ಸದಸ್ಯ:The.mad.agni/WEP 2018-19 dec

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹರ್ಬರ್ಟ್ ಸಿ ಬ್ರೌನ್[ಬದಲಾಯಿಸಿ]

ಹರ್ಬರ್ಟ್ ಸಿ ಬ್ರೌನ್
ಜನನಹರ್ಬರ್ಟ್ ಬ್ರೋವಾರ್ನಿಕ್
ಮೇ ೨೨, ೧೯೧೨
ಲಂಡನ್, ಇಂಗ್ಲೇಂಡ್, ಯುನೈಟೆಡ್ ಕಿಂಗ್‍ಡಂ
ಮರಣDecember 19, 2004(2004-12-19) (aged 92)
ಲಫಾಯೆಟ್, ಇಂಡಿಯಾನ, ಯು.ಎಸ್
ರಾಷ್ಟ್ರೀಯತೆಅಮೇರಿಕನ್
ಕಾರ್ಯಕ್ಷೇತ್ರರಸಾಯನಶಾಸ್ತ್ರ
ಸಂಸ್ಥೆಗಳುಶಿಕಾಗೊ ವಿಶ್ವವಿದ್ಯಾಲಯ,
ಪರ್ಡ್ಯೂ ವಿಶ್ವವಿದ್ಯಾಲಯ
ಅಭ್ಯಸಿಸಿದ ವಿದ್ಯಾಪೀಠಶಿಕಾಗೋ ವಿಶ್ವವಿದ್ಯಾಲಯ
ಡಾಕ್ಟರೇಟ್ ಸಲಹೆಗಾರರುಹರ್ಮನ್ ಅರ್ವಿಂಗ್ ಶ್ಲೇಸಿಂಗರ್
ಪ್ರಸಿದ್ಧಿಗೆ ಕಾರಣಆರ್ಗಾನೊಬೋರೇನ್‍ಗಳು
ಪ್ರಭಾವಿತರುಅಕಿರಾ ಸುಜ಼ುಕಿ
ಎಯಿಚಿ ನೆಗಿಶಿ
ಗಮನಾರ್ಹ ಪ್ರಶಸ್ತಿಗಳುನ್ಯಾಶನಲ್ ಮೆಡಲ್ ಆಫ಼್ ಸೈನ್ಸ್ (1969)
ಎಲ್ಲಿಯಟ್ ಕ್ರೆಸ್ಸನ್ ಮೆಡಲ್ (1978)
ರಸಾಯನಶಾಸ್ತ್ರದಲ್ಲಿ ನೋಬೆಲ್ ಪ್ರಶಸ್ತಿ (1979)
ಪ್ರೀಸ್ಟ್ಲಿ ಮೆಡಲ್ (1981)
ಪರ್ಕಿನ್ ಮೆಡಲ್ (1982)[೧]
ಎ.ಐ.ಸಿ ಗೋಲ್ಡ್ ಮೆಡಲ್ (1985)
ಎನ್.ಎ.ಎಸ್ ಅವಾರ್ಡ್ ಇನ್ ಕೆಮಿಕಲ್ ಸೈನ್ಸ್ (1987)
ಸಂಗಾತಿಸಾರಾ ಬೇಲೆನ್ (೧೯೩೭–೨೦೦೪; ಅವರ ಸಾವು; ೧ ಮಗು)

ಹರ್ಬರ್ಟ್ ಸಿ ಬ್ರೌನ್ (ಮೇ ೨೨, ೧೯೧೨ - ಡಿಸೆಂಬರ್ ೧೯, ೨೦೦೪) ಅವರು ಇಂಗ್ಲೆ೦ಡಿನಲ್ಲಿ ಹುಟ್ಟಿದ್ದ ಅಮೇರಿಕದ ರಸಾಯನಶಾಸ್ತ್ರಜ್ಞರು ಹಾಗೂ ೧೯೭೯ರಲ್ಲಿ ಆರ್ಗ್ಯಾನೊಬೋರೇನ್(orɡanoborane)ಗಳ ಬಗ್ಗೆಯ ಅವರ ಸಂಶೋಧನೆಗೆ ರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಪಡೆದ್ದಿದ್ದಾರೆ.

