ಸದಸ್ಯ:Thimmaiah BA/sandbox

ವಿಕಿಪೀಡಿಯ ಇಂದ
Jump to navigation Jump to search

ಎಲೆಕ್ಟ್ರಾನಿಕ್ ಕಾಮರ್ಸ್ , ಸಾಮಾನ್ಯವಾಗಿ (ಇ-ಶಾಪಿಂಗ್)ಇ-ಕಾಮರ್ಸ್ ಅಥವಾ eCommerce ಎಂದೇ ಪರಿಚಿತ. ಇದರಲ್ಲಿ ಯಾವುದೇ ವಸ್ತು ಗಳನ್ನು ಅಥವಾ ಸೇವೆಗಳನ್ನು ಎಲೆಕ್ಟ್ರಾನಿಕ್ ವ್ಯವಸ್ಥೆಗಳಾದ ಅಂತರ್ಜಾಲ ಹಾಗು ಇತರ ಕಂಪ್ಯೂಟರ್ ಜಾಲಗಳ ಮೂಲಕ ಕೊಂಡುಕೊಳ್ಳುವುದು ಅಥವಾ ಮಾರಾಟಮಾಡುವುದು. ಇಲೆಕ್ಟ್ರಾನಿಕವಾಗಿ ನಡೆಸಲಾಗುತ್ತಿರುವ ವ್ಯಾಪಾರದ ಪ್ರಮಾಣವು ವ್ಯಾಪಕವಾದ ಅಂತರ್ಜಾಲದ ಬಳಕೆಯಿಂದ ಅಸಾಧಾರಣ ರೀತಿಯಲ್ಲಿ ಅಭಿವೃದ್ಧಿಯಾಗಿದೆ. ಈ ವಿಧಾನದಲ್ಲಿ ನಡೆಸಲಾಗುತ್ತಿರುವ ವ್ಯಾಪಾರದಲ್ಲಿ ಇಲೆಕ್ಟ್ರಾನಿಕ್ ವಿಧಾನದಲ್ಲಿ ಹಣದ ವರ್ಗಾವಣೆ, ಸಪ್ಲೈ ಚೈನ್ ಮ್ಯಾನೇಜ್ಮೆಂಟ್, ಅಂತರ್ಜಾಲದಲ್ಲಿ ಮಾರಾಟ ವ್ಯವಸ್ಥೆ, ಆನ್ಲೈನ್ ನಲ್ಲಿ ವ್ಯವಹಾರ ಪ್ರಕ್ರಿಯೆ, ಇಲೆಕ್ಟ್ರಾನಿಕ್ ಡಾಟಾ ವಿನಿಮಯ(EDI), ಸರಕು-ಸಂಗ್ರಹ ನಿರ್ವಹಣಾ ವ್ಯವಸ್ಥೆಗಳು ಹಾಗು ಸ್ವಯಂಚಾಲಿತ ಡಾಟಾ ಸಂಗ್ರಹಣಾ ವ್ಯವಸ್ಥೆಗಳು ಉತ್ತೇಜನ ಪಡೆಯುತ್ತಿರುವ ಜೊತೆಗೆ ಹೊಸ ಆವಿಷ್ಕಾರಗಳನ್ನು ಆಕರ್ಷಿಸುತ್ತಿದೆ. ಆಧುನಿಕ ಇಲೆಕ್ಟ್ರಾನಿಕ್ ವ್ಯವಹಾರವು ವಿಶಿಷ್ಟವಾಗಿ ವರ್ಲ್ಡ್ ವೈಡ್ ವೆಬ್ ನ್ನು ಕಡೇಪಕ್ಷ ವರ್ಗಾವಣೆಯ ಚಕ್ರದ ಕೆಲವು ಹಂತದಲ್ಲಿ ಬಳಸುತ್ತದೆ, ಆದರೂ ಇದು ಒಂದು ವ್ಯಾಪಕ ಶ್ರೇಣಿಯ ತಂತ್ರಜ್ಞಾನಗಳಾದ ಇ-ಮೇಲ್ ನ್ನು ಸಹ ಒಳಗೊಂಡಿರುತ್ತದೆ.. ಒಂದು ದೊಡ್ಡ ಪ್ರಮಾಣದ ಇಲೆಕ್ಟ್ರಾನಿಕ್ ವ್ಯವಹಾರವನ್ನು, ಪರಿಣಾಮಸಿದ್ಧ ವಸ್ತುಗಳಿಗೆ ಉದಾಹರಣೆಗೆ ಅಂತರ್ಜಾಲದಲ್ಲಿ ಅಧಿಕ ಮೌಲ್ಯದ ವಸ್ತುಗಳನ್ನು ತಲುಪಲು ಸಂಪೂರ್ಣವಾಗಿ ಇಲೆಕ್ಟ್ರಾನಿಕವಾಗಿ ನಡೆಸಲಾಗುತ್ತದೆ. ಆದರೆ ಹಲವು ಇಲೆಕ್ಟ್ರಾನಿಕ್ ವ್ಯವಹಾರವು, ಯಾವುದೋ ರೀತಿಯಲ್ಲಿ ಭೌತ ವಸ್ತುಗಳ ಸಾಗಣೆಯನ್ನು ಒಳಗೊಂಡಿರುತ್ತದೆ. ಆನ್ಲೈನ್ ನ ಕಿರುಕೋಳ ಮಾರಾಟಗಾರರನ್ನು ಕೆಲವೊಂದು ಬಾರಿ ಇ-ಟೈಲರ್ ಎಂದು ಕರೆಯಲಾಗುತ್ತದೆ, ಹಾಗು ಆನ್ಲೈನ್ ಕಿರುಕೋಳ ಮಾರಾಟವನ್ನು ಇ-ಟೈಲ್ ಎಂದು ಕರೆಯಲಾಗುತ್ತದೆ. ಹೆಚ್ಚುಕಡಿಮೆ ಎಲ್ಲ ದೊಡ್ಡ ಕಿರುಕೋಳ ಮಾರಾಟಗಾರರು ವರ್ಲ್ಡ್ ವೈಡ್ ವೆಬ್ ನ ಇಲೆಕ್ಟ್ರಾನಿಕ್ ವ್ಯಾಪಾರದಲ್ಲಿ ಉಪಸ್ಥಿತರಿರುತ್ತಾರೆ. ವ್ಯಾಪಾರಗಳ ನಡುವೆ ನಡೆಸಲಾಗುವ ಇಲೆಕ್ಟ್ರಾನಿಕ್ ವ್ಯವಹಾರವನ್ನು ವ್ಯಾಪಾರದಿಂದ ವ್ಯಾಪಾರ ಅಥವಾ B2B ಎಂದು ಕರೆಯಲಾಗುತ್ತದೆ. ಆಸಕ್ತಿಯುಳ್ಳ ಎಲ್ಲ ವ್ಯಕ್ತಿಗಳಿಗೆ B2B ಮುಕ್ತವಾಗಿದೆ (ಉದಾಹರಣೆಗೆ ವಸ್ತು ವಿನಿಮಯ) ಅಥವಾ ಸೀಮಿತ ಹಾಗು ನಿರ್ದಿಷ್ಟ, ಅರ್ಹತೆ ಹೊಂದದ ಪಾಲುದಾರರನ್ನು ಹೊಂದಿದೆ (ಖಾಸಗಿ ಇಲೆಕ್ಟ್ರಾನಿಕ್ ಮಾರುಕಟ್ಟೆ). ಇಲೆಕ್ಟ್ರಾನಿಕ್ ವ್ಯವಹಾರವು ವ್ಯಾಪಾರಗಳು ಹಾಗು ಗ್ರಾಹಕರುಗಳ ನಡುವೆ ನಡೆಯುತ್ತದೆ. ಇನ್ನೊಂದು