ವಿಷಯಕ್ಕೆ ಹೋಗು

ಸದಸ್ಯ:Shreya kaniyala/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಿಡ್ನಿ ಸಮಸ್ಯೆಗಳಿಗೆ ಜಾಗತಿಕ ತಾಪಮಾನ ಲಿಂಕ್ ಏರುತ್ತಿರುವ ಜಾಗತಿಕ ತಾಪಮಾನಕ್ಕೂ ಹೆಚ್ಚುತ್ತಿರುವ ಕಿಡ್ನಿ ಸಮಸ್ಯಗಳಿಗೂ ಸಂಬಂಧವಿದೆ ಎಂದರೆ ನಿಮಗೆ ಆಶ್ಚರ್ಯವಾದೀತು. ಆದರೆ ಮಧ್ಯ ಅಮೇರಿಕದಲ್ಲಿ ಕಳೆದ ಒಂದು ದಶಕದಲ್ಲಿ ೨೦೦೦೦ ಮಂದಿ ಮೂತ್ರ ಕೋಶ ಸಂಬಂಧಿ ಕಾಯಿಲೆಗಳಿಂದಲೇ ಸತ್ತಿದ್ದರಿಂದ ಎಚ್ಚೆತ್ತುಕೊಂಡ ತಜ್ಞರು ಅದಕ್ಕೆ ಕಾರಣ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗೆ ಕಿಡ್ನಿ ಸಮಸ್ಯೆಯುಳ್ಳವರಲ್ಲಿ ಬಹುತೇಕ ಮಂದಿ ಯುವಕರು. ಎಲ್ಲರೂ ಗಂಟೆಗಟ್ಟಲೆ ಬಿಸಿಲಿನಲ್ಲಿ ನಿಂತು ಕೆಲಸ ಮಾಡುವವರು. ಹೆಚ್ಚಿನ ದ್ಐಹಿಕ ಶ್ರಮ ಬೆಡುವುದು ಅವರ ಕೆಲಸ. ಇಂತವರಲ್ಲಿಯೇ ಕಿಡ್ನಿ ತೊಂದರೆ ಕಾಣಿಸಿಕೊಳ್ಳಲು ಕಾರಣ, ತಾಪಮಾನದ ತಾಪತ್ರಯಕ್ಕೆ ಒಳಗಾದ ರಾಷ್ರ್ರಗಲಲ್ಲಿ ಭಾರತ ಕೂಡ ಒಂದು. ದೇಶದಲ್ಲಿ ರಣಬಿಸಿಲಿನ ರಾಜ್ಯಗಳಾದ ಆಂಧ್ರಪ್ರದೇಶ, ತಮಿಳುನಾಡು, ಒರಿಸ್ಸಾ,ಗೋವಾ ಹಾಗೂ ಮಹಾರಾಷ್ರ್ರಗಳಲ್ಲಿ ಮತ್ತು ಇತ್ತೀಚಿನ ವರುಷಗಳಲ್ಲಿ ಕನಾಟಕದ ಕೆಲ ಜಿಲ್ಲೆಗಳಲ್ಲಿ ಉಷ್ಣಾಂಶ ಗಣನೀಯವಾಗಿ ಏರಿದೆ. ಈ ರಾಜ್ಯಗಳಲ್ಲಿ ಸಂಬಂಧಿ ಕಿಡ್ನಿ ಸಮಸ್ಯಗೆ ಒಳಗಾದವರ ಸಂಖ್ಯೆ ಹೆಚ್ಚಿರುವುದನ್ನು ಸಂಶೋಧಕರು ಗುರುತಿಸಿದ್ದಾರೆ. ಇವುಗಳಿಗೆ ನಿರಜಲೀಕರಣ ಡಿಹೈಡ್ರೆಶನ್) ಹಾಗೂ ತಅಪಮಾನ ಕಾರಣ ಎಂಬ ಅಂಶ ಅವರ ಸಂಶೊಧನೆಯಿಂದ ಬೆಳಕಿಗೆ ಬಂದಿದೆ. ತಾಪಮಾನ ಪರಿಣಾಮ: ಈ ಕುರಿತ ಅದ್ಯಯನ ಆರಂಭಿಸಿದಾಗ ಜಾಗತಿಕ ತಾಪಮಾನ ಕಾರಣವಿರಬಹುದೆಂಬ ಸಣ್ಣ ಅನುಮಾನವೂ ಇರಲಿಲ್ಲ ಎನ್ನುತ್ತಾರೆ ಸಂಶೋಧಕರ ತಂಡದಲ್ಲಿದ್ದ ಚೆನೈ ಮೂಲದ ಕಿಡ್ನಿ ಸಂಬಂಧಿ ರೋಗಗಳ ತಜ್ಷ ಡಾ.