ವಿಷಯಕ್ಕೆ ಹೋಗು

ಸದಸ್ಯ:Thrisha2340738

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಣ್ಣ ಕಥೆಗಳ ಮಹತ್ವ

ಸಣ್ಣ ಕಥೆಗಳು ಪ್ರಾಕೃತಿಕ ಪರಿಸರದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಇವು ಅರಣ್ಯದ ಜೀವರಾಶಿ ಸಮತೋಲನವನ್ನು ಕಾಯ್ದುಕೊಳ್ಳಲು ಸಹಾಯ ಮಾಡುತ್ತವೆ. ಸಣ್ಣ ಕಥೆಗಳಲ್ಲಿ ಹಲವು ಪ್ರಭೇದಗಳ ಗಿಡ-ಮರಗಳು ಮತ್ತು ಹೂವುಗಳು ಇರುತ್ತವೆ, ಅದರಿಂದ ನೈಸರ್ಗಿಕ ವೈವಿಧ್ಯತೆ ಬೆಳೆಯುತ್ತದೆ. ಇವು ಮನುಷ್ಯನಿಗೆ ಔಷಧೀಯ ಬಳಕೆ, ಆಹಾರ, ಹಾಗೂ ಇತರೆ ಉಪಯೋಗಗಳ ಮೂಲಕ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗುತ್ತವೆ. ಸಣ್ಣ ಕಥೆಗಳ ಸಂರಕ್ಷಣೆ ಮಾನವೀಯ ಹೊಣೆಗಾರಿಕೆಯಾಗಿದೆ, ಏಕೆಂದರೆ ಇದು ಭೂಮಿಯ ಹಾಗು ಪರಿಸರದ ಶ್ರೇಯಸ್ಸಿಗೆ ಮೂಲವಾಗಿದೆ. ಹೀಗಾಗಿ, ಸಣ್ಣ ಕಥೆಗಳ ಮಹತ್ವವನ್ನು ಅರಿತು, ಅವುಗಳನ್ನು ಕಾಯ್ದುಕೊಳ್ಳುವಲ್ಲಿ ಪ್ರತಿಯೊಬ್ಬರೂ ತಮ್ಮ ಹೊಣೆಗಾರಿಕೆಯನ್ನು ಪೂರ್ಣಗೊಳಿಸಬೇಕು.

