ಸದಸ್ಯ:Sinchana seetamma
ನನ್ನ ಹೆಸರು ಸೀತಮ್ಮ. ನನ್ನ ತಂದೆಯ ಹೆಸರು ನಾಗರಾಜ ತಾಯಿಯ ಹೆಸರು ಪಾರ್ವತಿ. ನಾನು ಮೂಲತಹ ಕೊಡಗು ಜಿಲ್ಲೆಯ ಕುಟ್ಟಿ ಗ್ರಾಮದವಳು. ನಾನು ನನ್ನ ಪದವಿ ಪೂರ್ವ ಶಿಕ್ಷಣವನ್ನು ಮೈಸೂರಿನ ಎಸ್.ಡಿ.ಎಂ ಕಾಲೇಜಿನಲ್ಲಿ ಮುಗಿಸಿ, ಇದೀಗ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಬಿ.ಎಸ್.ಇ ಪದವಿಯನ್ನು ಮಾಡುತ್ತಿದ್ದೇನೆ. ಮುಂದೆ ಬಯೋಟೆಕ್ ನಲ್ಲಿ ಶಿಕ್ಷಣ ಮುಂದುವರಿಸಲು ವಿದೇಶಕ್ಕೆ ತೆರಳುವ ಆಸೆ ಹೊಂದಿದ್ದೇನೆ. ಶಿಕ್ಷಣ ಅಷ್ಟೇ ಅಲ್ಲದೆ ನಾನು ಇತರ ಎಲ್ಲಾ ಚಟುವಟಿಕೆಯಲ್ಲಿ ಪಳಗಿಸಿಕೊಂಡಿದ್ದೇನೆ. ಎಲ್ಲಾ ಕ್ರೀಡೆಯಲ್ಲೂ ಭಾಗವಹಿಸುತ್ತೇನೆ. ನಾನು ಮಾಡಿದ ಒಂದು ಸಾಧನೆ ಏನೆಂದರೆ ನಾನು ಎನ್.ಸಿ.ಸಿ ಅಭ್ಯರ್ಥಿಯಾಗಿ ಅದರ ಅತೀ ಉನ್ನತ ಮಟ್ಟದ ಆರ್.ಡಿ.ಸಿ ಕ್ಯಾಂಪಿಗೆ ಆಯ್ಕೆಯಾಗಿ ದೆಹಲಿಯ ಗಣರಾಜ್ಯೋತ್ಸವ ಪತಸಂಚಲನದಲ್ಲಿ ಭಾಗವಹಿಸಿದ್ದೆ. ನನಗೆ ಹವ್ಯಾಸಗಳೆಂದರೆ ಪುಸ್ತಕ ಓದುವುದು, ಹಾಡು ಕೇಳಿಸಿಕೊಳ್ಳುವುದು. ನಾನು ಬಹಳ ಸಹನೆ ಹೊಂದಿರುವವಳು. ಜನರೊಟ್ಟಿಗೆ ಬೆರೆಯುವುದು ನನಗೆ ಇಷ್ಟ. ಎಲ್ಲರ ಜೊತೆ ಚೆನ್ನಾಗಿ ಹೊಂದಿಕೊಂಡು ಹೋಗುತ್ತೇನೆ. ನನಗೆ ಮುಂದೆ ಆರ್ಮಿಗೆ ಸೇರುವ ಗುರಿ ಹೊಂದಿದ್ದೇನೆ. ಒಳ್ಳೆಯ ಹೆಸರು ಮಾಡಿ ನನ್ನ ಅಪ್ಪ ಅಮ್ಮನಿಗೆ ಕೀರ್ತಿ ತರುತ್ತೇನೆ.