ಸದಸ್ಯ:Smjalageri

ವಿಕಿಪೀಡಿಯ ಇಂದ
Jump to navigation Jump to search

ನಮಸ್ತೆ, ನಾನು ಸಿದ್ದಪ್ಪ ಜಲಗೇರಿ, ನಿವೃತ್ತ ನೌಕರ, [೧]

ಬಸವಣ್ಣ ಮತ್ತ್ತು ಇತರ ಶಿವಶರಣರ ವಚನಗಳನ್ನು ೧೦ ವರ್ಷಗಳ ಹಿಂದೆ, ಸರಿಸುಮಾರು ಧರ್ಮಸಿಂಗ್ ಮುಖ್ಯಮಂತ್ರಿಯಾಗಿದ್ದಾಗ, ರವಿ ಕೃಷ್ಣಾರೆಡ್ಡಿ ಒಡೆತನದ ವಿಚಾರಮಂಟಪ.ನೆಟ್ ನಲ್ಲಿ ನೋಡಿದ್ದೆ.
ಇಲ್ಲಿ ಅದನ್ನು ಮೂಡಿಸುವ ಉದ್ದೇಶ ಇದೆ.
ಎಚ್ ತಿಪ್ಪೇರುದ್ರಸ್ವಾಮಿ ಮತ್ತು ಡಾ. ಎಲ್ ಬಸವರಾಜುರ ಪುಸ್ತಕಗಳು ನನ್ನ ಆಕರ.

೨೪,೮೫೫ ಸಾಗರದ ಬಿ ಎಸ್ ಚಂದ್ರಶೇಖರರು ನನಗೆ ಸ್ಪೂರ್ತಿ. [[೧]] ನಲ್ಲಿ, ಕೋರಾದಲ್ಲಿ, ಇದೀಗ ವೈಕಿಯಲ್ಲಿ ಕೈ ಆಡಿಸುತ್ತಿಹೆ.