ಮಕ್ಕಳ ಮೇಲೆ ಸಣ್ಣ ಕಥೆಗಳ ಬೀರುವ ಪರಿಣಾಮಗಳು

ಸಣ್ಣ ಕಥೆಗಳು ಮಕ್ಕಳ ಮನಸ್ಸುಗಳ ಮೇಲೆ ಅಮಿತ ಪರಿಣಾಮವನ್ನು ಬೀರುತ್ತವೆ. ಇವು ಮಕ್ಕಳ ಸೃಜನಾತ್ಮಕತೆ ಮತ್ತು ಕಲ್ಪನೆ ಶಕ್ತಿಯನ್ನು ಉತ್ತೇಜಿಸುವ ಮೂಲಕ ಅವರ ಬೌದ್ಧಿಕ ಅಭಿವೃದ್ಧಿಗೆ ಪ್ರೇರಣೆಯಾಗಿ ನಿಲ್ಲುತ್ತವೆ. ಸಣ್ಣ ಕಥೆಗಳ ಮೂಲಕ ಮಕ್ಕಳಿಗೆ ನೈತಿಕ ಮೌಲ್ಯಗಳು, ಉತ್ತಮ ಗುಣಗೌಣಗಳು, ಹಾಗೂ ಜೀವನಪಾಠಗಳು ತಿಳಿಯುತ್ತದೆ. ಇವು ಮಕ್ಕಳಲ್ಲಿ ಓದುತ್ತಿರುವ ಆಸಕ್ತಿ ಮತ್ತು ಶ್ರದ್ಧೆಯನ್ನು ವೃದ್ಧಿಸಿ, ಭಾಷಾ ನೈಪುಣ್ಯವನ್ನು ಬೆಳೆಯಲು ಸಹಾಯ ಮಾಡುತ್ತದೆ. ಕಥೆಗಳಲ್ಲಿ ಹಾಸ್ಯ, ದಾರಿ ತೋರಿಸುವ ಸಂದೇಶಗಳು ಮತ್ತು ನೈಜ ಘಟನೆಗಳ ಪ್ರಾತಿನಿಧ್ಯ ಇರುವುದರಿಂದ ಮಕ್ಕಳು ಬುದ್ಧಿವಂತಿಕೆಯೊಂದಿಗೆ ಸಮಸ್ಯೆಗಳನ್ನು ಪರಿಹರಿಸಲು ಕಲಿಯುತ್ತಾರೆ. ಹೀಗಾಗಿ, ಸಣ್ಣ ಕಥೆಗಳ ಓದು ಮಕ್ಕಳ ಸಮಗ್ರ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಸಣ್ಣ ಕಥೆಗಳು ಮಕ್ಕಳ ಜೀವನದಲ್ಲಿ ಅತ್ಯಂತ ಪ್ರಭಾವಶೀಲವಾಗಿವೆ. ಇವು ಕೇವಲ ಮನರಂಜನೆಯ ಸಾಧನವಾಗಿರುವುದಿಲ್ಲ, ಬದಲಾಗಿ ಮಕ್ಕಳ ಬುದ್ಧಿಶಕ್ತಿಯ ಬೆಳವಣಿಗೆಗೆ ಪ್ರೇರಣೆಯಾಗಿ ನಿಲ್ಲುತ್ತವೆ. ಕಥೆಗಳಲ್ಲಿ ಕಾಣಿಸಿಕೊಳ್ಳುವ ಪಾತ್ರಗಳು, ಘಟನೆಗಳು, ಮತ್ತು ಸಂದೇಶಗಳು ಮಕ್ಕಳ ಮನಸ್ಸನ್ನು ಆಕರ್ಷಿಸುತ್ತವೆ ಮತ್ತು ಅವರ ಕಲ್ಪನೆ ಶಕ್ತಿಯನ್ನು ಹೆಚ್ಚಿಸುತ್ತವೆ. ಇವು ಮಕ್ಕಳಲ್ಲಿ ನೈತಿಕ ಮೌಲ್ಯಗಳ ಮತ್ತು ಮಾನವೀಯ ಗುಣಗಳ ಸಾಕ್ಷಾತ್ಕಾರವನ್ನು ಉಂಟುಮಾಡುತ್ತವೆ. ಉದಾಹರಣೆಗೆ, ಸತ್ಯವಂತಿಕೆ, ದಯೆ, ಸಹಿಷ್ಣುತೆ, ಮತ್ತು ಪರೋಪಕಾರದಂತಹ ಗುಣಗಳನ್ನು ಕಥೆಗಳ ಮೂಲಕ ಬೋಧಿಸಬಹುದು. ಇದು ಮಾತ್ರವಲ್ಲ, ಕಥೆಗಳು ಮಕ್ಕಳಲ್ಲಿನ ಓದುವ ಹವ್ಯಾಸವನ್ನು ಉತ್ತೇಜಿಸುತ್ತವೆ, ಏಕೆಂದರೆ ಕತೆಗಳ ಸಂಭಾವ್ಯತೆಯ ತೀವ್ರ ಉತ್ಸಾಹವು ಅವರಿಗೆ ನಿರಂತರ ಓದುವ ಪ್ರೇರಣೆಯನ್ನು ನೀಡುತ್ತದೆ. ಹೀಗಾಗಿ, ಮಕ್ಕಳಿಗೆ ಸಣ್ಣ ಕಥೆಗಳ ಅನುಭವವನ್ನು ನೀಡುವುದು ಕೇವಲ ಮನೋರಂಜನೆಯಷ್ಟೇ ಅಲ್ಲ, ಅವರ ಬೌದ್ಧಿಕ, ನೈತಿಕ ಮತ್ತು ಸಾಮಾಜಿಕ ಬೆಳವಣಿಗೆಯ ಒಂದು ಆಧಾರಸ್ತಂಭವಾಗಿದೆ.

