ಸದಸ್ಯ:Swasthika jain/ನನ್ನ ಪ್ರಯೋಗಪುಟ1

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಫ್ರಾಕ್[ಬದಲಾಯಿಸಿ]

ಮಧ್ಯಮ ವರ್ಗದ ಇಂಗ್ಲೀಷರು ಮೊದಲು ಫ್ರಾಕ್ ಉಡುಪನ್ನು ಬಳಸುತ್ತಿದ್ದರು. ಬ್ರಿಟಿಷ್ ಮತ್ತು ಕಾಮನ್ ವೇಲ್ತ ದೇಶಗಳಲ್ಲಿನ ಮಹಿಳೆಯರು ಫ್ರಾಕ್ ನ್ನು ಧರಿಸುತ್ತಿದ್ದರು. ಆಸ್ಟ್ರೆಲಿಯಾದಲ್ಲಿ ಇದನ್ನು ಮುಖ್ಯವಾಗಿ ಅವರು ಧರಿಸುವ ಬಟ್ಟೆಗೆ ಫ್ರಾಕ್ ಅಥವಾ ಗೌನ್ ಎಂಬ ಹೆಸರು. ಈ ಡ್ರೆಸನ್ನು ವಿಶೇಷ ಸಂಧರ್ಭಗಳಲ್ಲಿ ಬಳಸುತ್ತಿದ್ದರು.ಇತ್ತೀಚಿನ ದಿನದಲ್ಲಿ ಪ್ರಾಕ್ ಒಂದು ಪ್ಯಾಷನ್ ಆಗಿದೆ.ಯಾವುದೇ ಸಮಾರಂಭಗಳಿಗೆ, ಸಿಂಪಲ್ಲಾಗಿ ಡ್ರೆಸ್ ಇಷ್ಟಪಡುವವರು ಪ್ರಾಕ್‍ನ್ನು ಬಳಸುತ್ತಾರೆ. ಆದರೆ ಈಗ ಎಲ್ಲಾ ದೇಶದಲ್ಲಿ ಕೂಡ ಬಳಸುತ್ತಿದ್ದಾರೆ. ಭಾರತದಲ್ಲಿ ಹೊಸ ಅಳೆಯನ್ನು ಮೂಡಿಸಿದೆ.

ಇತಿಹಾಸ[ಬದಲಾಯಿಸಿ]

