆರರಿಂದ ಹದಿನಾಲ್ಕು ವರ್ಷಗಳ ಶಾಲಾ ಶಿಕ್ಷಣ ನೀತಿ ಬದಲಾಗಿ ಮಕ್ಕಳ ವಯೋಮಿತಿಯ ಮೂರರಿಂದ ಹದಿನೆಂಟು ವರ್ಷಗಳ ಶಿಕ್ಷಣ ನೀತಿ ಜಾರಿಗೆ ಬರುತ್ತಿದೆ. ಅಂಗನವಾಡಿ/ಬಾಲವಾಡಿಯಿಂದ ಪದವಿಪೂರ್ವ ಹಂತದವರೆಗೆ ಮಕ್ಕಳ ಶಾಲಾ ಶಿಕ್ಷಣ ವ್ಯವಸ್ಥೆ ಕಡ್ಡಾಯವಾಗುವ ಸೂಚನೆಗಳಿವೆ. ನಾವಿಲ್ಲಿ ಪ್ರಮುಖವಾಗಿ ಶಿಕ್ಷಕರ ಆಯ್ಕೆ ಮತ್ತು ಅವರ ತರಬೇತಿ ಕಾರ್ಯಗಳ ಕುರಿತು ನೋಡೋಣ. ಇಲ್ಲೀತನಕ ಪಿಯುಸಿ ನಂತರ ಟಿಸಿಹೆಚ್/ ಡಿ.ಇಡಿ ಕೋರ್ಸ್ ಮಾಡಿದ ಶಿಕ್ಷಕರನ್ನ ಪ್ರಾಥಮಿಕ ಭಾಗಕ್ಕೆ, ಪದವಿ ನಂತರ ಬಿ.ಇಡಿ ಪಡೆದ ಶಿಕ್ಷಕರನ್ನ ಮಾಧ್ಯಮಿಕ ಶಿಕ್ಷಣ ಭಾಗಕ್ಕೆ, ಪದವಿ ಜೊತೆ ಸ್ನಾತಕ ಪದವಿ ಮತ್ತು ಬಿ.ಇಡಿ ಪಡೆದವರನ್ನು ಪದವಿಪೂರ್ವ ಹಂತಕ್ಕೆ ಬೋಧನಾ ಸಿಬ್ಬಂದಿಯಾಗಿ ನೇಮಿಸಲಾಗುತ್ತಿತ್ತು. ಈಗ ಬಾಲವಾಡಿ ಅಂದರೆ ಅಂಗನವಾಡಿಗಳಿಗೆ ಡಿ.ಎಲ್.ಇಡಿ ಅರ್ಥಾತ್ ಡಿಪ್ಲೋಮಾ ಇನ್ ಎಲಿಮೆಂಟರಿ ಎಜುಕೇಶನ್ ಪಡೆದವರ ನೇಮಕ, ಡಿ.ಎಡ್/ ಡಿಪ್ಲೊಮಾ ಇನ್ ಎಜುಕೇಶನ್ ಪಡೆದವರಿಗೆ ಪ್ರಾಥಮಿಕ ಶಿಕ್ಷಕರಾಗಿ ನೇಮಕ, ನಾಲ್ಕು ವರ್ಷದ ಪದವಿ ಜೊತೆಗೆ ಶಿಕ್ಷಕರ ತರಬೇತಿ ಪಡೆದವರನ್ನು ಪ್ರೌಢ ಹಂತದ ಶಿಕ್ಷಕರಾಗಿ ನೇಮಿಸಲಾಗುತ್ತದೆ. ಎಲ್ಲ ವಿಶ್ವವಿದ್ಯಾಲಯ ಹಾಗು ಪದವಿ ಕಾಲೇಜುಗಳು ಶಿಕ್ಷಕರ ಶೈಕ್ಷಣಿಕ ವಿಭಾಗಗಳ ಹೊಂದುವ ಅವಶ್ಯಕತೆ ಇರುತ್ತದೆ. ಈ ಎಲ್ಲ ಹಂತದ ಶಿಕ್ಷಕರನ್ನು ಅರ್ಹತಾದಾಯಕ ಪರೀಕ್ಷೆಗಳ ಮೂಲಕವಾಗಿ ನೇಮಕ ಮಾಡಲಾಗುತ್ತದೆ. ಶಿಕ್ಷಕರಲ್ಲಿ ನಾವಿದುವರೆಗೆ ಕಂಡುಬಂದ ಪ್ರಾಥಮಿಕ ಶಿಕ್ಷಕರು, ಪ್ರೌಢ ಶಾಲಾ ಅಧ್ಯಾಪಕರು, ಪದವಿಪೂರ್ವ ಉಪನ್ಯಾಸಕರು ಎಂಬ ಪದನಾಮಗಳಲ್ಲಿ ಕೊಂಚ ಬದಲಾವಣೆಯು ವೃತ್ತಿಪರ ವಿದ್ಯಾರ್ಹತೆಗಳಿಗೆ ತಕ್ಕಂತೆ ಬದಲಾಗಿ ಪೂರ್ವ ಪ್ರಾಥಮಿಕ ಶಾಲಾ ಶಿಕ್ಷಕರು (ಪಿ.ಪಿ.ಟಿ), ಪ್ರಾಥಮಿಕ ಶಾಲಾ ಶಿಕ್ಷಕರು(ಪಿ.ಎಸ್.ಟಿ), ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು (ಜಿ.ಪಿ.ಟಿ), ಟ್ರೈನಡ್ ಗ್ರಾಜುಯೇಟ್ ಟೀಚರ್ (ಟಿ.ಜಿ.ಟಿ) ಎಂದು ಪದನಾಮೀಕರಣ ಹೊಂದಲಿವೆ. ಪೂರ್ವ ಪ್ರಾಥಮಿಕ ಮಕ್ಕಳ ಶಿಕ್ಷಣ ಹಂತದ ಕಲಿಕೆಗೆ ಈಗ ಮೂರು ವರ್ಷ ನಿಗದಿ ಮಾಡಲಾಗಿದೆ. ಇಲ್ಲಿಗೆ ಈಗಾಗಲೆ ಅಂಗನವಾಡಿ ಯಾ ಬಾಲವಾಡಿ ಹೆಸರಲ್ಲಿ ಎಸ್.ಎಸ್.ಎಲ್.ಸಿ/ಪಿಯುಸಿ ಶಿಕ್ಷಣ ಹೊಂದಿದ ಮಹಿಳಾ ಕಾರ್ಯಕರ್ತರ ನೇಮಕ ಆಗಿದೆ. ಈಗ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯಡಿ ಡಿಪ್ಲೋಮಾ ಇನ್ ಎಲಿಮೆಂಟ್ರಿ ಎಜುಕೇಶನ್ ಎಂದು ಎರಡು ವರ್ಷಗಳ ತರಬೇತಿಯನ್ನು ಪಿಯುಸಿ ನಂತರ ನೀಡಲಾಗುತ್ತಿದೆ. ಈ ತರಬೇತಿ ಪೂರೈಸಿದವರನ್ನು ಪಿ.ಪಿ.ಟಿ- ಪ್ರಿ ಪ್ರೈಮರಿ ಟೀಚರ್ ಆಗಿ ನೇಮಿಸಲಾಗುವುದು. ಇಲ್ಲಿ ಬಹುತೇಕ ಕಲಿಸುವಿಕೆ ಆಟಗಳ ಹಾಗು ಚಟುವಟಿಕೆಗಳ ಮೂಲಕ ನಡೆಯುವುದು. ಹೆಚ್ಚು ಪಾಠೋಪಕರಣ, ಮಾದರಿಗಳ ಮೂಲಕವೇ ಮೂರ್ತ ಪರಿಕಲ್ಪನೆಗಳ ಕಲಿಕೆ ನೀಡಲಾಗುವುದು. ನಂತರದ ಒಂದನೆ ಹಾಗು ಎರಡನೆ ತರಗತಿಗೆ ಮುಂದುವರೆದು ಐದನೆ ತರಗತಿಗೆ ಪಿ.ಎಸ್.ಟಿ ಶಿಕ್ಷಕರು ಇದ್ದು. ಇವರು ಈಗಾಗಲೆ ಇರುವ ಡಿಪ್ಲೊಮಾ ಇನ್ ಎಜುಕೇಶನ್ ತರಬೇತಿ ಪಡೆದವರಾಗಿರುತ್ತಾರೆ. ಇಲ್ಲಿ ಹೆಚ್ಚು ಜ್ಞಾನೇಂದ್ರಿಯಗಳ ತರಬೇತುಗೊಳಿಸುವಿಕೆ, ದೈಹಿಕ ಶಿಕ್ಷಣ, ಸ್ಥಳೀಯ ಪರಿಸರ ಮತ್ತು ಸಮಾಜ ಅಧ್ಯಯನ, ಗಣಿತ, ಭಾಷೆಗಳ ಓದು ಬರೆಯುವಿಕೆ ಕಲಿಸುವಿಕೆಗೆ ಮಹತ್ವ ನೀಡಲಾಗಿದೆ. ಆರರಿಂದ ಎಂಟನೇ ತರಗತಿಯು ಶಿಕ್ಷಣದಿ ಮಧ್ಯಮ ಹಂತವಾಗಿದ್ದು ಇಲ್ಲಿ ಅಮೂರ್ತ ಪರಿಕಲ್ಪನೆಗಳ ಜೊತೆಗೆ ಸಮಾಜ ವಿಜ್ಞಾನ, ಗಣಿತ, ತ್ರಿಭಾಷಾ ಕಲಿಕೆಗೆ, ವೃತ್ತಿಪರ ತರಬೇತಿ ಪೂರ್ವಸಿದ್ಧತೆಗಳ ಕಲಿಕೆಗೆ ಆದ್ಯತೆ ನೀಡಲಾಗಿದೆ. ಈ ಹಂತದಿ ಪದವಿ ಜೊತೆ ವೃತ್ತಿಪರ ತರಬೇತಿ ಪಡೆದ ಶಿಕ್ಷಕರು ನೇಮಕ ಹೊಂದಿರುತ್ತಾರೆ. ಒಂಬತ್ತರಿಂದ ಹನ್ನೆರಡನೆ ತರಗತಿ ಶಿಕ್ಷಣಕ್ಕೆ ಸ್ನಾತಕ ಪದವಿ ಜೊತೆ ತರಬೇತಿ ಹೊಂದಿದ ಟಿ.ಜಿ.ಟಿ ಶಿಕ್ಷಕರಿದ್ದು ಇಲ್ಲಿ ವಿಜ್ಞಾನ, ಕಲೆ, ಸಾಹಿತ್ಯ, ವಾಸ್ತುಶಿಲ್ಪ, ಇತಿಹಾಸ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ರಾಜಕೀಯ ನೀತಿ, ಗಣಿತದ ಕುರಿತಂತೆ ಶಿಕ್ಷಣವನ್ನು ವಿವಿಧ ಮಾಧ್ಯಮ ಹಾಗು ಕಲಿಕಾ ಆಯಾಮಗಳ ಮೂಲಕ ನೀಡಲಾಗುತ್ತದೆ. ರಾಜ್ಯ ಹಂತದಲ್ಲಿ ಮತ್ತು ರಾಷ್ಟ್ರ ಹಂತದಲ್ಲಿ ಶಿಕ್ಷಕರ ಶಿಕ್ಷಣಕ್ಕೆ 2022 ರ ವೇಳೆಗೆ ನೂತನ ಪಠ್ಯಕ್ರಮ ಚೌಕಟ್ಟು ನಿರ್ಧರಿಸಲಾಗುತ್ತದೆ. ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿ ಮೂಲಕ ದೇಶಾದ್ಯಂತ ಏಕರೂಪಿ ಶಿಕ್ಷಕರ ತರಬೇತಿ ವಿನ್ಯಾಸದ ಪಠ್ಯಕ್ರಮ ಹಾಗು ಪಠ್ಯಪುಸ್ತಕ ತಯಾರಿಸಲಾಗುತ್ತದೆ. ಈಗಾಗಲೇ ವೃತ್ತಿ ನಿರ್ವಹಿಸುತ್ತಿರುವ ಒಂದರಿಂದ ಪಿಯು ಹಂತದ ಶಿಕ್ಷಕರನ್ನು ಅವರ ವಿದ್ಯಾರ್ಹತೆ ಹಾಗು ನೇಮಕಾತಿ ವಿಧಾನದಂತೆ ವಿವಿಧ ಹಂತದ ಶಿಕ್ಷಕರಾಗಿ ಗುರುತಿಸಿ ವೃತ್ತಿ ದಕ್ಷತೆಯ ಸೇವಾನಿರತ ತರಬೇತಿ ನೀಡಲಾಗುತ್ತದೆ. ಆಧುನಿಕ ಕಾಲದ ಜಾಗತಿಕ ಸಾಮಾಜಿಕ ಆರ್ಥಿಕ ಬದಲಾವಣೆಗಳಿಗೆ ಭಾರತದ ನವ ಜನಾಂಗವನ್ನು ಸಿದ್ಧಗೊಳಿಸಲೇಬೇಕಾದ ಅನಿವಾರ್ಯತೆ ಈ ಕಾಲಗಟ್ಟದ ತುರ್ತಾಗಿದೆ. ಅದಕ್ಕೆ ತಕ್ಕಂತೆ ಗುಣಮಟ್ಟದ ವೇಗವರ್ಧಿತ ಬಹುಮಾಧ್ಯಮ ಬಳಕೆಯ ಶಿಕ್ಷಣ ಪಡೆದ ಶಿಕ್ಷಕರು ಶಾಲೆಗಳಲ್ಲಿರಬೇಕಾದುದು ಅವಶ್ಯಕವಾಗಿದೆ. ಹೊಸ ಶಿಕ್ಷಕರ ಆಯ್ಕೆಯಲ್ಲಿ ಎಲ್ಲ ಸಮಕಾಲೀನ ಬೇಡಿಕೆಗಳಿಗೆ ತಕ್ಕಂತೆ ಆಯ್ಕೆ ಪರಿಶೀಲನೆ ನಡೆದರು ಈಗಾಗಲೆ ಇರುವ ಲಕ್ಷಾಂತರ ವೃತ್ತಿನಿರತ ಶಿಕ್ಷಕರು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಅಗತ್ಯ ಅಂಶಗಳ ಮೂಲ ಲಕ್ಷಣಗಳನ್ನು ತಿಳಿದುಕೊಂಡು ಅದಕ್ಕೆ ತಕ್ಕಂತೆ ಶಿಕ್ಷಣ ಇಲಾಖೆ ನೀಡುವ ತರಬೇತಿ ಮತ್ತಿತರ ಸಾಹಿತ್ಯ ಅಭ್ಯಸಿಸಿ ತಮ್ಮನ್ನು ಮಾನಸಿಕವಾಗಿ ದೈಹಿಕವಾಗಿ ಬದಲಾಗುತ್ತಿರುವ ಶಿಕ್ಷಣ ವ್ಯವಸ್ಥೆಗೆ ಸನ್ನದ್ಧಮಾಡಿಕೊಳ್ಳಬೇಕಾಗಿದೆ. ಆ ಮೂಲಕ ಸುಭದ್ರ ಸುರಕ್ಷಿತ ಪ್ರಗತಿಪರ ಭಾರತ ನಿರ್ಮಾಣಕ್ಕೆ ಕೈಜೋಡಿಸಬೇಕಿದೆ. ಬನ್ನಿ ಶಿಕ್ಷಕರೆ ಹೊಸ ಶಿಕ್ಷಣ ನೀತಿ ಅರಿಯೋಣ! ದೇಶದ ಏಳ್ಗೆಗೆ ಸಾಕ್ಷಿಯಾಗೋಣ!!

ಟಿ.ಪಿ.ಉಮೇಶ್ ರಾಜ್ಯಪ್ರಶಸ್ತಿ ಪುರಸ್ಕೃತ ಸಹಶಿಕ್ಷಕರು ಅಮೃತಾಪುರ, ಹೊಳಲ್ಕೆರೆ .ತಾ. ಚಿತ್ರದುರ್ಗ .ಜಿ.


################################


ಕಲಿಕಾ ಚೇತರಿಕೆ ಗುಣಮಟ್ಟದ ಕಲಿಕೆಗೆ ಪ್ರೇರಕ

ಕೋವಿಡ್ ಸಾಂಕ್ರಾಮಿಕ ರೋಗದ ಉಲ್ಬಣಾವಸ್ಥೆಯಲ್ಲಿ ಕಳೆದುಹೋದವು ಎರಡು ವರ್ಷಗಳು. ವರ್ಷಗಳು ಕಳೆದು ಹೋದದ್ದು ಅಷ್ಟೇ ಅಲ್ಲ ನಮ್ಮ ಶಾಲಾ ಕಾಲೇಜು ವಿದ್ಯಾರ್ಥಿಗಳ ಸುವ್ಯವಸ್ಥಿತ ಶಿಕ್ಷಣದ ಗಳಿಕೆಯನ್ನು ಕುಂಠಿತಗೊಳಿಸಿತು. ನಿರಂತರವಾಗಿ ಸಾಗುತ್ತಿದ್ದ ಶಾಲಾ ಕಲಿಕೆಯನ್ನು ತುಂಡರಿಸಿತು. ಲಾಕ್ ಡೌನ್ ಸಂದರ್ಭ ಶಿಕ್ಷಕರು ಮತ್ತು ಮಕ್ಕಳು ಮನೆಯಲ್ಲಿಯೇ ಇರಬೇಕಾಗಿ ಬಂದಿತು. ತಾಂತ್ರಿಕ ಉಪಕರಣಗಳ ಕೊರತೆ ಡಾಟಾ ಕೊರತೆ ಸಿಗ್ನಲ್ ಅಲಭ್ಯತೆಗಳಿಂದ ಶಿಕ್ಷಕರ ಆನ್‌ಲೈನ್ ಬೋಧನೆ ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ತಲುಪಲಿಲ್ಲ. ಮನೆ ಮನೆಗೆ ಭೇಟಿ ನೀಡಿ ವೈಯಕ್ತಿಕ ಮಾರ್ಗದರ್ಶನ ನೀಡುವ ಪರಿಕ್ರಮವು ಅಂದುಕೊಂಡಷ್ಟು ಮಕ್ಕಳ ಶೈಕ್ಷಣಿಕ ಸುಧಾರಣೆಗೆ ಸಹಾಯಕವಾಗಲಿಲ್ಲ. ಕಲಿಕಾ ಹಾಳೆಗಳ ಹಂಚುವಿಕೆ ಬರೆಸುವಿಕೆ ಅಧ್ಯಯನ ಮಾಡಿಸುವಿಕೆಗಳು ನಿರಂತರ ಗಮನ ನೀಡಲಾಗದ ಕಾರಣ ಯಶಸ್ವಿಯಾಗಲಿಲ್ಲ. ಅಂದಮೇಲೆ ಕೋವಿಡ್ ಕಾಲದಿ ಸುರಕ್ಷಿತ ಶಿಕ್ಷಣ ನಡೆಯಲೇ ಇಲ್ಲವೆಂಬ ಭಾವನೆಯಲ್ಲ. ಎಲ್ಲ ವಿದ್ಯಾರ್ಥಿಗಳು ಅರ್ಹತಾದಾಯಕ ಕಲಿಕೆಯನ್ನು ಹೊಂದಲಿಲ್ಲ ಎಂಬುದಷ್ಟೆ. ಈಗ ಅಧಿಕೃತ ಭೌತಿಕ ತರಗತಿಗಳು ನಡೆಯದೆ ಎರಡು ತರಗತಿಗಳ ತೇರ್ಗಡೆಯಾಗಿ ಮುಂದಿರುವ ವಿದ್ಯಾರ್ಥಿಗಳು ತಮ್ಮ ವಯಸ್ಸು ಹಾಗು ತರಗತಿಗೆ ತಕ್ಕಂತೆ ಗುಣಮಟ್ಟದ ಕಲಿಕೆ ಹೊಂದಬೇಕೆಂಬುದು ಕರ್ನಾಟಕ ರಾಜ್ಯ ಸರ್ಕಾರದ ಆಶಯ. ಇದಕ್ಕಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಮುಂಬರುವ 2022 - 23 ನೇ ಸಾಲಿನ ಶೈಕ್ಷಣಿಕ ವರ್ಷವನ್ನು ಕಲಿಕಾ ಚೇತರಿಕೆ ವರ್ಷವೆಂದು ಘೋಷಿಸಿದೆ. ಕಲಿಕಾ ಚೇತರಿಕೆ ವರ್ಷ : ನಿಗದಿತ ತರಗತಿಯ ನಿಗದಿತ ಸಾಮರ್ಥ್ಯಗಳ ಗಳಿಕೆಯಲ್ಲಿ ಹಿಂದುಳಿದಿರುವ ಒಂದರಿಂದ ಒಂಬತ್ತನೇ ತರಗತಿಯ ಎಲ್ಲ ವಿದ್ಯಾರ್ಥಿಗಳಿಗೆ ಕಲಿಕಾ ಚೇತರಿಕೆ ಕಾರ್ಯಕ್ರಮ ನಡೆಸಲಾಗುವುದು. ಹಾಗಾಗಿ 2022-23 ರ ಶೈಕ್ಷಣಿಕ ವರ್ಷವನ್ನು ಕಲಿಕಾ ಚೇತರಿಕೆ ಅಥವಾ ಪುನಶ್ಚೇತನ ವರ್ಷ ಎಂದು ಕರೆಯಲಾಗಿದೆ. ಮಗು ಪ್ರಸ್ತುತ ಇರುವ ತರಗತಿಗಿಂತ ಈ ಹಿಂದಿನ ತರಗತಿಗಳ ಕಲಿಕಾ ಸಾಮರ್ಥ್ಯಗಳನ್ನು ಮೊದಲಿಗೆ ಪರಿಚಯಿಸುವ ಕಲಿಸುವ ಜೊತೆಗೆ ತರಗತಿ ಪಾಠಗಳು ಮುಂದುವರೆಯುತ್ತವೆ. ಪ್ರಸ್ತುತ ಹಾಜರಿರುವ ತರಗತಿಯ ಪಾಠಗಳ ಸಾಮರ್ಥ್ಯಗಳಿಗೆ ಈ ಹಿಂದಿನ ಕಲಿಕಾ ವಿಷಯಗಳನ್ನು ಜೋಡಿಸಲಾಗಿರುತ್ತದೆ. ಬ್ರಿಡ್ಜಕೋರ್ಸ್ ಲರ್ನಿಂಗ್ : ಬ್ರಿಡ್ಜಕೋರ್ಸ ಲರ್ನಿಂಗ್ ಪ್ರತಿ ಶೈಕ್ಷಣಿಕ ವರ್ಷದ ಆರಂಭದಿ ನಡೆಸಲಾಗುತ್ತಿತ್ತು. ಹಿಂದಿನ ತರಗತಿಗಳ ಕಲಿಕಾಂಶಗಳ ಪುನರ್ಮನನಕ್ಕೆ ಇದು ನೆರವಾಗುತ್ತಿತ್ತು. ಈ ಪ್ರಸ್ತುತ ಶೈಕ್ಷಣಿಕ ವರ್ಷಪೂರ್ತಿ ಬ್ರಿಡ್ಜ್ ಕೋರ್ಸ್ ನಡೆಯುತ್ತದೆ. ಇದು ಯಾವುದೇ ಹೆಚ್ಚುವರಿ ಕೆಲಸವಾಗಿರುವುದಿಲ್ಲ. ಹಿಂದಿನ ತರಗತಿಗಳ ಪ್ರಮುಖ ಕಲಿಕಾಂಶಗಳನ್ನು ವಿದ್ಯಾರ್ಥಿಗಳಿಗೆ ಚಟುವಟಿಕೆಗಳ ಮೂಲಕ ತಿಳಿಸುತ್ತ ಈಗಿನ ತರಗತಿಯ ಕಲಿಕಾಂಶಗಳನ್ನು ಕಲಿಸುವ ಸರಳ ಪಾಠ ಪ್ರಕ್ರಿಯೆಯಾಗಿದೆ. ಇಲ್ಲಿ ವಾರದ ಕೊನೆಯ ದಿನ ಅಥವಾ ಒಂದು ಪಾಠದ ಕಲಿಕಾಂಶದ ಬೋಧನೆ ತರುವಾಯ ಮೌಲ್ಯಮಾಪನ ಕ್ರಿಯೆ ಕೈಗೊಂಡು ದಾಖಲಿಸಲಾಗುತ್ತದೆ. ನಿರಂತರ ಮೌಲ್ಯಮಾಪನ : ಕಲಿತ ಕಲಿಕಾಂಶಗಳನ್ನು ಸೂಕ್ತ ಪ್ರಶ್ನಾವಳಿ ಯೋಜನೆ ಸಂದರ್ಶನದಂತಹ ಪರೀಕ್ಷಾ ಸಾಧನಗಳ ಮೂಲಕ ಅಳೆದು ಗ್ರೇಡ್ ನೀಡಲಾಗುವುದು. ವರ್ಷದಲ್ಲಿ ನಾಲ್ಕು ಬಾರಿ ರೂಪಣಾತ್ಮಕ ಹಾಗು ಎರಡು ಬಾರಿ ಸಂಕಲನಾತ್ಮಕ ಮೌಲ್ಯಮಾಪನ ಕೈಗೊಳ್ಳುವ ಪ್ರಕ್ರಿಯೆ ಈ ಹಿಂದಿನಂತೆಯೇ ಸಾಗುವುದು. ಒಟ್ಟಾರೆ ಕಲಿಕೆ ಮತ್ತು ಮೌಲ್ಯಮಾಪನ ನಿರಂತರವಾಗಿಯೇ ಜರುಗುವುದು. ಕಲಿಕೆಯ ಅವಲೋಕನ ನಿರಂತರವಾಗಿದ್ದು ವಿದ್ಯಾರ್ಥಿಗಳಿಗೆ ಶಿಕ್ಷಕರು ಹಿಮ್ಮಾಹಿತಿಗಳ ಮೂಲಕ ಕಲಿಕೆಯನ್ನು ಧನಾತ್ಮಕವಾಗಿ ಬೆಂಬಲಿಸುವರು. ಜುಲೇ ಮಾಸಾಂತ್ಯ ಹಾಗು ಸೆಪ್ಟೆಂಬರ್ ಎರಡನೆ ವಾರ ಮತ್ತು ಡಿಸೆಂಬರ್ ಮಾಸಾಂತ್ಯ ಹಾಗು ಫೆಬ್ರವರಿ ಮಾಸಾಂತ್ಯ ರೂಪಣಾತ್ಮಕ ಮೌಲ್ಯಮಾಪನ ಪ್ರಕ್ರಿಯೆ ದಾಖಲೆ ನಡೆಸುವುದು. ಅಕ್ಟೋಬರ್ ಮೊದಲ ವಾರ ಹಾಗು ಮಾರ್ಚ್ ಮಾಸಾಂತ್ಯ ಸಂಕಲನಾತ್ಮಕ ಮೌಲ್ಯಮಾಪನ ನಡೆಸಿ ಕಲಿಕಾ ದಾಖಲೆ ನಿರ್ವಹಿಸಲಾಗುವುದು. ಶಿಕ್ಷಣ ಇಲಾಖೆಯ ಸಿದ್ಧತೆ : ರಾಜ್ಯದಾದ್ಯಂತ ಏಕರೂಪದಲ್ಲಿ ಕಲಿಕಾ ಚೇತರಿಕೆ ಕಾರ್ಯಕ್ರಮ ಜಾರಿಯಾಗುವುದು. ಅಜೀಂ ಪ್ರೇಮಜಿ ಸಂಸ್ಥೆಯವರ ಶೈಕ್ಷಣಿಕ ಸಹಭಾಗಿತ್ವದಿಂದ ಕಲಿಕಾ ಕಾರ್ಡಗಳನ್ನು ಸಂಪನ್ಮೂಲ ಸಾಹಿತ್ಯವನ್ನು ತಯಾರಿಸಲಾಗಿದೆ. ಡಿ ಎಸ್ ಇ ಆರ್ ಟಿ ಯು ಜಿಲ್ಲಾ ಡಯಟ್ ಗಳ ಮೂಲಕ ಎಲ್ಲ ಶೈಕ್ಷಣಿಕ ಸಿಬ್ಬಂದಿಗಳಿಗೆ ತರಬೇತಿ ಆಯೋಜಿಸಿ ಸನ್ನದ್ದಗೊಳಿಸುವುದು. ಶಿಕ್ಷಕರ ಸಾಹಿತ್ಯ ಕೈಪಿಡಿ ಹಾಗು ವಿದ್ಯಾರ್ಥಿಗಳ ಪಠ್ಯಪುಸ್ತಕಗಳು ಈಗಾಗಲೇ ಮುದ್ರಣಗೊಂಡಿದ್ದು ಬೋಧಕ ವರ್ಗಕ್ಕೆ ಕಲಿಕೆ ನೀಡುವಲ್ಲಿ ಯಾವುದೇ ತೊಂದರೆಯೂ ಆಗುವುದಿಲ್ಲ. ಜಿಲ್ಲಾ ನೋಡಲ್ ಅಧಿಕಾರಿಗಳು ಮತ್ತು ತಾಲ್ಲೋಕು ನಿರ್ದಿಷ್ಟಾಧಿಕಾರಿಗಳ ಮಾರ್ಗದರ್ಶನದಲ್ಲಿ ಕಲಿಕಾ ಚೇತರಿಕೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುವುದು. ಪಠ್ಯಪುಸ್ತಕ ಹಾಗು ಕಲಿಕಾ ಕಾರ್ಡಗಳು : ವಿದ್ಯಾರ್ಥಿಗಳ ಹಿಂದಿನ ತರಗತಿ ಹಾಗು ಪ್ರಸ್ತುತ ಓದುವ ತರಗತಿಯ ಪಾಠಾಂಶಗಳ ಕ್ರೋಢೀಕರಣಗೊಂಡ ಚಟುವಟಿಕೆಗಳ ಪುಸ್ತಕಗಳು ಈಗಾಗಲೇ ಸಿದ್ಧಗೊಂಡಿವೆ. ಹಾಗಾಗಿ ಹಿಂದಿನ ತರಗತಿಗಳ ಪಠ್ಯಪುಸ್ತಕಗಳ ಸಂಗ್ರಹಿಸುವ ಇಟ್ಟುಕೊಳ್ಳುವ ಹೆಚ್ಚುವರಿ ಹೊರೆ ಇರದು. ಕಲಿಕಾಂಶದ ಹಾಳೆಗಳು ಶಾಲೆಗಳಿಗೆ ಸರಬರಾಜಾಗುವುದರಿಂದ ಪಠ್ಯಪುಸ್ತಕಗಳು ಇವುಗಳಿಗೆ ಪೂರಕ ಸಾಮಗ್ರಿಯಾಗಿರುತ್ತವೆ. ವೇಳಾಪಟ್ಟಿಯಂತೆ ಕಲಿಕಾಂಶದ ಕಾರ್ಡಗಳ ಚಟುವಟಿಕೆಗಳ ವಿದ್ಯಾರ್ಥಿಗಳಿಗೆ ಕಲಿಸಲು ಸಹಕಾರಿಯಾಗಿ ಪಠ್ಯಪುಸ್ತಕಗಳ ಪಾಠಗಳಿರುತ್ತವೆ. ಶಿಕ್ಷಕರು ಬೇಕೆಂದಾದರೆ ಸ್ವತಃ ಹೆಚ್ಚುವರಿ ಕಲಿಕಾ ಚಟುವಟಿಕೆ ರೂಪಿಸಿಕೊಳ್ಳುವ ಸೃಜನಶೀಲ ಪ್ರಯತ್ನ ಮಾಡಬಹುದು. ಗುಣಮಟ್ಟದ ಕಲಿಕೆ : ಪೋಷಕರ ನಿರೀಕ್ಷೆ ತಮ್ಮ ಮಕ್ಕಳು ಗುಣಮಟ್ಟದ ಕಲಿಕೆ ಸಾಧಿಸಬೇಕೆಂಬುದು. ಶಿಕ್ಷಣ ಇಲಾಖೆಯ ಆಶಯವು ಇದೇ ಆಗಿದೆ. ಯಾವುದೇ ಮಗುವು ಅರ್ಹತಾದಾಯಕ ಕಲಿಕೆಯಿಂದ ವಂಚಿತರಾಗಬಾರದು. ತನ್ನ ವಯಸ್ಸಿನ ಮಿತಿಯಂತೆ ಗರಿಷ್ಟ ಕಲಿಕಾ ಮಟ್ಟವನ್ನು ಸಾಧಿಸುವಂತೆ ವಿದ್ಯಾರ್ಥಿಗಳನ್ನು ಪ್ರೇರೇಪಿಸಲು ಕಲಿಕಾ ಚೇತರಿಕೆ ಕಾರ್ಯಕ್ರಮ ಸಹಕಾರಿಯಾಗಿದೆ. ವಿದ್ಯಾರ್ಥಿಗಳೇ ನಾಡಿನ ಭವಿಷ್ಯದ ರೂವಾರಿಗಳು. ತಾವು ಸಾಂಕ್ರಾಮಿಕ ಕರೋನಾ ಕಾಲದಿ ನಿಗದಿತ ಕಲಿಕೆ ಹೊಂದಲಿಲ್ಲ ಎಂಬ ನಿರಾಶೆ ಕಾಡದಂತೆ ಮಾಡುವುದೇ ಕಲಿಕಾ ಚೇತರಿಕೆ ಕಾರ್ಯಕ್ರಮದ ಮೂಲ ಉದ್ದೇಶ.