ವೈಯಕ್ತಿಕ ಜೀವನ ಹಾಗೂ ವೃತ್ತಿಜೀವನ[ಬದಲಾಯಿಸಿ]

ಬ್ರೌನ್ ಅವರ ಹುಟ್ಟು ಹೆಸರು ಹರ್ಬರ್ಟ್ ಬ್ರೊವಾರ್ನಿಕ್ ಎಂದು. ಅವರ ತಂದೆ ಚಾರ್ಲ್ಸ್ ಹಾಗೂ ತಾಯಿ ಪರ್ಲ್ ಯೂಕ್ರೇನ್ ದೇಶದ ಝಿಟೋಮಿರ್ ಪ್ರಾಂತ್ಯದ ಯಹೂದಿಯರು. ಅವರು ಲಂಡನ್ನಿಗೆ ವಲಸೆ ಬಂದಿದ್ದವರು. ತಂದೆ ಚಾರ್ಲ್ಸ್ ಹಾರ್ಡ್ವೇರ್ ಅ೦ಗಡಿಯನ್ನು ನಡೆಸಿಕೊಂಡು ಬಂದವರು ಹಾಗೂ ಬಡಗಿ[೨]. ೧೯೧೪ರಲ್ಲಿ ಅವರು ಕುಟು೦ಬಸಮೇತರಾಗಿ ಶಿಕಾಗೊ ನಗರಕ್ಕೆ ಸ್ಥಳಾ೦ತರವಾದರು. ಬ್ರೌನ್ ಅವರು ಶಿಕಾಗೋನ ಕ್ರೇನ್ ಜುನಿಯರ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ತಮ್ಮ ಭಾವೀಪತ್ನಿ ಸಾರಾ ಬೇಲೆನ್ ಅವರನ್ನು ಭೇಟಿ ಆದರು. ೧೯೩೫ರಲ್ಲಿ ಶಿಕಾಗೋ ವಿಶ್ವವಿದ್ಯಾಲಯ(University of Chicago)ದಲ್ಲಿ ತಮ್ಮ ಬಿ.ಎಸ್(B.S) ಪದವಿಯನ್ನು ಅಲ್ಪ ಕಾಲದಲ್ಲಿ ಪಡೆದು ಕೊಂಡರು (೨ ವರ್ಷದ ಪದವಿಯನ್ನು ೧ ವರ್ಷದ ಒಳಗೆ ಮುಗಿಸಿ ಉತ್ತೀರ್ಣರಾದರು). ಅದೇ ವರ್ಷ ಅವರು ಅಮೇರಿಕದ ಪೌರತ್ವವನ್ನು ಪಡೆದರು. ಫೆಬ್ರವರಿ ೬, ೧೯೩೭ರಂದು ಬ್ರೌನ್-ಸಾರಾ ಬೇಲೆನ್ನರ ವಿವಾಹವಾಯಿತು. ೧೯೩೮ರಲ್ಲಿ ತಮ್ಮ ಡಾಕ್ಟರೇಟ್ ಪದವಿಯನ್ನು ಶಿಕಾಗೋ ವಿ.ವಿಯಿನ್ದ ಪಡೆದರು.

ಉದ್ಯಮವರ್ಗದಲ್ಲಿ ಅವರು ಕೆಲಸಕ್ಕೆ ಪ್ರಯತ್ನಿಸದರೂ ಅದು ವಿಫಲವಾಗಿ ಅವರು ಪದವಿ-ಉತ್ತರ(post-doc) ಸ್ಠಾನವನ್ನು ತಮ್ಮ ವಿ.ವಿಯಲ್ಲೇ ಪಡೆದರು. ಶಿಕಾಗೋ ವಿಶ್ವವಿದ್ಯಾಲಯದಲ್ಲಿ ಶಿಕ್ಷಕರಾಗಿ ೧೯೩೯ರಲ್ಲಿ ಪಡೆದರು. ಆ ಸ್ಥಾನವನ್ನು ೪ ವರ್ಷದ ನಂತರ ತ್ಯಜಿಸಿ ಡೆಟ್ರಾಯಿಟ್ ನಗರದ ವೇನ್ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇರಿಕೊಂಡರು. ೧೯೪೬ರಲ್ಲಿ ಸಹಾಯಕ ಪ್ರೊಫ಼ೆಸರ್ ಆಗಿ ಅವರಿಗೆ ಬಡ್ತಿ ಆಯಿತು. ೧೯೪೭ರಲ್ಲಿ ಪರ್ಡ್ಯೂ ವಿಶ್ವವಿದ್ಯಾಲಯದಲ್ಲಿ ಅಜೈವಿಕ ರಸಾಯನಶಾಸ್ತ್ರ(Inorganic Chemistry) ವಿಶಯದಲ್ಲಿ ಪ್ರೊಫ಼ೆಸರ್ ಆಗಿ‍ ‍‍‌ಸೇರಿಕೊಂಡರು.[೩] ಅದೇ ವಿ.ವಿಯಲ್ಲಿ ೧೯೩೮ರಲ್ಲಿ 'ಪ್ರೊಫ಼ೆಸರ್ ಎಮೆರಿಟಸ್'(Professor Emeritus) ಸ್ಥಾನ ದೊರೆತಿದ್ದು, ೨೦೦೪ರಲ್ಲಿ ಅವರ ನಿಧನದ ವರೆಗೂ ಅವರು ಆ ಸ್ಥಾನವನ್ನುಪಡೆದಿದ್ದರು. ಪರ್ಡ್ಯೂ ವಿ.ವಿಯಲ್ಲಿ 'ಹರ್ಬರ್ಟ್ ಸಿ ಬ್ರೌನ್ ಲ್ಯಾಬೊರೇಟರಿ ಆಫ್ ಕೆಮಿಸ್ಟ್ರಿ'(Herbert C Brown Laboratory of Chemistry)ಯನ್ನು ಸ್ಥಾಪಿಸಲಾಯಿತು. ಇಂಟರ್ನ್ಯಾಶನಲ್ ಅಕಾಡೆಮಿ ಆಫ಼್ ಸೈನ್ಸ್(International Academy of Science) ಸಂಸ್ಥಾಪನೆಯ ಗೌರವ ಸದಸ್ಯರಾಗಿ ಸೇವೆ ಸಲ್ಲಿಸಿದರು.

ಎರಡನೇ ಮಹಾಯುದ್ಧದ ಸಮಯದಲ್ಲಿ ಹರ್ಮನ್ ಅರ್ವಿಂಗ್ ಶ್ಲೇಸಿಂಗರ್ ಅವರೊಡನೆ ಕೆಲಸ ಮಾಡುವ ವೇಳೆ ಸೋಡಿಯಮ್ ಬೋರೋಹೈಡ್ರೈಡ್ ಸಂಯುಕ್ತವನ್ನು ಉತ್ಪಾದಿಸಲು ಹೊಸ ವಿಧಾನವನ್ನು ಕಂಡುಕೊಂಡರು. ಈ ಸಂಯುಕ್ತವನ್ನು 'ಜಲಜನಕ' ಹಾಗೂ 'ಬೋರಾನ್'ಗಳ ಸಂಯುಕ್ತಗಳಾದ 'ಬೋರೇನ್'(Boranes)ಗಳನ್ನು ಉತ್ಪಾದಿಸಬಹುದು. ಇವರ ಈ ಕಾಣಿಕೆಯಿಂದ 'ಅಸಮ್ಮಿತ ಶುದ್ಧ ಎನ್ಯಾನ್ಟಿಯೋಮರ್'(Asymmetrical Pure Enantiomer)ಗಳನ್ನು ಉತ್ಪಾದಿಸಬಹುದು. ೧೯೬೯ರಲ್ಲಿ ನ್ಯಾಶನಲ್ ಮೆಡಲ್ ಆಫ್ ಸೈನ್ಸ್(National Medal of Science) ಪ್ರಶಸ್ತಿಯನ್ನು ಗೆದ್ದರು.