ಸ್ವಲ್ಪ ನಾಚಿಕೆಯಿಂದ ಹೇಳಿಕೊಳ್ಳುತ್ತಾ ಇದ್ದೇನೆ. ಈಜುಬುರುಡೆ ತೊಟ್ಟು ಈಜಲು ಹೊರಟದ್ದು ದೊಡ್ಡ ಸಾಧನೆಯಾಗದು. ಡೆಪ್ಯೂಟಿ ಚೆನ್ನಬಸಪ್ಪರ ಮತ್ತು ಪಿ ಎಂ ನಾಡಗೌಡದ ದೆಸೆಯಿಂದ ಶಾಲೆ-ಕಾಲೇಜುಗಳನ್ನು ಕಂಡ ಬಿಜಾಪುರ ಜಿಲ್ಲೆಯಿಂದ ಬಂದ ನನಗೆ ತುತ್ತಿನ ಚೀಲ ತುಂಬಿಸಿಕೊಳ್ಳುವುದರಲ್ಲಿಯೇ ವಯಸ್ಸು-ಕೂದಲು-ಆಸೆ ಇಂಗಿಹೋದವು. ಮಗರಾಯ ಮತ್ತು ಸೋದರ ಸಂಬಂಧಿಯ ಚುಚ್ಚುನುಡಿ ಕೇಳಲಾರದೇ, ಬೆರಳುಗಳನ್ನು ಕಂಪ್ಯೂಟರಿಗೆ ಹಚ್ಚಿದವ ನಾನು. ಅಕಸ್ಮತ್ತು ಅಕ್ಷರ ಕಲಿತು, ಸ್ಕಾಲರ್ ಶಿಪ್ ಕಂಡು, ಮಾಮಲೇದಾರನಾಗುವ ಕನಸು ಹೊತ್ತು ಮುಧೋಳದ ಕಿಂಗ್ ಜಾರ್ಜ್ ಶಾಲೆ ಸೇರಿದ್ದ ನಾನು, ೭ ದಶಕಗಳೇ ಕಳೆದರೂ, ಇನ್ನೂ ಭಾರತ ಕಥಾಮಂಜರಿ ಓದಿ ಅರ್ಥ ಮಾಡಿಕೊಳ್ಲಲಿಕ್ಕೆ ಆಗುತ್ತಿಲ್ಲ. ಅರಿತ ಅಣುಗರ ಒಡನಾಟ ಮಾಡಲಿಕ್ಕೆ ಕಿಂಚಿತ್ತೂ ಅರ್ಹತೆಯಿಲ್ಲದವ ನಾನು. ಆದಷ್ಟು ದಿನ ಆದಷ್ಟು ಮಾಡುವ ಉಮೇದಿದೆ. ಉಮರ್ಜಿ ಕಳೆವ ಮುನ್ನ, ತಿಳಿದಿದ್ದನ್ನ ಹಂಚಿಕೊಳ್ಳಬೇಕು. ಅಷ್ಟಕೂಟಗ್ರಹದ ವಿನಾಶ ಎಂಬ ಜ್ಯೋತಿಷ್ಕರ ೧೯೬೧ರ ಪಟ್ಟು, ಸ್ಕೈಲ್ಯಾಬ್ ಕರ್ನಾಟಕದ ಮೇಲೆ ಬಿದ್ದು ನಾವೆಲ್ಲಾ ಸಾಯುತ್ತೇವೆ ಎಂಬ ಹೆದರಿಕೆ, ೨೦೦೦ರ ಹೊತ್ತಿಗೆ ಚಂದ್ರಗ್ರಹಕ್ಕೆ ಪ್ರವಾಸ ಹೋಗಿ ಟಿಎಡಿಎ ಪಡೆಯಬಹುದು ಎಂಬ ಭಗ್ನ ಕನಸಿಗೆ, ಕಂಪ್ಯೂಟರೀಕರಣದಿಂದ ಲಂಚಾವತಾರ ಅಂತ್ಯ ಎಂಬ ೯೦ರ ದಶಕದ ನಗ್ನ ಕನಸಿನಿಂದ - ಸರ್ವರ್ ಪ್ರಜ್ನೆ ತಪ್ಪಿದೆ ಎಂಬ ೨೦೧೮ರ ಭಗ್ನ ನನಸಿಗೆ, ನೆಹರೂ ನಮ್ಮ ಪ್ರವಾದಿ ಎಂಬಲ್ಲಿಂದ ಶುರುವಾಗಿ, ಸಂಜೀವ ಸಬ್‍ಲೋಕರ ಬ್ರೇಕಿಂಗ್ ಫ್ರೀ ಆಫ್ ನೆಹರೂ ಪುಸ್ತಕದ ತಾರ್ಕಿಕ ಅಂತ್ಯಕ್ಕೆ, ನ್ಯಾಯಾಂಗ ಇಲಾಖೆಯ ಕಟ್ಟ ಕಡೆಯ ವರ್ಗದಲ್ಲಿ ಬದುಕು ತೇಯ್ದು ಇದೀಗ ಸರ್ವೋಚ್ಛ ನ್ಯಾಯಾಲಯದ ತೀರ್ಪುಗಳನ್ನು ವಿಮರ್ಶಿಸುತ್ತಾ ತೃಪ್ತಿ ಪಡೆವಲ್ಲಿಗೆ ಬಂದ ಬದುಕಿಗೆ, ಸಾರ್ಥಕತೆ ಎಲ್ಲಿದೆ? ವೈಕಿಪಟುಗಳನ್ನು ಕಂಡು ಅವರೊಂದಿಗೆ ಕೈಕುಲುಕುವ ಅವಕಾಶಗಳನ್ನು ತಿರಸ್ಕರಿಸುತ್ತಲಿರುವ ನನ್ನ ಬಗ್ಗೆ ಮಗನಿಗೆ ಇರುವ ಬೇಜಾರನ್ನು ಹೇಗೆ ಮುಚ್ಚುವುದೋ ತಿಳಿಯಲಾಗುತ್ತಿಲ್ಲ. ಇದಮಿತ್ಥಂ, ತದೇಕ ಇದಮಿತ್ಥಂ.


೬ ತಿಂಗಳು ವಚನಗಳನ್ನು ಕುಟ್ಟಿದ್ದು ಆಯಿತು. ಇದೀಗ, ಪೇಸ್ಟ್ ಮಾಡುವ ಸುಗ್ಗಿ. Smjalageri (ಚರ್ಚೆ) ೧೩:೪೩, ೨೬ ಅಕ್ಟೋಬರ್ ೨೦೧೮ (UTC)

  1. ನಾನು