ಸದಸ್ಯ:Swasthik kanyady123
ಜಗದೀಶ್ ಎನ್. ಅರೇಬನ್ನಿಮಂಗಲ
ಅಭಿವೃದ್ದಿಗೂ ಸೈ, ರಾಜಕೀಯಕ್ಕೂ ಜೈ ಜಗದೀಶ್ ಎನ್. ಅರೆಬನ್ನಿಮಂಗಲ
ಜಗದೀಶ್ ಎನ್ ಅರೇಬನ್ನಿಮಂಗಲ ಬೆಂಗಳೂರಿನ ಯುವ ರಾಜಕಾರಣಿ ಮತ್ತು ಉದ್ಯಮಿ. ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಮೀಪದಲ್ಲಿರುವ ಬಂಡಿಕೋಡಿಗೆಹಳ್ಳಿ ಎಂಬ ಪಂಚಾಯತ್‌ನ ಸದಸ್ಯರೂ ಹೌದು. 2020-22 ರವರೆಗೆ ಗ್ರಾಮಪಂಚಾಯತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ. ಈ ಅವಧಿಯಲ್ಲಿ ಇವರು ಕೈಗೊಂಡ ಹಲವು ಕ್ರಿಯಾ ಯೋಜನೆಗಳು ಇಂದಿಗೂ ಜನಮಾನಸದಲ್ಲಿ ನೆಲೆಯೂರಿದೆ. ಈ ಅವಧಿಯಲ್ಲಿ ಪಂಚಾಯತ್ ವ್ಯಾಪ್ತಿಯಲ್ಲಿ ಸರಿಯಾದ ರೀತಿಯಲ್ಲಿ ಇವರು ನಡೆಸಿದ ತೆರಿಗೆ ಸಂಗ್ರಹಣೆ ಹಲವು ನಾಯಕರಿಂದ ಮೆಚ್ಚುಗೆಗೆ ಪಾತ್ರವಾಗಿದೆ.
ಎಸಿ ನಾರಾಯಣಸ್ವಾಮಿ ಹಾಗೂ ಪದ್ಮಮ್ಮ ದಂಪತಿಗಳ ಪ್ರಥಮ ಪುತ್ರನಾಗಿ ಜನಿಸಿದ ಜಗದೀಶ್ ಎನ್ ಅರೇಬನ್ನಿಮಂಗಲ ಸಿಂಗಹಳ್ಳಿ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿರುತ್ತಾರೆ. ಬೂದಿಗೆರೆಯ ಸಿದ್ದಗಂಗಾ ವಿದ್ಯಾಸಂಸ್ಥೆಯಲ್ಲಿ ಪ್ರೌಢ ಮತ್ತು ಪದವಿ ಶಿಕ್ಷಣ ಮುಗಿಸಿರುತ್ತಾರೆ. ಕೃಷಿ ಕುಟುಂಬದಲ್ಲಿ ಜನಿಸಿದ ಜಗದೀಶ್ ಎನ್. ಅರೇಬನ್ನಿಮಂಗಲ ರೇಷ್ಮೆ ಕೃಷಿ, ಹೈನುಗಾರಿಕೆಯಲ್ಲಿ ಬಾಲ್ಯದಿಂದಲೇ ತೊಡಗಿಸಿಕೊಂಡಿದ್ದರು. ತ್ರಿವೇಣಿ ವಿ.ಎನ್ ಇವರನ್ನು ಮದುವೆಯಾಗಿದ್ದು ಮೂರು ಜನ ಮಕ್ಕಳನ್ನು ಹೊಂದಿದ್ದಾರೆ.

