ಸದಸ್ಯ:Thimmesh design world
ನನ ಬಗ್ಗೆ
[ಬದಲಾಯಿಸಿ]ನಾನು ಸ. ತಿಮ್ಮೇಶ ಪ್ರಸಿದ್ಧ ಪತ್ರಿಕೆಯಲ್ಲಿ ಪೇಜ್ ಡಿಸೈನರ್. ಇಲ್ಲಿಯವರೆಗೆ 15 ಸಾವಿರಕ್ಕೂ ಅಧಿಕ ಪುಟ ವಿನ್ಯಾಸ ಮಾಡಿದ ನಾನು, 40 ಸಾವಿರಕ್ಕೂ ಅಧಿಕ ಫೋಟೋ ಎಡಿಟಿಂಗ್ ಮಾಡಿದ್ದೇನೆ. ನಾವಿನ್ಯತೆಯ ವಿನ್ಯಾಸ ನನಗೆ ಅಧಿಕ ಇಷ್ಟದ ಕೆಲಸ. ವಿನ್ಯಾಸ ಮಾಡಿ ಕಂಪ್ಯೂಟರ್ ನಲ್ಲಿ ಸೇವ್ ಮಾಡಿದರೆ ಏನು ಪ್ರಯೋಜನ ಎಂದು ನನಗೆ ಅನ್ನಿಸಿದಾಗ, ಬ್ಲಾಗು ಮಾಡುವ ಯೋಚನೆ ಬಂತು. ನಾನು ಮಾಡಿದ ಅನೇಕ ವಿನ್ಯಾಸಗಳನ್ನು ಸ್ನೇಹಿತರು ನೋಡಿ ಮೆಚ್ಚುತ್ತಿದ್ದರು. ಬೇಕಾಗಿದ್ದನ್ನು ತಮಗೆ ಹೇಗೆ ಬೇಕೋ ಹಾಗೆ ಬಳಸುತ್ತಿದ್ದರು. ನಾನು ಇನ್ನೂ ಅನೇಕ ಜನರನ್ನು ಸಂಪರ್ಕಿಸಬೇಕು ಎಂಬ ಚಿಂತನೆ ನನ್ನಲ್ಲಿ ಬಂದಾಗ ತಿಮ್ಮೇಶ್ ಡಿಸೈನ್ ವರ್ಡ್ ಎಂಬ ಬ್ಲಾಗು ಮಾಡಿದೆ. ವಿನ್ಯಾಸ ಮಾಡಿದ್ದನ್ನು ಅದರಲ್ಲಿ ಏರಿಸುತ್ತೇನೆ. ಆದರೆ, ತಲೆ ಕೆಡಿಸಿಕೊಂಡು, ನನ್ನ ಸಮಯ ವ್ಯರ್ಥ ಮಾಡಿಕೊಂಡು ಮಾಡಿದ ವಿನ್ಯಾಸಗಳು ನನ್ನ ವಿನ್ಯಾಸ ಸಾಮರ್ಥ್ಯವನ್ನು ವಿಸ್ತಾರಗೊಳಿಸಿವೆ. ಅವು ನನ್ನ ಮಕ್ಕಳಿದ್ದಂತೆ. ವಿನ್ಯಾಸಕ್ಕೆ ಯಾವುದೇ ಸ್ಟೈಲ್ ಶೀಟ್ ಇಲ್ಲ. ಹೀಗೂ ಡಿಸೈನ್ ಮಾಡಬಹುದಾ ಎಂದು ನನಗೆ ಒಮ್ಮೊಮ್ಮೆ ಅನಿಸಿದಾಗ ನಾನು ಒಬ್ಬ ಡಿಸೈನರ್ ಎಂಬುದು ಅರಿವಾಗುತ್ತದೆ.