ಸದಸ್ಯ:Swathi0366/ನನ್ನ ಪ್ರಯೋಗಪುಟ

ವಿಕಿಪೀಡಿಯ ಇಂದ
Jump to navigation Jump to search

ನನ್ನ ಬಗ್ಗೆ[ಬದಲಾಯಿಸಿ]

ನಾನು ಭಾಗಿಯಾಗಿದ್ದ ಕ್ಯಾಂಪ್ನ ಒಂದು ಚಿತ್ರ
Emblem of National Cadet Corps (India).png

ನನ್ನ ಹೆಸರು ಸ್ವಾತಿ ಎಸ್.ನಾನು ಕ್ರಿಸ್ಟ್ ಕಾಲೇಜಿನಲ್ಲಿ ಬಿ ಎಸ್ ಸಿ ಓದುತ್ತಿದ್ದೇನೆ .ನನ್ನ ತಂದೆ ಸೆಕ್ಯೂರಿಟಿ ಸೂಪರ್ವೈಸರ್ ಹಾಗಿ SAP ನಲ್ಲಿ ಕೆಲಸ ಮಾಡುತ್ತಿದ್ದಾರೆ ಹಾಗು ನನ್ನ ತಾಯಿ ದರ್ಜಿಯಾಗಿ ಕೆಲಸ ಮಾಡುತ್ತಿದ್ದಾರೆ .ನಾನು ಕಾವೇರಿ ವಿದ್ಯಾಕ್ಷೇತ್ರಂ ಶಾಲೆಯಲ್ಲಿ ವ್ಯಾಸಂಗ ಮಾಡಿದೆ.ನನಗೆ ಚಿಕ್ಕಂದಿನಿಂದಲೇ ಕ್ರೀಡೆಗಳಲ್ಲಿ ತುಂಬ ಆಸಕ್ತಿ ಇತ್ತು.ನನ್ನ ಪದವಿಪೂರ್ವ ವ್ಯಾಸಂಗ ಮಾಡುತ್ತಾ ಎನ್ ಸಿ ಸಿ (ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ )ಯಲ್ಲಿಯೂ ಸಹ ಭಾಗಿಯಾಗಿದ್ದೆ.

ಎನ್.ಸಿ.ಸಿ[ಬದಲಾಯಿಸಿ]

ಚಿತ್ರ:ಕ್ರೈಸ್ಟ್ ಯೂನಿವರ್ಸಿಟಿಗೆ.jpg
ಕ್ರೈಸ್ಟ್ (ಡೀಮ್ಡ್ ಟು ಬಿ ಯುನಿವರ್ಸಿಟಿ)