ಕವಿ ಪರಿಚಯ:

ಶಿವರಾಮ ಕಾರಂತರು ಕನ್ನಡ ಸಾಹಿತ್ಯದ ಏಕಮೇವ ಪ್ರತಿಭಾವಂತ ಲೇಖಕರಲ್ಲಿ ಒಬ್ಬರಾಗಿದ್ದಾರೆ. ೧೯೦೨ಲ್ಲಿ ಉಡುಪಿ ಜಿಲ್ಲೆಯ ಕೊಟೇಶ್‍ವರ ಗ್ರಾಮದಲ್ಲಿ ಜನಿಸಿದ ಕಾರಂತರು ಬಾಲ್ಯದಿಂದಲೇ ಸಾಹಿತ್ಯ, ಕಲೆ, ಮತ್ತು ನಾಟಕಗಳತ್ತ ಆಕರ್ಷಿತರಾದರು. ಅವರು ಕೇವಲ ಕಾದಂಬರಿ ಲೇಖಕರಷ್ಟೇ ಅಲ್ಲ, ಪದ್ಯಕೃತಿಗಳು, ನಾಟಕಗಳು, ವಿಜ್ಞಾನ ಲೇಖನಗಳು, ಹಾಗೂ ಮಕ್ಕಳ ಸಾಹಿತ್ಯದಲ್ಲಿಯೂ ತಮ್ಮ ಛಾಪನ್ನು ಮೂಡಿಸಿದರು. ಅವರ ಕಾವ್ಯಗಳಲ್ಲಿ ನೈಜ ಬದುಕಿನ ಮೌಲ್ಯಗಳು, ಆಧುನಿಕತೆಯ ಸ್ವೀಕಾರ, ಮತ್ತು ಪರಿಸರದ ಮೇಲಿನ ಪ್ರೀತಿ ಎದ್ದು ಕಾಣುತ್ತವೆ. ಕಾರಂತರ ಸಾಹಿತ್ಯ ಕೇವಲ ಪಾಠವಷ್ಟೇ ನೀಡುವುದಿಲ್ಲ, ಪಾಠಕನಿಗೆ ಹೊಸತೊಂದು ಪ್ರಪಂಚವನ್ನು ಪರಿಚಯಿಸುತ್ತದೆ. ಹೀಗಾಗಿ, ಅವರು ಕನ್ನಡ ಸಾಹಿತ್ಯದ ದೀಪಸ್ತಂಭವಾಗಿ ಉಳಿದರು. ಪ್ರಸ್ತುತ ಕಥೆಗಳನ್ನು ಶಿವರಾಮ ಕಾರಂತರು ರಚಿಸಿರುವ ಜಾತಕ ಕಥೆಗಳು ಎಂಬ ಪುಸ್ತಕದಿಂದ ಆರಿಸಿಕೊಳ್ಳಲಾಗಿದೆ.

ಕಥೆ ೧:

ಕಪಿರಾಜನ ಆತ್ಮಬಲಿ

     - ಡಾIIಕೆ. ಶಿವರಾಮ ಕಾರಂತ

ಈ ಕಥೆಯಲ್ಲಿ ಬರುವ ಮುಖ್ಯ ಪತ್ರಗಳು ಕಪಿರಾಜ ಮತ್ತು ಅವನ ಪ್ರಜೆಗಳು, ಮೀನುಗಾರ, ರಾಜ ಮತ್ತು ಅವನ ಪ್ರಜೆಗಳು.

ಕಥೆಗೆ ಬರುವುದಾದರೆ ಒಂದು ನದಿ ಅದರ ದಂಡೆಯಲ್ಲಿ ಒಂದು ಮಾವಿನ ಮರ. ಕಪಿಗಳೆಲ್ಲ ಆ ಮಾವಿನ ಮರದ ಬಳಿ ವಾಸಿಸುತ್ತಿದವು. ಒಂದು ದಿನ ಕಪಿರಾಜನಿಗೆ ಒಂದು ಯೋಚನೆ ಬಂತು ‘ಮಾನವರಿಗೆ ಈ ರುಚಿಕರವಾದ ಮಾವಿನ ಹಣ್ಣುಗಳು ಸಿಕ್ಕರೆ ಆವರು ನಮ್ಮನ್ನು ಇಲ್ಲಿ ಉಳಿಯಲು ಬಿಡುವುದಿಲ್ಲ, ನಂತರ ನಮಗೆ ಮಾವು ಸಿಗುವುದಿಲ್ಲ’ ಎಂಬ ಭಯ ಹುಟ್ಟಿ ಈ ವಿಚಾರವನ್ನು ಅವನು ತನ್ನ ಪ್ರಜೆಗಳಿಗೆ ತಿಳಿಸಿದ. ಅದಕ್ಕೆ ಉಪಾಯವಾಗಿ ಒಂದು ಮಾವು ಸಹ ನದಿಯಲ್ಲಿ ಬೀಳದೆ ನೋಡಿಕೊಳ್ಳಬೇಕಾಗಿ ತನ್ನ ಪ್ರಜೆಗಳಿಗೆ ತಿಳಿಸಿದ.

