ಸದಸ್ಯ:Udaya274/WEP 2018-19 dec

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search
ಅರುಣ್ ಎಂ. ಕುಮಾರ್
Official Photograph - Arun Kumar.jpg

ಕೆ.ಪಿ.ಎಂ.ಜಿ ಇಂಡಿಯಾದ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ
ಪೂರ್ವಾಧಿಕಾರಿ ರಿಚರ್ಡ್ ರೀಕಿ
ವೈಯಕ್ತಿಕ ಮಾಹಿತಿ
ಜನನ ೧೯೫೨
ಮಾವೆಲಿಕ್ಕರ, ಕೇರಳ
ಸಂಗಾತಿ(ಗಳು) ಪೂರ್ಣಿಮಾ
ಮಕ್ಕಳು ಅಶ್ವಿನ್ ಮತ್ತು ವಿಕ್ರಮ್
ತಂದೆ/ತಾಯಿ ಬಿ.ಮಾದವನ್, ಕಮಲಾ ನಾಯರ್
ವಾಸಸ್ಥಾನ ಮುಂಬೈ, ಭಾರತ

ಅರುಣ್ ಎಂ. ಕುಮಾರವರು ಕೆ.ಪಿ.ಎಂ.ಜಿ(ಕ್ಲೈನ್ವೆಲ್ಡ್ ಪೀಟ್ ಮಾರ್ವಿಕ್ ಗೊರ್ಡೆಲರ್) ಇಂಡಿಯಾದ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದಾರೆ. ಇವರು ಫೆಬ್ರವರಿ ೨೦೧೭ ರಿಂದ ತಮ್ಮ ಅಧಿಕಾರದಲ್ಲಿದಾರೆ. ಕೆ.ಪಿ.ಎಂ.ಜಿ ಯಲ್ಲಿ ಮುಖ್ಯ ಕಾರ್ಯನಿರ್ವಾಹಕರಾಗುವ ಮುನ್ನ, ಕುಮಾರವರು ಜಾಗತಿಕ ಮಾರುಕಟ್ಟೆಗಳಿಗೆ ಸಹಾಯಕ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು ಮತ್ತು ಯು.ಎಸ್(ಯುನೈಟೆಡ್ ಸ್ಟೇಟ್ಸ್) ಮತ್ತು ವಿದೇಶಿ ವಾಣಿಜ್ಯ ಸೇವೆ (ಯು.ಎಸ್.ಎಫ್.ಸಿ.ಎಸ್) ನ ಮಾಜಿ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು.

ಆರಂಭಿಕ ಜೀವನ ಮತ್ತು ಶಿಕ್ಷಣ[ಬದಲಾಯಿಸಿ]

ಕುಮಾರವರು ೨೫ ನವೆಂಬರ್ ೧೯೫೨ ರಂದು ಕೇರಳದ ಮಾವೆಲಿಕ್ಕರದಲ್ಲಿ ಜನಿಸಿದರು. ಅವರು ಲೋವೆಡೆಲ್ನ ಲಾರೆನ್ಸ್ ಸ್ಕೂಲ್ನಲ್ಲಿ ತಮ್ಮ ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದರು. ನಂತರ ಅವರು ೧೯೭೨ ರಲ್ಲಿ, ಟ್ರಿವಂಡ್ರಮ್ ವಿಶ್ವವಿದ್ಯಾಲಯ ಕಾಲೇಜಿನಲ್ಲಿ ರಾಷ್ಟ್ರೀಯ ವಿಜ್ಞಾನ ಪ್ರತಿಭೆಯ ವಿದ್ಯಾರ್ಥಿಯಾಗಿ ಭೌತಶಾಸ್ತ್ರದಲ್ಲಿ ಬ್ಯಾಚುಲರ್ ಪದವಿಯನ್ನು ಪಡೆದರು. ಕುಮಾರ್ ಅವರು ಸ್ಲೋನ್ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್, ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ಯ ಆಫ್ ಟೆಕ್ನಾಲಜಿಯಿಂದ ಮ್ಯಾನೇಜ್ಮೆಂಟ್ನಲ್ಲಿ ಮಾಸ್ಟರ್ಸ್ ಪದವಿಯನ್ನು ಪಡೆದರು.

ವೃತ್ತಿಜೀವನ[ಬದಲಾಯಿಸಿ]

ಯುನೈಟೆಡ್ ಸ್ಟೇಟ್ಸ್ನ(ಯು.ಎಸ್) ಉನ್ನತ ವಾಣಿಜ್ಯ ರಾಜತಾಂತ್ರಿಕರಾಗಿ ಕುಮಾರವರು ಯು.ಎಸ್. ಸರ್ಕಾರದ ೧೦೦ ವಾಣಿಜ್ಯ ನಗರಗಳ ಮತ್ತು ೭೮ ವಿಶ್ವ ಮಾರುಕಟ್ಟೆಗಳಲ್ಲಿ ೧೬೦೦ ವೃತ್ತಿಪರರ ತಂಡಕ್ಕೆ ಜವಾಬ್ದಾರಿಯುತ ವಹಿವಾಟು ಮತ್ತು ಬಂಡವಾಳ ಪ್ರಚಾರದ ಪ್ರಯತ್ನಗಳ ನೇತೃತ್ವ ವಹಿಸಿದರು. ಯು.ಎಸ್ ರಫ್ತುದಾರರಿಗೆ ಉತ್ತಮ ಮಾರುಕಟ್ಟೆಯ ಪ್ರವೇಶಕ್ಕಾಗಿ ಅವರು ಅಂತರರಾಷ್ಟ್ರೀಯ ವಾಣಿಜ್ಯ ಆಡಳಿತದ ಪ್ರಮುಖ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಅವರ ಅಧಿಕಾರಾವಧಿಯಲ್ಲಿ, ವಿಶ್ವದಾದ್ಯಂತ ಮೂವತ್ತು ದೇಶಗಳಿಗೆ ಪ್ರಯಾಣ ಮಾಡಿದರು ಹಾಗು ಹಿರಿಯ ಸರ್ಕಾರ ಮತ್ತು ವ್ಯವಹಾರ ಮುಖಂಡರೊಂದಿಗೆ ತಮ್ಮ ಸಂಬಂಧವನ್ನು ಬೆಳೆಸಿಕೊಂಡರು. ೨೦೧೬ ರಲ್ಲಿ, ಕುಮಾರವರು ಅಧಿಕಾರದಲ್ಲಿದಾಗ ಜಾಗತಿಕ ಮಾರುಕಟ್ಟೆಯು ಸುಮಾರು ೨೮,೬೯೨ ಯು.ಎಸ್. ರಫ್ತುದಾರರಿಗೆ, ಹೆಚ್ಚಾಗಿ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಸೇವೆ ಸಲ್ಲಿಸುತಿತ್ತು. ಇದರಿಂದ ನೆರವು ಪಡೆದ ಯು.ಎಸ್ ಕಂಪನಿಗಳು ವಿದೇಶಿ ಸರ್ಕಾರಗಳೊಂದಿಗೆ ನೂರಕ್ಕೂ ಹೆಚ್ಚಿನ ವ್ಯವಹಾರಗಳನ್ನು ಗೆದ್ದವು. ಈ ಕಂಪನಿಗಳು ಗೆದ್ದ ವ್ಯವಹಾರಗಳ ಬೆಲೆಯು $೫೦.೯ ಶತಕೋಟಿ ಆಗಿತ್ತು ಹಾಗು ಇದು ಸುಮಾರು ೧೭೮,೦೦೦ ಅಮೆರಿಕನ್ ಉದ್ಯೋಗಗಳನ್ನು ಬೆಂಬಲಿಸಿತು. ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವಿನ ವಾಣಿಜ್ಯ ಸಂಬಂಧಗಳನ್ನು ಬಲಪಡಿಸುವಲ್ಲಿ ಕುಮಾರವರು ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು ಅಮೇರಿಕಾ-ಇಂಡಿಯಾ 'ಸ್ಟ್ರಾಟೆಜಿಕ್ ಮತ್ತು ಕಮರ್ಷಿಯಲ್ ಡೈಲಾಗ್ದ' (ಎಸ್ & ಸಿಡಿ), ವಾಣಿಜ್ಯ ಕಾರ್ಯದರ್ಶಿ ಪೆನ್ನಿ ಪ್ರಿಟ್ಜ್ಕರ್ ಅವರೊಂದಿಗೆ ಕೆಲಸ ಮಾಡಿದರು. ಭಾರತ ಮತ್ತು ಅಮೆರಿಕದ ವಾಣಿಜ್ಯ ವ್ಯವಹಾರದ ಸಂಬಂಧಕ್ಕೆ ಎಸ್ & ಸಿಡಿ ಪ್ರಮುಖ ಕಾರಣವಾಗಿದೆ. ಯು.