ತಮ್ಮ ಹೆಂಡತಿಯು ಅವರ ಯಶಸ್ಸಿಗೆ ಸ್ಪೂರ್ತಿಯೆಂದು ಬ್ರೌನ್ ಅವರು ಹೇಳಿದ್ದರು. ತಾವು ವಿಜ್ಞಾನದಲ್ಲಿ ತೊಡಗಿಸಿಕೊಂಡಿದ್ದಾಗ ಅವರ ಹೆಂಡತಿಯು ಹಣವನ್ನು ನಿರ್ವಹಿಸುವುದು, ತಮ್ಮ ಮನೆಯನ್ನು ನೋಡಿಕೊಳ್ಳುವುದು, ಮುಂತಾದ ಜವಾಬ್ದಾರಿಗಳನ್ನು ತೆಗೆದಿಕೊಂಡಿದ್ದರಿಂದ ಅವರಿಗೆ ತಮ್ಮ ಸಂಶೋಧನೆಯ ಮೇಲೆ ಹೆಚ್ಚು ಗಮನ ಹರಿಸಲಾಯಿತು ಎಂದು ವ್ಯಕ್ತಪಡಿಸಿದ್ದರು. ಬ್ರೌನ್ ಅವರ ಹೇಳಿಕೆಯ ಪ್ರಕಾರ, ತಾವು ಸ್ಟಾಕ್‍ಹೋಮ್ ನಗರದಲ್ಲಿ ನೋಬೆಲ್ ಪ್ರಶಸ್ತಿ ಸ್ವೀಕರಿಸಿದ ನಂತರ ಹೆಂಡತಿಗೆ ಅವರ $೧,೦೦,೦೦೦ ಪ್ರಶಸ್ತಿಯನ್ನು ತಮ್ಮ ಹೆಂಡತಿಯ ಕೈಗೆ ದಾಟಿಸಿ, ತಾವು ಪದಕವನ್ನು ಮಾತ್ರ ಇಟ್ಟುಕೊಂಡಿದ್ದರಂತೆ.[೪]

೨೦೦೦ರ ವರುಷ 'ಆಲ್ಫಾ ಖೈ ಸಿಗ್ಮಾ'(Alpha Chi Sigma) ವಿದ್ಯಾರ್ಥಿ ಸಂಘದ 'ಹಾಲ್ ಆಫ್ ಫೇಮ್'(Hall of Fame)ಗೆ ಸೇರ್ಪಡೆಗೊಂಡರು.[೫]

ಡಿಸೆಂಬರ್ ೧೯,೨೦೦೪ರಂದು ಅವರು ಇಂಡಿಯಾನಾ ರಾಜ್ಯದ ಲಫಾಯೆಟ್ ನಗರದ ಆಸ್ಪತ್ರೆಯೊಂದರಲ್ಲಿ ಹೃದಯ ಆಘಾತದಿಂದ ನಿಧನಗೊಂಡರು.

ಬೋರೇನ್(Borane) ಹಾಗೂ ಡೈಬೋರೇನ್(Diborane)

ಸಂಶೋಧನೆ[ಬದಲಾಯಿಸಿ]

ಬ್ರೌನ್ ಅವರು ಶಿಕಾಗೋ ವಿಶ್ವವಿದ್ಯಾಲಯದಲ್ಲಿ ಡಾಕ್ಟರೇಟ್ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಡೈಬೋರೇನ್(diborane) ಸಂಯುಕ್ತದ ಪ್ರತಿಕ್ರಿಯೆಗಳ ಅಧ್ಯಯನವನ್ನು ಮಾಡಿದರು. ಹರ್ಮನ್ ಅರ್ವಿಂಗ್ ಶ್ಲೆಸಿಂಗರ್‍ಅವರ ಪ್ರಯೋಗಾಲಯವು ಡೈಬೋರೇನ್‍ಅನ್ನು ತಯಾರು ಮಾಡುವ ಎರಡು ಪ್ರಯೋಗಾಲಯದಲ್ಲಿ ಒಂದಾಗಿತ್ತು. ಶ್ಲೇಸಿಂಗರ್ ಅವರ ಸಂಶೋಧನೆಯ ವಿಷಯ : ಬೋರಾನ್ ಹಾಗೂ ಜಲಜನಕದ ಅತಿ ಸಣ್ಣ ಸಂಯುಕ್ತ BH3 ಅಲ್ಲದೇ B2H6 ಏಕೆ ಎಂದು.

