ಸದಸ್ಯ:Sonia kotiyan
ನನ್ನ ಜೀವನ ಮತ್ತು ಹವ್ಯಾಸಗಳು ನನ್ನ ಹೆಸರು ಸೋನಿಯ. ನನ್ನ ತಂದೆ ಹೆಸರು ಸುಂದರ್. ನಾನು ಜನಿಸಿದ್ದು 16 ಜೂನ್ 1998, ಮಂಗಳೂರಿನಲ್ಲಿ. ನನ್ನ ತಂದೆ ತಾಯಿಗೆ ನಾನು ಒಬ್ಬಳೆ ಮಗಳಾದ ಕಾರಣ ನನ್ನನು ನನ್ನ ತಂದೆ ತಾಯಿ ಚೆನ್ನಾಗಿ ನೋಡಿಕೊಳ್ಳುತ್ತಾರೆ. ನಾನು ನನ್ನ 1 ರಿಂದ 10 ತರಗತಿಯ ವಿದ್ಯಾಭ್ಯಾಸವನ್ನು ಸಂತ ಅಲೋಶಿಯಸ್ ನಲ್ಲಿ ಹಾಗೂ ಪೊಂಪೈ ಯಲ್ಲಿ ಕಲಿತೆನು. ಪ್ರಸ್ತುತ ಪಾದುವ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದೇನೆ. ನನ್ನ ಗುರಿಯೆಂದೆ ಒಳ್ಳೆಯ ರೀತಿ ಕಲಿತು ಕೆಲಸಕ್ಕೆ ಸೇರುವುದು. ನನ್ನ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂದಿದ್ದೇನೆ. ಜೀವನದಲ್ಲಿ ಸಾಧನೆ ಮಾಡಿ ತಂದೆ ತಾಯಿಗೆ ಹೆಸರು ತರಬೇಕೆಂದಿದ್ದೇನೆ. ಜೀವನದಲ್ಲಿ ಸಾಧನೆ ಮಾಡುವುದು ಮುಖ್ಯ. ನನ್ನ ಹವ್ಯಾಸಗಳು:- ನನ್ನ ಹವ್ಯಾಸಗಳೆಂದರೆ ಕಥೆ ಪುಸ್ತಕಗಳನ್ನು ಓದುವುದು . ಸಮಯವಿದ್ದಾಗ ಕಥೆ ಪುಸ್ತಕಗಳನ್ನು ಓದುತ್ತೇನೆ. ಗ್ರಂಥಾಲಯಕ್ಕೆ ಹೋಗಿ ಪುಸ್ತಕಗಳನ್ನು ಓದುತ್ತೇನೆ. ನನ್ನ ಇತರ ಹವ್ಯಾಸಗಳೆಂದರೆ ಹಾಡನ್ನು ಕೇಳುವುದು, ಹಾಡನ್ನು ಹಾಡುವುದು, ನ್ರತ್ಯ ಮಾಡುವುದು,ಟಿ.ವಿ ನೋಡುವುದು ಇತ್ಯಾದಿ.