ಎಸ್ ವಾಣಿಜ್ಯ ಇಲಾಖೆಯ 'ಕಮರ್ಷಿಯಲ್ ಡಿಪ್ಲೊಮಸಿ ಇನ್ಸ್ಟಿಟ್ಯೂಟ್ನ' (ಸಿ.ಡಿ.ಐ) ಪ್ರಾರಂಭವನ್ನು ಕುಮಾರವರು ಉಪಕ್ರಮಿಸಿದರು. ಅವರು ರಾಷ್ಟ್ರದ ವಾಣಿಜ್ಯ ಹಿತಾಸಕ್ತಿಗಳನ್ನು ಮುಂದುವರಿಸುವಲ್ಲಿ ತೊಡಗಿರುವ ಯು.ಎಸ್. ಸರ್ಕಾರಿ ಅಧಿಕಾರಿಗಳಿಗೆ ವೃತ್ತಿಪರ ಅಭಿವೃದ್ಧಿ ಮತ್ತು ಬೌದ್ಧಿಕ ನಾಯಕತ್ವವನ್ನು ಉತ್ತೇಜಿಸುವ ಗುರಿಯೊಂದಿಗೆ ಇದನ್ನು ಪ್ರಾರಂಭಿಸಿದರು. ಯು.ಎಸ್. ರಫ್ತುಗಳನ್ನು ಹೆಚ್ಚಿಸಲು, ಭಾರತ, ಫಿಲಿಪೈನ್ಸ್, ಸಬ್ ಸಹಾರನ್ ಆಫ್ರಿಕಾ ಮತ್ತು ಮೆಕ್ಸಿಕೊದಲ್ಲಿ ಪೈಲಟ್ ಕಾರ್ಯಕ್ರಮಗಳನ್ನು ಪ್ರಾರಂಭಿಸಲು ನಗರೀಕರಣ, ಸಾರಿಗೆ ಮತ್ತು ವಿದ್ಯುತ್ ಕೇಂದ್ರೀಕರಿಸಲು ಒಂದು ಯೋಜನೆಯನ್ನು ಕುಮಾರವರು ಉಪಕ್ರಮಿಸಿದರು. ಕುಮಾರವರು ಸಿಲಿಕಾನ್ ವ್ಯಾಲಿನಲ್ಲಿ 'ಇ-ಕಾಮರ್ಸ್ ಇನೋವೇಶನ್ ಲ್ಯಾಬನ್ನು' ಸ್ಥಾಪಿಸಿದರು. ರಫ್ತು ಮತ್ತು ಗ್ರಾಮೀಣ ರಫ್ತುಗಳಿಗೆ ಇ-ಕಾಮರ್ಸ್ ಚಾನಲ್ಗಳನ್ನು ಉತ್ತೇಜಿಸಲು ಇದನ್ನು ಸ್ಥಾಪಿಸಿದರು. ಅವರು ವಾಣಿಜ್ಯ ಸೇವೆಗಾಗಿ, ವಲಯದ ವಿಶೇಷತೆಯ ಮೇಲೆ ಹಾಗು ಸೇವಾ ವಿತರಣೆಯ ಮೇಲೆ ತಮ್ಮ ಗಮನವನ್ನು ಹೆಚ್ಚಾಗಿ ಹರಿಸಿದರು. ಆಯ್ದ ರಾಷ್ಟ್ರಗಳು ಡಿಜಿಟಲ್ ಆರ್ಥಿಕ ನೀತಿಯ ವಿಷಯಗಳ ಮೇಲೆ ತಮ್ಮ ಚಟುವಟಿಕೆಗಳನ್ನು ತೊಡಗಿಸಿಕೊಳ್ಳಲು ಅವರ ಸಂಸ್ಥೆಯು 'ಡಿಜಿಟಲ್ ಅಟ್ಯಾಚೆ' ಕಾರ್ಯಕ್ರಮವನ್ನು ಸ್ಥಾಪಿಸಿತು. ಕುಮಾರವರು ೧೯೭೩ ರಲ್ಲಿ 'ಟಿ.ಎ.ಎಸ್' (ಟಾಟಾ ಅಡ್ಮಿನಿಸ್ಟೇಟಿವ್ ಸರ್ವಿಸ್) ಗೆ ಆಯ್ಕೆಯಾದರು. ಪ್ರಸ್ತುತ ಟಾಟಾ ಗ್ರೂಪ್ ಚೇರ್ಮನ್ ಎಮೆರಿಟಸ್ ರತನ್ ಟಾಟಾರವರ ಜೊತೆಯಲ್ಲಿ ಐದು ವರ್ಷಗಳ ಕಾಲ ಕೆಲಸ ಮಾಡುತ್ತಿದ್ದರು. ಕುಮಾರವರು 'ಪ್ಲಾನಿಂಗ್ & ಲಾಜಿಕ್' ಸಾಫ್ಟ್ವೇರ್ ಕಂಪನಿಯ ಸಂಸ್ಥಾಪಕರು ಹಾಗು ೧೯೯೩ ರಿಂದ ೧೯೯೫ ರವರಗೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದರು.

ವಯಕ್ತಿಕ ಮಾಹಿತಿ[ಬದಲಾಯಿಸಿ]

ಕುಮಾರವರ ತಂದೆಯ ಹೆಸರು ಬಿ.ಮಾದವನ್ ಮತ್ತು ತಾಯಿ ಕಮಲಾ ನಾಯರ್. ಅವರ ಪತ್ನಿಯವರ ಹೆಸರು ಪೂರ್ಣಿಮಾ ಕುಮಾರ್. ಅವರಿಗೆ ಇಬ್ಬರು ಗಂಡುಮಕ್ಕಳು, ಅಶ್ವಿನ್ (ಮೆಲಿಸಾಷಾಳನ್ನು ಮದುವೆಯಾದರು) ಮತ್ತು ವಿಕ್ರಮ್ ಮತ್ತು ಮೊಮ್ಮಗ ಅಮರ್ತ್ಯ ಝರನ್.

ಪುಸ್ತಕಗಳು[ಬದಲಾಯಿಸಿ]

ಕುಮಾರವರು "ಕೇರಳಾಸ್ ಎಕಾನಮಿ: ಕ್ರೌಚಿಂಗ್ ಟೈಗರ್, ಸೇಕ್ರೆಡ್ ಕೌಸ್" ಎಂಬ ಪುಸ್ತಕದ ಸಹ-ಸಂಪಾದಕರು. ೨೦೦೫ ಮತ್ತು ೨೦೦೭ ರಲ್ಲಿ ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾನಿಲಯದಲ್ಲಿ ಕೇರಳದ ಜಾಗತಿಕ ಆರ್ಥಿಕತೆಗೆ ಟ್ರಿವಂಡ್ರಮ್ನಲ್ಲಿ ಅವರು ಸಂಧಿಸಿದ ಎರಡು ಸಮಾವೇಶಗಳಲ್ಲಿ ಈ ಪುಸ್ತಕವು ಆಧರಿಸಿದೆ. ಕುಮಾರವರು "ಪ್ಲೈನ್ ಟ್ರುಥ್ಸ್" ಎಂಬ ಕವನ ಪುಸ್ತಕದ ಲೇಖಕರು. ಅವರು ಸಾರ್ವಜನಿಕ ಸೇವೆ, ಅಮೇರಿಕನ್ ವ್ಯವಹಾರಗಳು, ವ್ಯಾಪಾರ, ವಾಣಿಜ್ಯ ಮತ್ತು ಜಾಗತಿಕ ಮಾರುಕಟ್ಟೆಗಳಂತಹ ವಿಷಯಗಳ ಶ್ರೇಣಿಯಲ್ಲಿ ಬ್ಲಾಗ್ಗಳನ್ನು ರಚಿಸಿದ್ದಾರೆ.

ಉಲ್ಲೇಖಗಳು[ಬದಲಾಯಿಸಿ]

[೧] [೨] [೩]

  1. https://home.kpmg/in/en/home/contacts/k/arun-kumar.html
  2. https://www.livemint.com/Companies/l0epRrHbE0E8JNqeRyM20J/KPMG-India-appoints-Arun-Kumar-as-chairman-and-CEO.html
  3. https://www.businesstoday.in/current/corporate/kpmg-india-appoints-new-ceo-and-chairman-arun-m-kumar/story/245786.html