ಪಂಚಾಯತ್ ಅಧ್ಯಕ್ಷನಾಗಿ ಸಾಧನೆ
ಬಂಡಿಕೋಡಿಗೆಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಜಗದೀಶ್ ಎನ್ ಅರೇಬನ್ನಿಮಂಗಲ ಇವರು ಮಾಡಿದ ಕೆಲಸಗಳು ಮಾದರಿ. ಆರ್‌ಎಸ್‌ಎಸ್ ಸ್ವಯಂಸೇವಕರಾಗಿದ್ದ ಜಗದೀಶ್ ರಿಗೆ ನಾಯಕತ್ವ ಕಲೆ ಸಹಜವಾಗಿ ಒಲಿದಿತ್ತು. ಈ ಹಿನ್ನೆಲೆ ಗ್ರಾಮಪಂಚಾಯತ್ ಎಲೆಕ್ಷನ್ ನಲ್ಲಿ ಸ್ಪರ್ಧಿಸಿ ವಿಜಯಿಯಾದರು. ಮೊದಲ ಅವಧಿಗೆ ಪಂಚಾಯತ್ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದ ಜಗದೀಶ್ ಎನ್. ಅರೆಬನ್ನಿಮಂಗಲ ಸಾಕಷ್ಟು ಅಭಿವೃದ್ದಿ ಕೆಲಸಗಳನ್ನು ಆರಂಭಿಸಿದರು. ಬೆಂಗಳೂರಿನ ಹೊರವಲಯಗಳಲ್ಲಿ ಕಡಿಮೆಯಾಗುತ್ತಿದ್ದ ಅಂತರ್ಜಲವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅನೇಕ ಗ್ರೌಂಡ್ ವಾಟರ್ ರೀಚಾರ್ಜ್ ಕಾರ್ಯಕ್ರಮಗಳು, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಹೊಸ ಬೋರ್ ವೆಲ್ ನಿರ್ಮಾಣ, ಪ್ರತೀ ಗ್ರಾಮದಲ್ಲೂ ನೀರಿನ ಸಂಪ್ ನಿರ್ಮಾಣ ಕಾರ್ಯ ಈ ಅವಧಿಯಲ್ಲಿ ಮಾಡಿರುತ್ತಾರೆ.
2020-21 ರ ಅವಧಿಯಲ್ಲಿ ದೇಶಕ್ಕೆ ಮಹಾಮಾರಿ ಕೊರೋನಾ ಅಪ್ಪಳಿಸಿದಾಗ ಬಿಕೆ ಹಳ್ಳಿ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಟಾಸ್ಕ್ ಫೋರ್ಸ್ ರಚಿಸಿ, ಪ್ರತೀ ಊರಿಗೂ ಸ್ಯಾನಿಟೈಸರ್ ಸಿಂಪಡಿಸಿ ಸಾವಿನ ಸಂಖ್ಯೆ ಒಂದಂಕಿಯ ಗಡಿ ದಾಟದಂತೆ ನೋಡಿಕೊಂಡಿದ್ದು ಗ್ರಾಮಪಂಚಾಯತ್ ಸಾಧನೆ.
ಸುರಕ್ಷತೆಗೆ ಒತ್ತು
ಗ್ರಾಮ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಸುರಕ್ಷತೆಗೆ ಒತ್ತು ನೀಡಿದ ಜಗದೀಶ್ ಎನ್. ಹಲವು ಕ್ರಮಗಳನ್ನು ತನ್ನ ಅಧಿಕಾರಾವಧಿಯಲ್ಲಿ ತೆಗೆದುಕೊಂಡಿದ್ದರು. ಹೊರರಾಜ್ಯಗಳಿಂದ ಗ್ರಾಮಕ್ಕೆ ಉದ್ಯೋಗದ ಸಲುವಾಗಿ ಹಲವಾರು ಜನ ಬರುತ್ತಿರುವುದನ್ನು ಮನಗಂಡು ಗ್ರಾಮಸ್ಥರ ಸುರಕ್ಷತೆಗಾಗಿ ಅಲ್ಲಲ್ಲಿ ಸಿಸಿಟಿವಿ ಆಲವಡಿಕೆಗೆ ಮುಂದಾದರು. ಜೊತೆಗೆ ಸೋಲಾರ್ ದೀಪಗಳು, ಅತ್ಯಾಧುನಿಕ ಸುಸಜ್ಜಿತ ಲೈಟಿಂಗ್ ವ್ಯವಸ್ಥೆಯನ್ನು ತಮ್ಮ ಅಧ್ಯಕ್ಷತೆಯ ಅವಧಿಯಲ್ಲಿ ಮಾಡಿರುತ್ತಾರೆ.