ಟಿ.ಪಿ.ಉಮೇಶ್

ರಾಜ್ಯಪ್ರಶಸ್ತಿ ಪುರಸ್ಕೃತ ಸಹಶಿಕ್ಷಕರು ಅಮೃತಾಪುರ ಹೊಳಲ್ಕೆರೆ .ತಾ. ಚಿತ್ರದುರ್ಗ .ಜಿ. ಕರ್ನಾಟಕ


@@@@@@@@@@@@@@@@@@@@@@@@@@@@@@@@@@@@@@@@@@@@@@@@@@@@@@@@@@@@@@@@@@@@@@@@@@@@@@@@@@@@@@@

2022 - 23: Year of Learning Recovery


The Karnataka State Government has launched a Learning Recovery Program through the State Education Research and Training Department.  In this regard, Karnataka Department of Education has already declared the academic year 2022 and 23 as the year of academic revival.

Background  Students have a learning disadvantage in the academic years 2019-20 and 2021-22.  Teachers may also not be able to engage in teaching effectively due to the inconvenient covid restrictions of technology downtime.  Online lessons such as juggling school, homeschooling, mobile school, radio and television programs such as radio and television can not provide quality education to all students.

Modern technology-based education has failed as an alternative method to provide effective education in Covid Back, as most children are technically deprived of technology.  The school college teachers worked hard and prepared YouTube lessons for various mobile lessons.  Learning students have setbacks in having the learning outcomes set by their aid.  The Department of Education's overall educational efforts have failed to impact children in the last two years.  Considering this, the Government and the Department of Education are now planning and implementing a program for the re-learning of underdeveloped learning capabilities in 2022-23.

* Outline *: In the next academic year, the learning elements of the past year will be organized in a synergistic manner with integrating the learning elements of the previous year.  Textbooks have already been created and complimentary learning sheets have been created so that the child in the third grade can learn lessons from the previous one and second grades.  Similarly, a cluster of textbooks and learning sheets have been prepared for grades one through nine.  Teachers will educate children on schedule using the materials provided by the department.

* Evaluation *: On the last day of the week, children have the opportunity to review what they learned.  This is evaluated through other planning strategies that the interviewer discusses questioning or answering the questionnaire.  Teachers are also given time to evaluate each learning session through a variety of tool techniques.

* Year-round bridges *: In the past fifteen days of school startups, now it is held all year round.  This is not an extra task.  Something that will go along with the lesson.  Re-learning activities for children who are left behind by rethinking once a week or after learning about related topics.

Conduct a credit examination to ensure that students are learning early in the academic year through pre-test.  Later, the learning curve was given to the backward students of Kalika, the rehabilitation of the learning and the Northern examinations were completed.  From the beginning of the academic year to now, the classroom content has been combined with the learning of the previous classrooms and the current classroom content has been conducted year-round.

The fifth grade class will have a five-digit concept.  If a fifth grade student does not learn or is unable to learn again, he will now be taught three and a half skills and will be taught five and a half skills.  Similarly, a third and fourth quotient subtraction is learned from a two-dimensional sum, a decimal sum, a decimal sum.  This way the rest of the learning goes on.

* Action Plan *: Textbooks and learning sheets have already been printed for the year of learning revival by the Textbook Association of the State level.  They will be supplied to schools across the state by May 15th.  Two days training for all teachers from resource centers at District and Taluk levels.

From the state level to the taluk level, the nodal authorities and subject matter supervisors along with the administrators will review and guide the learning program.  Ajeem Premanji Poundeshan is collaborating with the department on the success of the Learning Recovery Program.

TP Umesh

State awardee teacher

Glps Amruthapura

Hoolalkere, chitradurga.dist. karnataka

2022-23  : ಕಲಿಕಾ ಪುನಶ್ಚೇತನ ವರ್ಷ

ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯ ಮೂಲಕ ಕಲಿಕಾ ಪುನಶ್ಚೇತನ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ನಿಟ್ಟಿನಲ್ಲಿ 2022 ಹಾಗು 23 ರ ಶೈಕ್ಷಣಿಕ ವರ್ಷವನ್ನು ಈಗಾಗಲೇ ಶೈಕ್ಷಣಿಕ ಪುನಶ್ಚೇತನ ವರ್ಷವನ್ನಾಗಿ ಕರ್ನಾಟಕ ಶಿಕ್ಷಣ ಇಲಾಖೆ ಘೋಷಿಸಿದೆ.

*ಹಿನ್ನೆಲೆ* : ಕರಾಳ ಕರೋನಾ ಸಾಂಕ್ರಾಮಿಕ ರೋಗದ ಪರಿಣಾಮ ಈ ಹಿಂದಿನ ಎರಡು ವರ್ಷಗಳಲ್ಲಿ ವಿದ್ಯಾರ್ಥಿಗಳ ಕಲಿಕೆ ಉತ್ತಮ ಮಟ್ಟದಲ್ಲಿ ಸಾಧಿತವಾಗಿಲ್ಲ. 2019-20 ಹಾಗು 2021-22 ರ ಶೈಕ್ಷಣಿಕ ವರ್ಷಗಳಲ್ಲಿ ವಿದ್ಯಾರ್ಥಿಗಳಿಗೆ ಕಲಿಕಾ ಹಿನ್ನಡೆ ಆಗಿದೆ. ಶಿಕ್ಷಕರು ಸಹ ತಂತ್ರಜ್ಞಾನದ ಅಲಭ್ಯತೆ ಪ್ರಯಾಣದ ಅನಾನುಕೂಲ ಕೋವಿಡ್ ನಿರ್ಬಂಧಗಳಿಂದ ಪರಿಣಾಮಕಾರಿಯಾಗಿ ಬೋಧನೆಯಲ್ಲಿ ತೊಡಗಿಸಿಕೊಳ್ಳಲು ಆಗಿರುವುದಿಲ್ಲ. ಆನ್‌ಲೈನ್ ಪಾಠಗಳು ಜಗಲಿ ಶಾಲೆ ವಠಾರ ಶಾಲೆ ಮನೆ ಶಾಲೆ ಮೊಬೈಲ್ ಶಾಲೆ ರೇಡಿಯೋ ಹಾಗು ದೂರದರ್ಶನ ಪಾಠಶಾಲೆ ಮುಂತಾದ ಕಲಿಕಾ ಕಾರ್ಯಕ್ರಮಗಳು ಎಲ್ಲ ವಿದ್ಯಾರ್ಥಿಗಳಿಗು ಗುಣಮಟ್ಟದ ಶಿಕ್ಷಣ ಒದಗಿಸಲು ಸಾಧ್ಯವಾಗಿಲ್ಲ.

ಆಧುನಿಕ ತಾಂತ್ರಿಕ ಪರಿಕರವುಳ್ಳ ಕುಟುಂಬದ ಮಕ್ಕಳು ತಕ್ಕಷ್ಟು ಕಲಿಕೆ ಹೊಂದಿರಬಹುದು ಬಹುತೇಕ ಮಕ್ಕಳು ತಂತ್ರಜ್ಞಾನ ವಂಚಿತರಾಗಿರುವ ಕಾರಣ ಆಧುನಿಕ ತಂತ್ರಜ್ಞಾನ ಆಧಾರಿತ ಶಿಕ್ಷಣವು ಕೋವಿಡ್ ಹಿನ್ನೆಯಲ್ಲಿ ಪರಿಣಾಮಕಾರಿ ಶಿಕ್ಷಣ ನೀಡಲು ಪರ್ಯಾಯ ವಿಧಾನವಾಗಿ ಸೋತಿದೆ. ಶಾಲಾ ಕಾಲೇಜು ಶಿಕ್ಷಕರು ಸಾಕಷ್ಟು ಶ್ರಮಿಸಿ ವಿವಿಧ ಮೊಬೈಲ್ ಪಾಠಗಳ ಯೂಟೂಬ್ ಪಾಠಗಳ ತಯಾರಿಸಿದರು. ಕಲಿಕಾ ವಿದ್ಯಾರ್ಥಿಗಳು ಅವುಗಳ ನೆರವು ಪಡೆದು ನಿಗದಿಪಡಿಸಿದ ಕಲಿಕಾ ಫಲಗಳ ಹೊಂದುವಲ್ಲಿ ಹಿನ್ನಡೆಯನ್ನ ಹೊಂದಿದ್ದಾರೆ. ಒಟ್ಟಾರೆ ಶಿಕ್ಷಣ ಇಲಾಖೆಯ ಸಾಕಷ್ಟು ಶೈಕ್ಷಣಿಕ ಪ್ರಯತ್ನಗಳು ಕಳೆದ ಎರಡು ವರ್ಷಗಳಲ್ಲಿ ಮಕ್ಕಳನ್ನು ಪ್ರಭಾವಿಸುವಲ್ಲಿ ಸೋತಿವೆ. ಇದನ್ನು ಗಮನಿಸಿರುವ ಸರ್ಕಾರ ಮತ್ತು ಶಿಕ್ಷಣ ಇಲಾಖೆ 2022-23 ನೇ ಸಾಲಿನಲ್ಲಿ ಹಿಂದುಳಿದಿರುವ ಕಲಿಕಾ ಸಾಮರ್ಥ್ಯಗಳ ಪುನರ್ ಗಳಿಕೆಗೆ ಯೋಜನೆ ರೂಪಿಸಿ ಈಗ ಕಾರ್ಯಗತ ಮಾಡುತ್ತಿದೆ.

*ರೂಪುರೇಷೆ* : ಮುಂದಿನ ಶೈಕ್ಷಣಿಕ ವರ್ಷದಲ್ಲಿ ಈ ಹಿಂದಿನ ವರ್ಷಗಳ ಕಲಿಕಾ ಅಂಶಗಳನ್ನು ಸಮ್ಮಿಳಿತವಾಗಿಸಿ ಪಠ್ಯಪುಸ್ತಕಗಳಲ್ಲಿಯೇ ಸಮಗ್ರ ಕಲಿಕಾ ಫಲಗಳಿಗೆ ತಕ್ಕಂತ ಚಟುವಟಿಕೆಗಳ ಆಯೋಜಿಸಲಾಗಿದೆ. ಈಗ ಮೂರನೇ ತರಗತಿಯಲ್ಲಿನ ಮಗುವಿಗೆ ಹಿಂದಿನ ಒಂದು ಹಾಗು ಎರಡನೆ ತರಗತಿಗಳ ಕಲಿಕಾ ಸಾಮರ್ಥ್ಯಗಳ ಪಾಠಗಳು ಇರುವಂತೆ ಪಠ್ಯಪುಸ್ತಕಗಳ ಈಗಾಗಲೇ ರಚಿಸಲಾಗಿದೆ ಮತ್ತು ಪೂರಕವಾಗಿ ಕಲಿಕಾ ಹಾಳೆಗಳನ್ನು ತಯಾರಿಸಲಾಗಿದೆ. ಇದೇ ರೀತಿ ಒಂದರಿಂದ ಒಂಬತ್ತನೇ ತರಗತಿಯವರೆಗೆ ಪಠ್ಯಪುಸ್ತಕ ಹಾಗು ಕಲಿಕಾ ಹಾಳೆಗಳ ಗುಚ್ಚ ತಯಾರಿಸಲಾಗಿದೆ. ಶಿಕ್ಷಕರು ಇಲಾಖೆ ಒದಗಿಸಿದ ಸಾಮಗ್ರಿಗಳನ್ನು ಬಳಸಿಕೊಂಡು ವೇಳಾಪಟ್ಟಿವಾರು ಮಕ್ಕಳಿಗೆ ಕಲಿಕೆ ನೀಡುವರು.

*ಮೌಲ್ಯಮಾಪನ* : ವಾರದ ಕೊನೆಯ ದಿನ ಮಕ್ಕಳು ಕಲಿತಂತಹ ಅಂಶಗಳ ಅವಲೋಕಿಸುವ ಅವಕಾಶವಿದೆ. ಇದಕ್ಕಾಗಿ ಪ್ರಶ್ನಿಸುವ ಅಥವಾ ಉತ್ತರಿಸುವ ಪ್ರಶ್ನಾವಳಿ ಸಂದರ್ಶಿಸುವ ಚರ್ಚಿಸುವ ಅವಲೋಕಿಸುವ ಇತರ ಯೋಜನಾ ತಂತ್ರಗಳ ಮೂಲಕ ಮೌಲ್ಯಮಾಪನ ಮಾಡಲಾಗುತ್ತದೆ. ಪ್ರತಿ ಕಲಿಕಾಂಶದ ನಂತರವು ಸಹ ವಿವಿಧ ಸಾಧನ ತಂತ್ರಗಳ ಮೂಲಕ ಮೌಲ್ಯಮಾಪನ ಕೈಗೊಳ್ಳಲು ಶಿಕ್ಷಕರಿಗೆ ಸಮಯ ನಿಗದಿಪಡಿಸಲಾಗಿದೆ.

*ವರ್ಷಪೂರ್ತಿ ಸೇತುಬಂಧ* : ಹಿಂದಿನ ವರ್ಷಗಳಲ್ಲಿ ಶಾಲೆ ಆರಂಭದ ಹದಿನೈದು ದಿನಗಳಲ್ಲಿ ಕೈಗೊಳ್ಳುತ್ತಿದ್ದ ಸೇತುಬಂಧ ಈಗ ವರ್ಷಪೂರ್ತಿ ನಡೆಯುತ್ತದೆ. ಇದು ಹೆಚ್ಚುವರಿ ಕಾರ್ಯವೇನಲ್ಲ. ಪಾಠದ ಜೊತೆಯಲ್ಲಿಯೇ ನಡೆಯುವಂತಹದ್ದು. ಸಂಬಂಧಿಸಿದ ವಿಷಯಗಳ ಕಲಿತಿರುವರೇ ಎಂದು ವಾರಕ್ಕೊಮ್ಮೆ ಅಥವಾ ಕಲಿಕಾಂಶ ಕಲಿಸಿದ ನಂತರ ಪುನರ್ ಅವಲೋಕಿಸಿ ಹಿಂದುಳಿದಿರುವ ಮಕ್ಕಳಿಗೆ ಪುನಃ ಕಲಿಕಾ ಚಟುವಟಿಕೆಗಳ ನಡೆಸುವುದು.

ಕಲಿಕಾ ವರ್ಷದ ಆರಂಭದಲ್ಲಿ ವಿದ್ಯಾರ್ಥಿಗಳ ಕಲಿಕಾ ವಿಷಯಗಳ ಪೂರ್ವ ಪರೀಕ್ಷೆ ಮೂಲಕ ಖಾತ್ರಿ ಮಾಡಿಕೊಳ್ಳಲು ನೈದಾನಿಕ ಪರೀಕ್ಷೆಯ ನಡೆಸುವುದು. ನಂತರ ಕಲಿಕಾ ಹಿಂದುಳಿದ ವಿದ್ಯಾರ್ಥಿಗಳಿಗೆ ಹಿಮ್ಮಾಹಿತಿ ಚಟುವಟಿಕೆಗಳ ನೀಡಿ ಕಲಿಕಾ ಪುನರ್ಮನನ ನಡೆಸಿ ಉತ್ತರ ಪರೀಕ್ಷೆಗಳ ನಡೆಸಿ ಸೇತುಬಂಧ ಮುಕ್ತಾಯಗೊಳಿಸಲಾಗುತ್ತಿತ್ತು. ಈಗ ಶೈಕ್ಷಣಿಕ ವರ್ಷದ ಆರಂಭದಿಂದಲೇ ತರಗತಿವಾರು ವಿಷಯವಾರು ಹಿಂದಿನ ತರಗತಿಗಳ ಕಲಿಕಾಂಶಗಳ ಜೊತೆಗೆ ಈಗಿನ ತರಗತಿಯ ವಿಷಯಗಳ ಸಮ್ಮಿಳಿತ ಮಾಡಿರುವುದರಿಂದ ಸೇತುಬಂಧ ವರ್ಷಪೂರ್ತಿ ನಡೆಸಿದಂತಾಗುತ್ತದೆ.

ಐದನೇ ತರಗತಿಗೆ ಐದು ಅಂಕಿ ಸಂಖ್ಯೆಗಳ ಪರಿಕಲ್ಪನೆ ಕಲಿಕೆಗೆ ಇರುತ್ತದೆ. ಈ ಹಿಂದಿನ ತರಗತಿಗಳಲ್ಲಿ ಎರಡಂಕಿಯಿಂದ ನಾಲ್ಕಂಕಿಯವರೆಗೆ ಕಲಿತಿರಬೇಕಾಗುತ್ತದೆ ಐದನೇ ತರಗತಿ ವಿದ್ಯಾರ್ಥಿ ಈ ಕಲಿಕಾಂಶ ಕಲಿತಿರದಿದ್ದರೆ ಅಥವಾ ಕಲಿತು ಪುನರ್ಮನನ ಸಾಧ್ಯವಾಗದಿದ್ದರೆ ಈಗ ಪುನಃ ಮೂರಂಕಿ ನಾಲ್ಕಂಕಿ ಸಾಮರ್ಥ್ಯಗಳ ಕಲಿಸಿ ಐದಂಕಿ ಸಾಮರ್ಥ್ಯ ಕಲಿಸಲಾಗುತ್ತದೆ. ಇದೇ ರೀತಿ ದಶಕ ರಹಿತ ಸಂಕಲದಿಂದ ದಶಕ ಸಹಿತ ಸಂಕಲನ ಎರಡಂಕಿ ಸಂಕಲನ ವ್ಯವಕಲದಿಂದ ಮೂರಂಕಿ ಹಾಗು ನಾಲ್ಕಂಕಿ ಸಂಕಲನ ವ್ಯವಕಲನ ಕಲಿಕೆ ನಡೆಯುತ್ತದೆ. ಈ ತೆರನಾಗಿ ಉಳಿದ ವಿಷಯಗಳ ಕಲಿಕೆಯೂ ಸಾಗುತ್ತದೆ.

*ಕಾರ್ಯ ಯೋಜನೆ*: ರಾಜ್ಯ ಹಂತದಲ್ಲಿ ಪಠ್ಯಪುಸ್ತಕ ಸಂಘದಿಂದ ಈಗಾಗಲೇ ಕಲಿಕಾ ಪುನರ್ಮನನ ವರ್ಷಕ್ಕೆ ಪಠ್ಯಪುಸ್ತಕಗಳು ಹಾಗು ಕಲಿಕಾ ಹಾಳೆಗಳು ಮುದ್ರಣಗೊಂಡಿವೆ. ಮೇ ಹದಿನೈದರ ವೇಳೆಗೆ ರಾಜ್ಯದ ಎಲ್ಲ ಶಾಲೆಗಳಿಗೆ ಅವು ಸರಬರಾಜು ಆಗಲಿವೆ. ಜಿಲ್ಲಾ ಹಾಗು ತಾಲ್ಲೋಕು ಹಂತಗಳಲ್ಲಿ ಸಂಪನ್ಮೂಲ ಕೇಂದ್ರಗಳಿಂದ ಎಲ್ಲ ಶಿಕ್ಷಕರಿಗು ಎರಡು ದಿನಗಳ ತರಬೇತಿ ಆಯೋಜಿಸಲಾಗಿದೆ.

ರಾಜ್ಯ ಹಂತದಿಂದ ತಾಲ್ಲೋಕು ಹಂತದವರೆಗು ನೋಡಲ್ ಅಧಿಕಾರಿಗಳು ಹಾಗು ವಿಷಯ ಪರಿವೀಕ್ಷಕರ ಜೊತೆಗೆ ಅನುಷ್ಟಾನಾಧಿಕಾರಿಗಳು ಕಲಿಕಾ ಕಾರ್ಯಕ್ರಮವನ್ನು ಅವಲೋಕಿಸಿ ಮಾರ್ಗದರ್ಶನ ಮಾಡಲಿದ್ದಾರೆ. ಅಜೀಂ ಪ್ರೇಮಂಜಿ ಪೌಂಡೇಶನರವರು ಕಲಿಕಾ ಪುನಶ್ಚೇತನ ಕಾರ್ಯಕ್ರಮದ ಯಶಸ್ಸಿಗೆ ಇಲಾಖೆಯವರೊಂದಿಗೆ ಸಹಕಾರ ನೀಡುತ್ತಿದ್ದಾರೆ.

ಟಿ.ಪಿ.ಉಮೇಶ್

ಸಹಶಿಕ್ಷಕರು ಅಮೃತಾಪುರ

ಹೊಳಲ್ಕೆರೆ .ತಾ. ಚಿತ್ರದುರ್ಗ .ಜಿ. ಕರ್ನಾಟಕ


$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$$


ಹೊಸ ಶಿಕ್ಷಣ ನೀತಿಯ 5+3+3+4 ಶೈಕ್ಷಣಿಕ ಸಂರಚನೆ



2020 ರ ಜುಲೈ 29 ರಂದು ಕೇಂದ್ರ ಸರ್ಕಾರದ ಕ್ಯಾಬಿನೆಟ್ ಸಭೆಯಲ್ಲಿ ರಾಷ್ಟ್ರೀಯ ಹೊಸ ಶಿಕ್ಷಣ ನೀತಿ ಅನುಮೋದನೆಗೊಂಡಿದೆ. ಪ್ರಸ್ತುತ ಶತಮಾನದ ಮೊದಲ ರಾಷ್ಟ್ರೀಯ ಶಿಕ್ಷಣ ಕಾರ್ಯಕ್ರಮ ಇದಾಗಿದೆ. 2040 ರ ವೇಳೆಗೆ ಭಾರತದ ಶೈಕ್ಷಣಿಕ ಕ್ಷೇತ್ರದ ಸಾರ್ವತ್ರೀಕರಣದ ಸರ್ವತೋಮುಖ ಪ್ರಗತಿಯ ಮುನ್ನೋಟವನ್ನು ಇದು ಒಳಗೊಂಡಿದೆ. ಶಿಕ್ಷಣವು ಸಂವಿಧಾನದ ಸಮವರ್ತಿ ಪಟ್ಟಿಯಲ್ಲಿ ಬರುತ್ತದೆ. ಹಾಗಾಗಿ ಕೇಂದ್ರ ಸರ್ಕಾರವು ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸುವ ಜವಾಬ್ದಾರಿ ಹೊಂದಿದೆ. ರಾಜ್ಯಗಳು ಕೇಂದ್ರದ ಶಿಕ್ಷಣ ನೀತಿಯನ್ನು ಯಥಾವತ್ತಾಗಿ ಅಥವಾ ತನ್ನ ರಾಜ್ಯದ ಸಂಪನ್ಮೂಲಗಳಿಗೆ ಹಾಗು ಅಗತ್ಯತೆಗಳಿಗೆ ತಕ್ಕಂತೆ ಮಾರ್ಪಡಿಸಿಕೊಂಡು ಜಾರಿಮಾಡುವ ಸ್ವಾತಂತ್ರ್ಯ ಹೊಂದಿವೆ. ಬಹುತೇಕ ಭಾರತದ ಎಲ್ಲ ರಾಜ್ಯ ಹಾಗು ಕೇಂದ್ರಾಡಳಿತ ಪ್ರದೇಶಗಳು ಹೊಸ ಶಿಕ್ಷಣ ನೀತಿ 2020 ನ್ನು ಅಳವಡಿಸಿಕೊಳ್ಳುವಲ್ಲಿ ರಾಜ್ಯ ಶಾಸನಗಳನ್ನು ರೂಪಿಸುತ್ತಿವೆ. ಅಂತೆಯೇ ನಮ್ಮ ಕರ್ನಾಟಕ ರಾಜ್ಯ ಸರ್ಕಾರವು ಹೊಸ ಶಿಕ್ಷಣ ನೀತಿಯನ್ನು 2022 ರ ಶೈಕ್ಷಣಿಕ ವರ್ಷದಿಂದ ಜಾರಿಗೆ ತರಲು ಕಾರ್ಯಯೋಜನೆ ಸಿದ್ಧಪಡಿಸುತ್ತಿದೆ.

            ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು "ಮಾನವನ ಸಾಮರ್ಥ್ಯವನ್ನು ಸಂಪೂರ್ಣವಾಗಿ ವಿಕಸಿಸುವ, ಸಮಾನ ಮತ್ತು ನ್ಯಾಯಯುತ ಸಮಾಜವನ್ನು ನಿರ್ಮಿಸುವ ಮತ್ತು ರಾಷ್ಟ್ರದ ಅಭಿವೃದ್ಧಿಯನ್ನು ಉತ್ತೇಜಿಸುವುದೇ ಶಿಕ್ಷಣವಾಗಿದೆ" ಎಂದು ಹೇಳುತ್ತದೆ. 1986 ರ ರಾಷ್ಟ್ರೀಯ ಶಿಕ್ಷಣ ಯೋಜನೆಯ ನಂತರ ಸುಮಾರು 36 ವರ್ಷಗಳ ಅಂತರದಲ್ಲಿ ಭಾರತ ದೇಶವು ಅಳವಡಿಸಿಕೊಳ್ಳುತ್ತಿರುವ ಹೊಸ ಶಿಕ್ಷಣ ನೀತಿಯು ಇದಾಗಿದೆ. ಭವಿಷ್ಯದ ಜಗತ್ತು ಭಾರತದ ಜ್ಞಾನ ನಿರೀಕ್ಷಿಸುತ್ತಿದೆ. ಮತ್ತೊಮ್ಮೆ ಭಾರತ ಜ್ಞಾನದಲ್ಲು ವಿಶ್ವಗುರುವಾಗಿ ಎಲ್ಲ ಮಾನವ ಪರಿಣಿತಿ ಕ್ಷೇತ್ರಗಳಲ್ಲಿ ಮುಂಚೂಣಿಗೆ ತಲುಪುವ ಗುರಿ ಹೊಂದಿದೆ. ಈ ಶಿಕ್ಷಣ ನೀತಿಯು ಏಕಾ ಏಕಿ ಜಾರಿಯಾದದ್ದಲ್ಲ. ಭಾರತ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯಿಂದ 2015 ರಲ್ಲಿ ಉನ್ನತ ಶಿಕ್ಷಣ ಇಲಾಖೆಗೆ ಇಪ್ಪತ್ತು ಮತ್ತು ಶಾಲಾ ಶಿಕ್ಷಣಕ್ಕೆ ಹದಿಮೂರು ಪ್ರಶ್ನಾವಳಿಗಳನ್ನು ನೀಡಲಾಗಿತ್ತು. ಅವುಗಳನ್ನು ಪಂಚಾಯಿತಿ ಮಟ್ಟದಿಂದ ಕೇಂದ್ರದ ಸಂಸತ್ ವರೆಗೆ ಮತ್ತು ಬಾಲವಾಡಿ/ ಪ್ರಾಥಮಿಕ ಶಾಲೆಗಳಿಂದ ಉನ್ನತ ವಿ.ವಿಗಳವರೆಗೆ ಎಲ್ಲಾ ಹಂತಗಳಲ್ಲಿ ಚರ್ಚೆ ಮಾಡಿ ಸಲಹೆ ಪಡೆಯಲಾಗಿತ್ತು. ಈ ಎಲ್ಲ ಚರ್ಚೆಗಳನ್ನು ಕ್ರೋಡೀಕರಣ ಮಾಡಿ 2016 ರಲ್ಲಿ ಟಿಎಸ್ಸಾರ್ ಸುಬ್ರಹ್ಮಣ್ಯ ಸಮಿತಿ ಸಮಗ್ರ ವರದಿಯನ್ನು ಕೇಂದ್ರ ಸರ್ಕಾರಕ್ಕೆ ನೀಡಿತ್ತು. ಆ ನಂತರದಲ್ಲಿ 2017 ರಲ್ಲಿ ಮಾಜಿ ಇಸ್ರೋ ಅಧ್ಯಕ್ಷರಾದ ಶಿಕ್ಷಣ ತಜ್ಞ ಕೃಷ್ಣಮೂರ್ತಿ ಕಸ್ತೂರಿರಂಗನ್ ನೇತೃತ್ವದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಸಮಿತಿಯನ್ನು ರಚನೆ ಮಾಡಲಾಗಿತ್ತು. ಈ ಸಮಿತಿಯು ದೇಶಾದ್ಯಂತ ನಡೆದ ಚರ್ಚೆಗಳು ಅಭಿಪ್ರಾಯ ಸಲಹೆ ಸೂಚನೆಗಳನ್ನು ಪರಿಗಣಿಸಿ ರಾಷ್ಟ್ರೀಯ ಶಿಕ್ಷಣ ನೀತಿಯ ರೂಪುರೇಷೆಗಳನ್ನು ರಚಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿತು. ಅದರಂತೆ ರಾಷ್ಟ್ರೀಯ ಶೈಕ್ಷಣಿಕ ರೂಪರೇಷೆಯ ಸಂರಚನೆಯು ಸಂಪೂರ್ಣ ಬದಲಾವಣೆ ಹೊಂದಲಿದೆ.

              ಇದುತನಕ ಇದ್ದಂತಹ 10+2+3 ಶಿಕ್ಷಣ ಸಂರಚನೆಯು ಈಗ 5+3+3+4 ಸೂತ್ರದಡಿಯಲ್ಲಿ ರೂಪಾಂತರಗೊಳ್ಳಲಿದೆ. ಅಂದರೆ ಒಂದನೇ ತರಗತಿಯಿಂದ ಹತ್ತನೇ ತರಗತಿ, ನಂತರ ಎರಡು ವರ್ಷದ ಪಿಯುಸಿ ತದನಂತರ ಮೂರು ವರ್ಷದ ಪದವಿ ಶಿಕ್ಷಣ ಹಂತವು ಇತ್ತು. ಇದರಲ್ಲಿ 6  ರಿಂದ 14 ವರ್ಷಕ್ಕೆ ಅಂದರೆ 1 ರಿಂದ 8  ನೇ ತರಗತಿವರೆಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ವ್ಯವಸ್ಥೆ ಇತ್ತು. ಈಗ ಪೂರ್ವ ಪ್ರಾಥಮಿಕ ಹಂತದಿಂದಲೇ ಔಪಚಾರಿಕ ಶಿಕ್ಷಣ ಆರಂಭಗೊಳ್ಳುವುದು. 3 ವರ್ಷದಿಂದ 18 ವರ್ಷದವರೆಗೆ ಶೈಕ್ಷಣಿಕ ವ್ಯವಸ್ಥೆ ಉಚಿತ ಹಾಗು ಕಡ್ಡಾಯವಾಗುವ ಸೂಚನೆಗಳಿವೆ. ಬದಲಾಗುವ ಶೈಕ್ಷಣಿಕ ಸಂರಚನೆಯನ್ನು ಸ್ಥೂಲವಾಗಿ ಈ ಮುಂದಿನಂತೆ ನೋಡಬಹುದು.