ಜಾರ್ಜ್ ಅಬ್ರಾಹಂ. "ಕಿಡ್ನಿ ಸಮಸ್ಯಗಳಿಗೆ ಸಾಮಾನ್ಯ ಕಾರಣಗಳಾದ ಡಯಾಬಿಟೀಸ್ , ಬಿಪಿ ಇಲ್ಲವೇ ಬೊಜ್ಜು ಇಲ್ಲದವರಲ್ಲು ಸಮಸ್ಯೆಗಳು ಕಂಡು ಬಂದಿದ್ದಕ್ಕೆ ಕಾರಣವೇನು ಎಂಬ ಸಂಗತಿಯನ್ನು ಹುಡುಕಿಕೊಂಡು ಹೊರಟೆವು" ಎನ್ನುತ್ತಾರೆ ಅವರು. ಅಧ್ಯಯನದ ಪಲಿತಾಂಶಗಳು 'ಅಮೇರಿಕನ್ ಸೊಸೈಟಿ ಆಫ್ ನೆಫ್ರಾಲಜಿ' ಎಂಬ ಜನ್ರಲ್ ನಲ್ಲಿ ಪ್ರಕಟವಾಗಿದೆ. ದೇಹದ ಜೀವರಸಾಯನಿಕ ಅಂಶಗಳು ಹಾಗೂ ವಿಷಕಾರಿ ಪದಾಥ‍ಗಳು ಕಾರಣವಲ್ಲ ಎಂದು ತಿಳಿಯುವ ಹೊತ್ತಿಗೆ ಲ್ಯಾಟಿನ್ ಅಮೇರಿಕದಲ್ಲಿ ನಡೆಸಿದ ಅಧ್ಯಯನ ಸಂಶೋಧಕರಿಗೆ ಬೇರೆ ದಿಕ್ಕಿನಲ್ಲಿ ಯೋಚಿಸುವಂತೆ ಪ್ರೇರೆಪಿಸಿತು. ಕಬ್ಬಿನ ಬೆಳೆಗಾರರಲ್ಲಿ ಕಿಡ್ನಿ ಸಮಸ್ಯೆ: ಅಲ್ಲಿನ ಕಬ್ಬಿನ ಗದ್ಎಯಲ್ಲಿ ಕೆಲಸ ಮಾಡುವ ಹಲವಾರು ರೈತರು ಕಿಡ್ನಿ ಸಮಸ್ಯೆಗಳಿಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರಅಭ್ಯಾಸಗಳ ಕುರಿತು ಹೆಚ್ಚಿನ ತನಿಖೆ ಕೈಗೊಂಡ ವೈದ್ಯರರಿಗೆ ರೈತರು ಕಬ್ಬಿನ ಕೊಯ್ಲು ಸಮಯದಲ್ಲಿ ಅವುಗಳನ್ನು ಸುಡುತ್ತಿದ್ದರು. ಈ ಉಷ್ಣತೆಯಿಂದಾಗಿ ಸಿಕ್ಕಾಪಟ್ಟೆ ಬೆವರುತ್ತದ್ದರೂ, ಅಗತ್ಯ ನೀರನ್ನು ಕುಡಿಯುತ್ತಿರಲಿಲ್ಲ ಎಂದು ತಿಳಿದು ಬಂತು " ಅತಿಯಾದ ಶಾಕ ಹಾಗೂ ಡಿಹೈಡ್ರೇಶನ್ ಕಿಡ್ನಿಯ ಮೇಲೆ ಒತ್ತಡ ಹೇರಿ ಸಮಸ್ಯಗೆ ಕಾರಣವಾಗಿದ್ದವು" ಎಂದು ಅಬ್ರಾಹಂ ವಿವರಿಸುತ್ತಾರೆ. ಕಳೆದ ವರುಷ ೧೪೦೦ಕ್ಕೂ ಹೆಚ್ಚು ಜನರನ್ನು ಬಲಿ ಪಡೆದ ಆಂಧರದ ಸುಡು ಬಿಸಿಲಿನಲ್ಲಿ ಕೆಲಸ ಮಾಡಿದ ರೈತರದೂ ಇದೇ ಗೋಳು. ಆ ನಂತರ ಆರೋಗ್ಯವಂತ ಹಾಗೂ ಯುವ ವಯಸ್ಸಿನ ವ್ಯಕ್ತಿಗಳಲ್ಲಿ ಕಿಡ್ನಿ ಸಮಸ್ಯೆಗೆ ಜಾಗತಿಕ ತಅಪಮಾನ ಕಾರಣವೆಂದು ತಿಳಿದು ಬಂತು. ಅಧಿಕ ತಾಪಮಾನದಲ್ಲಿ ಕೆಲಸ ಮಾಡುವವರು ಹೆಚ್ಚಿನ ಪ್ರಮಾಣದಲ್ಲಿ ನೀರು ಸೇವಿಸುವುದನ್ನು ಮರೆಯುತ್ತಾರೆ. ಇದರಿಂದ ದೇಹದಲ್ಲಿ ನಿರ್ರಜಲೀಕರಣಕ್ಕೆ ದಾರಿ ಮಾಡಿಕೊಡುತ್ತದೆ. ಅದು ಕಿಡ್ನಿಯ ಕಾರ್ಯ ವೈಖರಿಯ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಎನ್ನುತ್ತಾರೆ. ದಿಲ್ಲಿಯ ವೈದ್ಯ ಡಾ. ವಿವೇಕಾನಂದ ಝಾ.