ಧಾರ್ಮಿಕ ಮಹಾಪೋಷಕರಾಗಿ ಜಗದೀಶ್ ಎನ್ ಅರೆಬನ್ನಿಮಂಗಲ
ಮಹಾನ್ ದೈವಭಕ್ತರಾಗಿರುವ ಜಗದೀಶ್ ಎನ್. ಅರೆಬನ್ನಿಮಂಗಲ ಮಹಾನ್ ಧಾರ್ಮಿಕ ಮಹಾಪೋಷಕರೂ ಹೌದು. ಅರೆಬನ್ನಿಮಂಗಲ ಗ್ರಾಮ ಹಾಗೂ ಇದರ ಸುತ್ತಮುತ್ತಲಿನ ಹತ್ತು ಹಲವು ದೇವಸ್ಥಾನಗಳನ್ನು ಜೀರ್ಣೋದ್ದಾರ ಮಾಡಿರುವ ಕೀರ್ತಿ ಜಗದೀಶ್ ಇವರಿಗೆ ಸಲ್ಲುತ್ತದೆ. ಅರೇಬನ್ನಿಮಂಗಲ ಗ್ರಾಮದ ಹೆಬ್ಬಾಗಿಲಿನ ಬೃಹತ್ ಆಂಜನೇಯ ದ್ವಾರವನ್ನು ತನ್ನ ಸ್ವಂತ ಖರ್ಚಿನಲ್ಲಿ ನಿರ್ಮಿಸಿದ್ದು ಜಗದೀಶ್. ಇದರ ಜೊತೆ ಗ್ರಾಮದಲ್ಲಿ ಹದಗೆಟ್ಟಿದ್ದ ಸುಮಾರು 400 ವರ್ಷಗಳಷ್ಟು ಪುರಾತನ ಕಲ್ಯಾಣಿಗೆ ಹೊಸ ಸ್ವರೂಪವನ್ನು ಕೊಟ್ಟಿದ್ದಾರೆ.
ಶೈಕ್ಷಣಿಕ ಮತ್ತು ಸಾಂಸ್ಕೃತಿಕ ರಾಯಭಾರಿಯಾಗಿ
ಸರ್ಕಾರಿ ಶಾಲೆಗಳ ಅಭಿವೃದ್ದಿ ಮತ್ತು ಅವುಗಳ ಪೋಷಣೆಯಲ್ಲೂ ಜಗದೀಶ್ ಎನ್. ಅರೇಬನ್ನಿಮಂಗಲ ಪ್ರಮುಖ ಪಾತ್ರ ವಹಿಸಿದ್ದಾರೆ. ಬಿಕೆ ಹಳ್ಳಿ ಗ್ರಾಮಪಂಚಾಯತ್ ವ್ಯಾಪ್ತಿಯ ಸುತ್ತಮುತ್ತಲಿನ ಹಲವು ಸರ್ಕಾರಿ ಶಾಲೆಗಳ ಕಟ್ಟಡಗಳನ್ನು ಬಹುಮಹಡಿಗೆ ಏರಿಸಿದ್ದು ಜಗದೀಶ್ ಎನ್ ರವರು. ಸುತ್ತಮುತ್ತಲಿನ ಹಲವು ಸಂಸ್ಥೆಗಳ ಜೊತೆ ಸಿಎಸ್‌ಆರ್ ಸಹಾಯ ಪಡೆದು ಶಾಲೆಗೆ ಹಾಗೂ ಊರಿಗೆ ಬೇಕಾದ ಹಲವು ಸೌಲಭ್ಯಗಳನ್ನು ಜಗದೀಶ್ ಒದಗಿಸಿಕೊಟ್ಟಿದ್ದಾರೆ. ಪ್ರತೀ ಸರ್ಕಾರಿ ಶಾಲೆಗೆ ಅಜಾದಿ ಕಾ ಅಮೃತ್ ಮಹೋತ್ಸವ ಎಂಬ ಶೀರ್ಷಿಕೆಯಡಿ 1 ಲಕ್ಷಕ್ಕೂ ಹೆಚ್ಚು ಪುಸ್ತಕಗಳನ್ನು ವಿತರಿಸಿ ವಿದ್ಯಾರ್ಥಿಗಳಿಗೂ ನೆರವಾಗುತ್ತಿದ್ದಾರೆ. ಬಡ ವಿದ್ಯಾರ್ಥಿಗಳಿಗೆ ಸ್ಕಾಲರ್ಷಿಪ್ ಆರಂಭಿಸಿದ ಕೀರ್ತಿಯೂ ಜಗದೀಶ್ ಎನ್. ಅರೇಬನ್ನಿಮಂಗಲ ಇವರಿಗೇ ಸಲ್ಲುತ್ತದೆ.