ಒಮ್ಮೆ ಅಕಸ್ಮಾತ್ಆಗಿ ಒಂದು ಮಾವು ಮೀನುಗಾರನ ಬಲೆ ಒಳಗಡೆ ಬಿದ್ದೆ ಹೋಯಿತು. ಅವನು ಅದನ್ನು ಮನೆಗೆ ತಂದು ಅವನ ಹೆಂಡತಿಗೆ ತೋರಿಸಿದ, ಅವಳಿಗೂ ಅದರಬಗ್ಗೆ ತಿಳಿದಿರಲಿಲ್ಲ. ತಕ್ಷಣ ಅವನು ಆ ಮಾವನ್ನು ರಾಜನ ಬಳಿ ತೆಗೆದುಕೊಂಡು ಹೋದ ಕೂಡಲೇ ಪಂಡಿತರು ಇದು ಮಾವಿನ ಹಣ್ಣು ಹಾಗೆಯೇ ಇದು ತಿನ್ನಲು ಬಲು ರುಚಿಕರ ಎಂದು ರಾಜನಿಗೆ ತಿಳಿಸಿದರು, ಮರುದಿನವೇ ರಾಜ ಅವನ ಸೈನ್ಯದೊಡನೆ ನದಿಯ ಮಾವಿನ ಮರದ ಬಳಿ ಹೊರಟ. ಕಾಪಿರಾಜ ಇದನ್ನು ಕಂಡು ಕೂಡಲೆ ಒಂದು ದೊಡ್ಡ ಬೀಳಲನ್ನು ಕಟ್ಟಿಕೊಂಡು ಇನ್ನೊಂದು ಮರಕ್ಕೆ ಧುಮುಕಿದ ಅವನು ಧುಮುಕಿದ ಶಕ್ತಿ ಸಾಕಾಗದೆ ಕೇವಲ ಮರದ ತೊಂಗೆಯನ್ನು ಹಿಡಿದ. ಕೂಡಲೆ ಪ್ರಜೆಗಳನ್ನು ತನ್ನ ಮೇಲಿಂದ ಹಾದು ಹೋಗಿ ಮರ ಸೇರುವಂತೆ ಹೇಳಿದ. ರಾಜ ಇದೆಲ್ಲವನ್ನೂ ಗಮನಿಸುತ್ತಿದ್ದ. ಕಾಪಿಗಳೆಲ್ಲ ಕ್ಷೇಮವಾಗಿ ಮರ ಸೇರಿದವಿ ಕೊನೆಯಲ್ಲಿ ಓನು ಧುಷ್ಟ ಕಪಿ ದಾಟಬೇಕಿತ್ತು. ದುಷ್ಠ ಕಪಿಗೆ ರಾಜನನ್ನು ಕಂಡರೆ ಆಗದು. ಬೇಕಂತಲೇ ದುಷ್ಟ ಕಪಿ ಆದಷ್ಟು ಬಲ ಹಾಕಿ ರಾಜನ ಮೇಲೆ ಹಾರಿತು ಬೀಳಲು ಮುರಿದು ಕಪಿರಾಜ ಬಿದ್ದು ತನ್ನ ಧವಡೆಯನ್ನು ಮುರಿದ. ರಾಜ ಕೂಡಲೆ ಓಡಿ ಬಂದು ಕಾಫಿಗೆ ಸಹಾಯ ಮಾಡಲು ಕರೆದ. ರಾಜ ಕಪಿಗೆ ನಿನ್ನ ಪ್ರಾಣ ಪಣಕ್ಕಿಟ್ಟು ಏಕೆ ಅವರನ್ನು ಉಳಿಸಿದೆ ಎಂದು ಕೇಳಿದಾಗ ಅದು ನನ್ನ ಕರ್ತವ್ಯ ಎಂದು ಕಪಿ ಹೇಳಿತು. ತನ್ನ ಪ್ರಜೆಗಳು ಕ್ಷೇಮವಾಗಿ ಮರ ಸೇರಿದರು ಎಂದು ತಿಳಿದು ತನ್ನ ಪ್ರಾಣ ಬಿಟ್ಟಿತು.

