ಸದಸ್ಯ:Shreya.t.v/sandbox

ವಿಕಿಪೀಡಿಯ ಇಂದ
Jump to navigation Jump to search
ಆಶಾ ಶರತ್
ಆಶಾ ಶರತ್
ಆಶಾ ಶರತ್
ಆಶಾ ಶರತ್

ಆಶಾ ಶರತ್ ಭರತೀಯ ನಟಿ ಹಾಗು ನರ್ತಕಿ .ಆಶಾ ಶರತ್ ಅವರ ತಂದೆ ವಿ.ಎಸ್.ಕೃಷ್ಣನ್ ಮತ್ತು ಅವರ ತಾಯಿ ಬಹಳ ಪ್ರಸಿಧವಾದ ಶಾಸ್ರೀಯ ನರ್ತಕಿ ಕಲಾಮಂಡಲಂ ಸುಮತಿ.ಆಶಾ ಶರತ್ ಕೇರಳಾದ,ಎರ್ನಾಕುಲಂ ಜಿಲ್ಲೆಯಲ್ಲಿ ,೧೯ ಜುಲ್ಯೆ ೧೯೭೪ ರಂದು ಜನಿಸಿದರು.ಬಾಲಗೋಪಾಲ್ ಹಾಗು ವೇಣುಗೋಪಾಲ್ ಅವರ ಸಹೋದರರು.ಆಶಾ ಸರತ್ ತಮ್ಮ ಶಿಕ್ಷಣವನ್ನು ಕೇರಳಾದಲ್ಲಿಯೇ ಮಾಡಿದರು.ಆಶ ಶರತ್ ಅವರ ಮೊದಲ ಗುರು ಅವರ ತಾಯಿಯೇ ಆಗಿದ್ದರು ,ಅವರ ತಾಯಿ ಒಬ್ಬ ಒಳ್ಳೆಯ ನರ್ತಕಿಯಾಗಿದ್ದರು,ಅವರು ಕಲಾಮಂಡಲಂನಿಂದ ತರಬೇತ್ತಿ ಪಡೆದವರು.ಆಶಾ ಅವರ ತಾಯಿ ಆ ಕಾಲದ ಬಹಳ ಪ್ರಸಿದ್ದ ನರ್ತಕಿಯಾಗಿದ್ದರು,ಅವರು ೧೯೬೪ನಲ್ಲಿ ಕೇರಳಾದಲ್ಲಿ ಅವರದೇ ಒಂದು ನಾಟ್ಯ ಸಂಸ್ಥೆಯನ್ನು ಪ್ರಾರಂಭಿಸಿದರು ,'ನಾಟ್ಯಾಲಯ ಸ್ಕೂಲ್ ಆಫ್ ಡ್ಯಾಸ್' ಎಂಬುದನ್ನು ಪ್ರಾರಂಭಿಸಿ ಅಲ್ಲಿ ನಮ್ಮ ಭಾರತದ ಶಾಸ್ರೀಯ ಶೈಲಿಯಲ್ಲಿ ಕಲೇಗಳಲ್ಲಿ ತರಬೇತಿಯನ್ನು ನೀಡಿದರು , ಆದರಿಂದ ಇವರಿಗೆ ತಮ್ಮ ಬಾಲ್ಯದಿಂದಲೇ ಭರತನಾಟ್ಯಂ, ಮೋಹಿನಿಯಾಟ್ಟಂ ಮತ್ತು ಕೂಚಿಪುಡಿಯಲ್ಲಿ ಅವರ ತಾಯಿಯೇ ತರಬೇತಿಯನ್ನು ನೀಡಿದರು.ಆಶಾ ಶರತ್ ೧೯೯೨ರಲ್ಲಿ ಬನಾರಸ್ನಲ್ಲಿ ನಡೆದ ಅಖಿಲ ಭಾರತ ನೃತ್ಯ ಹಬ್ಬದಲ್ಲಿ ಇವರು ಉನ್ನತ ಪ್ರಶಸ್ತಿಯನ್ನು ಪಡೆದರು.ಈ ಪ್ರಶಸ್ತಿ ಸಿಕ್ಕ ನಂತರ ಇವರಿಗೆ ಬಹಳ ಚಲನಚಿತ್ರಗಳಲ್ಲಿ ಅಭಿನಯಿಸಲು ಅವಕಾಶ ಬಂದಿತು,ಆದರೆ ಅವರು ಕೆಲವು ಧಾರಾವಾಹಿಗಳಲ್ಲಿ ಹಾಗು ಕಿರುತೆರೆಯ ಚಲನಚಿತ್ರಗಳಲ್ಲಿ ಅಭಿನಯಿಸಿದರು .[ಬದಲಾಯಿಸಿ]