ಮೂಲತಃ ಫ್ರಾಕ್ ಸಾಮಾನ್ಯವಾಗಿ ವಿಶಾಲ ಪೂರ್ಣ ತೋಳುಗಳನ್ನು ಹೊಂದಿರುವ ಸಡಿಲ ಮತ್ತು ಉದ್ದನೆಯ ಉಡುಪಾಗಿದೆ. ಹೆಚ್ಚಾಗಿ ಇದನ್ನು ಪಾರ್ಟಿ ಸಂಧರ್ಭಗಳಲ್ಲಿ ಬಳಸುತ್ತಾರೆ.ಮಹಿಳೆಯರ ಅಚ್ಚುಮೆಚ್ಚಿನ ಉಡುಗೆಯಲ್ಲಿ ಇದು ಒಂದು. 16ನೇ ಶತಮಾನದಿಂದ 20ನೇ ಶತಮಾನದವರೆಗೆ. ಮಹಿಳೆಯರ ಉಡುಗೆ ಅಥವಾ ಫ್ರಾಕ್‍ನ್ನು ಚಳಿಯ ದಿನದಲ್ಲಿ ಹೆಚ್ಚಾಗಿ ಬಳಸುತ್ತಿದ್ದರು. 17ನೇ ಶತಮಾದಲ್ಲಿ ಫ್ರಾಕ್ ಎಂಬುದು ಬ್ರಿಟನ್‍ನ ಕುರುಬರು, ಕಾರ್ಮಿಕರು ಮತ್ತು ಕೃಷಿ ಕಾರ್ಮಿಕರು ಧರಿಸಿರುವ ಪೂರ್ಣಉದ್ದನೆಯ ಹೊರ ಉಡುಪು ಆಗಿತ್ತು. 18ನೇ ಶತಮಾನದಲ್ಲಿ ಬ್ರಿಟನ್ ಮತ್ತು ಅಮೆರಿಕಾದಲ್ಲಿ ಫ್ರಾಕ್ ಸಾಂಪ್ರದಾಯಿಕವಾಗಿ ಕಾರ್ಮಿಕ ವರ್ಗದವರಿಂದ ಪಡೆದ ವಿಶಾಲವಾದ ,ಪ್ಲಾಟ್ ಕಾಲರ್ ಹೊಂದಿರುವ ಉಡುಗೆ ಆಗಿತ್ತು.ಅಲ್ಲದೇ ಬೇಟೆಯಾಡುವಿಕೆ ಅಥವಾ ಇತರ ದೇಶದ ಅನ್ವೇಷಣೆಗಳಿಗೆ ಹೋಗುವಾಗ ಪುರುಷರು ಈ ಉಡುಪನ್ನು ಕೋಟ್‍ನ ರೀತಿಯಲ್ಲಿ ಧರಿಸುತ್ತಿದ್ದರು. ಕ್ರಮೇಣ ಫ್ರಾಕ್ ನಿಖರವಾದ ಐತಿಹಾಸಿಕ ವಿಕಸನ ಹೊಂದಿತ್ತು. 19 ನೇ ಶತಮಾನದ ಆರಂಭದ ಹೊತ್ತಿಗೆ ಗಂಡಸರಿಗಾಗಿ ಫ್ರಾಕ್ ಕೋಟ್‍ನ್ನು ತಯಾರಿಸಲಾಯಿತು. ಈ ಫ್ರಾಕ್ ಕೋಟ್ ಪೂರ್ಣ ತೊಳುಗಳನ್ನು , ಪಕೆಟ್ ಮತ್ತು ವಿ-ಆಕಾರದ ಕಾಲರ್‍ನ್ನು ಹೊಂದಿತ್ತು. ಇದನ್ನು ಹೊಸ ರೀತಿಯ ವಿನ್ಯಾಸದೊಂದಿಗೆ ಮಾಡಲಾಯಿತು.ರಷ್ಯದಲ್ಲಿ ಫ್ರಾಕನ್ನು ತೆಳುವಾದ ಬಟ್ಟೆಯಿಂದ ಮಾಡುತ್ತಿದ್ದರು. ಇದನ್ನು ಎಲಿಜಾಬೇತ್ ಲಿಬ್ರನ್ ರಾಣಿಯು ಈ ತರಹದ ಉಡುಪನ್ನು ಧರಿಸುತ್ತಿದ್ದಳು. ನಂತರ ರಷ್ಯದ ಮಹಿಳೆಯರು ಅದನ್ನು ನೋಡಿ ಆಕರ್ಷಿತರಾಗಿ ತಾವು ಕೂಡ ಧರಿಸುತ್ತಿದ್ದರು. ಇದರಲ್ಲಿ ಈಗ ಹೊಸ ರೀತಿಯ ವಿನ್ಯಾಸಗಳನ್ನು ಹೊಂದಿದೆ. ಅದರಲ್ಲಿ ಸಿಲ್ಕ , ಕಟಾನ್, ಅಲ್ಲದೇ ಸೀರೆಯಲ್ಲಿಯೂ ಹೋಲಿಸಬಹುದಾದ ಫ್ರಾಕ್‍ಗಳು ಇವೆ. ಟ್ಯಾಟೂ ಡಿಸೈನ್‍ನ ಫ್ರಾಕ್ಗಳು ಇಂದು ಹೊಸ ರೀತಿಯಲ್ಲಿ ಕಾಣಿಸುತ್ತಿವೆ.ಈ ಉಡುಗೆಗಳು ವಿವಿಧ ರೀತಿಯ ಬಣ್ಣಗಳು, ಮತ್ತು ಸೀಸನ್ ಗೆ ತಕ್ಕಂತೆ ಧರಿಸುವ ಫ್ರಾಕ್‍ಗಳು ಇವೆ. ವಿನೂತನವಾಗಿ ಕಲರ್‍ಪುಲ್ ಫ್ರಾಕ್‍ಗಳು ಪುಟ್ಟ ಮಕ್ಕಳಿಗೆ ಹೆಚ್ಚು ಮೆರುಗನ್ನು ಕೊಡುತ್ತದೆ. ಅದರಲ್ಲಿ ವಿವಿಧ ವಿದಗಳು ಇವೆ. ಅವುಗಳೆಂದರೆ ಅಂಬ್ರೆಲಾ ಫ್ರಾಕ್, ವೆಲ್ವಟ್ ಬಲೂನ್ ಫ್ರಾಕ್, ಯೋಕ್ ಫ್ರಾಕ್, ಲಾಂಗ್ ಫ್ರಾಕ್, ಫ್ರಿಲ್ ಫ್ರಾಕ್,ಸ್ಟ್ರಪ್ ಫ್ರಾಕ್, ನೆಟ್ಟೆಡ್ ಫ್ರಾಕ್, ವೆಲ್ವೆಟ್ ಫ್ರಾಕ್, ಸಿಂಥೆಟಿಕ್ ಫ್ರಾಕ್‍ಗಳು ರಾರಾಜೀಸುತ್ತಿವೆ. ಇತ್ತೀಚೆಗೆ ಫ್ರಾಕ್ ಡ್ರೆಸ್‍ಗಳ ಮೇಲೆ ಹೊಸ ರೀತಿಯಾದ ತ್ರೀಡಿ ಪ್ರಿಂಟ್‍ನ ಡಿಸೈನ್‍ಗಳನ್ನು ಮಾಡಿದ್ದಾರೆ. ವಿವಿಧ ಬಣ್ಣಗಳಿಂದ ಮಾಡಿದ ಈ ವಿನ್ಯಾಸಘಲು ಯಾವುದೇ ರೀತಿಯಲ್ಲಿಯೂ ಹಾಳಾಗುವುದಿಲ್ಲ. ==ಉಲ್ಲೇಖ==[೧] [೨]

  1. https://www.macquariedictionary.com.au/
  2. https://books.google.co.in/books/about/Carefree_Clothes_for_Girls.html?id=aBOuvrYcX1AC