ಸದಸ್ಯ:Shrividya A/ನನ್ನ ಪ್ರಯೋಗಪುಟ
ಕಂದು ಕಾಡು ಗೂಬೆ (ಸ್ಟ್ರಿಕ್ಸ್ ಲೆಪ್ಟೋಗ್ರಾಮಿಕ) ಭಾರತ, ಬಾಂಗ್ಲಾದೇಶ ಮತ್ತು ಶ್ರೀಲಂಕಾದಲ್ಲಿ, ಪೂರ್ವದಿಂದ ಪಶ್ಚಿಮ ಇಂಡೋನೇಷ್ಯಾ, ತೈವಾನ್, ಮತ್ತು ದಕ್ಷಿಣ ಚೀನಾದಲ್ಲಿ ಕಂಡುಬರುತ್ತದೆ. ಈ ಗೂಬೆಯು ದಕ್ಷಿಣ ಏಷ್ಯಾದಲ್ಲಿ ವಾಸಿಸುವ ತಳಿಗಾರ. ಈ ಜಾತಿಯು ಗೂಬೆಗಳ ಕುಟುಂಬದ ಒಂದು ಭಾಗವಾಗಿದೆ, ಇದನ್ನು ವಿಶಿಷ್ಟ ಗೂಬೆಗಳು(ಸ್ಟ್ರಿಗಿಡೆ)ಎಂದು ಕರೆಯಲಾಗುತ್ತದೆ, ಇದರಲ್ಲಿ ಹೆಚ್ಚಿನ ಜಾತಿಯ ಗೂಬೆಗಳಿವೆ. ಇದು ಕಿವಿ ರಹಿತ ಗೂಬೆ ಕುಲಕ್ಕೆ ಸೇರಿದೆ.
ವರ್ಣನೆ
[ಬದಲಾಯಿಸಿ]ಕಂದು ಬಣ್ಣದ ಮರದ ಗೂಬೆ ಮಧ್ಯಮ ದೊಡ್ಡದಾಗಿದೆ, ಮೇಲ್ಭಾಗಗಳು ಏಕರೂಪವಾಗಿ ಕಡು ಕಂದು ಬಣ್ಣದ್ದಾಗಿದ್ದು, ಭುಜಗಳ ಮೇಲೆ ಮಸುಕಾದ ಬಿಳಿ ಚುಕ್ಕೆ ಇರುತ್ತದೆ. ಒಳಭಾಗಗಳು ಕಂದು ಬಣ್ಣದ ಗೆರೆಗಳಿಂದ ಕೂಡಿರುತ್ತವೆ. ಮುಖದ ಮೇಲಿರುವ ರೆಕ್ಕೆಗಳ ಸಂಗ್ರಹಣೆಯು ಒಳಬಾಗಿದಂತಿದ್ದು ಕಂದು ಬಣ್ನದಾಗಿದೆ , ಕಣ್ಣುಗಳು ಕಡು ಕಂದು ಬಣ್ಣದ್ದಾಗಿರುತ್ತವೆ, ಬಿಳಿ ಕುತ್ತಿಗೆ ಇದೆ.
ಗಾತ್ರ
[ಬದಲಾಯಿಸಿ]ಉದ್ದ 34-45 ಸೆಂ. ರೆಕ್ಕೆಯ ಉದ್ದ 286-400 ಮಿಮೀ. ಬಾಲದ ಉದ್ದ 151-299 ಮಿಮೀ. ತೂಕ 800-1100 ಗ್ರಾಂ. ಈ ಜಾತಿಯ ಹೆಣ್ಣು ಗೂಬೆಗಳು ಗಂಡು ಗೂಬೆಗಳಿಗಿಂತ ದೊಡ್ಡದಾಗಿದೆ. [೧]
ಧ್ವನಿ
[ಬದಲಾಯಿಸಿ]ಕರೆ ಹೂ ಹೂ ಎಂದು ಜೋರಾದ ಕಿರುಚಾಟದಂತಿರುತ್ತದೆ. ಈ ಜಾತಿಯ ಇತರೆ ತಳಿಗಳು ಬೇರೆ ಬೇರೆ ರೀತಿಯಲ್ಲಿ ಕೂಗುತ್ತದೆ ಹಾಗು ಕಾಣ ಸಿಗುತ್ತದೆ.
ಬೇಟೆ ಮತ್ತು ಆಹಾರ
[ಬದಲಾಯಿಸಿ]ಇಲಿಗಳು ಮತ್ತು ಶ್ರೂಗಳಂತಹ ಸಣ್ಣ ಸಸ್ತನಿಗಳು, ಸಣ್ಣ ಪಕ್ಷಿಗಳು, ಕಪ್ಪೆಗಳು ಮತ್ತು ಸರೀಸೃಪಗಳನ್ನು ಸೇವಿಸುತ್ತದೆ. ಮೀನುಗಳೂ ಸಹ ಇದರ ಆಹಾರವಾಗಿದೆ ಎಂದು ವರದಿಯಾಗಿದೆ.
ಅಭ್ಯಾಸಗಳು
[ಬದಲಾಯಿಸಿ]ಈ ಗೂಬೆಗಳು ನಾಚಿಕೆ ಸ್ವಭಾವವುಳ್ಳವು, ಪ್ರಕೃತಿ ಪ್ರೇಮಿಯಾಗಿದ್ದು, ಹಗಲು ಹೊತ್ತಿನಲ್ಲಿ ತುಂಬಾ ಎಲೆಗಳಿಂದ ಕೂಡಿರುವ ಮರಗಳಲ್ಲಿ ವಿಶ್ರಾಂತಿಸುತ್ತದೆ.