ವಿಷಯಕ್ಕೆ ಹೋಗು

ಸದಸ್ಯ:Sumalatha 1998/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರಾಜಕುಮಾರಿ ಅಮೃತ್ ಕೌರ್

[ಬದಲಾಯಿಸಿ]

ಜೀವನ ;

[ಬದಲಾಯಿಸಿ]

ಇವರು ಉತ್ತರ ಪ್ರದೇಶದ ಲಕ್ನೋದಲ್ಲಿ ೧೮೮೬ರಲ್ಲಿ ಜನಿಸಿದರು. ಈಕೆ ಕಪು‍ರ್ತಲ ರಾಜ್ಯದ ಅರಸುಮನೆತನದವಳು. ತಮ್ಮ ಹೆಚ್ಚಿನ ಶಿಕ್ಷಣವನ್ನು ಇಂಗ್ಲೆಂಡಿನಲ್ಲಿ ಪಡೆದರು. ಇವರು ಕ್ರೀಡಾಸಕ್ತರಾಗಿದ್ದು ಪಂಜಾಬಿನಲ್ಲಿ ಕ್ರೀಡೆಗಳನ್ನು ನಡೆಸಲು ಸಂಘಟನಾ ಕಾರ್ಯಕೈಗೊಂಡರು. ಅಮೃತ್ ಕೌರ್ ಅವರ ತಂದೆಯ ಸ್ನೇಹಿತರಾದ ಗೋಖಲೆ ರವರ ಪ್ರಭಾವ ಇವರ ಮೇಲೆ ಬಿದ್ದಿತು. ೧೯೧೯ರ ರೌಲತ್ ಮಸೂದೆಯ ವಿರುದ್ದದ ಆಂದೋಲನದಲ್ಲಿ ಮಹಾತ್ಮ ಗಾಂಧೀಜಿಯವರ ಒಡನಾಟ

ಬೆಳಸಿಕೊಂರ್ಡರು. ನಂತರ ಗಾಂಧೀಜಿಯವರ ಕಾರ್ಯದರ್ಶಿಯಾಗಿ ೧೬ವರ್ಷ ಕಾರ್ಯನಿರ್ವಹಿಸಿದರು. ೧೯೨೬ರಲ್ಲಿ ಸ್ಥಾಪಿತವಾದ ಅಖಿಲ ಭಾರತ ಸ್ರ್ತೀ ಸಮಾವೇಶದ ಸ್ಥಾಪನೆಯ ಕಾರಣ ಕರ್ತರೇ ಇವರು.

ಅನೇಕ ವರ್ಷಗಳ ಕಾಲ ಈ ಸಂಸ್ಥೆಯ ಕಾರ್ಯದರ್ಶಿಯಾಗಿದ್ದರು. ಉಪ್ಪಿನಸತ್ಯಾಗ್ರಹದಲ್ಲಿ ಭಾಗವಹಿಸಿ ಬಂಧಿತರಾದರು. ಮತೀಯ ತೀರ್ಪು ಹೊರಬಂದ ಮೇಲೆ ಅದರ ವಿರುದ್ಧವೂ ಹೋರಾಟ ಮಾಡಿದರು. ೧೯೪೨ರ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಕಾರ್ಯಪ್ರವೃತ್ತರಾದ ಇವರು ದಿನಬಿಟ್ಟುದಿನ ಮೆರವಣಿಗೆಗಳನ್ನು ಕೈಗೊಳ್ಳುತ್ತಿದ್ದರು.

https://en.wikipedia.org/wiki/Uttar_Pradesh

ಲಕ್ನೋ