ಕಥೆಯಲ್ಲಿ ಮುಖ್ಯವಾಗಿ ಕಪಿರಜನಿಗೆ ಅವನ ಪ್ರಜೆಗಳ ಮೇಲಿದ್ದ ಪ್ರೀತಿ ಮತ್ತು ಅವನ ಕರ್ತವ್ಯಪ್ರಜ್ಞೆ ಮನಸ್ಸಿಗೆ ನಾಟುವಂತಿದೆ. ದುಷ್ಟ ಕಪಿಯ ಒಂದು ದೂರಾಲೋಚನೆಯಿಂದ ಕಪಿರಾಜನಂತ ಒಳ್ಳೆ ರಾಜನನ್ನು ಕಳೆದುಕೊಂಡರು. ಪ್ರಪಂಚದಲ್ಲಿ ಎಲ್ಲೇ ಹೋದರು ಒಳ್ಳೆಯವರು ಮತ್ತು ಕೆಟ್ಟವರು ಇದ್ದೇಇರುತ್ತಾರೆ ಮನುಷ್ಯರಾಗಿ ನಾವು ಮಾನವೀಯತೆ ಬಗ್ಗೆ ಮರೆತು ಹೋಗದೆ ನಮ್ಮ ಕರ್ತವ್ಯಗಳನ್ನು ಸರಿಯಾಗಿ ನಿಭಯಿಸುತ್ತ ಸದಾ ಧರ್ಮದ ದಾರಿಯಲ್ಲೇ ನಡೆಯಬೇಕೆಂಬುದೇ ಈ ಕಥೆಯ ನೀತಿಪಾಠ.

ಕಥೆ೨:

ಕಪಿಯು, ಮೂರ್ಖ ಮೊಸಳೆಯು

                 -ಡಾIIಕೆ. ಶಿವರಾಮ ಕಾರಂತ

ಪ್ರಸ್ತುತ ಕಥೆಯಲ್ಲಿ ಬರುವ ಮುಖ್ಯ ಪಾತ್ರಗಳು ಕಪಿ ಮತ್ತು ಮೊಸಳೆ. ಕಪಿಯು ಪ್ರತಿದಿನ ಹಣ್ಣುಗಳನ್ನು ತಿನ್ನಲು ಬಂಡೆಯನ್ನು ಹಾರಿ ನದಿಯನ್ನು ದಾಟಿ ನದಿಯ ಇನ್ನೊಂದು ತುದಿಗೆ ಸೇರುತ್ತಿತ್ತು. ಅಂದು ಪ್ರತಿ ದಿನದ ಹಾಗೆ ಕಪಿಯು ನದಿಯನ್ನು ಬಂಡೆಯ ಸಹಾಯದಿಂದ ಹಾರಿ ಇನ್ನೊಂದು ತುದಿಗೆ ಸೇರಿ ತನ್ನ ಆಹಾರವನ್ನು ಆಸ್ವಾದಿಸುತ್ತಾ ಇರುತ್ತದೆ ಇದನ್ನು ಗಮನಿಸಿದ ಮೊಸಳೆಗೆ ಕಪಿಯನ್ನು ಹಿಡಿದು ತಿನ್ನುವ ಆಸೆಯಾಗಿ ಇದನ್ನು ತನ್ನ ಹೆಂಡತಿಗೆ ಹೇಳುತ್ತಾನೆ ಹೆಂಡತಿಯು ಈ ಮುಂದೆ ಕಪಿಯನ್ನು ಹಿಡಿಯಲು ಹೋಗಿ ಮಾಡಿದ ವ್ಯರ್ಥ ಪ್ರಯತ್ನವನ್ನು ಮೊಸಳೆಗೆ ನೆನಪಿಸುತ್ತೇನೆ ಹಾಗೆಯೇ ನದಿಯಲ್ಲಿ ಸಿಗುವ ಮೀನನ್ನು ಹಿಡಿದು ತಿಂದು ಅದರಲ್ಲೇ ಖುಷಿಯಾಗಿ ಇರೋಣ ಇಂದು ತಿಳಿಸುತ್ತದೆ ಆದರೆ ಈ ಬಾರಿ ನನ್ನ ಪ್ರಯತ್ನ ವಿಫಲವಾಗುವುದಿಲ್ಲ ನಾನು ಆ ಕಪಿಯನ್ನು ಏನಾದರೂ ಮಾಡಿ ಹಿಡಿದು ಅದನ್ನು ನನ್ನ ಆಹಾರವಾಗಿ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತದೆ. ಕಪಿಯನ್ನು ಹಿಡಿಯಲು ಮೊಸಳೆ ಒಂದು ಉಪಾಯ ಹುಡುಕಿತು. ಕಪಿಯು ದಿನನಿತ್ಯ ಬಂಡೆಯ ಮೇಲಿಂದ ಹಾರಿ ನದಿಯನ್ನು ದಾಟುತ್ತಿತ್ತು. ಈ ಬಾರಿ ಕಪಿ ಬಂಡೆಯ ಹತ್ತಿರ ಬಂದಾಗ ಅದನ್ನು ಹಿಡಿದು ತಿನ್ನುವುದಾಗಿ ಮೊಸಳೆ ಹೇಳುತ್ತದೆ. ಎಂದಿನ ಹಾಗೆ ಆ ದಿನವೂ ಕಪಿ ಹಣ್ಣುಗಳನ್ನು ತಿನ್ನಲು ಬಂಡೆಯನ್ನು ಹಾರಿ ನದಿಯ ತುದಿಗೆ ಸೇರಿ ತನ್ನ ಆಹಾರವನ್ನು ಸೇವಿಸುತ್ತದೆ. ಇದೆಲ್ಲವನ್ನು ಮೊಸಳೆ ಗಮನಿಸುತ್ತಿತ್ತು. ಕಪಿಯು ತನ್ನ ಆಹಾರವನ್ನು ಸೇವಿಸಿ ಮರಳಿ ಬಂಡೆಯ ಮೇಲೆ ಹಾರುವ ಮೊದಲು ಕಪಿಗೆ ಒಂದು ಸಂದೇಹ ಉಂಟಾಯಿತು, ‘ನದಿಯ ನೀರು ಹೀಗೆ ಕಾಣಲು ಸಾಧ್ಯವಿಲ್ಲ ಮತ್ತು ಬಂಡೆಯ ಎತ್ತರವು ಹೆಚ್ಚಾಗಿದೆ’ ಎಂಬುದು ಕಪಿ ಗಮನಿಸಿತು. ಬುದ್ಧಿವಂತ ಕಪಿ ಒಂದು ಉಪಾಯ ಹುಡುಕಿತು ಬಂಡೆಯೊಡನೆ ಮಾತನಾಡಲು ಶುರು ಮಾಡಿತು ಮೊಸಳೆಯು ಬಂಡೆ ಪ್ರತಿದಿನ ಮೊಸಳೆಯೊಂದಿಗೆ ಮಾತನಾಡುತ್ತದೆ ಎಂದು ತಿಳಿದು ಬಂಡೆಯ ಬದಲು ತಾನು ಕಪಿಯೊಂದಿಗೆ ಮಾತನಾಡಿತ್ತು. ಕಪಿಗೆ ಇದೆಲ್ಲ ಮೊಸಳೆ ಹಾಕಿರುವ ಜಾಲ ಎಂದು ತಿಳಿಯಿತು. ಆಗ ಕಪಿ, ನೀನು ನಿನ್ನ ಬಾಯನ್ನು ತೆಗೆ ನಾನೇ ಬಂದು ನಿನಗೆ ಆಹಾರವಾಗುತ್ತೇನೆ ಎಂದು ಮೊಸಳೆಗೆ ತಿಳಿಸುತ್ತದೆ. ಮೊಸಳೆಯು ತನ್ನ ಬಾಯಿ ತೆಗೆದಾಗ ಕಣ್ಣನ್ನು ಮುಚ್ಚುತ್ತದೆ ಇದನ್ನು ತಿಳಿದ ಕಪಿ ಮೊಸಳೆ ಬಾಯಿ ತೆಗೆದ ಕೂಡಲೇ ಅದರ ಮೇಲೆ ಜಿಗಿದು ನದಿಯನ್ನು ದಾಟುತ್ತದೆ ಮೊಸಳೆಯಿಂದ ತಪ್ಪಿಸಿಕೊಳ್ಳುತ್ತದೆ. ಮೊಸಳೆಯು ಇನ್ನೊಮ್ಮೆ  ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಕಪಿಗೆ ಹೇಳಿದಾಗ ಕಪಿ ‘ಅಂತ ಕಾಲ ಬರಲಾರದು ನಿನಗೆ ಎಷ್ಟು ಬಲವಿದ್ದರೇನು ಚೂರು ಬುದ್ಧಿ ಇಲ್ಲವಲ್ಲ’ ಎಂದು ಹೇಳಿ ಹೊರಟು ಹೋಗುತ್ತದೆ.