ಭಾಗದಲ್ಲಿ, ಇದನ್ನು ವ್ಯವಹಾರದಿಂದ ಗ್ರಾಹಕರವರೆಗೆ ಅಥವಾ B2C ಎಂದು ಸೂಚಿಸಲಾಗುತ್ತದೆ. ಈ ರೀತಿಯಾದ ಇಲೆಕ್ಟ್ರಾನಿಕ್ ವ್ಯವಹಾರವನ್ನು Amazon.comನಂತಹ ಸಂಸ್ಥೆಗಳು ನಡೆಸುತ್ತವೆ. ಆನ್ಲೈನ್ ಶಾಪಿಂಗ್ ಎಂಬುದು ಇಲೆಕ್ಟ್ರಾನಿಕ್ ವ್ಯವಹಾರದ ಒಂದು ರೂಪ. ಇದರಲ್ಲಿ ಕೊಂಡುಕೊಳ್ಳುವವನು ಆನ್ಲೈನ್ ನಲ್ಲಿ ನೇರವಾಗಿ ಕಂಪ್ಯೂಟರ್ ನಲ್ಲಿ ಅಂತರ್ಜಾಲದ ಮೂಲಕ ಮಾರಾಟಗಾರನ ಸಂಪರ್ಕದಲ್ಲಿರುತ್ತಾನೆ. ಈ ವಿಧಾನ ಯಾವುದೇ ಮಧ್ಯವರ್ತಿಗಳ ಸೇವೆಯನ್ನು ಹೊಂದಿರುವುದಿಲ್ಲ. ಮಾರಾಟ ಹಾಗು ಕೊಂಡುಕೊಳ್ಳುವ ವ್ಯವಹಾರವು ಇಲೆಕ್ಟ್ರಾನಿಕವಾಗಿ ಸಂಪೂರ್ಣಗೊಳ್ಳುತ್ತದೆ; ಅದು ವಾಸ್ತವದಲ್ಲಿ ಮಾತುಕತೆಯೊಂದಿಗೆ ನಡೆಯುತ್ತದೆ, ಉದಾಹರಣೆಗೆ ಹೊಸ ಪುಸ್ತಕಗಳಿಗಾಗಿ Amazon.com ಯಾವುದೇ ಒಬ್ಬ ಮಧ್ಯಸ್ಥಗಾರನ ಉಪಸ್ಥಿತಿಯಿದ್ದರೆ, ಮಾರಾಟ ಹಾಗು ಕೊಂಡುಕೊಳ್ಳುವ ವ್ಯವಹಾರವನ್ನು ಇಲೆಕ್ಟ್ರಾನಿಕ್ ವ್ಯಾಪಾರದ eBay.comಎಂದು ಕರೆಯಲಾಗುತ್ತದೆ. ಇಲೆಕ್ಟ್ರಾನಿಕ್ ವ್ಯವಹಾರವನ್ನು ಸಾಧಾರಣವಾಗಿ ಇ-ಬಿಸನೆಸ್ಸ್ ನ ಮಾರಾಟದ ಭಾಗವೆಂದು ಪರಿಗಣಿಸಲಾಗಿದೆ. ಇದು ಹಣದ ವ್ಯವಹಾರವನ್ನು ಸುಲಭಗೊಳಿಸಲು ಹಾಗು ವ್ಯಾಪಾರ ವ್ಯವಹಾರದ ಹಣ ಸಂದಾಯಕ್ಕೆ ಡಾಟಾದ ವಿನಿಮಯವನ್ನು ಒಳಗೊಂಡಿದೆ. ಆರಂಭಿಕ ಬೆಳವಣಿಗೆ[ಬದಲಾಯಿಸಿ] ಇಲೆಕ್ಟ್ರಾನಿಕ್ ವ್ಯವಹಾರ ಎಂಬ ಪದದ ಅರ್ಥವು ಕಳೆದ 30 