ಸದಸ್ಯ:Sweety Glenvita D Souza
ನನ್ನ ಹೆಸರು ಸ್ವೀಟಿ ಗ್ಲೆನ್ವಿಟ ಡಿ ಸೋಜಾ. ನಾನು ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯ ರಾಣಿಪುರ ಎಂಬ ಸ್ಥಳದಲ್ಲಿ ವಾಸಿಸುತಿದ್ದೇನೆ. ನಾನು ಪದುವ ಕಾಲೇಜ್ನಲ್ಲಿ ವಾಣಿಜ್ಯ ಬಗ್ಗೆ ಡಿಗ್ರಿ ವ್ಯಾಸಂಗ ಮಾಡುತಿದ್ದೇನೆ. ನನ್ನ ಬಾಲ್ಯದ ಕಲಿಕೆಯನ್ನು ತೊಕ್ಕೋಟ್ಟ್ನಲ್ಲಿ ಮುಗಿಸಿ ತದನಂತರ ಸಂತ ಜೆರೋಸ ಶಾಲೆಗೆ ಸೇರಿ ಅಲ್ಲಿ ನನ್ನ ಪ್ರೌಢ ಶಿಕ್ಷಣವನ್ನು ಕೊನೆಗೊಳಿಸಿದೆ. ನಾನು ನನ್ನ ಪ್ರೌಢ ಶಿಕ್ಷಣದಲ್ಲಿ ಥ್ರೋ ಬಾಲ್ ಆಟದಲ್ಲಿ ಚೆನ್ನಾಗಿ ಆಡುತಿದ್ದೆ. ಹಾಗೆ ಹಲವು ಬಾರಿ ಶಾಲೆಗಳ ಪಂದ್ಯಾಟ ದಲ್ಲಿ ಭಾಗವಹಿಸಿ ಗೆದ್ದು ಶಾಲೆಗೆ ಕೀರ್ತಿ ತಂದಿದ್ದೇವೆ. ನನ್ನ ಪಿ ಯು ಶಿಕ್ಷಣಕ್ಕಾಗಿ ಸಂತ ಆಗ್ನೇಸ್ ಕಾಲೇಜ್ ಸೇರಿ ಮುಗಿಸಿದೆ ಅಲ್ಲಿಯೂ ಕೂಡ ಕ್ರೀಡೆಯಲ್ಲಿ ಅತ್ಯುತ್ತಮವಾಗಿ ಭಾಗವಹಿಸಿದ್ದೆ.
ನಾನು ಪಿ ಯು ವಾಣಿಜ್ಯ ವಿಭಾಗದಲ್ಲಿ ಮುಗಿಸಿ ತದನಂತರ ಏನು ಮಾಡುವುದು ಎಂದು ಗೊಂದಲದಿರುವಾಗ ಮನೆಯವರ ಸಮ್ಮತಿ ಮೇರೆಗೆ ನಾನು ಲ್ಯಾಬ್ ಟೆಕ್ನಿಷಿಯನ್ ಕೋರ್ಸ್ ಸೇರಿ ಮುಗಿಸಿದೆ. ಆದರೂ ನನ್ನ ಆಸೆ ಡಿಗ್ರಿ ಮಾಡಬೇಕು ಎಂಬುದು ಅದ್ಕಕಾಫಿ ಈ ವರ್ಷ ಪದವ ಕಾಲೇಜುಗೆ ಸೇರಿದೆ.
ನನಗೆ ಬಾಲ್ಯದಿಂದಲೇ ಕ್ರೀಡೆಯಲ್ಲಿ ತುಂಬಾ ಆಸಕ್ತಿ. ಕ್ರಿಕೆಟ್ ಹಾಗೂ ಥ್ರೋ ಬಾಲ್ ತುಂಬಾ ಇಷ್ಟದ ಆಟ ವಾಗಿತ್ತು ಅದೇ ರೀತಿ ಸಂಗೀತ ಕೇಳುವುದು ಅದೇ ರಿತಿ ಸಿನಿಮಾ ಹುಚ್ಚು ಜಾಸ್ತಿ ಇತ್ತು. ನನ್ನ ವಿರಾಮದ ಸಮಯವನ್ನು ನನ್ನ ತಮ್ಮನ ಜೊತೆ ತರ್ಲೆ ಮಾಡಿ ಆಟ ಆಡುತ್ತಾ ದಿನ ಕಳೆಯುತ್ತೆನೆ. ನಾನು ನನ್ನ ಭವಿಷ್ಯದಲ್ಲಿ ಉತ್ತಮ ಕ್ರೀಡಾಗಾರ್ತಿ ಆಗಲು ಇಚ್ಚಿಸುತ್ತೇನೆ ಅದೇರೀತಿ ಜೀವನಕ್ಕಾಗಿ ಒಂದು ಯುಂ ಬಿ ಎ ವಿದ್ಯಾಭಾಸ ಮಾಡಿ ಆಡಳಿತ ಹುದ್ದೆ ಸಿಗಬೇಕು ಎನ್ನುವುದು ನನ್ನ ಆಕಾಂಶೆ ಆಗಿದೆ. ನಾನು ಬಲವಾದ ನಂಬಿಕತ್ಸೆ ಹುಡುಗಿ ಹಾಗೂ ಛಲಗಾರ್ತಿ. ದೇವರ ಹಾಗೂ ಅಪ್ಪ ಅಮ್ಮನ ಆಶೀರ್ವಾದ ಸದಾ ನನ್ನ ಮೇಲೆ ಇದ್ದು ಅವರ ಪ್ರೀತಿ ವಾತ್ಯಲ್ಯಕ್ಕೆ ನಾನು ಚಿರಋಣಿಯಾಗಿದ್ದೇನೆ. ನನ್ನ ಗೆಳೆಯ ಗೆಳತಿಯರು ನನಗೆ ಬಲವಾದ ಪ್ರೋತ್ತ್ಸಾಹ ನೀಡುತ್ತಾ ಬಂದಿದ್ದಾರೆ. ಇದು ನನ್ನ ಬಗ್ಗೆ ಇರುವ ಮೊಟಕು ಪರಿಚಯ. ಧನ್ಯವಾದಗಳು.