ಬ್ರೌನ್ ಅವರು ತಮ್ಮ ಸಂಶೋಧನೆಯನ್ನು ಪ್ರಾರಂಭಿಸಿದಾಗ, ಅವರು ಡೈಬೋರೇನ್‍ನ ವಿವಿಧ ಪ್ರತಿಕ್ರಿಯೆಗಳನ್ನು ಗಮನಿಸಿದರು. ಡೈಬೋರೇನ್ ಆಲ್ಡಿಹೈಡ್(aldehydes) ಹಾಗೂ ಕೀಟೋನ್‍(ketones)ಗಳೊಡನೆ ಪ್ರತಿಕ್ರಿಯಿಸಿ ಡೈಆಲ್ಕೊಕ್ಸಿಬೋರೇನ್‍(dialkoxyboranes)ಗಳ ಉತ್ಪಾದನೆಯನ್ನು ಮಾಡಿದರು. ಈ ಡೈಆಲ್ಕೊಕ್ಸಿಬೋರೇನ್‍‍ಗಳು ಆಲ್ಕೋಹಾಲ್‍ಗಳನ್ನು ಉತ್ಪಾದಿಸಲು ಉಪಯೋಗಿಸಬಹುದು. ಆದರೆ, ಬ್ರೌನ್‍ಅವರ ಡಾಕ್ಟೋರಲ್ ಥೀಸಿಸ್‍ಗೆ ಹೆಚ್ಚು ಖ್ಯಾತಿ ಪಡೆಯಲಿಲ್ಲ.

ಹೈಡ್ರೊಬೋರೇಶನ್-ಆಕ್ಸಿಡೇಶನ್(Hydroboration-Oxidation)

೧೯೩೯ರಲ್ಲಿ ಬ್ರೌನ್‍ಅವರು ಶ್ಲೇಸಿಂಗರ್ ಅವರ ಪ್ರಯೋಗಾಲಯದಲ್ಲಿ ಸಹಾಯಕ ಸಂಶೋಧಕರಾದರು. ಬ್ರೌನ್ ಹಾಗೂ ಶ್ಲೇಸಿಂಗರ್ ತಮ್ಮ ಪ್ರಯೋಗಾಲಯದಲ್ಲಿ ಯುರೇನಿಯಂ (IV) ಬೋರೋಹೈಡ್ರೈಡ್ (Uranium(IV) Borohydride) ಸಂಯುಕ್ತವನ್ನು ಲಿಥಿಯಂ ಹೈಡ್ರೈಡ್‍ನ (Lithium Hydride) ಒಂದು ರಾಸಾಯನಿಕ ಕ್ರಿಯೆಯ ಸಂಶೋಧನೆಯ ನಂತರ, ಲಿಥಿಯಂ ಹೈಡ್ರೈಡ್ ಬದಲಿಗೆ ಸೊಡಿಯಂ ಹೈಡ್ರೈಡ್‍ಅನ್ನು ಉಪಯೋಗಿಸಿದರು. ಅವರು ೧೯೪೭ನಲ್ಲಿ ಪರ್ಡ್ಯೂ ವಿ.ವಿ.ಯನ್ನು ಸೇರಿದಾಗ ಅವರು ಸೋಡಿಯಂ ಬೋರೋಹೈಡ್ರೈಡ್(Sodium Borohydride) ಸಂಯುಕ್ತದ ಮೇಲೆ ಸಂಶೋಧನೆಯನ್ನು ಮಾಡಿ , ಅದಕ್ಕಿಂತ ಹೆಚ್ಚು ಸಶಕ್ತ ಅಪಕರ್ಷಣಕಾರಿಯನ್ನು(Reducing Agent) ಪಡೆಯಲು ಶ್ರಮಪಟ್ಟರು. ಈ ಅಪಕರ್ಷಣಕಾರಿಗಳನ್ನು ಸಂಶೋಧಿಸುತ್ತಿರಬೇಕಾದರೆ ಬ್ರೌನ್ ಅವರು ಸಹೋದ್ಯೋಗಿ ಮೈಸೂರಿನ ಡಾ.ಬಿ.ಸಿ.ಸುಬ್ಬ ರಾವ್ ಅವರು ಸೋಡಿಯಂ ಬೋರೋಹೈಡ್ರೈಡ್ ಹಾಗೂ ಇಥೈಲ್ ಒಲಿಯೇಟ್(Ethyl oleate) ಒಂದು ಅಸಾಧಾರಣ ಪ್ರತಿಕ್ರಿಯೆಯನ್ನು ಗಮನಿಸಿದರು.