ವರ್ಷಗಳಲ್ಲಿ ಬದಲಾವಣೆಯನ್ನು ಹೊಂದಿದೆ. ಮೂಲತಃ, ಇಲೆಕ್ಟ್ರಾನಿಕ್ ವ್ಯವಹಾರವೆಂದರೆ ಇಲೆಕ್ಟ್ರಾನಿಕವಾಗಿ ವ್ಯಾಪಾರಿ ವ್ಯವಹಾರವನ್ನು, ಇಲೆಕ್ಟ್ರಾನಿಕ್ ಡಾಟಾ ವಿನಿಮಯ(EDI)ಹಾಗು ಇಲೆಕ್ಟ್ರಾನಿಕ್ ಹಣ ವರ್ಗಾವಣೆ ಮುಂತಾದ ತಂತ್ರಜ್ಞಾನವನ್ನು ಬಳಸಿ ಸುಲಭಗೊಳಿಸುವುದು ಎಂಬ ಅರ್ಥವನ್ನು ನೀಡುತ್ತದೆ. ಇವೆರಡನ್ನೂ 1970ರ ಉತ್ತರಾರ್ಧದಲ್ಲಿ ಪರಿಚಯಿಸಲಾಯಿತು. ಇದನ್ನು ಇಲೆಕ್ಟ್ರಾನಿಕವಾಗಿ ವಾಣಿಜ್ಯ ದಾಖಲೆಗಳಾದ ಖರೀದಿ ಆದೇಶ ಅಥವಾ ಇನ್ವಾಯ್ಸ್ ಗಳನ್ನು ಕಳಿಸಲು ವ್ಯಾಪಾರಕ್ಕೆ ಸಹಾಯಕವಾಯಿತು. ಕ್ರೆಡಿಟ್ ಕಾರ್ಡ್ ಗಳ ಅಂಗೀಕಾರ ಹಾಗು ಅವುಗಳ ಬೆಳವಣಿಗೆ, ಸ್ವಯಂಚಾಲಿತ ನಗದು ಗಣಕ ಯಂತ್ರಗಳು(ATM) ಹಾಗು 1980ರಲ್ಲಿ ಪರಿಚಿತವಾದ ದೂರವಾಣಿ ಬ್ಯಾಂಕಿಂಗ್ ಗಳು ಇಲೆಕ್ಟ್ರಾನಿಕ್ ವ್ಯವಹಾರದ ಇತರ ರೂಪಗಳು. ಇ-ಕಾಮರ್ಸ್ ನ ಮತ್ತೊಂದು ರೂಪವೆಂದರೆ ವಿಮಾನ ಯಾನಕ್ಕೆ ಮುಂಗಡವಾಗಿ ಟಿಕೆಟನ್ನು ಕಾಯ್ದಿರಿಸುವ ವ್ಯವಸ್ಥೆಯನ್ನು USAನಲ್ಲಿ ಸಬ್ರೆ ಹಾಗು UKಯಲ್ಲಿ ಟ್ರವಿಕಾಮ್ ಮಾದರಿಯನ್ನು ನಿರೂಪಿಸಿತು. ಆನ್ಲೈನ್ ಶಾಪಿಂಗ್, ಇಲೆಕ್ಟ್ರಾನಿಕ್ ವ್ಯವಹಾರದ ಮತ್ತೊಂದು ರೂಪವಾದ ಇದು IBM PC, ಮೈಕ್ರೋಸಾಫ್ಟ್, ಆಪಲ್ Inc. ಹಾಗು ದಿ ಇಂಟರ್ನೆಟ್/wwwಗೆ ಮಾಹಿತಿಯನ್ನು ಮುಂಚಿತವಾಗಿ ತಿಳಿಸುತ್ತದೆ. ಕಳೆದ 1979ರಲ್ಲಿ, ಒಬ್ಬ ಇಂಗ್ಲೀಷ್ ಸೃಷ್ಟಿಕರ್ತ ಮೈಕಲ್ ಆಲ್ಡ್ರಿಚ್, 26" ಬಣ್ಣದ ಟೆಲಿವಿಶನ್ ನನ್ನು ಮಾರ್ಪಡಿಸಿ ಅದನ್ನು ನಿಜಾವಧಿ ಕಂಪ್ಯೂಟರ್ ವರ್ಗಾವಣಾ ಪ್ರಕ್ರಿಯೆಗೆ ಒಂದು ದೂರವಾಣಿ ಸಂಪರ್ಕ ಸಂಯೋಜಿಸಿ ಆನ್ಲೈನ್ ಶಾಪಿಂಗ್ ನ್ನು ಕಂಡು ಹಿಡಿದರು.[೧] ಮೊದಲು ದಾಖಲುಗೊಂಡ B2B 1981ರ ಥಾಮ್ಸನ್ ಹಾಲಿಡೆಸ್[೨], ಮೊದಲು ದಾಖಲುಗೊಂಡ B2C ಎಂದರೆ 1984ರ ಗೇಟ್ಸ್ ಹೆಡ್ ಸಿಸ್/ಟೆಸ್ಕೋ.[೩] ವಿಶ್ವದಲ್ಲಿ ಮೊದಲ ಬಾರಿಗೆ ಆನ್ಲೈನ್ ನಲ್ಲಿ ಮನೆಯಿಂದ ಶಾಪಿಂಗ್ ಮಾಡಿದ್ದು Mrs ಜೇನ್ ಸ್ನೌಬಾಲ್, 72, ಗೇಟ್ಸ್ ಹೆಡ್, ಇಂಗ್ಲೆಂಡ್, ಮೇ 1984ರಲ್ಲಿ.[೪] ಕಳೆದ 1980ರಲ್ಲಿ, ಮುಖ್ಯವಾಗಿ UKಯಲ್ಲಿ ಆಲ್ಡ್ರಿಚ್ ಹಲವು ವ್ಯವಸ್ಥಿತ ಸಮುದಾಯಗಳಾದ ಫೋರ್ಡ್, ಪ್ಯುಗೆಯೋಟ್[ಆ ಅವಧಿಯಲ್ಲಿ ಟಾಲ್ಬೋಟ್ ಮೋಟೊರ್ಸ್ ಎಂಬ ಹೆಸರಿನಲ್ಲಿ ವ್ಯವಹರಿಸುತ್ತಿದ್ದವು], ಜನರಲ್ ಮೋಟೊರ್ಸ್ ಹಾಗು ನಿಸ್ಸಾನ್ ನ ತಯಾರಿಕೆಗಳನ್ನು ಯಶಸ್ವಿಯಾಗಿ ಮಾರಾಟ ಮಾಡಿದರು.[೫] ಕಳೆದ 1984/5ರ ನಿಸ್ಸಾನ್ ವ್ಯವಸ್ಥೆಯು ಕ್ರಾಂತಿಕಾರಿಯಾಗಿತ್ತು. ಇದು ವ್ಯಾಪಾರಿ ಸಮುದಾಯದಿಂದ ಕಾರನ್ನು ಕೊಂಡುಕೊಳ್ಳುವವನಿಗೆ ಖರೀದಿಸಲು ಹಾಗು ಕಾರಿನ ಹಣ ಪಾವತಿಸಲು ಸಹಾಯ ಮಾಡಿತು. ಇದರಲ್ಲಿ ಆನ್ಲೈನ್ ನಲ್ಲಿ ಕ್ರೆಡಿಟ್ ತಾಳೆ ನೋಡುವುದಕ್ಕೂ ಸಹಕಾರಿಯಾಗಿತ್ತು.