ಸದಸ್ಯ:Sukritha.s/sandbox1

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉರುಮೆ ವಾದ್ಯ[ಬದಲಾಯಿಸಿ]

ಮುನ್ನುಡಿ[ಬದಲಾಯಿಸಿ]

ನಾಡಿನ ಬಹುತೇಕ ಹಳ್ಳಿಗಳಲ್ಲಿ ಕಂಡುಬರುವ ಚರ್ಮ ವಾದ್ಯಗಳಲ್ಲಿ ಉರುಮೆ ವಾದ್ಯವು ಒಂದು. ಇದನ್ನು 'ಹರೆ' ಎಂದು ಕರೆಯುವುದೂ ಉಂಟು. ಸಾಮಾನ್ಯವಾಗಿ 'ಮಾರಿ' ದೇವಾಲಯ ಇರುವ ಗ್ರಾಮಗಳಲ್ಲಿ 'ಹರೆ' ಇದ್ದೇ ಇರುತ್ತದೆ. ಹೆಣ್ಣು ದೇವರ ಜಾತ್ರೆ ಉತ್ಸವಗಳಲ್ಲೇ ಈ ವಾದ್ಯವನ್ನು ಹೆಚ್ಚಾಗಿ ಬಳಸುವುದು. ಉರೆಮೆ ಬಾರಿಸುವ ಕಲೆ ಆದಿ ದ್ರಾವಿಡರಲ್ಲಿ ಮಾತ್ರ ಪ್ರಚಲಿತವಿರುವಂತೆ ಕಾಣುತ್ತದೆ ಮತ್ತು ವಂಶಪಾರಂಪರ್ಯವಾಗಿ ರೂಢಿಯಲ್ಲಿ ಬಂದಿದೆ. ದೇವರ ಉತ್ಸವ ಹೊರತಾಗ ವಾದ್ಯ ಬಡಿಯದೆ ಹೋದರೆ ಅವರ ವಂಶವೇ ನಿರ್ವಂಶವಾಗುತ್ತದೆ ಎಂಬ ನಂಬಿಕೆ ಅವರದು. ಕಲಾವಿದರು ಸಾಮ್ಯಾನ ವೇಷದಲ್ಲಿದ್ದು ತಲೆಗೆ ಕೆಂಪು ಬಣ್ಣದ ವಸ್ತ್ರವನ್ನು ಸುತ್ತಿರುತ್ತಾರೆ ಹೆಗಲ ಮೇಲಿಯೂ ವಸ್ತ್ರವಿರುತ್ತದೆ. ವಾದ್ಯವನ್ನು ಕೊರಳಿಗೆ ತಗುಲಿ ಹಾಕಿಕೊಂಡಿರುತ್ತಾರೆ.

ವಾದ್ಯದ ವಿಶೇಷತೆ[ಬದಲಾಯಿಸಿ]

ಸುಮಾರು ೧೫ ಅಂಗುಲ ವ್ಯಾಸವಿರುವ ೨೦ ಅಂಗುಲ ಉದ್ದವಿರುವ ಕಂಚು ಅಥವಾ ಹಿತ್ತಾಳೆ ಹೊಳವಿಕೆ (ಕೊಳಗ) ಅದರ ಎರಡು ಕಡೆಗೊ ಹದ ಮಾಡಿದ ಆಡಿನ ಚರ್ಮವನ್ನು ಕಟ್ಟಿ ಬಿಗಿದ ಉರಿಮೆ ಬಡಿಯಲು ಎರಡು ಗಟ್ಟಯಾದ ತೆಂಗಿನ ಅಥವಾ ಈಚಲ ನಯವಾದ ಕಡ್ಡಿಗಳನ್ನು ಬಳಸುತ್ತಾರೆ. ಉಜ್ಜುವ ಕೋಲು ಸಲ್ಪ ಬಾಗಿರುತ್ತದೆ. ಅದನ್ನು ಜಾಣ್ಮೆಯಿಂದ ಉರುಮೆ ಚರ್ಮದ ಮೇಲೆ ಆಡಿಸಿದೆರೆ ಒಂದು ವಿಲಕ್ಷಣ ಶಬ್ಧ ಬರುತ್ತದೆ. ಚರ್ಮದ ಮೇಲೆ ಉಜ್ಜುವ ಸಳ್ಥದಲ್ಲಿ ಕಪ್ಪು ಲೇಪವಾದಂತೆ ಗುರುತನ್ನು ಕಾಣಬಹುದು. ದೇವರ ಉತ್ಸವ ಹೊರಡುವ ಮುಂಚೆ ದೇವಸ್ಥಾನದ ಮುಂದೆ ಉರುಮೆ ಬಾರಿಸಿದರೆ ಅದರ ಶಬ್ದವನ್ನು ಕೇಳಿ ಊರಿನ ಮಕ್ಕಳೆಲ್ಲ ಬಂದು ಸೇರುತ್ತಾರೆ. ಈ ವಾದ್ಯವನ್ನು ಬಾರಿಸುವುದು ಇನ್ನುವುದಕಿಂತ ಉಜ್ಜುವುದು ಎನ್ನುವುದು ಸೂಕ್ತ. ದೇವರ ಉತ್ಸವಗಳಲ್ಲಿ ಉರುಮೆ ಉಜ್ಜುವಾಗ ದಾರಿಯಲ್ಲಿ ಮನೆಗಳ ಮುಂಭಾಗದಲ್ಲಿ ದೇವರು ಮಂಗಲಾರತಿಗರ ನಿಂತ ಕಡೆ ಕಲಾವಿದರು ದೇವರ ಮಹಿಮೆಯನ್ನು ಕೊಂಡಾಡುತ್ತಾ;

'ಕುಣಿ ಕುಣಿ ಅಂದರೆ,

ನಾ ಎಂಗೆ ಕುಣಿಯಲಿ...'

ಎಂದು ಹಾಡುತ್ತಾ ಕೆಕೇ ಹಾಕುತ್ತಾ ಕುಣಿಯುತ್ತಾರೆ. ಉರಿಮೆ ಬಾರಿಸುವುದು ಬಹುಮಟ್ಟಿಗೆ ಗಂಡಸರೇ. ಆದರೆ ಜೀವನೋಪಾಯಕ್ಕೆ ಮಾರಮ್ಮನನ್ನು ಹೊತ್ತು ಊರೂರಿಗೆ ಹೋಗುವ ಅಲೆಮಾರಿ ತಂಡಗಳಲ್ಲಿ ಹೆಂಗಸರು ಉರುಮೆ ಬಾರಿಸುತ್ತಾರೆ. ಉರುಮೆ ಉಜ್ಜುವ ಕಲಾವಿದರ ಹಾವಭಾವಗಳನ್ನು ನೋಡುವುದು ಸ್ವಾರಸ್ಯಕರ. ಕಲಾವಿದರಿಗೆ ಇದು ಉದ್ಯೋಗದ ಆಶ್ರಯಯೂ ಹೌದು. ಅಂತೆಯೇ ಹಿಂದೆ ಅವರ ಸೇವೆಗೆ ಮನೆಗೆ ಒಂದಿಷ್ಟು ಎಂದು ದವಸ ಧ್ಯಾನದ 'ಆಯ' ಕೊಡುತ್ತಿದ್ದರು.

ಉಲ್ಲೇಖ[ಬದಲಾಯಿಸಿ]

  1. ಗೋ.ರು.ಚನ್ನಬಸಪ್ಪ, ಕರ್ನಾಟಕ ಜನಪದ ಕಲೆಗಳು, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ. ಪುಟ ಸಂಖ್ಯೆ: ೧೨ - ೧೩.