‘ಹಾಸಿಗೆ ಇದ್ದಷ್ಟು ಕಾಲು ಚಾಚು’ ಎಂಬ ಗಾದೆ ಮಾತು ಸುಳ್ಳಾಗಲಿಲ್ಲ. ಮೊಸಳೆ ತನ್ನ ಹೆಂಡತಿ ಹೇಳಿದ ಹಾಗೆ ನದಿಯಲ್ಲಿರುವ ಮೀನನ್ನು ಹಿಡಿದು ತಿಂದು ತೃಪ್ತಿಯಿಂದ ಇರಬಹುದಾಗಿತ್ತು ಆದರೆ ಮೊಸಳೆ ಅತಿ ಆಸೆಯಿಂದ ಕಪಿಯನ್ನು ತಿನ್ನುವ ಪ್ರಯತ್ನ ಮಾಡಿತು. ಕಪಿಯಿಂದ ನಾವು ಕಲಿಯಬೇಕಾಗಿರುವುದೇನೆಂದರೆ ಕಷ್ಟಕರ ಪರಿಸ್ಥಿತಿಗಳು ಉಂಟಾದಾಗ ಭಯಪಡದೆ ಅದನ್ನು ಎದುರಿಸುವ ಉಪಾಯವನ್ನು ಯೋಚಿಸಬೇಕು. ಜೀವನದಲ್ಲಿ ಹೆದರದೆ ಎಲ್ಲ ಕಷ್ಟಗಳನ್ನು ಬುದ್ಧಿ ಬಲದಿಂದ ದಾಟಬಹುದು. ಬುದ್ಧಿ ಇಲ್ಲದ ಬಾಹುಬಲ ವ್ಯರ್ಥವೆಂಬುದೇ ಈ ಕಥೆಯ ನೀತಿ.

ನೈತಿಕ ಕಥೆಗಳು ಮಾನವಿಯ ಹಿತಚಿಂತನೆ, ಸಕಾರಾತ್ಮಕ ಚಲನೆ ಮತ್ತು ಉತ್ತಮ ಪ್ರಾರ್ಥನೆಗಳನ್ನು ಉತ್ತೇಜಿಸುವ ಕಥೆಗಳಾಗಿವೆ. ಇವು ಶಿಕ್ಷಣ ಹಾಗೂ ಜೀವನದಲ್ಲಿ ಸರಿಯಾದ ದಾರಿ ತಲುಪಲು ಮಾರ್ಗದರ್ಶನ ನೀಡುತ್ತವೆ. ನೈತಿಕ ಕಥೆಗಳ ಮೂಲಕ, ನಾವು ಪ್ರಾಮಾಣಿಕತೆ, ಕರುಣೆ, ಸಮಯ ಪ್ರಜ್ಞೆ ಮತ್ತು ದಯೆ ಎಂಬ ಮಹತ್ವಪೂರ್ಣ ಮೌಲ್ಯಗಳನ್ನು ಕಲಿಯಬಹುದು. ಪ್ರತಿ ಕಥೆಯಲ್ಲೂ ಸಾಂಸ್ಕೃತಿಕ ಹಾಗೂ ಸಾಮಾಜಿಕ ಪಾಠಗಳು, ನಮ್ಮ ಆಚಾರವಿಚಾರಗಳು ಮತ್ತು ವರ್ತನೆಯ ಮೇಲೆ ಪರಿಣಾಮ ಬೀರುತ್ತವೆ. ಇವು ಮಕ್ಕಳಿಗೆ ಮಾತ್ರವಲ್ಲದೆ ಪ್ರಾಪ್ತ ವಯಸ್ಕರಿಗೆ ಸಹ ಜೀವನದ ಮುಖ್ಯ ನಿಯಮಗಳನ್ನು ಅರಿತುಕೊಳ್ಳಲು ನೆರವಾಗುತ್ತವೆ.