ಬೋರೋಹೈಡ್ರೈಡ್ ಇಂದ ಒಂದು ಜಲಜನಕ ಹಾಗೂ ಬೋರಾನ್ ಆಣುವನ್ನು ಇಥೈಲ್ ಒಲಿಯೇಟ್‍ನಲ್ಲಿರುವ ಇಜ್ಜಲ-ಇಜ್ಜಲದ ಮಧ್ಯೆ ಇರುವ ದ್ವಿ-ಬಂಧ(Carbon-carbon double bond)ಕ್ಕೆ ಸೇರಿಕೊಳ್ಳಿತು. ಈ ಜೈವಿಕ ಬೋರೇನ್ ಸಂಯುಕ್ತವನ್ನು ಆಕ್ಸಿಡೈಸ್(oxidise) ಮಾಡಿ ಒಂದು ಆಲ್ಕೊಹಾಲ್‍ಅನ್ನು ತಯಾರಿಸಬಹುದು. ಈ ಎರಡು ಹಂತದ ಪ್ರತಿಕ್ರಿಯೆಯನ್ನು ಇಂದು "ಹೈಡ್ರೊಬೋರೇಶನ್-ಆಕ್ಸಿಡೇಶನ್"(Hydroboration-oxidation) ಎಂದು ಕರೆಯಲಾಗುತ್ತಿದೆ. ಈ ಪ್ರತಿಕ್ರಿಯೆಯಿಂದ ಅಲ್ಕೀನ್‍(alkene)ಗಳನ್ನು ಆಂಟಿ-ಮಾರ್ಕೊವ್ನಿಕೊವ್ ಆಲ್ಕೊಹಾಲ್(Anti-Markovnikov alcohol)ಗಳನ್ನಾಗಿ ಪರಿವರ್ತಿಸಬಹುದು.

ಉಲ್ಲೇಖಗಳು[ಬದಲಾಯಿಸಿ]

  1. "SCI Perkin Medal". Science History Institute. Archived from the original on 2 February 2018. Retrieved 24 March 2018. {{cite web}}: Unknown parameter |deadurl= ignored (help)
  2. Laylin, James K. (30 October 1993). Nobel Laureates in Chemistry, 1901-1992. Chemical Heritage Foundation. ISBN 9780841226906 – via Google Books.
  3. "Biography of Herbert C. Brown". Purdue University. 2001. Archived from the original on 2008-03-26. Retrieved 2007-08-27.
  4. Wilhelm Odelberg (1979). "Herbert C. Brown: The Nobel Prize in Chemistry 1979". Les Prix Nobel. Nobel Foundation. Archived from the original on 2007-08-19. Retrieved 2007-08-27.
  5. "Alpha Chi Sigma Hall of Fame". Alpha Chi Sigma Fraternity. Retrieved 2008-01-07.