ಬುನಾದಿ ಹಂತ : ಮಕ್ಕಳ ವಯೋಮಾನ 3 ವರ್ಷದಿಂದ 8  ವರ್ಷದವರೆಗಿನ ಹಂತ ಇದಾಗಿದೆ. ಇಲ್ಲಿ ಎರಡು ಭಾಗಗಳಿದ್ದು 3 ವರ್ಷದಿಂದ 6 ರ ತನಕ ಪೂರ್ವ ಪ್ರಾಥಮಿಕ. ನಂತರ 6 ವರ್ಷದಿಂದ 8 ರ ತನಕ ಪ್ರಾಥಮಿಕ ಒಂದು ಮತ್ತು ಎರಡನೆ ಗ್ರೇಡ್ ತರಗತಿಗಳು. ಆರಂಭಿಕ ಕಲಿಕೆಯ ಒಟ್ಟು 5 ವರ್ಷಗಳ ಇದು ಶಿಕ್ಷಣದ ಬುನಾದಿ ಹಂತವಾಗಿರುತ್ತದೆ. ಇಲ್ಲಿ ಮಕ್ಕಳಿಗೆ ಪಾಠೋಪಕರಣಗಳು ಮತ್ತು ವಿವಿಧ ಕಲಿಕಾ ಮಾದರಿಗಳ ಮೂಲಕ ಕಲಿಕೆ ಮಾರ್ಗದರ್ಶನ ಮಾಡಲಾಗುತ್ತದೆ. ಹಾಡು ಕತೆ ಗೀತೆ ಸಂಭಾಷಣೆ ಸಂವಾದಗಳು ಮತ್ತು ಚಿತ್ರಕಲೆ ಮೂಲಕ ಕಲಿಕೆಯ ನಿರಂತರತೆ ಕಾಯ್ದುಕೊಳ್ಳಲಾಗುವುದು. ಸ್ಪಷ್ಟವಾಗಿ ಮಾತನಾಡುವ ಕಲೆಯ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗುವುದು.

ಪೂರ್ವ ಸಿದ್ಧತಾ ಹಂತ : ವಯಸ್ಸು 8 ರಿಂದ 11 ರ ತನಕ ಅಂದರೆ 3 ನೇ ತರಗತಿಯಿಂದ 5 ನೇ ತರಗತಿಯವರೆಗಿನ 3 ವರ್ಷಗಳ ಶೈಕ್ಷಣಿಕ ಸಂರಚನೆಯ ಹಂತ ಇದಾಗಿದೆ. ಇಲ್ಲಿ ಮಕ್ಕಳಿಗೆ ಮಾಧ್ಯಮಿಕ ಶಾಲೆಯ ವಿಷಯಗಳ ಕಲಿಕೆಗೆ ಪೂರ್ವಸಿದ್ಧತಾ ಜ್ಞಾನ ಒದಗಿಸಲಾಗುವುದು. ಆದಷ್ಟು ಮೂರ್ತ ಪರಿಕಲ್ಪನೆಗಳ ಶಿಕ್ಷಣ ನೀಡಲಾಗುವುದು. ಸಮಾಜ, ಪರಿಸರದ ವಸ್ತುಗಳು, ಕುಟುಂಬ, ನೆರೆಹೊರೆ, ಆಹಾರ, ನೀರು, ಗಾಳಿ, ಸಂಖ್ಯೆಗಳು, ಗುಂಪುಗಳು, ಹೋಲಿಕೆ ವ್ಯತ್ಯಾಸದ ಜೊತೆ ಭಾಷೆಯ ಓದು ಮತ್ತು ಬರವಣಿಗೆ ಕಲಿಕೆಗೆ ಪ್ರೇರಪಣೆ ನೀಡಲಾಗುವುದು. ಹಾಡು ಚಟುವಟಿಕೆಗಳ ಮೂಲಕ ಕಲಿಕೆಯನ್ನು ಸುಗಮಕಾರರು ನಡೆಸುತ್ತಾರೆ.

ಮಾಧ್ಯಮಿಕ ಹಂತ : ವಯಸ್ಸು 11  ರಿಂದ 14 ರವರೆಗಿನ ಅಂದರೆ ತರಗತಿ 6 ರಿಂದ 8 ರವರೆಗಿನ ಶೈಕ್ಷಣಿಕ ಕಲಿಕಾ ಹಂತ ಇದಾಗಿದ್ದು. 3 ವರ್ಷಗಳ ಶೈಕ್ಷಣಿಕ ಸಂರಚನೆ ಹೊಂದಿದೆ. ಇಲ್ಲಿ ಈಗಾಗಲೇ ಕಲಿತ ಮೂರ್ತ ಪರಿಕಲ್ಪನೆಗಳನ್ನು ಗಟ್ಟಿ ಮಾಡಿಕೊಂಡು ಅಮೂರ್ತ ಪರಿಕಲ್ಪನೆಗಳ ಕಲಿಕೆಯ ಕಡೆಗೆ ಶಿಕ್ಷಣ ಸಾಗುವುದು. ಗಣಿತದ ವಿವಿಧ ಭಾಗಗಳು, ವಿಜ್ಞಾನದ ಭಾಗಗಳ ಕಲಿಕೆ ಜೊತೆ ಸಮಾಸ ಅಧ್ಯಯನವು ಹಲವು ಭಾಗಗಳಲ್ಲಿ ಬೋಧಿಸಲ್ಪಡುವುದು. ತ್ರಿಭಾಷಾ ಕಲಿಕೆಯಿದ್ದು ಸ್ಪಷ್ಟ ಓದು ಬರವಣಿಗೆ ಕೌಶಲ ಗಳಿಕೆಗೆ ಸಹಾಯ ಮಾಡಲಾಗುವುದು.

ಪ್ರೌಢ/ಸೆಕೆಂಡರಿ ಹಂತ : ಇಲ್ಲಿ ವಿದ್ಯಾರ್ಥಿಗಳ 15 ರಿಂದ 18 ವರ್ಷಗಳ ತನಕ ಅಂದರೆ ಒಂಬತ್ತನೇ ತರಗತಿಯಿಂದ ಹನ್ನೆರಡನೆ ತರಗತಿವರೆಗೆ ಶಿಕ್ಷಣ ಸಾಗುವುದು. ಇದು 4  ವರ್ಷಗಳ ಶೈಕ್ಷಣಿಕ ಸಂರಚನೆ ಹೊಂದಿರುತ್ತದೆ. ಇಲ್ಲಿ ವಿವಿಧ ಕಲಿಕಾ ಆಯಾಮಗಳ ಮೂಲಕ ಸಮಾಜಶಾಸ್ತ್ರ, ಅರ್ಥಶಾಸ್ತ್ರ, ಗಣಿತಶಾಸ್ತ್ರ, ಭಾಷೆಗಳು, ಪರಿಸರ, ವಿಜ್ಞಾನದ ಶಾಖೆಗಳ ಅಧ್ಯಯನ ಜೊತೆಗೆ ದೈಹಿಕ ಶಿಕ್ಷಣದ ಭಾಗವಾಗಿ ಆಟೋಟಗಳು, ಚಿತ್ರಕಲೆ, ಸಾಮಾಜಿಕ ಉತ್ಪಾದನಾ ಕಾರ್ಯ ಕಲಿಕೆ ನಡೆಯುವುದು.

ಹೊಸ ಶಿಕ್ಷಣ ನೀತಿಯು ಮಕ್ಕಳ ಆರಂಭದ ಬಾಲವಾಡಿ ಶಿಕ್ಷಣವನ್ನು ಪ್ರಮುಖವಾಗಿ ಗಮನಿಸುವ ಮೂಲಕ ಅವರ ಬಾಲ್ಯದ ಸುರಕ್ಷತೆ ಹಾಗು ಸುಸ್ಥಿರ ಶೈಕ್ಷಣಿಕ ಪ್ರಗತಿಗೆ ಗಮನ ನೀಡಿದೆ. ಹಾಗಾಗಿ 5+3+3+4 ಎಂಬ ಹೊಸ ಶೈಕ್ಷಣಿಕ ಸಂರಚನೆಯಲ್ಲಿ ನಾಲ್ಕು ಹಂತಗಳ ಶಿಕ್ಷಣ ಪ್ರಕ್ರಿಯೆ ಜಾರಿಯಾಗಲಿದ್ದು ನಾಲ್ಕು ಸ್ತರಗಳಲ್ಲಿಯೂ ತರಬೇತಿ ಪಡೆದ ಬೋಧನಾ ಸಿಬ್ಬಂದಿ ಕಲಿಕೆ ನೀಡಲು ಸಿದ್ಧರಾಗಿರುತ್ತಾರೆ. ಹೊಸ ಶಿಕ್ಷಣ ನೀತಿ ಭಾರತದ ಪ್ರತಿ ಮಗುವು ಗುಣಾತ್ಮಕ ಹಾಗು ಮೌಲ್ಯಯುತ ಬದುಕಿಗೆ ಉಪಯೋಗಾರ್ಹ ಶಿಕ್ಷಣ ಪಡೆಯಬೇಕೆಂಬ ಮಹತ್ವಾಕಾಂಕ್ಷೆಯ ಗುರಿಯನ್ನು ಹೊಂದಿದೆ. ಆ ದೃಷ್ಟಿಯಲ್ಲಿ ಹೊಸ ಶೈಕ್ಷಣಿಕ ಸಂರಚನೆ ಅತ್ಯಂತ ಸಮರ್ಥವಾಗಿ ಮಕ್ಕಳ ಸರ್ವಾಂಗೀಣ ಶಿಕ್ಷಣಕ್ಕೆ ನೆರವಾಗುವುದೆಂಬ ಆಶಯವಿದೆ.

ಟಿ.ಪಿ.ಉಮೇಶ್ ಸಹಶಿಕ್ಷಕರು ಅಮೃತಾಪುರ

ಹೊಳಲ್ಕೆರೆ .ತಾ. ಚಿತ್ರದುರ್ಗ .ಜಿ. ಕರ್ನಾಟಕ

***********************************************************************************************************************************************************************************************************************************************


ಹಗಲುಗನಸು : ವಿಭಿನ್ನ ಕಲಿಕಾ ಪ್ರಯೋಗಗಳ ಕೃತಿ


ಶಿಕ್ಷಕರುಗಳೆಲ್ಲರು ಓದಿ ಅರಿತು ಆಚರಿಸಬೇಕಾದ ವಿಚಾರಗಳಿರುವ ಪುಸ್ತಕ. ಶಾಲಾ ಮಕ್ಕಳ ಕಲಿಕೆ ಕುರಿತ ಪ್ರಯೋಗಗಳ ಕುರಿತಾದ ಕಾದಂಬರಿ ರೂಪದ ಕೃತಿಯೇ ಹಗಲುಗನಸು. 1932 ರಲ್ಲಿ ಗಿಜುಭಾಯ್ ಬಧೇಕಾರವರು ಗುಜರಾತಿ ಭಾಷೆಯಲ್ಲಿ ಬರೆದ ಕೃತಿಯನ್ನು ಡಿ.ಆರ್. ಬಳೂರಗಿಯವರು 1995 ರಲ್ಲಿ ಕನ್ನಡ ಭಾಷೆಗೆ ಅನುವಾದಿಸಿದ್ದಾರೆ. 30 ರೂ ಬೆಲೆಯುಳ್ಳ ಅತ್ಯಂತ ಮಹತ್ವದ ಕೃತಿಯನ್ನ ನ್ಯಾಷನಲ್ ಬುಕ್ ಟ್ರಸ್ಟ್‌ ಆಫ್ ಇಂಡಿಯಾದವರು ಪ್ರಕಟಿಸಿದ್ದಾರೆ.

ಶಾಲಾ ಶಿಕ್ಷಣ ಕಂಠಪಾಠ ಹಾಗು ಯಾಂತ್ರಿಕೃತ ಹೇಳುವಿಕೆ ಕಲಿಯುವಿಕೆ, ಸಾಮ್ರಾಜ್ಯಶಾಹಿ ಕಾನೂನಿನ ಕಾಲದಿಂದಲು ಬದಲಾಗದೆ ಸಾಗಿ ಬಂದಿದೆ. ಗಾಂಧೀಜಿ, ಟಾಗೂರ್, ಜಿಡ್ಡು ಕೃಷ್ಣಮೂರ್ತಿಯವರು ಸ್ವದೇಶಿಯಾದ, ಸ್ಥಳೀಯ ಸಂತಸ ಸ್ವ ಕಲಿಕಾ ತತ್ವಗಳಿಗೆ ತೆರೆದುಕೊಂಡು ಪ್ರಚುರಗೊಳಿಸಿದರು. ಸಾದ್ಯಂತವಾಗಿ ಅವು ಇತ್ತೀಚಿನವರೆಗು ಕೆಲವೊಂದು ಪ್ರದೇಶಗಳಿಗೆ ಸೀಮಿತವಾಗಿಬಿಟ್ಟವು. ಅವರ ವಿಚಾರ ಗ್ರಂಥಗಳ ಮೂಲಕ ಓದಿ ಮೆಚ್ಚುವ ಪ್ರಯೋಗಗಳಾಗಿಬಿಟ್ಟದ್ದು ಶೋಚನೀಯ.

ಗುಜರಾತಿನಲ್ಲು ಗಿಜುಭಾಯ್ ಬಧೇಕಾ ಶೈಕ್ಷಣಿಕ ಗುಣಮಟ್ಟದ ಸುಧಾರಣೆಗೆ ಮನಸು ಮಾಡಿ ಒಂದು ಶಾಲೆ ತರಗತಿಯ ಮಕ್ಕಳನ್ನ ಆಯ್ದೊಕೊಂಡು, ಒಂದು ವರ್ಷದ ಕಲಿಕೆಯನ್ನು ತಮ್ಮ ವಿನೂತನ ಚಟುವಟಿಕೆ ಆಟ ಪಾಠದ ಮೂಲಕ ನೀಡುವರು. ವಿದ್ಯಾರ್ಥಿಗಳನ್ನ ಇಲಾಖೆ ನಿರೀಕ್ಷಿಸಿದ್ದಕ್ಕಿಂತ ಮಿಗಿಲಾಗಿ ಆಮೂಲಾಗ್ರ ಪ್ರಗತಿದಾರಿಗೆ ತಂದು ತೋರಿಸಿದ ಪರಿಣಾಮಗಳ ಕಥನವೇ ಈ ಹಗಲುಗನಸು ಕೃತಿ.

ಲಕ್ಷ್ಮಿಶಂಕರ ಬಾಬು ಎಂಬ ಕಾಲ್ಪನಿಕ ಸುಧಾರಣಾವಾದಿ ಯುವ ಶಿಕ್ಷಕನ ಮೂಲಕ ಕಾದಂಬರಿ ಶಿಕ್ಷಣ ಪ್ರೇಮಿಗಳ ಮನಮುಟ್ಟುತ್ತದೆ. ರೂಸೋ, ಫೆಸ್ಟಾಲಜಿ, ಥಾರ್ನಡೈಕ್ ರ ತಾತ್ವಿಕ ವಿಚಾರಗಳನ್ನು ಕಲಿಕೆಗೆ ಬಳಸಿಕೊಂಡರು ಅದರಲ್ಲು ದೇಸೀಯತೆಯ ತಂದು ಯಶಸ್ವಿಯಾಗಿ ಕಲಿಕೆ ಗಟ್ಟಿಗೊಳಿಸಲು ಶ್ರಮಿಸಿದ್ದಾರೆ. ಪಠ್ಯಕ್ರಮದಂತೆ ನೀಡಿದ ಪಠ್ಯಪುಸ್ತಕಗಳನ್ನು ಮಕ್ಕಳಿಗೆ ಹೇಳಿ ಉರುಹೊಡೆಸಿ ಪರೀಕ್ಷೆಯಲ್ಲಿ ಪಾಸಾಗುವಂತೆ ನೋಡಿಕೊಂಡರೆ ಸಾಕೆಂಬ ಮಕ್ಕಳ ಸರ್ವೋತೋಮುಖ ಅಭಿವೃದ್ಧಿ ಚಂತಿಸದ ಶಿಕ್ಷಕರೇ ಅಂದಿನಂತೆ ಈಗಲು ಸಾಕಷ್ಟಿರುವುದು ಈ ಪುಸ್ತಕ ಅಧ್ಯಯನದ ಲಾಭವನ್ನು ಮನವರಿಕೆ ಮಾಡಿಸುತ್ತದೆ.

ಪ್ರಾಯೋಗಿಕವಾಗಿ ಮೇಲಾಧಿಕಾರಿಗಳ ಅನುಮತಿಯೊಡನೆ ಲಕ್ಷ್ಮಿಶಂಕರರು ಒಂದು ಶಾಲೆಯ ನಾಲ್ಕನೇ ತರಗತಿ ಮಕ್ಕಳ ಕಲಿಕಾ ಅಭಿವೃಧ್ಧಿಗೆ ಹುಮ್ಮಸ್ಸಿನಿಂದ ಬರುತ್ತಾರೆ. ಆ ಶಾಲೆ ಮುಖ್ಯೋಪಾಧ್ಯಾಯರನ್ನ ಒಳಗೊಂಡು ಶಿಕ್ಷಕರು ಬೆಳಗಿನ ಪ್ರಾರ್ಥನೆ ತರಗತಿ ಪಾಠಗಳ ಕಂಠಪಾಠಕ್ಕೆ ಮಾತ್ರ ಸೀಮಿತರಾಗಿರುತ್ತಾರೆ. ಯಾವುದೇ ಅಗತ್ಯ ಬದಲಾವಣೆಗೆ ಅವರು ಮನಸ್ಸು ಮಾಡುವುದಿಲ್ಲ. ಆಟವಾಡಿಸಿದರೆ ಸಮಯ ಹಾಳು ಪಠ್ಯ ಮುಗಿಸಲಾಗದು; ಕತೆ ಹಾಡು ಹೇಳಿದರೆ ಪಾಠಗಳ ಮರೆಯುವರು; ನಾಟಕ ಗೀತೆಗಳೆಂದರೆ ಸೋಮಾರಿಗಳಾಗುವರು; ಗುಂಪುಕಲಿಕೆ ಚಟುವಟಿಕೆಗಳೆಂದರೆ ದೊಂಬಿ ಮಾಡುವರು; ಉಪಕರಣ ಬಳಕೆಗೆ ಹಣ ಇಲ್ಲ, ಮಕ್ಕಳು ಹಾಳುಮಾಡುವರು; ಶಿಕ್ಷೆಯೇ ಮಕ್ಕಳಿಗೆ ವಿದ್ಯೆ ತರುವುದು. ಮುದ್ದು ಸಲಿಗೆಯಿಂದ ಪೋಕರಿಗಳಾಗುವರು. ಇಂತಹ ಋಣಾತ್ಮ ಚಿಂತನೆಗಳನ್ನೆ ಹೊಂದಿ ವಿದ್ಯಾರ್ಥಿಗಳಿಗೆ ಅನುಭವಾತ್ಮಕ ಕಲಿಕೆ ನೀಡದೆ ಅವರ ಸೃಜನಶೀಲತೆಯನ್ನ ನಿಸ್ತೇಜಗೊಳಿಸುತ್ತಿರುತ್ತಾರೆ.

ದೇಹದ ಹಾಗು ಬಟ್ಟೆಯ ಸ್ವಚ್ಚತೆ ಶಿಕ್ಷಕರ ವಿಚಾರವೇ ಅಲ್ಲ ಅದು ಹೆತ್ತವರ ಹೊಣೆ. ಭಾಷಾ ಶುದ್ಧಿ ಸ್ಪಷ್ಟ ಮಾತು ಕಲಿಕೆ ಅದು ಪೋಷಕರು ಕಲಿಸಬೇಕಾದುದು. ಗಣಿತ ಲೆಕ್ಕಗಳ ಕಂಠಪಾಠ ಮಾಡಿಸಿದರಾಯಿತು; ಭೂಗೋಳ ದಿಕ್ಕು ನದಿ ಸಾಗರ ದೇಶಗಳ ಕಾಲಗಳ ಕಂಠಪಾಠ ಮಾಡಿಸಿದರಾಯ್ತು. ಪರಿಸರದ ಅನುಭವ ಕೊಡಲು ಪ್ರವಾಸ ನಡೆಸಲು ಸಮಯವೆಲ್ಲಿ... ಹೀಗೆ ಮಕ್ಕಳ ಮೂಲ ಮನೋ ದೈಹಿಕ ಜೈವಿಕ ವಿಕಾಸಕ್ಕೆ ಮಾರಕವಾದ ರೀತಿಯಲ್ಲೆ ಶಾಲಾತರಗತಿಗಳು ನಡೆಯುತ್ತಿರುತ್ತವೆ.

ಲಕ್ಷ್ಮಿಶಂಕರರಿಗು ಮೊದಮೊದಲಿಗೆ  ಶಾಲೆಯಲ್ಲಿ ಎಲ್ಲರಿಂದ ಮೂದಲಿಕೆ ಹಳಹಳಿಕೆಗಳು ಕೇಳಿಬರುತ್ತವೆ. ಗುರಿಯ ಸ್ಪಷ್ಟತೆ, ಕಾರ್ಯದ ಧೃಢತೆ ಇದ್ದ ಅವರು ಯಾವುದಕ್ಕು ಅಂಜದೆ ಮಕ್ಕಳ ಭಯರಹಿತ, ಸಂಶಯರಹಿತ, ಸಂತಸದಾಯಕ ಪ್ರಯೋಗಾತ್ಮಕ ಕಲಿಕೆಗೆ ನೆರವು ನೀಡುತ್ತಾರೆ.

ಶಂಕರ ಮಾಸ್ತರರು ಪಠ್ಯಗಳ ಓದಿ ಅದರ ಶಬ್ಧಾಡಂಬರ ಹಾಗು ಹಲವು ಕಲ್ಪಿತ ಸುಳ್ಳುಗಳ ಕಂಡು ದಿಗಿಲುಗೊಂಡು ಮೊದಲು ಮಕ್ಕಳಲ್ಲಿ ಶಿಸ್ತು ವಿನಯವಂತಿಕೆ ಸ್ವಚ್ಚತೆ ತರಲು ತಮ್ಮ ಮಾತು ರೂಢಿಗಳ ಮೂಲಕ ಪ್ರೇರೇಪಿಸುತ್ತಾರೆ. ಶಾಲೆಯಲ್ಲೆ ನೀರು ಸೋಪು ಕನ್ನಡಿ ವ್ಯವಸ್ಥೆ ಮಾಡುತ್ತಾರೆ. ಸರತಿ ಸಾಲಿನ ಅಚ್ಚುಕಟ್ಟಿನ ಮಹತ್ವ ಅರುಹುತ್ತಾರೆ. ಕೂಡಿ ಕಲಿವ ಬಾಳುವ ಸಹಕಾರದ ವಿಭಿನ್ನ ಉಪಯೋಗಗಳ ಅನುಭವಕ್ಕೆ ತರುತ್ತಾರೆ... ಕತೆ ಕವನಗಳ ಮೂಲಕ ಭಾಷೆ ಶಿಸ್ತು ಕಲಿಕೆ ಏಕಾಗ್ರತೆ ಮಾತಿನ ವೈಖರಿ ಸಂಭಾಷಿಸುವ ಚತುರತೆಗಳ ಹೃದ್ಗತಮಾಡಿಸುತ್ತಾರೆ. ಹಾವಭಾವ ಅಭಿನಯ ರೂಪಕ ನಾಟಕಗಳ ಮೂಲಕ ಸಮಾಜದ ವಿವಿಧ ಜನ ಪರಿಸರ ನಡವಳಿಕೆಗಳ ಅರ್ಥಮಾಡಿಸುತ್ತಾರೆ.

ನಕಾಶೆ ಗ್ಲೋಬ್ ಚಿತ್ರಪಟಗಳ ಮೂಲಕ ಇತಿಹಾಸ ಜನಾಂಗ ಭೂಗೋಳಗಳ ಇಷ್ಟಪಡುವಂತೆ ಮಾಡುತ್ತಾರೆ. ಶಬ್ಧ ಸಂಗ್ರಹ, ಕತೆ, ಬರಹ, ಪದ್ಯ ಬರಹ, ಕೈಬರಹ ಪತ್ರಿಕೆ ಅಂತ್ಯಾಕ್ಷರ, ಪದ ಬರಹ ಮೂಲಕ ಭಾಷೆ ಹಿಡಿತ ಸಾಧಿಸಲು ಸಹಕರಿಸುತ್ತಾರೆ. ಗಣಿತದ ಕ್ರಿಯೆಗಳು ಪ್ರಾಯೋಗಿಕವಾಗಿ ಅಂಗಡಿ ಮಾರುಕಟ್ಟೆ ಸಂತೆ...ಸನ್ನಿವೇಶಗಳ ಮೂಲಕ ನೈಜ ಜೀವನ ಶಿಕ್ಷಣದ ಅರಿವಾಗುತ್ತವೆ. ವ್ಯಾಕರಣವು ನಿತ್ಯ ಎಲ್ಲ ಸಂದರ್ಭಗಳ ಬಳಕೆ ಪದ ಮಾತುಗಳ ಉದಾಹರಣೆಗಳಲ್ಲೆ ಸೂಚ್ಯವಾಗಿ ತಿಳಿವಂತೆ ಆಗಾಗ ಸೂಚಿಸುತ್ತಿರುತ್ತಾರೆ. ಕಲಿಕೆ ಮಕ್ಕಳೇ ಸ್ವ ಸಂತಸದಿಂದ ಪಡೆದುಕೊಳ್ಳಬೇಕು ಅದಕ್ಕೆ ಶಿಕ್ಷಕರು ನೆರವಾಗುವ ಸಂಪನ್ಮೂಲ ವ್ಯಕ್ತಿಯಾಗಬೇಕು ಎಂಬುದನ್ನ ಸಾಬೀತುಮಾಡಿಸುತ್ತಾರೆ.

ಪರೀಕ್ಷೆಗಳು ಚಟುವಟಿಕೆ ಆಟಗಳು, ಮಾತುಗಳು, ಹಿಂದಿನ ಬರವಣಿಗೆ ಮಾದರಿಗಳ ಮೂಲಕ ನಡೆಸುತ್ತ ಇಂದು ಬರಿ ನೆನಪಿನ ಶಕ್ತಿ ಪರೀಕ್ಷೆಗಳಲಿ ಬದಲಾಗಬೇಕಾದುದು ಅದೆಷ್ಟು ಇದೆ ಎಂದು ಚಕಿತಗೊಳಿಸುತ್ತದೆ.  ಶಿಕ್ಷೆ ಬಹುಮಾನಗಳು ಎರಡು... ಪಡೆದವರು ಜೊತೆಗೆ ಪಡೆಯದವರಲ್ಲಿ ನೈತಿಕ ಸ್ಪರ್ಧೆ ಬೆಳೆಸುವ ಬದಲು ದ್ವೇಷ ಈರ್ಷೆ ಘರ್ಷಣೆ ಬೆಳೆಸುವ ಕ್ರೂರ ವಾತಾವರಣ ಗೊತ್ತಿಲ್ಲದೆ ಸೃಷ್ಟಿಯಾಗುವ ಅಪಾಯಗಳ ತಿಳಿಸುತ್ತ ಹಣವನ್ನ ಶಾಲಾ ಪುಸ್ತಕಾಲಯ, ವಾಚನಾಲಯ, ಆಟೋಪಕರಣಗಳಿಗೆ ಬಳಸುವ ಮನಸನ್ನ ಎಲ್ಲರಲಿ ತರುವ ಮೂಲಕ ಕಾದಂಬರಿ ಸಮಾಪ್ತವಾಗುತ್ತದೆ.

ಓದುಗರಲ್ಲಿ ತಾವು ಕಲಿತ, ಈಗಿನ ಮಕ್ಕಳಿಗೆ ಕಲಿಸುತ್ತಿರುವ ರೀತಿನೀತಿಗಳ ತುಸು ಕಾಲ ಚಿಂತಿಸಲು ಉದ್ದೀಪಿಸುತ್ತದೆ. ಶಿಕ್ಷಕರ ಮನೋಧೋರಣೆ ನಮ್ಮದೇ ಭವಿಷ್ಯದ ಉತ್ತಮ ಸುಭಿಕ್ಷ ಸಮಾಜಕ್ಕೆ ಬದಲಾಗಬೇಕಾಗಿರುವುದನ್ನು ಕೃತಿ ಮನಗಾಣಿಸುತ್ತದೆ. ಎಲ್ಲ ಪೋಷಕರು ಶಿಕ್ಷಣ ಭಾಗಿದಾರರು ಓದಲೇಬೇಕಾದ ಕೃತಿ ಹಗಲುಗನಸು.

ಟಿ.ಪಿ.ಉಮೇಶ್ ಸಹಶಿಕ್ಷಕರು ಅಮೃತಾಪುರ

ಹೊಳಲ್ಕೆರೆ .ತಾ. ಚಿತ್ರದುರ್ಗ .ಜಿ. ಕರ್ನಾಟಕ

#################################

ಮಕ್ಕಳ ಲೋಕದ ಬೆರಗಿನ ಹಕ್ಕಿ ಈ ಹಾಡು ಹಕ್ಕಿ


ರಾಷ್ಟ್ರ ಪ್ರಶಸ್ತಿ ವಿಜೇತ ಶ್ರೇಷ್ಠ ಶಿಕ್ಷಕರಾದ ಶ್ರೀ ತಮ್ಮಣ್ಣ ಬೀಗಾರರವರ ಒಂಬತ್ತನೇ ಮಕ್ಕಳ ಕವನ ಸಂಕಲನವಿದು. ಈ ಕವನಗಳ ಮೂಲಕ ಮಕ್ಕಳ ಲೋಕವನ್ನ ಬಹು ಹತ್ತಿರದಿಂದ ನಿತ್ಯ ಅನುಭವಕ್ಕೆ ತಂದುಕೊಳ್ಳುತ್ತ ಅದನ್ನ ಹಾಡಾಗಿಸುತ್ತಾ ಮಕ್ಕಳ ಜಗತ್ತಿನ ಕುರಿತು ಬೆರಗು ಮೂಡಿಸುತ್ತಿದ್ದಾರೆ. ಸಂಪ್ರದಾಯಬದ್ಧ ವಸ್ತು ಲಯ ಪ್ರಾಸಗಳ ಹಂಗಿಗೆ ಬೀಳದ ಈ ಕೃತಿಯಲ್ಲಿ 35 ಮಕ್ಕಳ ಕವಿತೆಗಳಿವೆ. ಮಕ್ಕಳ ಕುರಿತು ಅಪಾರ ಕಳಕಳಿಯುಳ್ಳ ತಮ್ಮಣ್ಣ ಬೀಗಾರರು ಸದಾ ಮಕ್ಕಳ ಸೃಜನಶೀಲ ಚೈತನ್ಯಾತ್ಮಕ ಕಲಿಕಾ ಪ್ರಕ್ರಿಯೆಗಳ ಬಗ್ಗೆ ಚಿಂತಿಸುವವರು. ಮಕ್ಕಳ ಈ ಹಾಡಿನ ಹಕ್ಕಿ ಬಹಳವಾಗಿ ಮಕ್ಕಳ ರೋಚಕ ಅನುಭಗಳ ಕವಿತೆಗಳ ಮೂಲಕ ನಮಗೆ ಉಣಬಡಿಸುತ್ತದೆ.

ಮಕ್ಕಳ ಕವಿತೆಗಳ ಬರೆಯುವುದು ಓದಿದಷ್ಟು ಸುಲಭವಲ್ಲ. ಅದು ಬರಿ ಪ್ರಾಸಗಳ ಜೀಕಾಟವಲ್ಲ. ವಿಚಾರಗಳ ಬೌದ್ಧಿಕ ಪ್ರದರ್ಶನವಲ್ಲ. ಪದಗಳ ನಿಬಿಡ ಅಲಂಕಾರವಲ್ಲ. ರೂಪಕ ಉಪಮೆಗಳ ಮೇಲೋಗರವಲ್ಲ. ಗೊತ್ತಿರುವ ಎಲ್ಲ ಸಾಮಾನ್ಯ ಮಾಹಿತಿಗಳ ಬಣವೆಯೊಟ್ಟುವುದಲ್ಲ. ಮಕ್ಕಳ ಕವಿತೆಗಳು ಸಹಜ ಸರಳ ಮಗುತನದ ಆಡುಮಾತಿನಲ್ಲಿಯೇ ಪರಿಸರದ ಬೆರಗನ್ನು ಕಟ್ಟಿಕೊಡುವುದು. ಗೆಳೆಯ ಗೆಳತಿಯರ ಆಟ ಓಟ ಹರಟೆಗಳ ತೋರುವುದು. ಪ್ರಾಣಿ ಪಕ್ಷಿ ಗಿಡ ಮರಗಳ ಮಾತಾಡಿಸುವುದು. ಕುಟುಂಬದ ಪ್ರೀತಿಯ ಬಾಚಿಕೊಡುವುದು. ಸಂಬಂಧಗಳ ಚಾದರ ಹೊಲಿದು ಕೊಡುವುದು. ಭಾವನೆಗಳ ಬೆಸುಗೆಯ ಆಪ್ತವಾಗಿ ಕಾಪಿಡುವುದು.

ಮಕ್ಕಳ ಕವಿತೆಗಳ ಬರೆಯುವುದು ಅಪಾರ ಶ್ರಮ ಬೇಡುವ ಸೃಜನಶೀಲ ಪ್ರಕ್ರಿಯೆ. ಮಕ್ಕಳಿಗಾಗೇ ಬರೆದರೂ ಪ್ರೌಢರೂ ವಯಸ್ಕರೂ ಓದಿ ಬೆರಗುಗೊಳ್ಳುವ ಅದ್ಭುತ ಚಿತ್ರಣಗಳ ಜಾದೂಲೋಕ. ತಮ್ಮಣ್ಣ ಬೀಗಾರ ಗುರುಗಳು ತಮ್ಮ ಕವಿತೆಗಳ ಮೂಲಕ ವರ್ಣರಂಜಿತ ಆಕರ್ಷಕ ಮಕ್ಕಳ ಲೋಕವನ್ನು ಕಟ್ಟಿಕೊಟ್ಟಿದ್ದಾರೆ. ಅವರ ಶ್ರಮ ಮಕ್ಕಳೊಡನೆ ಪೋಷಕರುಗಳಿಗೂ ಖುಷಿ ನೀಡುವಲ್ಲಿ ಯಶಸ್ವಿಯಾಗಿ ಸಾರ್ಥಕವಾಗಿದೆ.

ಅತ್ಯಂತ ಸುಂದರ ಮುಖಪುಟ ರಚನೆ ಹಾಗೂ ಒಳಪುಟಗಳಲ್ಲಿ ಕವನಕ್ಕೆ ತಕ್ಕ ಚಿತ್ರ ರಚನೆಗಳು ಕೃತಿಯ ಮೌಲಿಕತೆ ಹೆಚ್ಚಿಸಿವೆ. ಎಲ್ಲವನ್ನು ಓದುವ ಆಸ್ವಾದಿಸುವ ಆಕರ್ಷಣೆ ಹೊಂದಿವೆ.

"ರಜೆಯಲ್ಲಿ ತಿಂದ ಮಾವಿನ ಹಣ್ಣು

ಶಾಲೆಗೆ ಬರಬೇಕು

ಪುಸ್ತಕದಲ್ಲಿ ಸೇರಿಕೊಂಡು ರಸ ಕೊಡಬೇಕು!" ಎಂಬ ಕವನದ ಸಾಲುಗಳು ವಿಸ್ಮಯಕಾರಿಯಾಗಿ ಮಗುತನದ ದ್ಯೋತಕವಾಗಿ ಮೂಡಿವೆ. ಮಾವು ಶಾಲೆಗೆ ಬರಬೇಕು ಎಂಬ ಮಗುಸಹಜ ಭಾವವನ್ನ ಕವಿಗಳು ಹಿಡಿದಿಟ್ಟ ರೀತಿ ಅನನ್ಯವಾದುದು. ಆಧುನಿಕ ಸಿನಿಕತನವನ್ನ ನೆಚ್ಚಿಕೊಂಡು ಮನುಷ್ಯ ಕಳೆದುಕೊಳ್ಳುತ್ತಿರುವ ಆರೋಗ್ಯವನ್ನ ಭೂಮಿಗೆ ಜ್ವರದ ಈ ಸಾಲುಗಳು ಮನೋಜ್ಞವಾಗಿ ಕಟ್ಟಿಕೊಡುತ್ತವೆ.

'ಮಾಲ್ ಒಳಗೆ ನೆಟ್ಟಿಟ್ಟಿದ್ರು

ದೊಡ್ಡ ಪ್ಲಾಸ್ಟಿಕ್ ಮರ

ಮರದ ಮೇಲೆ ಕೂತಿತ್ತು

ಪ್ಲಾಸ್ಟಿಕ್ಕಿಂದೇ ಮಂಗ!....'

ಮೊಬೈಲ್ ಅವಾಂತರದ ಗಂಡಾಂತರಗಳನ್ನ ನಾಜೂಕಾಗಿ ಮಕ್ಕಳ ಧನಿಯಲ್ಲಿ ದಾಟಿಸುವ 'ಈಗ ಹೇಳಿ' ಕವಿತೆ ಸದ್ಯದ ಸ್ಥಿತಿಯ ನಿಖರವಾದ ವ್ಯಂಗ್ಯ.

  ಅವರು ಏನು ಮಾಡ್ತಾರೆ? ನಂಗೊತ್ತಿಲ್ಲಪ್ಪ

  ಇವರು ಏನು ಮಾಡ್ತಾರೆ? ನಂಗೊತ್ತಿಲ್ಲಪ್ಪ

  ನೀನು ಏನು ಮಾಡ್ತೀಯಾ? ನಂಗೊತ್ತಿಲ್ಲಪ್ಪ!

  ......ಮೊಬೈಲ ಕೆಳಗೆ ಇಟ್ಬಿಟ್ಟೆ ಈಗ ಕೇಳಿ ಹೇಳ್ಬಿಟ್ಟೆ!!!

 

ಮಳೆ ಹನಿಗಳು ಎಲ್ಲ ಕವಿಗಳ ಮನದ ಬಡಿತವನ್ನ ಸೆಳೆದು ಕವಿತೆ ಬರೆಸುತ್ತಾ ಕುಣಿಯುತ್ತವೆ. ಅಂತೆಯೇ ಇಲ್ಲಿನ ಮಳೆ ಹಾಡು...ಮಕ್ಕಳ ಕಲಿಕೆಯ ಹಾಡಾದ ಅಚ್ಚರಿಯ ನೋಡಿ...

  ಸ್ಕೂಲಬ್ಯಾಗೆಲ್ಲ ತೊಯ್ಯೋ ಮೊದಲು

  ಬುಕ್ಕಿಗೆ ನೀರು ತಾಗೋ ಮೊದಲು

  ಟೀಚರ ನೋಡಿ ಬಯ್ಯೋ ಮೊದಲು

  ಶಾಲೆಗೆ ಹೋಗ್ತೀನಿ.... ಸೈಕಲ್ ಪುಟ್ಟ, ಬೆಕ್ಕಿನ ಮರಿ, ಚಿಣ್ಣರೆ ಆಗಿ, ಸುಮ್ನೆ ಇರೋದಿಲ್ಲ..... ಕವಿತೆಗಳು ಮಕ್ಕಳು ಗುನುಗಿಕೊಳ್ಳೋ ಭಾವ ಬಂಧದ ಉದ್ಧೀಪಕಗಳಾಗಿವೆ. ಮಕ್ಕಳ ಅಸೀಮ ಪ್ರಪಂಚದಲ್ಲಿ ಅಚ್ಚಳಿಯದೆ ಹಾಡುತ್ತಾ ಹಾಡು ಹಕ್ಕಿ ಹಾರುತ್ತಿರಲಿ.

ಟಿ.ಪಿ.ಉಮೇಶ್

ರಾಜ್ಯ ಪ್ರಶಸ್ತಿ ಪುರಸ್ಕೃತ ಸಹಶಿಕ್ಷಕರು

ಅಮೃತಾಪುರ, ಹೊಳಲ್ಕೆರೆ .ತಾ. ಚಿತ್ರದುರ್ಗ .ಜಿ. ಕರ್ನಾಟಕ


####################################

ಕಡಲಿಗೆ ಕಡಗೋಲು

ಜೀವನದ ಕಡಲ ಕಡೆಯುವ ಮಹಾ ಯಾನವಿದು

ಕಾವ್ಯದೊಡಲಲಿ ಉಕ್ಕಿ ಹರಿದ ಅಮೃತ ಕಥನವಿದು



ಶ್ರೀಯುತ ವಾಸುದೇವ ನಾಡಿಗರು ಕನ್ನಡ ಕಾವ್ಯ ಲೋಕದಲ್ಲಿ ಸದಾ ಹೊಸ  ಭರವಸೆಯ ಕವಿತೆಗಳ ಹೊಸೆಯುವ ಬಹು ನಿರೀಕ್ಷೆಯ ಕವಿಗಳು. ಅವರ ಕಾವ್ಯ ದಶಕಗಳ ಚಿಂತನ ಮಂಥನದ ಬದುಕಿನ ಅನುಭಗಳ ಸಾರ. ಕಾವ್ಯ ಪಂಥಗಳ ಪಟ್ಟುಗಳಿಗೆ ಸಿಗದೆ ಒಂದು ತೆರನಾಗಿ ಎಲ್ಲ ಪಂಥಗಳೆಲ್ಲೆ ಮೀರಿ ದಿಗ್ದಿಗಂತವಾಗಿ ಏರಿ ಎಂಬಂತೆ ಅವುಗಳಿಗೆ ತಮ್ಮನ್ನು ಒಡ್ಡಿಕೊಳ್ಳದೆ ನಿಜ ಬದುಕನ್ನೇ ಧ್ಯಾನಿಸುವ, ಕಾವ್ಯವನ್ನೇ ಬದುಕುವ ನಮ್ಮೊಡನಿರುವ ಮಹತ್ವದ ಕವಿಗಳು. ಅವರ ಕಾವ್ಯ ಕೃತಿ "ವಿರಕ್ತರ ಬಟ್ಟೆಗಳು" ಸಂಕಲನದ ಒಂದು ಮಹೋನ್ನತ ಕವಿತೆ 'ಕಡಲಿಗೆ ಕಡಗೋಲು'. ಈ ಕವಿತೆಯ ರಚನಾ ವಿನ್ಯಾಸ ಹಾಗೂ ಅದು ಕಟ್ಟಿಕೊಡುವ ತಾತ್ವಿಕತೆ ಮತ್ತು ಕಾಣಿಸುವ ದರ್ಶನವನ್ನೊಂದಿಷ್ಟು ಕಾವ್ಯ ವಿಶ್ಲೇಷಣೆ ನೆಪದಲ್ಲಿ ಮನಗಾಣುವ.

ಮೊದಲಿಗೆ ಇಂದಿನ ವಾಸ್ತವದ ಸಂದರ್ಭದಲ್ಲಿ ಬಹುತೇಕ ಮನೆಗಳಲ್ಲಿ ಮುಂದುವರೆದು ಹಳ್ಳಿಯ ಮನೆಗಳಲ್ಲು ಸಹ ಕಡಗೋಲು ಇಲ್ಲ; ಇದ್ದರು ಕಡೆಯಲು ಕೆನೆಮೊಸರು ಇಲ್ಲ. ಒಂದು ವೇಳೆ ಹಸು ಎಮ್ಮೆಗಳ ಸಾಕುವ ಪರಿಪಾಠ ಇದ್ದರು ಇಂದು ಕಡಗೋಲಿನ ಸ್ಥಾನವನ್ನು ಎಲೆಕ್ಟ್ರಾನಿಕ್ ಕಡಗೋಲು ಆಕ್ರಮಿಸಿಕೊಂಡುಬಿಟ್ಟಿದೆ. ಶ್ರಮಜೀವನದಿಂದ ಕೂಡಿದ ದಿನ ಬೆಳಗಿನ ತಾಯಂದಿರ ಲಘು ವ್ಯಾಯಾಮದಂತ ಲವಲವಿಕೆಯ ಒಂದು ಪ್ರಮುಖ ಭಾಗ ಇಂದು ಕೊನೆಯಾಗುತ್ತಿದೆ. ಅಂತು ಗಂಡಸರಿಗೆ ಕರೆವ ಶ್ರಮವಿಲ್ಲ ಹೆಂಗಸರಿಗೆ ಕಡೆವ ನೆವವಿಲ್ಲ. ಇಂತಲ್ಲಿ ಕಡಲ ಕಡೆವ ಕಡಗೋಲ ಕಲ್ಪನೆಯೂ ರೋಚಕ ಮತ್ತು ಅದ್ಭುತವಾದುದು. ಕವಿತೆಯ ಶೀರ್ಷಿಕೆಯ ಕಂಡೊಡನೆ ಬಹುಶಃ ಸುರಾಸುರರು ಸೇರಿಕೊಂಡು ಸಮುದ್ರ ಮಥಿಸಿದ ಪೌರಾಣಿಕ ಘಟನೆಯು ಕಣ್ಮುಂದೆ ಬಾರದಿರದು. ಇಲ್ಲಿನ 'ಕಡಲಿಗೆ ಕಡಗೋಲು' ಮನುಷ್ಯನ ದೇಹದ ಅಂತರಾಳವ ಕಡೆದು ಅಮೃತದಂತ ವ್ಯಕ್ತಿತ್ವವ ಹೊರ ಹೊಮ್ಮಿಸುವಂತ ರೂಪಕದ ಸಂಕೇತವಾಗಿದೆ. ಮನೆಯ ಅಡಿಗೆ ಕೋಣೆಯ ಮೂಲೆಯಲ್ಲಿನ ಕಡಗೋಲು ಕೆಲವು ಶುಭ ಸಂದರ್ಭಗಳ ಪೂಜೆಗಷ್ಟೇ ಸಂಕೇತವಾಗಿ ಮಾರ್ಪಟ್ಟು ಧೂಳಿಡಿದು ನಿಂತಿದ್ದರೆ ಇಲ್ಲಿನ ಕವಿ ಕಲ್ಪನೆಯ ಕಡಗೋಲು ಕ್ಷಣಂಪ್ರತಿಕ್ಷಣ ದೇಹವ ಕಡೆಯುತ್ತಲೇ ಮನಸ್ಸನ್ನು ಮಥಿಸುತ್ತಲೇ ಜೀವಂತಿಕೆಯನ್ನು ಮೈತುಂಬಿಕೊಂಡಿದೆ.


'ಒಳಗಿಂದ ಮೇಲೆದ್ದು

ಬರುವ ಬೆಣ್ಣೆಯಿದು'

ಎಂದು ಆರಂಭಗೊಳ್ಳುವ ಕವಿತೆಯ ಮೊದ ಮೊದಲ ಸಾಲುಗಳು ಅಂತರಂಗದಲ್ಲಿ ಅಡಗಿರುವ ಅಮೃತವು ಹೊರ ಬರುವ ತವಕದಲ್ಲಿರುವಂತೆ ಧ್ವನಿಸುತ್ತದೆ. ಇನ್ನು ಕಡಗೋಲ ಕಡತವೂ ಶುರುವಿಟ್ಟುಕೊಳ್ಳದೆ ಕವಿ ಇಲ್ಲಿ ಅದಾಗಲೇ ಬೆಣ್ಣೆ ಬಂದ ಸೂಚನೆ ಕಾಣಿಸುತ್ತ ಬದುಕಿನಲಿ ಯಾವತ್ತೂ ಒಳಿತಾಗುವುದರ ಕುರಿತು ನಂಬಿಕೆ ಮುಖ್ಯ ಎಂಬುದನ್ನ ಮನಗಾಣಿಸುತ್ತಾ ಕವಿತೆಯ ಮುಂದಿನ ಸಾಲುಗಳ ವಾಚನಕ್ಕೆ ಓದುಗರ ಕುತೂಹಲ ಸೃಷ್ಟಿಸಿಕೊಳ್ಳುತ್ತಾರೆ.

'ಒಳಮನೆಯಲ್ಲಿ ಮೌನವಾಗಿ

ಕೂತವುಗಳನ್ನು ಮಾತಾಡಿಸಬೇಕು'

ಈ ದೇಹದ ಮನೆಯಲ್ಲಿ ನಾನಾ ಆಕಾರಗಳ ಸುಂದರತೆಯ ಜೊತೆ ವಿಕಾರಗಳ ಕೂಪಗಳೂ ಇವೆ. ಪ್ರಶ್ನೆಗಳ ಕಂತೆಗಳ ಜೊತೆ ಉತ್ತರಗಳ ಬೊಂತೆಗಳು ಬಿದ್ದಿವೆ. ಉರಿಗಲ್ಲ ಕೂರೆ ಮೊನೆಗಳಂತೆ ಘಮಗುಡುವ ಮೃದು ಹೂಗಳು ಕುಂತಿವೆ. ಇಂತಲ್ಲಿ ಕತ್ತಲೆಯ ಕಡೆಯುತ್ತಾ ವಿಚಾರಗಳ ಗುಡುಗುಡಿಸುತ್ತಾ ಘಟವ ಬಡಬಡಾ ಅಲುಗಾಡಿಸಬೇಕು. ಇದೇ ಕಾರ್ಯವ ಮಾಡಬೇಕು ಎನ್ನುತ್ತಾ ಕವಿಗಳು ಅಕಸ್ಮಾತ್ ಮಾಡದಿದ್ದರೆ...

'ಬಿಟ್ಟಲ್ಲೇ ಬಿಟ್ಟರೆ

ಮಾತು ಬರಿ ಹಳಸು ಹುಳಿಮೊಸರು' ಎಂದು ಬರೆಯುತ್ತಾ ಬದುಕು ಮೌನದರಮನೆಯ ಉಪ್ಪರಿಗೆಯ ರತ್ಮಸಿಂಹಾಸನವಲ್ಲ ರಣಕಣದ ಕಲಿಗಳ ಕಾದಾಟದ ಅಸ್ತ್ರಶಸ್ತ್ರಗಳ ಮಸೆಗೊಳಿಸೊ ಕಲುಮೆಯ ಮನೆ. ನಿತ್ಯ ಸಿದ್ಧಗೊಳ್ಳಬೇಕು ದಿನವ ಎದುರುಗೊಳ್ಳಬೇಕು ಬದುಕು ಉರಿಗೊಳಿಸಿಕೊಳ್ಳಬೇಕು ಇಲ್ಲದಿದ್ದರೆ ಬದುಕು ಹುಳಿಮೊಸರಾಗುವುದು ಖಚಿತ ಅದ ಕಡೆದರೂ ಸ್ವಾದಿಷ್ಟ ಬೆಣ್ಣೆ ಬರುವುದು ಕನಿಷ್ಟ ಎಂದು ಎಚ್ಚರಿಸುತ್ತಾರೆ. 'ಒಳಗಿನ ತಿಳಿಯನು ಕಲಕದೆ ಇದ್ದರೆ ಅಮೃತದ ಸವಿಯಿದೆ ನಾಲಿಗೆಗೆ' ಎಂಬ ಜಿ ಎಸ್ ಎಸ್ ರ ಕಾವ್ಯದ ಸಾಲುಗಳಿಗೆ ವಾಸುದೇವ ನಾಡಿಗರ ಸಾಲುಗಳು ಸಂವಾದಿಯಾಗಿವೆ ಅನಿಸುತ್ತದೆ. ಆದರೆ ಶಿವರುದ್ರಪ್ಪನವರ ಕವಿತೆಯ ಸಾಲುಗಳ ಔಚಿತ್ಯದ ಘನತೆಗೂ ನಾಡಿಗರ ಸಾಲುಗಳ ಸಂದರ್ಭದ ಘಟನೆಗೂ ವ್ಯತ್ಯಾಸವಿದೆ ಅದಕ್ಕೆ ಎದುರು ಬದುರಾಗಿವೆ ಅನ್ನಿಸುತ್ತದೆ. ಅಲ್ಲಿ ಸಾರ್ವತ್ರಿಕ ಶಾಂತಿಯಿಂದ ಪ್ರಗತಿ ಸ್ಥಾಪಿಸಲು ಹೊರಟರೆ ಇಲ್ಲಿ ಮನಸ್ಸಿನ ಹಿಡಿತದಿಂದ ದೇಹದ ನಿಯಂತ್ರಣ ಸ್ಥಾಪಿಸಲು ಉದ್ಯುಕ್ತವಾಗಿವೆ. ಮತ್ತೊಂದು ರೀತಿಯಲ್ಲಿ ಕಲಕುವುದೇ ಬೇರೆ ಕಡೆಯುವುದೇ ಬೇರೆ. ಸಂಬಂಧಗಳ ಕಲಕಿದರೆ ಕೆಡುಕು ಕಡೆದರೆ ಮಾತ್ರ ಬೆಳಕು. ಈ ಹಿನ್ನೆಲೆಯಲ್ಲಿ ಜಿ.ಎಸ್.ಎಸ್ ರ ಕವಿತೆಯ ವಿಸ್ತಾರದ ಮುಂದುವರಿಕೆಯನ್ನು ವಾಸುದೇವರ ಕವಿತೆಯಲ್ಲಿ ದರ್ಶಿಸಬಹುದು.

ಎರಡನೆ ಪ್ಯಾರಾದ ಕವಿತೆ ಆರಂಭಗೊಳ್ಳುವ ಮುಂಚೆ ಕವಿಗಳು ಸಹೃದಯ ಓದುಗನಲ್ಲಿ ಒಂದು ಕಡೆ ಬದುಕ ಗೆಲ್ಲುವ ಭರವಸೆಯ ಮುನ್ನೋಟವನ್ನು ಇನ್ನೊಂದು ಕಡೆ ಯಾವತ್ತು ಮುಂದಡಿಗೆ ಅವಿರತ ಪ್ರಯತ್ನವಿರದಿದ್ದರೆ ಸೋಲಿನ ಹಿನ್ನೋಟವನ್ನು ಎದುರುಗೊಳ್ಳಲು ಮಾನಸಿಕವಾಗಿ ಸಿದ್ದಗೊಳಿಸುತ್ತಾರೆ.

'ಹೋಗುತ್ತಾ ಕಡೆದು ಬರುತ್ತಾ ಕಡೆದು

ಕಡೆದಿಟ್ಟ ಪಾತ್ರೆಯಂಚಿಗೆ

ಕನಸುಗಳ ತೆಳುಗೆರೆ'

ಈ ಸಾಲುಗಳು ಮತ್ತೆ ಜೀವ ಚೈತನ್ಯ ಪುಟಿದೇಳಿಸುತ್ತವೆ. ಬದುಕು ಇನ್ನೇನು ಮುಗಿದೇ ಹೋಯಿತು ಎನ್ನುವಾಗ ಸುಳಿಯಲಿ ಸಿಕ್ಕವಗೆ ಸಿಗುರೊಂದು ಆಸರೆ ಎಂಬಂತೆ ಕನಸೊಂದು ಕೈದೀವಿಗೆಯಾಗುವುದು ಬದುಕ ದೂರ ಪಯಣದ ದಾರಿಗೆ. ಈ ಕನಸುಗಳು ಮಾಯಾ ಜಿಂಕೆಯಂತೆ ಬಿಸಿಲ್ಗುದುರೆಯಂತೆ ಕಂಡಂತೆ ಹೊಳೆದು ಮಾಯವಾಗುವುದೇ ಹೆಚ್ಚು. ಅದಕ್ಕೇ ಚಿಂತನೆಯ ಕಡಗೋಲಿನಿಂದ ಅವುಗಳ ಕಡೆದು ಗಟ್ಟಿಮಾಡಿಕೋಬೇಕು. ಯಾವುದೇ ಹೊಸ ಅನ್ವೇಷಣೆಗೆ ಸಾಧನೆಗೆ ಕನಸುಗಳೇ ಮೊದಲ ದಾರಿ. ಹುದುಗಿದ ಭಾವನೆಗಳ ಚಿಂತನೆಯ ಅರದಿಂದ ಉಜ್ಜಿ ತೇಯದೆ ಅವು ಹೊಳಪುಳ್ಳ ಕೃತಿಯಾಗಲಾರವು. ಮನುಷ್ಯನ ಮನ ಮಂಥನದಿಂದ ಉಕ್ಕಿ ಬರುವ ದಿವ್ಯೋದಾತ್ತ ಚಿಂತನೆಗಳೇ ಕನಸ ಸಾಕಾರದ ಮೆಟ್ಟಿಲುಗಳಾಗುವವು. ಬದುಕು ಮುಗಿಲ ಬೆಳ್ಳಿ ತಾರೆಗಳಾಗುವವು ಅವೆ.

'ಕಡವಾಯಿ ಮಧ್ಯೆ

ಇಳಿಬಿಟ್ಟರೆ ತಾನೆ ಕಡೆಗೋಲು

ಹೊತ್ತು ತರಬಲ್ಲದು ಗಡಸ ಗಡ್ಡೆ'

ಕಡೆಯದೆ ಬೆಣ್ಣೆ ಮೇಲೆ ಬರದು ಹಾಗೆ ಮನಸ ಕಡೆಯದೆ ಗಡುಸಾದ ಪಕ್ವವಾದ ವಿಚಾರಗಳು ಹೊರಹೊಮ್ಮವು. ಇದು ಬಹಳ ಸಲೀಸು ಎನಿಸಿದರೂ ಸರಳವಲ್ಲ. ಕವಿಗಳ ಮೈ ಮನಸು ಪೂರ್ಣ ಬದುಕ ಕಡಲಲ್ಲಿದೆ. ವಾಚಕರನ್ನ ಜೀವನದ ಕಡಲಲಿ ಮುಳುಗಿಸುವ ಹವಣಿಕೆ ಇಲ್ಲಿಲ್ಲ. ದಡದಲ್ಲಿಯೇ ವಿಶ್ರಮಿಸುವ ಸುಖ ನೀಡುತ್ತಾ ಬದುಕ ಕಡಲ ಕಡೆವ ಶ್ರಮವ ಕಾಣಿಸುತ್ತಿದ್ದಾರೆ. ಕಡಲಲಿ ಸಾಮಾನ್ಯವಾಗಿ ಮಂಜುಗಡ್ಡೆ ಮೇಲಿದೆ ಎನಿಸಿದರೂ ಅದರರ್ಧ ಮುಳುಗಿರುತ್ತದೆ. ಕಡೆದಾಗ ಬರುವ ಬೆಣ್ಣೆಯುಂಡೆಯೂ ಮಜ್ಜಿಗೆಯ ಕಡಬಾನಿಯಲಿ ತೇಲುತ ಮೇಲರ್ಧ, ಮುಳುಗುತ ಕೆಳಗರ್ಧವಾಗಿರುತ್ತದೆ. ಪೂರ ದಡಕ್ಕೆ ಎಳೆದು ತರುವ ಮಹತ್ಕಾರ್ಯ ಆಗಬೇಕಲ್ಲ. ಒಟ್ಟಾರೆ ಕನಸ ರೂಪ ಆಕೃತಿಯಾಗಿ ಎದುರು ನಿಂತಿದೆ. ಮನಸ ಮಾಡಿ ಅದ ಧಕ್ಕಿಸಿಕೊಳ್ಳಬೇಕು. ಅಂಗೈ ಮೇಲಿನ ಬೆಲ್ಲದಚ್ಚಾಗಿಸಿಕೊಳ್ಳಬೇಕು. ಅದಕ್ಕಾಗಿ ಇನ್ನೊಂದಿಷ್ಟು ದೂರ ಸಾಗಬೇಕಿದೆ ಅರ್ಥಾತ್ ಕಡಗೋಲ ಹಗ್ಗವಿಡಿದು ಇನ್ನಷ್ಟು ಮತ್ತಷ್ಟು ಹುರುಪಿಂದ ಎಳೆದಾಡಬೇಕಿದೆ. ಆಗ ಆಗ ನೋಡಿ ತಡಬಡಾಯಿಸಿ ಮೇಲೆದ್ದು ಬಳಿ ಬರುವುದು ಗಡಸ ಗಡ್ಡೆ ಬೆಣ್ಣೆ ಮುದ್ದೆ. ಆಗಲೇ ತಾನೇ ಅದೆಲ್ಲಿಯೋ ಕೂತ ಗುರಿಯೂ ಬದುಕ ನೆಲೆಯೂ ಕಾಲ ತಳವಾಗುವುದು ತಲೆಯ ಸೂರಾಗುವುದು ಹೃದಯದ ಬೆಳಕಾಗುವುದು. ಅಂತು ಶ್ರಮಯೇವ ಜಯತೇ.

ಜೀವನ ಏರುಪೇರಿನ ದಾರಿಯಂತೆ ಕಲ್ಲು ಮುಳ್ಳುಗಳ ಹಾದಿಯೂ ಹೌದು. ಬದುಕಲಿ ನೂರಾರು ಕಷ್ಟಗಳು ಬರುವವು. ನಷ್ಟಗಳು ಆಗುವವು.

'ಕಡಗೋಲ ಮೈಸುತ್ತ

ಮುಳ್ಳು ಮೊನೆಗಳು'

ಕವಿಗಳು ಕವಿತೆಯ ಮೂರನೇ ಪ್ಯಾರಾದಲ್ಲಿ ಕಷ್ಟ ನೋವು ಅನುಭವಿಸಬೇಕು ಒಂದು ಹಿತದ ಭದ್ರತೆಗಾಗಿ ಇದು ಕೇವಲ ನಮ್ಮಿಷ್ಟಕ್ಕನುಸಾರ ಬಂದ ಸೊಬಗಲ್ಲ. ಹಲವಾರು ನೆರೆಹೊರೆಯವರು ಕೂಡ ನೆಮ್ಮದಿಯ ಹರಸುತ್ತಿರುತ್ತಾರೆ ಆಗ ನಮ್ಮಿಂದ ಅವರಿಗೂ ಅವರಿಂದ ನಮಗೂ ನೂಕಾಟ ತಿಕ್ಕಾಟ ಘರ್ಷಣೆ ಸಹಜ ಎಂದು ಮನಗಾಣಿಸುತ್ತಾರೆ. ಕಡಗೋಲ ಮುಳ್ಳ ಓರೆಗಳು ಚುಚ್ಚದೆ ಚಚ್ಚದೆ ತಿರುಗಿಸಿ ಮುಳುಗಿಸಿ ಅಲ್ಲಾಡಿಸದೆ ಅಮೃತವದು ತೇಲದು. ಹಾಗೆಯೇ ಬದುಕು ನೋವ ಕಹಿ ಉಣ್ಣದೆ ಹಿತದ ಜೊನ್ನ ಸವಿಯಲಾಗದು. ನೇರ ದಾರಿಗೆ ಹೊರಳಲಾಗದು. ಸುಖದ ನಾವೆಗೆ ಏರಲಾಗದು. ನೆಮ್ಮದಿಯ ಕಡಲಲಿ ತೇಲಲಾಗದು ಎಂಬುದನ್ನ ಕವಿ ಸೂಚಿಸುತ್ತಿದ್ದಾರೆ.