==ಜನನಾ ಮತ್ತು ಕುಟುಂಬ ==[ಬದಲಾಯಿಸಿ]

ಆಶಾ ಶರತ್ ಅವರ ತಂದೆ ವಿ.ಎಸ್.ಕೃಷ್ಣನ್ ಮತ್ತು ಅವರ ತಾಯಿ ಬಹಳ ಪ್ರಸಿಧವಾದ ಶಾಸ್ರೀಯ ನರ್ತಕಿ ಕಲಾಮಂಡಲಂ ಸುಮತಿ.ಆಶಾ ಶರತ್ ಕೇರಳಾದ,ಎರ್ನಾಕುಲಂ ಜಿಲ್ಲೆಯಲ್ಲಿ ,೧೯ ಜುಲ್ಯೆ ೧೯೭೪ ರಂದು ಜನಿಸಿದರು.ಬಾಲಗೋಪಾಲ್ ಹಾಗು ವೇಣುಗೋಪಾಲ್ ಅವರ ಸಹೋದರರು. ಆಗ ಅವರ ದುಬ್ಯೆನಲ್ಲಿ ನೆಲಗೊಂಡ ಶರತ್ ಅವನ್ನು ಮದುವೆಯಾಗಿ , ಶರತ್ ಆಶಾ ಅವರನ್ನು ದೂರದರ್ಶನದಲ್ಲಿ ಅವರ ನಾಟ್ಯ ಕಲೆಗಳನ್ನು ನೋಡಿ ,ಅವರ ಆ ನಾಟ್ಯ ಶೈಲಿಯನ್ನು ಕಂಡು ಪ್ರೀತಿಯಲ್ಲಿ ಬಿದ್ದು ,ಮದುವೆಯಾಗಿ ದುಬ್ಯೆನಲ್ಲಿ ನೆಲಸಿದರು.ಈ ದಂಪತಿಗೆ ಎರಡು ಹೆಣ್ಣು ಮಕ್ಕಳು ಉತ್ತರ ಮತ್ತು ಕೀರ್ತನಾ.[ಬದಲಾಯಿಸಿ]

==ಚಲನಚಿತ್ರ ಜಿವನ ==[ಬದಲಾಯಿಸಿ]

ಚಿತ್ರ:Asha Sharath 3.jpg
ಆಶಾ ಶರತ್

೨೦೦೬ ರಲ್ಲಿ ಆಶಾ ಶರತ್ ಒಂದು ಕಿರುತೆರೆಯ ಚಲನಚಿತ್ರವಾದ "ನಿಯಲುಂಮ್ ನಿಲಾವುಂ ಪರಯುನ್ನತ್ತು",ಇದರಲ್ಲಿ ಅಭಿನಯಿಸಿ ಇವರಿಗೆ ಸ್ಟೇಟ್ ಟೆಲೆವಿಸಿಯೋನ್ ಅವಾರ್ಡ್ಸ್ ರಲ್ಲಿ ಎರಡನೆ ಅತ್ಯುತ್ತಮ ನಟಿಯಾಗಿ ಪ್ರಶಸ್ತಿ ಸಿಕ್ಕ ನಂತರ,ಆಶಾರವರು ಇದರ ನಂತರ "ಕುಂಕುಮಪೋವ್" ಎಂಬ ಮಲಯಾಳಂ ಧಾರಾವಾಹಿಯಲ್ಲಿ 'ಜಯಂತಿ ' ಎಂಬ ಪಾತ್ರವನ್ನು ಗಳಿಸಿದ್ದರು . ಈ ಪಾತ್ರವು ನಿಕಾರಾತ್ಮಕ ಪಾತ್ರವಾಗಿತ್ತು ಆದರು ,ಈ ಜಯಂತಿ ಎಂಬ ಪ್ರೊಫೆಸರ್ ಪಾತ್ರವನ್ನು ಎಲ್ಲರು ಮೆಚ್ಚಿದ್ದರು .೨೦೧೨ ಆಶಾ ಶರತ್ ಅವರು ಮಲಯಾಳಂ ಚಲನಚಿತ್ರ ರಂಗದಲ್ಲಿ ಪ್ರವೇಶಿಸಿದರು. ೨೦೧೩ಯಲ್ಲಿ 'ದ್ರಿಶ್ಯಮ್' ಎಂಬ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಪಾತ್ರವ ಮಾಡಿ ಹೆಸರುಗಳಿಸಿದ್ದರು.ಇದೆ ಚಿತ್ರವನ್ನು ಕನ್ನಡದಲ್ಲಿ 'ದ್ರಿಶ್ಯ'ಎಂಬ ಹೆಸರಿನಲ್ಲಿ ಮಾಡಿರುವುದರಲ್ಲಿ ಆಶಾ ಅವರು ಅಭಿನಯಿಸಿದ್ದರೆ. ಆಶಾ ಶರತ್ ಕೆಲವು ಜಾಹೀರಾತುಗಳಲ್ಲಿ ನಟಿಸಿದ್ದಾರೆ.ಇವರು ಸುಮಾರು ೧೦ ವರ್ಷಗಳ ಕಾಲ ರೇಡಿಯೊ ಏಷ್ಯಾ,ದುಬೈ ಕಾರ್ಯಕ್ರಮದಲ್ಲಿ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದ್ದರು.[ಬದಲಾಯಿಸಿ]

