ಸದಸ್ಯ:Sri Ganesh.N.R/sandbox

ವಿಕಿಪೀಡಿಯ ಇಂದ
Jump to navigation Jump to search

ಪರಿಚಯ[ಬದಲಾಯಿಸಿ]

ಈ ಆಧುನಿಕ ಜಗತ್ತೀನಲ್ಲಿ, ಎಲ್ಲಾ ಚಟುವಟಿಕೆಗಳು ಆರ್ಥಿಕ ಬೆಳವಣಿಗೆಗೆ ಕಾರಣವಾಗಿರುತ್ತದೆ. ಪ್ರತ್ಯೇಕವಾಗಿ, ಇಂತಹ ಚಟುವಟಿಕೆಗಳು ನೀರವಾಗಿ ಲಾಭಕ್ಕೆ ಸಂಬಂಧಪತ್ತಿರುತ್ತದೆ. ಒಂದು ಉದ್ಯಮ ವ್ಯವಹರಿಸಲು ಹಣಕಾಸಿನ ಪೂರೈಕೆಯ ಅಗತ್ಯವಿರುತ್ತದೆ ಆದುದರಿಂದ ಹಣಕಾಸನ್ನು ಬಂಡವಾಳ ಅಥವ ಹಣಹೂಡಿಕೆ ಎಂದು ಕರೆಯಬಹುದು. ಹಣಕಾಸು ನಿರ್ವಹಣೆ ಎಂದರೆ, ಒಂದು ಉದ್ಯಮ ತಾನು ಪಡೆಯುವ ಆರ್ಥಿಕ ಸಂಪನ್ಮೂಲಗಳನ್ನು ಅದರ ತತ್ವಗಳ ಪ್ರಕಾರ ಉಪಯೂಗಿಸುವುದು. ಹಣಕಾಸು ನಿರ್ವಹಣೆಯು ಪ್ರತಿಯೊಂದು ಸಂಸ್ಥೆಗೆ ಬಹಳ ಅನವಶ್ಯಕ. ಏಕೆಂದರೆ, ಯಾವ ಸಂಸ್ಥೆಗಾದರು ಅದಕ್ಕೆ ಬರುವ ಸೀಮಿತ ಹಣವನ್ನು ಸಾಧ್ಯವಾದಷ್ಟು ಪರಿಣಾಮಕಾರಿಯಾಗಿ ಉಪಯೋಗಿಸಬೇಕೆಂಬ ಅರಿವಿರುತ್ತದೆ. ಇದು ಸಾಮಾನ್ಯವಾಗಿ ಉನ್ನತ ಆಡಳಿತಮಂಡಳಿಗೆ ಸಂಬಂಧ ಪಟ್ಟದ್ದು. ಅವರು ತಮ್ಮ ಹಲವಾರು ಯೋಜನೆಗಳಿಗೆ ಬೇಕಾಗುವಷ್ಟು ಬಂಡವಾಳವನ್ನು ಉಹಿಸಿ ನಂತರ ಈ ಬಂಡವಾಳವನ್ನು ಎಷ್ಟು ಉಪಯುಕ್ತವಾಗಿ ವಿವಿಧ ಭಾಗಗಳಿಗೆ ಹಂಚಬಹುದಾಗಿ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಾರೆ.  ಈ ಬಂಡವಾಳ ಯೋಜನೆಯು ಧೀರ್ಘಾವಧಿ ಹಾಗೂ ಅಲ್ಪಾವಧಿಗಳಿಗೆ ಉಪಯುಕ್ತವಾಗುತ್ತದೆ.

ಹಣಕಾಸಿನ ವಿಧಗಳು[ಬದಲಾಯಿಸಿ]

  1. ಖಾಸಗಿ ಹಣಕಾಸು- ಇದು ವ್ಯಯಕ್ತಿಕ ಹಣಕಾಸು, ಪಾಲುದಾರಿಕೆ ಹಣಕಾಸು ಹಾಗು ವ್ಯಾಪಾರ ಹಣಕಾಸುಗಳಿಂದ ಕೂಡಿರುತ್ತದೆ.
  2. ಸಾರ್ವಜನಿಕ ಹಣಕಾಸು- ಇದು ಕೇಂದ್ರ, ರಾಜ್ಯ, ಅರೆ ಸರ್ಕಾರಗಳಿಗೆ ಸಂಬಂಧಪತ್ತಿರುತ್ತದೆ.

ಹಣಕಾಸು ನಿರ್ವಹಣೆಯ ಧ್ಯೇಯಗಳು[ಬದಲಾಯಿಸಿ]

ಒಂದು ಉದ್ಯಮದ ವ್ಯವಸ್ಥಾಪಕ, ಹಣಕಾಸು ನಿರ್ವಹಣೆಯ ಮೂಲ ಧೆಯಯಗಳನ್ನು ನಿರ್ಧರಿಸಬೇಕಾಗಿರುತ್ತದೆ. ಅವುಗಳಲ್ಲಿ, ಲಾಭಗರಿಷ್ಟೀಕರಣ ಹಾಗು ಸಂಪತ್ತುಗರಿಷ್ಟೀಕರಣಗಳು ಮುಖ್ಯವಾದವುಗಳು.

ಲಾಭಗರಿಷ್ಟೀಕರಣ[ಬದಲಾಯಿಸಿ]

ಒಂದು ಉದ್ಯಮದ ಮುಕ್ಯ ಗುರಿ ಲಾಭವನ್ನು ಹೆಚ್ಚಿಸುವುದು. ಇದನ್ನು ಲಾಭಗರಿಷ್ಟೀಕರಣ ಎನ್ನುತ್ತಾರೆ. ಇದು ಒಂದು ಸಾಂಪ್ರದಾಯಿಕ ವಿಧಾನ. ಈ ಪ್ರಕ್ರಿಯೆಯಲ್ಲಿ ಯಾವ ಉದ್ಯಮವಾದರು ಅದರ ಲಾಭವನ್ನು ಹೆಚ್ಚಿಸಲು ಇರುವ ಎಲ್ಲಾ ಅವಕಾಶಗಳನ್ನು ಪರಿಗಣಿಸುತ್ತದೆ.

ಲಾಭಗರಿಷ್ಟೀಕರಣದ ಅನುಕೂಲಗಳು[ಬದಲಾಯಿಸಿ]

  1. ಇದರ ಬಹುಮುಖ್ಯ ಗುರಿ ಲಾಭ ಹೆಚ್ಚಿಸವುದು.
  2. ಇದು ಲಾಭದ ವ್ಯಾಪಾರಗಳನ್ನು ತಗ್ಗಿಸುತ್ತದೆ.
  3. ಲಾಭವೇ ಉದ್ಯಮದ ಮುಖ್ಯ ಮೂಲ.
  4. ಲಾಭವು ಸಾಮಾಜಿಕ ಅಗತ್ಯಗಳನ್ನು ಈಡೇರಿಸುತ್ತದೆ.