ಸದಸ್ಯ:Shravya shetty1704/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭರತ ನಾಟ್ಯಂ ವು ಒಂದು ಶಾಸ್ತ್ರೀಯ ನೃತ್ಯ ಪ್ರಕಾರವಾಗಿದ್ದು,ದಕ್ಷಿಣ ಭಾರತದಲ್ಲಿ ಹೆಚ್ಚು ಪ್ರಚಲಿತದಲ್ಲಿದೆ. ಇದು ಮುಖ್ಯವಾಗಿ ಮಹಿಳೆಯರಿಂದ ಮಾಡಲ್ಪಡುವ ನೃತ್ಯ ವಾಗಿದೆ. ನೃತ್ಯಕ್ಕೆ ಪೂರಕವಾಗಿ ಶಾಸ್ತ್ರೀಯ ಕರ್ನಾಟಕ ಸಂಗೀತ ಇರುತ್ತದೆ.ಇದರ ಕಾಲಮಾನ ಸುಮಾರು ಕ್ರಿ.ಪೂ.೧೦೦೦ ಈ ನೃತ್ಯಕ್ಕೆ ಪ್ರಾಚೀನ ಚಿದಂಬರಂ ದೇವಾಲಯದ ಶಿಲ್ಪಗಳು ಸ್ಪೂರ್ತಿ ಯಾಗಿವೆ. ಇದಕ್ಕೆ ಶಾಸ್ತ್ರೀಯ ನೆಲೆಗಟ್ಟನ್ನು ತಂಜಾವುರ್ ಚತುಶ್ಚಯರು ಎಂದು ಹೆಸರಾದ ನಾಲ್ಕು ಜನ ಸಹೋದರರು ಒದಗಿಸಿದರು. ಇವರ ಸಂಗೀತ ಸಂಯೋಜನೆಗಳೇ ಇಂದಿನ ಭರತನಾಟ್ಯ ರಂಗ ಗೀತೆಗಳಾಗಿ ಬಳಕೆಯಲ್ಲಿವೆ.

  • ಪ್ರಾಚೀನ ಕಾಲದಲ್ಲಿ ಭರತ ನಾಟ್ಯಂನ್ನು ದೇವಾಲಯಗಳಲ್ಲಿ (ದೇವಸ್ಥಾನ) ದೇವದಾಸಿಯರ ಮೂಲಕ "ಸಾದಿರ್ ಆಟಂ " (ಆಸ್ಥಾನ ನೃತ್ಯ) ಎಂದು ಮಾಡುತ್ತಿದ್ದರು. ಇ ಕೃಷ್ಣ ಅಯ್ಯರ್ ಮತ್ತು ರುಕ್ಮಿಣಿ ದೇವಿ ಅರುಂಡೆಲ್ ೧೯೩೦ ರಲ್ಲಿ "ಭರತನಾಟ್ಯಂ" ಎಂದು "ಸಾದಿರ್ ಆಟಂ"ನ್ನು ಮರುನಾಮಕರಣ ಮಾಡಿದರು  ದೇವಸ್ಥಾನಗಳಲ್ಲಿ ಪ್ರಾಚೀನ ಶಿಲ್ಪಗಳು ಅನೇಕ ಭರತ ನಾಟ್ಯಂನ ಕರಣಗಳು ಅಥವಾ ನೃತ್ಯ ಭಂಗಿಗಳನ್ನು ಆಧರಿಸಿವೆ.
  • ವಾಸ್ತವವಾಗಿ, ಹಲವು ಗ್ರಂಥಗಳಲ್ಲಿ ಚಿತ್ರಿಸಲಾಗಿರುವ ಅಪ್ಸರೆಯರು ಸ್ವರ್ಗದಲ್ಲಿ ಮಾಡಿರುವ ನೃತ್ಯದ ಭೂಮಿ ಮೇಲಿನ ಆವೃತ್ತಿ ಎಂದು ಭರತ ನಾಟ್ಯಂನ್ನು ಹೇಳಬಹುದು. ಸಂಪ್ರದಾಯದಂತೆ ಗುಡಿಯಲ್ಲಿರುವ ದೇವರು ಅಲ್ಲಿಯ ಮುಖ್ಯ ಅತಿಥಿ ಎಂದು ಪರಿಗಣಿಸಲ್ಪಟ್ಟು,ಅವರಿಗೆ ಅರ್ಪಿಸುವ ಹದಿನಾರು ಉಪಚಾರಗಳಲ್ಲಿ ಸಂಗೀತ ಮತ್ತು ನೃತ್ಯವೂ ಒಳಗೊಂಡಿತ್ತು.
  • ಆದುದರಿಂದ,ಭಾರತೀಯ ಆಡಳಿತಗಾರರು ಮಾಡಿದಂತೆ ಸಾಂಪ್ರದಾಯಿಕವಾಗಿ ನಿರ್ವಹಿಸಲ್ಪಡುವ ಹಲವು ಹಿಂದೂ ದೇವಾಲಯಗಳು, ತರಬೇತಿ ಹೊಂದಿದ ಸಂಗೀತಗಾರರು ಮತ್ತು ನೃತ್ಯಗಾರರನ್ನು ಪೋಷಿಸಿವೆ. ಕಲಿಯುಗದಲ್ಲಿ ಭಾರತದ ಹೆಚ್ಚಿನ ಎಲ್ಲಾ ನೃತ್ಯ ಹಾಗೂ ಸಂಗೀತ ಪ್ರಕಾರಗಳು ಭಕ್ತಿಯನ್ನಾಧರಿಸಿವೆ.
  • ಆದುದರಿಂದ ಭರತನಾಟ್ಯಂ ಮತ್ತು ಕರ್ನಾಟಕ ಸಂಗೀತದ ಬೇರುಗಳು ಭಕ್ತಿ ರಸದಲ್ಲಿ ಆಳವಾಗಿ ಬೇರೂರಿವೆ ಭರತ ನಾಟ್ಯಂನ್ನು ಸಂಗೀತದ ದೃಶ್ಯ ರೂಪಕ,ಭಕ್ತಿಯ ಒಂದು ಅಭಿವ್ಯಕ್ತಿ ಎಂದು ಹೇಳಲಾಗುತ್ತದೆ. ಭರತನಾಟ್ಯಂನಲ್ಲಿ ಸಂಗೀತ ಮತ್ತು ನೃತ್ಯ ಬೇರ್ಪದಿಸಲಾಗದ ರಚನೆಗಳು ಮತ್ತು ಕೇವಲ ಸಂಗೀತದ ಅನುಭೂತಿಯಿಂದ ಮಾತ್ರ ನೃತ್ಯವನ್ನು ಆಸ್ವಾದಿಸಲು ಸಾದ್ಯ.
  • ಭರತನಾಟ್ಯವು ಮೂರು ಮುಖ್ಯ ಅಂಶಗಳನ್ನು ಒಳಗೊಂಡಿದೆ. ನೃತ್ತ (ಲಯಬದ್ಧ ಚಲನೆ) ನಾಟ್ಯ (ನಾಟಕೀಯತೆ) ಮತ್ತು ನೃತ್ಯ (ನೃತ್ತ ಮತ್ತು ನಾಟ್ಯದ ಸಂಯೋಜನೆ)ತಮಿಳುನಾಡುವಿಶೇಷವಾಗಿ ತಂಜಾವೂರು, ಯಾವಾಗಲೂ ಕಲಿಕೆ ಮತ್ತು ಸಂಸ್ಕೃತಿಯ ಸ್ಥಾನ ಮತ್ತು ಕೇಂದ್ರವಾಗಿದೆ. ಭರತನಾಟ್ಯವು ೧೭೯೮-೧೮೨೪ ರಲ್ಲಿ ಮರಾಠ ರಾಜ ಸರಬೋಜಿಯ ಆಸ್ಥಾನದಲ್ಲಿದ್ದ ಚಿನ್ನಯ್ಯ ,ಪೊನ್ನಯ್ಯ ,ಸಿವಾನಂದಂ ಮತ್ತು ವಡಿವೇಲು ಎಂಬ ನಾಲ್ವರು ಸಹೋದರರ ಕೊಡುಗೆಯಿಂದ ಈಗಿನ ರೂಪ ಪಡೆದಿದೆ.
  • ಈ ನಾಲ್ವರು ಭರತನಾಟ್ಯದ ಎಲ್ಲ ಅಂಶಗಳನ್ನು ಅಂದರೆ ಅಳರಿಪು, ಜಥಿಸ್ವರಂ, ವರ್ಣಂ, ಶಬ್ದಂ, ಪದಂ ಮತ್ತು ತಿಲ್ಲಾನ ವನ್ನು ರೂಪಿಸಿದರು. ಈ ನಾಲ್ಕು ಸಹೋದರರ ವಂಶಸ್ಥರು ತಂಜಾವೂರುನಲ್ಲಿ ಭರತ ನಾಟ್ಯಂ ನೃತ್ಯ ಶಿಕ್ಷಕರ ಮೂಲ ಪರಂಪರೆ ಬೆಳೆಸಿದರು. ಮೂಲತಃ, ಅವರು ಸ್ವತಃ ಒಂದು ಸಮುದಾಯವಾಗಿ ರೂಪುಗೊಂಡರು ಮತ್ತು ಅವರಲ್ಲಿ ಹೆಚ್ಚಿನವರು ಶೈವ ಪಂಥವನ್ನು ಅನುಸರಿಸುವ ಅಬ್ರಾಹ್ಮಣರಾಗಿದ್ದರು.
  • ಭರತನಾಟ್ಯವು ವಿಶ್ವದಲ್ಲಿ ಹೆಮ್ಮೆಯ ವಿಶಿಷ್ಟವಾದ ಜಾಗವನ್ನು ಹೊಂದಿದೆ. ಭರತನಾಟ್ಯ-ನೃತ್ಯ ಕಲೆ ನಮಗೆ ಬಹಳಷ್ಟು ವಿಷಯಗಳನ್ನು ಕಲಿಸುತ್ತದೆ ಮತ್ತು ಭಾವನೆಗಳನ್ನು ತುಂಬಾ ನಾಜೂಕಾಗಿ ಅಭಿನಯಗಳೆಂದು ಬಣ್ಣಿಸಲಾಗಿದೆ. ನವರಸಗಳ ಬಗ್ಗೆ ವಿವರಣೆ ಕೆಳಗೆ ನೀಡಲಾಗಿದೆ:
    1. ಶೃಂಗಾರ
    2. ರೌದ್ರ
    3. ವೀರ
    4. ಹಾಸ್ಯ
    5. ಕರುಣಾ
    6. ಭೀಭತ್ಸ
    7. ಅದ್ಬುತ
    8. ಭಯಾನಕ
    9. ಶಾಂತ