ಎನ್ ಸಿ ಸಿ ಯಲ್ಲಿ ಮೂರು ವಿಭಾಗಗಳಿವೆ ಅವು -ನೌಕಾಪಡೆ ,ವಾಯುಪಡೆ ಹಾಗು ಭೂಸೇನಾಪಡೆ .ಇದರಲ್ಲಿ ನಾನು ಭೂಸೇನಾಪಡೆಯಲ್ಲಿ ಮುಂದುವರಿಯುತ್ತಿದ್ದೇನೆ .ಇದರಲ್ಲಿ ಮೂರು ವರ್ಷದ ಅವಧಿ ಇದ್ದು ,ಅದರಲ್ಲಿ ನಾನು ಕೊನೆಯ ವರ್ಷದಲ್ಲಿ ಇದ್ದೇನೆ .ನಾನು ೧೫ ಕ್ಯಾಂಪ್ಗಳನ್ನು ಯಶಶ್ವಿಯಾಗಿ ಮುಗಿಸಿದ್ದೇನೆ .ಅವುಗಳಲ್ಲಿ ಕೆಲವು ಮಹತ್ವಪೂರ್ಣ ಕ್ಯಾಂಪ್ಗಳು ಹೀಗಿವೆ .ಹಿಮಾಲಯನ್ ಮೌಂಟೈನೀರಿಂಗ್ ಇನ್ಸ್ಟಿಟ್ಯೂಟ್ನನಲ್ಲಿ -ರಾಫ್ಟಿಂಗ್ ,ರಿವರ್ ಕ್ರಾಸಿಂಗ್,ಪರ್ವತಾರೋಹಣ ಹಾಗು ಟ್ರೆಕಿಂಗ್ ಮುಂತಾದವುಗಳ್ಳನ್ನು ಯಶಶ್ವಿಯಾಗಿ ಮುಗಿಸಿದೆ,ಇದು ಡಾರ್ಜಿಲಿಂಗ್ನಲ್ಲಿ ನಡೆದಿತ್ತು .ರಾಜಸ್ಥಾನದ ಅಜಮೇರಿನಲ್ಲಿ ನಡೆದ ಆಲ್ ಇಂಡಿಯಾ ಗರ್ಲ್ಸ್ ಟ್ರೆಕ್ಕಿಂಗ್ನ ಭಾಗಿಯಾಗಿದ್ದೆ .೮೦ ದಿನಗಳ ಕಾಲದ ಸಂಪೂರ್ಣ ಸೇನಾ ತರಬೇತಿಯಿಂದ ಕೂಡಿದ ರಾಜವನ್ನು ಪ್ರತಿನಿಧಿಸುವ "ಆಲ್ ಇಂಡಿಯಾ ಥಲ್ ಸಾಯಿನಿಕ್ ಕ್ಯಾಂಪ್" ದೆಹಲಿಯಲ್ಲಿ ಸಂಪನ್ನಗೊಂಡಿತು.ಅಲ್ಲಿ ನಡೆದ ಜ್ಯೂಡ್ಗಿಂಗ್ ಡಿಸ್ಟೆನ್ಸ್ ಎಂಬ ಸ್ಪರ್ಧೆಯಲ್ಲಿ ರಾಜ್ಯವನ್ನು ಪ್ರತಿನಿಧಿಸಿ ಬೆಳ್ಳಿಯ ಪದಕವನ್ನು ಪಡೆದಿರುತ್ತೇನೆ .ಅಂಡಮಾನ್ ಮತ್ತು ನಿಕೋಬಾರ್ ದ್ವೇಪದಲ್ಲಿ ನಡೆದ "ಸ್ಪೆಷಲ್ ಅಂಶನಲ್ ಇಂಟಿಗ್ರೇಷನ್ ಕ್ಯಾಂಪ್ "ನಲ್ಲಿ ಭಾಗವಹಿಸಿದ ೫ ಜನರಲ್ಲಿ ನಾನು ಒಬ್ಬಳಾಗಿದ್ದೆ .

ಕ್ರೀಡಾಸಕ್ತಿ[ಬದಲಾಯಿಸಿ]

ಕ್ರಿಸ್ಟ್ ಯೂನಿವರ್ಸಿಟಿ ಆಯೋಜಿಸಿದ ೭೦೦೦ ಮೀಟರ್ (ಮೆಟಾಮಾರ್ಫಾಸಿಸ್) ಹಾಗು ೧೦೦೦೦ ಮೀಟರ್ (ಪಲ್ಸ್) ಮ್ಯಾರಥಾನ್ ಓಟದಲ್ಲಿ ಪ್ರಥಮ ಸ್ಥಾನವನ್ನು ಗಳಿಸಿರುತ್ತೆನೆ .ಹೀಗೆ ಪಠ್ಯದ ಜೊತೆಯಲ್ಲಿ ಪಠ್ಯೇತರ ಚಟುವಟಿಕೆಗಳಲ್ಲೂ ಆಸಕ್ತಿ ಹೊಂದಿರುವ ನಾನು ಅವುಗಳ ಸಾಕಾರಕ್ಕೋಸ್ಕರ ಅವಿರತವಾಗಿ ಪ್ರಯತ್ನಿಸುವಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದೇನೆ .