ವಿಷಯಕ್ಕೆ ಹೋಗು

ಸದಸ್ಯ:Sybil Cutinha 12345

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸ್ವಾಮಿ ವಿವೇಕಾನಂದ

ನರೇಂದ್ರನಾಥ ದತ್ತನ ಜನನ ೧೮೬೩ನೆಯ ಇಸವಿಯ ಜನವರಿ ೧೨ರ ಸೋಮವಾರದಂದು ಆಯಿತು. ಗಂಡು ಮಕ್ಕಳಿಗಾಗಿ ಹಾತೊರೆಯುತ್ತಿದ್ದ ವಿಶ್ವನಾಥ ದತ್ತ ಮತ್ತು ಭುವನೇಶ್ವರಿ ದೇವಿ ದಂಪತಿಗೆ ಒಮ್ಮೆ ಕನಸಿನಲ್ಲಿ ಶಿವನು ತಾನೇ ಮಗುವಾಗಿ ಜನಿಸುವ ಹಗೆ ತೋರಿತು. ವಿಶ್ವನಾಥ ದತ್ತರು ವಕೀಲರಾಗಿದ್ದರು. ಭುವನೇಶ್ವರಿ ದೇವಿಯು ದೈವಭಕ್ತೆಯಾಗಿದ್ದಳು.

ಬಾಲ್ಯದಲ್ಲಿ ಅತ್ಯಂತ ತುಂಟನಾಗಿದ್ದು ವಿನೋದದಲ್ಲಿ ಕಾಲ ಕಳೆಯುತ್ತಿದ್ದರು. ಅದರೊಂದಿಗೆ ಆಧ್ಯಾತ್ಮ ವಿಷಯಗಳ ಬಗ್ಗೆ ತೀವೃ ಆಸಕ್ತಿಯೂ ಇತ್ತು. ತಾಯಿಯು ಹೇಳುತ್ತಿದ್ದ ರಾಮಾಯಣ, ಮಹಾಭಾರತದ ಕಥೆಗಳು ನರೇಂದ್ರನ ಮನಸ್ಸಿನಲ್ಲಿ ಅಚ್ಚಳಿಯದ ಪ್ರಭಾವವನ್ನು ಬೀರಿದವು. ಬಡವರನ್ನು ಕಂಡರೆ ಕನಿಕರವೂ, ಪರಿವ್ರಾಜಕ ಸನ್ಯಾಸಿಗಳನ್ನು ಕಂಡರೆ ಅಪಾರ ಆಕರ್ಷಣೆ ಇತ್ತು.

ತಾರುಣ್ಯದಲ್ಲಿ ನರೇಂದ್ರನು ಗಂಭೀರ ಚೆಲುವಿನ ಕೆಚ್ಚಿನ ಯುವಕನಾಗಿದ್ದ. ಒಳ್ಳೆಯ ಕ್ರೀಡಾಪಟುವಿನ ಮೈಕಟ್ಟು ಅನುರಣಿಸುವ ಧ್ವನಿ, ತೀಕ್ಷ್ಣ ಬುದ್ಧಿಯವನಾಗಿದ್ದ. ಕ್ರೀಡೆ, ತತ್ವಶಾಸ್ತ್ರ, ಸಂಗೀತ ವಿದ್ಯೆಗಳಲ್ಲಿ ಪ್ರವೀಣನಾಗಿದನು. ನರೇಂದ್ರನಲ್ಲಿ ಧಾರ್ಮಿಕ ಸಂಪ್ರದಾಯಗಳಲ್ಲಿ ಗೌರವ ಒಂದು ಕಡೆ, ಇನ್ನೊಂದೆಡೆ ಮೊನಚಾದ ಬುದ್ಧಿ ಶಕ್ತಿಯೊಂದಿಗೆ ವಿಮರ್ಶೆ ಮಾಡುವಂತಹ ಶಕ್ತಿ. ಹೀಗೆ ೧೮೮೧ರಲ್ಲಿ ಶ್ರೀ ರಾಮಕೃಷ್ಣನ ಶಿಷ್ಯವೃತ್ತಿ ಪ್ರಾರಂಭವಾಯಿತು. ಶ್ರೀ ರಾಮಕೃಷ್ಣರು ಅನಾರೋಗ್ಯದಿಂದಾಗಿ ನರಳುತ್ತಿದ್ದರು. ಅವರು ಮಹಾ ಸಮಾಧಿಸ್ಥರಾಗುವ ಮೂರು - ನಾಲ್ಕು ದಿನಗಳ ಮುಂಚೆ ತಮ್ಮ ಶಕ್ತಿಯನ್ನೆಲ್ಲಾ ನರೇಂದ್ರನಿಗೆ ಧಾರೆ ಎರೆದು "ನಾನು ನಿನಗೆ ಧಾರೆ ಎರೆದ ಶಕ್ತಿಯ ಫಲದಿಂದ ಅನೇಕ ಮಹತ್ವದ ಕಾರ್ಯವನ್ನೆಸಗುವೆ. ಅನಂತರವೇ ನೀನು ಎಲ್ಲಿಂದ ಬಂದಿರುವೆಯೋ ಅಲ್ಲಿಗೆ ಮರಳುವೆ" ಎಂದರು. ಆ ಸಮಯದಲ್ಲಿ ನರೇಂದ್ರನಿಗೆ ಸಂಚಾರ ಯಾತ್ರೆ ಕೈಗೊಳ್ಳ ಬೇಕೆಂಬ ಅಭಿಲಾಷೆಯಿಂದ ಕೈಗೊಂಡನು.