ವಿಷಯಕ್ಕೆ ಹೋಗು

ಸದಸ್ಯ:Thrisha2340738/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ತ್ರಿಷಾ ನಾನು ಮೂಲತಃ ಚಂದಾಪುರದಿಂದ ಬರುತ್ತೇನೆ. ನನ್ನ ಕುಟುಂಬದಲ್ಲಿ ಅಮ್ಮ, ಅಪ್ಪ ಮತ್ತು ನನ್ನ ತಮ್ಮ ಇರುವೆವು. ನನ್ನ ತಂದೆ ವ್ಯವಸಾಯ ಮಾಡುವವರು. ನನ್ನ ತಮ್ಮ ಏಳನೆ ತರಗತಿ ಓಡುತ್ತಿದ್ದಾನೆ. ನನ್ನ ಬಾಲ್ಯದ ಬಗ್ಗೆ ಹೇಳಬೇಕೆಂದರೆ ನಮ್ಮದು ಪುಟ್ಟ ಕುಟುಂಬ. ನನಗೆ ಅಜ್ಜಿ ತಾತ ಎಂದರೆ ಬಹಳ ಪ್ರೀತಿ ಅಮ್ಮ ಬೈದಗೆಲ್ಲ ಅಜ್ಜಿ ತಾತ ಅಮ್ಮನನ್ನು "ಅವಳಿನ್ನೂ ಪುಟ್ಟ ಮಗು ಏಕೆ ಬೈಯ್ಯುವೆ ಎಂದು" ಬೈಯುತ್ತಿದರು ಆಗ ಅಮ್ಮ "ನೀವು ನನ್ನನ್ನು ಬೈದು ಹೊಡೆದಿಲ್ಲವೇ ಈಗ ಏಕೆ ಅಡ್ಡ ಬರುತ್ತಿರಿ" ಎಂದೂ ಕೋಪ ಮಾಡಿಕೊಳ್ಳುತ್ತಿದಳು.

