ಸದಸ್ಯ:Sudeep.Sullia/ನನ್ನ ಪ್ರಯೋಗಪುಟ

ವಿಕಿಪೀಡಿಯ ಇಂದ
Jump to navigation Jump to search

ಶ್ರೀ ಪಂಚಮುಖಿ ಆಂಜನೇಯ ಕ್ಷೇತ್ರ ಹನುಮಗಿರಿ. ಇದು ತುಳುನಾಡಿನ ಪ್ರವಾಸಿ ತಾಣಗಳಲ್ಲೊಂದಾಗಿದೆ. ಈ ಧಾಮದಲ್ಲಿ ಸುಮಾರು ೧೩ ಅಡಿ ಎತ್ತರದ ಕೃಷ್ಣಶಿಲೆಯಲ್ಲಿ ಕೆತ್ತಿದ ಪಂಚಮುಖಿ ಆಜನೇಯನ ವಿಗ್ರಹವಿದೆ.ಶ್ರೀ ರಾಮ ಹನುಮರ ದಿವ್ಯ ಸಂದೇಶವನ್ನು ಸಾರುವ ಕಲ್ಲು ಬಂಡೆಗಳಲ್ಲಿ ಪ್ರಪಂಚದ ಏಕೈಕ ಶಿಲಾ ಮಾನಸೋಧ್ಯಾನವಿದೆ. ಪುತ್ತೂರಿನಿಂದ ಕಾವು ಮಾರ್ಗವಾಗಿ ೨೨ ಕಿ.ಮೀಟರ್ ಚಲಿಸಿದಾಗ ಶ್ರೀ ಕ್ಷೇತ್ರವು ಸಿಗುತ್ತದೆ. ಪಂಚಮುಖಿ ವಿಗ್ರಹವು ಹನುಮಂತ,ನರಸಿಂಹ, ವರಾಹ ಹಯಗ್ರೀವ ಮತ್ತು ಗರುಡ ಹೀಗೆ ಒಟ್ಟು ೫ ಮುಖಗಳನ್ನು ಒಳಗೊಂಡಿದೆ. ಸಂಜೀವಿನಿಗಾಗಿ ದ್ರೋಣಾಚಲವನ್ನು ಎತ್ತಿ ತಂದಿರುವ ಹನುಮನ ಸಾಹಸವನ್ನು ಬಿಂಬಿಸಲು ಸಂಜೀವಿನಿಯ ಉದ್ಯಾನವನವನ್ನೂ ಇಲ್ಲಿ ನಿರ್ಮಿಸಲಾಗಿದೆ. ಇಲ್ಲಿ ಬಂದು ಹರಕೆ ಹೊತ್ತುಕೊಂಡರೆ ಕಾಯಿಲೆಗಳು ದೂರವಾಗುತ್ತವೆ ಅನ್ನುವುದು ಭಕ್ತರ ಪಾಲಿನ ನಂಬಿಕೆ. ದೇವಳದ ಸುತ್ತಲಿನ ಪರಿಸರದಲ್ಲಿ ಕರಾವಳಿಯ ಪ್ರಮುಖ ಬೆಳೆಗಳಾದ ತೆಂಗು, ಬಾಳೆ, ಅಡಿಕೆ, ಕಾಳೂ ಮೆಣಸುಗಳನ್ನು ಬೆಳೆಯಲಾಗಿದೆ.

ಧಾರ್ಮಿಕ ಕಾರ್ಯಗಳು[ಬದಲಾಯಿಸಿ]

ಇಲ್ಲಿ ಹಲವಾರು ಧಾರ್ಮಿಕ ಕಾಯ‍ಗಳೂ ನಡೆಯತ್ತವೆ. ಭಜನೆ, ಪಾಠ-ಪ್ರವಚನ, ರಾಮ ಹನುಮರ ದಿವ್ಯಸಂದೇಶಗಳನ್ನು ಇಲ್ಲಿ ಹೇಳಲಾಗುತ್ತದೆ.ವರ್ಷಂಪ್ರತಿ ನಡೆಯುವ ಜಾತ್ರೆಯಲ್ಲಿ ಹಲವು ಧಾಮಿ‍ಕ ಕಾಯ‍ಗಳು ಜರುಗುತ್ತವೆ. ಜಾತ್ರಾ ಅವಧಿಯಲ್ಲಿ ವಿಧ ಬಗೆಯ ಸಾಂಸ್ಕೃತಿಕ ಕಾರ್ಯಕ್ಕರಮಗಳೂ ನಡೆಯುತ್ತವೆ.

ಲಭ್ಯವಿರುವ ಸೇವೆಗಳು[ಬದಲಾಯಿಸಿ]

ಸಹಸ್ರ ದೀಪಾಲಂಕಾರ ಸಹಿತ ರಂಗಪೂಜೆ, ಪವಮಾನ ರಥೋತ್ಸವ-ರೂ. ೬೦೦೦http://hanumagiri.com/seva-detail/Cite error: Invalid <ref> tag; refs with no name must have content ಸಹಸ್ರ ದೀಪಾಲಂಕಾರ ರಂಗಪೂಜೆ- ರೂ. ೪೦೦೦ ರಂಗಪೂಜೆ (ಮುಂಚಿತವಾಘೀ ತಿಳಿಸುವುದು)-ರೂ. ೧೫೦೦ ಸರ್ವ ಸೇವೆ- ರೂ. ೬೦೦ ಮಹಾಪೂಜೆ- ರೂ. ೩೦೦ ಹೀಗೆ ಒಟ್ಟು ೩೨ ಬಗೆಯ ವಿವಿಧ ಸೇವೆಗಳು ಇಲ್ಲಿ ಲಭ್ಯವಿದೆ.