==ಕೈರಳಿ ಕಲಾಕೇಂದ್ರಮ್==[ಬದಲಾಯಿಸಿ]

ಶರತ್ ಅವರು ೧೨ ವರ್ಶಗಳ ಹಿಂದೆ ಕೈರಳಿ ಕಲಾಕೇಂದ್ರಮ್ ಎಂಬ ಸಂಸ್ಥೆಯನ್ನು,ದುಬೈನಲ್ಲಿ ಪ್ರಾರಂಭಿಸಿದರು. ಈ ಸಂಸ್ಥೆಯಲ್ಲಿ ಭಾರತೀಯ ಕಲೇ ,ಸಂಗೀತ ಹಾದು ನೃತ್ಯ ಮೊದಲಾದವುಗಳಿಗೆ ಬಹಳ ಪ್ರಾಮುಖ್ಯತೆಯನ್ನು ನೀಡಿದರು. ಈ ಸಂಸ್ಥೆ ದುಬೈನಲ್ಲಿ,ಭಾರತದ ಹೊರಗಿರುವ ಮಕ್ಕಳಿಗೆ, ಭರತದ ಕಲಾ ಹಾಗು ಸಂಸ್ರುತಿಯನ್ನು ತಿಳಿಯಲು ಹಾಗು ಕಲಿಯಲು ಸಹ ಬಹಳ ಉಪಯೋಗವಾದ ಸಂಸ್ಥೆಯಾಗಿದೆ.ಈ ಕೆಲವು ವರ್ಶಗಳಲ್ಲಿ ಈ ಸಂಸ್ಥನ ಬಹಳಾ ಬೆಳೆದು, ಇದರ ಶಾಖೆಯನ್ನು ಕರಾಮಾ,ಶಾರ್ಜಾ ಹಾಗು ಡಿಸ್ಕೋವೇರ್ಯ್ ಗಾರ್ಡೆನ್ ಎಂಬ ಸ್ಥಳಗಳಲ್ಲಿ ಪ್ರಾರಂಭಿಸಿದರು.ಈ ಸಂಸ್ಥೆಯಲ್ಲಿ ೩೫೦೦ಕೂ ಹೆಚ್ಛು ಮಂದಿ ವಿದ್ಯಾಥಿಗಳಿದ್ದರೆ. ಈ ಸಂಸ್ಥೆಯ ಬಹಳ ದೊಡ್ದ ಗುರಿ,ನಮ್ಮ ಪ್ರಸುತ್ತ ಹಾಗು ಮುಂದಿನ ಪೀಳಿಗೆಗಳಿಗೆ ನಮ್ಮ ಶ್ರೀಮಂತವಾದ ಸಂಸ್ಕೃತಿ ಹಾಗು ನಮ್ಮ ಕಲಾಪ್ರಕಾರಗಳನ್ನು ಪ್ರೋತ್ಸಹಿಸಲು ಪ್ರಾರಂಭಿಸಿದ ಸಂಸ್ಥೆ ಇದು.ಆಶಾ ಅವರ ತಾಯಿಯೂ ಸಹ ಈ ಸಂಸ್ಥೆಗೆ ಭೇಟಿಯನ್ನು ನೀಡಿ ಅವರು ಸಹಾ ಈ ಸಂಸ್ಥೆಯಲ್ಲಿ ಶಾಸ್ರೀಯ ಕಲಾರೂಪಗಳನ್ನು ಅಥಿತಿ ಉಪನ್ಯಾಸರಾಗಿ ತರಬೇತಿಗಳನ್ನು ಮಕ್ಕಳಿಗೆ ನೀಡಿದರು.ಆಶಾ ಶರತ್ ನೃತ್ಯಕ್ಕಾಗಿ ಪ್ರಾರಂಭಿಸಿದ ಈ ಸಂಸ್ಥೆ ಈಗ ಒಂದು ಒಳ್ಳೆಯ ಹಾಗು ಬಹಳ ಪ್ರಸಿದ್ದವಾದ ನೃತ್ಯ ಶಾಲೆಯಾಗಿದೆ.[ಬದಲಾಯಿಸಿ]