ಇನ್ನು ನನ್ನ ವ್ಯಾಸಂಗದ ಬಗ್ಗೆ ಹೇಳಬೇಕಾದರೆ, ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಬಿಎಸ್ಸಿ ಇನ್ ಬಯೋಟೆಕ್ನಾಲಜಿ ಮತ್ತು ಬೋಟೋನಿಯನ್ನು ಓದುತ್ತಿದ್ದೇನೆ. ಪ್ರಸ್ತುತ ಎರಡನೇ ವರ್ಷದ ಪದವೀಧರ ವ್ಯಾಸಂಗವನ್ನು ಮಾಡುತ್ತಿದ್ದೇನೆ. ಜೀವಶಾಸ್ತ್ರ ಓದುವುದು ಎಂದರೆ ನನಗೆ ಬಹಳ ಇಷ್ಟ ಹಾಗಾಗಿ ನಾನು ಬಿಎಸ್ಸಿ ಆಯ್ಕ್ ಮಾಡಿದೆ. ನಾನು ಏಳನೆ ತರಗತಿಯವರೆಗೆ ಸೈಂಟ್ ಡೊಮಿನಿಕ್ಸ್ ಶಾಲೆಯಲ್ಲಿ ನನ್ನ ವ್ಯಾಸಂಗವನ್ನು ಮುಗಿಸಿದೆ. ಎಂಟನೇ ತರಗತಿಗೆ ನನ್ನನ್ನು ಸ್ವಾಮಿ ವಿವೇಕಾನಂದ ವಿದ್ಯಾನಿಕೇತನ ಶಾಲೆಗೆ ಸೇರಿಸಿದರರು ಅಲ್ಲಿ ನನ್ನ ಹತ್ತನೆ ತರಗತಿಮುಗಿಸಿದೆ. ನನಗೆ ಇನ್ನೂ ನೆನಪಿದೆ ನನ್ನ ಹೊಸ ಶಾಲೆಯ ಮೊದಲನೇ ದಿನ ಅದು ನಾನುಯಾರನ್ನು ಮ್ಮತನಾಡಿಸಲಿಲ್ಲ ಒಂಟಿಯಾಗಿ ಉಳಿದುಹೋದೆ ಬಹುಶಃ ಇಡೀ ಮೂರು ವರ್ಷ ಹೀಗೆ ಒಂಟಿಯಾಗಿ ಉಳಿದುಬಿಡುವೆನು ಎಂದೆನಿಸಿತು ಆದರೆ ಹಾಗೆ ಆಗಲಿಲ್ಲ ನಮಗೆ ಒಳ್ಳೆ ಗೆಳೆಯರು ಸಿಕ್ಕರು ಮೂರು ವರ್ಷ ಹೇಗೆ ಕಳಿಯಿತೋ ತಿಳಿಯಲೇಯಿಲ್ಲ. ನಂತರ ಪೂರ್ವಪದವೀದರ ವ್ಯಾಸಂಗಕ್ಕೆ ಕ್ರೈಸ್ಟ್ ಜೂನಿಯರ್ ಕಾಲೇಜ್ ಸೇರಿದೆ ಆಗಲೇ ಕೋರೋನ ಮಹಾಮಾರಿಯ ಅಟ್ಟಹಾಸ ಶುರುವಾಗಿತ್ತು ಎಲ್ಲವೂ ಬಂದ್ ಆಗಿತ್ತು. ಜೀವನ ನರಕವಾಗಲು ಶುರುವಾಯಿತು. ಮೂರುಹೋತ್ತು ಲ್ಯಾಪ್ಟಾಪ್ ಹಾಗು ಮೊಬೈಲ್ ಮುಂದೆ ಕೋರಬೇಕಾಗಿತ್ತು ಜೀವನ ಪೂರ್ತಿಯಾಗಿ ಬದಲಾಗಿತ್ತು ಏನು ಮಾಡಬೇಕೆಂದು ಗೊತ್ತಾಗಲಿಲ್ಲ. ಹೀಗೆ ನರಲುತ್ತಿದ್ದ ನನಗೆ ಕಾರೋನ ವಕ್ಕರಿಸಿತು. ಆ ಅನುಭವವನ್ನು ಮಾತಲ್ಲಿ ಹೇಳಲಾರೆ. ನರಕವೆಂಬುದು ಹೇಗಿರುತ್ತೆ ಎಂದು ಆಗ ತಿಳಿಯಿತು. ಸುಮಾರು ೨೦ ದಿನಗಳ ಕಾಲ ನನಗೆ ಅನಾರೋಗ್ಯ ಕಾಡಿತ್ತು ಪ್ರತಿದಿನ ನೋವಿಂದ ನರಳಿದೆ, ತಂದೆ ತಾಯಿಗೆ ನನ್ನ ಆರೋಗ್ಯದ ಚಿಂತೆ ಕಾಡಿತ್ತು ಕೊನೆಗೆ ೨೦ ದಿನಗಳ ನಂತರ ಚೆತರಿಸಿಕೊಂಡೆ. ನನ್ನ ಮೊದಲನೇ ವರ್ಷದ ಪೂರ್ವ ಪದವೀಧರ ಕಾಲೇಜನ್ನು ಮನೆಯಲ್ಲೇ ಕಳೆದೇ ಜೀವನ ಅಲ್ಲೇ ಸಾಕಾಗಿತ್ತು. ಇನ್ನು ಎರಡನೇ ವರ್ಷದ ಕಥೆ ಕೇಳಲೇಬೇಡಿ ಆಗಲು ಅರ್ಧ ವರ್ಷ ಮನೆಯಲ್ಲೇ ಕಳೆದೇ ಕೊನೆಗೂ ಸುಮಾರು ನಾಲಕ್ಕು ತಿಂಗಳ ನಂತರ ಲಾಕ್ ಡೌನ್ ತೆರೆದಾಗ ನಾವು ಕಾಲೇಜಿಗೆ ಹೋದೆವು ಹೋದ ಜೀವ ಮತ್ತೆ ಬಂಡಂಗಾಯಿತು. ಆ ಅನುಭವವೂ ಹೊಸದಾಗಿತ್ತು. ಹೊಸ ಗೆಳೆಯರು ಸಿಕ್ಕರು ಆ ಅನುಭವವೂ ಚೆನ್ನಾಗಿತ್ತು. ಲಾಕ್ ಡೌನ್ನನ ದಿನಗಳನ್ನು ನಾನು ಎಂದಿಗೂ ಮರೆಯಲಾರೆ ಜೀವನದ ಒಂದು ಮರೆಯಲಾದ ಅಧ್ಯಾಯ ಅದು, ಜೀವನದ ವಾಸ್ತವವನ್ನು ತಿಳಿದುಕೊಂಡೆ ಅರಗಿಸಿಕೊಳ್ಳಲು ಕೊಂಚ ಸಮಯ ಬೆಕಾಯಿತು ಆದರೆ ಜೀವನದ ಕಹಿ ಸತ್ಯವನ್ನು ಅರ್ಥ ಮಾಡಿಕೊಂಡೆ. ನನ್ನ ಬೋರ್ಡ್ ಪರೀಕ್ಷೆಗಳು ಮುಗಿಯಿತು ನಂತರ ಕ್ರೈಸ್ಟ್ ಸೇರಲು ಇಚ್ಛಿಸಿ ಪದವೀಧರ ಕಾಲೇಜಿಗೆ ಸೇರಿಕೊಂಡೆ. ನನಗೆ ಅಂತಹ ಹೇಳಿಕೊಳ್ಳುವಂತಹ ಹವ್ಯಾಸಗಳು ಇಲ್ಲ ಆದರೆ ಕೆಲವೊಂದು ಸಲ ಕಾಲ ಕಳೆಯಲು ಅಡುಗೆ ಮಾಡುವ ಅಭ್ಯಾಸ ಇದೆ. ಅಡುಗೆ ಎಂದಾಗ ಒಂದು ಪುಟ್ಟ ಕಥೆ ನೆನಪಾಗುತ್ತೆ ಒಮ್ಮೆ ನಾನು ಬಿಸಿ ಬೆಳೆ ಬಾತ್ ಮಾಡಲು ಇಚ್ಛಿಸಿ ಅದಕ್ಕೆ ಬೇಕಾದ ತರಕಾರಿ ಮತ್ತು ಇತರೆ ಸಾಮಗ್ರಿಗಳನ್ನು ತೆಗೆದುಕೊಂಡು ಅಡುಗೆ ಮಾಡಿದೆ ಕೊನೆಗೆ ಬಿಸಿ ಬೆಳೆ ಬಾತಿಗೆ ಹಾಕಿದ ಬೆಳೆ ಬೆಯಲೇ ಇಲ್ಲ. ಈಗ ಹೇಗೆ ಮಾಡಬೇಕೆಂದು ಕಲಿತಿರುವೆ.

ಇದಿಷ್ಟು ನನ್ನ ಪುಟ್ಟ ಪರಿಚಯ.

ಧನ್ಯವಾದಗಳು.