ಮಹಿಳಾ ಸಬಲೀಕರಣ ಮತ್ತು ಯುವಜನತೆಗೆ ಪ್ರೋತ್ಸಾಹ
ಬಿಕೆ ಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ನಿಟ್ಟಿನಲ್ಲಿ ಸ್ವ ಉದ್ಯೋಗ ತರಬೇತಿ, ಹೊಲಿಗೆ ಯಂತ್ರಗಳ ವಿತರಣೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಮೊತ್ತ ಮೊದಲ ಬಾರಿಗೆ ಪಂಚಾಯತ್ ವ್ಯಾಪ್ತಿಯ ತಾಯಂದಿರಿಗೆ ಸಾಮೂಹಿಕ ಸೀಮಂತ ಕಾರ್ಯಕ್ರಮ ಆಯೋಜಿಸಿದ್ದೂ ಜಗದೀಶ್ ಎನ್, ಅರೇಬನ್ನಿಮಂಗಲ ಸಾಧನೆ. ಗ್ರಾಮದ ಜನರಿಗಾಗಿ ಕೆರೆಗಳ ಆವರಣದಲ್ಲಿ ವಾಕಿಂಗ್ ಸ್ಪೇಸ್, ಪಾರ್ಕ್ ಗಳ ನಿರ್ಮಾಣ, ಜಿಮ್ ನಿರ್ಮಾಣ ಮಾಡಿದ್ದು ಜಗದೀಶ್ ಎನ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿ
ಉದ್ಯಮಿಯಾಗಿ ಜಗದೀಶ್ ಎನ್. ಅರೇಬನ್ನಿಮಂಗಲ
ರಾಜಕಾರಣ ಪ್ರವೇಶಕ್ಕೂ ಮೊದಲು ಜಗದೀಶ್ ಎನ್ ಅರೇಬನ್ನಿಮಂಗಲ ಉದ್ಯಮ ಲೋಕಕ್ಕೆ ಎಂಟ್ರಿ ಕೊಟ್ಟಿದ್ದರು. ಬೈಕ್ ಶೋರೂಂ ಉದ್ಯಮ, ನೃತ್ಯ ತರಬೇತಿ ಕೇಂದ್ರ, ಕಲ್ಲು ಕೋರೆ ಉದ್ಯಮ, ಚಲನಚಿತ್ರ ನಿರ್ಮಾಣ ಸೇರಿದಂತೆ ಹಲವು ವ್ಯಾಪಾರಗಳನ್ನು ನಡೆಸಿದ್ದರು. ಇದಾದ ಬಳಿಕ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಮುಂದಾಗಿ ಅದರಲ್ಲಿ ಯಶಸ್ಸು ಸಾಧಿಸಿದ್ದಾರೆ. ಇವರ ಮಾಲಕತ್ವದ ಅಧೀರ ಪ್ರಾಪರ್ಟೀಸ್ ಇಂದು ನಂಬಿಕಸ್ಥ ಡೆವಲರ್ಸ್ ಕಂಪನಿಯಾಗಿ ಇಂದು ದೇಶದಾದ್ಯಂತ ಹೆಸರು ಮಾಡುತ್ತಿದೆ.
ಚಲನಚಿತ್ರ ರಂಗದಲ್ಲಿ ಜಗದೀಶ್ ಎನ್ ಅರೇಬನ್ನಿಮಂಗಲ
ಚಲನಚಿತ್ರ ನಟನಾಗಬೇಕು ಎಂಬುದು ಜಗದೀಶ್ ಎನ್ ಅರೇಬನ್ನಿಮಂಗಲ ಇವರ ಬಾಲ್ಯದ ಕನಸು. ಹೀಗಾಗಿ ಹಲವು ಚಿತ್ರಗಳಲ್ಲಿ ನಾಯಕನಟ, ಸಹನಟರಾಗಿ ಬಣ್ಣಹಚ್ಚಿದ್ದಾರೆ. ಮಾತ್ರವಲ್ಲದೆ ಹಲವು ಸಿನಿಮಾಗಳ ನಿರ್ಮಾಣವನ್ನೂ ಮಾಡಿ ಯಶಸ್ವಿಯಾಗಿದ್ದಾರೆ. ಸಾಧನೆ ಎಂಬ ಕಲಾತ್ಮಕ ಚಿತ್ರವನ್ನು ನಿರ್ಮಿಸಿದ್ದು ಈ ಚಿತ್ರಕ್ಕೆ ಹಲವು ಪ್ರಶಸ್ತಿಗಳು ಸಂದಿವೆ. ೨೦೨೪ರಲ್ಲಿ ತೆರೆಕಂಡ ಕಾಮಿಡಿ ಕಿಲಾಡಿ [ಅನೀಶ್ ಪೂಜಾರಿ ವೇಣೂರು] ನಿರ್ದೇಶನದ [ದಸ್ಕತ್] ಎಂಬ ಸೂಪರ್ ಹಿಟ್ ಚಿತ್ರವನ್ನು ಕನ್ನಡದಲ್ಲಿ ನಿರ್ಮಾಣ ಮಾಡಿದ್ದಾರೆ.