==ದಾರಾವಾಹಿಗಳು==[ಬದಲಾಯಿಸಿ]

ಅಭಿನಯಿಸಿರುವ ದಾರಾವಾಹಿಗಳು ನಿಲವುಮ್ ನಿಲಾವಿಮ್ ಪರಯುನ್ನತು ,ಈ ಧಾರಾವಾಹಿಯಲ್ಲಿ 'ಅನುಪಮ' ಎಂಬ ಪಾತ್ರಕ್ಕೆ ಬಹಳ ಪ್ರಶಸ್ತಿಯು ಹಾಗು ಈ ಪಾತ್ರವು ಎಲ್ಲರ ಮನಸೆಳೆಯಿತ್ತು. ಇಂದುಲೆಖಾ , ಆಲಾಪನಮ್, ಕಾಲತಿಲಕಂ,ಜಾತಕ ಕಥಕಲ್,ಮೈಕಿಲಿಂಡೆ ಸಂತತಿಗಲ್ ಮುಂತಾದವುಗಳನ್ನು ಮಲಯಾಳಂ ಧಾರಾವಾಹಿ ದೂರದರ್ಶನ್ ಚಾನೆಲ್ ನಲ್ಲಿ ಮಾಡಿದರು . ದ್ರೀಮ್ ಸಿಟ್ಟಿ ,ಎಂಬ ಧಾರಾವಾಹಿಯನ್ನು ಸುರ್ಯ ಚಾನೆಲ್ ನಲ್ಲಿ ಮಾಡಿದರು. ಪೊನುಮ್ ಪೂವುಮ್ ,ಇದ್ದನ್ನು ಅಮ್ರಿಥ ಚಾನೆಲ್ ನಲ್ಲಿ ಮಾಡಿದರು . ಆಶಾ ಶರತ್ ಅವರು ಏಷ್ಯಾನೆಟ್ ಚಾನೆಲ್ ನಲ್ಲಿ ರಿಯಾಲಿಟಿ ಷೋ ವಾದ 'ಮಂಚ್ ಡ್ಯಾನ್ಸ್ ಡ್ಯಾನ್ಸ್' ಎಂಬ ಪ್ರೋಗ್ರಾಂನಲ್ಲಿ ತೀರ್ಪುಗಾರರಾಗಿದ್ದರು.[ಬದಲಾಯಿಸಿ]

==ಚಿತ್ರಗಳು==[ಬದಲಾಯಿಸಿ]