'ನೆಪದ ಕಣ್ಣಿಗೆ ರೆಪ್ಪೆಗಳಿಲ್ಲ

ನಿದ್ದೆಯಲ್ಲಿಯೂ ಒದೆವ ನಮ್ಮದೇ ಮಗು

ಉಸಿರಿನ ಮರದ ತುಂಬಾ

ಗೂಡನರಸುತ್ತಿರುವ ಹಕ್ಕಿಗಳು'

ನರಮಾನವ ಎಲ್ಲ ಬಲ್ಲವ ಆದರೂ ತಿಳಿಯದಂತೆ ವರ್ತಿಸುವವ. ನಿದ್ದೆಯಲ್ಲಿರುವವರ ಎಚ್ಚರಿಸಬಹುದು ನಿದ್ದೆ ಬಂದಂತೆ ನಟಿಸುವವರ ಎಚ್ಚರಿಸಲಾಗದು ಎಂಬಂತೆ ನೆಪ ಮಾತ್ರಕೆ ರೆಪ್ಪೆ ಮುಚ್ಚಿದಾಕ್ಷಣ ಕಣ್ಣು ಕಾಣುತ್ತಿಲ್ಲವೆಂದರ್ಥವಲ್ಲ ಹೊರಗಿನ ಅರಿವಿದೆ ಒಳಗೆ ಅದಕ್ಕೇಕೆ ರೆಪ್ಪೆಗಳ ಹಂಗು? ಬಂಧನದ ಸಿಕ್ಕು? ನೋಡುವ ನೋಟದ ಮನಸಿಗೆ ತಡೆಯಿಲ್ಲ. ತಡೆಯೊಡ್ಡುವ ಗೋಡೆಗಳ ದಾಟಿ ನಾ ಚಿಂತಿಸಬಲ್ಲೆ ಎಂಬ ಭರವಸೆಯ ಬಯಕೆಯ ಪ್ರತಿನಿಧಿಸುತ್ತಿವೆ ಇಲ್ಲಿನ ಮಗು ಮತ್ತು ಹಕ್ಕಿಗಳು. ಸಾಧಿಸುವ ಕನಸುಗಳ ತುಂಬಿಕೊಂಡ ಮನಕೆ ನಿದ್ದೆ ಬಂದರೂ ಅದೂ ಒಂದು ಕ್ಷಣದ ಆಯಾಸದ ಪರಿಹಾರಕ್ಕಷ್ಟೇ. ಅರ್ಜುನನ ಕ್ಷಣ ನಿದ್ದೆಯಂತೆ. ಅಂತರಂಗದ ಬೆಳೆವ ಕನಸಿನ ಮಗು ತನ್ನ ಹುಟ್ಟಿನ ಉದ್ಧೇಶದ ಸಾಕ್ಷಾತ್ಕಾರಕ್ಕೆ ಎದೆಯ ಒದೆದು ಹೊರಬರಲು ಹವಣಿಸುತ್ತಿದೆ. ಮಧ್ಯಮನು ಸದಾ ತನ್ನ ಗುರಿಯ ಈಡೇರಿಕೆಗೆ ಹಂಬಲಿಸುತ್ತಾನೆ.  ಉಸಿರ ಜೀವ ತುಂಬಿಕೊಂಡ ಈ ದೇಹದಿ ಸಾಧನೆಯ ಹಕ್ಕಿಗಳು ವಿಶ್ರಾಂತಿಗೋ ತಮ್ಮ ಪ್ರಗತಿ ವಿಗತಿಗಳ ಫ್ರೇಮ್ ಗಳ ನೇತು ಹಾಕಲೊ ವಿಜಯದ ಕೂಗು ಹಾಕಲೋ ಗೂಡನರಸುತಿವೆ. ಈ ಗೂಡು ಬದುಕಿನ ಒಂದು ಸಾಧನೆಯ ನಿಲ್ದಾಣ.

ಕವಿತೆ ನಾಲ್ಕನೇ ಪ್ಯಾರಾದಲ್ಲಿ ಮುಂದೆ ಸಾಗಿದಂತೆ ತನ್ನ ತಾ ತನು ಮನ ಮಥಿಸಿಕೊಂಡದ್ದ ನಿಲಿಸಿ ಬೇರೆಯವರು ತನ್ನ ಮಂಥನ ಮಾಡಿದ್ದ ಹಿಂದಿನ ಸಾಲುಗಳಂತೆಯೇ ಇಲ್ಲಿಯೂ ನೆನೆಯುತ್ತದೆ....

'ಎಷ್ಟು ಮಂದಿ ಬಂದು ಹೋದರು ಇಲ್ಲಿ

ಕಡೇತನಕ ಕಡೆದದ್ದೇ ಕಡೆದದ್ದು"

ಜೀವ ದೇಹ ಪಡೆದು ಬಂದವರದಷ್ಟೇ ಅಲ್ಲವಲ್ಲ. ಅದ ನಂಬಿದವರು ಬಹಳಷ್ಟು. ಬದುಕು ನಮ್ಮೊಬ್ಬರದೇ ಅಲ್ಲ ತಂದೆ ತಾಯಿ ಮಡದಿ ಮಕ್ಕಳು ಬಂಧು ಬಳಗ ನೆರೆ ಹೊರೆ ಸ್ನೇಹಿತರು ಎಲ್ಲರಿಗೂ ಅನುಕೂಲಕ್ಕೆ ಹೆಣಗಬೇಕಿದೆ. ಎಲ್ಲರೂ ಅನುಕೂಲಕ್ಕೆ ಹಂಬಲಿಸುವರು. ಬದುಕಿದು ಯಾರ ಬಿಟ್ಟು ನಡೆಯುವುದಿಲ್ಲ. ಯಾರಿಗೆ ಏನು ಅಗತ್ಯವೋ ಅದ ಪಡೆಯಲು ಪ್ರೀತಿಸುವರು ದ್ವೇಷಿಸುವರು ಹಿಂಜುವರು ಗುಂಜುವರು ದೂರುವರು ದೂರಾಗುವರು ಹಾರುವರು ಮುಗಿ ಬೀಳುವರು... ಇದು ನಿಲ್ಲದ ರಾಗ ತಾಳಗಳ ಏಳು ಬೀಳುಗಳ ತಿರುಗಣಿ. ಇಂತಲ್ಲಿ ಕವಿ ಮುಂದುವರೆದು

'ಕಂಠ ತುಂಬಿದ ಪಾತ್ರೆ

ಕುದಿದು ಹಾಡಿದ ರಾಗ

ಉಳಿದದ್ದು ತೊಟ್ಟು ಘಮಲು

ಸವೆದ ಕಡಕೋಲು ಟೊಳ್ಳಾದ ಹಗ್ಗ

ತಿರುತಿರುಗಿ ಬಸವಳಿದ ಬದುಕ ಮಡಕೆ

ಜೀವಪರ್ವತಗಳು ತಿರುಗುತ್ತಲಿವೆ

ಮಥನದುದ್ದಕ್ಕು ದಕ್ಕಿದ್ದು

ಅದೇ ಮೋಹಿನಿಯ ಅತೃಪ್ತ ಸಖ್ಯ'

ಇಲ್ಲಿಯೇ ನಮಗಿಲ್ಲಿಯೇ ಕವಿ ನಿಸಾರ್ ಅಹಮದ್ ರ 'ಕಳೆದದ್ದಕ್ಕೆ ಕೊರಗಬೇಡ' ಕವಿತೆಯ

"ಬದುಕಿನ ನಿಗೂಢ ಮರ್ಮ ಇದೇ ನೋಡು

ವಿಲಾಪಿಸಬೇಡ ಕಳೆದುಹೋದದ್ದಕ್ಕೆ

ನೀನೇ ಕಳೆದು ಹೋಗುವ ಮುನ್ನ" ಸಾಲುಗಳು ಎದೆತಾಕುವವು. ಎಲ್ಲ ಕೊಟ್ಟ ಮೇಲೆ ಕಳೆದುಕೊಂಡ ಮೇಲೆ ಬದುಕಲಿ ಉಳಿವುದೇನಿಲ್ಲ ಅತೃಪ್ತ ಸಖ್ಯ.

ಮಥನದುದ್ದಕ್ಕು ಬಂದದ್ದನ್ನೆಲ್ಲ ಆಗಾಗಲೇ ಬಂದವರು ಪಡೆದುಕೊಂಡು ಹೋದಾಗ ಕಡಲ ಕಡೆದ ಶ್ರಮ ಬದುಕಿಗೆ ಉಳಿದದ್ದು ಮತ್ತೇನಿಲ್ಲ? ಬರೀ ಮಿಥ್ಯವೆಂದು ಸಂಕೇತಗಳ ಮೂಲಕ ತೋರುತ್ತಿದ್ದಾರೆ. ಆದರೆ ಬದುಕಂತು ಉಳಿದಿದೆಯಲ್ಲ ಎಂಬುದೇ ಶಾಶ್ವತ ಸತ್ಯ.

ಕಡೆಯ ಪ್ಯಾರಾದಲ್ಲಿ ಇಡೀ ಜೀವನಕ್ಕೆ ಪ್ರೇರಣಾದಾಯಿಯಾಗುವ ನುಡಿಗಳ ಕಟ್ಟಿಕೊಡುತ್ತಾರೆ. ಓದುಗರ ಚಕಿತತೆಯೊಂದಿಗೆ ಜೀವನ ಪ್ರೀತಿಗಾಗಿ ಉತ್ತೇಜಿಸುತ್ತಾರೆ.

"ಪ್ರತಿ ಜೀವ ಎದ್ದರೆ ಕತ್ತಲೆಯ

ಕಡೆದು ನಿಂತ ಸೂರ್ಯ!

ಮಲಗಿದರೆ ಮೋಡಗಳ ಕೂಡ

ತಕರಾರು ತೆಗೆವ ಚಂದ್ರ!

ಇಟ್ಟ ಹೆಜ್ಜೆಗಳೆಲ್ಲ ಉರಿಉರಿವ ನಕ್ಷತ್ರ!"

ಎಂದು ಜೀವನದ ಗತಿಯ ಮಹೋನ್ನತಿಯ ಸಾರುತ್ತಾರೆ. "ಸಾವಿಗೊಂದು ನಾವು ಹೆದರದೆ ಇದ್ದರೆ ಸಾಯಿಸುವವರು ನಮಗೆ ಅಂಜುತ್ತಾರೆ" ಎಂಬ ಗೋಪಾಲಕೃಷ್ಣ ಅಡಿಗರ ಮಾತ ಸಾರ್ವಕಾಲಿಕತೆ ಇಲ್ಲಿನ ಸಾಲುಗಳಲಿ ಪ್ರಜ್ವಲಿಸುತ್ತಿದೆ.

ವಾಸುದೇವ ನಾಡಿಗರು ಕೇವಲ ಪದಗಳ ಪೋಣಿಸುವ ಕವಿಗಳಲ್ಲ ಜೀವನದ ಅನುಭವಗಳನೇ ನೇಯುವ ಕವಿ. ಭಾವನೆಗಳ ರಸಪಾಕವನೇ ಉಣಬಡಿಸುವ ಕವಿ. ಜೀವನದ ಸಾರವನೇ ತುಂಬಿಕೊಡುವ ಕವಿ. ಕವಿತೆಯ ಐದು ಪ್ಯಾರಗಳ ನಲವತ್ತೊಂಬತ್ತು ಸಾಲುಗಳಲ್ಲಿ ಒಂದಷ್ಟು ಕೂರಿಸಿರುವ ಸಾಲುಗಳ ಉದ್ದವೋ ಚಿಕ್ಕದೋ ಮಾಡಬಹುದೇನೋ ಆದರೆ ಯಾವ ಪದಗಳನು ತೆಗೆಯಲಾಗದು. ಒಂದು ಪದ ತೆಗೆದು ಓದಿಕೊಂಡರು ಮುಂದಿನ ಸಾಲಿನ ಭಾವದೀಪ್ತಿ ಆರಿಹೋಗುತ್ತದೆ. ಪದದಿಂದ ಪದಕ್ಕೆ ಜೀವನ ಪ್ರೀತಿಯ ದೀಪವ ಹಚ್ಚುತ್ತಾ ಹೋಗುವರು. ಕಡೆಗೆ ಸೂರ್ಯನಾಗಿ ಬದುಕು ಬೆಳಗಲೆಂದು ಚಂದ್ರನಾಗಿ ಹೊಳೆಯಲೆಂದು ನಕ್ಷತ್ರಗಳಾಗಿ ಮಿನುಗಲೆಂದು ಆಶಿಸುತ್ತಾರೆ. ಆ ಶಕ್ತಿ ಪ್ರತಿ ಮಾನವನೆದೆಯಲಿ ಇರುವುದೆಂದು ಘಂಟಾಘೋಷವಾಗಿ ಉದ್ಘೋಷಿಸುತ್ತಾರೆ. ಕವಿತೆಯ ಯಾವ ಭಾಗದಲ್ಲು ನಿಲುಗಡೆ ಚಿಹ್ನೆ ಅರ್ಧವಿರಾಮ ಮತ್ತಿತರ ಲೇಖನ ಸಂಜ್ಞೆಗಳ ಕವಿಗಳು ಉದ್ಧೇಶಪೂರ್ವಕವಾಗಿಯೇ ಬಳಸಿಲ್ಲ. ಕವಿತೆಯ ಭಾವಬನಿಯನ್ನ ಅರ್ಥವಿಸ್ತಾರವನ್ನ ಧ್ವನಿಪೂರ್ಣತೆಯನ್ನ ಹಿನ್ನೆಲೆ ಮುನ್ನೆಲೆಗಳನ್ನ ಸಹೃದಯ ಓದುಗರೆ ತಮ್ಮ ಇಚ್ಛಾನುಸಾರ ಗ್ರಹಿಕೆಯನುಸಾರ ಹೊಂದಲೆಂದು ಬಿಟ್ಟಿದ್ದಾರೆ. ಆದರೆ ಕೊನೆಯ ಪ್ಯಾರಾದ ಸಾಲುಗಳ ಅಂತ್ಯದಲ್ಲಿ ಮಾತ್ರ ಆಶ್ಚರ್ಯಸೂಚಕ ಚಿಹ್ನೆಯ ಪ್ರಜ್ಞಾಪೂರ್ವಕವಾಗಿಯೇ ಛಾಪಿಸಿದ್ದಾರೆ. ಜೀವನ ಎದ್ದು ಕತ್ತಲೆ ಕಡೆದು ಸೂರ್ಯ! ಆಗಲೆಂದು ಇರುಳು ಕೂಡ ಎಚ್ಚರದ ಚಂದ್ರ! ಆಗಲೆಂದು ಹೆಜ್ಹೆಗಳೂರಿ ನಕ್ಷತ್ರ! ಆಗಲೆಂದು. ಇದು ಕವಿಗೆ ಮಾನವ ಜೀವದ ಮೇಲಿರುವ ಅಪಾರ ಪ್ರೇಮ ಮತ್ತು ಅಪ್ಪಟ ವಿಶ್ವಾಸ.

ಕವಿತೆಯ ಆರಂಭದ ಎರಡನೆ ಸಾಲಿನ ವಾಚನದಲ್ಲಿ ಕಾಣುವ ಒಳಗಿನಿಂದ ಮೇಲೆದ್ದು ಬರುವ ಬೆಣ್ಣೆಯು  ಕೊನೆಯ ಸಾಲಿನಲಿ ಬರುವ ಇಟ್ಟ ಹೆಜ್ಹೆಗಳೆಲ್ಲ ಉರಿ ಉರಿವ ನಕ್ಷತ್ರವಾಗುವ ಪರಿ ಬದುಕು ಬೆಳೆದು ಪಕ್ವಗೊಂಡು ಹರಡುವ ಬಗೆಗೆ ದ್ಯೋತಕವಾಗಿದೆ. ಮೊದಲ ಸಾಲಿನ ಜೀವನ ನಂಬಿಕೆಯ ಪ್ರಾಮಾಣಿಕತೆಯನ್ನ ಕೊನೆಯ ಸಾಲಿನಲ್ಲಿ ಮುಗಿಲಿಗೇರಿಸಿ ಧೀರ್ಘ ನಿಟ್ಟುಸಿರಿನೊಂದಿಗೆ ವಿಶ್ರಮಿಸುತ್ತಾರೆ. ಓದುಗರ ಗೆಲುವ ನಗೆಯ ತೃಪ್ತಿ ಗಳಿಸುತ್ತಾರೆ.

ವಾಸುದೇವ ನಾಡಿಗ ಕವಿಗಳು ಬದುಕಿನ ಕಡು ಅನುಭವಗಳಿಂದೊಡಗೂಡಿದ ನೆನಪುಗಳ ದಟ್ಟತೆಯನ್ನು ತಮ್ಮೆಲ್ಲ ಕವಿತೆಗಳಲ್ಲಿ ಹಿಡಿದಿಡುತ್ತಾ ಬಂದಿದ್ದಾರೆ. ಮೊದಲ ಸಂಕಲನ ವೃಷಭಾಚಲದ ಕನಸಿನಲ್ಲಿಯೂ 'ಈ ಮಣ್ಣಿನೊಳಗಿನ ಕಣ್ಣು' ' ನೂರಾರು ತಿರುವುಗಳು' ಕವಿತೆಗಳಲ್ಲಿಯೂ ಬದುಕ ಮುಗ್ಧತೆಯ ಜೊತೆ ಅದರ ಹರಾಕಿರಿಗಳ ದಾಟುವ, ಗುರಿ ಸೇರುವ ಭರವಸೆಯನ್ನೇ ಧೇನಿಸುತ್ತಾರೆ. ಹೊಸ್ತಿಲು ಹಿಮಾಲಯದ ಮಧ್ಯದ 'ಜೀವ ಕುಲುಮೆ' ಕವಿತೆಯಲ್ಲಿ

"ಮಣ್ಣೊಡಲೊಳಗಿನ ಬೀಜ

ಮುಗಿಲಲ್ಲೋಲಾಡುವ ನೀರು"

ಎಂದು ಹಾಡುತ್ತಾ ಜೀವನದ ವೈರುಧ್ಯಗಳ ಅಪಾರ ಗಜಿಬಿಜಿಯಲ್ಲೇ ಬದುಕು ಸಂಬಂಧಗಳು ಕೊನರುವುದನು ಸೂಚಿಸುತ್ತಾರೆ. ಕಡಲಿಗೆ ಕಡಗೋಲು ಕವಿತೆಯೂ ಬದುಕಿಗೊದಗುವ ಏನೆಲ್ಲ ಪರೀಕ್ಷೆಗಳನು ಗೆಲ್ಲಬಹುದೆಂದೇ ಹೇಳುತ್ತಾರೆ.

ಕೃಷ್ಣನಿಗೂ ಪೂತನಿಯಿಂದ ಬಕನಿಂದ ಕಾಳೋರಗದಿಂದ ಕಂಸನಿಂದ ಶಿಶುಪಾಲನಿಂದ ಏನೆಲ್ಲ ಎಷ್ಟೆಲ್ಲ ಸಂಕಷ್ಟಗಳು ಬಂದರೂ ಎದುರಿಸಿ ಬೃಂದಾವನವ ಕಟ್ಟಿದ ಮಥುರೆಯ ಉಳಿಸಿದ ದ್ವಾರಕೆಯ ಬೆಳೆಸಿದ. ತನ್ನ ನಂಬಿದವರ ಅನವರತ ಪೊರೆದ. ತಾನೂ ಬೆಳೆದೇ ಬೆಳೆದ. ಮಾನವನಾಗಿ ಹುಟ್ಟಿ ಬಂದು ದಾನವ ಗುಣಗಳ ಅಡಗಿಸಿ ಮಾನವತೆಯ ಉಳಿಸಿದ. ವಿಶ್ವಪ್ರೀತಿಯ ಗಳಿಸಿದ. ಪ್ರತಿ ಮಾನವನು ತನ್ನ ತಾನು ಮಥಿಸಿಕೊಳ್ಳಬೇಕು ಇತರರ ತಿಕ್ಕಾಟ ತಾಕಲಾಟಕ್ಕೆ, ಕಿಚ್ಚು ಚಿತ್ತು ಚಿತಾವಣೆಗೆ ಒಳಗಾಗಲೇಬೇಕು ಆಗಲೇ ತಾನೆ ವ್ಯಕ್ತಿತ್ವ ಹುರಿಗೊಂಡು ಅರಳುವುದು. ಸ್ಪರ್ಧೆ ಪ್ರತಿಸ್ಪರ್ಧಿ ಇರದೆ ಗೆಲುವು ತಿಳಿಯದು ಒಳಿತು ಕೆಡುಕು ಅರಿವಾಗದು. ಮಾನವ ಮಹಾ ಮಾನವನೋ ದೇವ ಮಾನವನೋ ಆಗಲಾಗದು. ಅಂತೆ ಕಡಲಿಗೆ ಕಡೆಗೋಲು ಜೀವಸಾಧ್ಯತೆಗಳ ಸಂಕೇತಿಸುವ ಕವಿತೆ. ಬದುಕ ಭರವಸೆಗಳ ಬೆಳೆಸುವ ದಾರ್ಶನಿಕ ಕವಿತೆ. ಮನುಷ್ಯ ಹುಟ್ಟಿನ ಮಹಾ ಯಾನದಲ್ಲಿ ಕಾವ್ಯ ಕೊಡಬಹುದಾದದ್ದು ಒಂದು ನೆರಳ ಅರಿಕೆ ನಯವಾದ ನೇವರಿಕೆ ಬೆನ್ ಚಪ್ಪರಿಸುವಿಕೆ. ವಾಸುದೇವ ನಾಡಿಗರ ಕಡಲಿಗೆ ಕಡಗೋಲು ಕವಿತೆಯು ಸಾವಧಾನವಾಗಿ ವಾಚಕರೆಲ್ಲರಿಗೂ ಅಂತ ಒಂದು ದಿವ್ಯ ನೆರಳ ಅನುಭೂತಿಯನ್ನ ಭವ್ಯ ಸುಖದ ನೇವರಿಕೆಯನ್ನ ಅದಮ್ಯ ಅಚಲವಾದ ಬೆನ್ ತಟ್ಟುವಿಕೆಯ ಉತ್ಸಾಹನ್ನ ಉದ್ಧೀಪಿಸುತ್ತದೆ.

ಟಿ.ಪಿ.ಉಮೇಶ್ ಸ.ಶಿ. ಸ.ಕಿ.ಪ್ರಾ.ಶಾಲೆ. ಅಮೃತಾಪುರ

ಹೊಳಲ್ಕೆರೆ .ತಾ.

ಚಿತ್ರದುರ್ಗ .ಜಿ.

@@@@@@@@@@@@@@@@@@@@@@@@@


ಅರವಿಂದ ಚೊಕ್ಕಾಡಿಯವರ ಉಪನ್ಯಾಸಗಳು

ಕನ್ನಡ ಭಾಷೆಯ ಜ್ಞಾನಶಿಸ್ತಿಗೆ ನೂತನ ಆಕರಗಳು


ಅರವಿಂದ ಚೊಕ್ಕಾಡಿಯವರ ಕುರಿತು ಹೇಳುವುದು ಒಂದೇ, ಅವರ ಅಧ್ಯಯನ ಹಾಗೂ ಭಾಷಣ, ಬರಹಗಳ ಕುರಿತು ಹೇಳುವುದು ಒಂದೇ. ನಡೆನುಡಿ ಒಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ ಎಂಬಂತೆ, ಅರವಿಂದರು ನುಡಿದಂತೆಯೇ ನಡೆಯುವವರು. ಅಂತೆಯೇ ನಡೆನುಡಿಯನ್ನು ಸ್ಪಷ್ಟವಾಗಿ ದಾಖಲಿಸುವವರು. ಹಾಗಾಗಿ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಬಹುತೇಕ ಲೇಖಕರ ಬಗ್ಗೆ ಹೇಳುವಾಗಲು ಒಮ್ಮೊಮ್ಮೆ ವ್ಯಕ್ತಿನಿಷ್ಟವೊ ಇಲ್ಲ ಕೃತಿನಿಷ್ಟವೋ ಆಗಿರಬೇಕಾಗುತ್ತದೆ. ಆದರೆ ಕೃತಿ ಹಾಗೂ ವ್ಯಕ್ತಿತ್ವ ಏಕತ್ರವಾಗಿರುವ ಕೆಲವೇ ಕೆಲವು ಲೇಖಕರಲ್ಲಿ ಅರವಿಂದ ಚೊಕ್ಕಾಡಿಯವರು ಪ್ರಮುಖರು. ಪ್ರಮುಖರು ಯಾಕೆಂದರೆ ಅವರಿನ್ನೂ ಬದುಕನ್ನು ದುಡಿಸಿಕೊಳ್ಳುತ್ತಿದ್ದಾರೆ ಹಾಗೂ ಬರಹವನ್ನು ಬದುಕುತ್ತಿದ್ದಾರೆ. ಕೆಲವರು ತಮ್ಮ ಮೊಂಡಾದ ಲೇಖನಿಯ ಸಾಣೆಯಿಡಿಸದೆ ಜೇಬೊಳಗಿಟ್ಟುಕೊಂಡು ಗತಕಾಲದ ಒಂದಷ್ಟು ಹರಿತ ಬರಹಗಳ ಆತ್ಮರತಿಯ ಕೊರೆತದಲ್ಲಿ ಮುಳುಗಿರುತ್ತಾರೆ. ಅರವಿಂದರು ಯಾವಾಗಲು ಪ್ರಖರ ವಾಸ್ತವ ಪ್ರಜ್ಞೆಯುಳ್ಳವರು. ಆಗಿದ್ದಕ್ಕೆ ಮೆರೆಯುತ್ತ, ಮರುಗುತ್ತ ಕೂರುವವರಲ್ಲ. ಅದಕ್ಕೊಂದು ಸ್ಪಷ್ಟ ಅಂತಿಮ ಚರಮ ಗೀತೆ ಬರೆದು ‘ಮತ್ತೆ ಮುಂದೇ...?’ ಎನ್ನುವ ಸ್ವಭಾವದವರು. ಹಾಗಾಗಿ ಯಾರಿಗೇ ಆಯಿತು ಅರವಿಂದರ ಕುರಿತು ಹೇಳುವಾಗ ಹಿಂದೆ ಮುಂದೆ ಯೋಚಿಸಬೇಕಾದ, ಲಾಭ ನಷ್ಟ ತೂಗಿಸಬೇಕಾದ ಅಗತ್ಯವಿಲ್ಲ! ಇದ್ದದ್ದನ್ನ ಇದ್ದ ಹಾಗೆ ಹೇಳಿದರಾಯಿತು. ಅದನ್ನ ತಳಕಬಳಕ ಮಾಡಿ ಮೇಲೆ ಕೆಳಗೆ ಹಾಕಿ ಯಾವುದೋ ದೂ(ದು)ರಾಲೋಚನೆಯಿಂದ ಮಾತಾಡಿದಿರೋ; ಬಲು ನ್ಯಾಯ ನಿಷ್ಟುರಿಯಾದ ಇವರ ಮಾತುಗಳ ಛಾಟಿಯಿಂದ ಹಿಂದೆ ಮುಂದೆ ನಿಲ್ಲಲಾಗದಂತೆ ತುರಿಸಿಕೊಳ್ಳಬೇಕಾಗುತ್ತದೆ! ಹಾಗಾಗಿ ಇವರ ಕುರಿತು ಮಾತಾಡುವುದು ಸುಲಭ! ವ್ಯಕ್ತಿತ್ವದಲ್ಲಿ ಯಾವುದೇ ಅಂಕು ಡೊಂಕು ಇಟ್ಟುಕೊಂಡವರಲ್ಲ. ಇವರ ಬರಹವನ್ನು ಕುರಿತು ಹೇಳುವುದೂ ಸುಲಭ. ಅವರ ಬದುಕೇ ಬರಹವಾಗಿರುವಾಗ! ಆದರೂ ಅವರ ಹತ್ತಿರದಿಂದ ಕಾಣದ ಸಾವಿರಾರು ಓದುಗರಿಗೆ ಅವರ ಬರಹಗಳೇ ಅರವಿಂದರ ತೋರಿಸುವ ಅರಿವಿನ ದಾರಿಗಳು. ಹಾಗಾಗಿ ನಾವಿಲ್ಲಿ ಅವರ ಬರಹಗಳ ಕುರಿತು, ಸದ್ಯದ ಈ ಕೃತಿಯಲ್ಲಿನ ಉಪನ್ಯಾಸಗಳ ಕುರಿತು ವಿಚಾರ ಮಾಡಬೇಕಾಗಿದೆ. ಈಗ ಪ್ರಕಟಗೊಳ್ಳುತ್ತಿರುವ ಹೊತ್ತಿಗೆಯಲ್ಲಿನ ಒಂದೊಂದು ಉಪನ್ಯಾಸಗಳು ಒಮ್ಮೊಮ್ಮೆ ಒಂದು ಓದಿಗೆ ನಮಗೆ ಆ ಮಾರ್ಟಿನ್ ಲೂಥರ್ ಕಿಂಗ್‌ನ ಪ್ರಖ್ಯಾತ ಭಾಷಣವನ್ನು ನೆನೆಪಿಗೆ ತಂದರೆ ಅಚ್ಚರಿಯಿಲ್ಲ. ಹಾಗೆಯೇ ಕನ್ನಡದ ಮಾರ್ಟಿನ್ ಲೂಥರ್ ಕಿಂಗ್ ಆದ ಬಸವೇಶ್ವರರ ನೆನೆಪಿಗೆ ತಂದರೆ ವಿಸ್ಮಯವಲ್ಲ. ಎಲ್ಲಕ್ಕಿಂತ ಪ್ರಮುಖವಾಗಿ ಭಾರತದ ಆತ್ಮವೇ ಆದ ಮಹಾತ್ಮ ಗಾಂಧೀಜಿಯವರ ನಮ್ಮ ಕಣ್ಮುಂದೆಯೇ ತಂದು, ಎದುರಿಗೆ ಕೂರಿಸಿ ಸಂವಾದಕ್ಕೆ ಶುರು ಹಚ್ಚಿದರೆ ಉದ್ವೇಗ ಪಡಬೇಕಿಲ್ಲ. ಇವರೆಲ್ಲರು ನಡೆದಂತೆಯೇ ನುಡಿದಂತಹವರು! ನುಡಿಗಾಗಿ ನಡೆಯ ಬಗ್ಗಿಸಿಕೊಂಡವರು! ಹಾಗಾಗಿ ಲೋಕದ ಎಲ್ಲಾ ಕಾಲಘಟ್ಟಕ್ಕು ಒಗ್ಗಿದಂತಹವರು! ಇಂದಿಗು ನಾಡಿನ ನಡೆನುಡಿಯ ಸಾಕ್ಷೀಪ್ರಜ್ಞೆಯಾಗಿರುವಂತಹವರು. ಅರವಿಂದರು ಈಗ ನಮ್ಮ ನಡುವೆ ಇರುವ ಅಂತಹ ಪ್ರಖರ ವ್ಯಕ್ತಿತ್ವದವರು. ಅವರ ಬರಹಗಳಲ್ಲಿ ಈ ಉಪನ್ಯಾಸಗಳು ನಮಗೊಂದು ಆಧುನಿಕ ಕನ್ನಡ ಉಪನಿಷತ್ತಿನಂತೆ ಅನುಭವ ನೀಡುತ್ತವೆ ಅನ್ನೋದಕ್ಕಿಂತ ಹೊಸಗನ್ನಡದ ಅರವಿಂದೋಪನಿಷತ್ತುಗಳೇ ಇವಾಗಿವೆ ಎಂದರೆ ಉತ್ಪೇಕ್ಷೆಯೇನಲ್ಲ.

                          ಪ್ರಮುಖವಾದ ಮಾತು; ಅರವಿಂದ ಚೊಕ್ಕಾಡಿಯವರ ಉಪನ್ಯಾಸಗಳ ಅವಲೋಕನ ಮಾಡುವ ಅಗಾಧ ಕಾರ್ಯಕ್ಕೆ ಕೈ ಹಾಕಿರುವ ನಾನು ಈಗ ಮಾಡಿಕೊಂಡಿರುವ ಟಿಪ್ಪಣಿಗಳು ಮತ್ತು ಪೂರಕ ಮಾಹಿತಿಗಳ ವಿಸ್ತರಿಸುತ್ತಾ ಹೋದರೆ ಅದೇ ಒಂದು ಈ ಅರವಿಂದೋಪನಿಷತ್ತಿನಂತ ಉಪನ್ಯಾಸಗಳಿಗೆ ಕಿರು ಭಾಷ್ಯವಾಗಬಹುದು! ಪ್ರತಿ ಉಪನ್ಯಾಸವನ್ನು ಕೋಟ್ ಮಾಡುತ್ತಾ ಇದು ಹೀಗೆ ಹೀಗೆ ಎನ್ನುತ್ತಾ ಹೋದರೆ ಸಹೃದಯ ಓದುಗರ ವಿಶಾಲ ಮನಸ್ಸಿನ ಓದಿಗೆ ಮಿತಿ ಹಾಕಿದಂತೆಯೇ ಸರಿ. ಅಧ್ಯಯನಕ್ಕೆ ಈ ಹೊತ್ತು, ಈ ಹೊತ್ತಿಗೆ ಹಿಡಿದಿರುವ ನಿಮಗೆ ಅಕ್ಷರಗಳ ಅಂತರಾಳದ ಅರಿವಿನ ಸಾಂಗತ್ಯದ ಸ್ವಾರಸ್ಯ ಹೊರಟು ಹೋಗಬಹುದು. ಅರವಿಂದರ ವಿಚಾರಗಳನ್ನು, ಅಧ್ಯಯನಶೀಲತೆಯನ್ನು, ಅಂತರ್ನೋಟಗಳನ್ನು, ವಿಚಕ್ಷಣಮತಿಯನ್ನು, ಸಂವಾದದ ಕಲೆಯನ್ನು, ವಾದ ಪ್ರತಿಪಾದಿಸುವ ಸಿದ್ಧತೆಯನ್ನು, ಆಧಾರಗಳ ಒದಗಿಸುವ ನೈಪುಣ್ಯತೆಯನ್ನು, ಬದುಕಿನೊಂದಿಗೆ ಬರಹ ಮೇಳೈಸುವ ಆನುಭಾವಿಕತೆಯನ್ನು, ಅವರ ಬರಹಗಳ ಮೂಲಕವೇ ಓದಿ ಅರಗಿಸಿಕೊಳ್ಳಬೇಕು ಮತ್ತು ಸವಿಯಬೇಕು. ಹಾಗಾಗಿ ಇಲ್ಲಿ ನನ್ನದೇನೆದ್ದರು ಅರವಿಂದರ ಉಪನ್ಯಾಸಗಳ ಅರಿವಿನರಮನೆಯ ಹೊರ ಹೊಸ್ತಿಲಿಗೆ ಒಂದು ಕಿರು ತೋರಣ ಕಟ್ಟಿ ನಿಮ್ಮನ್ನೆಲ್ಲ ಸ್ವಾಗತಿಸುವ ಕಾರ್ಯವಷ್ಟನ್ನೇ ಮಾಡಬಹುದು.

              ಈಗಲೇ ಹೇಳಿ ಬಿಡಬೇಕು; ನಾನು ಮಲೆನಾಡ ಮೂಡುಬಿದಿರೆ ಕಡೆಯ ಚೊಕ್ಕಾಡಿಯ ಅರವಿಂದರೆಂಬ ಗುರು ದ್ರೋಣಾಚಾರ್ಯರ ಕಾಣದ ಶಿಷ್ಯ, ಬಯಲುಸೀಮೆ ಚಿತ್ರದುರ್ಗದ ಉಮೇಶನೆಂಬ ಏಕಲವ್ಯ! ಕಳೆದ ನಾಲ್ಕೈದು ವರ್ಷಗಳಿಂದ ಇವರ ಹತ್ತಿರದ ಓದುಗ; ವಿವಿಧ ಮಾಧ್ಯಮಗಳ ಮುಖೇನ. ಮೊದಲು ದೂರದ ಓದುಗ; ಬರೀ ಕೃತಿಗಳ ಮುಖೇನ. ಓದು ಬರವಣಿಗೆ ಎಂಬ ಜೀವನದ ಉಪವಿಧಿಗಳು ನನ್ನಲ್ಲೊಂದಿಷ್ಟಿದ್ದರು ವಯಸ್ಸಿಗಾಗುವಷ್ಟು, ವಯಸ್ಸು ಮಾಗಿದಷ್ಟು ಇದ್ದಿಲ್ಲ. ಮನಸ್ಸೂ ವಯಸ್ಸಿನಷ್ಟು ವೇಗವಾಗಿರಲಿಲ್ಲ. ಯಾವಾಗ ಅರವಿಂದರೆಂಬ ನಿಸ್ತಂತು ವಿದ್ಯುತ್ತಿನ ಸಂಪರ್ಕಕ್ಕೆ ಬಂದೆನೊ ಒಂದಷ್ಟು ಅರಿವಿನ ಲೈಟು ಎದೆಯಲ್ಲಿ, ಮೆದುಳಲ್ಲಿ ಪಕಪಕ ಬೆಳಗ ಹತ್ತಿತು. ಇನ್ನೂ ಅದೇನು ಮರ್ಕ್ಯೂರಿ ಆಗಿಲ್ಲ; ಕೋಲು ಲೈಟೇ! ಅನ್ನೋದು ನನ್ನ ಭಾವನೆ. ಮುಂದೆ ಅವರ ನೇರ ಸಂಪರ್ಕ ಬಂದಾಗ ಅವರ ಅಡಿದಾವರೆಗಳಿಗೆ ನಮಿಸಿದಾಗ ಅವರ ತೇಜಃಪುಂಜ ಹಸ್ತಗಳ ಸ್ಪರ್ಶದಿಂದ ಕಾಳಿಯ ಸಂಸರ್ಗದಿಂದಾದ ಕಾಳಿದಾಸನಂತೋ, ರಾಮಕೃಷ್ಣರ ಸಂಪರ್ಕದಿಂದಾದ ವಿವೇಕರಂತೊ ಕೋಲ್ಮಿಂಚಂತೆ ಜಗ್ಗನೆಯೋ ಇಲ್ಲ ಹುಣ್ಣಿಮೆಯಂತೆ ನಿಧಾನಕ್ಕೋ ಜ್ಞಾನ ಪಕ್ವಗೊಳ್ಳಬಹುದು! ಈಗ ನನ್ನಿಂದ ಕಂಡೋ ಕಾಣ್ದಂಗೋ ಅದೇನೋ ಪಡೆದಿರುವಿಯೋ ಗೊತ್ತಿಲ್ಲ ಮಾರಾಯ, ಎನ್ನುವಂತೆ ‘ಈ ಉಪನ್ಯಾಸಗಳಿಗೆ ಒಂದಷ್ಟು ಮುನ್ನುಡಿ ಬರೀ’ ಅಂತ ಮೊನ್ನೆ ಮುಂಜಾನೆ ಬೆಳಿಗ್ಗೆ ಬೆಳಿಗ್ಗೆಯೇ ಮೇಘ ಸಂದೇಶ ಚರವಾಣಿಯಲ್ಲಿ! ‘ಸರ್ ನೀವೋ ಹಿಮಾಲಯ ಶಿವ ಶಿಖರ! ನಾನೋ ಬರೀ ಧ್ಯಾನಸ್ಥ ಕಿಂಕರ!! ಸರಸ್ವತಿಯ ವಾಗ್ಝರಿಯ ನರ್ತನ ನೀವು! ಪದಗಳಿಗೆ ತಡಕಾಡುವ ತುಡುಗ ನಾನು!!’ ಎಂದು ಬಹಳ ಸದು ವಿನಯದಿ ಮಾರೋಲೆ ಟೈಪಿಸಿ ಟಂಕಿಸಿದೆ. ಕರೆಂಟು ಶಾಕ್ ಹೊಡೀತು ನೋಡಿ ಆಗ ಫಳ್ ಗುಟ್ಟುತ್ತಾ ‘ಅದೆಲ್ಲ ಇರ್ಲಿ. ಈಗ ವಿಚಾರ ಹೇಳಿ.’ ಮುಂಗಾರು ನಮ್ಮ ಕಡೆ ಈಗ ಬರ್ತಿದೆ. ಅದು ಇಷ್ಟು ರಭಸಕ್ಕೆ ಅಪ್ಪಳಿಸಿ ಬರುತ್ತೆ ಅಂತ ನಾ ಅಂದುಕೊಂಡಿರ್ಲಿಲ್ಲ. ಮುಂದಕ್ಕೆ ಮಾತಾಡಿದರೆ ಸಿಡಿಲು ಗ್ಯಾರಂಟಿ. ರಕ್ಷಣೆ ಪಡೆಯೋಕೆ ನಾನೇನು ಪರ್ವತಗಳ ಮರಚ್ಚು ಓರೆಯಲ್ಲಿಲ್ಲ, ನಿಡಿದಾದ ಬಯಲೋ ಬಯಲಲ್ಲಿ ಬಯಲಾಗಿ ಕೂತಿರುವೆ. ತಕ್ಷಣಕ್ಕೆ ತಣ್ಣಗಾದೆ. ಗುರುಗಳು ದೂರ್ವಾಸರಾಗೋಕೆ ಮುಂಚೆ ವಿಶ್ವಾಮಿತ್ರರನ್ನಾಗಿ ಮಾಡಿಕೋಬೇಕು. ಆಮೇಲೆ ಅವರೆ ಶಾಂತ ವಸಿಷ್ಟರಾಗಿ, ಅಲೌಕಿಕ ಮಂದಹಾಸದ ವ್ಯಾಸರಾಗಿ ಬದಲಾಗ್ತಾರೆ ಎಂಬ ದೂರದ ಅರಿವಿದ್ದ ನಾನು, ‘ನೀವು ಗುರುಗಳು, ಹೇಳಿದರೆ ಕೇಳುವ, ಅದ ಪಾಲಿಸುವ ವಿನಮ್ರತೆಯಷ್ಟೇ ನನ್ನಲ್ಲಿದೆ, ನೀವು ಏನು ಹೇಳಿದರೂ ಶ್ರದ್ಧೆಯಿಂದ ಮಾಡಲು ಬದ್ಧನಾಗಿರುವೆ. ನೀವು, ನಿಮ್ಮ ನುಡಿಗಡಣ ಜ್ಞಾನದ ನವ ಮಜಲಿನ ಮಹಲಿಗೆ, ನನ್ನ ಒಂದು ಕಿರು ಪುಷ್ಪ ಬಯಸಿದರೆ ಅದಕ್ಕಿಂತ ವರವೇನಿದೆ ನನಗೆ?!’ ಎಂದು ನಡುಗುವ ಕೈಗಳಿಂದಲೇ ಮನದೆಲ್ಲ ಸಮರ್ಪಣೆಯ ಒಪ್ಪಿಸಿದೆ. ಒಂದೇ ಒಂದು ‘ನಮಸ್ಕಾರ’ ತಥಾಸ್ತು ಎನ್ನುವಂತೆ ಇಮೋಜಿ ನನ್ನ ಕಣ್ ಕೋರೈಸಿತು. ಮರುಕ್ಷಣವೇ ಅವರೆಲ್ಲ ಉಪನ್ಯಾಸಗಳ ಹೊತ್ತಿಗೆಯು ನಭೋ ಮಂಡಲದಿಂದ ಪಾರಿಜಾತ ಸುಮದಂತೆ ತೇಲಿ ಬಂತು. ‘ಸರ್ ಎರಡೆ ದಿನ, ಬರೆದು ಕಳಿಸುವೆ’ ಎಂದು ಹೇಳಿದೆ. ನಾನೇ ಅವರಿದ್ದಲ್ಲಿಗೆ ಹೋಗುವ ಸಂದರ್ಭ ಇದುತನಕ ಒದಗಿ ಬಂದಿಲ್ಲ. ಈಗಂತು ಬಿಡಿ ಮಾರಿ ಕರೋನದ ತಡೆಗೋಡೆಯಿಂದ ಮನೇಲಿರೋ ಮಡದಿಯ ಮೋರೆಯನ್ನೇ ನೆನೆದಾಗ ನೋಡೋದು ಕಷ್ಟವಾಗಿರುವಾಗ ದೂರದ ಗುರುಗಳನ್ನ ಕಾಣಲು ತಡೆರಹಿತ ಬಸ್ಸೇರಿ ಹೋಗುವ ಧಾವಂತದ ಈ ಸುಮೂಹರ್ತದ ಸುಸಂದರ್ಭಕ್ಕೆ ಅವಕಾಶವೇ ಇಲ್ಲ.

                      ಎರಡು ದಿನ ಅಂದೆ ಅದೇ ಎಡವಟ್ಟಾಗಿದ್ದು. ಎರಡು ಮೂರು ಉಪನ್ಯಾಸಗಳ ಕಿರುಪುಸ್ತಕ ಬಿಡು ಅಂದುಕೊಂಡೆ, ಅಲ್ಲದೆ ಪಿಡಿಎಫ್‌ಲ್ಲಿ ಬಂದದ್ದು ೩೨೧ ಅಂತ ಇದ್ದ ಪುಟಗಳು,(ಮುದ್ರಣದ ಸಿದ್ಧತೆ ವೇಳೆಗೆ ವ್ಯತ್ಯಾಸ ಆಗಬಹುದು) ಗುರುಗಳ ಪುಸ್ತಕ ಬಂತು ಎಂಬ ಸಂತಸದ ಆನಂದದ ತೇಲುಗಣ್ಣಲ್ಲಿದ್ದ ನನಗೆ ಬರೀ ೩೨ ಕಾಣಬೇಕೆ?! ಅರವತ್ತಕ್ಕಲ್ಲ ನಂಗಿಲ್ಲಿ ಹರೆಯದಲ್ಲೇ ಅರಳು ಮರಳು! ಏನೇನುಕ್ಕೋ ಅಲ್ಲ ಅರಿವಿನ ಆತುರಕ್ಕಷ್ಟೇ. ಆಮೇಲೆ ಏನು ಹೇಳಲಿಲ್ಲ. ಮಾತು ತಪ್ಪಿದರೆ ಗುರುಗಳು ರುದ್ರನಾಗಿ ಮೂರನೇ ಕಣ್ಣ ತೆರೆದರೆ ಮುಗಿಯಿತು ಇರೋಬರೋ ಒಂದಷ್ಟು ಅರಿವು ಸುಟ್ಟು ಹೋಗುತ್ತೆ ಅಂತ ಎಲ್ಲ ಎಲ್ಲ ಕೆಲಸ ಬದಿಗೊತ್ತಿ ಹಳ್ಳಿಮನೆಯ ಅಟ್ಟದ ಮೇಲೆ ಚಾಪೆ ಹಾಕಿಕೊಂಡು ಪಟ್ಟಾಗಿ ಕೂತೆ. ಒಂದೊಂದೆ ಉಪನ್ಯಾಸಗಳ ಓದಲಿಲ್ಲ! ಅರವಿಂದ ಗುರುಗಳು ನನ್ನ ಮುಂದೆಯೇ ಪದ್ಮಾಸನದಲ್ಲಿ ಆಸೀನರಾಗಿದ್ದರು! ಒಮ್ಮೊಮ್ಮೆ ಅಗೋ ಆ ಮರದ ಖುರ್ಚಿಯಲ್ಲಿ ಕುಳಿತು; ಇನ್ನೊಮ್ಮೆ ಇತ್ತಕಡೆ ಬುಕ್ ರ‍್ಯಾಕ್‌ಗೆ ಒರಗಿಕೊಂಡು ಯಾವುದೋ ಬುಕ್‌ನಲ್ಲಿ ಕಣ್ ಹಾಯಿಸುತ್ತಾ; ಟಿಪ್ಪಣಿ ಬರೆಸುತ್ತಾ; ಮತ್ತೆ ನಡು ಗಂಬದ ಮುಂದೆ ನಿಂತು ಘನ ಗಂಭೀರವಾಗಿ ನನಗಿಲ್ಲಿ ಪಾಠ ಮಾಡುತ್ತಿದ್ದಾರೆ! ಹೀಗೆ ಓತಪ್ರೋತವಾಗಿ ಮುಂಜಾನೆಯೂ, ನಡು ಮಧ್ಯಾಹ್ನವು, ಮುಸ್ಸಂಜೆಯೂ, ವಾಕಿಂಗ್‌ನಲ್ಲು, ಶೌಚಾಚಮನದ ವೇಳೆಯಲ್ಲು, ಪೂಜಾ ಮಂದಿರದಲ್ಲು, ಊಟದ ಟೈಮಲ್ಲು, ಕುಂತಲ್ಲು ನಿಂತಲ್ಲು ನಡಿಗೆ ಓಟದಲ್ಲು ಅತ್ತಲಿತ್ತ ನೋಡದಂತೆ, ಆಯಾಸವೇ ಆಗದಂತೆ ತಮ್ಮ ಅಗಾಧ ಅರಿವಿನ ಸಂಪತ್ತಿನ ಅಮೃತದ ಧಾರೆಯನ್ನು ಮೊಗೆದು ಮೊಗೆದು ನನಗಿಲ್ಲಿ ಉಣ ಬಡಿಸಿದ್ದಾರೆ. ಅವರ ಜ್ಞಾನದ ಅಪರಿಮಿತ ಉತ್ಸಾಹಕ್ಕೆ ನಾನಿಲ್ಲಿ ಬೆರಗಾಗಿದ್ದೇನೆ. ಅಂತು ಎರಡೆಂದರೂ ದಿನಗಳು ಮೂರು ನಾಲ್ಕಾಯಿತು! ನಾನೇನು ಮಾಡುವುದು? ಅವರೇ ನಿಲ್ಲಿಸದೆ ಮೇಲಿಂದ ಮೇಲೆ ಉಪನ್ಯಾಸಗಳ ನೀಡುತ್ತಿದ್ದಾರೆ! ಗುರುವಿನ ಪದತಲದಿ ಕುಳಿತು ಕೇಳುವ, ಕಂಠಗತ ಮನೋಗತ ಹೃದ್ಗತ ಆತ್ಮಗತ ಮಾಡಿಕೊಳ್ಳುವುದಷ್ಟೇ ನನಗಿದ್ದ ಆಫ್ಶನ್ನು! ಅವರು ಇಂದು ಮುಂಜಾನೆ ನಸುಕಿನಲ್ಲಿ ತಮ್ಮ ಅರವಿಂದೋಪನಿಷತ್ತಿನ ಉಪನ್ಯಾಸಗಳ ಕಡೆಯ ಅಧ್ಯಾಯದ ಟಿಪ್ಪಣಿ ನೀಡಿ ಮಂಗಳ ಹೇಳಿ ಅದೃಶ್ಯರಾದರು. ಹೀಗೆ ಯಾವತ್ತೂ ಅವರ ಓದುವಾಗಲೂ ನಮ್ಮ ಜೊತೆಯೇ ಕೂತು ಆತು ಕಿವಿಹಿಡಿದು ಮೈದಡವಿ ಸಂಭಾಷಿಸಿದಂತಿರುತ್ತದೆ. ಇಲ್ಲಿನ ಒಂದೊಂದು ಉಪನ್ಯಾಸಗಳ ಓದುವಾಗಲು ಅದು ನಿಮ್ಮ ಅನುಭವಕ್ಕೆ ಬಾರದೆ ಇರಲಾರದು.

              ಅರವಿಂದ ಚೊಕ್ಕಾಡಿಯವರ ಮಾತಿನ ವೈಖರಿಯಲ್ಲಿ, ಬರಹದ ನಿಭಿಡತೆಯಲ್ಲಿ ಏನಿಲ್ಲ? ಅನ್ನೋದಕ್ಕಿಂತ, ಏನೇನೆಲ್ಲ ಇದೆಯಲ್ಲ! ಅನ್ನುವ ಸೋಜಿಗ ಮೂಡದಿರದು. ಅವರ ಬರಹದಲ್ಲಿ ಮೂಡದ ಯಾವುದೇ ಜ್ಞಾನ ಶಾಖೆಯ ಅಂಶವೂ ಇರದು. ವೇದಗಳಿಂದ ಪುರಾಣಗಳವರೆಗೆ, ಉಪನಿಷತ್ತುಗಳಿಂದ ಮಹಾಕಾವ್ಯಗಳವರೆಗೆ, ಶಾಸನಗಳಿಂದ ಜನಪದದವರೆಗೆ, ಪಂಪನಿಂದ ಕುವೆಂಪುವರೆಗೆ, ಕುಮಾರವ್ಯಾಸನಿಂದ ಕಾರಂತರವರೆಗೆ, ಹಳೆಗನ್ನಡದ ಛಂದೋ ಬದ್ಧತೆಯಿಂದ ಭಾವಗೀತೆಗಳವರೆಗೆ, ವಚನ ರಗಳೆಗಳಿಂದ ಹೊಸಗನ್ನಡದ ವಿವಿಧ ಕಾವ್ಯ ನಾಟಕ ಪ್ರಬಂಧಗಳವರೆಗೆ, ಕಾಳಿದಾಸನಿಂದ ಕಾರ್ನಾಡರವರೆಗೆ, ಶೂದ್ರಕನಿಂದ ಶ್ರೀರಂಗರವರೆಗೆ, ವ್ಯಾಸ ವಾಲ್ಮೀಕಿಯಿಂದ ಜಿನ ಬುದ್ಧರವರೆಗೆ, ಶಂಕರ ಬಸವರಿಂದ ವಿವೇಕ ರಮಣಶ್ರೀ ಅರವಿಂದರವರೆಗೆ, ಅತ್ತ ಕೆನಡಾದ ಮೂಲೆ ಅಲಸ್ಕಾದಿಂದ ಇತ್ತ ಆಸ್ಟ್ರೇಲಿಯಾದ ಬ್ಯಾರಿಯರ್ ರೀಫ್‌ವರೆಗೆ, ಉತ್ತರದ ರಷ್ಯಾದ ತುದಿಯಿಂದ ದಕ್ಷಿಣದ ಅಂಟಾರ್ಟಿಕದವರೆಗೆ, ಸಿಂಧೂವಿನ ಸನಾತನತೆಯಿಂದ ಇಂಕಾ ನಾಗರೀಕತೆವರೆಗೆ, ಈಜಿಫ್ಟನ ಗೂಢತೆಯಿಂದ ಪೆರುವಿನ ಪವಿತ್ರತೆಯವರೆಗೆ, ಮೆಕ್ಕಾದ ಮಹಮ್ಮದನಿಂದ ಜೆರೋಸಲೆಮ್ ಏಸು ಅಯೋಧ್ಯೆಯ ರಾಮನ ಭಕ್ತಿಯವರೆಗೆ, ಸಾಮ್ರಾಟ ಅಶೋಕನಿಂದ ಸೀಜರ್‌ವರೆಗೆ, ವಿಕ್ರಮಾದಿತ್ಯನಿಂದ ಶ್ರೀಕೃಷ್ಣದೇವರಾಯನವರೆಗೆ, ಅಕ್ಬರ್‌ನಿಂದ ಪುಲಿಕೇಶಿವರೆಗೆ, ಟೀಪುನಿಂದ ಕೊಡಗಿನ ಚಿಕ್ಕವೀರ ರಾಜೇಂದ್ರವರೆಗೆ, ಸಾಮಾನ್ಯನ ಕಡು ಬಡತನದಿಂದ ಮಧ್ಯಮ ವರ್ಗದ ಪಡಿಪಾಟಲುಗಳವರೆಗೆ, ರಾಜಕೀಯದ ಡಂಭಾಚಾರದಿಂದ ಅದನ್ನ ಅನಿವಾರ್ಯವಾಗಿ ನೈತಿಕವಾಗಿ ಸಶಕ್ತಗೊಳಿಸಬೇಕಾದ ಉಪಾಯಗಳವರೆಗೆ, ಅಧಿಕಾರಶಾಹಿಯ ಉಡದ ಹಿಡಿತದಿಂದ ಪ್ರಜಾಪ್ರಭುತ್ವದ ಮಹತ್ವದವರೆಗೆ, ರಾಜಕೀಯ ಸಾಮಾಜಿಕ ಹಣಕಾಸು ವ್ಯವಹಾರ ಶಿಕ್ಷಣ ಉದ್ಯೋಗ ಸ್ಪರ್ಧಾತ್ಮಕ ಸಾಮಾನ್ಯ ಜ್ಞಾನ ಏನನ್ನೇ ಕೇಳಿ ಅದನ್ನು ದಾಖಲೆಗಳ ಸಮೇತ ಸತ್ಯನಿಷ್ಟವಾಗಿ ಚಿಂತನಾತ್ಮಕವಾಗಿ ವೈಚಾರಿಕವಾಗಿ ಮಂಡಿಸಬಲ್ಲರು. ಶ್ರೋತೃ ಓದುಗರನ್ನು ಅರಿವಿನ ಕಡಲಿನಲ್ಲಿ ಏರುಪೇರಾಗದಂತೆ ಗುರಿ ಮುಟ್ಟಿಸಬಲ್ಲರು. ವೇದಿಕೆಯ ಮೇಲೆ ಉಪನ್ಯಾಸ ಅಥವಾ ಭಾಷಣಕ್ಕಿಳಿದಿರಲಿ, ಮಕ್ಕಳ ಮುಂದೆ ಪಾಠ ಮಾಡುತ್ತಿರಲಿ, ಗೆಳೆಯರ ಬಳಗದ ಚರ್ಚಾಕೂಟದಲ್ಲಿರಲಿ, ಜ್ಞಾನ ವಿಜ್ಞಾನ ತಂತ್ರಜ್ಞಾನದ ಸಂವಾದಗಳಲ್ಲಿರಲಿ, ಪುಸ್ತಕದ ಬಿಡುಗಡೆಯ ವಿಮರ್ಶೆಯಿರಲಿ, ಶೈಕ್ಷಣಿಕ ಸುಧಾರಣೆಯ ಅವಲೋಕನದಲ್ಲಿರಲಿ, ಎಲ್ಲೆಲ್ಲಿಯೂ ಹದವರಿತ ಸಂಯಮಪೂರಿತ ಮಾತು ಹಾಗೂ ಸಂವಹನ ಮಾಡುವಂತಹವರು. ಯಾವ ಪದ ವಾಕ್ಯವು ಅನುಚಿತ ಎನ್ನಿಸದಂತೆ ಎಚ್ಚರಿಕೆ ವಹಿಸಿ ಕೇಳುಗರ ಬುದ್ಧಿ ವಿಕಾಸಪಡಿಸಬಲ್ಲರು.

                    ಯಾರ ವಿಚಾರವೇ ಇರಲಿ ಅದು ಹಿರಿಯರಾಗಿರಲಿ, ಕಿರಿಯರಾಗಿರಲಿ, ವಿದ್ವಾಂಸರಾಗಿರಲಿ, ಸಾಮಾನ್ಯರಾಗಿರಲಿ, ಅರಿವಿನವರಾಗಿರಲಿ ಉರಿಯುವವರಾಗಿರಲಿ, ಕೇಳುಗರಾಗಿರಲಿ ಪ್ರಶ್ನಿಸುವವರಾಗಿರಲಿ, ರಾಜಕೀಯದವರಾಗಿರಲಿ ವ್ಯಾಪಾರದವರಾಗಿರಲಿ, ಇನ್ನಿತರೆ ಯಾವ ವೃತ್ತಿಯವರೇ ಆಗಿರಲಿ, ಫುಲ್ ಟೈಂ ಸಮಾಜ ಸುಧಾರಣಾವಾದಿಗಳಾಗಿರಲಿ, ಪಾರ್ಟ್ ಟೇಂ ಘೋಷಣೆ ಕೂಗುವ ಹೊಟ್ಟೆಪಾಡಿನವರಾಗಿರಲಿ, ವಿದ್ಯಾರ್ಥಿಗಳಾಗಿರಲಿ, ಮನೆಯ ಮಕ್ಕಳೇ ಆಗಿರಲಿ, ಬಂಧುಗಳೇ ಆಗಿರಲಿ, ಮುಖ ಪರಿಚಯದವರೆ ಆಗಿರಲಿ, ಎಲ್ಲರ ಮಾತುಗಳನ್ನು, ಭಾವನೆಗಳನ್ನು, ವಿಚಾರಗಳನ್ನು ಕೂಲಂಕುಶವಾಗಿ ಕೇಳುತ್ತಾರೆ, ಓದುತ್ತಾರೆ. ಆನಂತರವೇ ಪ್ರತಿಕ್ರಿಯಿಸುತ್ತಾರೆ. ಯಾರನ್ನೂ ಅವರವರ ಅರಿವು ಮತ್ತಿತರ ಸ್ಥಾನ ಮಾನಗಳ ಮೇಲೆ ಅಳೆದು ತೂಗಿ ಮಾತಾಡುವ ಜಾಯಮಾನದವರು ಅರವಿಂದರಲ್ಲ. ಹಿರಿಯರಾದ ನೀಲಾವರ ಸುರೇಂದ್ರ ಅಡಿಗರಿಗೆ, ಪೂವಪ್ಪ ಕಾಣಿಯೂರು, ಗಿರಿಧರ ಗೌಡರಿಗೆ ಕೊಡುವಷ್ಟೆ ಆದ್ಯತೆ ಹಾಗೂ ಮಹತ್ವವನ್ನು ಕಿರಿಯ ಗೆಳೆಯರಾದ ಲಕ್ಷ್ಮೀಶ ಗಬಲಕ್ಕ ಹಾಗು ಮಹೇಶ ಪುಚ್ಚಪ್ಪಾಡಿಯವರಿಗು ಕೊಡುತ್ತಾರೆ. ತಂದೆ ಸಮಾನರಾದ ಹೆಗ್ಡೆಯವರ ಒಂದು ಕರೆಗೆ ಆಟಿಡೊಂಜಿ ದಿನಕ್ಕೆ ಬಸದಿಯ ಕಾರ್ಯಕ್ರಮಕ್ಕೆ ಹೋಗಿ ಉಪನ್ಯಾಸ ನೀಡುವಂತೆಯೇ, ಪುಚ್ಚಪ್ಪಾಡಿಯನ್ನ ಯುವ ನಾಯಕ ಎಂದು ಹುರಿದುಂಬಿಸಲು ಮೊಗ್ರ ಶಾಲೆಯ ಗಾಂಧಿ ಚಿಂತನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಯುವಕರ ಪ್ರಶ್ನೆಗಳಿಗೆ ಸಮಾಧಾನಕರ ಉತ್ತರಗಳನ್ನು ನೀಡುತ್ತಾರೆ. ಮೂಡುಬಿದಿರೆಯ ಪಿಂಚಣಿದಾರರ ಸಂಘದ ಸಮ್ಮೇಳನದಲ್ಲಿ ನಿವೃತ್ತರಿಗೆ ಜೀವನೋತ್ಸಾಹ ತುಂಬಿ ನಕ್ಕು ನಗಿಸಿದಂತೆಯೇ ಸಹಪಾಠಿ ಚಿನ್ಮಯರಾಜ್‌ನ ವೈಕುಂಠ ಸಮಾರಾಧನೆ ಸ್ಮರಣೆಯಲ್ಲಿ ಭಾವಪರವಶರಾಗಿ ಬಾಲ್ಯ ನೆನೆಯುತ್ತಾ ಕಣ್ಣೀರಾಗುತ್ತಾರೆ. ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ಕೆಕೆ ಮೂವೀಸ್‌ನವರ ಕನ್ನಡ ಶಾಲೆ ಉಳಿಸುವಿಕೆಯಲ್ಲಿ ಕಾರ್ಯಯೋಜನೆಗಳ ಚರ್ಚಿಸಿದಂತೆ ಚಿತ್ರದುರ್ಗದ ಮುರುಘಾ ಮಠದ ಶರಣ ಸಂಸ್ಕೃತಿ ಉತ್ಸವದಲ್ಲಿ ಗಾಂಧಿವಾದದ ಪ್ರಸ್ತುತತೆ ಕುರಿತು ದಾಖಲಾರ್ಹವಾದಂತಹ ತಮ್ಮ ಉಪನ್ಯಾಸ ನೀಡುತ್ತಾರೆ. ತಮ್ಮ ಬಾಲ್ಯದ ಭಾವಕೋಶ ಶ್ರೀಮಂತಗೊಳಿಸಿದ ಸುಳ್ಯವನ್ನು ಸ್ಮರಿಸುತ್ತಾ ಚೊಕ್ಕಾಡಿಯ ಹೈಸ್ಕೂಲ್ ನೆನಪುಗಳ ಜೀಕಿನಲ್ಲಿ ತಮಗೆ ಕಲಿಸಿದ ಗುರುಗಳಾದ ತಿರುಮಲೇಶ್ವರ ಉಪಾಧ್ಯಾಯರು, ಸುಲೋಚನ ಉಪಾಧ್ಯಾಯರು, ನಾಯರ್ಕಲ್ಲು ಜನಾರ್ಧನ ಉಪಾಧ್ಯಾಯರು, ಓಣಿಯಡ್ಕ ಸುಬ್ರಾಯ ಉಪಾಧ್ಯಾಯರುಗಳ ಸ್ಮರಿಸಿ ಭಾವುಕರಾಗುತ್ತಾರೆ. ಈ ಶಾಲೆಯಲ್ಲೆ ತಮ್ಮ ಜೀವನ ಸಂಗಾತಿಯಾದ ಶ್ರೀಮತಿ ಪ್ರಮೀಳಾ ಚೊಕ್ಕಾಡಿಯವರು ದೊರೆತ ಹಾಗೂ ಅವರೊಂದಿಗಿನ ಸಾಂಗತ್ಯ ಯಾನವನ್ನು ನೆನೆಯುತ್ತಾರೆ,  ತಮ್ಮ ವೃತ್ತಿಯ ಜೊತೆಗಾರರ, ಪ್ರಾಂಶುಪಾಲರ ಶಾಲಾ ಕಾಲೇಜಿಗೆ ಭಾಷಣಕ್ಕೆ ಹೋದಂತೆಯೇ ಸರಳವಾಗಿ ರಾಜಕಾರಣಿಗಳಾದ ವಸಂತ ಬಂಗೇರರವರ ಹಾಗೂ ಕಲ್ಲಡ್ಕ ಪ್ರಭಾಕರ ಭಟ್‌ರವರ ಕಾಲೇಜುಗಳಿಗೂ ಹೋಗಿ ಉಪನ್ಯಾಸಗಳನ್ನು ನೀಡುತ್ತಾರೆ. ಕುವೆಂಪು, ಸುಬ್ರಾಯ ಚೊಕ್ಕಡಿಯವರ, ಎಚ್.ಎಸ್.ವೆಂಕಟೇಶಮೂರ್ತಿಗಳ ಅಧ್ಯಯನ ಮಾಡಿದಂತೆಯೇ ಗೆಳೆಯರಾದ ವಾಸುದೇವ ನಾಡಿಗರನ್ನು ಓದುತ್ತಾರೆ. ಪಂಪ ಅಲ್ಲಮರಂತೆಯೇ ಕೂಲಂಕುಶವಾಗಿ ಮುಷ್ತಾಕ್‌ರ ಪುಸ್ತಕವನ್ನು, ಪುಟ್ಟಗೌರಿ ಮಕ್ಕಳ ಹೊತ್ತಿಗೆಯನ್ನು ಓದುತ್ತಾರೆ. ನರಹರಿಯವರ ಶೈಕ್ಷಣಿಕ ಪುಸ್ತಕದಷ್ಟೇ ಪ್ರೀತಿಯಿಂದ ಸುದರ್ಶನರವರ ಹಸಿರು ಹಂಪಿಯ ಸಂಶೋಧನಾತ್ಮಕ ಕಥೆಗಳಿಗೆ ಸ್ಪಂದಿಸುತ್ತಾರೆ. ಗೌರವಾನ್ವಿತರಾದ ಅಂಡಾರು ಗುಣಗೋಪಾಲ ಹೆಗ್ಡೆಯವರ ಕಂಡಷ್ಟೇ ಪ್ರೀತಿಯಿಂದ ನಿನ್ನೆ ಮೊನ್ನೆಯ ಪರಿಚಿತ ಈ ಉಮೇಶನನ್ನು ಕಾಣುತ್ತಾರೆ.

                     ಪ್ರತಿ ಅಕ್ಷರಕ್ಷರದ ವಿವೇಕ ಉಳ್ಳವರು ಅರವಿಂದರು. ಎಲ್ಲಿಯೂ ಅನಗತ್ಯ ಮಾತಾಡುವವರೇ ಅಲ್ಲವೆಂದು ನೆನೆದೆ; ಬರೆಯುವವರಂತೂ ಮೊದಲೇ ಅಲ್ಲ. ಹಾಗಾಗಿ ಅವರ ಕೇಳುವುದು ಮತ್ತು ಓದುವುದು ಎಲ್ಲ ಸಹೃದಯರಿಗೂ ಉಪಯೋಗಾರ್ಹ. ಅಕ್ಷರಗಳಿಗೆ ಯಾವತ್ತೂ ಘನತೆ ಗೌರವ ನೀಡುತ್ತಾರೆ. ಎಲ್ಲರ ಬರಹಗಳಿಗೂ ಸಮಾನ ಪ್ರಾಧಾನ್ಯತೆಯ ನಿಡುತ್ತಾರೆ; ಅದು ಒಮ್ಮೆ ಅಷ್ಟೆ! ಗಟ್ಟಿಯಿತ್ತೋ, ಬರಹದಲ್ಲಿ ಸ್ವಂತ ಮೆದುಳಿತ್ತೋ ಮಾರ್ಗದರ್ಶಿಸುತ್ತಾರೆ. ಬುರುಡೆ ಅಂತ ಗೊತ್ತಾಯ್ತೋ ಎಲ್ಲಿಯದೋ ಕಾಫಿ ಎತ್ತಿದಾರೆ ಅಂತ ತಿಳಿತೋ ಜನ್ಮ ಜಾಲಾಡಿ ಮರ್ಯಾದೆ ತೆಗೆವ ಮಟ್ಟಕ್ಕೆ ಹೋಗೋದಿಲ್ಲ ಅವರು! ಅಷ್ಟೇ ನಯ ವಿನಯವಾಗಿ ವೈಯುಕ್ತಿಕವಾಗಿಯೇ ತಿದ್ದಿಕೊಳ್ಳಲು ಹೇಳ್ತಾರೆ. ಬಗ್ಗದೆ ಕಿರಿಕಿರಿ ಪಿರಿಪಿರಿ ಮಾಡಿದರೆ ಹೇರಾಪೇರಿ ಝಾಡಿಸಿ ತಾರಾಮಾರ ಮಾಡಿ ಬಿಸಾಕುತ್ತಾರೆ! ಅಕ್ಷರಕ್ಕೆ, ಜ್ಞಾನದ ಶಿಸ್ತಿಗೆ ಅವರು ಕೊಡುವ ಗೌರವವಿದು. ಸಮಯವೇ ಬಹಳ ಬೆಲೆಯುಳ್ಳದ್ದು; ಅರವಿಂದ ಚೊಕ್ಕಾಡಿಯವರ ಸಮಯವೆನ್ನುವುದು ಬಹಳ ಬಹಳ ಬೆಲೆಯುಳ್ಳದ್ದು. ದಿನಕ್ಕೆ ಎರಡು ಮೂರು ಕಡೆ ಉಪನ್ಯಾಸಗಳ ಕೊಟ್ಟು, ಸಂಜೆಗೊ ರಾತ್ರಿಗೋ ಮನೆ ತಲುಪಿ, ರಾತ್ರಿ ಮತ್ತೆ ಮಕ್ಕಳಿಗೆ ಪಾಠ ಮಾಡುವ ಶ್ರಮ ಜೀವಿಗಳು. ಬಹುಶಃ ಅನಿಸುತ್ತೆ ನಮ್ಮ ದಿನದ ಇಪ್ಪತ್ನಾಲ್ಕು ಗಂಟೆಗಳು ಅವರಿಗೆ ನಲವತ್ತೆಂಟು ಗಂಟೆಗಳಾಗಿ ಪರಿವರ್ತನೆ ಆಗಿದ್ದಾವೋ ಏನೋ! ಇಲ್ಲ ನಮಗೆ ಸಮಯ ಬೇಗ ಬೇಗ ಓಡಿ ಅರವಿಂದರಿಗೆ ನಿಧಾನ ಓಡುತ್ತಿದೆಯೋ ಏನೋ!! ಹಾಗಾಗಿ ಅವರ ಬಳಿ ಜೋಕ್ ಮಾಡಲು ಅಗತ್ಯ ಹುಷಾರಿ ಇರಬೇಕು. ಜೋಕ್ ಆದರೂ ಅವರಿಂದ ಅದು ಒಂದು ಶುದ್ಧ ಅರಿವಿನ ವಿಕಾಸವೇ ಆಗಿರುತ್ತದೆ!

                      ಆಧಾರ ರಹಿತವಾಗಿ ಮಹಾತ್ಮ ಗಾಂಧಿಯ ಬಗ್ಗೆಯೇ ಇರಲಿ, ನಾಡಿನಲ್ಲಿ ಉಳಿದಿರುವ ಹೆಸರಲ್ಲಿರುವ ಗಾಂಧಿಗಳ ಬಗ್ಗೆಯೇ ಇರಲಿ, ವೀರ ಸಾವರ್ಕರ್ ದೇಶಭಕ್ತಿ ಕುರಿತಂತೆಯೇ ಇರಲಿ, ನೆಹರೂರವರ  ಭಾರತ ವಿಕಾಸದ ಪರಿಕಲ್ಪನೆಯೇ ಇರಲಿ, ಭಗತ್ ಸಿಂಗ್ ಕ್ರಾಂತಿಯದ್ದೇ ಇರಲಿ, ಸುಭಾಷ್‌ಚಂದ್ರ ಭೋಸ್‌ರ ಸೈನಿಕ ಕಾರ್ಯಾಚರಣೆಯ ಯೋಜನೆಯದ್ದೇ ಇರಲಿ, ಅತಿರಂಜಿತವಾದ ಮಹಾತ್ಮರ ಬ್ರಹ್ಮಚರ್ಯವೇ ಇರಲಿ, ಅವರ ಸ್ತ್ರೀಯರ ಕುರಿತ ಹಠಮಾರಿ ಧೋರಣೆಗಳೇ ಇರಲಿ ಪರಾಂಬರಿಸದೆ ಮಾತಾಡಿದರೆ, ಬರೆದು ಬಿಟ್ಟರೆ ಖಂಡಿತ, ಖಂಡಿಸದೆ ಸಮಜಾಯಿಷಿ ನೀಡದೆ ಇರಲಾರರು. ಸತ್ಯ ಹುಡುಕದೆ, ತಿಳಿಯದೆ ಮಾತಾಡಲಾರರು. ಈ ನಿಟ್ಟಿನಲ್ಲಿ ಅವರು ಸದಾ ಸಂವಾದ ನಿರತರೇ ಹೊರತು ವಾಗ್ವಾದ ನಿಪುಣರಂತೂ ಅಲ್ಲವೇ ಅಲ್ಲ. ಬಹುಶಃ ಅವರ ಜೊತೆ ಸಾಕ್ಷಿ ಇಲ್ಲದೇ ಮಾತಾಡಬಹುದಾದ ಏಕೈಕ ವ್ಯಕ್ತಿಯೆಂದರೆ ಅವರ ಶ್ರೀಮತಿಯವರೊಬ್ಬರೇ ಇರಬಹುದೇನೋ! ತಾರ್ಕಿಕತೆಯಿಲ್ಲದೆ, ಬುದ್ಧಿಯ ಪರಿಪಕ್ವತೆಯ ಸುಸ್ಥಿತಿಯಲ್ಲಿಲ್ಲದೆ ಬಡಬಡಿಸಿದರೆ, ತಡವಿಲ್ಲದೆ ತಡಬಡಾಯಿಸುವಂತೆ ಅವರ ತಲೆಬುಡವಿಲ್ಲದ ಮಾತು ವಿಚಾರಗಳಿಗೆ ತಪರಾಖಿ ಕೊಡದೆ ಬಿಡುವವರಲ್ಲ.

           ಅರವಿಂದರ ವಾಗ್ಝರಿ ಅದು ಸರಸ್ವತಿಯ ವರದಾನವೇ ಸರಿಯೇನೋ? ಅರವಿಂದರು ಸ್ವಂತ ಶ್ರಮದಿಂದಲೇ ಅವರ ಅಕ್ಷರಲೋಕವನ್ನು ಕಟ್ಟಿಕೊಂಡಿದ್ದಾರೆ! ಅವರಿಗೆ ಸುಮ್ಮನೆ ಬ್ರಹ್ಮ ಪ್ರತ್ಯಕ್ಷನಾಗಿ ‘ಭಕ್ತ ನಿನಗೆ ಇನ್ನು ಹೆಚ್ಚಿನ ಜ್ಞಾನ ಪ್ರಾಪ್ತಿ ಮಾಡುವೆ!’ ಎಂದರು, ಇವರು ‘ಅದೆಲ್ಲ ನಂಗೆ ಬೇಕಿಲ್ಲ ಕಾಣಿ, ಗೊತ್ತುಂಟು ನಾ ಪಡ್ಕೋತೇನೆ. ನಿಮಗೇನಾದರೂ ಸಮಸ್ಯೆ ಉಂಟೋ?’ ಎಂದು ಆ ಬ್ರಹ್ಮನಿಗೇ ಲೋಕದಿ ಅವ ಮಾಡಬೇಕಿರುವ ಕರ್ಮಗಳ ಭಾಷಣ ಮಾಡುವಂತಹವರು! ಒಮ್ಮೆ ಇವರ ಹಿರಿಯರು, ಇವರನ್ನು ಬಹುವಾಗಿ ಸಾಹಿತ್ಯ ಮತ್ತಿತರೆ ವೇದಿಕೆಗಳ ಮೂಲಕ ಬೆಳೆಸಲು ಶ್ರಮಿಸಿದ ಅಂಡಾರು ಗುಣಗೋಪಾಲ ಹೆಗ್ಡೆಯವರುಗಳ ಜೊತೆ ಫೋನ್‌ನಲ್ಲಿ ಮಾತಾಡುವಾಗ ‘ಅರವಿಂದರು ಬಹಳ ಓದುಗರು, ಉತ್ತಮ ಪುಸ್ತಕ ಇದೆ ಎಂದರೆ ಅದೆಲ್ಲೆ ಇರಲಿ ತರಿಸಿಕೊಂಡು, ತಂದೋ ಓದದೇ ಇರಲಾರರು. ಅವರ ಓದಿನ ಕುತೂಹಲ ಅಪಾರವಾದುದು. ನಾನು ಅವರನ್ನ ಸೇವೆಗೆ ಸೇರಿಸಿಕೊಂಡ ಮೊದಲಿಂದಲು ನೋಡಿದ್ದೇನಲ್ಲ; ಕ್ಷಣ ಮಾತ್ರವನ್ನು ಬಿಡುವೆಂದು, ತಮ್ಮ ಆಯಾಸ ಪರಿಹಾರಾರ್ಥವೆಂದು, ಕಳೆದವರಲ್ಲ. ವ್ಯರ್ಥ ಮನರಂಜನೆಗೆ ಮನ ಮಾಡಿದವರಲ್ಲ. ಓದು ಬರಹ ಚಿಂತನ ಮಂಥನವೇ ಅವರಿಗೆ ವಿರಾಮ ಕಳೆವ ಸಂಗಾತಿಗಳಾಗಿವೆ.’ ಎಂದು ಹೇಳಿದ್ದು ನಾನೆಂದು ಮರೆಯೋಲ್ಲ. ಬಹಳ ಶ್ರದ್ಧೆ ಶ್ರಮದಿಂದ ಅವರು ತಮ್ಮ ಅರಿವನ್ನು ಬೆಳೆಸಿಕೊಳ್ಳುತ್ತಾ ಬಂದಿರುತ್ತಾರೆ. ಈ ಮಟ್ಟದ ಶ್ರೇಷ್ಠ ಉಪನ್ಯಾಸಗಳ ನೀಡುವ ಮೂಲಕ ಕರ್ನಾಟಕದ ಪ್ರತಿ ಜಿಲ್ಲೆ ತಾಲ್ಲೋಕಿನಲ್ಲು ಅಭಿಮಾನಿ ಓದುಗರನ್ನು, ಕೇಳುಗರನ್ನು ಹೊಂದಿದ್ದಾರೆ ಎಂದರೆ ಅದಕ್ಕೆ ಕಾರಣ ಅವರ ಅನವರತ ಅಧ್ಯಯನ ಹಾಗೂ ಬರವಣಿಗೆ. ಇವರ ಮಾತು ಕೇಳುವುದು ಮತ್ತು ಬರಹಗಳ ಓದುವುದೇ ನೆತ್ತಿಗೆ ಅರಿವಿನ ಬುತ್ತಿ. ಹೃದಯಕ್ಕೆ ಸಮಾಧಾನದ ಶಕ್ತಿ. ಈ ಹಿಂದೆ ಇದ್ದಂತಹ ಕನ್ನಡದ ತರಾಸು, ಅನಕೃ, ವೈಎನ್ಕೆ, ಅನಂತಮೂರ್ತಿ, ಲಂಕೇಶ್, ಬನ್ನಂಜೆಯವರುಗಳಂತೆ ಮಾತಿನ ಜೊತೆ ಜೊತೆ ವ್ಯಕ್ತಿತ್ವ ಅರಳಿಸುವ ಕಿರು ಕಥೆ, ಉದ್ಘಾರಗಳು ಹಾಗೂ ಸೂಕ್ತ ನಾನಾ ಭಾಷೆಯ ಗಾದೆ ಪಡೆನುಡಿಗಳ ಉದಾಹರಿಸುತ್ತಾ ಶ್ರೋತೃಗಳಿಗೆ ಜ್ಞಾನದ ಸುಗಂಧ ಪಸರಿಸಬಲ್ಲರು. ಆಶಿಷ್ ನಂದಿ, ರಾಜೇಂದ್ರ ಚೆನ್ನಿ, ಪುರುಷೋತ್ತಮ ಬಿಳಿಮಲೆ, ರಹಮತ್ ತರೀಕೆರೆ, ರಂಜಾನ್ ದರ್ಗಾ, ಬಿ.ಎಮ್.ಹನೀಫ್,  ನಟರಾಜ ಹುಳಿಯಾರರಂತೆ, ಒಂದು ಸಾಮಾನ್ಯ ವಿಷಯದಲ್ಲಿಯೂ ಅಪೂರ್ವವಾದುದನ್ನು ಕಂಡು ಅದನ್ನು ಎಲ್ಲರಿಗೂ ಅಗತ್ಯವಾಗಿಸುವ ರೀತಿಯಲ್ಲಿ ಚಿಂತಿಸಬಲ್ಲವರು ಮತ್ತು ಮಾತು, ಬರವಣಿಗೆ ಮೂಲಕ ದಾಟಿಸಬಲ್ಲವರು. ಒಂದು ಹುಲ್ಲುಕಡ್ಡಿಯನ್ನು ವ್ಯರ್ಥ ಎಂದು ಭಾವಿಸದ ಆಚಾರ್ಯ ವಿನೋಭಾ, ಜೆ.ಕೃಷ್ಣಮೂರ್ತಿ, ಗುರು ನಾರಾಯಣರಂತೆ ಎಲ್ಲ ಜನವರ್ಗದವರನ್ನು ಅರವಿಂದರು ತಮ್ಮ ಉಪನ್ಯಾಸಗಳಿಂದ ಪ್ರಭಾವಿಸುತ್ತಿರುವರು.

                       ಗಾಂಧೀಜಿಯವರ ಬಗ್ಗೆ ಮಾತಾಡುವಾಗ ಬರೆಯುವಾಗ ಅರವಿಂದರಂತು ಪರಕಾಯ ಪ್ರವೇಶ ಮಾಡಿಬಿಡುತ್ತಾರೆ. ಗಾಂಧಿಯವರನ್ನ ಆವಾಹಿಸಿಕೊಂಡು ಬಿಡುತ್ತಾರೆ. ಈ ನಲವತ್ತೊಂದು ಉಪನ್ಯಾಸಗಳ ಮಾಲಿಕೆಯಲ್ಲಿ ಹತ್ತರಷ್ಟು ಉಪನ್ಯಾಸಗಳು ಮಹಾತ್ಮರ ಕುರಿತಂತೆಯೇ ಇವೆ. ಆದರೆ ಎಲ್ಲಿಯೂ ಅವರು ಒಂದು ಕಡೆಯ ವಿಷಯ ಇನ್ನೊಂದು ಕಡೆ ಮಂಡನೆಗೆ ಬಳಸಿಕೊಳ್ಳುವುದಿಲ್ಲ. ಸತ್ಯ ಅಹಿಂಸೆ ಸತ್ಯಾಗ್ರಹ ಎಂಬ ಗಾಂಧೀಜಿಯವರ ತಾತ್ವಿಕ ಹಾಗು ಸದಾ ಪ್ರಯೋಗಶೀಲವಾದಂತ ವಿಚಾರಗಳ ಕುರಿತು ಮಾತು ಆರಂಭಿಸಿದರು ಅವರುಗಳು ಅದಕ್ಕೆ ಕೊಡುವ ಮಹಾತ್ಮರ ಜೀವನ ಉದಾಹರಣೆಗಳು ಭಿನ್ನ ವಿಭಿನ್ನ. ಅದಕ್ಕೆ ಗಾಂಧೀಜಿಯವರ ೭೯ ವರ್ಷಗಳ ಜೀವನದ ೫೩ ಸಾವಿರಕ್ಕು ಮಿಕ್ಕಿದ ಸ್ವಂತ ಬರಹಗಳ ಅಧ್ಯಯನವನ್ನು ವ್ಯಾಪಕವಾಗಿ ಧೇನಿಸುತ್ತಾರೆ. ಇನ್ನು ನಾನು ಗಾಂಧಿಯ ಓದಬೇಕು ಸಾಗರದಂತಹ ಅವರಲ್ಲಿ ನಾನು ತಿಳಿದಿರುವುದು ಒಂದು ಹನಿ ಮಾತ್ರವೆಂದು ವಿನಯ ತೋರುತ್ತಾರೆ. ಗಾಂಧಿಯ ಉಪನ್ಯಾಸಗಳು ಈ ಕೃತಿಯಲ್ಲಿ ವಿಶೇಷ ಮೌಲಿಕ ಸ್ಥಾನ ಗಳಿಸಿಕೊಳ್ಳುತ್ತವೆ.

                       ಮಾತಿನಂತೆ ಬರಹದಲ್ಲು ರಾಜಿ ಆಗುವವರಲ್ಲ ಅರವಿಂದರು. ಲೋಕಲ್ ಪೇಪರ್ ಇರಲಿ ಸ್ಟೇಟ್ ಪೇಪರ್ ಇರಲಿ ಅಷ್ಟೇ ನಿಷ್ಠೆ ಕಾಳಜಿಯಿಂದಲೇ ಯಾವುದೇ ಪದಬಳಕೆ ಮತ್ತು ಭಾಷೆಯಲ್ಲಿ ರಾಜಿಮಾಡಿಕೊಳ್ಳದೆ ಬರೆಯುತ್ತಾರೆ. ಪ್ರಜಾವಾಣಿಗೆ ಬರೆದಷ್ಟೇ ಶ್ರದ್ಧೆಯಿಂದ ಕರಾವಳಿಯ ಜೈ ಕನ್ನಡಮ್ಮನಿಗೆ ಬರೆಯುತ್ತಾರೆ. ಅಲ್ಲದೇ ಪತ್ರಿಕೆಯ ದಿಕ್ಕುದೆಸೆಗಳನ್ನು ಸಿದ್ದಾಂತಗಳನ್ನು ಜನಪರ ಪ್ರಜಾಸತ್ತಾತ್ಮಕ ಕಾಳಜಿ ಇರದಿದ್ದರೆ ಯಾವ ಮುಲಾಜಿಲ್ಲದೆ ಅದೇ ಪತ್ರಿಕೆಗೆ ಬರೆದು ಪ್ರತಿಭಟನೆ ದಾಖಲಿಸುತ್ತಾರೆ. ಇವರ ಬರಹಗಳಿಗಾಗಿ ಪತ್ರಿಕೆಗಳು ಮುಂಚಿತವಾಗಿಯೇ ಬೇಡಿಕೆ ಇಡುತ್ತವೆ ಎಂದರೆ ಅವರ ಬರಹದ ಪ್ರಖರತೆ ಹಾಗು ಸತ್ಯಸಂಧತೆಯನ್ನು ನಾವು ಅರ್ಥಮಾಡಿಕೊಳ್ಳಬಹುದು. ಅರವಿಂದರು ಸುಮಧುರ ಸುಗಂಧಿತ ಅರಳಿದ ಹೂ ಇದ್ದಂತೆ ಅರಿವಿನ ಆಕಾಂಕ್ಷಿಗಳಿಗೆ! ದೂರದಿಂದ ನೋಡಿದರೆ ಸುಂದರ ಹೂಗುಚ್ಚದಂತೆ ಕಾಣುವ ಇವರು ಬಹು ವಿಚಾರಗಳ ಗಣಿ. ಇವರ ನೋಡಿ ಹೋದರೆ, ಹಾಗೆ ಹೋದವರಿಗೇನೂ ಲಾಭವಿಲ್ಲ. ಇವರಿಗೂ ನಷ್ಟವಿಲ್ಲ. ದುಂಬಿ ಜೇನ್ನೊಣಗಳಂತೆ ಬಳಿ ಸಮೀಪಿಸಿ ತುಸು ಜ್ಞಾನ ಸೌರಭ ಹೀಂಟಿಕೊಂಡು ಹೋದರೆ ಅದು ಒಳಿತೆ. ಆದರೆ ಇನ್ನು ಹೂವಿನ ಮಕರಂದ ಹೀರುತ್ತಾ ಹೀರುತ್ತಾ ಒಳ ಹೋದರೆ ಹೂವಿನಲ್ಲಿ ತುಂಬಾ ಸವಿಜೇನು ದೊರೆಯುವಂತೆ ಅರವಿಂದರ ಸಾತತ್ಯದಲ್ಲಿ ನಿರಂತರ ಇದ್ದರೆ ಜ್ಞಾನನಿಧಿಯಾಗುವುದರಲ್ಲಿ ಸಂಶಯವೇ ಇಲ್ಲ. ಅವರ ಸಂಪರ್ಕಕ್ಕೆ ಬಂದು ನಂತರ ಬಿಟ್ಟವ ಕೆಟ್ಟ, ಅವರ ಹಿಡುಕೊಂಡವ ಅರಿವಿನ ನೆಲೆ ಮುಟ್ಟುವ! ಅರಿವಿನ ಜೇನ ಸವಿಯಲು ಬಹು ತಾಳ್ಮೆಯಿಂದ ಅವರನ್ನ ಅವಲೋಕಿಸುತ್ತಾ, ಓದುತ್ತಾ, ಕೇಳುತ್ತಾ ಇರಬೇಕು. ಇದೊಂತರ ಗುರು ಶಿಷ್ಯ ಸಂಬಂಧದಂತೆ. ಬಸವಣ್ಣನವರ ಶರಣಸತಿ ಲಿಂಗಪತಿ ಭಾವದಂತೆ, ಅಕ್ಕನವರ ಮಲ್ಲಿಕಾರ್ಜುನನ ಹುಡುಕಾಟದಂತೆ!

                              ಅವರನ್ನು ಮಾತಾಡಿಸಲು ಸಾಮಾನ್ಯವಾಗಿ ಸಿದ್ಧತೆ ಬೇಕಿಲ್ಲ. ಪರಿಚಿತರಾದರೆ ಅವರೇ ಮೊದಲು ‘ನಮಸ್ತೆ’ ಅಂತಾರೆ. ಆದರೆ ಅವರ ಬಳಿ ಯಾವುದೇ ವಿಚಾರದಲ್ಲಿ ಸಂವಾದಿಸುವಾಗ ಮಾತ್ರ ಸಿದ್ಧತೆ ಇರಲೇಬೇಕು. ನೀವು ಯಾವುದೇ ಆಕಾಂಕ್ಷೆಯನ್ನು ಹೊಂದಿರಿ; ಅವರ ಓದು ಚಿಂತನ ಮಂಥನಕ್ಕೆ ಏನೋ ಪ್ರಶ್ನೆ ಮಾಡುವ ಅಂತ ಮಾಡಿದಿರಿ ಅಲ್ಲಿಗೆ ಮುಗೀತು ನೀವು ಬಿಟ್ಟರು ಅವರು ನಿಮ್ಮ ಬಿಡೋದಿಲ್ಲ. ವಿಕ್ರಮಾದಿತ್ಯ ಬೇತಾಳನಂತೆ! ಹುಂ, ಅದು ಅವರ ವೈಚಾರಿಕ ನಿಷ್ಟೆ. ಅವರನ್ನ ಸುಮ್ಮನೇ ಗಮನಿಸುತ್ತಾ ಆಲಿಸುತ್ತಾ ಇದ್ದರೆ ಸಾಕು ಗೊತ್ತಿಲ್ಲದೇ ಅರಿವಿನ ವೈಭವ ನಿಮ್ಮನ್ನು ಆವರಿಸಿಕೊಳ್ಳುತ್ತಾ ಹೋಗುತ್ತದೆ. ಸಂತಸದ ಬೆಳಕು ನಿಮ್ಮಲ್ಲಿ ಮೂಡಲು ಮೊದಲಾಗುತ್ತದೆ. ನಿಜವಾದ ಜ್ಞಾನದ ಆರಾಧಕರಿಗೆ ಬದುಕಿನ ಉತ್ಸಾಹಿಗಳಿಗೆ ಇವರು ಒಂದು ಕೈಮರ, ಕೈದೀವಿಗೆ ಇದ್ದಂತೆ. ನಿನ್ನರಿವೆಂಬುದು ಜ್ಞಾನರತ್ನ ಕಾಣಾ ರಾಮನಾಥ ಎಂಬ ದೇವರ ದಾಸೀಮಯ್ಯನವರಂತೆ ಸದಾ ಜಗದ ಅರಿವನ್ನ ತಿಳಿಯಲು ಹಾಗೂ ತಿಳಿಸಲು ಹಂಬಲಿಸುವ ನಮ್ಮ ನಡುವಿರುವ ಏಕೈಕ ವ್ಯಕ್ತಿಯೆಂದರೆ ಅದು ಅರವಿಂದರು. ಇವರು ಶಿವರಾಮ ಕಾರಂತರಂತೆ ಒಂದು ವಿಶ್ವವಿದ್ಯಾನಿಲಯ ಮಾಡುವಷ್ಟು ಕೆಲಸ ಮಾಡುವ ಸನ್ನಾಹದಲ್ಲಿದ್ದಾರೆ. ಅಷ್ಟು ಜ್ಞಾನ ಸಂಪನ್ಮೂಲವು ಅವರಲ್ಲಿದೆ. ಪ್ರಸ್ತುತ ನಮಗೆಲ್ಲ ಅವರು ನಡೆದಾಡುವ ವಿಶ್ವಕೋಶವೇ ಆಗಿದ್ದಾರೆ.

                             ಇಲ್ಲಿನ ಉಪನ್ಯಾಸಗಳು ನೊಂದವರಿಗೆ ಉಲ್ಲಾಸ ತುಂಬುವ ಚೇತನದಾಯಿಗಳು, ಚಿಂತಕರಿಗೆ ದರ್ಶನ ಶಾಸ್ತ್ರಗಳು, ಜೀವನದ ಕುತೂಹಲಿಗಳಿಗೆ ಸೊಗಸಿನ ವಿವೇಕದ ದಾರಿಗಳು, ವ್ಯಾವಹಾರಿಕರಿಗೆ ಶಿಸ್ತಿನ ಪಾಠಗಳು, ವಿದ್ಯಾರ್ಥಿಗಳಿಗೆ ಅಕ್ಷಯ ಪಾತ್ರೆಗಳು, ಪೋಷಕರುಗಳಿಗೆ ಶಿಕ್ಷಕರುಗಳಿಗೆ ತಮ್ಮ ಬುದ್ಧಿ ಕೌಶಲಗಳ ಸಾಣೆ ಹಿಡಿದುಕೊಳ್ಳುವ ಪರುಷ ಮಣಿಗಳು. ನಿರಾಸೆ ಹೊಂದಿದವರ ಜಂಜಡ ಕ್ಲೇಷಗಳ ಕಳೆದು ಆತ್ಮಸ್ಥೆöÊರ್ಯ ತುಂಬುವ ಸ್ಪೂರ್ತಿಯ ಚುಂಬಕ ಶಕ್ತಿಗಳು, ದುಃಖ ಮಾನಸಿಕ ವೇದನೆಯವರಿಗೆ ಜೀವನೋತ್ಸಾಹ ತುಂಬುವ ಸಿದ್ಧೌಷಧಗಳು. ಅಸಂತುಷ್ಟ ಬದುಕಿಗೆ ವಿವೇಕ ಚೂಡಾಮಣಿಗಳು. ಹೀಗೆ ಅವರ ಎಲ್ಲ ಉಪನ್ಯಾಸಗಳು ಬಹು ಮೇಧಾವಿಗಳಿಗೂ, ತಾತ್ವಿಕರಿಗೂ, ತಾರ್ಕಿಕರಿಗೂ, ಸಾತ್ವಿಕರಿಗೂ, ಸಾಮಾನ್ಯರಿಗೂ, ವಿದ್ಯಾರ್ಥಿಗಳಿಗೂ, ಸ್ಪರ್ಧಾರ್ಥಿಗಳಿಗೂ, ಸಾಧಕರಿಗು ದಾರಿ ದೀಪವಾಗಿವೆ. ಸಹೃದಯ ಕೇಳುಗರೆಲ್ಲರಿಗು ಅರವಿಂದರ ಮಾತುಗಳು ಗುರಿಯನ್ನು ನೀಡುತ್ತವೆ; ಅಷ್ಟೇ ಅಲ್ಲ ಆ ಗುರಿಗಳ ಹಿಡಿಯಲಿಕ್ಕೆ ದಾರಿಯನ್ನು ತೋರುತ್ತವೆ. ಜೀವನದ ಓರೆಕೋರೆಗಳ ತಿದ್ದಿ ಬದುಕಿನ ಮೌಲ್ಯಗಳನ್ನು ಹೆಚ್ಚಿಸಿ ಘನತೆ ಗೌರವದ ಬಾಳಿಗೆ ಸನ್ನದ್ಧರನ್ನಾಗಿಸುತ್ತವೆ.