[೬] ಆಲ್ಡ್ರಿಚ್ ಆನ್ಲೈನ್ ನಲ್ಲಿ ಶಾಪಿಂಗ್ ವ್ಯವಸ್ಥೆ ಹಾಗು ಅದನ್ನು ಬಳಸಲು ವ್ಯಾವಹಾರಿಕ ವಿವರಣೆ ಎರಡನ್ನೂ ಕಂಡು ಹಿಡಿದರು. ಅವರ ವ್ಯವಸ್ಥೆಯನ್ನು ನಕಲು ಮಾಡಲಾಯಿತು; ಹಾಗು ಅವರ ವಿಚಾರಗಳನ್ನು ಕದ್ದು ಬಳಸಲಾಯಿತು. 1980ರಲ್ಲೇ ಅವರ ವ್ಯವಸ್ಥೆಗಳು 2010ರ ಅಂತರ್ಜಾಲ ಶಾಪಿಂಗ್ ವ್ಯವಸ್ಥೆಯಷ್ಟೇ ವೇಗವಾಗಿದ್ದವು. ಅವರು ಟೆಲಿಫೋನ್ ಕರೆಗಳನ್ನು ಮಾಡುತ್ತಿದ್ದರು. ಅದಲ್ಲದೇ ಬ್ರಾಡ್ ಬ್ಯಾಂಡ್ ದೊರಕದ ಕಾರಣ ಟೆಲಿಫೋನ್ ತಂತಿಗಳನ್ನು ಗುತ್ತಿಗೆ ನೀಡುತ್ತಿದ್ದರು. ಅವರು ತಮ್ಮ ಶಾಪಿಂಗ್ ವ್ಯವಸ್ಥೆಗೆ ಹಕ್ಕುಗಳನ್ನು ಪಡೆದಿರಲಿಲ್ಲ; ಹಾಗು ಅವರ ವಿಚಾರಗಳ ಆಧಾರವೇ ಇಂದಿನ ಅಂತರ್ಜಾಲ ಶಾಪಿಂಗ್. ಕಳೆದ 1990ರಿಂದೀಚೆಗೆ, ಇಲೆಕ್ಟ್ರಾನಿಕ್ ವ್ಯವಹಾರವು ಹೆಚ್ಚಿನ ವ್ಯಾಪಾರಸಂಸ್ಥೆಯ ವ್ಯವಹಾರ ಯೋಜನಾವ್ಯವಸ್ಥೆಗಳು (ERP), ಡಾಟಾ ಮೈನಿಂಗ್ ಹಾಗು ಡಾಟಾದ ತಾತ್ಕಾಲಿಕ ಸಂಗ್ರಹಣೆ ಒಂದು ಪೂರ್ವಭಾವಿ ಉದಾಹರಣೆಯೆಂದರೆ, ಇಲೆಕ್ಟ್ರಾನಿಕ್ ವ್ಯವಹಾರದಲ್ಲಿ ಭೌತಿಕ ಸರಕಿನ ಮಾರಾಟ, 1982ರಲ್ಲಿ ಪರಿಚಯವಾದ ಬಾಸ್ಟನ್ ಕಂಪ್ಯೂಟರ್ ಎಕ್ಸ್ಚೇಂಜ್, ಬಳಕೆ ಮಾಡಲಾದ ಕಂಪ್ಯೂಟರ್ ಗಳ ಒಂದು ಮಾರುಕಟ್ಟೆ. ಆನ್ಲೈನ್ ಜಾಲಗಳ ಬಗ್ಗೆ ಪೂರ್ವಭಾವಿ ಮಾಹಿತಿಯಲ್ಲಿ, ಅಮೆರಿಕನ್ ಇನ್ಫಾರ್ಮೇಶನ್ ಎಕ್ಸ್ಚೇಂಜ್ ನ ಆನ್ಲೈನ್ ಸಲಹೆಯು ಸೇರಿದೆ, ಮತ್ತೊಂದು ಪೂರ್ವಭಾವಿ ಅಂತರ್ಜಾಲ[clarification needed] ಮಾಹಿತಿ ವ್ಯವಸ್ಥೆಯನ್ನು 1991ರಲ್ಲಿ ಪರಿಚಯಿಸಲಾಯಿತು. ಕಳೆದ 1990ರಲ್ಲಿ ಟಿಮ್ ಬರ್ನರ್ಸ್-ಲೀ ವರ್ಲ್ಡ್ ವೈಡ್ ವೆಬ್ ನ ಅಂತರ್ಜಾಲ ವೀಕ್ಷಣೆಯನ್ನು ಕಂಡು ಹಿಡಿದರು. ಅಲ್ಲದೇ ಒಂದು ಶೈಕ್ಷಣಿಕ ದೂರಸಂಪರ್ಕ ಅಂತರ್ಜಾಲವನ್ನು ಮಾರ್ಪಡಿಸಿ, ವಿಶ್ವವ್ಯಾಪಿಯಾಗಿ ಪ್ರತಿಯೊಬ್ಬರೂ ಪ್ರತಿದಿನದ ಸಂಪರ್ಕ ವ್ಯವಸ್ಥೆಯಾದ ಇಂಟರ್ನೆಟ್/www ಬಳಸುವಂತೆ ಮಾಡಿದರು. ಕಳೆದ 1991ರ ತನಕ ಅಂತರ್ಜಾಲದ ಮೇಲೆ ವಾಣಿಜ್ಯ ಸಂಸ್ಥೆಗಳ ಹಕ್ಕನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿತ್ತು.[೭] ಆದಾಗ್ಯೂ, 1994ರ ಸುಮಾರಿಗೆ ಮೊದಲ ಬಾರಿ ಆನ್ಲೈನ್ ನಲ್ಲಿ ಶಾಪಿಂಗ್ ಪ್ರಾರಂಭವಾದಾಗ ಅಂತರ್ಜಾಲವು ವಿಶ್ವವ್ಯಾಪಿಯಾಗಿ ಜನಪ್ರಿಯತೆ ಗಳಿಸಿತು. ಭದ್ರತಾ ನಿಯಮಾವಳಿಗಳನ್ನು ಪರಿಚಯಿಸುವುದಕ್ಕೆ ಸುಮಾರು ಐದು ವರ್ಷ ತೆಗೆದುಕೊಂಡಿತು. ಅಲ್ಲದೇ DSL ಅಂತರ್ಜಾಲದ ಎಡೆಬಿಡದ ಸಂಯೋಜನೆಗೆ ಅನುಮತಿ ನೀಡಿತು. ಕಳೆದ 2000ರದ ಕೊನೆಯ ಹೊತ್ತಿಗೆ, ಹಲವು ಯುರೋಪಿಯನ್ ಹಾಗು ಅಮೇರಿಕನ್ ವಾಣಿಜ್ಯ ಸಂಸ್ಥೆಗಳು ವರ್ಲ್ಡ್ ವೈಡ್ ವೆಬ್ ನ ಮೂಲಕ ಸೇವೆಗಳನ್ನು ಒದಗಿಸಿತು. ಅಲ್ಲಿಂದೀಚೆಗೆ ಜನರು ಭದ್ರತಾ ನಿಯಮಾವಳಿಗಳು ಹಾಗು ಇಲೆಕ್ಟ್ರಾನಿಕ್ ಹಣ ಸಂದಾಯ ಸೇವೆಗಳನ್ನು ಬಳಸಿಕೊಂಡು ಅಂತರ್ಜಾಲದ ಮೂಲಕ ವಿವಿಧ ಸರಕುಗಳನ್ನು ಖರೀದಿ ಮಾಡುವ ಸಾಮರ್ಥ್ಯಕ್ಕೆ "ಇ ಕಾಮರ್ಸ್" ಎಂಬ ಪದವನ್ನು ಸಂಯೋಜಿಸಿದರು.