ಅವರು ಅಭಿನಯಿಸಿರುವ ಚಿತ್ರಗಳು,೨೦೧೨ ರಲ್ಲಿ ಮಲಯಾಳಮ್ ಚಿತ್ರವಾದ ಫ್ರೈಡೆ , ಕರ್ಮಯೋಧ ಮತ್ತು ಅರ್ಧನಾರಿ ೨೦೦೩ ರಲ್ಲಿ ಮಲಯಾಳಮ್ ‍ಚಿತ್ರವಾದ ಬಡ್ದಿ ,ಝಚಾರಿಯಾಯುಡೆ ಗರ್ಭಿಣಿಕಲ್ ಹಾಗು ದ್ರಿಶ್ಯಮ್ ೨೦೧೪ ರಲ್ಲಿ ಕನ್ನಡದಲ್ಲಿ ದ್ರಿಶ್ಯ ಮಲಯಾಳಮ್ ನಲ್ಲಿ ವರ್ಶಮ್ , ಏಂಜಲ್ಸೆ.೨೦೧೫ ರಲ್ಲಿ ತಮಿಳ್ ಚಿತ್ರವಾದ ಪಾಪನಾಶಮ್ , ತೂಂಗಾವನಂ ತೆಲುಗು ಚಿತ್ರವಾದ ಚೀಕತಿ ತಾಜ್ಯಾಮ್ ೨೦೧೬ ರಲ್ಲಿ ಮಲಯಾಳಮ್ ಚಿತ್ರವಾದ ಕಿಂಗ್ ಲಿಯರ್ ,ಪಾವಾಡ ,ಆಡುಪುಲಿಯಾಟ್ಟ್ಂ,ಅನುರಾಗ ಕರಿಕ್ಕಿನ್ ವೆಲ್ಲಮ್[ಬದಲಾಯಿಸಿ]

==ಪ್ರಶಸ್ತಿ==[ಬದಲಾಯಿಸಿ]

ಆಶಾ ಶರತ್ ದೊರಕಿದ ಪ್ರಶಸ್ತಿಗಳು ಏಷ್ಯಾನೆಟ್ ಟೆಲಿವಿಸಿಯೋನ್ ಅವಾರ್ಡ್ ,ಅತ್ಯುತಮ ನಟಿ ಪ್ರಶಸ್ತಿಗಳಿಸಿದರು. ಏಷಾನೆಟ್ ಟೆಲಿವಿಸಿಯೋನ್ ಅವಾರ್ಡ್,ಗೋಲ್ಡನ್ ಸ್ಟಾರ್ ಪ್ರಶಸ್ತಿಗಳಿಸಿದರು.ಏಷ್ಯಾವಿಸಿಯೋನ್ ಟೆಲಿವಿಸಿಯೋನ್ ಅವಾರ್ಡ್,ಅವರ ಅತ್ಯುತಮ ನಟನೆಗೆ ಪ್ರಶಸ್ತಿಗಳಿಸಿದರು. ಅವರ ನೃತ್ಯ ಕಲೆಗೆ ಅವರಿಗೆ ಸಿಕ್ಕ ಪ್ರಶಸ್ತಿಗಳು ೧೯೯೨ ರಲ್ಲಿ ಬನಾರಸ್ನಲ್ಲಿ ನಡೆದ ಅಖಿಲ ಭಾರತ ನೃತ್ಯ ಹಬ್ಬದಲ್ಲಿ ಇವರು ಉನ್ನತ ಪ್ರಶಸ್ತಿಯನ್ನು ಪಡೆದರು.ಅವರ ನಾಟ್ಯ ಕಲೆಗೆ ಅವರಿಗೆ ಬನಾರಸ್ ಮಹಾರಾಜರಿಂದ ಚಿನ್ನದ ಪದಕವ ಪಡೆದರು.ಅವರನ್ನು ಅನೇಕ ಬಾರಿ ಕಲಾತಿಲಕಂ ವನ್ನು ಕೋಟ್ಟು ಗೌರವಿಸಿದ್ದಾರೆ.೨೦೦೬ ರಲ್ಲಿ 'ಕಲಾರತ್ನ ಸ್ವಾತಿ ತಿರುನಾಳ್ ಪ್ರಶಸ್ತಿ' ಪಡೆದರು.[ಬದಲಾಯಿಸಿ]

[೧] [೨] [೩]

  1. Cite error: Invalid <ref> tag; no text was provided for refs named ವಿಕಿ
  2. "ಕೈರಳಿ ಕಲಾಕೇಂದ್ರಮ್". Retrieved 12 ಸೆಪ್ಟೆಂಬರ್ 2016. Check date values in: |accessdate= (help)
  3. "ಅಶಾ ಶರತ್". Retrieved 12 ಸೆಪ್ಟೆಂಬರ್ 2016. Check date values in: |accessdate= (help)