            ಇವರುಗಳ ಕ್ರಿಯಾಶೀಲತೆ ಶೋಧಿಸಿದಷ್ಟು ವಿಸ್ತರಿಸುವ ಮಹಾಸಾಗರ. ಸಾಹಿತ್ಯ ಅಕಾಡೆಮಿ ಪ್ರಶಸ್ತಿಯಿಂದ ಪುರಸ್ಕೃತರಾಗಿರುವ ಶ್ರೀಯುತರು ತಂದೆಯವರ ಕುರಿತು ‘ಇಲ್ಲದ ತೀರದಲ್ಲಿ’ ಎಂಬ ಜೀವನ ಚರಿತ್ರೆ, ಹರ್ಡೇಕರ ಮಂಜಪ್ಪರ ಕುರಿತು, ತ್ರಿಸ್ತಾವೋ ಬ್ರಗಾಂಝ ಕುನಃ ಬಗ್ಗೆ, ಕೊಡಗಿನ ಸ್ವಾತಂತ್ರö್ಯ ಬಂಡಾಯದ ಬಗ್ಗೆಯೂ ಕೃತಿಗಳನ್ನು ರಚಿಸಿದ್ದಾರೆ. ಮಕ್ಕಳಿಗಾಗಿ ಶಿಸ್ತಿನ ಜೀವನ ಕೌಶಲಗಳು, ಜೀವನ ವಿಜ್ಞಾನ, ಮನೋ ವಿಕಾಸದ, ಉಪನಿಷತ್ತಿನ ಪಾತ್ರಗಳ ಕುರಿತಂತೆಯು ಬರೆಯುತ್ತಾ ಸಾಹಿತ್ಯ, ಸಂಪಾದನೆ, ವೈಚಾರಿಕ ನೆಲೆಗಟ್ಟಿನ ಅತ್ಯಮೂಲ್ಯವಾದ ನಲವತ್ತಕ್ಕೂ ಹೆಚ್ಚಿನ ಕೃತಿಗಳನ್ನು ರಚಿಸಿ ಸಾರಸ್ವತ ಕನ್ನಡ ಲೋಕದ ಓದುಗರಿಂದ ಮೆಚ್ಚುಗೆ ಪಡೆದಿದ್ದಾರೆ.

                   ಇನ್ನು ಕಡೆಯದಾಗಿ ಹೇಳದೇ ಇರಲಾರೆ; ಅರವಿಂದ ಚೊಕ್ಕಾಡಿಯವರ ನಗು. ಅದು ಅಖಿಲ ಕರ್ನಾಟಕದ ನಗು! ಅದು ಅವರದೇ ಮೂಡುಬಿದಿರೆಯ, ದಕ್ಷಿಣ ಕರ್ನಾಟಕದ ಬ್ರಾಂಡೆಡ್ ನಗು! ಅರವಿಂದರೆಂದರೆ ಸದಾ ಅರಳಿದ ಮಲ್ಲಿಗೆಯಂತಹ ನಗುವೇ ಕಣ್ಮುಂದೆ ಬಂದು ನಿಲ್ಲುತ್ತದೆ. ಅವರ ನಗುವಿನಂತೆ ಅವರ ಎಲ್ಲಾ ಉಪನ್ಯಾಸಗಳು ಅಖಿಲ ನಾಡಿನಾದ್ಯಂತ ಮತ್ತಷ್ಟು ಓದುಗರ ಹೃನ್ಮನಗಳನ್ನು ಆವರಿಸಿಕೊಳ್ಳುವುದರಲ್ಲಿ ಸಂಶಯವಿಲ್ಲ. ಇಲ್ಲಿನ ಎಲ್ಲಾ ಉಪನ್ಯಾಸಗಳು ಓದಲು ಶುರು ಹಚ್ಚಿದರೆ ತಾವಾಗಿಯೇ ಓದಿಸಿಕೊಳ್ಳುತ್ತವೆ. ಅದು ಇವುಗಳ ಹಿರಿಮೆ. ಅರವಿಂದ ಚೊಕ್ಕಾಡಿಯವರ ಲೇಖನಿಯ ಗರಿಮೆ.

ವೈಶಾಖ ನವಮಿ

೨೧.೦೫.೨೦೨೧

ಟಿ.ಪಿ.ಉಮೇಶ್

ತುಪ್ಪದಹಳ್ಳಿ, ಹೊಳಲ್ಕೆರೆ

9008461178

@@@@@@@@@@@@@@@@@@@@@@@@

ಎಲ್ಲರಿಗೂ ಒಂದು ಕಾಲ ಬಂದೇ ಬರುತ್ತದೆ

ಈ ಬದುಕಿನ ಆಗುಹೋಗುಗಳೆಲ್ಲವೂ ಒಂದು ಗೊತ್ತಾದ ವಿಧಿ ವಿಧಾನದಂತೆಯೇ ನಡೆಯುತ್ತಿರುತ್ತವೆ. ಇವುಗಳಿಗೆ ಯಾವುದೇ ಅಡೆತಡೆಗಳು ಬಾಧಿಸಲಾರವು. ಕಾಲಚಕ್ರ ಉರುಳಿದಂತೆ ಒಂದು ಋತುವಿನ ನಂತರ ಮತ್ತೊಂದು, ಮಗದೊಂದು ಹೀಗೆ ಎಲ್ಲವೂ ಸುಲಲಿತವಾಗಿ ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ವಸ್ತುಸ್ಥಿತಿ ಹೀಗಿದ್ದರೂ ಮನುಷ್ಯನ ಹುಂಬುತನ, ಕೊಬ್ಬುತನಕ್ಕೆ ಕಡಿವಾಣವೇ ಇಲ್ಲದಂತಾಗಿದ್ದುದನ್ನು ನಾವು ಕಾಣುತ್ತಿದ್ದೇವೆ. ತಮ್ಮಲ್ಲಿರುವ ಹಣ, ಐಶ್ವರ್ಯ, ಶಕ್ತಿ, ಅಧಿಕಾರ ಮುಂತಾದವುಗಳನ್ನೇ ನಂಬಿ ನೆಲಕಚ್ಚಿ ಮಣ್ಣಾದವರ ಅನೇಕ ಉದಾಹರಣೆಗಳೇ ನಮ್ಮ ಕಣ್ಣೆದುರಿಗಿದ್ದರೂ ತಮ್ಮಲ್ಲಿಯ ಹಠಮಾರಿತನವನ್ನು ಮಾತ್ರ ಬಿಡದವರನ್ನು ನಾವು ಕಾಣುತ್ತೇವೆ. ಇಂಥವರ ಅಟ್ಟಹಾಸ, ಸೊಕ್ಕಿಗೆ ಒಂದು ದಿನ ಕೊನೆ ಇದ್ದೇ ಇದ್ದರೂ ಅದನ್ನರಿಯದೆ ವ್ಯರ್ಥ ಹುಚ್ಚು ಸಾಹಸಕ್ಕಿಳಿಯುತ್ತಾರೆ. ಇಂಥವರಿಗೆ ಕಾಲವೇ (ಸಮಯವೇ) ಸೂಕ್ತವಾದ ಪಾಠವನ್ನು ಕಲಿಸುತ್ತದೆ. ಈ ಕುರಿತ ಕೆಲವು ಉದಾಹರಣೆಗಳನ್ನು ಗಮನಿಸೋಣ.

ಉದಾ : 1. ರಾವಣನಂತಹ ರಾಕ್ಷಸನಿಲ್ಲ, ಕಂಸನಂತಹ ನೀಚನಿಲ್ಲವೆನ್ನುವುದು ನಮ್ಮೆಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ಕಂಸ ಒಬ್ಬ ಮಹಾ ಬಲಶಾಲಿ ರಾಜನಾಗಿದ್ದ. ಆತನ ಮರಣವು ಆತನ ತಂಗಿಯಾದ ದೇವಕಿಯ ಎಂಟನೆ ಪುತ್ರನಿಂದಲೇ ಸಂಭವಿಸುತ್ತದೆಯೆಂದು ಆಕಾಶವಾಣಿಯಿಂದ ಮೂಡಿ ಬಂದ ವಾರ್ತೆ ಆತನನ್ನು ತಲ್ಲಣಗೊಳಿಸಿ ಭಯಭೀತನಾಗಿಸುತ್ತದೆ. ಹತಾಶನಾದ ಕಂಸ ತನ್ನ ತಂಗಿಯನ್ನು ಭಾವನ ಸಮೇತ ಜೈಲಿಗೆ ತಳ್ಳುತ್ತಾನೆ. ಜೈಲಿನಲ್ಲಿ ಜನಿಸುವ ಎಲ್ಲಾ ಏಳು ಮಕ್ಕಳನ್ನು ನಿರ್ದಯವಾಗಿ ಕೊಂದು ಅಟ್ಟಹಾಸಗೈಯ್ಯುತ್ತಾನೆ. ತಂಗಿ - ಭಾವರ ಭಾವನೆಗಳಿಗೆ ಸ್ಪಂದಿಸದೆ ಕಠೋರವಾಗಿ ನಡೆದುಕೊಳ್ಳುತ್ತಾ ತನ್ನ ಹಠ ಸಾಧಿಸಿಯೇ ಸಂತಸಪಡುತ್ತಿರುತ್ತಾನೆ. ಕೊನೆಗೆ ಎಂಟನೆಯ ಮಗು ಜನಿಸಿದಾಗ ಅದು ದೈವ ಕೃಪೆಯಿಂದ ತಪ್ಪಿಸಿಕೊಂಡಾಗ ಕಂಸನು ತೀರಾ ಕಕ್ಕಾಬಿಕ್ಕಿಯಾಗಿ ಭಯಭೀತನಾಗಿ ಕೋಪದಿಂದ ತನ್ನ ರಾಜ್ಯದ ಯಾವುದೇ ಮನೆಯಲ್ಲಿ ಆಗತಾನೆ ಹುಟ್ಟಿದ ಗಂಡು ಶಿಶುಗಳಿದ್ದರೆ ಅವುಗಳನ್ನೆಲ್ಲಾ ತನ್ನಲ್ಲಿಗೆ ತೆಗೆದುಕೊಂಡು ಬನ್ನಿರೆಂದು ಸೈನಿಕರಿಗೆ ಕಟ್ಟುನಿಟ್ಟಾದ ಆದೇಶ ನೀಡುತ್ತಾನೆ. ಸೈನಿಕರು ರಾಜನ ಮಾತಿನಂತೆ ನಡೆದುಕೊಳ್ಳುತ್ತಾ ಬಡವ ಬಲ್ಲಿದರೆನ್ನದೆ ಅವರಿಚ್ಚೆಗೆ ವಿರುದ್ಧವಾಗಿ ರಾಜಾಜ್ಞೆ ಪಾಲಿಸುವ ನೆಪದಲ್ಲಿ ಮಕ್ಕಳನ್ನು ಕಿತ್ತುಕೊಂಡು ತರುವ ಕಾರ್ಯದಲ್ಲಿ ಸೈನಿಕರು ನಿರತರಾಗುತ್ತಾರೆ. ಈ ರೀತಿ ತಂದಂತಹ ಮಕ್ಕಳನ್ನೆಲ್ಲಾ ನಿರ್ದಯವಾಗಿ ಕೊಲ್ಲಿಸುತ್ತಾನೆ ಕಂಸ.

ಕಂಸನ ಅನ್ಯಾಯ, ಅಧರ್ಮಗಳು ಅದೆಷ್ಟು ದಿನ ಹೀಗೆ ಮುಂದುವರೆಯಲು ಸಾಧ್ಯ?  ಕಾಲವು ಯಾರ ನಿಯಂತ್ರಣದ ಕೈಯಲ್ಲಿದೆ? ಕಾಲವೇ ಕಂಸನನ್ನು ಸಂಹರಿಸಬೇಕೆಂದು ನಿರ್ಧರಿಸಿದಾಗ ಆತನೇಗೆ ಉಳಿಯಲು ಸಾಧ್ಯ? ವಿಧಿನಿಯಮದಂತೆ ಆ ದೇವಕಿಯ ಎಂಟನೆಯ ಮಗು ಯಶೋಧೆಯ ಮಡಿಲಿನಲ್ಲಿ ಶ್ರೀಕೃಷ್ಣನಾಗಿ ಬೆಳೆಯುತ್ತಿರುತ್ತಾನೆ. ಕೊನೆಗೊಂದು ದಿನ ಇದೇ ಶ್ರೀಕೃಷ್ಣನ ಕೈಯಿಂದಲೇ ಕಂಸನು ಸಂಹಾರನಾಗುತ್ತಾನೆ. ಅತ್ಯಂತ ಕ್ರೂರಿ, ನಿರ್ದಯಿ ಬಲಿಷ್ಟ ರಾಜನಾಗಿ ಮರೆಯುತ್ತಿದ್ದ ಕಂಸನ ಗತಿಯೇನಾಯಿತು? ಕಾಲನ (ಸಮಯದ) ವಿಧಿಯಲ್ಲಿ ನಲುಗಿ ನುಚ್ಚು ನೂರಾಯಿತಲ್ಲವೆ?

ಉದಾ : 2. ರಾಮಾಯಣದ ರಾವಣ ಶಿವನ ಪರಮ ಭಕ್ತನಾಗಿದ್ದ. ಆತ ತನ್ನ ಭಕ್ತಿಯಿಂದ ಶಿವನನ್ನೇ ಮೆಚ್ಚಿಸಿ ಕೈಲಾಸ ಪರ್ವತವನ್ನೇ ಎತ್ತಿ ಹಿಡಿದಂತಹ ಮಹಾ ಬಲಶಾಲಿ. ಈ ಒಂದು ಮಹಾಶಕ್ತಿಯೇ ಆತನನ್ನು ಅಹಂಕಾರದ ಅಂಧನನ್ನಾಗಿಸುತ್ತದೆ. ತನ್ನ ತಂಗಿ ಶೂರ್ಪನಖಿಯ ಮಾತಿನ ಮೋಡಿಗೆ ಮರುಳಾದ ರಾವಣ ಸೀತೆಯ ರೂಪಕ್ಕೆ ಮರುಳಾಗಿ ಕುತಂತ್ರದಿಂದ ಮಾರೀಚನ ಸಹಾಯದಿಂದ ಸೀತೆಯನ್ನು ಕಾಡಿನಿಂದ ಅಪಹರಿಸಿಕೊಂಡು ಪುಷ್ಪಕ ವಿಮಾನದಲ್ಲಿ ಆಕಾಶ ಮಾರ್ಗವಾಗಿ ಲಂಕೆಗೆ ತಂದು ಅಶೋಕವನದಲ್ಲಿರಿಸಿದ. ಕಾಡಿನ ಮಾರ್ಗದಲ್ಲಿ ಅಡ್ಡ ಬಂದಂತಹ ಜಟಾಯುವನ್ನು ನಿರ್ದಯವಾಗಿ ಕೊಂದು ಅಟ್ಟಹಾಸಗೈದ. ತಾನು ಅತ್ಯಂತ ಶೂರವೀರ ಹಾಗೂ ಸುಂದರ ಪುರುಷ. ತನ್ನಲ್ಲಿ ಸಾಕಷ್ಟು ಐಶ್ವರ್ಯದ ಸಂಪತ್ತಿನ ಬಂಗಾರದ ಲಂಕೆಯೇ ಇದೆ. ಸೇವೆಗಾಗಿ ದಾಸಿಯರಿಗೇನೂ ಕೊರತೆಯಿಲ್ಲ. ಆದರೆ ಆ ವನವಾಸಿ ರಾಮನಲ್ಲೇನಿದೆ? ನೀನು ನಾನೇಳುವ ಹಾಗೆ ಕೇಳು. ನನ್ನನ್ನು ವಿವಾಹವಾಗು. ನಾನು ನಿನ್ನನ್ನು ಇಡೀ ಲಂಕೆಯ ರಾಣಿಯಾಗಿಸುವೆನೆಂದು ಸೀತೆಯನ್ನು ಪೀಡಿಸುತ್ತಿದ್ದ ರಾವಣ. ರಾವಣನ ಈ ಕುಕೃತ್ಯವನ್ನು ಆತನ ಸಹೋದರನಾದ ಕುಬೇರ ತನ್ನ ದೂತನ ಮುಖಾಂತರ ಆತನ ನಡೆಯನ್ನು ತಿದ್ದಿಕೊಳ್ಳುವಂತೆ ಹೇಳಿ ಕಳುಹಿಸಿದಾಗ ಆತನ ಮಾತಿನಿಂದ ಕುಪಿತಗೊಂಡ ರಾವಣ ಆತನ ರುಂಡವನ್ನೇ ಶರೀರದಿಂದ ಬೇರ್ಪಡಿಸುವ ಶಿಕ್ಷೆ ನೀಡುತ್ತಾನೆ. ಇದು ರಾವಣನ ಅಹಂಕಾರದ ಪರಮಾವಧಿಯೇ ಎಂದರೂ ತಪ್ಪಾಗದು. ಅಂತೆಯೇ ಆತನ ಇನ್ನೋರ್ವ ಸಹೋದರನಾದ ವಿಭೀಷಣ ಕೂಡಾ ಅಣ್ಣನನ್ನು ಕುರಿತು 'ಅಣ್ಣಾ, ಆ ಮಹಾಮಾತೆ ಸೀತೆಯನ್ನು ನೀನು ಆದರಪೂರ್ವಕವಾಗಿ ಶ್ರೀರಾಮನಿಗೆ ಹಿಂದಿರುಗಿಸು. ಇದರಲ್ಲಿಯೇ ನಿನ್ನ ಶ್ರೇಯಸ್ಸಡಗಿದೆ' ಎಂದು ಪರಿಪರಿಯಾಗಿ ಬುದ್ಧಿಮಾತುಗಳನ್ನು ಹೇಳುತ್ತಾನೆ. ವಿಭೀಷಣನ ಮಾತುಗಳನ್ನು ಧಿಕ್ಕರಿಸಿದ ರಾವಣ ಆತನನ್ನು ಲಂಕೆಯಿಂದಲೇ ಹೊರಗಟ್ಟುತ್ತಾನೆ. ಆರಂಭದಲ್ಲಿ ರಾವಣನ ಕೃತ್ಯವನ್ನು ಖಂಡಿಸಿದ ಕುಂಭಕರ್ಣ ಕೊನೆಗೆ ಅಣ್ಣನ ಮಾತಿನಂತೆಯೇ ನಡೆದುಕೊಂಡು ಹೋರಾಡಿ ಸಾವನ್ನಪ್ಪಿದ. ರಾವಣನ ಅಹಂಕಾರಕ್ಕೆ ಸ್ಫೂರ್ತಿ ನೀಡುತ್ತಾ ಆತನೊಂದಿಗೆ ಸಹಕರಿಸಿದ ಇಂದ್ರಜೀತನೂ ದುರ್ಗತಿಗೀಡಾಗಿ ಸಾವನ್ನಪ್ಪಿದ. ಹೀಗೆ ಇಡೀ ಕುಟುಂಬ ಮತ್ತು ರಾಕ್ಷಸಿ ಕುಲವನ್ನೇ ತನ್ನ ಅಹಂಕಾರಕ್ಕೆ ಬಲಿಕೊಟ್ಟ ರಾವಣ ಅದೆಷ್ಟು ದಿನ ಸುಖವಾಗಿ ಸುಖದ ಸುಪ್ಪತ್ತಿಗೆಯಲ್ಲಿ ಉಳಿಯಲು ಸಾಧ್ಯವಾಯಿತು? ಆತನ ಅನೇಕ ಆಪ್ತರೆಲ್ಲಾ ಮರಣಕ್ಕೀಡಾದುದನ್ನು ಕಣ್ಣಾರೆ ಕಂಡರೂ ಹಠ ಬಿಡದೆ ಮುನ್ನುಗ್ಗಿದ ರಾವಣನ ಹಿಂದಿನ ಸಾಧನೆಗಳೆಲ್ಲಾ ಮಸುಕಾಗುತ್ತಾ ಕೊನೆಗೆ ಆತನೂ ಕಾಲದ (ಸಮಯದ) ಚಕ್ರದಲ್ಲಿ ಸಿಲುಕಿ ರಾಮನಿಂದಲೇ ಹತನಾದ.

ಉದಾ : 3. ದೇವರನ್ನು ಒಲಿಸಿಕೊಂಡಿದ್ದ ಹಿರಣ್ಯಕಶ್ಯಪ ತಾನೇ ದೇವರೆಂದು ಸಾರಿ ಹರಿಯನ್ನು ಸ್ಮರಿಸುತ್ತಿದ್ದ ಮಗ ಪ್ರಹ್ಲಾದನನ್ನು ನಾನಾ ರೀತಿಯಾಗಿ ಹಿಂಸೆ ಕೊಟ್ಟು ಸೋತು ಸುಣ್ಣವಾದ. ಕೊನೆಗೇನಾಯಿತು? ನೀನು ಹರಿ ಹರಿ ಎಂದು ಸ್ಮರಿಸುತ್ತೀಯಲ್ಲ. ಆತ ಈ ಕಂಬದಲ್ಲಿರುವನೆ? ಎಂದು ಮಗನನ್ನು ಕೇಳಿದಾಗ 'ಹೌದು, ಹರಿ ಈ ಕಂಬದಲ್ಲಿದ್ದಾನೆ' ಎಂದಾಗ, ಕಂಬವನ್ನೇ ಗದೆಯಿಂದ ಹೊಡೆದು ಸೀಳಿದ. ಆಗ ಆ ಕಂಬದಿಂದ ಶ್ರೀಹರಿ ನರಸಿಂಹನ ಅವತಾರದಲ್ಲಿ ಗೋಚರಿಸಿ ಹಿರಣ್ಯಕಶ್ಯಪನನ್ನು ಸಾಯಿಸಿದ. ದುರಹಂಕಾರದಿಂದ ಮೆರೆಯುತ್ತಿದ್ದ ಹಿರಣ್ಯಕಶಿಪುವಿನ ಅಂತ್ಯವಾಯಿತು. ಕಾಲವು ಬಲು ಬಲಿಷ್ಟವಾಗಿದೆ. ಯಾವುದೇ ವ್ಯಕ್ತಿಯ ಅಟ್ಟಹಾಸ, ಕೊಬ್ಬು, ದುರಹಂಕಾರ ಒಂದು ಕಾಲದವರೆಗೆ ಮಾತ್ರ ವ್ಯವಸ್ಥಿತವಾಗಿ ನಡೆಯುತ್ತದೆ. ಇದನ್ನರಿಯದ ಕೆಲ ಅವಿವೇಕಿಗಳು ಎಲ್ಲಾ ಕಾಲವು ಹೀಗೆಯೇ ನಡೆಯುತ್ತದೆಯೆಂದು ತಪ್ಪಾಗಿ ಭಾವಿಸಿ, ಪ್ರಸ್ತುತದ ಸ್ಥಿತಿಯೇ ಶಾಶ್ವತವಾಗಿರುವುದೆಂದು ನಂಬಿ ಕೊನೆಗೆ ಕಾಲನ ಬಲೆಯೊಳಗೆ ಸಿಲುಕಿ ಅಂತಿಮ ಸಮಯ ಬಂದಾಗ ವಿಲವಿಲನೆ ಒದ್ದಾಡಿ ಸತ್ತವರು ಅನೇಕರಿದ್ದಾರೆ. ಜರ್ಮನಿಯ ಹಿಟ್ಲರ್, ಇರಾನಿನ ಸದ್ದಾಂ ಹುಸೇನ್, ಮುಸಲೋನಿ, ಇದೀ ಅಮೀನ, ವೀರಪ್ಪನ್‌ರಂತಹ ಅನೇಕ ದುರಹಂಕಾರಿಗಳು ಅಟ್ಟಹಾಸದಿಂದ ಮೆರೆದು ಕೊನೆಗೆ ಕಾಲವು ಕರೆದಾಗ ನಿರ್ಗತಿಕರಾಗಿ, ಅವಮಾನಕ್ಕೀಡಾಗಿ ಸತ್ತವರಿದ್ದಾರೆ. ಎಲ್ಲರಿಗೂ ತನ್ನದೇ ಆದಂತಹ ಒಂದು ಕಾಲ ಇದ್ದೇ ಇರುತ್ತದೆ.  ಹಾಲಿ ಇರುವ ಸ್ಥಿತಿಯನ್ನೇ ನೈಜವೆಂದು ಹಾಗೂ ಅದುವೇ ಶಾಶ್ವತವೆಂದು ನಂಬಿ ದುರಹಂಕಾರದಿಂದ ಮೆರೆದ ಅನೇಕರು ಹೇಳ ಹೆಸರಿಲ್ಲದೆ ಈ ಮಣ್ಣಲ್ಲಿ ಮಣ್ಣಾಗಿರುವಾಗ ನಮ್ಮಂತಹ ಹುಲು ಮಾನವರ ಗತಿಯೇನು? ಆದಕಾರಣ ನಾವು ಹಣ, ಐಶ್ವರ್ಯ, ಅಧಿಕಾರ, ಶಕ್ತಿ, ಯೌವ್ವನದಂತಹ ನಶ್ವರಗಳನ್ನೇ ನಂಬಿ ದುರಹಂಕಾರದಿಂದ ಮೆರೆದು ಇತರರನ್ನು ತುಚ್ಚರನ್ನಾಗಿ ಕಾಣದೆ ಎಲ್ಲರಲ್ಲೂ ಪ್ರೀತಿ ವಿಶ್ವಾಸವನ್ನು ಮೂಡಿಸುವ ಪ್ರಯತ್ನವನ್ನು ಮಾಡಿ ಎಲ್ಲರೊಂದಿಗೆ ಹೊಂದಿಕೊಂಡು ಬಾಳುತ್ತಾ ಸಂತಸವಾಗಿ ಜೀವಿಸಬೇಕು. ಇಂದು ಇದ್ದದ್ದು ನಾಳೆ ಇರಲಿಕ್ಕಿಲ್ಲವೆಂದು ಯಾವನು ಅರ್ಥೈಸಿಕೊಂಡು ತಿಳುವಳಿಕೆಯ ಹೆಜ್ಜೆಯನ್ನಿಟ್ಟು ಮುನ್ನಡೆಯುವನೋ ಅವನೆಂದೆಂದಿಗೂ ಸುಖಿಯಾಗಿ ಬಾಳಬಲ್ಲ. ಇಂದಿನ ಸುಸ್ಥಿತಿ ಅಥವಾ ದುಃಸ್ಥಿತಿ ಹಾಗೇ ಉಳಿಯಲಾರದು. ರಾತ್ರಿ ಮುಗಿದ ಮೇಲೆ ಹಗಲು ಬಂದೇ ಬರುವಂತೆ ದುಃಸ್ಥಿತಿ ಕೊನೆಗೊಂಡು ಸುಸ್ಥಿತಿ ಬರುವ ಸಾಧ್ಯತೆಯಿದೆ. ಎಲ್ಲರಿಗೂ ಒಂದು ಒಳ್ಳೆಯ ಕಾಲ ಬಂದೇ ಬರುತ್ತದೆ. ಅಂತೆಯೇ ಅತ್ತೆಗೊಂದು ಕಾಲವಾದರೆ ಸೊಸೆಗೊಂದು ಕಾಲವೆಂದು ಹೇಳಲಾಗಿದೆ. ಅತ್ತೆ ಅದೆಷ್ಟು ದಿನ ಗಟ್ಟಿಯಾಗಿ ಹಾಗೇ ಉಳಿಯಬಲ್ಲಳು? ದಿನಗಳೆದಂತೆ ಅವಳ ಶಕ್ತಿ ಕುಂಠಿತಗೊಳ್ಳುತ್ತದೆ ಮತ್ತು ಸೊಸೆಯ ಶಕ್ತಿ ವೃದ್ಧಿಸುತ್ತಾ ಹೋಗುತ್ತದೆ. ಕೊನೆಗೊಮ್ಮೆ ಎಲ್ಲವೂ ತದ್ವಿರುದ್ಧವಾಗಿ ಸೊಸೆ ಬಲಿಷ್ಟವಾಗಿ ನಿಲ್ಲುವ ಸಾಧ್ಯತೆಯೇ ಹೆಚ್ಚು. ಕಾರಣ, ನಾವು ಯಾರನ್ನೂ ತುಚ್ಛರನ್ನಾಗಿ ಕೀಳರನ್ನಾಗಿ ಕಾಣುವುದಾಗಲಿ ಅವಮಾನಿಸುವುದನ್ನಾಗಲಿ ಮಾಡಬಾರದು. ಎಲ್ಲರೂ ಸಮಾನರು. ನಾವೆಲ್ಲರೂ ಮನುಜರು. ನಾವೆಲ್ಲ ಭಗವಂತನ ಮಕ್ಕಳು. ಎಲ್ಲರ ಮೈಯಲ್ಲೂ ಹರಿಯುತ್ತಿರುವುದು ರಕ್ತವೇ. ಎಲ್ಲರಿಗೂ ನಮ್ಮಂತೆಯೇ ಬಾಳುವ ಹಕ್ಕಿದೆ. ಅವರ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸಬಾರದು. ಇಲ್ಲಿ ಯಾರೂ ಶ್ರೇಷ್ಠರಲ್ಲ ಯಾರೂ ಕನಿಷ್ಠರಲ್ಲವೆನ್ನುವ ಉದಾತ್ತ ಮನೋಭಾವ ಮೂಡಿದಾಗಲೇ ಈ ದ್ವೇಷ, ಅಸೂಯೆ, ಜಾತಿ - ಮತಭೇದ ಅಳಿಸಿ ಸುಖ - ಶಾಂತಿ ನೆಲೆಸುವುದು. ಆಗ ವಿಶ್ವವೇ ಒಂದು ಮನೆಯಾಗಿ ನೆಮ್ಮದಿಯ ತಾಣವಾಗುವುದು.

ಇಂದಿನ ಬಹುತೇಕರಲ್ಲಿ ಮೇಲು - ಕೀಳು, ದ್ವೇಷಾಸೂಯೆ, ಜಾತಿ - ಭೇದ, ವರ್ಣಭೇದಗಳಿತ್ಯಾದಿಗಳು ಮನೆ ಮಾಡಿರುವುದರಿಂದಲೇ ಚಿಕ್ಕಪುಟ್ಟ ವಿಷಯಗಳಿಗೂ ಹೊಡೆದಾಟ, ಬಡಿದಾಟ, ಗಲಭೆ ಮುಂತಾದವುಗಳುಂಟಾಗಿ ಅಶಾಂತಿಯಿಂದ ಬಳಲುತ್ತಿದ್ದೇವೆ. ಇದಕ್ಕೆಲ್ಲಾ ಪರಸ್ಪರರಲ್ಲಿರಬೇಕಾದ ದೊಡ್ಡತನದ ಕೊರತೆಯೇ ಕಾರಣವಾಗಿದೆ. ಎಲ್ಲಿ ಹಠಮಾರಿತನ, ಕೊಬ್ಬುತನವಿಲ್ಲದೆ ತಾಳ್ಮೆ, ದೊಡ್ಡತನ, ಉದಾರತೆಗಳಿರುವವೋ ಅಲ್ಲಿ ಸದಾ ಸುಖ - ಶಾಂತಿಯು ನೆಲೆಸಿರುತ್ತದೆ.

ಟಿ.ಪಿ.ಉಮೇಶ್